Tag: ಪ್ರಗತಿ ಶೆಟ್ಟಿ

  • ರಿಷಬ್‌ಗೆ ಆಕ್ಸಿಡೆಂಟ್‌ ಆಗಿತ್ತು, ಜ್ವರ ಇದ್ರೂ ಸೆಟ್‌ಗೆ ಗಾಬರಿಯಿಂದ ಬಂದಿದ್ದೆ: ಪ್ರಗತಿ ಶೆಟ್ಟಿ

    ರಿಷಬ್‌ಗೆ ಆಕ್ಸಿಡೆಂಟ್‌ ಆಗಿತ್ತು, ಜ್ವರ ಇದ್ರೂ ಸೆಟ್‌ಗೆ ಗಾಬರಿಯಿಂದ ಬಂದಿದ್ದೆ: ಪ್ರಗತಿ ಶೆಟ್ಟಿ

    – ಕಾಂತಾರ ಚಾಪ್ಟರ್‌ 1 ಶೂಟಿಂಗ್‌ ವೇಳೆ ಆದ ಅವಘಡಗಳ ಬಗ್ಗೆ ರಿಷಬ್‌ ಪತ್ನಿ ‘ಪಬ್ಲಿಕ್‌ ಟಿವಿ’ ಜೊತೆ ಮಾತು

    ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 (Kantara Chapter 1) ಬಾಕ್ಸಾಫೀಸ್‌ ಹಿಟ್‌ ಕಂಡಿದೆ. ಸಿನಿಮಾ ಯಶಸ್ಸಿನ ಹಿಂದೆ ಅಷ್ಟೇ ಕಡುಪರಿಶ್ರಮ ಇದೆ. ತೆರೆ ಹಿಂದಿನ ಚಿತ್ರೀಕರಣದಲ್ಲಿ ಎದುರಾದ ಅವಘಡಗಳು, ಎದುರಿಸಿದ ಸವಾಲುಗಳ ಬಗ್ಗೆ ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ಮಾತನಾಡಿದ್ದಾರೆ.

    ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ ಪ್ರಗತಿ ಶೆಟ್ಟಿ ಅವರು, ಕಾಂತಾರ ಶೂಟಿಂಗ್‌ ವೇಳೆ ಎಷ್ಟೋ ಆತಂಕದ ರಾತ್ರಿಗಳನ್ನು ಕಳೆದಿದ್ದೇವೆ. ಒಂದು ದಿನ ಚಿಕ್ಕದಾಗಿ ಆಕ್ಸಿಡೆಂಟ್‌ ಆಗಿತ್ತು. ಆ ದಿನ ಜ್ವರದ ಕಾರಣಕ್ಕೆ ಶೂಟಿಂಗ್‌ಗೆ ಹೋಗಿರಲಿಲ್ಲ. ಆತಂಕ ಪಡುತ್ತೇನೆ ಅಂತ ನನಗೆ ರಿಷಬ್‌ ಏನನ್ನೂ ಹೇಳಲ್ಲ. ಕಾಸ್ಟ್ಯೂಮ್ಸ್‌ ವಿಚಾರಕ್ಕೆ ಅಸಿಸ್ಟೆಂಟ್‌ಗೆ ಕರೆ ಮಾಡಿದಾಗ ವಿಚಾರ ಗೊತ್ತಾಯಿತು. ಗಾಬರಿಯಿಂದ ಸೆಟ್‌ಗೆ ಧಾವಿಸಿದೆ. ಆಗ ರಿಷಬ್‌ (Rishab Shetty) ಏನೂ ಆಗಿಲ್ಲ ನೋಡು ಎಂದು ಹೇಳಿದಾಗ ಸಮಾಧಾನ ಆಯಿತು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಕಾಂತಾರ ಸೂಪರ್ ಸಕ್ಸಸ್ – ಕಾಶಿ ಯಾತ್ರೆ ಕೈಗೊಂಡ ಡಿವೈನ್‍ಸ್ಟಾರ್

    ಸಿನಿಮಾದಲ್ಲಿ ಎಲ್ಲಾ ಫೈಟಿಂಗ್‌ ಸೀನ್‌ಗಳನ್ನು ತುಂಬಾ ಜಾಗರೂಕತೆಯಿಂದ ನಿರ್ವಹಿಸಿದ್ದಾರೆ. ಮುಂಜಾಗ್ರತೆ ಕ್ರಮವಹಿಸಿ, ಸುರಕ್ಷತೆ ನೋಡಿಕೊಂಡೇ ಎಲ್ಲಾ ಮಾಸ್ಟರ್‌ಗಳು ಆಕ್ಷನ್‌ ಸೀನ್‌ಗಳನ್ನು ಮಾಡಿದ್ದಾರೆ. ರಿಷಬ್‌ಗೆ ಆಕ್ಷನ್‌ ಸೀನ್‌ಗಳ ಮೇಲೆಯೇ ಆಸಕ್ತಿ ಜಾಸ್ತಿ. ಅಂದುಕೊಂಡಿದ್ದನ್ನು ಮಾಡಬೇಕು ಅನ್ನೋ ಹಠ. ಎಷ್ಟು ಸುಸ್ತಾದ್ರೂ ಕೇಳಲ್ಲ, ನಾನು ಮಾಡ್ತೀನಿ ಅಂತಾರೆ. ಜೋಶ್‌ ಜಾಸ್ತಿ. ಅದಕ್ಕೆ ನನಗೆ ಟೆನ್ಷನ್‌ ಆಗ್ತಿತ್ತು ಎಂದು ಹೇಳಿದರು.

    ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್‌ಗೆ ಕಾಲು ಫ್ರ್ಯಾಕ್ಚರ್‌ ಆಗಿತ್ತು. ಎಷ್ಟು ಮಾಡಿದ್ರೂ ಶೂಟಿಂಗ್‌ ಮುಗಿಯುತ್ತಿರಲಿಲ್ಲ. ಟೆಂಪ್ರವರಿ ಟ್ರೀಟ್‌ಮೆಂಟ್‌ ಅಷ್ಟೇ ರಿಷಬ್‌ ತೆಗೆದುಕೊಳ್ತಿದ್ದು. ಮತ್ತೆ ಮರುದಿನ ಶೂಟಿಂಗ್‌ಗೆ ಹೋಗ್ತಿದ್ರು. ಬ್ರೇಕ್‌ ತಗೋ ಅಂತ ಹೇಳಿದ್ರೂ ಕೇಳ್ತಿರಲಿಲ್ಲ. ಪರಿಶ್ರಮ, ತಾಳ್ಮೆ ಜಾಸ್ತಿ ಇತ್ತು. ಅದಕ್ಕೆ ಅನ್ಸುತ್ತೆ ರಿಸಲ್ಟ್‌ ದೊಡ್ಡದಾಗಿ ಸಿಕ್ಕಿದೆ. ಸಿನಿಮಾ ನಿರ್ಮಾಣ ಜರ್ನಿಯಲ್ಲಿ ತುಂಬಾ ಸಮಸ್ಯೆ ಎದುರಿಸಿ, ನೋವು ತಡೆದುಕೊಂಡಿದ್ದಾರೆ ಎಂದು ಶೂಟಿಂಗ್‌ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

  • ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

    ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

    – ರಿಷಬ್‌ ನಿರ್ದೇಶನ, ಅಭಿನಯಕ್ಕೆ ಪ್ರೇಕ್ಷಕರು ಫಿದಾ; ಶಿಳ್ಳೆ, ಚಪ್ಪಾಳೆಯ ಮೆಚ್ಚುಗೆ

    ಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ ಚಾಪ್ಟರ್ 1 (Kantara Chapter 1) ಚಿತ್ರವು ಅದ್ದೂರಿಯಾಗಿ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಸಿನಿಮಾ ಮೂಡಿಬಂದ ರೀತಿ ಹಾಗೂ ಅದಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಬಾರಿ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕರಾದರು.

    ಸಿನಿಮಾ ಪ್ರದರ್ಶನದ ಸಮಯದಲ್ಲಿ ರಿಷಬ್‌ ಶೆಟ್ಟಿ ಅವರ ಪತ್ನಿ, ನಟ-ವಿನ್ಯಾಸಕಿ ಪ್ರಗತಿ ಶೆಟ್ಟಿ (Pragathi Shetty), ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿ ಕಣ್ಣೀರು ಹಾಕಿದರು. ಆಗ ಪತ್ನಿಯನ್ನು ಅಪ್ಪಿಕೊಂಡು ರಿಷಬ್ ಸಮಾಧಾನಪಡಿಸಿದ ದೃಶ್ಯ ಕಂಡುಬಂತು. ನಿಜಕ್ಕೂ ಇದು ಹೃದಯಸ್ಪರ್ಶಿ ಕ್ಷಣವಾಗಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್

    ವಿಜಯದಶಮಿ ದಿನವೇ ವಿಶ್ವದಾದ್ಯಂತ ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾವನ್ನು ಪ್ರೇಕ್ಷಕರು ಎಂಜಾಯ್‌ ಮಾಡಿದ್ದಾರೆ.

    ರಿಷಬ್, ತನ್ನ ಪತ್ನಿಯೊಂದಿಗೆ ಕಾಂತಾರ ಚಾಪ್ಟರ್‌ 1 ರ ಪ್ರದರ್ಶನಕ್ಕೆ ಹಾಜರಾಗಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಒಂದು ವೀಡಿಯೊದಲ್ಲಿ ರಿಷಬ್ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತಿರುವ ಭಾವನಾತ್ಮಕ ಕ್ಷಣಗಳೂ ವ್ಯಕ್ತವಾಗಿವೆ. ಇದನ್ನೂ ಓದಿ: ಕಾಂತಾರದ ನಂತರದ What Next? – ಪ್ರಶ್ನೆಗೆ ಉತ್ತರ ನೀಡಿದ ರಿಷಭ್‌ ಶೆಟ್ಟಿ

    ರಿಷಬ್ ತಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರೇಕ್ಷಕರು ಅವರೆಲ್ಲರಿಗೂ ಹರ್ಷೋದ್ಗಾರದ ಮೂಲಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ರಿಷಬ್ ಜೊತೆಗೆ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  • ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

    ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಕೆಲಸದ ನಿಮಿತ್ತ ಊರಲ್ಲೇ ಇರುವ ರಿಷಬ್ ಕಳೆದ ದಿನ ರಾತ್ರಿಯೇ ಕಾಂತಾರ ಸಿನಿಮಾ (Kantara Cinema) ತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಿನಿಮಾ ಸೆಟ್‌ನಲ್ಲೇ ಕೇಕ್ ಕತ್ತರಿಸಿ ತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ್ರು. ಈ ವೇಳೆ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಪತಿಗೆ ಸಾಥ್ ಕೊಟ್ರು.

    ಕಾಂತಾರ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿರುವ ಕಾರಣ ಊರಲ್ಲೇ ಇರುವ ರಿಷಬ್ ಅಲ್ಲಿಯೇ ಸರಳವಾಗಿ ಹುಟ್ಟುಹಬ್ಬ (Birthday) ಆಚರಿಸಿಕೊಂಡಿದ್ದಾರೆ. ಮುಖ್ಯವಾಗಿ ತಾವು ದತ್ತು ಪಡೆದಿರುವ ಕೆರಾಡಿ ಸರ್ಕಾರಿ ಶಾಲೆಯ (Keradi School) ಮಕ್ಕಳು ರಿಷಬ್ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿಬ್ಯೂಟಿ

    ಇಡೀ ದಿನವನ್ನ ಕುಟುಂಬದ ಜೊತೆ ರಿಷಬ್ ಕಳೆದಿದ್ದಾರೆ . ಕಾಂತಾರ ಕೊನೆಯ ಘಟ್ಟ ತಲುಪಿದ್ದು ಕುಂದಾಪುರದ ಕೆರಾಡಿ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಬ್ಯುಸಿ ಇರುವ ರಿಷಬ್ ಹುಟುಹಬ್ಬ ಆಚರಣೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಿಲ್ಲ.

    ರಿಷಬ್ ನಟಿಸಿ ನಿರ್ದೇಶಿಸುತ್ತಿರುವ `ಕಾಂತಾರ-1′ ಇದೇ ಅಕ್ಟೋಬರ್‌ನಲ್ಲಿ ರಿಲೀಸ್ ಆಗಲಿದೆ. ಬಹುನಿರೀಕ್ಷಿತ ಈ ಚಿತ್ರವನ್ನ ಹೊಂಬಾಳೆ ಫಿಲಂಸ್ (Hombale Films) ನಿರ್ಮಿಸಿದ್ದು ಹುಟ್ಟುಹಬ್ಬದ ವಿಶೇಷವಾಗಿ ರಿಷಭ್‌ ಶೆಟ್ಟಿಯ ಪೋಸ್ಟರ್ ಕೂಡ ಆಫಿಷಿಯಲ್ ರಿಲೀಸ್ ಆಗಿತ್ತು. ಇದೀಗ ಕೆಲಸದ ಕಡೆ ಹೆಚ್ಚಿನ ಗಮನಹರಿಸುತ್ತಿರುವ ರಿಷಬ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  • 1.3 ಕೋಟಿ ಮೌಲ್ಯದ ಲಕ್ಷುರಿ ಕಾರು ಖರೀದಿಸಿದ ರಿಷಬ್ ಶೆಟ್ಟಿ

    1.3 ಕೋಟಿ ಮೌಲ್ಯದ ಲಕ್ಷುರಿ ಕಾರು ಖರೀದಿಸಿದ ರಿಷಬ್ ಶೆಟ್ಟಿ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. 1.3 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರನ್ನು ಅವರು ಖರೀದಿಸಿದ್ದಾರೆ. ಹೊಸ ಕಾರಿನ ಫೋಟೋಗಳು ವೈರಲ್ ಆಗ್ತಿವೆ. ಇದನ್ನೂ ಓದಿ:ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, 5 ತಿಂಗಳಲ್ಲಿ ಪರಿಹಾರ: ರಿಷಬ್‌ಗೆ ಪಂಜುರ್ಲಿ ಅಭಯ

    ‘ಕಾಂತಾರ’ (Kantara) ಸಕ್ಸಸ್ ಬಳಿಕ ರಿಷಬ್‌ಗೆ ಬೇಡಿಕೆ ಹೆಚ್ಚಾಗಿದೆ. ಕನ್ನಡ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಮನೆಗೆ ದುಬಾರಿ ಕಾರನ್ನು ಖರೀದಿಸಿ ತಂದಿದ್ದಾರೆ. 1.3 ಕೋಟಿ ರೂ. ಮೌಲ್ಯದ ಟೊಯೋಟಾ ವೆಲ್ ಫೈರ್ ಕಾರನ್ನು  ಕೊಂಡುಕೊಂಡಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ಹೊಸ ಕಾರು ಖರೀದಿಸಿದ ಖುಷಿಯಲ್ಲಿ ಮಡದಿ ಪ್ರಗತಿ ಶೆಟ್ಟಿ (Pragathi Shetty) ಹಾಗೂ ಮಕ್ಕಳೊಂದಿಗೆ ನಿಂತು ಕಾರಿನ ಮುಂದೆ ರಿಷಬ್ ಪೋಸ್ ಕೊಟ್ಟಿದ್ದಾರೆ.

    ಅಂದಹಾಗೆ, ಕಾಂತಾರ ಚಾಪ್ಟರ್ 1, ಜೈ ಹನುಮಾನ್, ಶಿವಾಜಿ ಬಯೋಪಿಕ್ ಸಿನಿಮಾಗಳು ಅವರ ಕೈಯಲ್ಲಿವೆ.

  • ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಬರ್ತ್‌ಡೇಗೆ ರಿಷಬ್‌ ಶೆಟ್ಟಿ ಪತ್ನಿ ವಿಶ್

    ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಬರ್ತ್‌ಡೇಗೆ ರಿಷಬ್‌ ಶೆಟ್ಟಿ ಪತ್ನಿ ವಿಶ್

    ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಟೋಡರ್ ಲಜರೋವ್ (Todor Lazarov) ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ (Rishab Shetty) ಪತ್ನಿ ಪ್ರಗತಿ (Pragahti Shetty) ಶುಭಕೋರಿದ್ದಾರೆ. ಸಾಹಸ ನಿರ್ದೇಶಕ ಎನರ್ಜಿ, ಡೆಡಿಕೇಷನ್ ಸೂಪರ್ ಎಂದು ಪ್ರಗತಿ ಕೊಂಡಾಡಿದ್ದಾರೆ. ಇದನ್ನೂ ಓದಿ:‘ದಿ ಡೆವಿಲ್’ ಶೂಟಿಂಗ್ ಮತ್ತೆ ಆರಂಭ- ದರ್ಶನ್ ಭದ್ರತೆಗಾಗಿ ಭಾರೀ ಮೊತ್ತ ಕಟ್ಟಿದ ಚಿತ್ರತಂಡ

    ಮಾರ್ಚ್ 10ರಂದು ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಟೋಡರ್ ಲಜರೋವ್ ಬರ್ತ್‌ಡೇ ಹಿನ್ನೆಲೆ ರಿಷಬ್ ಪತ್ನಿ ವಿಶೇಷವಾಗಿ ಶುಭಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಡೆಡಿಕೇಷನ್ ಮತ್ತು ಎನರ್ಜಿಗೆ ಸಾಟಿಯೇ ಇಲ್ಲ. ನಿಮ್ಮ ಈ ಒಂದು ಪವರ್‌ನಿಂದಲೇ ‘ಕಾಂತಾರ ಚಾಪ್ಟರ್ 1’ (Kantara Chapter 1) ಆ್ಯಕ್ಷನ್ ಅದ್ಭುತವಾಗಿಯೇ ಬಂದಿದೆ ಎಂದು ಹೊಗಳಿ ಶುಭಕೋರಿದ್ದಾರೆ. ಟೋಡರ್ ಜೊತೆ ರಿಷಬ್ ಮತ್ತು ಪ್ರಗತಿ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ‘ಕಾಂತಾರ ಚಾಪ್ಟರ್ 1’ಕ್ಕಾಗಿ ಹಾಲಿವುಡ್ ಸಾಹಸ ನಿರ್ದೇಶಕ ಟೋಡರ್ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರು ಭಾರತದಲ್ಲೇ ಇದ್ದಾರೆ.

    ಇನ್ನೂ ಈ ಹಿಂದೆ ಟೋಡರ್ ಅವರು ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

  • ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ: ಪತ್ನಿ ಬರ್ತ್‌ಡೇಗೆ ರಿಷಬ್ ಲವ್ಲಿ ವಿಶ್

    ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ: ಪತ್ನಿ ಬರ್ತ್‌ಡೇಗೆ ರಿಷಬ್ ಲವ್ಲಿ ವಿಶ್

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಸದ್ಯ ‘ಕಾಂತಾರ ಚಾಪ್ಟರ್ 1’ (Kantara Chapter 1) ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪತ್ನಿ ಪ್ರಗತಿ ಶೆಟ್ಟಿ ಬರ್ತ್‌ಡೇಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ ಎಂದು ಲವ್ಲಿ ಆಗಿ ಪತ್ನಿಗೆ ರಿಷಬ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

    ರಿಷಬ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ, ನಗುವಿನ ಪುಟ್ಟ ಕ್ಷಣಗಳಿಂದ ಹಿಡಿದು, ನಾವು ಒಟ್ಟಿಗೆ ಕಾಣುವ ದೊಡ್ಡ ಕನಸುಗಳವರೆಗೆ, ನಿನ್ನ ಜೊತೆಗಿನ ಪ್ರತಿಯೊಂದು ಕ್ಷಣವೂ ಒಂದು ಅಮೂಲ್ಯ ಉಡುಗೊರೆ. ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ. ಈ ದಿನ, ನಿನ್ನ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಪತ್ನಿ ಪ್ರಗತಿಗೆ ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಪ್ರಗತಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

     

    View this post on Instagram

     

    A post shared by Rishab Shetty (@rishabshettyofficial)

    ಇನ್ನೂ ‘ಕಾಂತಾರ ಚಾಪ್ಟರ್ 1’ರ ಚಿತ್ರೀಕರಣಕ್ಕಾಗಿ ಕುಂದಾಪುರದಲ್ಲಿ ರಿಷಬ್ ಫ್ಯಾಮಿಲಿ ಬೀಡು ಬಿಟ್ಟಿದೆ. ಪತಿಯ ಕೆಲಸಕ್ಕೆ ಪ್ರಗತಿ ಶೆಟ್ಟಿ ಕೂಡ ಬೆಂಬಲವಾಗಿ ನಿಂತಿದ್ದಾರೆ. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

    ಇನ್ನೂ 2017ರಲ್ಲಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಕುಂದಾಪುರದಲ್ಲಿ ಮದುವೆಯಾದರು. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ಕಾಲಿಟ್ಟರು.

  • ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು- ಪತ್ನಿಗೆ ರಿಷಬ್ ಆ್ಯನಿವರ್ಸರಿ ವಿಶ್

    ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು- ಪತ್ನಿಗೆ ರಿಷಬ್ ಆ್ಯನಿವರ್ಸರಿ ವಿಶ್

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಮದುವೆ ಆ್ಯನಿವರ್ಸರಿ ಸಂಭ್ರಮದಲ್ಲಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿಗೆ (Pragathi Shetty) ಸ್ಪೆಷಲ್ ಮದುವೆ ವಾರ್ಷಿಕೋತ್ಸವಕ್ಕೆ (Wedding Anniversary) ಶುಭಕೋರಿದ್ದಾರೆ. ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ಎಂದು ಪತ್ನಿಗೆ ಪ್ರೀತಿಯಿಂದ ರಿಷಬ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಇಂಗ್ಲೆಂಡ್ ಗಾಯಕ ಎಡ್ ಶೀರನ್ ಬೀದಿ ಬದಿಯ ಪ್ರದರ್ಶನಕ್ಕೆ ಬ್ರೇಕ್‌ ಹಾಕಿದ ಪೊಲೀಸರು

    ನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು. ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜೊತೆಗಿರು ಎಂದು ಪತ್ನಿಗೆ ಮದುವೆ ಆ್ಯನಿವರ್ಸರಿಗೆ ರಿಷಬ್ ಶುಭಕೋರಿದ್ದಾರೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಪೋಸ್ಟರ್ ಔಟ್

     

    View this post on Instagram

     

    A post shared by Rishab Shetty (@rishabshettyofficial)

    ಪ್ರಗತಿ ಶೆಟ್ಟಿ ಕೂಡ ಪತಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಕನಸುಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಅವುಗಳನ್ನು ಒಟ್ಟಿಗೆ ರಚಿಸುವವರೆಗೆ ಪ್ರತಿ ವರ್ಷ, ನಮ್ಮ ಪ್ರಯಾಣವು ಇನ್ನಷ್ಟು ಮಾಂತ್ರಿಕವಾಗಿರುತ್ತದೆ. ನಿಮ್ಮ ಅಚಲ ಬೆಂಬಲಕ್ಕಾಗಿ, ನನ್ನ ಶಕ್ತಿಯಾಗಿದ್ದಕ್ಕಾಗಿ ಮತ್ತು ಈ ಸುಂದರ ಜೀವನಕ್ಕಾಗಿ ನಾವು ಸಿನಿಮಾದ ಅದರಾಚೆಗೆ ಒಟ್ಟಿಗೆ ನಿರ್ಮಿಸುತ್ತಿದ್ದೇವೆ. ನಿಮ್ಮೊಂದಿಗೆ ಈ ವಿಶೇಷ ಕನಸಿನ ಜೀವನಕ್ಕಾಗಿ ದೇವರಿಗೆ ಧನ್ಯವಾದಗಳು. ಲವ್ ಯು ಫಾರೆವರ್ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

    ಅಂದಹಾಗೆ, ‘ಕಿರಿಕ್ ಪಾರ್ಟಿ’ (Kirik Party) ಸಕ್ಸಸ್ ಬಳಿಕ 2017ರಲ್ಲಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಂದಾಪುರದಲ್ಲಿ ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಈ ಮದುವೆ ನಡೆಯಿತು.

  • ರಿಷಬ್ ಶೆಟ್ಟಿ ಫ್ಯಾಮಿಲಿ ಟೈಮ್- ಪತ್ನಿ ಜೊತೆ ಬೋಟಿಂಗ್ ಮಾಡಿದ ನಟ

    ರಿಷಬ್ ಶೆಟ್ಟಿ ಫ್ಯಾಮಿಲಿ ಟೈಮ್- ಪತ್ನಿ ಜೊತೆ ಬೋಟಿಂಗ್ ಮಾಡಿದ ನಟ

    ‘ಕಾಂತಾರ ಪ್ರೀಕ್ವೆಲ್’ (Kantara Chapter 1) ಚಿತ್ರೀಕರಣದ ನಡುವೆ ನಟ ರಿಷಬ್ ಶೆಟ್ಟಿ (Rishab Shetty) ಫ್ಯಾಮಿಲಿಗೂ ಟೈಮ್ ಕೊಡುತ್ತಿದ್ದಾರೆ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ ಈ ನಡುವೆ ರಿಲ್ಯಾಕ್ಸ್ ಕೂಡ ಮಾಡುತ್ತಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಮತ್ತು ಇಬ್ಬರು ಮಕ್ಕಳ ಜೊತೆ ಟೈಮ್ ಸ್ಪೆಂಡ್ ಮಾಡಿದ್ದಾರೆ. ಇದೀಗ ಪತ್ನಿ ಜೊತೆ ರಿಷಬ್ ಬೋಟಿಂಗ್‌ಗೆ ತೆರಳಿರುವ ಫೋಟೋ ಮತ್ತು ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮ ಸಮೀಪದ ಹೊಳೆಯಲ್ಲಿ ರಿಷಬ್ ದಂಪತಿ ಬೋಟಿಂಗ್ ಮಾಡಿದ್ದಾರೆ. ಮಳೆಗಾಲದ ನಂತರ ಮ್ಯಾಂಗ್ರೋಸ್ ಕಾಡಿನ ನಡುವೆ ಹಿನ್ನೀರಿನಲ್ಲಿ ಕಯಾ ಕಿಂಗ್ ಬೋಟಿಂಗ್ ಆರಂಭವಾಗಿದ್ದು, ಮತ್ತೆ ಪ್ರವಾಸಿಗರು ಇತ್ತ ಬರಲು ಶುರು ಮಾಡಿದ್ದಾರೆ. ಇದನ್ನೂ ಓದಿ:ಆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿಲ್ಲ: ಸಿಮ್ರಾನ್ ಫುಲ್ ಗರಂ..!

    ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಸದ್ಯ ‘ಕಾಂತಾರ ಪಾರ್ಟ್ 1’ ಮತ್ತು ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇನ್ನೂ ‘ಕಾಂತಾರ ಪ್ರೀಕ್ವೆಲ್‌’ನಲ್ಲಿ ರಿಷಬ್ ಅವತಾರ ಮತ್ತು ನಟನೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

  • ನನ್ನ ಸಿನಿಮಾ ಕಥೆಗಳಿಗೆ ನನ್ನ ಊರು, ಯಕ್ಷಗಾನ ಪ್ರೇರಣೆ: ನಟ ರಿಷಬ್ ಶೆಟ್ಟಿ

    ನನ್ನ ಸಿನಿಮಾ ಕಥೆಗಳಿಗೆ ನನ್ನ ಊರು, ಯಕ್ಷಗಾನ ಪ್ರೇರಣೆ: ನಟ ರಿಷಬ್ ಶೆಟ್ಟಿ

    ಬೆಂಗಳೂರು: ನನ್ನ ಸಿನಿಮಾದ ಕಥೆಗಳಿಗೆ ನನ್ನ ಊರು ಮತ್ತು ಯಕ್ಷಗಾನವೇ ಪ್ರೇರಣೆ ಎಂದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಮಾತನಾಡಿದ್ದಾರೆ. ಇದನ್ನೂ ಓದಿ:ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ: ಮಾನಸಿ ಸುಧೀರ್

    ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಕುಂದಾಪುರ ಕನ್ನಡ ಹಬ್ಬ-2024’ರ ಮೊದಲ ದಿನವಾದ ಶನಿವಾರ (ಆ.17) ‘ಊರ ಗೌರವ’ ಸನ್ಮಾನ ಸ್ವೀಕರಿಸಿ ರಿಷಬ್ ಶೆಟ್ಟಿ ಮಾತನಾಡಿ, ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಲ್ಲಿಂದ ಬಂದಿದ್ದೇವೆ ಎನ್ನುವುದು ಮುಖ್ಯ. ಆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಸಿನಿಮಾದ ಎಲ್ಲ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ, ನಾನು ಬೆಳೆದ ಪರಿಸರವೇ ಪ್ರೇರಣೆ. ಅದರಲ್ಲೂ ಓದದೆಯೇ ರಾಮಾಯಣ-ಮಹಾಭಾರತದ ಸಾರ ತಿಳಿಯಲು ಯಕ್ಷಗಾನ ಕಾರಣ. ‘ಕಾಂತಾರ’ ಸಿನಿಮಾ ಚಿತ್ರೀಕರಣ ಕೂಡ ಕುಂದಾಪುರ ಪರಿಸರದಲ್ಲೇ ಆಗಿರುವುದು ಎಂದು ರಿಷಬ್ ಶೆಟ್ಟಿ ಮಾತನಾಡಿದರು. ಇದನ್ನೂ ಓದಿ:‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

    ನಮ್ಮ ಭಾಷೆ ಸಂಸ್ಕೃತಿ ಮಕ್ಕಳಿಗೆ ಗೊತ್ತಾಗಬೇಕು. ಅದಕ್ಕಾಗಿ ಇಂಥ ಹಬ್ಬಗಳು ಅತ್ಯಗತ್ಯ. ತುಳಸಿ ಕಟ್ಟೆಗಳು ಅಪರೂಪ ಆಗಿರುವ ಈ ಕಾಲದಲ್ಲಿ ಇಲ್ಲಿ ತುಳಸಿ ಕಟ್ಟೆ ಇಟ್ಟು ಉದ್ಘಾಟನೆ ನಡೆಸಿರುವುದು ಉತ್ತಮ ಸಂಗತಿ. ನಾನು ಕೂಡ ನನ್ನ ಪ್ರತಿ ಸಿನಿಮಾದಲ್ಲೂ ಅಕ್ಕಿಮುಡಿ, ನೆಟ್ಟಿ ಮುಂತಾದವನ್ನು ತೋರಿಸುತ್ತಿರುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು. ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ (Pragathi Shetty) ದಂಪತಿಗೆ ‘ಊರ ಗೌರವ’ದ ಸನ್ಮಾನ ಮಾಡಲಾಯಿತು.

    ಭಾಷೆಯ ಉಳಿವು ಬೆಳವಣಿಗೆ ದೃಷ್ಟಿಯಿಂದ ಈ ಕುಂದಾಪುರ ಕನ್ನಡ ಹಬ್ಬ ಉತ್ತಮ ಪ್ರಯೋಗ. ದಿನನಿತ್ಯದ ಬಳಕೆಯಲ್ಲಿ ಸಾಧ್ಯವಾದಷ್ಟೂ ಅಧಿಕ ಕುಂದಾಪುರ ಕನ್ನಡ ಬಳಕೆ ಆಗಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು.

    ಸಂಗೀತ ನಿರ್ದೇಶಕ ರವಿ ಬಸ್ರೂರು, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾರಣಕಟ್ಟೆ ಎಂ.ಎಸ್. ಮಂಜ ಚಾರಿಟಬಲ್ ಟ್ರಸ್ಟ್ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ.ಲಿ. ಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.

    ಹಬ್ಬಕ್ಕೆ ತಾರಾ ಮೆರುಗು

    ಕುಂದಾಪುರ ಕನ್ನಡ ಹಬ್ಬದ ಭಾನುವಾರದ ಕಾರ್ಯಕ್ರಮಕ್ಕೆ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ನಟ-ನಿರ್ಮಾಪಕ ಪ್ರಮೋದ್ ಶೆಟ್ಟಿ ಆಗಮಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು, ಅವರೂ ಬರುವ ನಿರೀಕ್ಷೆ ಇದೆ. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇದೇ ಮೊದಲು ಸಂಗೀತ ಸಂಜೆ ಕಾರ್ಯಕ್ರಮ ನೀಡುತ್ತಿದ್ದು, ಇದು ಆ.18ರ ಪ್ರಮುಖ ಆಕರ್ಷಣೆ ಆಗಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    ಕುಂದಾಪುರ ಕನ್ನಡ ಹಬ್ಬ ಆಗಸ್ಟ್ 18ರ ಕಾರ್ಯಕ್ರಮಗಳು
    ಬೆಳಗ್ಗೆ 10: ಬಯಲಾಟ- ಗ್ರಾಮೀಣ ಉತ್ಸವ
    ಬೆಳಗ್ಗೆ 10: ತಾರೆಯರ ಜೊತೆ ಮಾತುಕತೆ, ಕವಿತೆ.
    ಬೆಳಗ್ಗೆ 11: ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ‘ಡಾನ್ಸ್ ಕುಂದಾಪ್ರ ಡಾನ್ಸ್’
    ಬೆಳಗ್ಗೆ 11.15: ಕುಂದಾಪುರ ಭಾಷೆ ಬದುಕು ಬರಹ ಕುರಿತ ನುಡಿಚಾವಡಿ.
    ಮಧ್ಯಾಹ್ನ 12: ಮನು ಹಂದಾಡಿ ಅವರಿಂದ ‘ಹಂದಾಡ್ತಾ ನೆಗ್ಯಾಡಿ’ ಹಾಸ್ಯ ಕಾರ್ಯಕ್ರಮ.
    ಮಧ್ಯಾಹ್ನ 1.30: ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ ‘ಪೆಟ್ ಒಂದೇ, ಸ್ವರ ಬೇರೆ’
    ಮಧ್ಯಾಹ್ನ 2.30: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ ‘ಮಂದಾರ್ತಿ ಮಾದೇವಿ’
    ಸಂಜೆ 4.30: ರಥೋತ್ಸವ
    ರಾತ್ರಿ 7.30: ‘ರವಿ ಬಸ್ರೂರ್ ನೈಟ್ಸ್’ ವಿಶೇಷ ಸಂಗೀತ ಸಂಜೆ.

  • ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಡಿವೈನ್‌ ಸ್ಟಾರ್ ರಿಷಬ್ ಶೆಟ್ಟಿ

    ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಡಿವೈನ್‌ ಸ್ಟಾರ್ ರಿಷಬ್ ಶೆಟ್ಟಿ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಸದ್ಯ ‘ಕಾಂತಾರ’ ಚಾಪ್ಟರ್-1 (Kantara Chapter-1) ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇತ್ತೀಚೆಗೆ 41ನೇ ವರ್ಷದ ಹುಟ್ಟುಹಬ್ಬವನ್ನು (Birthday) ಪತ್ನಿ ಪ್ರಗತಿ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಬರ್ತ್‌ಡೇಯ ಸುಂದರ ಫೋಟೋಗಳನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ಹಂಚಿಕೊಂಡಿದ್ದಾರೆ.

    ಜು.7ರಂದು ರಿಷಬ್ ಶೆಟ್ಟಿ ಹುಟ್ಟುಹಬ್ಬವಾಗಿದ್ದು, ಖಾಸಗಿ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ತಡವಾಗಿ ನಟ ಹುಟ್ಟುಹಬ್ಬದ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಎಂಟ್ರಿ ಕೊಟ್ಟ ಮಳೆ ಹುಡುಗಿ ಪೂಜಾ ಗಾಂಧಿ

     

    View this post on Instagram

     

    A post shared by Rishab Shetty (@rishabshettyofficial)

    ಅಂದಹಾಗೆ, ಪತಿ ಹುಟ್ಟುಹಬ್ಬದಂದು ಪ್ರೀತಿಯಿಂದ ಪತ್ನಿ ಪ್ರಗತಿ (Pragathi Shetty) ವಿಶೇಷವಾಗಿ ಶುಭಕೋರಿದ್ದರು. ನನ್ನ ಜೀವನದ ಆಧಾರಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು. ನೀವು ಎಂತಹ ಅದ್ಭುತ ವ್ಯಕ್ತಿ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮನ್ನು ನಿಜವಾಗಿಯೂ ತಿಳಿದಿರುವವರು ಅದೃಷ್ಟವಂತರು. ನಿಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿ ಪ್ರತಿದಿನ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಪ್ರಗತಿ ಶೆಟ್ಟಿ ಬಣ್ಣಿಸಿದ್ದಾರೆ. ನಾವು ಒಟ್ಟಿಗೆ ಇರುವುದಕ್ಕಾಗಿ ನಾನು ಪ್ರತಿದಿನ ದೇವರಿಗೆ ಕೃತಜ್ಞನಾಗಿದ್ದೇನೆ. ನಿಮಗೆ ಸಂತೋಷ, ಯಶಸ್ಸು ಮತ್ತು ಪ್ರಪಂಚದ ಎಲ್ಲಾ ಸಂತೋಷದಿಂದ ತುಂಬಿದ ವರ್ಷವಾಗಲಿ ಎಂದು ಹಾರೈಸಿದ್ದರು. ಈ ಪೋಸ್ಟ್ ನೋಡಿದ ಫ್ಯಾನ್ಸ್, ಜೋಡಿ ಅಂದರೆ ಹೀಗಿರಬೇಕು ಎಂದು ಮೆಚ್ಚುಗೆ ಸೂಚಿಸಿದ್ದರು.

    ಇನ್ನೂ ಪ್ರಗತಿ ಶೆಟ್ಟಿ ಮತ್ತು ರಿಷಬ್ ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಪಡೆದು 2017ರ ಫೆ.9ರಂದು ಕುಂದಾಪುರದಲ್ಲಿ ಮದುವೆಯಾದರು. ಪತಿ ರಿಷಬ್ ಯಶಸ್ಸಿಗೆ ಪ್ರಗತಿ ಶಕ್ತಿಯಾಗಿ ನಿಂತರು. ಅವರ ಕೆಲಸಗಳಿಗೆ ಸಾಥ್ ನೀಡುತ್ತಲೇ ಬಂದಿದ್ದಾರೆ.

    ರಿಕ್ಕಿ, ಕಿರಿಕ್ ಪಾರ್ಟಿ, ಸೇರಿದಂತೆ ಹಲವು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಬೆಲ್ ಬಾಟಂ’ ಚಿತ್ರದ ನಾಯಕ ನಟನಾಗಿ ಗೆದ್ದು ಬೀಗಿದ್ದರು. ಆದರೆ ‘ಕಾಂತಾರ’ (Kantara) ಸಿನಿಮಾದಲ್ಲಿ ನಟಸಿ, ನಿರ್ದೇಶನ ಮಾಡಿ ಸೆನ್ಸೇಷನ್ ಕ್ರಿಯೆಟ್ ಮಾಡಿದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಿಷಬ್ ಗುರುತಿಸಿಕೊಂಡರು. ಇದೀಗ ‘ಕಾಂತಾರ’ ಪ್ರೀಕ್ವೆಲ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.