Tag: ಪ್ರಕರಣ ತನಿಖಾ ಹಂತದಲ್ಲಿದೆ ಸಿನಿಮಾ

  • 95 ನಿಮಿಷಗಳ ಥ್ರಿಲ್ಲರ್ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ಈ ವಾರ ತೆರೆಗೆ!

    95 ನಿಮಿಷಗಳ ಥ್ರಿಲ್ಲರ್ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ಈ ವಾರ ತೆರೆಗೆ!

    ಶೀರ್ಷಿಕೆಯ ಕಾರಣದಿಂದ ಆರಂಭಿಕವಾಗಿ ಗಮನ ಸೆಳೆದಿದ್ದ ಚಿತ್ರ ‘ಪ್ರಕರಣ ತನಿಖಾ ಹಂತದಲ್ಲಿದೆ’. ಸುಂದರ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕವೇ ಭಿನ್ನ ಕಥೆಯ ಸುಳಿವು ಬಿಟ್ಟು ಕೊಟ್ಟಿದ್ದ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಈ ವಾರ ಅಂದರೆ, ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಒಟ್ಟಾರೆ ಕಥೆಯ ಬಗ್ಗೆ ಒಂದು ಕಲ್ಪನೆ ಮೂಡಿಸಿಕೊಂಡಿದ್ದ ಪ್ರೇಕ್ಷಕರನ್ನೆಲ್ಲ ಟ್ರೈಲರ್ ಅಚ್ಚರಿಗೀಡುಮಾಡಿತ್ತು. ಹಾಗೆ ಮೂಡಿಕೊಂಡಿದ್ದ ನಿರೀಕ್ಷೆಗಳ ನಡುವೆ ಈ 95 ನಿಮಿಷಗಳ ವಿಶಿಷ್ಟ ಥ್ರಿಲ್ಲರ್ ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದನ್ನೂ ಓದಿ:ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದರು ಸುದೀಪ್!

    ವಿಶೇಷವೆಂದರೆ, ರಂಗಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಪಳಗಿಕೊಂಡಿದ್ದವರೆಲ್ಲ ಸೇರಿ ಈ ಚಿತ್ರವನ್ನು ರೂಪಿಸಿದ್ದಾರೆ. ರಂಗಭೂಮಿಯ ವಾತಾವರಣದಲ್ಲಿಯೇ ಜೀವ ಪಡೆದಿದ್ದ ಈ ಚಿತ್ರವನ್ನು ಚಿಂತನ್ ಕಂಬಣ್ಣ ನಿರ್ಮಾಣ ಮಾಡಿದ್ದಾರೆ. ಹೊಸತೇನನ್ನೋ ಸೃಷ್ಟಿಸಬೇಕೆಂಬ ತುಡಿತದೊಂದಿಗೆ ತಯಾರಾಗಿರುವ ಈ ಚಿತ್ರ ಈಗಾಗಲೇ ಟೈಟಲ್ ಟ್ರ‍್ಯಾಕ್, ಪೋಸ್ಟರ್, ಟ್ರೈಲರ್ ಮುಂತಾದವುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಶೀರ್ಷಿಕೆಯೇ ಇದೊಂದು ಕ್ರೈಂ ಜಾನರಿನ ಚಿತ್ರವೆಂಬಂತೆ ಸೂಚಿಸುವುದು ಸತ್ಯ. ಆದರೆ, ಅದೆಲ್ಲದರಾಚೆಗಿನ ಬೆರಗುಗಳನ್ನು 95 ನಿಮಿಷಗಳ ಈ ಥ್ರಿಲ್ಲರ್ ಸಿನಿಮಾ ಬಚ್ಚಿಟ್ಟುಕೊಂಡಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.

    ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಮಹೀನ್ ಕುಬೇರ್ (Maheen Kuber) ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್.ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಮುಂತಾದವರ ತಾರಾಗಣವಿದೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ ಛಾಯಾಗ್ರಹಣ, ಶಿವೋಂ ಸಂಗೀತ ನಿರ್ದೇಶನ ಮತ್ತು ನಾನಿಕೃಷ್ಣ ಸಂಕಲನ ಈ ಚಿತ್ರಕ್ಕಿದೆ. ವಿ ಎಫ್ ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ನಿಭಾಯಿಸಿದ್ದಾರೆ. ಬೆಂಗಳೂರು, ಕನಕಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ಪ್ರಕರಣ ತನಿಖಾ ಹಂತದಲ್ಲಿದೆ’ (Prakarana Tanika Hantadallide) ಈ ವಾರವೇ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.

  • ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

    ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

    ಶೀರ್ಷಿಕೆಯ ಮೂಲಕವೇ ಆರಂಭಿಕವಾಗಿ ಗಮನ ಸೆಳೆದಿದ್ದ ಚಿತ್ರ `ಪ್ರಕರಣ ತನಿಖಾ ಹಂತದಲ್ಲಿದೆ’ (PRAKARANA TANIKHA HANTADALLIDE). ಈಗಾಗಲೇ ಮೋಷನ್ ಪೋಸ್ಟರ್, ಪೋಸ್ಟರ್, ಟೈಟಲ್ ಟ್ರ್ಯಾಕ್ ಸೇರಿದಂತೆ ಒಂದಷ್ಟು ವಿಚಾರಗಳ ಮೂಲಕ ಈ ಚಿತ್ರದ ಟ್ರೈಲರ್ (Trailer) ಇದೀಗ ಬಿಡುಗಡೆಗೊಂಡಿದೆ. ಅಚ್ಚುಕಟ್ಟಾದ ಪತ್ರಿಕಾ ಗೋಷ್ಠಿಯ ಮೂಲಕ ಅನಾವರಣಗೊಂಡ ಟ್ರೈಲರ್ ಆರಂಭಿಕವಾಗಿಯೇ ಮೆಚ್ಚುಗೆ ಪಡೆದುಕೊಂಡಿದೆ. ಒಂದಿಒಡೀ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿದ್ದು, ಸಿನಿಮಾದ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಆದ ಮಾಹಿತಿಗಳನ್ನು ಹಂಚಿಕೊಂಡಿದೆ. ಇದರೊಂದಿಗೆ ತನಿಖಾ ಹಂತದಲ್ಲಿರುವ ಪ್ರಕರಣದ ಆಂತರ್ಯದ ಅಂದಾಜೊಂದು ಪ್ರೇಕ್ಷಕರತ್ತ ದಾಟಿಕೊಂಡಿದೆ. ಅಕ್ಟೊಬರ್ 18ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ.

    ನಿರ್ಮಾಪಕ ಚಿಂತನ್ ಕಂಬಣ್ಣ ಅವರ ತಂದೆ ಡಾ. ಶಿವಣ್ಣ .ಕೆ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ವಿಶೇಷವೆಂದರೆ, ಶಿವಣ್ಣ ಈ ಚಿತ್ರದ ಟೈಟಲ್ ಟ್ರ್ಯಾಕಿಗೆ ಸಾಹಿತ್ಯ ಬರೆದಿದ್ದಾರೆ. ಅದು ಈಗಾಗಲೇ ಬಿಡುಗಡೆಗೊಂದು ಪ್ರೇಕ್ಷಕರನ್ನು ಸೆಳೆದಿದೆ. ಈ ಕಥೆ ತಮ್ಮನ್ನು ಸೆಳೆದ ಬಗ್ಗೆ, ಅದಕ್ಕೆ ಸಾಹಿತ್ಯ ಬರೆದ ಹಿನ್ನೆಲೆಯ ಬಗ್ಗೆ ಒಂದಷ್ಟು ವಿವರಗಳನ್ನು ಶಿವಣ್ಣನವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಆ ಬಳಿಕ ನಿರ್ಮಾಪಕ ಚಿಂತನ್ ಕಂಬಣ್ಣ ತಾವು ಈ ಚಿತ್ರದ ಭಾಗವಾದ ಬಗ್ಗೆ ಮಾತಾಡಿದ್ದಾರೆ. ಚಿಂತನ್ ನಟನೆಯತ್ತ ಆಕರ್ಷಿತರಾಗಿ ರಂಗತಂಡಗಳೊಂದಿಗೆ ಸೇರಿಕೊಂಡಾಗ ನಿರ್ದೇಶಕ ಸುಂದರ್ ಎಸ್ ಮತ್ತು ತಂಡದ ಪರಿಚಯವಾಗಿತ್ತಂತೆ. ಆ ಹಂತದಲ್ಲಿ ಸುಂದರ್ ಎಸ್ ಅವರು ರೆಡಿ ಮಾಡಿಟ್ಟುಕೊಂಡಿದ್ದ ಕಥೆಯೊಂದು ಇಷ್ಟವಾಗಿ, ಅದನ್ನು ತಾನೇ ನಿರ್ಮಾಣ ಮಾಡಲು ನಿರ್ಧರಿಸಿದ್ದಾಗಿ ಚಿಂತನ್ ಹೇಳಿಕೊಂಡಿದ್ದಾರೆ.

    ಇನ್ನು ಈ ಚಿತ್ರದ ಸಾರಥಿ ಸುಂದರ್ ಎಸ್ (Sundar S)  ಕೂಡಾ ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರ ಹುಟ್ಟು ಪಡೆದ ಬಗೆಯನ್ನು ವಿವರಿಸಿದ್ದಾರೆ. ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ನಾಟಕಗಳ ಜೊತೆಗೇ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಇವರೆಲ್ಲರೂ ನಾನಾ ಕಥೆಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು. ಕಡೆಗೂ ಕಥೆಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಾಗ ಈಗಿರುವ ಟ್ರೆಂಡಿಗೆ ಸುಂದರ್ ಎಸ್ ಅವರ ಕಥೆ ಸೂಟ್ ಆಗುತ್ತದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ನಂತರ ನಿರ್ಮಾಪಕರನ್ನು ಹುಡುಕೋ ಕೆಲಸದ ನಡುವೆ ಚಿಂತನ್ ಕಂಬಣ್ಣ ತಾನೇ ನಿರ್ಮಾಣ ಮಾಡೋದಾಗಿ ಮುಂದೆ ಬಂದಿದ್ದರು. ಇದೆಲ್ಲದರಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ ಎಂಬುದು ನಿರ್ದೇಶಕ ಸುಂದರ್ ಮಾತಿನ ಸಾರ.

     

    ಈ ಟ್ರೈಲರ್ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸುಂದರ್ ಎಸ್, ನಿರ್ಮಾಪಕ ಚಿಂತನ್ ಕಂಬಣ್ಣ, ಡಾ. ಶಿವಣ್ಣ, ಮಹಿನ್ ಕುಬೇರ್, ಮುತ್ತುರಾಜ್, ರಾಜ್ ಗಗನ್, ಎಡಿಟರ್ ನಾನಿಕೃಷ್ಣ, ವಿಎಫ್‌ಎಕ್ಸ್ ಮಾಡಿರುವ ಲಕ್ಷ್ಮೀಪತಿ ಎಂ.ಕೆ ಮೊದಲಾದವರು ಹಾಜರಿದ್ದರು. ವಿಶೇಷವೆಂದರೆ, ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಕಂಬಣ್ಣ ಒಂದು ಪಾತ್ರದಲ್ಲಿಯೂ ನಟಿಸಿದ್ದಾರಂತೆ. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಗೆ ಪ್ರೇಕ್ಷಕರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

  • ಪ್ರಕರಣ ತನಿಖಾ ಹಂತದಲ್ಲಿದೆ: ಜಬರ್ದಸ್ತ್ ಟೈಟಲ್ ಟ್ರ್ಯಾಕ್ ರಿಲೀಸ್

    ಪ್ರಕರಣ ತನಿಖಾ ಹಂತದಲ್ಲಿದೆ: ಜಬರ್ದಸ್ತ್ ಟೈಟಲ್ ಟ್ರ್ಯಾಕ್ ರಿಲೀಸ್

    ರಂಗಭೂಮಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿರುವ ಪ್ರತಿಭಾನ್ವಿತರ ತಂಡವೊಂದು ಚಿತ್ರರಂಗಕ್ಕೆ ಆಗಮಿಸಿದೆ. ಈ ಸಿನಿಮಾ ವ್ಯಾಮೋಹಿಗಳ ತಂಡದ ಕಡೆಯಿಂದ ರೂಪುಗೊಂಡಿರುವ ಚಿತ್ರ `ಪ್ರಕರಣ ತನಿಖಾ ಹಂತದಲ್ಲಿದೆ’. (Prakarana Tanika Hantadallide)  ಶೀರ್ಷಿಕೆಯಲ್ಲಿಯೇ ಕಥೆಯ ಬಗೆಗಿನ ನಿಗೂಢ ಬಚ್ಚಿಟ್ಟುಕೊಂಡಂತಿರುವ ಈ ಚಿತ್ರವನ್ನು ಸುಂದರ್.ಎಸ್ ನಿರ್ದೇಶನ ಮಾಡಿದ್ದಾರೆ. ಇದೀಗ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಟೈಟಲ್ ಟ್ರ್ಯಾಕ್ (Trital Track) ಬಿಡುಗಡೆಗೊಂಡಿದೆ. ಈ ಮೂಲಕವೇ ಸದರಿ ಚಿತ್ರದ ಬಗ್ಗೆ ನಾನಾ ಆಯಾಮಗಳಲ್ಲಿ ನಿರೀಕ್ಷೆಗಳು ಮೂಡಿಕೊಂಡಿವೆ.

    ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಚಿಂತನ್ ಕಂಬಣ್ಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದರ ಪೋಸ್ಟರ್ ಒಂದು ಬಿಡುಗಡೆಗೊಂಡಿತ್ತು. ಆ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರತಂಡವೀಗ ಟೈಟಲ್ ಟ್ರ್ಯಾಕ್ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ತೀವ್ರವಾಗಿ ಸೆಳೆದುಕೊಂಡಿದೆ. ಇದು ಕ್ರೈಂ ಜಾನರಿನ ಚಿತ್ರ. ಒಂದು ಪ್ರಕರಣದ ತನಿಖೆಯ ಸುತ್ತಾ ಸಾಗುವ ರೋಚಕ ಕಥನದೊಂದಿಗೆ ಇದನ್ನು ರೂಪಿಸಲಾಗಿದೆಯಂತೆ. ಆಗಾಗ ಕನ್ನಡದಲ್ಲಿ ಈ ಜಾನರಿನ ಚಿತ್ರಗಳು ತೆರೆಗಾಣುತ್ತಿರುತ್ತವೆ. ಅದೆಲ್ಲಕ್ಕಿಂತಲೂ ಭಿನ್ನವಾದ ಅಂಶಗಳು ಇಲ್ಲಿವೆ ಎಂಬ ತುಂಬು ಭರವಸೆ ಚಿತ್ರತಂಡದಲ್ಲಿದೆ.

     

    ರಂಗಭೂಮಿಯಲ್ಲಿ ಸಕ್ರಿಯವಾಗಿದ್ದುಕೊಂಡು, ವರ್ಷಾಂತರಗಳಿಂದ ತಯಾರಿ ನಡೆಸಿದ್ದ ತಂಡವೊಂದು ಈ ಚಿತ್ರದ ಹಿಂದಿದೆ. ಅವರೆಲ್ಲರೂ ರಂಗಭೂಮಿಗೆ ಹಳಬರಾದರೂ, ಚಿತ್ರರಂಗಕ್ಕೆ ಹೊಸಬರು. ಸಿದ್ಧಸೂತ್ರದಾಚೆಗೆ ಏನೋ ಮಾಡಬೇಕೆಂಬ ತುಡಿತವನ್ನು ಈ ತಂಡ `ಪ್ರಕರಣ ತನಿಖಾ ಹಂತದಲ್ಲಿದೆ’ ಮೂಲಕ ಸಾಕಾರಗೊಳಿಸಿದೆಯಂತೆ. ಮಹೀನ್ ಕುಬೇರ್ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್.ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಮುಂತಾದವರ ತಾರಾಗಣವಿದೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ  ಛಾಯಾಗ್ರಹಣ, ಶಿವೋಂ ಸಂಗೀತ ನಿರ್ದೇಶನ ಮತ್ತು ನಾನಿಕೃಷ್ಣ  ಸಂಕಲನ ಈ ಚಿತ್ರಕ್ಕಿದೆ. ವಿಎಫ್ ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ನಿಭಾಯಿಸಿದ್ದಾರೆ. ಬೆಂಗಳೂರು, ಕನಕಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಟ್ರೈಲರ್ ಬಿಡುಗಡೆಗೊಳಿಸಿ, ಅದಾದ ಬಳಿಕ ಈ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.

  • ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

    ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

    ನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಬರುತ್ತಿವೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ಅಂತವರ ಸಾಲಿಗೆ ಈಗ ‘ಪ್ರಕರಣ ತನಿಖಾ ಹಂತದಲ್ಲಿದೆ’ (Prakarana Tanikha Hantadallide Film) ಚಿತ್ರ ಸೇರಿಕೊಳ್ಳಲಿದೆ.

    ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರವನ್ನು ಕರದಾಯಾಮ ಸ್ಟುಡಿಯೋಸ್ ಸಂಸ್ಥೆಯಡಿ ಚಿಂತನ್ ಕಂಬಣ್ಣ ನಿರ್ಮಿಸಿದರೆ, ಸುಂದರ್ ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್‌ ನೋಡಿರುವ ಫ್ಯಾನ್ಸ್‌ಗೆ ಸಿನಿಮಾದ ಬಗ್ಗೆ ಕುತೂಹಲ ಕೆರಳಿಸಿದೆ.

    ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ರೈಮ್ ಜಾನರ್ ಕುರಿತಾದ ಚಿತ್ರ. ತನಿಖೆಯೊಂದರ ಸುತ್ತ ಸುತ್ತುವಂತಹ ಚಿತ್ರ. ಡ್ರಗ್ಸ್ (Drugs) ಮಾಫಿಯಾ ಹಿನ್ನೆಲೆಯಲ್ಲಿ ಸಾಗುವ ಕಥೆ ಸಾಕಷ್ಟು ತಿರುವುಗಳನ್ನು ಪಡೆಯುತ್ತಾ ಹೋಗುತ್ತವೆ. ಮುಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.

    ಒಂದಿಷ್ಟು ರಂಗಭೂಮಿ ಗೆಳೆಯರು ಸೇರಿ ಮಾಡಿದ ಚಿತ್ರವಿದು. ಬೇರೆ ಬೇರೆ ರಂಗತಂಡಗಳಲ್ಲಿ ಸಕ್ರಿಯರಾಗಿದ್ದ ಒಂದಿಷ್ಟು ಗೆಳೆಯರು ಒಟ್ಟಿಗೆ ಸೇರಿ ಈ ಚಿತ್ರವನ್ನು ಮಾಡಿದ್ದಾರೆ. ರಂಗಭೂಮಿಯಲ್ಲಿ ಅನುಭವಿಗಳಾದರೂ ಚಿತ್ರರಂಗಕ್ಕೆ ಎಲ್ಲರೂ ಹೊಸಬರೇ. ಮಹಿನ್ ಕುಬೇರ್, ಮುತ್ತುರಾಜ್ ಟಿ, ನಟ ಗಗನ್, ಚಿಂತನ್ ಕಂಬಣ್ಣ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಮತ್ತು ಕನಕಪುರದಲ್ಲಿ ಚಿತ್ರೀಕರಣವಾಗಿದೆ.

    ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರಕ್ಕೆ ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್ ಛಾಯಾಗ್ರಹಣ, ನಾನಿ ಕೃಷ್ಣ ಸಂಕಲನ ಮತ್ತು ಶಿವೋಂ ಸಂಗೀತವಿದೆ. ವಿ.ಎಫ್.ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದಲ್ಲಿದೆ.