Tag: ಪ್ರಜೆ

  • ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ 70 ಲಕ್ಷ ಬೆಲೆ ಬಾಳುವ ಡ್ರಗ್ಸ್ ಮತ್ತು 800 ಗ್ರಾಂ ತೂಕದ ಎಂಡಿಎಂಎ, ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಪ್ರತಿ 5 ಸಾವಿರದಿಂದ 8 ಸಾವಿರಕ್ಕೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.

    ಆರೋಪಿಯು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಅಪಘಾತ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನೀಗ್ರೋಗಳಿಂದ ಹಲ್ಲೆ

    ಅಪಘಾತ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನೀಗ್ರೋಗಳಿಂದ ಹಲ್ಲೆ

    ಬೆಂಗಳೂರು: ನಗರದಲ್ಲಿ ಆಫ್ರಿಕನ್ ನೀಗ್ರೊಗಳದ್ದೇ ದರ್ಬಾರ್ ಶುರುವಾಗಿದ್ದು, ಇವರನ್ನು ಮುಟ್ಟುವುದಕ್ಕೆ ಪೊಲೀಸರು ಕೂಡ ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಅಪಘಾತ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ 44 ಹೋಲಿಗೆ ಬೀಳುವ ಹಾಗೆ ಹಲ್ಲೆ ನಡೆಸಿದ್ದಾರೆ.

    ಮೂವರು ಆಫ್ರಿಕನ್ ಪ್ರಜೆಗಳು ಯುವಕ ನರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ನಗರದ ಚೇಳಿಕೆರೆಯಲ್ಲಿ ಈ ಘಟನೆ ನಡೆದಿದ್ದು, ನರೇಶನ ಬೈಕಿಗೆ ಆಫ್ರಿಕನ್ ಪ್ರಜೆ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದನು. ಕಾರ್ ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದ ನರೇಶ್ ನನ್ನು ಮೂವರು ಆಫ್ರಿಕನ್ ಪ್ರಜೆಗಳು ರಾಡ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

    ಸದ್ಯ ನರೇಶ್ ತಲೆಗೆ 44 ಸ್ಟಿಚ್ ಹಾಕಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೂವರು ಆಫ್ರಿಕನ್ ಪ್ರಜೆಗಳ ವಿರುದ್ಧ ದೂರು ದಾಖಲಾಗಿದೆ.

  • ಲಂಡನ್‍ನಲ್ಲಿ ಭಾರತದ ಪ್ರಜೆಯ ಬರ್ಬರ ಹತ್ಯೆ

    ಲಂಡನ್‍ನಲ್ಲಿ ಭಾರತದ ಪ್ರಜೆಯ ಬರ್ಬರ ಹತ್ಯೆ

    ಲಂಡನ್: ಹೈದರಾಬಾದ್ ಮೂಲದ ವ್ಯಕ್ತಿಯನ್ನು ದುಷ್ಕರ್ಮಿಯೊಬ್ಬ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಲಂಡನ್‍ನಲ್ಲಿ ನಡೆದಿದೆ.

    ಮೊಹಮ್ಮದ್ ನದೀಮುದ್ದೀನ್ ಕೊಲೆಯಾದ ವ್ಯಕ್ತಿ. ನದೀಮುದ್ದೀನ್ ಅವರು ಲಂಡನ್‍ನ ಟೆಸ್ಕೋ ಸೂಪರ್ ಮಾರ್ಕೆಟ್‍ನ ಮಾಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನದೀಮುದ್ದೀನ್ ಕಳೆದ 6 ವರ್ಷದಿಂದ ಲಂಡನ್‍ನಲ್ಲಿ ವಾಸಿಸುತ್ತಿದ್ದರು. ಕಳೆದ 1 ತಿಂಗಳಷ್ಟೇ ಅವರ ಪತ್ನಿ ಲಂಡನ್‍ಗೆ ಆಗಮಿಸಿದ್ದರು.

    ನದೀಮುದ್ದೀನ್ ಬುಧವಾರ ಮನೆಗೆ ಹಿಂತಿರುಗಲಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ಮಾಲ್ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಮಾಲ್ ಸಿಬ್ಬಂದಿ ಕೂಡ ಹುಡುಕಾಟ ನಡೆಸಿದಾಗ ನದೀಮುದ್ದೀನ್ ಪಾರ್ಕಿಂಗ್‍ನಲ್ಲಿ ಶವವಾಗಿ ಪತ್ತೆಯಾಗಿದ್ದರು.

    ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ ನದೀಮುದ್ದೀನ್ ಸಹದ್ಯೋಗಿಗಳ ವಿಚಾರಣೆ ನಡೆಸುತ್ತಿದ್ದಾರೆ. ನದೀಮುದ್ದೀನ್ ಅವರನ್ನು ಏಷ್ಯಾ ಮೂಲದ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಅವರ ಸ್ನೇಹಿತ ಫಹೀಂ ಖುರೇಶಿ ತಿಳಿಸಿದ್ದಾರೆ.

    ಹೈದರಾಬಾದ್‍ನಲ್ಲಿರುವ ನದೀಮುದ್ದೀನ್ ಪೋಷಕರಿಗೆ ಈ ವಿಷಯ ತಿಳಿಸಲಾಗಿದೆ. ನದೀಮುದ್ದೀನ್ ಮೃತದೇಹ ತರಲು ಅವರ ಪೋಷಕರು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಸಹಾಯ ಕೇಳಿದ್ದಾರೆ.

  • ಭಾರತದ ಒಬ್ಬೊಬ್ಬ ಮುಸಲ್ಮಾನರೇ ಪಾಕಿಸ್ತಾನದ ಪ್ರಜೆಗಳನ್ನು ಹೊಡೆದು ಕೊಲ್ಲುವ ತಾಕತ್ತಿದೆ: ಇಸ್ಮಾಯಿಲ್ ರಿಹನಾ

    ಭಾರತದ ಒಬ್ಬೊಬ್ಬ ಮುಸಲ್ಮಾನರೇ ಪಾಕಿಸ್ತಾನದ ಪ್ರಜೆಗಳನ್ನು ಹೊಡೆದು ಕೊಲ್ಲುವ ತಾಕತ್ತಿದೆ: ಇಸ್ಮಾಯಿಲ್ ರಿಹನಾ

    ಮಂಗಳೂರು: ಪಾಕಿಸ್ತಾನದ ವಿರುದ್ಧ ಯುದ್ದ ಬೇಕೇ ಬೇಡವೇ ಎನ್ನುವ ವಿಶೇಷ ಲೈವ್ ಕಾರ್ಯಕ್ರಮ ಪಬ್ಲಿಕ್ ಟಿವಿ ಸೋಮವಾರ ನಡೆಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಯ ಜನ ಲೈವ್ ನಲ್ಲಿ ಭಾಗಿಯಾಗಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಬಹುತೇಕ ಜನರು ಎಲ್ಲರೂ ಪಾಕಿಸ್ತಾನದ ವಿರುದ್ಧ ಯುದ್ಧವೇ ಬೇಕು ಎಂದು ಆಗ್ರಹಿಸಿದ್ದಾರೆ. ಆದ್ರೆ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರಿನ ಇಸ್ಮಾಯಿಲ್ ರಿಹನಾ ಎಂಬವರು ಪಾಕಿಸ್ತಾನಕ್ಕೆ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ ಆದ 18 ಕೋಟಿ ಭಾರತದಲ್ಲಿ ಮುಸಲ್ಮಾನರು ಇದ್ದಾರೆ. ಹೀಗಾಗಿ ಭಾರತದ ಒಬ್ಬೊಬ್ಬ ಮುಸನ್ಮಾನರೇ ಪಾಕಿಸ್ತಾನದ ಪ್ರಜೆಗಳನ್ನು ಹೊಡೆದು ಕೊಲ್ಲುವ ತಾಕತ್ತಿದೆ. ಇದಕ್ಕೆಲ್ಲ ಭಾರತದ ಸೈನಿಕರು ಬೇಡ ಎಂದು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.

    ಪಾಕಿಸ್ತಾನಕ್ಕೆ ಯುದ್ಧ ಮಾಡುವ ಯೋಗ್ಯತೆ ಇಲ್ಲ. ನಮ್ಮ ದೇಶದಿಂದ ಭಿಕ್ಷೆ ಕೊಟ್ಟ ಜಾಗವನ್ನು ಇವರು ತಮ್ಮ ದೇಶವನ್ನು ಮಾಡಿ ನಮ್ಮ ಸೈನಿಕರು ಮಲಗಿದ್ದಾಗ ಹೊಡೆಯುತ್ತಾರೆ. ಇವರಂತಹ ನೀಚರು ಲೋಕದಲ್ಲೇ ಯಾರೂ ಇಲ್ಲ. ಯುದ್ಧ ಆಗಬೇಕು. ಯುದ್ಧ ಆದರೆ ಪಾಕಿಸ್ತಾನ ಭೂಪಟದಲ್ಲಿ ಇರಬಾರದು ಆ ರೀತಿ ಯುದ್ಧ ಆಗಬೇಕು ಎಂದು ಹೇಳಿದ್ದಾರೆ. ಇಸ್ಮಾಯಿಲ್ ಅವರ ಈ ಮಾತು ಇದೀಗ ಎಲ್ಲೆಡೆ ವೈರಲ್ ಆಗಿದೆ.

    https://www.youtube.com/watch?v=VB5CSOOgFZo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv