Tag: ಪ್ರಕಾಶ್

  • ಬೆಂಗ್ಳೂರಲ್ಲಿ ಇಬ್ಬರು ಪೊಲೀಸರ ವಿರುದ್ಧ ಎಫ್‍ಐಆರ್!

    ಬೆಂಗ್ಳೂರಲ್ಲಿ ಇಬ್ಬರು ಪೊಲೀಸರ ವಿರುದ್ಧ ಎಫ್‍ಐಆರ್!

    ಬೆಂಗಳೂರು: ಇಬ್ಬರು ಪೊಲೀಸರ ಮೇಲೆಯೇ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹದೇವಪುರ ಎಎಸ್‍ಐ ಅಮೃತೇಶ್, ಮುಖ್ಯಪೇದೆ ಜೈಕಿರಣ್ ಎಂಬವರ ವಿರುದ್ಧ ಪ್ರಕಾಶ್ ದೂರು ದಾಖಲಿಸಿದ್ದಾರೆ.

    ಇಸ್ಪೀಟ್ ಆಟ ಆಡುತ್ತಿದ್ದ ಆರೋಪದ ಮೇಲೆ ನನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬಳಿಕ ಪೊಲೀಸರು ತನ್ನ ಮೇಲೆ ಹಲ್ಲೆ ಮಾಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರ ಹಲ್ಲೆ ಖಂಡಿಸಿ ಪ್ರಕಾಶ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದೆ. ಆದ್ರೆ ಈ ದೂರು ಹಿಂಪಡೆಯುವಂತೆ ಮತ್ತೆ ಪೊಲೀಸರು ಬೆದರಿಸಿದ್ದರು ಅಂತ ಪ್ರಕಾಶ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

    ಇದೀಗ ಪೊಲೀಸರ ವರ್ತನೆ ಖಂಡಿಸಿ ಪ್ರಕಾಶ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ ಮೇರೆಗೆ ಇಬ್ಬರು ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

  • ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಲು ಹುಚ್ಚು ಹೇಳಿಕೆ: ಪ್ರಕಾಶ್ ರಾಜ್ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ

    ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಲು ಹುಚ್ಚು ಹೇಳಿಕೆ: ಪ್ರಕಾಶ್ ರಾಜ್ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ

    ಬೆಂಗಳೂರು: ಚಪ್ಪಾಳೆ ತಟ್ಟುತ್ತಾರೆ ಎನ್ನುವ ಮನಸ್ಥಿಯಲ್ಲಿ ವೇದಿಕೆ ಮೇಲೆ ಪ್ರಕಾಶ್ ರಾಜ್ ಹುಚ್ಚುಚ್ಚಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

    ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕಾಶ್ ರಾಜ್ ನಟರಾಗಿ ಮುಂದುವರಿದರೆ ಒಳ್ಳೆಯದು. ಇಲ್ಲದೇ ಇದ್ದರೆ ಪಕ್ಷ ಹುಟ್ಟು ಹಾಕಿ ಮುಂದುವರಿಯಲಿ. ರಾಜ್ಯದಲ್ಲಾಗಿರುವ ದುರಂತಕ್ಕೆ ಪ್ರಧಾನಿ ಮೋದಿಯವರು ಏನೂ ಮಾಡಿಲ್ಲ ಎನ್ನುವುದು ಸರಿಯಲ್ಲ. ಇದು ನಟ ಪ್ರಕಾಶ್ ರಾಜ್ ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.

    ಕಲಬುರ್ಗಿ ಮತ್ತು ಗೌರಿ ಹತ್ಯೆ ಬಗ್ಗೆ ತನಿಖೆ ನಡೆದು ಹಂತಕರನ್ನು ಶೀಘ್ರವೇ ಬಂಧಿಸಬೇಕೆಂದು ಕೇಂದ್ರವೇ ಹೇಳಿದೆ. ಪ್ರಕಾಶ್ ರೈ ಅವರು ಕಾವೇರಿ ವಿವಾದ ಸಂದರ್ಭದಲ್ಲಿ ತಮ್ಮನ್ನು ಎಳೆಯಬೇಡಿ ಎಂದಿದ್ದರು. ರಾಜ್ಯದಲ್ಲಿ 12 ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದೆ. ಇದರ ಬಗ್ಗೆ ಪ್ರಕಾಶ್ ರಾಜ್ ಯಾಕೆ ಇದುವರಗೆ ಹೇಳಿಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಅವರು ಡಿವೈಎಫ್‍ಐ ಕಾರ್ಯಕ್ರಮದಲ್ಲಿ ವೇದಿಕೆಗೆ ತಕ್ಕಂತೆ ಮಾತಾಡಿದ್ದಾರೆ ಎಂದು ಕಿಡಿಕಾರಿದರು.

    ಇದನ್ನೂ ಓದಿ: ಅವಾರ್ಡ್ ಗಳನ್ನ ವಾಪಸ್ ಕೊಡಲು ನಾನೇನು ಮೂರ್ಖನಾ?- ಪ್ರಕಾಶ್ ರಾಜ್