Tag: ಪ್ರಜಾಧ್ವನಿ

  • ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ಮಾಡುತ್ತೇವೆ: ಗೋವಿಂದ ಕಾರಜೋಳ

    ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ಮಾಡುತ್ತೇವೆ: ಗೋವಿಂದ ಕಾರಜೋಳ

    ಬೆಳಗಾವಿ: ಮತ್ತೆ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ಮಾಡುತ್ತೇವೆ. ಎರಡು ಬಾರಿ ನಮಗೆ ಸ್ಪಷ್ಟ ಬಹುಮತ ಬಂದಿರಲಿಲ್ಲ. ಈಗ ಜನ ತೀರ್ಮಾನ ಮಾಡಿದ್ದಾರೆ. ನಾವು ಮಾಡಿದ ಸಾಧನೆ, ಕೆಲಸದ ಮೇಲೆ ಆತ್ಮವಿಶ್ವಾಸವಿದೆ, ನಾವು ಗೆದ್ದು ಬರುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತಕ್ಕೆ (Lokayukta) ಸದೃಢ ಶಕ್ತಿ ನೀಡಿದ್ದೇವೆ. ಇಂದು ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಪಕ್ಷ, ಪಂಗಡ, ಜಾತಿ, ಧರ್ಮ ಯಾವುದೂ ನೋಡದೆ ನಿಷ್ಪಕ್ಷಪಾತ ಕೆಲಸಕ್ಕೆ ಅವಕಾಶ ನೀಡಲಾಗಿದೆ. ನಿವೃತ್ತ ಜಡ್ಜ್ ಗಳು ಅದರ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ (Congress) ಪಕ್ಷದವರು ತಿಪ್ಪರಲಾಗ ಹಾಕಿದರೂ ಮೇ ತಿಂಗಳಿನಲ್ಲಿ ಬಿಜೆಪಿ (BJP) ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಮಾಡುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ಕಾಯುತ್ತಿದ್ದಾರೆ; ಜೆಡಿಎಸ್‌ಗೆ ಮತ ಕೊಟ್ರೆ ಕಾಂಗ್ರೆಸ್‌ಗೆ ಕೊಟ್ಟಂತೆ – ಅಮಿತ್ ಶಾ

    ಬೆಳಗಾವಿ (Belagavi) ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆ (Vijay Sankalpa Yatra) ಆರಂಭಿಸಿದ್ದೇವೆ. ದೊಡ್ಡ ಸಮಾವೇಶ ಮಾಡಿ ರೋಡ್ ಶೋ ಮಾಡಿದ್ದೇವೆ. ಕಾಂಗ್ರೆಸ್‌ನವರು ಪ್ರಜಾಧ್ವನಿ (Prajadhwani) ಯಾತ್ರೆ ಶುರು ಮಾಡಿದ್ದಾರೆ. 60 ವರ್ಷ ಆಡಳಿತ ಮಾಡಿ ಪ್ರಜೆಗಳ ಧ್ವನಿ ಕಳೆದಿಟ್ಟವರು ಪ್ರಜಾಧ್ವನಿಗಾಗಿ ಓಡಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವುದರಿಂದ ನಿಮಗೆ ಯಾವುದೇ ಲಾಭವಾಗುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಜ್ಯಪಾಲರನ್ನು ಭೇಟಿಯಾದ ಕಾನ್ರಾಡ್ ಸಂಗ್ಮಾ – ಮೇಘಾಲಯದಲ್ಲಿ ಸರ್ಕಾರ ರಚನೆಗೆ ಮನವಿ

    60 ವರ್ಷದ ಆಡಳಿತದಲ್ಲಿ ಏನು ಮಾಡಿದ್ದೀರಿ ಅದನ್ನು ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪ ಮಾಡುತ್ತಿದ್ದಾರೆ. ಆದರೆ ನಾವು ಯಾವತ್ತಿಗೂ ಇದಕ್ಕೆ ಅವಕಾಶ ಕೊಡಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) 9 ವರ್ಷಗಳ ಸಾಧನೆ, ದೇಶದ ಅಭಿವೃದ್ಧಿ, ಗೌರವ, ರಕ್ಷಣೆ ಬಗ್ಗೆ ಜನರಿಗೆ ತಿಳಿಸಿರುವುದಷ್ಟೇ ಅಲ್ಲದೇ ಯಡಿಯೂರಪ್ಪ (B.S.Yediyurappa) , ಬೊಮ್ಮಾಯಿ (Basavaraj Bommai) ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸವನ್ನೂ ತಿಳಿಸುತ್ತಿದ್ದೇವೆ. ನಾವು ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲಂಚ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ರಣದೀಪ್ ಸುರ್ಜೇವಾಲ

  • ಸಿದ್ದರಾಮಯ್ಯ 500ರೂ. ಕೊಡುವಂತೆ ಹೇಳಿಲ್ಲ – ಬಿಜೆಪಿ ವಿರುದ್ಧ ಸತೀಶ್ ಕಿಡಿ

    ಸಿದ್ದರಾಮಯ್ಯ 500ರೂ. ಕೊಡುವಂತೆ ಹೇಳಿಲ್ಲ – ಬಿಜೆಪಿ ವಿರುದ್ಧ ಸತೀಶ್ ಕಿಡಿ

    ಬೆಳಗಾವಿ: ಸಿದ್ದರಾಮಯ್ಯ (Siddaramaiah) ಈ ನಾಡು ಕಂಡ ಅಪರೂಪದ ನಾಯಕ. ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಹೋರಾಡಿದ ಧೀಮಂತ ನಾಯಕ. ಅವರ ಬಾಯಿಯಿಂದ ಇಂತಹ ಹೇಳಿಕೆ ಬರಲು ಸಾಧ್ಯವೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.

    ಬೆಳಗಾವಿಯಲ್ಲಿ (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾವಶ್ಯಕವಾಗಿ ಸಿದ್ದರಾಮಯ್ಯನವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಜನರ ಮನಸ್ಸನ್ನು ಬೇರೆ ಕಡೆ ಡೈವರ್ಟ್ ಮಾಡಲಾಗುತ್ತಿದೆ. ಕಾಂಗ್ರೆಸ್ (Congress) ಪ್ರಜಾಧ್ವನಿ (Prajadhwani) ಬಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬರಿಗೆ 500 ರೂ. ಕೊಟ್ಟು ಕರೆದುಕೊಂಡು ಬರುವಂತೆ ಹೇಳಲಿಲ್ಲ. ಚರ್ಚೆಯನ್ನೂ ನಡೆಸಲಿಲ್ಲ. ಬಿಜೆಪಿಗರು (BJP) ಸೇರಿದಂತೆ ಕೆಲ ವಿರೋಧಿಗಳು ವಿಡಿಯೋ ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ – ಮಾ.4ಕ್ಕೆ ದಾವಣೆಗೆರೆಗೆ ದೆಹಲಿ ಸಿಎಂ

    ರಾಜ್ಯದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚುತ್ತಿದೆ. ಇದನ್ನು ಸಹಿಸದೆ ಬಿಜೆಪಿ ಪಕ್ಷ ಸಿದ್ದರಾಮಯ್ಯನವರ ವಿರುದ್ಧ ವಿಡಿಯೋ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದೆ. ರಾಜ್ಯದ ಜನತೆ ಇಂತಹ ವಿಡಿಯೋಗಳಿಗೆ ಮರುಳಾಗಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಬ್ರಿಟಿಷ್ ವಂಶಾವಳಿ – ಬೇರು ಸಮೇತ ಕಿತ್ತು ಹಾಕಬೇಕಿದೆ: ಬೊಮ್ಮಾಯಿ

  • ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ

    ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ

    ಬೆಳಗಾವಿ: ದುಡ್ಡು ಕೊಟ್ಟು ಮೋದಿ (Narendra Modi) ರೋಡ್ ಶೋಗೆ (Road Show) ಜನ ಕರೆಸುತ್ತಾರೆ. ಪ್ರವಾಹ, ಕೊರೋನ ಇದ್ದಾಗ ಇವರು ಬರಲಿಲ್ಲ. ಈಗ ಚುನಾವಣೆ ಬಂದಿದೆ. ಅದಕ್ಕೆ ಪದೇ ಪದೇ ಬರುತ್ತಾರೆ, ರೋಡ್ ಶೋ ಮಾಡುತ್ತಾರೆ. ಇವರು ಒಂದಿಷ್ಟು ಜನರನ್ನು ಇಟ್ಟುಕೊಂಡಿದ್ದಾರೆ. ಅವರು ಮೋದಿ ಮೋದಿ ಎಂದು ಕೂಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೋದಿ ವಿರುದ್ಧ ಹರಿಹಾಯ್ದರು.

    ಬೆಳಗಾವಿ (Belagavi) ತಾಲೂಕಿನ ಪಂತ ಬಾಳೇಕುಂದ್ರಿಯಲ್ಲಿ ನಡೆದ ಪ್ರಜಾಧ್ವನಿ (Prajadhwani) ಯಾತ್ರೆಯಲ್ಲಿ ಮಾತನಾಡಿದ ಅವರು, ಬೆಳಗಾವಿಗೆ ಮೋದಿ ಬಂದಾಗ ಏನಾದರೂ ಘೋಷಣೆ ಮಾಡಿದ್ದಾರಾ? ಕೃಷ್ಣ ಮೇಲ್ದಂಡೆ, ಮಹದಾಯಿ ಬಗ್ಗೆ ಮಾತನಾಡಲಿಲ್ಲ. ಹೊಸ ಯೋಜನೆಗಳನ್ನು ಘೋಷಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅವಮಾನ ಮಾಡಿದೆ ಎನ್ನುತ್ತಾರೆ. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಸೈಡ್ ಲೈನ್ ಮಾಡಿದ್ಯಾರು ಮೋದಿಜಿ? ಯಡಿಯೂರಪ್ಪನವರನ್ನು ಕಿತ್ತು ಹಾಕಿದ್ದು ಯಾರು ಎಂದು ಪ್ರಶ್ನಿಸಿದರು.

    ಈ ರಾಜ್ಯ ಉಳಿಯಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆದರೆ ಈ ಭಂಡರು ಅದಕ್ಕೂ ಬಿಡುವುದಿಲ್ಲ. ಇವರ ಚರ್ಮ ಘೇಂಡಾಮೃಗದ ಚರ್ಮದ ತರಹ ಆಗಿಬಿಟ್ಟಿದೆ. ದಬ್ಬಣ ತೆಗೆದು ಚುಚ್ಚಿದರೂ ಹೋಗುವುದಿಲ್ಲ. ಚುನಾವಣೆ ಬರುತ್ತಿದ್ದಂತೆ ಮೋದಿ ಈಗ ರೋಡ್ ಶೋ ಮಾಡುತ್ತಿದ್ದಾರೆ. ಇದರ ನಡುವೆ ಕೆಲವರು ಮೋದಿ ಎಂದು ಜೈಕಾರ ಹಾಕುತ್ತಾರೆ. ಈಗ ಅನೇಕರು ಮೋದಿ ಎಂದು ಘೋಷಣೆ ಹಾಕುತ್ತಿಲ್ಲ. ಏಕೆಂದರೆ ಇವರು 2 ಕೋಟಿ ಜನರಿಗೆ ಉದ್ಯೋಗ ನೀಡಲಿಲ್ಲ. ಉದ್ಯೋಗ ಕೊಡುವುದಾಗಿ ಹೇಳಿ ಈಗ ಪಕೋಡ ಮಾರುವುದಕ್ಕೆ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಬಸವಾದಿ ಶರಣರು ನುಡಿದಂತೆ ನಡೆದವರು. ಅವರೇ ನನ್ನ ಪ್ರೇರಣೆ. ನನ್ನ ಅವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ. ಬಿಜೆಪಿಯವರು 600 ಭರವಸೆಗಳ ಪೈಕಿ ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಬಿಜೆಪಿಯವರು ಎಂದೂ ಜನರ ಬಳಿ ಬರುವುದಿಲ್ಲ ಬಿಡಿ. ಬೇಕಿದ್ದರೆ ಹಿಂದಿನ ಚುನಾವಣೆಯಲ್ಲಿ ಸೋತ ಸಂಜಯ್ ಪಾಟೀಲ್ ಅವರನ್ನು ಕೇಳಿ. ಅವರು ಯಾವತ್ತಾದರೂ ನಿಮ್ಮ ಬಳಿ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದರು.

    ರಾಜಕೀಯ ಎಂದರೆ ಜನರ ಸೇವೆ ಮಾಡುವುದು. ಅದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಪಾಲಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡೇ ಹೆಬ್ಬಾಳ್ಕರ್ ಇಷ್ಟೊಂದು ಕೆಲಸಗಳನ್ನು ಮಾಡಿದ್ದಾರೆ. 2012ರಲ್ಲಿ ಶಾಸಕಿ ಆಗಿದ್ದರೆ ಇನ್ನೂ ಅವರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದರು. 2023ರಲ್ಲೂ ಹೆಬ್ಬಾಳ್ಕರ್ ಗೆದ್ದು ಸಂಜಯ್ ಅವರ ಠೇವಣಿ ಜಪ್ತಿಯಾಗಬೇಕು. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಈ ಸಲ ಚುನಾವಣೆಯಲ್ಲಿ ಹೆಬ್ಬಾಳ್ಕಾರ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಜೆಡಿಎಸ್‌ಗೆ ಮತ ಹಾಕಿದ್ರೆ ಬಿಜೆಪಿಗೆ ಮತ ಹಾಕಿದಂತೆ: ಜಮೀರ್ ಅಹ್ಮದ್

    ಬೆಲೆ ಏರಿಕೆಯಿಂದಾಗಿ ದೇಶದ ಹೆಣ್ಣುಮಕ್ಕಳು ಹೈರಾಣಾಗಿದ್ದಾರೆ. ಮಾರ್ಚ್ 1ರಂದು ಸಿಲಿಂಡರ್ ದರ 50 ರೂ. ಹೆಚ್ಚಾಗಿದೆ. ಒಂದು ವರ್ಷಕ್ಕೆ ನಾಲ್ಕೂವರೆ ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಆದರೆ ಕೇಂದ್ರ ಕೇವಲ ನಮಗೆ 50 ಸಾವಿರ ಕೋಟಿ ರೂ. ನೀಡುತ್ತದೆ. ಕೇಂದ್ರ ಸರ್ಕಾರ ನಮ್ಮನ್ನು ಸುಲಿಗೆ ಮಾಡುತ್ತಿದೆ. ಮೋದಿ ಆಡಳಿತಕ್ಕೆ ಬಂದಮೇಲೆ ಅನುದಾನಗಳು ಕಡಿತಗೊಂಡಿವೆ ಎಂದು ವಾಗ್ದಾಳಿ ನಡೆಸಿದರು.

    ಕರ್ನಾಟಕ ಸರ್ಕಾರ 77,750 ಕೋಟಿ ರೂ. ಸಾಲ ಪಡೆದಿದೆ. ಈ ಹಿಂದೆ ಎಂದೂ ಇಷ್ಟು ಸಾಲ ಮಾಡಿರಲಿಲ್ಲ. ನನ್ನ ಕಾಲದಲ್ಲಿ 2,42,000 ಕೋಟಿ ರೂ. ಸಾಲ ಇತ್ತು. ಈಗ ರಾಜ್ಯದ ಸಾಲ 5,54,000 ಕೋಟಿ ರೂ. ಪ್ರತಿಯೊಬ್ಬನ ತಲೆ ಮೇಲೆ 75 ಸಾವಿರ ರೂ. ಸಾಲ ಇದೆ. ಇವತ್ತು ಕರ್ನಾಟಕ ದಿವಾಳಿ ಮಾಡಿದ್ದಾರೆ. ಇವರು ರೈತರ ಸುಲಿಗೆ, ಬಡವರ ಸುಲಿಗೆ, ಮಹಿಳೆಯರು, ಯುವಕರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

    ರಾಣಿ ಚೆನ್ನಮ್ಮ ಜಯಂತಿ ಮಾಡಿದ್ದೇ ನಾವು. ರಾಯಣ್ಣ ಸಮಾಧಿ ಸ್ಥಳ ಅಭಿವೃದ್ಧಿ ಮಾಡಿದ್ದೇ ನಾನು ಎಂದು ನುಡಿದರು.

  • ಅಂದು ಬಡವರು ಡಿ.ಕೆ.ಶಿವಕುಮಾರ್ ಕಣ್ಣಿಗೆ ಕಾಣಲಿಲ್ಲವಾ – ಪ್ರತಾಪ್ ಸಿಂಹ ಪ್ರಶ್ನೆ

    ಅಂದು ಬಡವರು ಡಿ.ಕೆ.ಶಿವಕುಮಾರ್ ಕಣ್ಣಿಗೆ ಕಾಣಲಿಲ್ಲವಾ – ಪ್ರತಾಪ್ ಸಿಂಹ ಪ್ರಶ್ನೆ

    ಮೈಸೂರು: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಚಾಮರಾಜನಗರ- ನಂಜನಗೂಡು 4 ಲೇನ್ ರಸ್ತೆಗೆ ಯಾಕೆ ಸರ್ವಿಸ್ ರೋಡ್ ಬಿಡಲಿಲ್ಲಾ? ಅಂದು ಬಡವರು ಡಿ.ಕೆ.ಶಿವಕುಮಾರ್ (D.K. Shivakumar) ಅವರ ಕಣ್ಣಿಗೆ ಕಾಣಲಿಲ್ಲವಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

    ಎಕ್ಸ್‍ಪ್ರೆಸ್ ವೇಯಲ್ಲಿ (Expressway) ಸರ್ವಿಸ್ ರೋಡ್ ನಿರ್ಮಾಣ ಮಾಡಲಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ (Pratap Simha), ಡಿಕೆಶಿ ಅವರು ಮೊದಲು ನೆನೆಗುದಿಗೆ ಬಿದ್ದಿರುವ ಮಳವಳ್ಳಿ-ಬೆಂಗಳೂರು ಮಾರ್ಗ ಸರಿಪಡಿಸಲಿ. ಹಾಸನ-ಬೆಂಗಳೂರು (Bengaluru) ರಸ್ತೆ ನಿರ್ಮಾಣ ಮಾಡಿದಾಗಲೂ ಸರ್ವಿಸ್ ರೋಡ್ ಮಾಡಿರಲಿಲ್ಲ. ಇಲ್ಲಿಯವರೇ ಸಿಎಂ, ಪಿಡಬ್ಲ್ಯುಡಿ ಸಚಿವರಾಗಿದ್ದರೂ ಅಂದು ಯಾಕೆ ಡಿಕೆಶಿಗೆ ಬಡವರ ಪರ ಕಾಳಜಿ ಇರಲಿಲ್ಲ ಎಂದು ಡಿಕೆಶಿಯವರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ:ನಿರ್ದೇಶಕ ಭಗವಾನ್ ನಿಧನಕ್ಕೆ ಸಿಎಂ, ಮಾಜಿ ಸಿಎಂ ಸಂತಾಪ

    ಸರ್ವಿಸ್ ರೋಡ್ ನಿರ್ಮಾಣದ ಬಳಿಕವೇ ಹೈವೇ ಉದ್ಘಾಟನೆ ಆಗಲಿದೆ. ದ್ವಿಚಕ್ರ ವಾಹನ, ಸಣ್ಣಪುಟ್ಟ ವಾಹನಗಳಿಗೆ ಸರ್ವಿಸ್ ರೋಡ್ ಇರಲಿದೆ ಎಂದು ಸ್ಪಷ್ಟನೆ ನೀಡಿದರು.

     ಪ್ಯಾಲೆಸ್ ಮಾದರಿಯಲ್ಲಿ ಒಂದೇ ಒಂದು ರಸ್ತೆ ನಿರ್ಮಾಣ ಮಾಡಲಿ ಎಂಬ ಹೇಳಿಕೆಯ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‍ನವರು (Congress) ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಡಿಕೆಶಿಗೆ ಒಮ್ಮೆ ಹೈವೇಯಲ್ಲಿ ಬಂದು ಹೋಗಲು ಹೇಳಿ. ರಸ್ತೆಯಲ್ಲಿ ಬರುವಾಗ ಗಮನವಿಟ್ಟು ನೋಡಲು ಹೇಳಿ. ಪ್ಯಾಲೆಸ್ ಮಾದರಿಯನ್ನು ಮೀರಿಸುವಂತಹ ರಸ್ತೆ ಅಲ್ಲಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಬಸ್ ಮದುವೆಯಲ್ಲಿ ಪ್ರತ್ಯಕ್ಷ- ಜನರಲ್ಲಿ ಅಚ್ಚರಿ

    ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಬಸ್ ಮದುವೆಯಲ್ಲಿ ಪ್ರತ್ಯಕ್ಷ- ಜನರಲ್ಲಿ ಅಚ್ಚರಿ

    ನೆಲಮಂಗಲ: ರಾಜ್ಯಾದ್ಯಂತ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ (Congress Party) ಜನರನ್ನ ಸೆಳೆಯಲು, ತಮ್ಮ ಪಕ್ಷದ ಪ್ರಣಾಳಿಕೆಯನ್ನ ಜನರ ಬಳಿ ತಲುಪಿಸಲು ಪ್ರಜಾಧ್ವನಿ ಬಸ್ (Prajadwani Yatra) ಯಾತ್ರೆಯ ಮೂಲಕ ಮುಂದಾಗಿದ್ದು, ಇದೀಗ ಈ ಬಸ್ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡು ಜನರ ಅಚ್ಚರಿಗೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ (Nelamangala) ನಗರದ ಕುಣಿಗಲ್ ಬೈಪಾಸ್‍ನ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಬಸ್ ಆಗಮಿಸಿದೆ. ಈ ಬಸ್ ಬಂದ ವೇಳೆ ಕೆಲಕಾಲ ಮದುವೆ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಸೇರಿದಂತೆ ನಾಯಕರು ಬಂದ್ರಾ ಎಂದು ಜನರು ಜೋಶ್ ನಲ್ಲಿದ್ದರು ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಟಿಪ್ಪು ಬೇಕಾ? ರಾಮಭಕ್ತರು ಬೇಕಾ?: ಕಟೀಲ್

    ಕಾಂಗ್ರೆಸ್ ಒಂದು ತಿಂಗಳ ಹಿಂದೆ ಚಾಲನೆ ನೀಡಿದ್ದ ಪ್ರಜಾಧ್ವನಿಯ ಕೆಎ 02 ಎಜಿ 0855 ಬಸ್ ಬಾಡಿಗೆಗೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ. ಈ ಬಸ್ಸಿನಲ್ಲಿ ಮದುವೆಗೆ ಕಾಂಗ್ರೆಸ್ ಪಕ್ಷದ ನಾಯಕರು ಬಂದ್ರಾ ಎಂಬ ಸಂಶಯದಲ್ಲಿ ಯಾರು ಕೂಡ ಇರಲ್ಲಿಲ್ಲ. ಈ ಬಸ್ ಮದುವೆ ದಿಬ್ಬಣಕ್ಕೆ ಹಾಜರಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನವರು ಜೋಡೆತ್ತುಗಳಂತೆ ಆರಂಭಿಸಿದ ಬಸ್ ಯಾತ್ರೆ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸಂಚಾರ ಮಾಡಿದೆ. ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಸಮಾರಂಭ ಮಾಡಲು ದಿನಾಂಕ ನಿಗದಿಯಾಗಿದೆ. ಆದರೆ ಕಾಂಗ್ರೆಸ್ ಪ್ರಜಾಧ್ವನಿಯ ಸಮಾರಂಭದ ಬಿಡುವಿನ ವೇಳೆಯಲ್ಲಿ ಬಸ್ ಮದುವೆ ಕಾರ್ಯಕ್ರಮಕ್ಕೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k