Tag: ಪ್ರಜ್ವಲ್ ಪೆನ್‌ಡ್ರೈವ್‌ ಕೇಸ್

  • ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

    ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇನ್ನು ಮುಂದೆ ಪೆನ್‌ಡ್ರೈವ್ (Pendrive Case) ಬಗ್ಗೆ ಮಾತನಾಡೋದೆ ಬೇಡ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ (GC Chandrashekhar) ಹೇಳಿದ್ದಾರೆ.

    ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕತ್ವ ಅಂದರೆ ಅದು ಮಹತ್ವದ ಸ್ಥಾನ. ಆ ಸ್ಥಾನಕ್ಕೆ ಮೆರುಗು ನೀಡುವ ವ್ಯಕ್ತಿಗಳು ಅಲ್ಲಿ ಕೂರಬೇಕು. ಕೀಳು ದರ್ಜೆಯ ಭಾಷೆ ಉಪಯೋಗಿಸುವುದು ವಿಪಕ್ಷಗಳಿಗೆ ಶೋಭೆ ತರುವುದಿಲ್ಲ. ಸ್ವಲ್ಪ ಹೋಂ ವರ್ಕ್ ಮಾಡಿ ವಿಪಕ್ಷ ನಾಯಕರು ಮಾತನಾಡಬೇಕು. ಕಾಂಗ್ರೆಸ್ ನಾಯಕತ್ವ ಬಲಿಷ್ಟ ನಾಯಕತ್ವ. ಡಿಕೆಶಿ, ಸಿದ್ದರಾಮಯ್ಯ ತರಹದ ನಾಯಕತ್ವ ಬೇರೆಲ್ಲೂ ಇಲ್ಲ. ಅವರು ಏನೇ ಮಾಡಿದರೂ ಸರ್ಕಾರವನ್ನು ಅಲುಗಾಡಿಸುವ ಯೋಗ್ಯತೆಯೇ ಇಲ್ಲ. ಕೆಲವು ಬಾರಿ ಆರ್.ಅಶೋಕ್ ಮಾತನಾಡುವುದನ್ನು ನೋಡಿದರೆ ಇವರಿಗಿಂತ ಸಿಟಿ ರವಿಯೇ ಬೆಸ್ಟ್ ಅನಿಸುತ್ತದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

    ಸಿಟಿ ರವಿ ಕೂಡ ಕೆಲವೊಮ್ಮೆ ಅಶ್ಲೀಲವಾಗಿ ಮಾತನಾಡುತ್ತಾರೆ. ಆದರೆ ಅಶೋಕ್‌ಗಿಂತ ಸಿ.ಟಿ ರವಿಯೇ ಬೆಸ್ಟ್ ಅನಿಸುತ್ತದೆ. ಕುಮಾರಸ್ವಾಮಿ (HD Kumaraswamy) ಇಡೀ ತನಿಖೆಯೇ ಹಳ್ಳ ಹಿಡಿಯುವಂತೆ ಮಾತನಾಡುತ್ತಿದ್ದಾರೆ. ಇವರು ಹೇಳಿದ ಹಾಗೇ ಎಸ್‌ಐಟಿ ನಡೆಯಬೇಕು. ಇವರು ಹೇಳಿದ ಹಾಗೆ ತನಿಖೆ ನಡೆಯಬೇಕು. ಯಾರು ಯಾರನ್ನೂ ಕೆಣಕಿಲ್ಲ. ಕುಮಾರಸ್ವಾಮಿ ಅವರೇ ದೇವೇಗೌಡರಿಗೆ ನೋವಾಗಿದೆ ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ದೇವೇಗೌಡರ ಮೇಲೆ ನಮಗೆ ಅಪಾರ ಗೌರವವಿದೆ. ಡಿಕೆ ಶಿವಕುಮಾರ್ ಅವರಿಗೆ ನಾವು ಕೇಳಿಕೊಳ್ಳೋದು ಇಷ್ಟೇ. ಇನ್ನು ಮುಂದೆ ಪೆನ್‌ಡ್ರೈವ್ ವಿಚಾರದಲ್ಲಿ ಮಾತೇ ಆಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಪಘಾತಕ್ಕೆ ಇಬ್ಬರು ಟೆಕ್ಕಿಗಳು ಬಲಿ ಕೇಸ್‌; ಕಾರು ಚಲಾಯಿಸಿದ ಅಪ್ರಾಪ್ತನ ತಂದೆ ಬಂಧನ

    ದೇವೇಗೌಡರ ಕುಟುಂಬದ ಬಗ್ಗೆ ಗೌರವವಿದೆ. ಯಾವ ರಾಜಕಾರಣಿ ಕೂಡ ಕುಟುಂಬದಲ್ಲಿ ಈ ರೀತಿ ನಡೆಯಬೇಕು ಎಂದು ಭಾವಿಸುವುದಿಲ್ಲ. ಕುಮಾರಸ್ವಾಮಿ ಅವರು ಪ್ರಕರಣವನ್ನು ನೆಲ ಕಚ್ಚಿಸುತ್ತಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದವರು ನೀವು. ಇವರು ಹೇಳಿದ ಹಾಗೇ ನಡೆಯಬೇಕು. ಎಸ್‌ಐಟಿ ತನಿಖೆ ಆಗಬೇಕಾ? ಸರ್ ದಯವಿಟ್ಟು ಈ ಪ್ರಕರಣದಲ್ಲಿ ಯಾರು ರಿಯಾಕ್ಟ್ ಮಾಡಬೇಡಿ. ಸರ್ಕಾರ ಅದರ ಪಾಡಿಗೆ ಅದು ನಡೆಯುತ್ತಿದೆ. ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡೋಣ. ಯಾರು ಯಾರನ್ನೂ ಕೆಣಕಿಲ್ಲ ಕುಮಾರಸ್ವಾಮಿ ಅವರೇ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಡಿಕೆಶಿ ರಕ್ಷಣೆಗೆ ಸಿಎಂ, ಸರ್ಕಾರ ನಿಂತಿದೆ: ಹೆಚ್‍ಡಿಕೆ ಆರೋಪ

  • ಪೊಲೀಸರನ್ನೇ ಮುಂದಿಟ್ಟುಕೊಂಡು 25,000 ಪೆನ್‌ಡ್ರೈವ್‌ ಹಂಚಿದ್ದಾರೆ: ಹೆಚ್‌ಡಿಕೆ ಬಾಂಬ್‌

    ಪೊಲೀಸರನ್ನೇ ಮುಂದಿಟ್ಟುಕೊಂಡು 25,000 ಪೆನ್‌ಡ್ರೈವ್‌ ಹಂಚಿದ್ದಾರೆ: ಹೆಚ್‌ಡಿಕೆ ಬಾಂಬ್‌

    ಬೆಂಗಳೂರು: ಹಾಸನ (Hassan) ಜಿಲ್ಲೆ ಮಾತ್ರವಲ್ಲ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೂ ಸೇರಿದಂತೆ ರಾಜ್ಯಾದ್ಯಂತ 25,000 ಪೆನ್‌ಡ್ರೈವ್‌ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಬಾಂಬ್‌ ಸಿಡಿಸಿದ್ದಾರೆ.

    ಪ್ರಜ್ವಲ್‌ ಅಶ್ಲೀಲ ವೀಡಿಯೋ ಪ್ರಕರಣಕ್ಕೆ (Prajwal Pendrive Case) ಸಂಬಂಧಿಸಿದಂತೆ, ಪ್ರಮುಖ ಪತ್ರಿಕೆಗಳ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮೊದಲ ಹಂತದ ಚುನಾವಣೆ ನಡೆಯುವ ಮುನ್ನವೇ ಹಾಸನ ಮಾತ್ರವಲ್ಲ ರಾಜ್ಯಾದ್ಯಂತ 25,000 ಪೆನ್‌ಡ್ರೈವ್‌ಗಳನ್ನ ಹಂಚಿಕೆ ಮಾಡಿದ್ದಾರೆ. ಪೊಲೀಸರನ್ನೇ (Karnataka Police) ಮುಂದಿಟ್ಟುಕೊಂಡು, ಹೆದರಿಸಿ ಪೆನ್‌ಡ್ರೈವ್‌ಗಳನ್ನ ಹಂಚಿಕೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪ್ರಕರಣದಿಂದ ಬಿಜೆಪಿಗೆ ಮುಜುಗರ ಆಗುತ್ತೆ ಅನ್ನೋದಾದ್ರೆ ನಮ್ಮ ವಿರೋಧವೇನಿಲ್ಲ: ಹೆಚ್‌ಡಿಕೆ

    ನಮ್ಮ ಅಭ್ಯರ್ಥಿಯ ಪೋಲಿಂಗ್‌ ಏಜೆಂಟ್‌ ಪೂರ್ಣಚಂದ್ರ ತೇಜಸ್ವಿ ಅವರು, ಹಾಸನದ ಸೆಂಟ್‌ ಪೊಲೀಸ್‌ ಠಾಣೆಯಲ್ಲಿ ನವೀನ್‌ ಗೌಡ, ಕಾರ್ತಿಕ್‌ ಗೌಡ, ಚೇತನ್‌, ಪುಟ್ಟಿ @ ಪುಟ್ಟರಾಜು ಅನ್ನುವವರ ವಿರುದ್ಧ ಏಪ್ರಿಲ್‌ 21ರಂದೇ ದೂರು ಕೊಟ್ಟಿದ್ದಾರೆ. ಆದ್ರೆ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.

    ಯಾರೇ ಆದರೂ ರಕ್ಷಿಸುವ ಮಾತೇ ಇಲ್ಲ:
    ಇದೇ ವೇಳೆ ಇಂತಹ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಸಂಬಂಧಿಕನಾಗಲಿ, ಯಾರೇ ಆಗಲಿ ರಕ್ಷಣೆ ಮಾಡುವ ಮಾತೇ ಇಲ್ಲ ಎಂದೂ ಸಹ ನುಡಿದಿದ್ದಾರೆ. ಇದನ್ನೂ ಓದಿ: ಡಿಸಿಎಂ ಡಿಕೆಶಿಯನ್ನು ಕೂಡಲೇ ಕ್ಯಾಬಿನೆಟ್‌ನಿಂದ ಕೈಬಿಡಬೇಕು : ಹೆಚ್‌ಡಿಕೆ ಆಗ್ರಹ

    ಡಿಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್‌ ಅನ್ನೋದು ಎಲ್ಲರಿಗೆ ಗೊತ್ತಿದೆ. ರೇವಣ್ಣ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರಾ? ಸತ್ಯ ಎಲ್ಲವೂ ಹೊರಗೆ ಬರಲಿ. ಪೆನ್ ಡ್ರೈವ್‌ ರಿಲೀಸ್‌ ಮಾಡಿದವರ ಬಗ್ಗೆ ಮುಖ್ಯಮಂತ್ರಿ ಇನ್ನೂ ಏನು ಮಾತನಾಡುತ್ತಿಲ್ಲ ಯಾಕೆ? ಡಿಕೆಶಿವಕುಮಾರ್ ಯಾವ ತರಹ ಬಂದಿದ್ದೀರ? ನಿನ್ನೆಯ ಮೊದಲು ಹೇಳಿಕೆ, ಅಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದೀರಿ. ಡಿಕೆಶಿ ನಿಮ್ಮ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿಕೆ ಶಿವಕುಮಾರ್ ಮುಖ ಆಗಿತ್ತು ಎಂದು ವ್ಯಂಗ್ಯವಾಡಿದರು.

     

  • ಪ್ರಜ್ವಲ್ ಪ್ರಕರಣದಿಂದ ಬಿಜೆಪಿಗೆ ಮುಜುಗರ ಆಗುತ್ತೆ ಅನ್ನೋದಾದ್ರೆ ನಮ್ಮ ವಿರೋಧವೇನಿಲ್ಲ: ಹೆಚ್‌ಡಿಕೆ

    ಪ್ರಜ್ವಲ್ ಪ್ರಕರಣದಿಂದ ಬಿಜೆಪಿಗೆ ಮುಜುಗರ ಆಗುತ್ತೆ ಅನ್ನೋದಾದ್ರೆ ನಮ್ಮ ವಿರೋಧವೇನಿಲ್ಲ: ಹೆಚ್‌ಡಿಕೆ

    – ಮೈತ್ರಿ ಇರುತ್ತೋ ಇಲ್ಲವೋ ಮುಂದೆ ನೋಡೋಣ
    – ಮೈತ್ರಿ ಮಾಡಿಕೊಂಡಿರೋದು ದೀರ್ಘ ಅವಧಿಗೆ ಎಂದ ಮಾಜಿ ಸಿಎಂ

    ಬೆಂಗಳೂರು: ಬಿಜೆಪಿ ಜೊತೆಗೆ ಮೈತ್ರಿ (BJP JDS Alliance) ಆಗಿರೋದು ಸುದೀರ್ಘ ಅವಧಿಗೆ. ಈ ಪ್ರಕರಣದಿಂದ ಬಿಜೆಪಿ ಅವರಿಗೆ ಮುಜುಗರ ಆಗುತ್ತದೆ ಅನ್ನೋದಾದ್ರೆ, ಅವರು ತೀರ್ಮಾನ ಮಾಡಲಿ. ನಮ್ಮದೇನು ವಿರೋಧ ಇಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಪೆನ್‌ಡ್ರೈವ್ ಪ್ರಕರಣಕ್ಕೆ (Prajwal Pendrive Case) ಸಂಬಂಧಿಸಿದಂತೆ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಅವರು, ಮೈತ್ರಿ ಮುಂದುವರಿಸುವ ಬಗ್ಗೆ ಆರ್.ಅಶೋಕ್ ಹೇಳಿಕೆ ಪ್ರಸ್ತಾಪಿಸಿ ಮಾತನಾಡಿದರು. ಇದನ್ನೂ ಓದಿ: ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಮೊದಲ ವೋಟ್‌ ಮಾಡಿದ ವಿದ್ಯಾರ್ಥಿನಿ

    ರಾಷ್ಟ್ರೀಯ ಪಕ್ಷ ಅವರದ್ದು. ಅವರು ಏನ್ ತೀರ್ಮಾನ ಮಾಡ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೊಲ್ಲ. ಮೈತ್ರಿ ಇರೋತ್ತೋ ಇಲ್ಲವೋ ಮುಂದೆ ನೋಡೋಣ. ತನಿಖೆ ಆಗಿ ಸತ್ಯ ಹೊರಬರಲಿದೆ. ಮೈತ್ರಿ ಆಗಿರೋದು ದೀರ್ಘ ಅವಧಿಗೆ. ಈ ಪ್ರಕರಣದಿಂದ ಬಿಜೆಪಿ ಅವರಿಗೆ ಮುಜುಗರ ಆಗುತ್ತದೆ ಅನ್ನೋದಾದ್ರೆ, ಅವರು ತೀರ್ಮಾನ ಮಾಡಲಿ. ನಮ್ಮದೇನು ವಿರೋಧ ಇಲ್ಲ ಎಂದು ಹೇಳಿದ್ದಾರೆ.

    ಬಿಜೆಪಿ ಜೊತೆಗೆ ಮೈತ್ರಿ ಆಗಿದ್ದೇ ತಡೆಯೋಕೆ ಆಗ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಹೆಸರನ್ನ ಪದೇ ಪದೇ ಬಳಕೆ ಮಾಡಿಕೊಳ್ಳುತ್ತಿದ್ದರು, ಅದಕ್ಕೆ ನಾನೇ ಸ್ಟೇ ತಂದಿದ್ದೆ. ನಮ್ಮ ಒತ್ತಾಯ ಪಾರದರ್ಶಕ ತನಿಖೆ ಆಗಬೇಕು ಎಂಬುದು ಅಷ್ಟೇ. ಈ ಸರ್ಕಾರ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತ ರಾಜ್ಯಪಾಲರಿಗೂ ದೂರು ಕೊಡ್ತೀವಿ ಎಂದು ಅವರು ಹೇಳಿದ್ದಾರೆ.

    ಈ ಎಸ್‌ಐಟಿ ತನಿಖೆಯಿಂದ (SIT Investigation) ಸಂತ್ರಸ್ತರಾದ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ(CBI) ನೀಡಬೇಕು. ಸಿಬಿಐಗೆ ನೀಡಲು ಸಾಧ್ಯವಾಗದೇ ಇದ್ದರೆ ನ್ಯಾಯಾಂಗ ತನಿಖೆ ನಡೆಸಬೇಕು. ಈ ತನಿಖೆ ಪೂರ್ಣಗೊಳ್ಳುವವರೆಗೂ ಡಿಕೆಶಿಯನ್ನು ಕ್ಯಾಬಿನೆಟ್‌ನಿಂದ ವಜಾಮಾಡಬೇಕು. ಈ ಪ್ರಕರಣವನ್ನು ನಾವು ಸುಲಭಕ್ಕೆ ಬಿಡುವುದಿಲ್ಲ. ತಪ್ಪು ಮಾಡಿರುವವರು ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದರು. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಭರ್ಜರಿ ಪ್ರತಿಕ್ರಿಯೆ, ಕಲಬುರಗಿಯಲ್ಲಿ ಕಡಿಮೆ ಮತದಾನ : ಎಲ್ಲಿ ಎಷ್ಟು ವೋಟಿಂಗ್‌ ನಡೆದಿದೆ?

    ಡಿಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್‌ ಅನ್ನೋದು ಎಲ್ಲರಿಗೆ ಗೊತ್ತಿದೆ. ರೇವಣ್ಣ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರಾ? ಸತ್ಯ ಎಲ್ಲವೂ ಹೊರಗೆ ಬರಲಿ. ಪೆನ್ ಡ್ರೈವ್‌ ರಿಲೀಸ್‌ ಮಾಡಿದವರ ಬಗ್ಗೆ ಮುಖ್ಯಮಂತ್ರಿ ಇನ್ನೂ ಏನು ಮಾತನಾಡುತ್ತಿಲ್ಲ ಯಾಕೆ? ಡಿಕೆಶಿವಕುಮಾರ್ ಯಾವ ತರಹ ಬಂದಿದ್ದೀರ? ನಿನ್ನೆಯ ಮೊದಲು ಹೇಳಿಕೆ, ಅಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದೀರಿ. ಡಿಕೆಶಿ ನಿಮ್ಮ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿಕೆ ಶಿವಕುಮಾರ್ ಮುಖ ಆಗಿತ್ತು ಎಂದು ವ್ಯಂಗ್ಯವಾಡಿದರು.

  • ಪ್ರಜ್ವಲ್‌ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ: ಗುಡುಗಿದ ಸಿಎಂ

    ಪ್ರಜ್ವಲ್‌ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ: ಗುಡುಗಿದ ಸಿಎಂ

    ಬಾಗಲಕೋಟೆ: ಪ್ರಜ್ವಲ್ ರೇವಣ್ಣ (Prajwal Revanna) ಎಲ್ಲಿಗಾದರೂ ಎಸ್ಕೇಪ್ ಆಗಲು, ಯಾವುದೇ ದೇಶಕ್ಕೆ ಹೋಗಿರಲಿ, ಅಲ್ಲಿಂದ ಹಿಡಿದು ತರ್ತೀವಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ.

    ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ (Dubai) ಪ್ರಯಾಣ ಬೆಳೆಸಿದ್ದಾರೆಯೇ ಎಂಬುದರ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಅವರು ಎಲ್ಲಿಗಾದರೂ ಎಸ್ಕೇಪ್ ಆಗಿರಲಿ, ಯಾವುದೇ ದೇಶಕ್ಕೆ ಹೋಗಿರಲಿ, ಅಲ್ಲಿಂದ ಹಿಡಿದು ತರ್ತೀವಿ ಎಂದು ಸಿಎಂ ಗುಡುಗಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ರು: ಪ್ರಜ್ವಲ್‌ ವಿರುದ್ಧ ಮತ್ತೊಬ್ಬ ಸಂತ್ರಸ್ತೆ ದೂರು

    ಪಾಸ್‌ಪೋರ್ಟ್ ರದ್ದು ಮಾಡುವ ಅಧಿಕಾರ ಇರೋದು ಕೇಂದ್ರ ಸರ್ಕಾರಕ್ಕೆ, ನಾನು ಪ್ರಧಾನಿಗೆ ರದ್ದು ಮಾಡಿ ಅಂದು ಪತ್ರ ಕೂಡ ಬರೆದಿದ್ದೇನೆ. ಆದ್ರೆ ಕೇಂದ್ರ ಸರ್ಕಾರವೇ ಪ್ರಜ್ವಲ್‌ರನ್ನ ರಕ್ಷಣೆ ಮಾಡುತ್ತಿದೆ. ಕುಮಾರಸ್ವಾಮಿ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ನನ್ನ ಮಗ ಇದ್ದ ಹಾಗೆ. ನನ್ನ ಮಗ ಬೇರೆ ಅಲ್ಲ, ಪ್ರಜ್ವಲ್ ಬೇರೆ ಅಲ್ಲ ಅಂದಿದ್ದರು. ಈಗ ಅವರ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಅಂತಿದ್ದಾರೆ. ಅವರು ಎಲ್ಲಾ ಕುಕೃತ್ಯವನ್ನು ಒಟ್ಟಿಗೆ ಮಾಡ್ತಾರೆ, ಆಮೇಲೆ ನಾವಲ್ಲ ಅಂತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಅಲ್ಲದೇ ಪ್ರಜ್ವಲ್ ರೇವಣ್ಣ ಮೇಲೆ ರೇಪ್ ಕೇಸ್ ನೀಡಿದ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯನ್ನ ರೇವಣ್ಣ ಎಸ್ಕೇಪ್ ಮಾಡಿಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆ ಹೆಣ್ಣುಮಗಳು ಎಲ್ಲಿ ಹೋಗಿದ್ದಾರೆ? ಎಂದು ಪತ್ತೆ ಹಚ್ಚಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೇಥಿಯಲ್ಲಿ ಗಾಂಧಿ ಕುಟುಂಬಯೇತರ ಅಭ್ಯರ್ಥಿ – ಯಾರಿದು ಕಿಶೋರಿ ಲಾಲ್ ಶರ್ಮಾ?

    ಪ್ರಜ್ವಲ್ ವಿಡಿಯೊ ಬಗ್ಗೆ ಗೊತ್ತಿದ್ದರೂ ಯಾಕೆ ಅಲಯನ್ಸ್ ಮಾಡಿಕೊಂಡರು? ಮೋದಿ ನಾ ಖಾವುಂಗಾ ನಾ ಖಾನೆ ದೂಂಗಾ ಅಂತಾರೆ. ಅದೇ ಜನ ಇನ್ಕಮ್ ಟ್ಯಾಕ್ಸ್, ಇಡಿ ರೇಡ್ ಆದವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಅಪರಾಧಿಗಳನ್ನೆಲ್ಲ ಸೇರಿಸಿಕೊಂಡಿದ್ದಾರೆ, ಅವರೂ ಮಾಡಬಾರದ ಕೆಲಸ ಮಾಡ್ತಾರೆ. ಅಧಿಕಾರ ಮಾಡುವುದಕ್ಕೋಸ್ಕರ ಮಾಡಬಾರದ ಕೆಲಸಗಳನ್ನೇ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಹುಬ್ಬಳ್ಳಿ ನೇಹಾ ಕೊಲೆ ಲವ್ ಜಿಹಾದ್ ಎಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ, ಅಮಿತ್ ಶಾ ರಾಜಕೀಯಕ್ಕೋಸ್ಕರ ಹೇಳ್ತಾರೆ. ನೇಹಾ ಪ್ರಕರಣದಲ್ಲಿ ಕೂಡಲೇ ಆರೋಪಿಯನ್ನ ಬಂಧಿಸಿದ್ದೇವೆ. ತನಿಖೆಯನ್ನ ಸಿಐಡಿಗೆ ಕೊಟ್ಟಿದ್ದೆವೆ. ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕು ಅಂತ, ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆಗೆ ಮಾತನಾಡಿ ಸ್ಪೇಷಲ್ ಕೋರ್ಟ್ ಮಾಡಿದ್ದೇವೆ. ಸರ್ಕಾರ ಕಾನೂನು ಪ್ರಕಾರ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ರಾಜಕೀಯಕ್ಕೋಸ್ಕರ ನೇಹಾ ಪ್ರಕರಣದ ಬಗ್ಗೆ ಮಾತನಾಡುವ ಅಮಿತ್ ಶಾ, ಮಣಿಪುರ ಘಟನೆ ಬಗ್ಗೆ ಯಾಕೆ ಮಾತಾಡಲಿಲ್ಲ? ದೇಶದ ಗೃಹಸಚಿವರಾಗಿ ಏನು ಮಾಡಿದರು? ಅಲ್ಲಿ ಬಿಜೆಪಿ ಸಿಎಂ ಇದ್ದಾರೆ, ಅವರನ್ನ ಬದಲಾಯಿಸಿದ್ರಾ? ಸರ್ಕಾರವನ್ನ ವಜಾಗೊಳಿಸಿದ್ರಾ ಎಂದು ಪ್ರಶ್ನೆಗಳ ಮಳೆಗರೆದಿದ್ದಾರೆ. ಇದನ್ನೂ ಓದಿ: ಬಿರುಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸಿದ್ರೆ ಸಮಸ್ಯೆ ಆಗಲ್ಲ: ಇಂಡಿಯನ್‌ ಆಯಿಲ್‌ ಸ್ಪಷ್ಟನೆ