Tag: ಪ್ರಕಾಶ್ ರಾಜ್

  • 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ಗೌರವ

    2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ಗೌರವ

    ಬೆಂಗಳೂರು: 70ನೇ ವರ್ಷದ ರಾಜ್ಯೋತ್ಸವ ಆಚರಣೆ ಅಂಗವಾಗಿ 70 ಮಂದಿ ಸಾಧಕರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

    ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೇ ಒಟ್ಟು 70 ಮಂದಿ ಸಾಧಕರನ್ನ ಆಯ್ಕೆ ಮಾಡಲಾಗಿದೆ.‌ ನಟ ಪ್ರಕಾಶ್‌ ರಾಜ್‌ ಸೇರಿದಂತೆ ವಿವಿಧ ವಲಯಗಳ ಅರ್ಹರಿಗೆ ನಾಡಿನ ಅತ್ಯುನ್ನತ ಗೌರವ ನೀಡಲಾಗುತ್ತಿದೆ. ಸಾಹಿತ್ಯ, ಸಿನಿಮಾ, ರಂಗಭೂಮಿ, ಮಾಧ್ಯಮ, ವಿಜ್ಞಾನ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ವಲಯಗಳಲ್ಲಿ ಗಣನೀಯ ಸಾಧನೆ ಮಾಡಿದ 70 ಮಂದಿಯನ್ನ ಆಯ್ಕೆ ಮಾಡಲಾಗಿದೆ.

    ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನ ಒಳಗೊಂಡಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

    ಯಾವ ಕ್ಷೇತ್ರದಿಂದ ಯಾರಿಗೆ ಪ್ರಶಸ್ತಿ?
    ಸಾಹಿತ್ಯ ಕ್ಷೇತ್ರ
    ಪ್ರೊ. ರಾಜೇಂದ್ರ ಚೆನ್ನಿ – ಶಿವಮೊಗ್ಗ
    ತುಂಬಾಡಿ ರಾಮಯ್ಯ – ತುಮಕೂರು
    ಪ್ರೊ ಅರ್ ಸುನಂದಮ್ಮ – ಚಿಕ್ಕಬಳ್ಳಾಪುರ
    ಡಾ.ಎಚ್.ಎಲ್ ಪುಷ್ಪ – ತುಮಕೂರು
    ರಹಮತ್ ತರೀಕೆರೆ – ಚಿಕ್ಕಮಗಳೂರು
    ಹ.ಮ. ಪೂಜಾರ – ವಿಜಯಪುರ

    ಜಾನಪದ
    ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ
    ಬಿ. ಟಾಕಪ್ಪ ಕಣ್ಣೂರು – ಶಿವಮೊಗ್ಗ
    ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ – ಬೆಳಗಾವಿ
    ಹನುಮಂತಪ್ಪ, ಮಾರಪ್ಪ, ಚೀಳಂಗಿ – ಚಿತ್ರದುರ್ಗ
    ಎಂ. ತೋಪಣ್ಣ – ಕೋಲಾರ
    ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
    ಸಿಂಧು ಗುಜರನ್‌ – ದಕ್ಷಿಣ ಕನ್ನಡ
    ಎಲ್. ಮಹದೇವಪ್ಪ ಉಡಿಗಾಲ – ಮೈಸೂರು

    ಸಂಗೀತ/ ನೃತ್ಯ ಕ್ಷೇತ್ರ
    ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ
    ಮಡಿವಾಳಯ್ಯ ಸಾಲಿ – ಬೀದರ್
    ಪ್ರೊ. ಕೆ. ರಾಮಮೂರ್ತಿ ರಾವ್ – ಮೈಸೂರು

    ಚಲನಚಿತ್ರ /ಕಿರುತೆರೆ
    ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
    ವಿಜಯಲಕ್ಷ್ಮೀ ಸಿಂಗ್ -ಕೊಡಗು

    ಆಡಳಿತ/ ವೈದ್ಯಕೀಯ
    ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) – ಬೆಂಗಳೂರು ದಕ್ಷಿಣ (ರಾಮನಗರ)
    ಡಾ. ಆಲಮ್ಮ ಮಾರಣ್ಣ – ತುಮಕೂರು
    ಡಾ. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

    ಸಮಾಜ ಸೇವೆ
    ಸೂಲಗಿತ್ತಿ ಈರಮ್ಮ – ವಿಜಯನಗರ
    ಫಕ್ಕೀರಿ – ಬೆಂಗಳೂರು ಗ್ರಾಮಾಂತರ
    ಕೋರಿನ್ ಆಂಟೊನಿಯಟ್ ರಸ್ಕೀನಾ – ದಕ್ಷಿಣ ಕನ್ನಡ
    ಡಾ. ಎನ್. ಸೀತಾರಾಮ ಶೆಟ್ಟಿ – ಉಡುಪಿ
    ಕೋಣಂದೂರು ಲಿಂಗಪ್ಪ – ಶಿವಮೊಗ್ಗ

    ಸಂಕೀರ್ಣ
    ಉಮೇಶ ಪಂಬದ – ದಕ್ಷಿಣ ಕನ್ನಡ
    ಡಾ. ರವೀಂದ್ರ ಕೋರಿಶೆಟ್ಟಿರ್ – ಧಾರವಾಡ
    ಕೆ.ದಿನೇಶ್ – ಬೆಂಗಳೂರು
    ಶಾಂತರಾಜು – ತುಮಕೂರು
    ಜಾಫರ್ ಮೊಹಿಯುದ್ದೀನ್ – ರಾಯಚೂರು
    ಪೆನ್ನ ಓಬಳಯ್ಯ – ಬೆಂಗಳೂರು ಗ್ರಾಮಾಂತರ
    ಶಾಂತಿ ಬಾಯಿ – ಬಳ್ಳಾರಿ
    ಪುಂಡಲೀಕ ಶಾಸ್ತ್ರೀ(ಬುಡಬುಡಕೆ) – ಬೆಳಗಾವಿ

    ಹೊರನಾಡು/ ಹೊರದೇಶ
    ಜಕರಿಯ ಬಜಪೆ (ಸೌದಿ)
    ಪಿ ವಿ ಶೆಟ್ಟಿ (ಮುಂಬೈ)

    ಪರಿಸರ
    ರಾಮೇಗೌಡ – ಚಾಮರಾಜನಗರ
    ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ

    ಕೃಷಿ
    ಡಾ.ಎಸ್.ವಿ.ಹಿತ್ತಲಮನಿ – ಹಾವೇರಿ
    ಎಂ ಸಿ ರಂಗಸ್ವಾಮಿ – ಹಾಸನ

    ಮಾಧ್ಯಮ ಕ್ಷೇತ್ರ
    ಕೆ.ಸುಬ್ರಮಣ್ಯ – ಬೆಂಗಳೂರು
    ಅಂಶಿ ಪ್ರಸನ್ನಕುಮಾರ್ – ಮೈಸೂರು
    ಬಿ.ಎಂ ಹನೀಫ್ – ದಕ್ಷಿಣ ಕನ್ನಡ
    ಎಂ ಸಿದ್ಧರಾಜು – ಮಂಡ್ಯ

    ವಿಜ್ಞಾನ ತಂತ್ರಜ್ಞಾನ
    ರಾಮಯ್ಯ – ಚಿಕ್ಕಬಳ್ಳಾಪುರ
    ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ – ದಾವಣಗೆರೆ
    ಡಾ. ಆರ್. ವಿ ನಾಡಗೌಡ – ಗದಗ

    ಸಹಕಾರ
    ಶೇಖರಗೌಡ ವಿ ಮಾಲಿಪಾಟೀಲ್ – ಕೊಪ್ಪಳ

    ಯಕ್ಷಗಾನ/ ಬಯಲಾಟ/ ರಂಗಭೂಮಿ
    ಕೋಟ ಸುರೇಶ ಬಂಗೇರ- ಉಡುಪಿ
    ಐರಬೈಲ್‌ಆನಂದ ಶೆಟ್ಟಿ – ಉಡುಪಿ
    ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) – ಉತ್ತರ ಕನ್ನಡ
    ಗುಂಡೂರಾಜ್ – ಹಾಸನ
    ಹೆಚ್.ಎಂ. ಪರಮಶಿವಯ್ಯ – ಬೆಂಗಳೂರು ದಕ್ಷಿಣ (ರಾಮನಗರ)
    ಎಲ್.ಬಿ.ಶೇಖ್ (ಮಾಸ್ತರ್) – ವಿಜಯಪುರ
    ಬಂಗಾರಪ್ಪ ಖುದಾನ್‌ಪುರ – ಬೆಂಗಳೂರು
    ಮೈಮ್ ರಮೇಶ್ – ದಕ್ಷಿಣ ಕನ್ನಡ
    ಡಿ.ರತ್ನಮ್ಮ ದೇಸಾಯಿ – ರಾಯಚೂರು

    ಶಿಕ್ಷಣ ಕ್ಷೇತ್ರ
    ಡಾ. ಎಂ.ಆರ್. ಜಯರಾಮ್ – ಬೆಂಗಳೂರು
    ಡಾ. ಎನ್ ಎಸ್ ರಾಮೇಗೌಡ -ಮೈಸೂರು
    ಎಸ್. ಬಿ. ಹೊಸಮನಿ – ಕಲಬುರಗಿ
    ನಾಗರಾಜು – ಬೆಳಗಾವಿ

    ಕ್ರೀಡೆ
    ಆಶೀಶ್ ಕುಮಾರ್ ಬಲ್ಲಾಳ್ – ಬೆಂಗಳೂರು
    ಎಂ ಯೋಗೇಂದ್ರ – ಮೈಸೂರು
    ಡಾ. ಬಬಿನಾ ಎನ್.ಎಂ (ಯೋಗ) – ಕೊಡಗು

    ನ್ಯಾಯಾಂಗ
    ನ್ಯಾ. ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) – ಬಾಗಲಕೋಟೆ

    ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ
    ಬಸಣ್ಣ ಮೋನಪ್ಪ ಬಡಿಗೇರ – ಯಾದಗಿರಿ
    ನಾಗಲಿಂಗಪ್ಪ ಜಿ ಗಂಗೂರ – ಬಾಗಲಕೋಟೆ
    ಬಿ. ಮಾರುತಿ – ವಿಜಯನಗರ
    ಎಲ್. ಹೇಮಾಶೇಖರ್ – ಮೈಸೂರು

  • ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದೀರಿ: ರಿಷಬ್, ಹೊಂಬಾಳೆಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ

    ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದೀರಿ: ರಿಷಬ್, ಹೊಂಬಾಳೆಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ

    ನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದಕ್ಕೆ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ (Homble Films) ಅನ್ನು ನಟ ಪ್ರಕಾಶ್‌ ರಾಜ್‌ (Prakash Raj) ಅಭಿನಂದಿಸಿದ್ದಾರೆ.

    ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ರಿಷಬ್‌ ಶೆಟ್ಟಿ ನಿಮ್ಮ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳು ನಮ್ಮ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು, ಕನ್ನಡ ಸಿನೆಮಾದ ಸಾಧ್ಯತೆಯನ್ನು ಹಿರಿಮೆಗೊಳಿಸಿದ ನಿಮ್ಮ ಹಾಗೂ ನಿಮ್ಮ ತಂಡಕ್ಕೆ ಓಳಿತಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ:  ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ

     

    ಈ ಪ್ರತಿಕ್ರಿಯೆಗೆ ರಿಷಬ್‌ ಶೆಟ್ಟಿ ಹೃದಯಪೂರ್ವಕ ಧನ್ಯವಾದಗಳು ಪ್ರಕಾಶ್ ಅಣ್ಣ ಎಂದು ತಿಳಿಸಿದ್ದಾರೆ.

  • ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣ; ಇಡಿ ವಿಚಾರಣೆಗೆ ಹಾಜರಾದ ನಟ ಪ್ರಕಾಶ್ ರಾಜ್

    ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣ; ಇಡಿ ವಿಚಾರಣೆಗೆ ಹಾಜರಾದ ನಟ ಪ್ರಕಾಶ್ ರಾಜ್

    ಹೈದರಾಬಾದ್: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಸಂಬಂಧ ನಟ ಪ್ರಕಾಶ್ ರಾಜ್ (Prakash Raj) ಬುಧವಾರ ಇಡಿ (Enforcement Directorate) ವಿಚಾರಣೆಗೆ ಹಾಜರಾಗಿದ್ದಾರೆ.

    ಹೈದರಾಬಾದ್‌ನ (Hyderabad) ಬಶೀರ್‌ಬಾಗ್‌ನಲ್ಲಿರುವ ಇಡಿ ಕಚೇರಿಗೆ ಹಾಜರಾದ ನಟ ಪ್ರಕಾಶ್ ರಾಜ್‌ಗೆ ಇಡಿ ಫುಲ್ ಗ್ರಿಲ್ ನಡೆಸಿತು ಎಂದು ಮೂಲಗಳು ತಿಳಿಸಿವೆ. ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ್ದಾರೆಂದು ಪ್ರಕಾಶ್ ರಾಜ್‌ಗೆ ಇಡಿ ಸಮನ್ಸ್ ನೀಡಿತ್ತು. ಇದನ್ನೂ ಓದಿ: ಮತಾಂತರ ಕೇಸ್;‌ ಬಂಧಿತ ಕೇರಳ ಸನ್ಯಾಸಿನಿಯರಿಗೆ ಜಾಮೀನು ನೀಡಲ್ಲ ಎಂದ ಕೋರ್ಟ್‌

    ಪ್ರಕಾಶ್ ರಾಜ್ ಜೊತೆಗೆ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಮತ್ತು ಲಕ್ಷ್ಮಿ ಮಂಚು ಅವರಿಗೂ ಇ.ಡಿ ವಿಚಾರಣೆಗೆ ಸಮನ್ಸ್ ನೀಡಿತ್ತು. ಆಗಸ್ಟ್ 6 ರಂದು ವಿಜಯ್ ದೇವರಕೊಂಡ, ಆಗಸ್ಟ್ 13 ರಂದು ಲಕ್ಷ್ಮಿ ಮಂಚು ವಿಚಾರಣೆಗೆ ಹಾಜರಾಗುವಂತೆ ಇಡಿ ತಿಳಿಸಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬುದ್ಧಿ ಹೇಳಲು ದರ್ಶನ್‌ಗೆ ಹೇಳ್ತೀನಿ: ದರ್ಶನ್ ಪುಟ್ಟಣ್ಣಯ್ಯ

    ಏನಿದು ಪ್ರಕರಣ?
    ಬೆಟ್ಟಿಂಗ್ ಆ್ಯಪ್ ಹಗರಣ (Betting App Scam) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್, ಬಹುಭಾಷಾ ನಟ ಪ್ರಕಾಶ್ ರಾಜ್, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

  • ಬೆಟ್ಟಿಂಗ್‌ ಆ್ಯಪ್‌ ಕೇಸ್‌; ನಟ ಪ್ರಕಾಶ್‌ ರಾಜ್‌ ಸೇರಿ ನಾಲ್ವರಿಗೆ ಇ.ಡಿ ಸಮನ್ಸ್‌

    ಬೆಟ್ಟಿಂಗ್‌ ಆ್ಯಪ್‌ ಕೇಸ್‌; ನಟ ಪ್ರಕಾಶ್‌ ರಾಜ್‌ ಸೇರಿ ನಾಲ್ವರಿಗೆ ಇ.ಡಿ ಸಮನ್ಸ್‌

    ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು (Illegal Betting Apps) ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್‌ ರಾಜ್‌ (Prakash Raj) ಸೇರಿದಂತೆ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್‌ ನೀಡಿದೆ.

    ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಕೊಟ್ಟಿದೆ. ಇದನ್ನೂ ಓದಿ: GST ನೋಟಿಸ್; ರಾಜ್ಯ ದಿವಾಳಿಯಾದಾಗ, ಬೇಕರಿ ಎಟಿಎಂ ಆಗುತ್ತದೆ- ನಿಖಿಲ್ ಕುಮಾರಸ್ವಾಮಿ

    ಜು.23 ರಂದು ರಾಣಾ ದಗ್ಗುಬಾಟಿ, ಜು.30 ರಂದು ಪ್ರಕಾಶ್ ರಾಜ್ ಹಾಜರಾಗುವಂತೆ ಸೂಚಿಸಲಾಗಿದೆ. ಆ.6 ರಂದು ವಿಜಯ್ ದೇವರಕೊಂಡ ಅವರನ್ನು ವಿಚಾರಣೆಗೆ ಹಾಜರುಪಡಿಸಲಾಗಿದ್ದು, ಆ.13 ರಂದು ಲಕ್ಷ್ಮಿ ಮಂಚು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

    ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಾಜ್ಯ ಪೊಲೀಸರು ದಾಖಲಿಸಿರುವ ಕನಿಷ್ಠ ಐದು ಎಫ್‌ಐಆರ್‌ಗಳ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾಳೆ ದರ್ಶನ್‌ ಪಾಲಿಗೆ ಬಿಗ್‌ ಡೇ – ಸುಪ್ರೀಂ ಕೋರ್ಟ್‌ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?

    ಅನಧಿಕೃತ ಜೂಜಾಟ ಕಾರ್ಯಾಚರಣೆಗಳ ಮೂಲಕ ಕೋಟ್ಯಂತರ ರೂ. ಅಕ್ರಮ ಆದಾಯವನ್ನು ಗಳಿಸುತ್ತಿರುವ ಆರೋಪ ಹೊತ್ತಿರುವ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಟಾರ್ಗೆಟ್‌ ಮಾಡಲಾಗಿದೆ.

    ಇಡಿ ಪ್ರಕರಣದಲ್ಲಿ ಒಟ್ಟು 29 ಸೆಲೆಬ್ರಿಟಿಗಳನ್ನು ಹೆಸರಿಸಲಾಗಿದೆ. ಅವರಲ್ಲಿ ಚಲನಚಿತ್ರ ವ್ಯಕ್ತಿಗಳಾದ ನಿಧಿ ಅಗರ್ವಾಲ್, ಪ್ರಣೀತಾ ಸುಭಾಷ್, ಅನನ್ಯಾ ನಾಗಲ್ಲ ಮತ್ತು ಟಿವಿ ನಿರೂಪಕಿ ಶ್ರೀಮುಖಿ ಸೇರಿದಂತೆ ಪ್ರಭಾವಿಗಳೂ ಇದ್ದಾರೆ.

  • ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

    ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

    ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣ (Betting App Scam) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ.

    ನಟ, ನಟಿಯರ ಜೊತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯನ್ಸರ್, ಯುಟ್ಯೂಬರ್‌ಗಳ ವಿರುದ್ಧವೂ ಇಡಿ ಗುರುವಾರ ಪ್ರಕರಣ ದಾಖಲಿಸಿದೆ.

    5 ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಇದರಲ್ಲಿ ಆರೋಪಿತರು ಬೆಟ್ಟಿಂಗ್ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ಪಾತ್ರ ಬರೀ 15 ನಿಮಿಷ?

    ಎಫ್‌ಐಆರ್‌ ದಾಖಲಾದ ಸೆಲಬ್ರಿಟಿಗಳ ಪಟ್ಟಿ
    ED ದಾಖಲಿಸಿಕೊಂಡಿರುವ ದೂರಿನಲ್ಲಿ ಮೂವರು ಸ್ಟಾರ್‌ ನಟರೊಂದಿಗೆ 29 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣಿತಾ ಸುಭಾಷ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತ್, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಭಯ್ಯಾ ಸನ್ನಿ ಯಾದವ್, ಶ್ಯಾಮಲಾ, ಟೇಸ್ಟಿ ತೇಜಾ, ರೀತು ಚೌಧರಿ, ಬಂದಾರು ಶೇಷಾಯನಿ ಸುಪ್ರೀತ, ಬೆಟ್ಟಿಂಗ್ ವೇದಿಕೆಗಳ ನಿರ್ವಾಹಕರು, ಕಿರಣ್ ಗೌಡ್, ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಜಯ್, ಸನ್ನಿ ಮತ್ತು ಸುಧೀರ್‌ ಹಾಗೂ ‘ಲೋಕಲ್ ಬಾಯ್ ನಾನಿ’ ಯೂಟ್ಯೂಬ್ ಚಾನೆಲ್‌ ವಿರುದ್ಧ ಕೇಸ್‌ ದಾಖಲಾಗಿದೆ.

    ಈ ಸೆಲೆಬ್ರಿಟಿಗಳು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ಜಂಗಲ್ ರಮ್ಮಿ, ಜೀತ್‌ವಿನ್, ಲೋಟಸ್‌-365 ಸೇರಿದಂತೆ ಹಲವು ಆ್ಯಪ್‌ಗಳ ಪರ ಪ್ರಚಾರ ನಡೆಸಿದ್ದರು. ಇದಕ್ಕಾಗಿ ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಹೊಂಬಾಳೆ ಫಿಲಂಸ್ ಪ್ರಸ್ತುತಿ: ಮಹಾವತಾರ್ ನರಸಿಂಹ ಟ್ರೈಲರ್ ರಿಲೀಸ್

    ಈ ಪ್ರಕರಣ ಕುರಿತು ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಇನ್ನೂ ಕೆಲ ಎಫ್‌ಐಆರ್‌ಗಳನ್ನು ED ಕಲೆಹಾಕುತ್ತಿದ್ದು, ಶೀಘ್ರದಲ್ಲಿ ಇವರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಆ್ಯಪ್‌ಗಳು ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕಲೆ ಹಾಕಲಾಗುತ್ತಿದೆ ಎಂದು ಇಡಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.  ಇದನ್ನೂ ಓದಿ: ಹೊಸ ಗೆಟಪ್‌ನಲ್ಲಿ ಶಿವಣ್ಣನ ಫಸ್ಟ್ ಲುಕ್ ರಿಲೀಸ್

  • ಬಹುಭಾಷಾ ನಟ ಪ್ರಕಾಶ್ ರಾಜ್ ಗುಜರಾತ್‌ನಲ್ಲೂ ಹೋರಾಟ ಮಾಡಲಿ – ಎಂಬಿಪಿ ತಿರುಗೇಟು

    ಬಹುಭಾಷಾ ನಟ ಪ್ರಕಾಶ್ ರಾಜ್ ಗುಜರಾತ್‌ನಲ್ಲೂ ಹೋರಾಟ ಮಾಡಲಿ – ಎಂಬಿಪಿ ತಿರುಗೇಟು

    ಬೆಂಗಳೂರು: ಪ್ರಕಾಶ್ ರಾಜ್ ಬಹುಭಾಷಾ ನಟರಲ್ವಾ? ಕರ್ನಾಟಕದಲ್ಲಿ (Karnataka) ಮಾತ್ರವಲ್ಲ, ಗುಜರಾತ್‌ನಲ್ಲೂ (Gujarat) ಹೋರಾಟ ಮಾಡಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಮಕ್ಮಲ್ ಟೋಪಿ ಹಾಕಿದೆ: ರೇಣುಕಾಚಾರ್ಯ

    ದೇವನಹಳ್ಳಿ ಕೃಷಿ ಭೂಮಿ ಸ್ವಾಧೀನಕ್ಕೆ ಪ್ರಕಾಶ್ ರಾಜ್ (Prakash Raj) ವಿರೋಧ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರಕಾಶ್ ರಾಜ್ ಹೋರಾಟ ಯಾಕೆ? ಅವರು ಬಹುಭಾಷಾ ನಟರಲ್ವಾ? ಕರ್ನಾಟಕದಲ್ಲಿ ಮಾತ್ರವಲ್ಲ, ಯುಪಿ, ಅಸ್ಸಾಂನಲ್ಲೂ ಹೋರಾಟ ಮಾಡಲಿ, ಅಷ್ಟೇ ಯಾಕೆ ಗುಜರಾತ್‌ನಲ್ಲೂ ಹೋರಾಟ ಮಾಡಲಿ ಎಂದು ತಿರುಗೇಟು ನೀಡಿದರು.

    ಕೆಐಎಡಿಬಿ (KIADB) ಭೂಸ್ವಾಧೀನ ಫೈನಲ್ ನೋಟಿಫಿಕೇಷನ್ ಆಗಿದೆ. ಈಗ ಡಿನೋಟಿಫಿಕೇಷನ್ ಮಾಡಬೇಕಾಗುತ್ತದೆ. ಅದಕ್ಕಾಗಿ ಒಂದಿಷ್ಟು ಕಾನೂನು ತೊಡಕುಗಳೂ ಕೂಡ ಇವೆ. ಅವುಗಳ ಬಗ್ಗೆ ಅಡ್ವೋಕೇಟ್ ಜನರಲ್ ಹತ್ತಿರ ಚರ್ಚೆ ಮಾಡುತ್ತೇವೆ. ಕಾನೂನಾತ್ಮಕ ಅಂಶಗಳ ಬಗ್ಗೆ ಈಗ ಹೇಳುವುದಿಲ್ಲ. ಸರ್ಕಾರಕ್ಕೆ ನಷ್ಟ ಆಗುತ್ತಾ ಎನ್ನುವ ಬಗ್ಗೆ ಹೇಳಲು ಹೋಗುವುದಿಲ್ಲ. ಆದರೆ ಯಾರಿಗೂ ಕೂಡ ಅನ್ಯಾಯ ಆಗದ ತರಹ ನೋಡಿಕೊಳ್ಳುವಂತೆ ಸಿಎಂ ಹಾಗೂ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್‌ ಆದೇಶ

  • ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ?- ಪ್ರಕಾಶ್ ರಾಜ್ ಕೆಂಡ

    ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ?- ಪ್ರಕಾಶ್ ರಾಜ್ ಕೆಂಡ

    ಪಾಕ್ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ (Abir Gulaal) ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ ಎಂದು ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ (Prakash Raj) ಕಿಡಿಕಾರಿದ್ದಾರೆ. ಇದನ್ನೂ ಓದಿ:ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?

    ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದಾರೆ. ಈ ಹಿನ್ನೆಲೆ ಪಾಕ್ ಕಲಾವಿದರಿಗೆ ಭಾರತೀಯ ಸಿನಿಮಾಗಳಲ್ಲಿ ನಟಿಸದಂತೆ ನಿಷೇಧಿಸಲಾಗಿದೆ ಅಷ್ಟೇ ಅಲ್ಲದೇ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ:ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?

    ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್ ಮಾತನಾಡಿ, ಯಾವುದೇ ಪ್ರಚಾರದ ಸಿನಿಮಾ ಆಗಿದ್ದರೂ ಯಾವುದೇ ಸಿನಿಮಾವನ್ನು ನಿಷೇಧಿಸುವುದನ್ನು ನಾನು ವಿರೋಧಿಸುತ್ತೇನೆ. ನಿಷೇಧಿಸುವ ಬಗ್ಗೆ ಜನರೇ ನಿರ್ಧರಿಸಲಿ. ನೀಲಿಚಿತ್ರ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಸಿನಿಮಾ ಅಲ್ಲ ಅಂದ್ಮೇಲೆ ನೀವು ಯಾವುದೇ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ನಟ ಕೆಂಡಕಾರಿದ್ದಾರೆ.

    ‘ಅಬೀರ್ ಗುಲಾಲ್’ ಮೇ 9ಕ್ಕೆ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕೀಗ ಭಾರತದಲ್ಲಿ ಬ್ರೇಕ್ ಬಿದ್ದಿದೆ. ಫವಾದ್ ಖಾನ್‌ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ವಾಣಿ ಕಪೂರ್ ನಟಿಸಿದ್ದರು.

  • ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

    ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

    ಹೈದರಾಬಾದ್‌: ಬೆಟ್ಟಿಂಗ್‌ ಅಪ್ಲಿಕೇಶನ್‌ (Betting Application) ಪ್ರಚಾರ ಮಾಡಿದ್ದಕ್ಕೆ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್‌ ರಾಜ್‌ ಸೇರಿದಂತೆ ಟಾಲಿವುಡ್ 25 ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

    ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮಿಯಾಪುರ್ ಪೊಲೀಸರು ಟಾಲಿವುಡ್ ನಟರು ಮತ್ತು ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯನ್ಸ್‌ರ್‌ಗಳ ಮೇಲೆ ಕೇಸ್‌ ದಾಖಲಿಸಿದ್ದಾರೆ.

    ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ , ಅನನ್ಯಾ, ಶ್ರೀಮುಖಿ, ಸಿರಿ ಹನುಮಂತು, ಶ್ಯಾಮಲಾ, ವರ್ಷಿಣಿ, ಶೋಭಾ, ನೇಹಾ, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಸನ್ನಿ ಯಾದವ್, ಟೇಸ್ಟಿ ತೇಜಾ ಮತ್ತು ರಿತು ಸೇರಿದಂತೆ ಹಲವರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಈ ಪ್ರಸಿದ್ಧ ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಉದ್ದೇಶಪೂರ್ವಕವಾಗಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇವರ ಪ್ರಚಾರ ಮಡುವ ಮೂಲಕ ಯುವ ಜನರ ಮನಸ್ಸು ಹಾಳಾಗುತ್ತಿದೆ. ಇದರಿಂದ ಅನೇಕ ಮನೆಗಳಲ್ಲಿ ಆರ್ಥಿಕ ತೊಂದರೆಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಹಾಕಿ ಯುವ ಜನತೆ ನಷ್ಟಕ್ಕೆ ತುತ್ತಾಗಿದ್ದಾರೆ. ಈ ಆಪ್‌ನಲ್ಲಿ ಹಣ ಕಳೆದುಕೊಂಡು ಹಲವು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ತೆಲಂಗಾಣ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಇದರ ಹೊರತಾಗಿಯೂ ಬೆಟ್ಟಿಂ ಗ್ಆಪ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

  • ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಮುಂದೆ ಸೋಲುತ್ತೆ – ಪ್ರಕಾಶ್‌ ರಾಜ್‌

    ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಮುಂದೆ ಸೋಲುತ್ತೆ – ಪ್ರಕಾಶ್‌ ರಾಜ್‌

    – ಲಾಸ್‌ ಆಗಿದೆ ಅನ್ನೋದಕ್ಕೆ ಬಿಸಿನೆಸ್‌ ಮಾಡ್ತಿದ್ದೀರಾ? – ರಾಜ್ಯ ಸರ್ಕಾರಕ್ಕೆ ನಟ ಫುಲ್‌ ಕ್ಲಾಸ್‌

    ಮಂಗಳೂರು: ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್‌ (Congress) ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ ಎಂದು ನಟ ಪ್ರಕಾಶ್‌ ರಾಜ್‌ (Prakash Raj) ಭವಿಷ್ಯ ನುಡಿದಿದ್ದಾರೆ.

    ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಅಭಾವ ವಿಚಾರಕ್ಕೆ ಪ್ರತಿಕ್ರಿಯಿಸಿ ಮಂಗಳೂರಿನಲ್ಲಿ (Mangaluru) ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ನಾವು ಮೊದಲು ಯೋಚನೆ ಮಾಡಬೇಕು. ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್‌ ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ. ಲಾಸ್‌ ಆಗಿದೆ, ಹಣ ಹೊಂದಿಸಲುಆಗುತ್ತಿಲ್ಲ ಅನ್ನೋದಕ್ಕೆ ಏನ್‌ ಬಿಸಿನೆಸ್‌ ಮಾಡ್ತಿದ್ದೀರಾ? ಇದೆಲ್ಲವನ್ನ ಜನ ಗಮನಿಸಬೇಕು, ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದರು.

    ಒಂದು ಸರ್ಕಾರ ಒಂದು ದೇಶ ನಡೆಯೋದು ಪ್ರಜೆಗಳ ದುಡ್ಡಿಂದ. ಒಂದು ದೇವಸ್ಥಾನ ನಡೆಯೋದು ಪ್ರಜೆಗಳು ಹಾಕಿದ ಹುಂಡಿಯ ಹಣದಿಂದ. ಸರ್ಕಾರದಲ್ಲಿ ಯಾಕೆ ಸಾಲ ಆಗ್ತಿದೆ? ಸಾಲ ಮಾಡಿದ ಹಣ ಏನಾಗ್ತಿದೆ ಇದೆಲ್ಲವನ್ನ ನಾವು ಗಮನಿಸಬೇಕು, ಪ್ರಶ್ನಿಸಬೇಕು ಎಂದು ಹೇಳಿದರು.

    ಇನ್ನೂ ಉಚಿತ ಭರವಸೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್‌ ಉಚಿತ ಭರವಸೆಗಳು ಪರಾವಲಂಬಿ ವರ್ಗವನ್ನಾಗಿ ಮಾಡುತ್ತೆ ಅಂದಿದೆ. ಬಡವರಿಗೆ ಕೊಡುವ ಫ್ರೀಬಿಸ್‌ ಹೇಗೆ ಪರಾವಲಂಬಿ ಆಗುತ್ತೆ? ಹಾಗಾದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡೋದು ಪರಾವಲಂಬಿ ಅಲ್ವಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

    ಆದ್ದರಿಂದ ಆ ಪಕ್ಷ ಈ ಪಕ್ಷ ಅನ್ನೋದನ್ನ ನೋಡದೆ ನಮ್ಮ ಹಣವನ್ನ ಸರ್ಕಾರಗಳು ಹೇಗೆ ಉಪಯೋಗಿಸುತ್ತಿವೆ? ಎಲ್ಲವನ್ನ ಪ್ರಶ್ನೆ ಮಾಡಬೇಕು. ಧರ್ಮದ ಹಿಂದೆ, ಒಂದು ಬಣ್ಣದ ಹಿಂದೆ ಹೋಗದೇ ಸರ್ಕಾರಗಳನ್ನ ಪ್ರಶ್ನಿಸಬೇಕು. ಏಕೆಂದರೆ ಗೆದ್ದ ತಕ್ಷಣ ಅವರೇನು ಮಹಾರಾಜರಲ್ಲ.. ಪ್ರಜಾ ಸೇವಕರೇ ಎಂದು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: Haveri | ಸತ್ತು ಬದುಕಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

  • ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ಮಂಗಳೂರು: ಧಾರ್ಮಿಕ ವಿಚಾರದಲ್ಲಿ, ಪೂಜೆ, ಪುಣ್ಯಸ್ನಾನ ಆಚರಣೆಗಳಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ ಎಂದು ನಟ ಪ್ರಕಾಶ್‌ ರಾಜ್‌ (Prakash Raj) ಹೇಳಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ (Maha Kumbha Mela) ತಮ್ಮ ಎಐ ಭಾವಚಿತ್ರ ವೈರಲ್‌ ಆದ ಬಗ್ಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸ್ವಗ್ರಾಮದ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಚುನಾವಣೆಯಲ್ಲಿ ಡಿಕೆಶಿ ಮತದಾನ

    ಮಹಾ ಕುಂಭಮೇಳಕ್ಕೆ ಹೋಗಲು ನನ್ನ ಕೆಲವು ಗೆಳೆಯರು ಪರ್ಮಿಷನ್‌ ಕೊಡಿಸಿ ಅಂತ ಕೇಳೋದಕ್ಕೆ ಕಾಲ್‌ ಮಾಡ್ತಾರೆ. ನಾನು ಧರ್ಮ ವಿರೋಧಿ ಅಲ್ಲ, ಏಕೆಂದರೆ ಅದು ಅವರವರ ನಂಬಿಕೆ. ಅದರಲ್ಲಿ ನಂಬಿಕೆ ಇಲ್ಲದಿರಬಹುದು, ಸೌಹಾರ್ದತೆಗೆ ಬೆಲೆ ಕೊಡೋನು ನಾನು. ಆದ್ರೆ ಧಾರ್ಮಿಕ ವಿಚಾರದಲ್ಲೂ, ಪೂಜೆ, ಪುಣ್ಯಸ್ನಾನ ಇಂತಹ ಆಚರಣೆಗಳಲ್ಲೂ ರಾಜಕಾರಣ ಎಳೆದುತರುವವರು ನಿಜವಾದ ಹಿಂದೂಗಳಲ್ಲ ಎಂದು ನುಡಿದರು.

    ಒಬ್ಬ ವ್ಯಕ್ತಿ ಸರ್ಕಾರವನ್ನ ಪ್ರಶ್ನಿಸಿದ್ರೆ ಅವನ ಬಗ್ಗೆ ವಾಟ್ಸಪ್‌ ಯೂನಿವರ್ಸಿಟಿಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತದೆ. ಅಂತಹದ್ದೆಲ್ಲವನ್ನ ಪ್ರಶಾಂತ್ ಸಂಬರಗಿ‌ ಅಂತವರು ಮಾಡುತ್ತಿದ್ದಾರೆ. ಅವರ ಮೇಲೆ ಈಗಾಗಲೇ ಕೇಸ್‌ ಫೈಲ್‌ ಮಾಡಿದ್ದೇವೆ. AI ನಂತಹ ಅದ್ಭುತ ತಂತ್ರಜ್ಞಾನವನ್ನ ಮಾನವ ವಿಕಾಸಕ್ಕೆ ಬಳಸಬೇಕು, ಆದ್ರೆ ಇಂತಹ ಕೆಲಸಗಳಿಗೆ ಬಳಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಸೂರು: ನಟ ಧನಂಜಯ್‌, ಡಾಕ್ಟರ್‌ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು