Tag: ಪ್ರಚಾರ

  • ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರ: ಸಂಸದೆ ಸುಮಲತಾ ಹೇಳಿದ್ದೇನು?

    ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರ: ಸಂಸದೆ ಸುಮಲತಾ ಹೇಳಿದ್ದೇನು?

    ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ನಟ ದರ್ಶನ್ ‍(Darshan) ಪ್ರಚಾರಕ್ಕೆ ಆಗಮಿಸಿದ್ದರು. ಈವೆಗೂ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತಾ ಬಂದಿದ್ದು ದರ್ಶನ್, ಈಗ ಸುಮಲತಾ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದರೂ, ಅಮ್ಮನ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ದರ್ಶನ್ ಪ್ರಚಾರ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸುಮಲತಾ (Sumalatha Ambarish) ಅವರೇ ದರ್ಶನ್ ಅವರನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಕಳುಹಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತಂತೆ ಉಡುಪಿಯಲ್ಲಿ ಸುಮಲತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಉಡುಪಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಭಾಗಿಯಾದ ಸುಮಲತಾ, ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರದ ವಿಚಾರವಾಗಿ ಮಾತನಾಡಿದ್ದು, ಸುಮಲತಾ ಅವರೇ  ದರ್ಶನ್ ಅವರನ್ನ ಪ್ರಚಾರಕ್ಕೆ ಕಳಿಸಿದ್ದಾರೆ ಎಂಬ ಊಹಾಪೋಹದ ಈ ವಾದದಲ್ಲಿ ಸೆನ್ಸ್ ಲಾಜಿಕ್ ಎರಡು ಇಲ್ಲ. ದರ್ಶನ್ ರನ್ನ ಬೇರೆ ಪಕ್ಷದ ಪ್ರಚಾರಕ್ಕೆ ಹೋಗು ಅಥವಾ ಹೋಗಬೇಡ ಎಂದು ಹೇಳಲ್ಲ. ನಾನು ನಿಂತಿದ್ದರೆ ದರ್ಶನ್ ನನ್ನ ಪರ ಪ್ರಚಾರ ಮಾಡುತ್ತಿದ್ದರು. ರಾಜಕೀಯವಾಗಿ ಬೇರೆಯವರ ಬಗ್ಗೆ ನಾವು ಪ್ರತಿದಿನ ಚರ್ಚೆ ಮಾಡಲ್ಲ. ಪ್ರತಿದಿನ ಫೋನು ಮಾಡಿ ಎಲ್ಲಿಗೆ ಹೋಗ್ತಿದ್ದೀಯ ಯಾರ ಪರ ಪ್ರಚಾರ ಮಾಡ್ತಿದ್ದೀಯಾ ಅಂತ ಕೇಳಲ್ಲ. ಪ್ರಚಾರ ಯಾರಿಗೆ ಮಾಡಬೇಕು ಅನ್ನೋದು ಅವರ ಇಚ್ಛೆ ಎಂದೆಲ್ಲ ಮಾತನಾಡಿದ್ದಾರೆ.

    sumalatha ambarish

    ಮುಂದುವರೆದು ಮಾತನಾಡಿದ ಸುಮಲತಾ, ಹೋಗು ಹೋಗಬೇಡ ಅನ್ನಲು ನಾನು ಯಾರು? ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯದಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದರು. ಪಕ್ಷ ಮುಖ್ಯ ಅಲ್ಲ ನಿಂತಿರುವ ವ್ಯಕ್ತಿ ಮುಖ್ಯ ಎಂದು ದರ್ಶನ್ ಹೇಳುತ್ತಾ ಬಂದಿದ್ದಾರೆ. ವ್ಯಕ್ತಿ ನನಗೆ ಇಷ್ಟವಾದರೆ ಹೋಗ್ತೀನಿ ಅಂತ ಹೇಳಿದ್ದಾರೆ. ಆ ರೀತಿ ದರ್ಶನ್ ನನ್ನ ಕಳಿಸುವುದಾದರೆ ನಾನ್ಯಾಕೆ ಬಿಜೆಪಿ ಸೇರಬೇಕು. ನಾನು ಪಕ್ಷೇತರ ನೇರವಾಗಿ ಸಪೋರ್ಟ್ ಮಾಡಬಹುದಲ್ವಾ?. ನನಗೆ ಯಾರೂ ಏನನ್ನೂ ಫೋರ್ಸ್ ಮಾಡೋಕೆ ಆಗಲ್ಲ. ಈ ಪಕ್ಷಕ್ಕೆ ಸೇರು ಆ ಪಕ್ಷ ಬೇಡ ಅಂತ ಒತ್ತಡ ಮಾಡೋಕೆ ಆಗ್ತಿರ್ಲಿಲ್ಲ. ನಾನು ನನ್ನ ಇಚ್ಛೆಯಿಂದ ಬಿಜೆಪಿಗೆ ಬಂದಿದ್ದೇನೆ. ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡು ಅಂತ ಹೇಳುವ ಪ್ರಶ್ನೆ ಬರಲ್ಲ ಎಂದಿದ್ದಾರೆ.

     

    ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಭಾಗವಹಿಸದೆ ಇರುವ ವಿಚಾರ ಕುರಿತು ಮಾತನಾಡಿದ ಅವರು, ನಾನು ಯಾವ ರೀತಿ ಪ್ರಚಾರ ಮಾಡಬೇಕು ಎಂದು ಪಕ್ಷ ಡಿಸೈಡ್ ಮಾಡುತ್ತದೆ.  ನಾನು ನಾನಾಗಿಯೇ ಎಲ್ಲಿಗೂ ಹೋಗಿಲ್ಲ. ಪಕ್ಷ ಹೇಳಿದರೆ ಕುಮಾರಸ್ವಾಮಿ ಪರವಾಗಿ ಖಂಡಿತ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ ಸುಮಲತಾ.

  • ಪಕ್ಷದ ಪರವಲ್ಲ, ವ್ಯಕ್ತಿ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ನಟ ದರ್ಶನ್

    ಪಕ್ಷದ ಪರವಲ್ಲ, ವ್ಯಕ್ತಿ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ನಟ ದರ್ಶನ್

    ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ (Campaign) ಮಾಡುವುದಿಲ್ಲ. ವ್ಯಕ್ತಿಯ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಅವರಿಗೆ ಮತ ಹಾಕಿ ಎಂದು ನಟ ದರ್ಶನ್ (Darshan) ಹೇಳಿದರು. ಬೆಳಗ್ಗೆಯಿಂದ ಮಂಡ್ಯ ಕ್ಷೇತ್ರದಲ್ಲಿ ರೋಡ್ ಶೋ ಮತ್ತು ಮತಯಾಚನೆ ಮಾಡುತ್ತಿದ್ದಾರೆ ದರ್ಶನ್.

    ಹಲಗೂರಿನಲ್ಲಿ ಮಾತನಾಡಿದ ದರ್ಶನ್, ನಾನು ಯಾವುದೇ ಪಕ್ಷದ ಪರವಾಗಿ ಬರಲ್ಲ. ನಾನು ಬರೋದು ವ್ಯಕ್ತಿ ಪರವಾಗಿ. ಐದು ವರ್ಷದ ಹಿಂದೆ ನರೇಂದ್ರಸ್ವಾಮಿ ಸಹಾಯ ಮರೆಯಲ್ಲ. ಮೊದಲೇ ಶಾಸಕ ಉದಯ್ ಹೇಳಿದ್ರು ಸುಮಮ್ಮನಿಗೆ ಟಿಕೆಟ್ ಆಗಲಿಲ್ಲ. ಆದ್ರೆ ನಮಗೆ ಮಾಡಿ ಅಂದಿದ್ರು. ಮೊದಲು ಅವರು ಕೇಳಿದ ಕಾರಣ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್ ಚಂದ್ರು ಅವರಿಗೆ ಎಲ್ಲರೂ ಮತ ಹಾಕಿ ಎಂದಿದ್ದಾರೆ.

     

    ಹಲಗೂರು ಗ್ರಾಮಕ್ಕೆ ದರ್ಶನ್ ಬರುತ್ತಿದ್ದಂತೆಯೇ ಅಭಿಮಾನಿಗಳಿಂದ ಜೈಕಾರ ಕೇಳಿ ಬಂತು. ಡಿ ಬಾಸ್ ಡಿ ಬಾಸ್ ಘೋಷಣೆ ಮೊಳಗಿಸಿ ಸಂಭ್ರಮಿಸಿದ್ದಾರೆ ಅಭಿಮಾನಿಗಳು. ಬೃಹತ್ ಗುಲಾಬಿ ಹೂವಿನ ಹಾರ ಸಮರ್ಪಣೆ ಕೂಡ ಮಾಡಿದ್ದಾರೆ. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ನೆಚ್ಚಿನ ನಟನಿಗೆ ಸ್ವಾಗತ ನೀಡಿದ್ದಾರೆ.

  • ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರಕ್ಕೆ ಪವರ್ ಸ್ಟಾರ್ ಎಂಟ್ರಿ

    ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರಕ್ಕೆ ಪವರ್ ಸ್ಟಾರ್ ಎಂಟ್ರಿ

    ಲೋಕಸಭಾ (Lok Sabha) ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸ್ಟಾರ್ ಪ್ರಚಾರಕರ್ತರು (Campaign) ತಮ್ಮ ಪಕ್ಷ ಮತ್ತು ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ನಡುವೆ ತೆಲುಗಿನ ಖ್ಯಾತ ನಟ, ರಾಜಕಾರಣಿ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಬಳ್ಳಾರಿಗೆ ಬರಲಿದ್ದಾರೆ. ಗಡಿನಾಡಿನಲ್ಲಿ ಅವರು ಪವರ್ ಪ್ರಚಾರ ಮಾಡಲಿದ್ದಾರೆ.

    ಆಂಧ್ರದ ಗಡಿ ಭಾಗದ ಕ್ಷೇತ್ರಗಳ ಮತದಾರರನ್ನು ಸೆಳೆಯುವುದಕ್ಕಾಗಿ ಬಿಜೆಪಿ ಪಕ್ಷ ಪವನ್ ಕಲ್ಯಾಣ್ ಅವರನ್ನು ಬಳಸಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರ ಪವನ್ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 17ರಂದು ಅವರು ಕರ್ನಾಟಕದ ಗಡಿ ಭಾಗದ ಜನರ ಮುಂದೆ ಇರಲಿದ್ದಾರೆ.

     

    ಏಪ್ರಿಲ್ 17ರಂದು ರಾಯಚೂರು, ಬಳ್ಳಾರಿ(Bellary), ಚಿಕ್ಕಬಳ್ಳಾಪುರ ಬಳಿಕೆ ಬೆಂಗಳೂರಿನಲ್ಲಿ ರೋಡ್ ಷೋ ಆಯೋಜನೆ ಆಗಿದ್ದು, ಬಳ್ಳಾರಿಯ ರಾಯಲ್ ವೃತ್ತದಿಂದ ಎಪಿಎಂಸಿ ವೃತ್ತದವರೆಗೂ ಶ್ರೀರಾಮುಲು ಪರ ಬಳ್ಳಾರಿಯಲ್ಲಿ ಪವನ್ ಮತಯಾಚನೆ ಮಾಡಲಿದ್ದಾರೆ.

  • ನಾನೂ ಕೂಡ ಶಿವಣ್ಣನ ಅಭಿಮಾನಿ : ಉಲ್ಟಾ ಹೊಡೆದ ಸಂಸದ ಸಿಂಹ

    ನಾನೂ ಕೂಡ ಶಿವಣ್ಣನ ಅಭಿಮಾನಿ : ಉಲ್ಟಾ ಹೊಡೆದ ಸಂಸದ ಸಿಂಹ

    ಟ ಶಿವರಾಜ್ ಕುಮಾರ್ ವಿರುದ್ಧ ನಿನ್ನೆಯಷ್ಟೇ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಿದರು ಎನ್ನುವ ಕಾರಣಕ್ಕಾಗಿ ಪುನೀತ್ ರಾಜ್ ಕುಮಾರ್ ಹೆಸರನ್ನೂ ಅವರು ಎಳೆತಂದಿದ್ದರು. ಈ ನಡೆ ಡಾ.ರಾಜ್ ಕುಟುಂಬದ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಸ್ವತಃ ಶಿವರಾಜ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದರು. ಇದೀಗ ಪ್ರತಾಪ್ ಸಿಂಹ ಮಾತು ಬದಲಾಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಹ, ‘ನನಗೆ ಡಾ.ರಾಜ್ ಕುಮಾರ್ ಕುಟುಂಬದ ಬಗ್ಗೆ ಗೌರವವಿದೆ. ನಾನೂ ಕೂಡ ಶಿವರಾಜ್ ಕುಮಾರ್ ಅಭಿಮಾನಿ. ಅವರ ಕುಟುಂಬವನ್ನು ನಾವು ರಾಜಕೀಯ ಹೊರತಾಗಿ ನೋಡುತ್ತೇವೆ. ಶಿವಣ್ಣ ಕೂಡ ಅದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಧನ್ಯವಾದಗಳನ್ನು ಹೇಳುತ್ತೇನೆ’ ಎಂದಿದ್ದಾರೆ.

    ಇದೇ ವಿಷಯವಾಗಿ ಶಿವರಾಜ್ ಕುಮಾರ್ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದರು. ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ್ದರು. ‘ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ನನ್ನ ಆತ್ಮೀಯರು. ಹಾಗೆ ಹೇಳಬಾರದಿತ್ತು. ಅಲ್ಲದೇ, ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದರು. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ

    ವರುಣಾ ಕ್ಷೇತ್ರದಲ್ಲಿ ನಿನ್ನೆ ಶಿವಣ್ಣ ಪ್ರಚಾರದಲ್ಲಿ ತೊಡಗಿದ್ದರ ಕುರಿತು ಪ್ರತಾಪ್ ಸಿಂಹ ಟ್ವೀಟ್ ಮಾಡಿ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದಿದ್ದರು.

    ಕಳೆದ ಮೂರು ದಿನಗಳಿಂದ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ, ನಿಶ್ವಿಕಾ ನಾಯ್ಡು, ದುನಿಯಾ ವಿಜಯ್ ಸೇರಿದಂತೆ ಹಲವರು ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

    ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.

  • ನಾಳೆ ಗದಗ ಜಿಲ್ಲೆಯಲ್ಲಿ ಕಿಚ್ಚ ಸುದೀಪ್ ಪ್ರಚಾರ

    ನಾಳೆ ಗದಗ ಜಿಲ್ಲೆಯಲ್ಲಿ ಕಿಚ್ಚ ಸುದೀಪ್ ಪ್ರಚಾರ

    ಳೆದ ಎರಡು ದಿನಗಳಿಂದ ಬಿಟ್ಟೂ ಬಿಡದೇ ಬಿಜೆಪಿ (BJP) ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ ಕಿಚ್ಚ (Kiccha) ಸುದೀಪ್. ಇಂದು ಹಾವೇರಿ ಜಿಲ್ಲೆಯ ಹಿರೇಕೆರೂರು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದರು. ಮೊನ್ನೆ ಚಿತ್ರದುರ್ಗ, ದಾವಣೆಗೆರೆ ಸೇರಿದಂತೆ ಐದು ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿಯಾಗಿದ್ದರು. ನಾಳೆ ಗದಗ (Gadag) ಜಿಲ್ಲೆಯ ಹಲವು ಕ್ಷೇತ್ರಗಳ ಪ್ರಚಾರದಲ್ಲಿ ತೊಡಗಲಿದ್ದಾರಂತೆ.

    ನೆಚ್ಚಿನ ನಟನನ್ನು ಬರಮಾಡಿಕೊಳ್ಳಲು ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಕಿಚ್ಚನ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಗದಗ ತುಂಬಾ ಕಿಚ್ಚನ ಕಟೌಟ್ ಮತ್ತು ಬ್ಯಾನರ್ಸ್ ರಾರಾಜಿಸುತ್ತಿವೆ. ಗದಗ ಬಿಜೆಪಿ ಕ್ಷೇತ್ರದ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವು ಅಭ್ಯರ್ಥಿಗಳ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಮೇಲಿನ ಪ್ರೀತಿಯಿಂದಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿರುವ ಸುದೀಪ್ (Sudeep), ಇನ್ನೂ ಐದಾರು ದಿನಗಳ ಕಾಲ ಇದೇ ಕೆಲಸದಲ್ಲಿ ನಿರತರಾಗಲಿದ್ದಾರೆ. ಅವರ ಜೊತೆ ನಿರ್ಮಾಪಕ ಜಾಕ್ ಮಂಜು ಪ್ರಯಾಣ ಬೆಳೆಸಿದ್ದಾರೆ. ಸುದೀಪ್ ಹೋದ ಕಡೆಗೆಲ್ಲ ಸಾವಿರ ಸಾವಿರ ಅಭಿಮಾನಿಗಳು ಸೇರುತ್ತಿದ್ದಾರೆ.

  • ಕಿಚ್ಚನಿಗೆ ಬೆದರಿಕೆ ಪತ್ರ: ಸುದೀಪ್ ನೀಡಿದ ಅಚ್ಚರಿಕೆ ಪ್ರತಿಕ್ರಿಯೆ

    ಕಿಚ್ಚನಿಗೆ ಬೆದರಿಕೆ ಪತ್ರ: ಸುದೀಪ್ ನೀಡಿದ ಅಚ್ಚರಿಕೆ ಪ್ರತಿಕ್ರಿಯೆ

    ಟ ಸುದೀಪ್ (Sudeep) ಅವರಿಗೆ ಬೆದರಿಕೆ ಪತ್ರ ಬಂದು ಒಂದು ತಿಂಗಳು ಕಳೆದಿದೆ. ಅವರು ದೂರು ದಾಖಲಿಸಿ 25 ದಿನಕ್ಕೂ ಹೆಚ್ಚು ದಿನಗಳು ಉರುಳಿವೆ. ಪತ್ರ ಬರೆದವರ ಬೆನ್ನತ್ತಿರುವ ಸಿಸಿಬಿಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೂ, ತಮ್ಮ ಪ್ರಯತ್ನವನ್ನು ಅವರು ನಿಲ್ಲಿಸಿಲ್ಲ. ಈ ಕುರಿತು ಇದೇ ಮೊದಲ ಬಾರಿಗೆ ಕಿಚ್ಚು ಸುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಚುನಾವಣಾ ಪ್ರಚಾರಕ್ಕೆ ಹೊರಡುತ್ತಿರುವ ಸಂದರ್ಭದಲ್ಲಿ ಬೆದರಿಕೆ ಪತ್ರದ ಬಗ್ಗೆ ಮಾತನಾಡಿದ್ದಾರೆ.

    ಬೆದರಿಕೆಯ ಪತ್ರದ (Threat letter) ಬಗ್ಗೆ ಮಾತನಾಡಿದ ಸುದೀಪ್, ‘ನಂಗೆ ತುಂಬಾ ಲವ್ ಲೇಟರ್ ಗಳು ಬರ್ತಾ ಇರ್ತಾವೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳೋಕೆ ಆಗಲ್ಲ’ ಎಂದು ಚುಟುಕಾಗಿ ಉತ್ತರಿಸಿದ್ದಾರೆ. ಈ ಮೂಲಕ ಪತ್ರ ಬರೆದವರ ಬಗ್ಗೆ ಕೇರ್ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ‘ಆ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ನನ್ನ ಪಾಡಿಗೆ ನಾನು ಇವತ್ತಿನಿಂದ ಪ್ರಚಾರಕ್ಕೆ ಹೋಗ್ತಾ ಇದೀನಿ’ ಎಂದಿದ್ದಾರೆ.

    ಇಂದಿನಿಂದ ಸುದೀಪ್ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಮತಯಾಚನೆ (Campaign) ಮಾಡುತ್ತಿದ್ದಾರೆ.  ಬೆಂಗಳೂರಿನಿಂದ ಹೊರಡುವ ಇವರ ಪಯಣ ಮೊದಲು ಮೊಳಕಾಲ್ಮೂರು (Molakalmuru) ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದೆ. ಬೆಳಗ್ಗೆ 10.15ಕ್ಕೆ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ.

    ಜಗಳೂರು (Jagaluru) ರೋಡ್ ಶೋ ಮುಗಿಸಿಕೊಂಡು ಊಟದ ನಂತರ ಸುದೀಪ್, ಮಾಯಕೊಂಡ (Mayakonda) ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ ಪರವಾಗಿ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ, ಸರಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.

    ಮಾಯಕೊಂಡದಿಂದ ಸುದೀಪ್ ದಾವಣಗೆರೆಗೆ (Davangere) ತೆರಳಲಿದ್ದು, ದಾವಣಗೆರೆಯ ಸೌತ್ ಮತ್ತು ನಾರ್ತ್ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರವಾಗಿ ಸಂಜೆ 4.20ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ನೇರವಾಗಿ ಸಂಡೂರಿಗೆ ತೆರಳಿ ಸಂಡೂರು (Sandur) ಬಿಜೆಪಿ ಅಭ್ಯರ್ಥಿ ಶಿಲ್ಪಾ ನಾಗೇಂದ್ರ ಪರವಾಗಿ ಸಂಜೆ 6.10ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.

  • ನಾಳೆ ಸುದೀಪ್ ಎಲ್ಲೆಲ್ಲಿ ಸಿಗ್ತಾರೆ? ಪ್ರಚಾರದ ರೂಟ್ ಮ್ಯಾಪ್ ರಿಲೀಸ್

    ನಾಳೆ ಸುದೀಪ್ ಎಲ್ಲೆಲ್ಲಿ ಸಿಗ್ತಾರೆ? ಪ್ರಚಾರದ ರೂಟ್ ಮ್ಯಾಪ್ ರಿಲೀಸ್

    ಳೆದ ವಾರವಷ್ಟೇ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕಾಗಿ ಶಿಗ್ಗಾಂವಿಗೆ ತೆರಳಿದ್ದ ನಟ ಕಿಚ್ಚ ಸುದೀಪ್ (Sudeep) ನಾಳೆ ಹಲವು ಊರುಗಳಲ್ಲಿ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಬೊಮ್ಮಾಯಿ ಮಾಮ ಸೂಚಿಸಿದ ಊರುಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದಿದ್ದ ಕಿಚ್ಚ ಕೊಟ್ಟ ಮಾತಿನಂತೆ ನಾಳೆಯಿಂದ ಭರ್ಜರಿ ಪ್ರಚಾರ (campaign) ಮಾಡಲಿದ್ದಾರೆ. ಕಿಚ್ಚನಿಗಾಗಿಯೇ ಹೆಲಿಕಾಪ್ಟರ್ ಸಿದ್ಧಗೊಂಡಿದೆ.

    ನಾಳೆ ಸುದೀಪ್ ಯಾವೆಲ್ಲ ಊರಿಗೆ ಹೋಗಬೇಕು ಮತ್ತು ಯಾರ ಪರವಾಗಿ ಪ್ರಚಾರ ಮಾಡಬೇಕು ಎನ್ನುವುದರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬೆಂಗಳೂರಿನಿಂದ ಹೊರಡುವ ಕಿಚ್ಚ, ನಾಳೆಯೇ ಐದು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಿಂದ ಹೊರಡುವ ಇವರ ಪಯಣ ಮೊದಲು ಮೊಳಕಾಲ್ಮೂರು ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದೆ. ಬೆಳಗ್ಗೆ 10.15ಕ್ಕೆ ಮೊಳಕಾಲ್ಮೂರು (Molakalmuru) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ.

    ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು (Jagaluru) ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ. ಇದನ್ನೂ ಓದಿ:ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಜಗಳೂರು ರೋಡ್ ಶೋ ಮುಗಿಸಿಕೊಂಡು ಊಟದ ನಂತರ ಸುದೀಪ್, ಮಾಯಕೊಂಡ (Mayakonda) ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ ಪರವಾಗಿ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ, ಸರಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.

    ಮಾಯಕೊಂಡದಿಂದ ಸುದೀಪ್ ದಾವಣಗೆರೆಗೆ (Davangere) ತೆರಳಲಿದ್ದು, ದಾವಣಗೆರೆಯ ಸೌತ್ ಮತ್ತು ನಾರ್ತ್ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರವಾಗಿ ಸಂಜೆ 4.20ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ನೇರವಾಗಿ ಸಂಡೂರಿಗೆ ತೆರಳಿ ಸಂಡೂರು (Sandur) ಬಿಜೆಪಿ ಅಭ್ಯರ್ಥಿ ಶಿಲ್ಪಾ ನಾಗೇಂದ್ರ ಪರವಾಗಿ ಸಂಜೆ 6.10ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.

  • ನಾಳೆಯಿಂದ ಸಿಎಂ ಬೊಮ್ಮಾಯಿ ಪರ ಅಖಾಡಕ್ಕೆ ಇಳಿವ ಸುದೀಪ್

    ನಾಳೆಯಿಂದ ಸಿಎಂ ಬೊಮ್ಮಾಯಿ ಪರ ಅಖಾಡಕ್ಕೆ ಇಳಿವ ಸುದೀಪ್

    ಕಿಚ್ಚ ಸುದೀಪ್ (Kiccha Sudeep) ಹಲವು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಪರವಾಗಿ ಮತ್ತು ಅವರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಬೊಮ್ಮಾಯಿ ಮಾಮಾ ತಮಗೆ ಈ ಹಿಂದೆ ಮಾಡಿದ ಸಹಾಯಕ್ಕಾಗಿ ಅವರ ಪರ ಅಖಾಡಕ್ಕೆ ಇಳಿಯುತ್ತಿರುವುದಾಗಿ ಸ್ಪಷ್ಟ ಪಡಿಸಿದ್ದರು. ತಾವು ಮಾತು ಕೊಟ್ಟಂತೆ ನಾಳೆಯಿಂದ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲಿದ್ದಾರಂತೆ.

    ನಾಳೆ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ (Shiggavi) ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಕಾರ್ಯದಲ್ಲೂ ಸುದೀಪ್ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಇಂದಿನಿಂದ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯಬೇಕಿತ್ತು. ಕಾರ್ಯಕ್ರಮ ಸರಿಯಾದ ರೀತಿಯಲ್ಲಿ ನಿಗದಿ ಆಗದೇ ಇರುವ ಕಾರಣದಿಂದಾಗಿ ನಾಳೆಯಿಂದ ಅವರು ಶಿಗ್ಗಾಂವಿಯಿಂದಲೇ ಪ್ರಚಾರದ ಕಾರ್ಯವನ್ನು ಶುರು ಮಾಡಲಿದ್ದಾರಂತೆ. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಸದ್ಯ ಬೊಮ್ಮಾಯಿ ಪರವಾಗಿ ಪ್ರಚಾರಕ್ಕೆ ಹೋಗುವ ಕಿಚ್ಚ ಮುಂದಿನ ದಿನಗಳಲ್ಲಿ ಯಾರೆಲ್ಲ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಬೊಮ್ಮಾಯಿ ಸೂಚಿಸುವ ಅಭ್ಯರ್ಥಿಗಳ ಪರವಾಗಿ ಕಿಚ್ಚ ಪ್ರಚಾರ ಮಾಡಲಿದ್ದಾರೆ. ಅದರಲ್ಲೂ ಸುದೀಪ್ ಅವರ ಆತ್ಮೀಯರ ಪರವಾಗಿಯೇ ಅವರು ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಶಿಗ್ಗಾಂವಿಗೆ ಹೋಗುವುದಕ್ಕಾಗಿ ನಾಳೆ ಹೆಲಿಕಾಪ್ಟರ್ ಸಿದ್ಧವಾಗಿದೆ ಎನ್ನುವ ಮಾಹಿತಿ ಇದ್ದು, ಬೆಂಗಳೂರಿನಿಂದ ಅವರು ನೇರವಾಗಿ ಶಿಗ್ಗಾಂವಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ರೋಡ್ ಶೋನಲ್ಲಿ ಕಿಚ್ಚ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ.

  • ತುಮಕೂರು ನಗರದ ಮುಂದಿನ ಶಾಸಕ ನಾನೇ: ಪ್ರಚಾರ ಆರಂಭಿಸಿದ ಆಕಾಂಕ್ಷಿ

    ತುಮಕೂರು ನಗರದ ಮುಂದಿನ ಶಾಸಕ ನಾನೇ: ಪ್ರಚಾರ ಆರಂಭಿಸಿದ ಆಕಾಂಕ್ಷಿ

    ತುಮಕೂರು: ಮುಂದಿನ ಶಾಸಕ ನಾನೇ ಎಂದು ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು (Bommanahalli Babu) ಸ್ವಯಂ ಘೋಷಣೆ ಮಾಡಿಕೊಂಡು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ.

    ಅಟ್ಟಿಕಾ ಬಾಬು ಯಾವುದೇ ಪಕ್ಷದಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. ಆದರೂ ತುಮಕೂರು (Tumakuru) ನಗರದ ಕಾಂಗ್ರೆಸ್ (Congress) ಟಿಕೆಟ್‌ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸುವ ಅಟ್ಟಿಕಾ ಬಾಬು ಮುಂದಿನ ಶಾಸಕ ನಾನೇ ಎಂದು ಪ್ರಚಾರ ಶುರುಮಾಡಿದ್ದಾರೆ.

    ಅಟ್ಟಿಕಾ ಬಾಬು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೂ ಹಿಂದೂ ದೇವಾಲಯಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತ ಪ್ರಚಾರ ಶುರು ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಕೋಲಾರಗಿಂತ ವರುಣಾ ಸೇಫೆಸ್ಟ್ ಕ್ಷೇತ್ರ: ಕೆ.ಎನ್.ರಾಜಣ್ಣ

    ತುಮಕೂರು ನಗರದ ದೇವರಾಯಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತುರುಸಿನ ಪ್ರಚಾರ ಶುರುಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರು ಸೇರಿದಂತೆ ತಮ್ಮ ಸಮುದಾಯದವರೇ ಆದ ಜಮಿರ್ ಅಹಮದ್ ಖಾನ್ ಅವರ ಬೆಂಬಲ ನನಗಿದೆ. ಹಾಗಾಗಿ ಕಾಂಗ್ರೆಸ್ ಟಿಕೆಟ್ ನನಗೆ ಸಿಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಟ್ಟಿಕಾ‌ ಬಾಬು ಮುಂದಿನ ಶಾಸಕ ನಾನೇ‌ ಎಂದು ಸ್ವಯಂಘೋಷಣೆ ಮಾಡಿಕೊಂಡು ಬಿರುಸಿನ ಪ್ರಚಾರ ಆರಂಭಿಸಿ ಅಚ್ಚರಿ ಮೂಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್

    ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್

    ಬೆಂಗಳೂರು: 2023ರ ಚುನಾವಣೆ (Election) ಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸಿದ್ಧರಾಗುತ್ತಿದ್ದಾರೆ. ಒಂದು ಕಡೆ ಕ್ಷೇತ್ರದ ಸಿದ್ಧತೆ, ಮತ್ತೊಂದು ಕಡೆ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ಶುರು ಮಾಡಿದ್ದಾರೆ.

    ಇವತ್ತು ಕ್ಷೇತ್ರದ ಅಖಾಡ ತಿಳಿಯಲು ಕೋಲಾರಕ್ಕೆ ಪ್ರಯಾಣ ಮಾಡಿದ್ದಾರೆ. ವಿಶೇಷ ಅಂದರೆ ಕಾರ್ ನಲ್ಲಿ ತೆರಳದೆ ವಿಶೇಷ ಬಸ್ (Bus) ನಲ್ಲಿ ಸಿದ್ದರಾಮಯ್ಯ ಆ್ಯಂಡ್ ಟೀಂ ಕೋಲಾರಕ್ಕೆ ತೆರಳಿದೆ. ಈ ವಿಶೇಷ ಬಸ್ ಸಿದ್ದರಾಮಯ್ಯಗಾಗಿಯೇ ಸಿದ್ಧವಾಗಿದೆ. ಹೌದು ಈ ಬಸನ್ನ 2023ರ ಚುನಾವಣೆ ವೇಳೆ ಸಿದ್ದರಾಮಯ್ಯ ಪ್ರಚಾರ ಮಾಡಲು ತೆರಳಲು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಇದೇ ಬಸ್ ನಲ್ಲಿ ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲಿ ಸಂಚಾರ ಮಾಡ್ತಾರೆ.

    ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಹೈಫೈ ವ್ಯವಸ್ಥೆ ಇರೋ ಈ ಬಸ್ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಬಸ್ ನ ವಿಶೇಷತೆಗಳೇನು? ಈ ಬಸ್ ನಲ್ಲಿ ಏನೆಲ್ಲ ಇದೆ ಅಂತ ನಾವು ನಿಮಗೆ ಹೇಳ್ತೀವಿ ಬನ್ನಿ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬಗ್ಗೆ ಮಾತಾಡಿದ್ರೆ ನುಗ್ಗಿ ಹೊಡಿತೀವಿ- ಯತ್ನಾಳ್‌ಗೆ ಬೆಂಬಲಿಗರು ಎಚ್ಚರಿಕೆ

    ಸಿದ್ದರಾಮಯ್ಯ ಬಸ್ ನ ವಿಶೇಷತೆಗಳು!: ಈ ವಿಶೇಷ ಬಸ್ ಡ್ರೈವರ್ ಹೊರತುಪಡಿಸಿ 6 ಜನ ಕೂತು ಪಯಣ ಮಾಡಲು ವಿಶೇಷ ಸೀಟ್ ವ್ಯವಸ್ಥೆ ಇದೆ. ಎಲ್ಲಾ ಫುಶಿಂಗ್ ಸೀಟುಗಳೇ ಆಗಿವೆ. ಇಡೀ ಬಸ್ ಗೆ ಸಂಪೂರ್ಣ ಎಸಿಯಿಂದ ಮಾಡಲ್ಪಟ್ಟಿದೆ. ಇಡೀ ಬಸ್‍ಗೆ ವಿಶೇ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

    ಬಸ್ ವಿಂಡೋಗಳನ್ನ ಗಾಜಿನಲ್ಲಿ ಮಾಡಲಾಗಿದ್ದು, ಬಸ್‍ನಲ್ಲಿ ಕುಳಿತು ಜನರನ್ನ ನೋಡುವ ವ್ಯವಸ್ಥೆ ಇದೆ. ಬಸ್ಸಿನ ಒಳಗೆ ನಿಂತು ಭಾಷಣ ಮಾಡಲು ವಿಶೇಷ ತಂತ್ರಜ್ಞಾನದ ಲಿಫ್ಟ್ ಪೋಡಿಯಂ ವ್ಯವಸ್ಥೆ ಮಾಡಲಾಗಿದೆ. ಪ್ರಚಾರದ ವೇಳೆ ಆಯಾಸವಾದ್ರೆ ವಿಶ್ರಾಂತಿ ತೆಗೆದುಕೊಳ್ಳಲು ಬೆಡ್ ವ್ಯವಸ್ಥೆ. ಪ್ರತ್ಯೇಕ ಬಾತ್ ರೂಂ ವ್ಯವಸ್ಥೆ ಮಾಡಲಾಗಿದೆ.

    ಪ್ರಚಾರ ಸಮಯದಲ್ಲಿ ಟಿವಿ ವೀಕ್ಷಣೆಗೆ 3 LED TV ಗಳ ಅಳವಡಿಕೆ ಮಾಡಲಾಗಿದೆ. ಹ್ಯಾಂಡ್ ವಾಶ್ ಗೆ ಸಿಂಕ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದೆ. ಇನ್ನು ಇಡೀ ಬಸ್ ಗೆ ವೈಫೈ ಕನೆಕ್ಷನ್ ವ್ಯವಸ್ಥೆ ಇದೆ. ನೀರು, ತಿಂಡಿ ಇಡಲು ವಿಶೇಷವಾಗಿ ಚಿಕ್ಕ ಫ್ರಿಜ್ ವ್ಯವಸ್ಥೆ ಕೂಡಾ ಈ ಬಸ್ ನಲ್ಲಿ ಇದೆ. ಸಿದ್ದರಾಮಯ್ಯರ ಆಪ್ತರು ಸಿದ್ದರಾಮಯ್ಯಗಾಗಿಯೇ ಈ ವಿಶೇಷ ಬಸ್ ಸಿದ್ದ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]