Tag: ಪ್ರಜಾಧ್ವನಿ ಯಾತ್ರೆ

  • ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದಿದ್ದ ಡಿಕೆಶಿ ವಿರುದ್ಧ ದೂರು

    ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದಿದ್ದ ಡಿಕೆಶಿ ವಿರುದ್ಧ ದೂರು

    ಮಂಡ್ಯ: ಎರಡು ದಿನಗಳ ಹಿಂದೆಯಷ್ಟೇ ಪ್ರಜಾಧ್ವನಿ ಯಾತ್ರೆ ವೇಳೆ 500 ರೂ. ನೋಟುಗಳನ್ನು ಎರಚಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ (Mandya Rural Police) ಠಾಣೆಯಲ್ಲಿ ದೂರು ದಾಖಲಾಗಿದೆ.

    ಪ್ರಜಾಧ್ವನಿ ಯಾತ್ರೆಯ (Prajadhwani Yatra) ಭಾಗವಾಗಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಾಗಿತ್ತು. ರೋಡ್ ಶೋನಲ್ಲಿ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಪದ ಕಲಾವಿದರಿಗೆ ಬೇವಿನಹಳ್ಳಿ ಗ್ರಾಮದಲ್ಲಿ ಹಣ ಕೊಡುವಾಗ ಡಿ.ಕೆ ಶಿವಕುಮಾರ್ ಬಸ್ಸಿನ ಮೇಲಿಂದಲೇ 500 ರೂ. ಮುಖಬೆಲೆಯ ನೋಟುಗಳನ್ನು ಎರಚಿದ್ದರು.  

    ಈ ಸಂಬಂಧ ಡಿಕೆ ಶಿವಕುಮಾರ್ ವಿರುದ್ಧ ಆರ್‌ಸಿ ಆಕ್ಟ್ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಪಿ. ಅಶೋಕ್ ಎಂಬ ವ್ಯಕ್ತಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದ ಡಿಕೆಶಿ

    ದಾವಣಗೆರೆಯಲ್ಲಿ ಸೀರೆ, ಕುಕ್ಕರ್ ಹಂಚಿ ಮತದಾರರಿಗೆ ಆಮಿಷವೊಡ್ಡಿದ ಆರೋಪದ ಮೇಲೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್ ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೀರೆ ಹಂಚಿಕೆ ವಿರುದ್ಧ ಜನರ ಆಕ್ರೋಶವೂ ಹೆಚ್ಚಿದೆ. ಮತ್ತೊಂದೆಡೆ ಮನೆಯಲ್ಲಿ ಚೆಕ್ ವಿತರಿಸಿದ ಆರೋಪದ ಮೇಲೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧವೂ ದೂರು ಹೋಗಿದೆ.

    ಶಿವಮೊಗ್ಗದಲ್ಲಿ 12 ಲಕ್ಷ ನಗದು ಸೀಜ್ ಮಾಡಲಾಗಿದೆ. ಚನ್ನಪಟ್ಟಣದ ಕೋಲೂರು ಚೆಕ್‌ಪೋಸ್ಟ್‌ನಲ್ಲಿ 975 ಅಕ್ಕಿ ಮೂಟೆಗಳನ್ನು ಕಂಟೈನರ್ ಸಮೇತ ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆಯ ನವನಗರದಲ್ಲಿ ಎಸ್‌.ಆರ್ ಪಾಟೀಲ್ ಭಾವಚಿತ್ರ ಒಳಗೊಂಡಿದ್ದ ಗೋಡೆ ಗಡಿಯಾರ, ಬಾಕ್ಸ್‌ಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ಆರೋಪಿಗಳು ಎರಡು ಲಾರಿ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕರ್ಪೂರ ಬೆಳಗಿ, ಈಡುಗಾಯಿ ಹೊಡೆದು ಸರ್ಕಾರಿ ವಾಹನ ಬೀಳ್ಕೊಟ್ಟ ಸಚಿವ ನಾರಾಯಣಗೌಡ

    ಇನ್ನೂ ಕೋಲಾರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 11 ಲಕ್ಷ ಮೌಲ್ಯದ ಮದ್ಯ ಪತ್ತೆಯಾಗಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಜೆಡಿಎಸ್ ಶಾಸಕರಿಗೆ ಸೇರಿದ ಎಂಟೂವರೆ ಲಕ್ಷ ಮೌಲ್ಯದ ಕುಕ್ಕರ್‌ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತ ಕೊಟ್ಟಿಗೆಹಾರ ಚೆಕ್‌ಪೋಸ್ಟ್ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹೊರನಾಡಿಗೆ ತೆರಳ್ತಿದ್ದ ರಾಮನಗರದ ಮೂವರು ಯಾತ್ರಾರ್ಥಿಗಳ ಬಳಿ ಇದ್ದ 1 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.

  • ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದ ಡಿಕೆಶಿ

    ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದ ಡಿಕೆಶಿ

    ಮಂಡ್ಯ: ಜನಪದ ಕಲಾವಿದರಿಗೆ ಸಂಭಾವನೆ ಕೊಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಯಡವಟ್ಟು ಮಾಡಿಕೊಂಡಿದ್ದು, ಟೀಕೆಗೆ ಗುರಿಯಾಗಿದ್ದಾರೆ.

    ಪ್ರಜಾಧ್ವನಿ ಯಾತ್ರೆಯ (Prajadhwani Yatra) ಭಾಗವಾಗಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ನಡೆದ ರೋಡ್‌ಶೋ ವೇಳೆ ಬಸ್ ಮೇಲೆ ನಿಂತುಕೊಂಡೇ ಕಲಾವಿದರಿಗೆ ಹಣ ಎರಚಿದ್ದು, ಇದರಿಂದ ಕಲಾವಿದರು ಅಸಮಾಧಾನಗೊಂಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಒಡೆಯಲು ಸುಮಲತಾ ರಣತಂತ್ರ

    ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ನಡೆದ ರೋಡ್ ಶೋನಲ್ಲಿ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಪದ ಕಲಾವಿದರಿಗೆ ಬೇವಿನಹಳ್ಳಿ ಗ್ರಾಮದಲ್ಲಿ ಹಣ ಕೊಡುವಾಗ ಡಿ.ಕೆ ಶಿವಕುಮಾರ್ ಬಸ್ಸಿನ ಮೇಲಿನಿಂದಲೇ 500 ರೂ. ಮುಖಬೆಲೆಯ ನೋಟುಗಳನ್ನು ಎರಚಿದ್ದಾರೆ. ಇದನ್ನೂ ಓದಿ: ಡಿಕೆಶಿ ಚುಂಚನಗಿರಿಯ ಅಮಾವಾಸ್ಯೆ ಪೂಜೆ ಹಿಂದೆ ಇದೆಯಾ ಸಿಎಂ ಕನಸು?

    ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷರ ನಡೆಗೆ ಕಲಾವಿದರು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.