Tag: ಪ್ರಚಾರ

  • ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪಪ್ರಚಾರ: ಗರಂ ಆದ ಸುದೀಪ್ ಅಭಿಮಾನಿಗಳು

    ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪಪ್ರಚಾರ: ಗರಂ ಆದ ಸುದೀಪ್ ಅಭಿಮಾನಿಗಳು

    ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದ ಕಲೆಕ್ಷನ್ 35 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಸಹಿಸಲಾಗದ ಕೆಲವರು ಸಿನಿಮಾದ ಬಗ್ಗೆ ಅಪಪ್ರಚಾರ ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾಗಿ ಕಿಚ್ಚನ ಅಭಿಮಾನಿಗಳು ಗರಂ ಆಗಿದ್ದಾರೆ.

    ಸುದೀಪ್ ಸಿನಿಮಾಗಳು ರಿಲೀಸ್ ಆದಾಗ ಇಂತಹ ಅಪಪ್ರಚಾರ ನಡೆಯುತ್ತಲೇ ಬಂದಿದೆ. ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ಅದನ್ನು ಪೈರಸಿ ಕೂಡ ಮಾಡಲಾಗಿತ್ತು. ಪೈರಸಿ ಮಾಡಿ, ಹಂಚಿದವನನ್ನು ಅರೆಸ್ಟ್ ಮಾಡಿದಾಗ, ಆತ ಕನ್ನಡದ ಮತ್ತೋರ್ವ ನಟನ ಅಭಿಮಾನಿ ಎಂದು ಗುರುತಿಸಲಾಗಿತ್ತು. ಇದೇ ವಿಚಾರವಾಗಿ ಆ ನಟನ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ಜಗಳ ಶುರುವಾಗಿತ್ತು. ಈಗ ಮತ್ತದೇ ವಾತಾವರಣ ಉಂಟಾಗಿದೆ. ಇದನ್ನೂ ಓದಿ:ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ

    ಕೆಲ ಕಿಡಿಗೇಡಿಗಳು ವಿಕ್ರಾಂತ್ ರೋಣ ಚೆನ್ನಾಗಿಲ್ಲ, ಅದೊಂದು ಡಬ್ಬಾ ಸಿನಿಮಾ ಹೀಗೆ ನಾನಾ ರೀತಿಯ ಗಾಸಿಪ್ ಕ್ರಿಯೇಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ವಿಮರ್ಶೆಯ ಹೆಸರಿನಲ್ಲಿ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿ, ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ ಶುರುವಾಗಿದೆ. ಅಂತಹ ನೆಗೆಟಿವ್ ಮಾಡುವವರ ವಿರುದ್ಧ ಕಿಚ್ಚನ ಅಭಿಮಾನಿಗಳು ಕೂಡ ಗರಂ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್

    ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್

    ಲಕ್ನೋ: ಪರಿವಾರವಾದಿಗಳು ಪಡಿತರವನ್ನು ಲೂಟಿ ಮಾಡಿದರು. ಆದರೆ ಬಿಜೆಪಿಯ ಒಂದು ರಾಷ್ಟ್ರ ಒಂದು ಪಡಿತರ ಚೀಟಿಯೊಂದಿಗೆ ಅವರ ಆಟವನ್ನು ಕೊನೆಗೊಳಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

    ಉತ್ತರ ಪ್ರದೇಶದ ಕೌಶಾಂಬಿಯಲ್ಲಿನ ಪ್ರಚಾರದಲ್ಲಿ ಮಾತನಾಡಿದ ಅವರು, ಪರಿವಾರವಾದಿಗಳು ಬಡವರ ಪಡಿತರವನ್ನು ದೀರ್ಘಕಾಲ ಲೂಟಿ ಮಾಡಿದ್ದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ನು ತರುವ ಮೂಲಕ ಅದನ್ನು ಕೊನೆಗೊಳಿಸಿದೆ ಎಂದು ಪರೋಕ್ಷವಾಗಿ ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬಿಜೆಪಿಯ ಕೋವಿಡ್ ಲಸಿಕೆ ಬಗೆಗಿನ ಟೀಕೆಗಳಿಗಾಗಿ ವ್ಯಂಗ್ಯವಾಡಿದರು. ಇದನ್ನೂ ಓದಿ:  ವಿಶ್ವದ ನಂ.1 ಚೆಸ್ ಆಟಗಾರನ ವಿರುದ್ಧ ಗೆಲುವು – ಮೋದಿಯಿಂದ ಪ್ರಜ್ಞಾನಂದನಿಗೆ ಅಭಿನಂದನೆ

     

    ಈ ಹಿಂದೆ ನೀವು ಕೋವಿಡ್ ಸಮಯದಲ್ಲಿ ಕೆಲ ನಾಯಕರನ್ನು ನೋಡಬೇಕು, ಕೊರೊನಾ ಸಾಂಕ್ರಾಮಿಕ ರೋಗವು ದೇಶದೆಲ್ಲಡೆ ಅತ್ಯಂತ ಗರಿಷ್ಠ ಮಟ್ಟದಲ್ಲಿದ್ದಾಗ ಮಾತನಾಡಿದ ಒಬ್ಬರು ಬಿಜೆಪಿ ಸರ್ಕಾರ ನಿಯಂತ್ರಿಸಿದಾಗ ಕಣ್ಮರೆಯಾದರು ಎಂದು ಟಾಂಗ್ ನೀಡಿದರು.  ಇದನ್ನೂ ಓದಿ: ಆರ್​ಸಿಬಿಯಲ್ಲಿ K.G.F ಸ್ಟಾರ್ಸ್

    ಲಸಿಕೆ ವಿರುದ್ಧ ಕೆಲ ಪಕ್ಷದ ನಾಯಕರು ಜನರಿಗೆ ತಪ್ಪು ಮಾಹಿತಿ ನೀಡಿ ಪ್ರಚೋದಿಸಿದ್ದರು. ಆದರೆ ಅಂತಹ ನಾಯಕರೇ ಕೊನೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಲಸಿಕೆ ಹಾಕಿಸಿಕೊಂಡಿದ್ದಾರೆ. ಯುಪಿಯ ಜನರಿಗೆ ಇಂತಹ ಪ್ರಚೋದಿತ ನಾಯಕರ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ತಿರುಗೇಟು ನೀಡಿದರು.

  • ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಬೆಂಗಳೂರು: ಮುಸ್ಲಿಂ ಯುವತಿ ಅವಾಚ್ಯ ಪದಗಳಿಂದ ಬೈದಿದ್ದ ಯುವಕರು ನಾವು ಪ್ರಚಾರದ ಹುಚ್ಚಿಗೆ ವಿಡಿಯೋ ಮಾಡಿದ್ದೆವು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

    ಹಿಂದೂ ಯುವಕನ ಬೈಕ್ ನಲ್ಲಿ ಹೋಗುತ್ತಿದ್ದಳು ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಸೊಹೇಲ್ ಮತ್ತು ನಯಾಜ್ ಅವರನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದರು.

    ಕಳೆದ ಶುಕ್ರವಾರ ನಗರದ ಡೈರಿ ಸರ್ಕಲ್ ನಲ್ಲಿ ಕೆಲಸ ಮುಗಿಸಿ ಹಿಂದೂ ಯುವಕನ ಜೊತೆಗೆ ಬೈಕ್ ನಲ್ಲಿ ಬರುತ್ತಿದ್ದಳು ಎಂಬ ಕಾರಣಕ್ಕೆ, ಬೈಕ್ ತಡೆದ ಇಬ್ಬರು ಇದು ಮುಸ್ಲಿಂ ಸಂಪ್ರದಾಯಕ್ಕೆ ಮಾಡುವ ಅವಮಾನ ಎಂದು ಗಲಾಟೆ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು. ಇದನ್ನೂ ಓದಿ:  ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಗ್ಯ ನಿರೀಕ್ಷಕ

    ಹಲ್ಲೆಯ ವೀಡಿಯೋವನ್ನು ಸೊಹೇಲ್ ತನ್ನ ಫೇಸ್‍ಬುಕ್ ಅಕೌಂಟ್ ನಲ್ಲಿ ಶೇರ್ ಮಾಡ್ಕೊಂಡಿದ್ದರು. ಈಗ ಆ ವೀಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು, ಭಯಗೊಂಡ ಸೊಹೇಲ್ ತಕ್ಷಣ ಅದನ್ನು ಡಿಲೀಟ್ ಕೂಡ ಮಾಡಿದ್ದರು. ಅಷ್ಟರೊಳಗೆ ವಿಡಿಯೋ ವೈರಲ್ ಆಗಿದನ್ನು ಗಮನಿಸಿದ ಸುದ್ದಗುಂಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಂತರ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.

    ವಿಚಾರಣೆ ವೇಳೆ ಇಬ್ಬರು ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಚಾರದ ಹುಚ್ಚಿಗೆ ಬಿದ್ದು ಈ ರೀತಿ ಯಡವಟ್ಟು ಮಾಡಿಕೊಂಡ್ವಿ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ. ಧರ್ಮದ ವಿಚಾರವನ್ನು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ರೆ ಹೆಚ್ಚು ಪ್ರಚಾರ ಸಿಗುತ್ತೆ, ಅದರಿಂದ ಬೇಗ ಫೇಮಸ್ ಆಗಬಹುದು ಎಂದು ಪ್ಲಾನ್ ಮಾಡಿ ಕೃತ್ಯವೆಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:  ಸಣ್ಣ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆ

    ಮುಸ್ಲಿಂ ಯುವಕರಿಂದ ಹಲ್ಲೆಗೊಳಾಗದ ಮಹಿಳೆ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಅದೇ ದಿನ ಬೆಸ್ಟ್ ಎಂಪ್ಲಾಯ್ ಅವಾರ್ಡ್ ಆಗಿ ಲ್ಯಾಪ್ ಟಾಪ್ ಬಹುಮಾನ ತೆಗೆದುಕೊಂಡಿದ್ದರು. ಇದೇ ವಿಚಾರಕ್ಕೆ ಅಂದು ಕೆಲಸ ಮುಗಿಸಿ ಮನೆಗೆ ಹೊರಡೋದು ತಡವಾಗಿದ್ದರಿಂದ ಸಹೋದ್ಯೋಗಿ ಮಹೇಶ್ ಅವರ ಜೊತೆಗೆ ಬಂದಿದ್ದರು. ತಾನು ಸಹೋದ್ಯೋಗಿ ಜೊತೆ ಬರುತ್ತಿರುವ ವಿಚಾರವನ್ನು ಪತಿಗೆ ತಿಳಿಸಿದ್ದರು.

  • ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಧಾರವಾಡ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಧಾರವಾಡದಲ್ಲಿ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.

    ಬಿಜೆಪಿ ಮುಖಂಡರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇಂದು ನಳಿನ್‍ಕುಮಾರ್ ಕಟೀಲ್ ಧಾರವಾಡದ ಹಲವು ವಾರ್ಡ್ ಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಕಟೀಲ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಾದಯಾತ್ರೆ ಮೂಲಕ ಪ್ರಚಾರ ಮಾಡಿದ್ದಾರೆ.ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

    ಕೋವಿಡ್ ನಿಯಮದಂತೆ ಪ್ರಚಾರದಲ್ಲಿ ಕೇವಲ 5 ಜನ ಭಾಗವಹಿಸಬೇಕು ಎಂದು ಸೂಚನೆ ಇದ್ದರೂ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಕಟೀಲ್ ಪ್ರಚಾರ ಕೈಗೊಂಡಿದ್ದಾರೆ. ಈ ಪ್ರಚಾರದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಮಾಸ್ಕ್ ಕೂಡಾ ಇಲ್ಲದೆ ಬಂದಿದ್ದರು. ಪ್ರಚಾರಕ್ಕೂ ಮುನ್ನ ಕಟೀಲ್ ಅವರು ಧಾರವಾಡ ಮುರುಘಾಮಠಕ್ಕೆ ಭೇಟಿ ನೀಡಿದ್ದು, ಅವರಿಗೆ ಬಿಜೆಪಿ ಕಾರ್ಯಕರ್ತರು ಆರತಿ ಬೆಳಗುವುದರ ಮೂಲಕ ಸ್ವಾಗತಿಸಿದರು.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ

  • ಬಿಜೆಪಿ ಅಭ್ಯರ್ಥಿಗಳ ಪರ ಅಶ್ವಥ್ ನಾರಾಯಣ್ ಪ್ರಚಾರ

    ಬಿಜೆಪಿ ಅಭ್ಯರ್ಥಿಗಳ ಪರ ಅಶ್ವಥ್ ನಾರಾಯಣ್ ಪ್ರಚಾರ

    ರಾಮನಗರ: ಚನ್ನಪಟ್ಟಣ- ರಾಮನಗರ ನಗರಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಬ್ಯುಸಿಯಾಗಿದ್ದರು.

    ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿಸಿಎಂ, ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಿದರು. ರಾಮನಗರದ ಮದ್ದೂರಮ್ಮ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅಶ್ವಥ್ ನಾರಾಯಣ್ ಅವರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಸಾರ್ವಜನಿಕರೊಂದಿಗೆ ಮನವಿ ಮಾಡಿಕೊಂಡರು.

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಮಧ್ಯದಲ್ಲೇ ನಗರಸಭೆ ಚುನಾವಣೆ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದ ಡಿಸಿಎಂ ಅವರೊಂದಿಗೆ ನೂರಾರು ಜನರು ಸೇರಿದರು. ಪ್ರಮುಖವಾಗಿ ಮಕ್ಕಳೊಂದಿಗೆ ಸೇರಿಕೊಂಡು ಡಿಸಿಎಂ ಪ್ರಚಾರ ಮಾಡಿದರು. ಇವರಿಗೆ ಬಿಜೆಪಿ ಜಿಲ್ಲಾ ಮುಖಂಡರು ಸಾಥ್ ನೀಡಿದರು.

  • ರಾಯಚೂರಲ್ಲಿ ಗಾಯಕಿ ಮಂಗ್ಲಿ ಪ್ರಚಾರ- ಮುಗಿಬಿದ್ದ ಅಭಿಮಾನಿಗಳು

    ರಾಯಚೂರಲ್ಲಿ ಗಾಯಕಿ ಮಂಗ್ಲಿ ಪ್ರಚಾರ- ಮುಗಿಬಿದ್ದ ಅಭಿಮಾನಿಗಳು

    ರಾಯಚೂರು: ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ ಹಾಡಿನ ಮೂಲಕ ಪ್ರಸಿದ್ಧಿ ಪಡೆದಿರುವ, ಮಂಗ್ಲಿ ಎಂದೇ ಜನಪ್ರಿಯರಾಗಿರುವ ಗಾಯಕಿ ಸತ್ಯವತಿ ರಾಥೋಡ್ ಇಂದು ಬಿಜೆಪಿ ಅಭ್ಯರ್ಥಿ ಪ್ರತಾಪ್‍ಗೌಡ ಪಾಟೀಲ್ ಪರ ಪ್ರಚಾರ ನಡೆಸಿದ್ದಾರೆ.

    ಮಸ್ಕಿ ಉಪಚುನಾವಣೆ ಹಿನ್ನೆಲೆ ಪ್ರತಾಪ್‍ಗೌಡ ಪಾಟೀಲ್ ಪರ ಮಂಗ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಅಡವಿಬಾವಿ ತಾಂಡಾ, ಹಡಗಲಿತಾಂಡಾ ಹಾಗೂ ಮಸ್ಕಿ ಭರ್ಜರಿ ಮತಯಾಚನೆ ಮಾಡಿದರು. ಈ ವೇಳೇ ಅಭಿಮಾನಿಗಳು ಮುಗಿಬಿದ್ದಿದ್ದು, ನೂಕುನುಗ್ಗಲಿನ ಮಧ್ಯೆಯೇ ನೆಚ್ಚಿನ ಗಾಯಕಿಯನ್ನು ಕಣ್ತುಂಬಿಕೊಂಡಿದ್ದಾರೆ. ಬಂಜಾರ ಸಮುದಾಯದ ಮತಗಳನ್ನು ಮಂಗ್ಲಿ ಸೆಳೆದಿದ್ದು, ತಾಂಡಾಗಳು ಹಾಗೂ ಮಸ್ಕಿ ಪಟ್ಟಣದಲ್ಲಿ ಭರ್ಜರಿ ಪತ ಬೇಟೆ ನಡೆಸಿದ್ದಾರೆ.

    ಈ ವೇಳೆ ಮಾತನಾಡಿದ ಗಾಯಕಿ, ಪ್ರತಾಪ್ ಗೌಡ ಪಾಟೀಲ್ ರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಬೇಕು. ಇಲ್ಲಿಗೆ ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ. ಕಣ್ಣೇ ಅದಿರಿಂದಿ ಹಾಡು ನನಗೆ ಇಲ್ಲಿಗೆ ತಂದು ನಿಲ್ಲಿಸಿದೆ. ಎಲ್ಲೋ ಹುಟ್ಟಿದ ನನಗೆ ನೀವೂ ಗೌರವಿಸಿದ್ದು, ಯಾವುದೋ ಜನ್ಮದ ಪುಣ್ಯ. ಹಾಡು ಯಶಸ್ವಿ ಆಗಿದಕ್ಕೆ ಡಿ ಬಾಸ್ (ದರ್ಶನ್) ಹಾಗೂ ಎಲ್ಲರಿಗೂ ನನ್ನ ನಮಸ್ಕಾರ. ನಟ ಯಶ್ ಅವರ ಸಂದರ್ಶನ ಮಾಡಿದ್ದೇನೆ ನೋಡಿದ್ರಾ ಎಂದು ಪ್ರಶ್ನಿಸಿದ್ದಾರೆ.

    ನೀವು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನಾನು ಪ್ರಧಾನಿ ಮೋದಿ ಅಭಿಮಾನಿ, ಯಡಿಯೂರಪ್ಪನವರ ಮಗ ವಿಜಯೇಂದ್ರ ಅಣ್ಣನಿಗೂ ನಮಸ್ಕಾರ. ಯಾರೂ ಮರೆಯದೇ ಬಿಜೆಪಿಗೆ ಮತ ನೀಡಿ ಎಂದು ಮಂಗ್ಲಿ ಮನವಿ ಮಾಡಿದರು. ಮಂಗ್ಲಿ ಅವರು ಭಾಷಣ ಮಾಡುತ್ತಿದ್ದಂತೆ ನೆರೆದಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

  • ಚುನಾವಣಾ ಪ್ರಚಾರದ ವೇಳೆ ಕುಣಿದು ಕುಪ್ಪಳಿಸಿದ ಸುಹಾಸಿನಿ, ಅಕ್ಷರಾ ಹಾಸನ್

    ಚುನಾವಣಾ ಪ್ರಚಾರದ ವೇಳೆ ಕುಣಿದು ಕುಪ್ಪಳಿಸಿದ ಸುಹಾಸಿನಿ, ಅಕ್ಷರಾ ಹಾಸನ್

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಯುಕ್ತ ನಟರು, ರಾಜಕಾರಣಿಗಳು ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚಾರದ ವೇಳೆ ಬಹುಭಾಷಾ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್ ಕುಣಿದು ಕುಪ್ಪಳಿಸಿದ್ದಾರೆ.

    ಕಮಲ್ ಹಾಸನ್ ಅವರ ಮಕ್ಕಲ್ ನೀಧಿ ಮಾಯಂ (ಎಮ್‍ಎನ್‍ಎಮ್) ಪಾರ್ಟಿ ಪರವಾಗಿ ನಟಿಯರು ಪ್ರಚಾರವನ್ನು ಮಾಡಿದ್ದಾರೆ. ಕಮಲ್ ಹಾಸನ್ ಅವರ ಪಕ್ಷಕ್ಕೆ ಮತವನ್ನು ಹಾಕುವಂತೆ ಜನರಲ್ಲಿ ಮನವಿಯನ್ನು ಮಾಡಿದ್ದಾರೆ. ಅಮ್ಮನಾಕುಲಂ ಜನರಲ್ಲಿ ಅಮೂಲ್ಯವಾದ ಮತವನ್ನು ಬ್ಯಾಟರಿ ಟಾರ್ಚ್ ಚಿನ್ನೆಗೆ ಹಾಕುವಂತೆ ಮನವಿ ಮಾಡಿದರು.

    ಚುನಾವಣಾ ಪ್ರಚಾರದ ವೇಳೆ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್ ತಮಟೆ ಸೌಂಡ್‍ಗೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲಿ ಇರುವ ಹಲವಾರು ಜನರು ಮತ್ತು ಪ್ರಚಾರದ ವೇಳೆ ಸುಹಾಸಿನಿ ಜೊತೆಗೆ ಇರುವ ಪಕ್ಷದ ಬೆಂಬಲಿಗರು ಹೆಜ್ಜೆ ಹಾಕಿದ್ದಾರೆ. ಕೈಯಲ್ಲಿ ಪಕ್ಷದ ಚಿನ್ನೆಯಾದ ಬ್ಯಾಟರಿ ಟಾರ್ಚ್ ಹಿಡಿದು ತಮಟೆ ಸೌಂಡ್‍ಗೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

  • ಪ್ರಚಾರ ವೇಳೆ ಬಟ್ಟೆ, ಪಾತ್ರೆ ತೊಳೆದು ಕೊಟ್ಟ ಅಭ್ಯರ್ಥಿ

    ಪ್ರಚಾರ ವೇಳೆ ಬಟ್ಟೆ, ಪಾತ್ರೆ ತೊಳೆದು ಕೊಟ್ಟ ಅಭ್ಯರ್ಥಿ

    ವಾಷಿಂಗ್ ಮಷೀನ್ ಕೊಡುವುದಾಗಿ ಭರವಸೆ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಎಐಎಡಿಎಂಕೆ ಅಭ್ಯರ್ಥಿಯೊಬ್ಬರು ಮಹಿಳೆಯ ಬಟ್ಟೆ ಒಗೆದುಕೊಟ್ಟಿದ್ದಾರೆ. ಹಾಗೇ ಚುನಾವಣೆಯಲ್ಲಿ ಗೆದ್ದರೆ ವಾಷಿಂಗ್ ಮಷೀನ್ ಕೊಡುವ ಭರವಸೆಯನ್ನು ನೀಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಕಾತಿರವನ್(50) ನಾಗಪಟ್ಟಿಣಂ ಟೌನ್ ಕಾರ್ಯದರ್ಶಿಯಾಗಿದ್ದಾರೆ. ಅವರು ಪಕ್ಷಕ್ಕಾಗಿ ಮಾಡಿದ ಕಾರ್ಯವನ್ನು ಗುರುತಿಸಿ ಟಿಕೆಟ್ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

    ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರವನ್ ನಾಗೋರ್ ಬಳಿ ಪ್ರಚಾರ ಮಾಡಿದ್ದಾರೆ. ಇಲ್ಲಿ ವಂದಿ ಪೆಟ್ಟೈ ಏರಿಯಾದಲ್ಲಿ ಮನೆಮನೆಗೆ ಹೋಗಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ತಮ್ಮ ಕುಟುಂಬಸ್ಥರ ಬಟ್ಟೆಗಳನ್ನು ತೊಳೆಯುತ್ತಿದ್ದರು. ಇದನ್ನು ಗಮನಿಸಿದ ಕಾತಿರವನ್ ಮಹಿಳೆ ಬಳಿ ಹೋಗಿ ನಾನು ಬಟ್ಟೆ ತೊಳೆದು ಕೊಡುತ್ತೇನೆ ಎಂದು ಹೇಳಿ ರಸ್ತೆಯಲ್ಲಿ ಕುಳಿತು ಬಟ್ಟೆಗಳನ್ನು ಒಗೆದಿದ್ದಾರೆ. ಹಾಗೆ ಪಕ್ಕದಲ್ಲಿಯೇ ಇದ್ದ ಕೆಲ ಪಾತ್ರೆಗಳನ್ನು ತೊಳೆದಿದ್ದಾರೆ.

    ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ವಾಷಿಂಗ್ ಮಷೀನ್ ವಿತರಿಸುವ ಭರವಸೆ ನೀಡಿರುವುದರಿಂದ ಅದನ್ನು ಸೂಚಿಸಲು ಬಟ್ಟೆ ತೊಳೆದಿದ್ದೇನೆ. ನಮ್ಮ ಅಮ್ಮಾ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಕೊಟ್ಟ ಮಾತಿನಂತೆ ವಾಷಿಂಗ್ ಮಷೀನ್ ನೀಡಿತ್ತೇವೆ. ಸರ್ಕಾರ ಇದನ್ನು ನೋಡಿಕೊಳ್ಳುತ್ತದೆ ಎಂದು ಕಾತಿರವನ್ ಹೇಳಿದ್ದಾರೆ.

  • ದೇವಿ ವೇಷದಲ್ಲಿ ಮಂಗಳಮುಖಿಯಿಂದ ಮತಯಾಚನೆ

    ದೇವಿ ವೇಷದಲ್ಲಿ ಮಂಗಳಮುಖಿಯಿಂದ ಮತಯಾಚನೆ

    – ಚುನಾವಣಾ ಅಖಾಡಕ್ಕಿಳಿದ ಭಾರತಿ ಕಣ್ಣಮ್ಮ

    ಚೆನ್ನೈ: ಮಧುರೈ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಮಂಗಳಮುಖಿಯಾದ ಡಾ. ಕಣ್ಣಮ್ಮ ಸ್ಪರ್ಧಿಸುತ್ತಿದ್ದಾರೆ. ದೇವಿಯ ವೇಷದ ಮೂಲಕ ಮತ ಕೇಳಲು ಮನೆಗಳಿಗೆ ತೆರಳುತ್ತಿದ್ದಾರೆ.

    ಭಾರತಿ ಕಣ್ಣಮ್ಮ ಅನ್ನುವ ಮಂಗಳಮುಖಿ ಹಲವು ಕನಸುಗಳ ಮೂಲಕ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತಿ ಕಣ್ಣಮ್ಮ, ಮಧುರೈಯನ್ನು ಮಾದರಿ ನಗರವಾಗಿ ಬದಲಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ (ಮಂಗಳಮುಖಿಯರಿಗೆ) ಕುಟುಂಬವಿಲ್ಲ. ಹೀಗಾಗಿ ನಾವು ಭ್ರಷ್ಟರಾಗುವುದಿಲ್ಲ. ಆದ್ದರಿಂದ ನನಗೆ ಮತ ಹಾಕಿ ಎಂದು ತಮಿಳು ಜನರಿಗೆ ಮನವಿ ಮಾಡುತ್ತಿದ್ದಾರೆ.

    ಕಣ್ಣಮ್ಮ ಅವರು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. 2014ರ ಲೋಕಸಭಾ ಚುನಾವಣೆಗೆ ಮಧುರೈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2019ರ ಲೋಕಸಭೆಗೆ ಚುನಾವಣೆಗೂ ಕಣ್ಣಮ್ಮ ನಾಮಪತ್ರ ಸಲ್ಲಿಸಿದ್ದರು. ಆದರೆ ಈ ನಾಮಪತ್ರ ಕೆಲ ಕಾರಣದಿಂದ ವಜಾಗೊಂಡಿತ್ತು. ಕಳೆದ ಎರಡು ಬಾರಿ ಸ್ಪರ್ಧಿಸಿದಾಗಲೂ ಕಣ್ಣಮ್ಮ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಬಾರಿಗೆ ಅವರು ಮಧುರೈ ದಕ್ಷಿಣದಿಂದ ವಿಧಾನಸಭೆ ಚುನಾವಣೆಗೆ ನ್ಯೂ ಜನರೇಶನ್ ಪೀಪಲ್ಸ್ ಪಾರ್ಟಿಯಿಂದ ಕಣಕ್ಕಿಳಿದಿದ್ದಾರೆ.

    ಕಣ್ಣಮ್ಮ ಅವರು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೆ ಆರ್ಥಿಕತೆಯಲ್ಲಿ ಬಿಎ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಡಿಪ್ಲೊಮಾ ಕೂಡ ಮಾಡಿದ್ದಾರೆ.

  • ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ

    ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ

    ಹೈದರಾಬಾದ್: ನಟಿ, ರಾಜಕಾರಣಿ ರೋಜಾ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಎರಡು ನಗರಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯುವಕರೊಂದಿಗೆ ಕಬಡ್ಡಿ ಆಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಚುನಾವಣಾ ಪ್ರಚಾರದ ವೇಳೆ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿ ಅಧ್ಯಕ್ಷೆ ಆಗಿರುವ ರೋಜಾ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳಿಯ ನಾಯಕರು ಮತ್ತು ಪುತ್ತೂರ್ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು.

    ಪ್ರಚಾರಕ್ಕೆಂದು ಹೋದವೇಳೆ ಚಿತ್ತೂರ್ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಮೆಂಟ್ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಅಖಾಡಕ್ಕಿಳಿದಿದ್ದಾರೆ.

    ಕಬಡ್ಡಿ..ಕಬಡ್ಡಿ ಎನ್ನುತ್ತಾ ಕೆಲಕಾಲ ಆಟವಾಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕವಾಗಿ ಸುದ್ದಿಯಾಗುವ ನಟಿ ಮಣಿ ಇದೀಗ ಕಬಡ್ಡಿ ಆಟವನ್ನು ಆಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.