Tag: ಪ್ರಕಾಶ್ ಜಾವೇಡ್ಕರ್

  • ಕಾರ್ಮಿಕರ ವಿಚಾರದಲ್ಲಿ ಕೇಂದ್ರದ ಜೊತೆ ರಾಜ್ಯ ಸಮನ್ವಯತೆ ಸಾಧಿಸುತ್ತಿಲ್ಲ: ಜಾವೇಡ್ಕರ್

    ಕಾರ್ಮಿಕರ ವಿಚಾರದಲ್ಲಿ ಕೇಂದ್ರದ ಜೊತೆ ರಾಜ್ಯ ಸಮನ್ವಯತೆ ಸಾಧಿಸುತ್ತಿಲ್ಲ: ಜಾವೇಡ್ಕರ್

    ನವದೆಹಲಿ: ಲಾಕ್‍ಡೌನ್ ನಡುವೆ ಪ್ರವಾಸಿ ಕಾರ್ಮಿಕರ ಸಂಕಷ್ಟ ಬಗೆಹರಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಆರೋಪಿಸಿದ್ದಾರೆ.

    ಪ್ರವಾಸಿ ಕಾರ್ಮಿಕರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಕಾರ್ಮಿಕರ ನೆರವಿಗೆ ನಿಂತಿದೆ. ಆದರೆ ರಾಜ್ಯ ಸರ್ಕಾರಗಳಿಂದ ಸೂಕ್ತ ಪ್ರತಿಕ್ರಿಯೆ ಬರುತ್ತಿಲ್ಲ ಎಂದಿದ್ದಾರೆ.

    ಪಶ್ಚಿಮ ಬಂಗಾಳಕ್ಕೆ ನಾವು 105 ರೈಲುಗಳನ್ನು ಬಿಡಲು ಸಿದ್ಧವಿದ್ದೇವೆ. ಆದರೆ ಮಮತಾ ಬ್ಯಾನರ್ಜಿಯವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಮಹಾರಾಷ್ಟ್ರ, ಜಾರ್ಖಂಡ್, ಪಂಜಾಬ್, ಛತ್ತೀಸ್‍ಗಢನಂತಹ ರಾಜ್ಯಗಳು ಕೂಡ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ ಎಂದು ಜಾವೇಡ್ಕರ್ ಆರೋಪಿಸಿದ್ದಾರೆ.

    ಕಾಂಗ್ರೆಸ್ ಅಧಿಕಾರದಲ್ಲಿಲ್ಲ ಎನ್ನುವ ದುಃಖವಿದೆ. ಅದು ಮೋದಿ ಸರ್ಕಾರವನ್ನು ನಂಬುವುದಿಲ್ಲ, ಹೀಗಾಗಿ ಆರೋಪ ಮಾಡುತ್ತಾರೆ. ಪರಿಹಾರ ಕಾರ್ಯಗಳು ರಾಜ್ಯ ಸರ್ಕಾರದ ನೆಲಗಳ ಮೇಲೆ ಮಾಡಬೇಕಾದ ಕಾರಣ ಹೆಚ್ಚು ಕೇಂದ್ರ ರಾಜ್ಯ ಸರ್ಕಾರಗಳ ಮೇಲೆ ಅವಲಂಬಿತವಾಗಿರುತ್ತದೆ ಇಲ್ಲಿ ಸಮನ್ವಯ ಮುಖ್ಯ ಎಂದರು.

    ಜನರು ಈಗ ವೈರಸ್‍ನೊಂದಿಗೆ ಬದುಕಲು ಪ್ರಾರಂಭಿಸಬೇಕು. ಅವರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆರ್ಥಿಕ ಚಟುವಟಿಕೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿ ಎಂದು ನಾನು ಆಶಿಸುತ್ತೇನೆ. ಕೆಂಪು ವಲಯಗಳಲ್ಲಿ ಕೆಲವು ನಿರ್ಬಂಧಗಳಿವೆ. ಆದರೆ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗಿವೆ. ಆತ್ಮನಿರ್ಭಾರ ಭಾರತ್ ಮಹಾತ್ಮ ಗಾಂಧಿಯವರ ವಿಚಾರಗಳಿಗೆ ಅನುಗುಣವಾಗಿದೆ. ಆದರೆ ಸ್ವಾವಲಂಬಿಗಳಾಗುವುದಿಲ್ಲ, ಪ್ರಪಂಚದೊಂದಿಗೆ ಸಂಬಂಧವನ್ನು ಕಡಿತಗೊಳಿಸುವುದು ಎಂದರ್ಥವಲ್ಲ ಎಂದು ಹೇಳಿದರು.

  • ಯಾರೇ ಏನೇ ಹೇಳಿದ್ರೂ ಸರ್ಕಾರ ರಚನೆ ಮಾಡೋದು ನಾವೇ: ಜಾವಡೇಕರ್ ತಿರುಗೇಟು

    ಯಾರೇ ಏನೇ ಹೇಳಿದ್ರೂ ಸರ್ಕಾರ ರಚನೆ ಮಾಡೋದು ನಾವೇ: ಜಾವಡೇಕರ್ ತಿರುಗೇಟು

    ಬೆಂಗಳೂರು: ಎರಡು ಪಕ್ಷಗಳು ಸುಪ್ರೀಂ ಕೋರ್ಟ್ ಗೆ ಹೋದರೆ ಹೋಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಈ ಹಕ್ಕು ಇರಬಹುದು. ಆದರೆ, ಸರ್ಕಾರವನ್ನು ರಚನೆ ಮಾಡವವರು ನಾವೇ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡೆ ಅವರ ಶಾಸಕರಲ್ಲಿ ಅಸಮಾಧಾನ ಹುಟ್ಟಿಸಿದೆ. ಹೀಗಾಗಿ, ಅವರು ಶಾಸಕಾಂಗ ಸಭೆಗೆ ಹಾಜರಾಗಿಲ್ಲ. ಇದರಿಂದಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಈಗ ಡಿಸ್ಟರ್ಬ್ ಆಗಿದ್ದಾರೆ. ಇದನ್ನ ಅರಿಯದೇ ಬಿಜೆಪಿಯನ್ನು ದೂರುವುದು ಸರಿಯಲ್ಲ ಎಂದರು.

    ನಾವು ಹೆಚ್ಚು ಕ್ಷೇತ್ರದಲ್ಲಿ ಜಯ ಗಳಿಸಿದ್ದೇವೆ. ಸರ್ಕಾರ ರಚನೆ ನಮ್ಮ ಸಂವಿಧಾನಾತ್ಮಕ ಹಕ್ಕು. ನಮ್ಮ ಮನವಿಯನ್ನು ರಾಜ್ಯಪಾಲರು ಮಾನ್ಯ ಮಾಡುತ್ತಾರೆ ಎನ್ನುವ ವಿಶ್ವಾಸ ನಮಗಿದೆ. ಶಾಸಕರ ಕುದುರೆ ವ್ಯಾಪಾರ ಸಂಸ್ಕೃತಿಯನ್ನು ಬಿಜೆಪಿ ಮಾಡುವುದಿಲ್ಲ. ಈಗಾಗಲೇ ಕಾಂಗ್ರೆಸ್ ಶಾಸಕರಲ್ಲಿಯೇ ಒಡಕು ಉಂಟಾಗಿದೆ ಇದನ್ನ ಅವರು ಅರಿಯಲಿ ಎಂದು ಜಾಡವೇಕರ್ ತಿರುಗೇಟು ನೀಡಿದರು.