Tag: ಪ್ಯಾರಿಸ್

  • ಪ್ಯಾರಿಸ್‌ನಲ್ಲಿ ಸ್ನೇಹಿತರ ಮದುವೆಯಲ್ಲಿ ಮಿಂಚಿದ ರಾಮ್ ಚರಣ್ ದಂಪತಿ

    ಪ್ಯಾರಿಸ್‌ನಲ್ಲಿ ಸ್ನೇಹಿತರ ಮದುವೆಯಲ್ಲಿ ಮಿಂಚಿದ ರಾಮ್ ಚರಣ್ ದಂಪತಿ

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ‘ಗೇಮ್ ಚೇಂಜರ್’ ಸಿನಿಮಾದ ಚಿತ್ರೀಕರಣದಲ್ಲಿ ರಾಮ್‌ ಚರಣ್ ಬ್ಯುಸಿಯಾಗಿದ್ದರು. ಈಗ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು ಪತ್ನಿ‌ ಉಪಾಸನಾ (Upasana) ಜೊತೆ ಪ್ಯಾರಿಸ್‌ಗೆ ಹೋಗಿ ಬಂದಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಸ್ನೇಹಿತರೊಬ್ಬರ ಮದುವೆಗೆ ರಾಮ್ ಚರಣ್- ಉಪಾಸನಾ ಪ್ಯಾರಿಸ್‌ಗೆ (Paris) ಹಾಜರಿ ಹಾಕಿದ್ದರು. ಐಫೆಲ್ ಟವರ್ ಮುಂದೆ ಔತಣಕೂಟ ಏರ್ಪಡಿಸಿದ್ದು, ಹೈಲೆಟ್‌ ಆಗಿದೆ.  ಮದುವೆಯಲ್ಲಿ ಈ ಜೋಡಿ ಮಸ್ತ್‌ ಆಗಿ ಮಿಂಚಿದ್ದಾರೆ. ಸದ್ಯ ಸುಂದರ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನೂ ಓದಿ:‘ರಣಹದ್ದು’ ಫಸ್ಟ್ ಲುಕ್ ರಿಲೀಸ್ ಮಾಡಿದ ಜಂಭದ ಹುಡುಗಿ

    ಇತ್ತೀಚಿಗೆ ರಾಮ್ ಚರಣ್ ದಂಪತಿ ಮುದ್ದಾದ ಮಗಳನ್ನ ಬರಮಾಡಿಕೊಂಡಿದ್ದರು. ಕ್ಲಿನ್ ಕಾರ ಕೊನಿಡೆಲಾ ಎಂದು ಹೆಸರಿಟ್ಟಿದ್ದು, ಆಪ್ತರ ಸಮ್ಮುಖದಲ್ಲಿ ಸಿಂಪಲ್ ಆಗಿ ಮಗುವಿಗೆ ನಾಮಕರಣ ಮಾಡಿದ್ದರು.

    ಗೇಮ್ ಚೇಂಜರ್ ಬಳಿಕ ಕನ್ನಡದ ಮಫ್ತಿ ಚಿತ್ರದ ನಿರ್ದೇಶಕ ನರ್ತನ್ (Narthan) ಜೊತೆ ರಾಮ್ ಚರಣ್ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    ಬುಡಾಪೆಸ್ಟ್ (ಹಂಗೇರಿ): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ (Neeraj Chopra) ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಜೊತೆಗೆ 2024ಕ್ಕೆ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ (Paris Olympic 2024) ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

    ಶುಕ್ರವಾರ ನಡೆದ ಪುರುಷರ ಜಾವೆಲಿನ್ ಥ್ರೋ `ಎ’ ಗುಂಪಿನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 88.77 ಮೀಟರ್ ದೂರದ ಜಾವೆಲಿನ್ ಎಸೆದಿರುವ ನೀರಜ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹಗೆ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾಗೆ ಗಾಯದ ಸಮಸ್ಯೆ – ಕಾಮನ್‍ವೆಲ್ತ್ ಗೇಮ್ಸ್‌ಗೂ ಮುನ್ನವೇ ಭಾರತಕ್ಕೆ ಹಿನ್ನಡೆ

    NEERAJ

    2021ರ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಸ್ವರ್ಣ ಪದಕ ಜಯಿಸಿದ್ದರು. ಅಂದು ಅವರು 87.58 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.

    ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ನೀರಜ್ ಚೋಪ್ರಾ 85.50 ಮೀಟರ್ ದೂರ ಜಾವೆಲಿನ್ ಎಸೆಯಬೇಕಿತ್ತು. ಆದ್ರೆ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ ಚೋಪ್ರಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗಿನ ಗೇಮ್ಸ್‌ನಲ್ಲಿ 89.94 ಮೀಟರ್ ದೂರ ಜಾವೆಲಿನ್ ಎಸೆದಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.

    ಕೆಲ ದಿನಗಳ ಹಿಂದೆಯಷ್ಟೇ ನೀರಜ್ ಚೋಪ್ರಾ ಲಾಸೆನ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದು ಸತತ 2ನೇ ಬಾರಿಗೆ ಡೈಮಂಡ್ ಲೀಗ್ ಗೆದ್ದ ಭಾರತೀಯನೆಂಬ ಹೆಗ್ಗಳಿಗೆ ಪಡೆದಿದ್ದರು. ಇದನ್ನೂ ಓದಿ: Lausanne Diamond League: ಚಿನ್ನಕ್ಕೆ ಮುತ್ತಿಟ್ಟ ನೀರಜ್‌ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Eiffel Tower: ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ

    Eiffel Tower: ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ

    ಪ್ಯಾರಿಸ್: ವಿಶ್ವದಲ್ಲೇ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳ ಪೈಕಿ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ (Eiffel Tower) ಕೂಡ ಒಂದು. ವಿಶ್ವವಿಖ್ಯಾತ ಐಫೆಲ್‌ ಟವರ್‌ಗೂ ಕಂಟಕ ಎದುರಾಗಿದೆ.

    ಹೌದು, ಪ್ಯಾರಿಸ್‌ನ (Paris) ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಫ್ರೆಂಚ್‌ ಪೊಲೀಸರು ತಿಳಿಸಿದ್ದಾರೆ. ಬಾಂಬ್‌ ಬೆದರಿಕೆ ಕರೆ ಬರುತ್ತಿದ್ದಂತೆ ಐಫೆಲ್‌ ಟವರ್‌ ವೀಕ್ಷಣೆಗೆ ಬಂದಿದ್ದ ಪ್ರವಾಸಿರನ್ನು ಸ್ಥಳಾಂತರ ಮಾಡಲಾಗಿದೆ. ಐಫೆಲ್‌ ಟವರ್‌ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಐಫೆಲ್ ಟವರ್‌ನ ರೋಚಕ ಇತಿಹಾಸ

    ಕಳೆದ ಒಂದು ವರ್ಷದಲ್ಲೇ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಿಶ್ವವಿಖ್ಯಾತ ಐಫೆಲ್‌ ಟವರ್‌ ವೀಕ್ಷಣೆ ಮಾಡಿದ್ದರು. ಈಗ ಅಲ್ಲಿ ಭದ್ರತಾ ಎಚ್ಚರಿಕೆ ವಹಿಸಲಾಗಿದೆ. ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

    ಫ್ರಾನ್ಸ್‌ನ ಕೈಗಾರಿಕಾ ಕೌಶಲ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಯಿತು. ಐಫೆಲ್ ಟವರ್‌ನ್ನು ಮಾರ್ಚ್ 31, 1889 ರಲ್ಲಿ ಸಾರ್ವಜನಿಕಗೊಳಿಸಲಾಯಿತು. ಗೋಪುರವನ್ನು ಮಾರ್ಚ್ 15, 1889 ರಂದು ಸಂಪೂರ್ಣವಾಗಿ ನಿರ್ಮಿಸಲಾಗಿದ್ದರೂ, ಇದನ್ನು ಮಾರ್ಚ್ 31 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನೂ ಓದಿ: ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಫೆಲ್ ಟವರ್‌ನ  ರೋಚಕ ಇತಿಹಾಸ

    ಐಫೆಲ್ ಟವರ್‌ನ ರೋಚಕ ಇತಿಹಾಸ

    ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುವ ಸ್ಮಾರಕಗಳಲ್ಲಿ ಐಫೆಲ್ ಟವರ್ (Eiffel Tower) ಕೂಡ ಒಂದು. ಫ್ರಾನ್ಸ್ (France) ದೇಶದ ಪ್ಯಾರಿಸ್‌ನಲ್ಲಿರುವ (Paris) ಈ ಸುಂದರವಾದ ಗೋಪುರಕ್ಕೆ ಇಂಜಿನಿಯರ್ ಗುಸ್ಟಾವ್ ಐಫೆಲ್ ಅವರ ಹೆಸರನ್ನು ಇಡಲಾಗಿದೆ. ಈ ಗೋಪುರವು 330 ಮೀಟರ್ ಎತ್ತರ ಹಾಗೂ 81 ಅಂತಸ್ತುಗಳನ್ನು ಹೊಂದಿದೆ.

    ಫ್ರಾನ್ಸ್ನ ಕೈಗಾರಿಕಾ ಕೌಶಲ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಯಿತು. ಗೋಪುರವು 18,000 ಕ್ಕೂ ಹೆಚ್ಚು ಲೋಹದ ಭಾಗಗಳನ್ನು ಒಳಗೊಂಡಿದೆ, ಇವುಗಳನ್ನು 2.5 ಮಿಲಿಯನ್ ರಿವೆಟ್‌ಗಳು ಸೇರಿಸುತ್ತವೆ. 20 ವರ್ಷಗಳ ನಂತರ ಅದನ್ನು ಕಿತ್ತುಹಾಕುವ ಯೋಜನೆ ಇತ್ತು. ಆದರೆ ರೇಡಿಯೊ ಆಂಟೆನಾ ಮತ್ತು ವೈರ್‌ಲೆಸ್ ಟೆಲಿಗ್ರಾಫ್ ಟ್ರಾನ್ಸ್‌ಮೀಟರ್‌ ಅನ್ನು ಗೋಪುರದಲ್ಲಿ ಇರಿಸಿದ್ದರ ಪರಿಣಾಮ ಅದು ಉಳಿದುಕೊಂಡಿತು. ಗೋಪುರವು 1889 ರಿಂದ 1930 ರವರೆಗೆ, ಅಂದರೆ 40 ವರ್ಷಗಳವರೆಗೆ ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ರಚನೆಯ ದಾಖಲೆಯನ್ನು ಹೊಂದಿತ್ತು.

    ಚಂಡಮಾರುತದ ಸಮಯದಲ್ಲಿ ಈ ಗೋಪುರ ತೂಗಾಡುತ್ತದೆ. ಅಲ್ಲದೇ ಸೂರ್ಯನ ಶಾಖವು ಕಬ್ಬಿಣವನ್ನು ವಿಸ್ತರಿಸಲು ಕಾರಣವಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಗೋಪುರವು ಕೆಲವು ಸೆಂಟಿಮೀಟರ್‌ಗಳಷ್ಟು ಬೆಳೆಯುತ್ತದೆ. ಅಲ್ಲದೇ ಸರಾಸರಿ ಆರು ಇಂಚುಗಳಷ್ಟು ವಾಲುತ್ತದೆ. ಏಕೆಂದರೆ ನೇರ ಬೆಳಕನ್ನು ಎದುರಿಸುತ್ತಿರುವ ಒಂದು ಬದಿಯು ಇತರ ಮೂರು ಬದಿಗಳಿಗಿಂತ ವೇಗವಾಗಿ ಬಿಸಿಯಾಗುವುದು ಇದಕ್ಕೆ ಕಾರಣವಾಗಿದೆ.

    ಇದಕ್ಕಾಗಿ 19 ನೇ ಶತಮಾನದಲ್ಲಿ ಕೆಲಸ ಮಾಡಿದ ಫ್ರೆಂಚ್ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಹೆಸರುಗಳನ್ನು ಹಲವಾರು ಪ್ಯಾರಿಸ್ ಬೀದಿಗಳಿಗೆ ಇಡಲಾಗಿದೆ. ಅಲ್ಲದೇ ಅವುಗಳಲ್ಲಿ 72 ಹೆಸರನ್ನು ಐಫೆಲ್ ಟವರ್‌ನಲ್ಲಿ ಕೆತ್ತಲಾಗಿದೆ.

    ಪ್ರತಿ ಏಳು ವರ್ಷಗಳಿಗೊಮ್ಮೆ ಸುಮಾರು 60 ಟನ್ ಬಣ್ಣವನ್ನು ಗೋಪುರಕ್ಕೆ ಬಳಿಯಲಾಗುತ್ತದೆ. ಇದು ಕಬ್ಬಿಣವನ್ನು ತುಕ್ಕು ಹಿಡಿಯದಂತೆ ಸಹಾಯ ಮಾಡುತ್ತದೆ. 20,000 ಬಲ್ಬ್‌ಗಳನ್ನು ಒಳಗೊಂಡಿರುವ ಈ ಗೋಪುರ ರಾತ್ರಿ ವೇಳೆಯಲ್ಲಿ ಆಕರ್ಷಕವಾಗಿ ಕಾಣುತ್ತದೆ.

    ಒಟ್ಟು 1,665 ಮೆಟ್ಟಿಲುಗಳಿದ್ದು ಅದು ಐಫೆಲ್ ಟವರ್‌ನ ಮೇಲ್ಭಾಗಕ್ಕೆ ಹೋಗುತ್ತದೆ. ಪ್ರತಿ ವರ್ಷ ಇದರ ಎಲಿವೇಟರ್ 64,001 ಮೈಲುಗಳನ್ನು (1,03,000 ಕಿಲೋಮೀಟರ್) ಕ್ರಮಿಸುತ್ತದೆ. ಐಫೆಲ್ ಟವರ್ ಅತಿ ಹೆಚ್ಚು ಭೇಟಿ ನೀಡಿದ ಸ್ಮಾರಕವಾಗಿದ್ದು, ಪ್ರತಿ ವರ್ಷ ಸುಮಾರು 70 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.

    ಐಫೆಲ್ ಟವರ್‌ನ್ನು ಮಾರ್ಚ್ 31, 1889 ರಲ್ಲಿ ಸಾರ್ವಜನಿಕಗೊಳಿಸಲಾಯಿತು. ಗೋಪುರವನ್ನು ಮಾರ್ಚ್ 15, 1889 ರಂದು ಸಂಪೂರ್ಣವಾಗಿ ನಿರ್ಮಿಸಲಾಗಿದ್ದರೂ, ಇದನ್ನು ಮಾರ್ಚ್ 31 ರಂದು ಸಾರ್ವಜನಿಕರಿಗೆ ತೆರೆಯಲಾಯಿತು.

    ಮೊದಲು 28 ಜನವರಿ 1887 ರಂದು ಇದರ ಕೆಲಸ ಪ್ರಾರಂಭವಾಯಿತು. ಮಾರ್ಚ್ 31, 1889 ರಂದು ಗೋಪುರವನ್ನು ಎರಡು ವರ್ಷ, ಎರಡು ತಿಂಗಳು ಮತ್ತು ಐದು ದಿನಗಳಲ್ಲಿ ಪೂರ್ಣಗೊಳಿಸಲಾಯಿತು.

    ಆಗಸ್ಟ್ 1944 ರಲ್ಲಿ ಅಡಾಲ್ಫ್ ಹಿಟ್ಲರ್ ನಗರವನ್ನು ನೆಲಸಮಗೊಳಿಸಲು ತನ್ನ ಸೇನೆಗೆ ಆದೇಶಿಸಿದ್ದ. ಟವರ್‌ನ್ನು ಸ್ಫೋಟಿಸಲು ಯೋಜನೆಯನ್ನೂ ರೂಪಿಸಲಾಗಿತ್ತು. ಆದರೆ ಅದೃಷ್ಟವಶಾತ್ ಆ ವೇಳೆಗಾಗಲೇ ಮಿತ್ರಪಕ್ಷದ ಪಡೆಗಳು ನಡೆಸಿದ ದಾಳಿಯಿಂದ ನಾಜಿಗಳನ್ನು ಹಿಮ್ಮೆಟ್ಟಿಸಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್

    ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್

    ನವದೆಹಲಿ: ವಿಮಾನ ಟೇಕಾಫ್ ಆದ ಬಳಿಕ ಅದರ ಟಯರ್‌ನ ಭಾಗಗಳು ರನ್‍ವೇಯಲ್ಲಿ ಪತ್ತೆಯಾದ ಘಟನೆ ದೆಹಲಿಯಲ್ಲಿ ನಡೆದಿದೆ. ಇದನ್ನೂ ಗಮನಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವನ್ನು ವಾಪಸ್ ಮರಳುವಂತೆ ಸೂಚನೆ

    ಏರ್ ಇಂಡಿಯಾ (Air India) ವಿಮಾನ (Flight) ದೆಹಲಿಯಿಂದ (Delhi) ಪ್ಯಾರಿಸ್‍ಗೆ (Paris) ತೆರಳುತ್ತಿತ್ತು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಟೈರ್‌ನ ಭಾಗಗಳು ರನ್ ವೇಯಲ್ಲಿ ಕಾಣಿಸಿದೆ. ಬಳಿಕ ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ATC) ನೀಡಿದ ಮಾಹಿಯ ಆಧಾರದ ಮೇಲೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಇದನ್ನೂ ಓದಿ: ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್

    ಪ್ರಯಾಣಿಕರಿಗೆ ಆದ ಅನಾನುಕೂಲತೆಗಾಗಿ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರ ಸುರಕ್ಷತೆಗೆ ಏರ್ ಇಂಡಿಯಾ ಮೊದಲ ಆದ್ಯತೆ ನೀಡುತ್ತದೆ. ಇದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

    ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತದೆ. ಪ್ರಯಾಣಿಕರಿಗೆ ಯಾವುದೇ ಹಾನಿಯಾದ ವರದಿ ಆಗಿಲ್ಲ. ಪ್ರಯಾಣಿಕರನ್ನು ಪ್ಯಾರಿಸ್‍ಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತವಾದ ಕಾರಿಗೆ ವಿದ್ಯುತ್ ಶಾಕ್ – ಸಹಾಯಕ್ಕೆ ಬಂದ ಇಬ್ಬರು ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ನಿಧನ

    ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ನಿಧನ

    ಕಾಮಿಡಿ ಜಗತ್ತಿನ ದಂತಕಥೆ ನಟ ಚಾರ್ಲಿ ಚಾಪ್ಲಿನ್ (Charlie Chaplin) ಪುತ್ರಿ ಜೋಸೆಫೀನ್ ನಿಧನರಾಗಿದ್ದಾರೆ. ಜುಲೈ 13ರಂದೇ ಜೋಸೆಫೀನ್ ಇಹಲೋಕ ತ್ಯಜಿಸಿದ್ದಾರೆ ಎಂದು ಯುಎಸ್ ಮೂಲದ ಮಾಧ್ಯಮಗಳು ವರದಿ ಮಾಡಿವೆ. ಪ್ಯಾರಿಸ್ (Paris) ನಲ್ಲಿ ನೆಲೆಸಿದ್ದ ಅವರಿಗೆ 74 ವರ್ಷ ವಯಸ್ಸಾಗಿದೆ. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಜೋಸೆಫೀನ್ (Josephine) ಕೂಡ ನಟಿಯಾಗಿದ್ದು, ತನ್ನ ತಂದೆಯ ಜೊತೆಯೇ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. 1952ರಲ್ಲೇ ಸಿನಿಮಾ ರಂಗ ಪ್ರವೇಶ ಮಾಡಿದ್ದ ಜೋಸೆಫೀನ್, ತಂದೆ ಚಾರ್ಲಿ ಚಾಪ್ಲಿನ್ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

     

    ದಿ ಕ್ಯಾಂಟರ್ಬರಿ, ಎಸ್ಕೇಪ್ ಟು ದಿ ಸನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ದೂರದರ್ಶನಕ್ಕಾಗಿ ಹಲವಾರು ಸರಣಿಗಳಲ್ಲಿ ಇವರು ನಟಿಸಿದ್ದಾರೆ. ಜೋಸೆಫೀನ್ ನಿಧನಕ್ಕೆ ಹಲವರು ಕಂಬನಿ ಕೂಡ ಮಿಡಿದಿದ್ದಾರೆ. ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಜೋಸೆಫೀನ್ ಅಗಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

    ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

    ಪ್ಯಾರಿಸ್: ಎರಡು ದಿನಗಳ ಫ್ರಾನ್ಸ್ (France) ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಯುಎಇಯತ್ತ (UAE) ತಮ್ಮ ಪ್ರಯಾಣವನ್ನು ಬೆಳೆಸಿದರು.

    ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಅವರೊಂದಿಗೆ ಮಾತುಕತೆ ನಡೆಸಿದ ಮೋದಿ, ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್  (Grand Cross of the Legion) ಅನ್ನು ಗೌರವಪೂರ್ವಕವಾಗಿ ಸ್ವೀಕರಿಸಿದರು. ಇದನ್ನೂ ಓದಿ: Chandrayaan-3: ಚಂದ್ರನೂರಿಗೆ ಹಾರಿದ ರಾಕೆಟ್‌

    ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಭಾರತ ಮತ್ತು ಫ್ರಾನ್ಸ್ ಬಾಂಧ್ಯವ್ಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿ ಯಶಸ್ವಿ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ಗೆ ವಿದಾಯ ಹೇಳಿದ್ದಾರೆ. ಮುಂದಿನ ಹಂತದ ಭೇಟಿಗಾಗಿ ಅವರು ಅಬುಧಾಬಿಗೆ (Abu Dhabi) ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಫ್ರಾನ್ಸ್‌ನ ಅತ್ಯುನ್ನತ ಗೌರವ

    ಯುಎಇಗೆ ಪ್ರಯಾಣಿಸಿದ ಮೋದಿ ಅಲ್ಲಿನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed Al Nahyan) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಫಿನ್‌ಟೆಕ್, ರಕ್ಷಣೆ, ಭದ್ರತೆ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಇ ತೊಡಗಿಸಿಕೊಂಡಿವೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ 1 ನಿರ್ಧಾರ – ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾದ ಭಾರತ

    ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಫ್ರಾನ್ಸ್ ಪ್ರವಾಸಕ್ಕೆ ತೆರಳಿದ್ದ ಮೋದಿ ಶುಕ್ರವಾರ ನಡೆದ ಬಾಸ್ಟಿಲ್ ಡೇ ಆಚರಣೆಯಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸ್ಪೆಷಲ್ ಟೊಮೆಟೋ ಫೋರ್ಸ್ ರಚಿಸಿ: ಅಖಿಲೇಶ್ ಯಾದವ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ನು ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

    ಇನ್ನು ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

    ಪ್ಯಾರಿಸ್‌: ಇನ್ನು ಮುಂದೆ ಫ್ರಾನ್ಸ್‌ನಲ್ಲಿರುವ (France) ಅನಿವಾಸಿ ಭಾರತೀಯರು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಬಳಸಿಕೊಂಡು ಭಾರತಲ್ಲಿರುವ ಸಂಬಂಧಿಕರಿಗೆ ಹಣವನ್ನು ಕಳುಹಿಸಬಹುದು ಜೊತೆಗೆ ಭಾರತದಿಂದ ತೆರಳಿದ ಪ್ರವಾಸಿಗರು ರೂಪಾಯಿಯಲ್ಲೇ ವ್ಯವಹಾರ ನಡೆಸಬಹುದು.

    ಹೌದು. ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುಪಿಐ ಅನ್ನು ಫ್ರಾನ್ಸ್‌ನಲ್ಲೂ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

    ಪ್ಯಾರಿಸ್‌ನಲ್ಲಿ (Paris) ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಫ್ರಾನ್ಸ್ ಮತ್ತು ಭಾರತ ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಒಪ್ಪಿಕೊಂಡಿವೆ. ಮುಂಬರುವ ದಿನಗಳಲ್ಲಿ ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗಲಿದೆ. ಭಾರತದ ಪ್ರವಾಸಿಗರು ಫ್ರಾನ್ಸಿನಲ್ಲಿ ರೂಪಾಯಿ ಮೂಲಕವೇ ವ್ಯವಹಾರ ನಡೆಸಬಹುದು ಎಂದು ಹೇಳಿದರು.

    ಯುಪಿಐ ಭಾರತದ ಮೊಬೈಲ್ ಆಧಾರಿತ ವೇಗದ ಪಾವತಿ ವ್ಯವಸ್ಥೆಯಾಗಿದೆ. ಇದು ಗ್ರಾಹಕರು ರಚಿಸಿದ ವರ್ಚುವಲ್ ಪಾವತಿ ವಿಳಾಸವನ್ನು (VPA) ಬಳಸಿಕೊಂಡು ಗ್ರಾಹಕರಿಗೆ ಹಣ ಪಾವತಿಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಮಾಡಿಕೊಡುತ್ತದೆ. ಇದನ್ನೂ ಓದಿ: ಅಮೆರಿಕದ 1 ನಿರ್ಧಾರ – ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾದ ಭಾರತ

    2022 ರಲ್ಲಿನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಫ್ರಾನ್ಸ್‌ನಲ್ಲಿರುವ ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆಯಾದ ಲೈರಾದ (Lyra) ಜೊತೆ ಒಪ್ಪಂದ ಪತ್ರಕ್ಕೆ (MoU) ಸಹಿ ಹಾಕಿತ್ತು. ಈಗಾಗಲೇ ಯುಪಿಐ ಮತ್ತು ಸಿಂಗಾಪುರದ ಪೇನೌ (PayNow) ಅಧಿಕೃತವಾಗಿ ಲಿಂಕ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸೀನ್‌ ಲೂಂಗ್‌ ಅವರು 2021ರಲ್ಲಿ ಈ ವ್ಯವಸ್ಥೆಗೆ ಆನ್‌ಲೈನ್‌ನಲ್ಲಿ ಜೊತೆಯಾಗಿ ಚಾಲನೆ ನೀಡಿದ್ದರು.

    ಫ್ರಾನ್ಸ್‌ನಲ್ಲಿ ಯುಪಿಐ ಪಾವತಿಗಳನ್ನು ಸಕ್ರಿಯಗೊಳಿಸುವುದು ಎಂದರೆ ಭಾರತೀಯ ಪ್ರವಾಸಿಗರು ಯುಪಿಐ ಮೂಲಕ ಫ್ರಾನ್ಸ್‌ನಲ್ಲಿ ರೂಪಾಯಿಯಲ್ಲಿ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಯುರೋಪ್‌ಗೆ ಭೇಟಿ ನೀಡುವ ಭಾರತೀಯರು ತಮ್ಮ ಯುಪಿಐ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಫ್ರಾನ್ಸ್‌ನಲ್ಲಿ ಸ್ಥಳೀಯ ಕ್ಯೂಆರ್‌ ಕೋಡ್‌ ಅಥವಾ ಯುಪಿಐ ಐಡಿಯನ್ನು ಬಳಸಿಕೊಂಡು ರೂಪಾಯಿಯಲ್ಲಿ ತಮ್ಮ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.

    ಲಾಭ ಏನು?
    ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. ಯುಪಿಐ ಮತ್ತು ಲೈರಾ ಸಂಪರ್ಕವೂ ಭಾರತ ಮತ್ತು ಫ್ರಾನ್ಸ್‌ ನಡುವಿನ ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಫ್ರಾನ್ಸ್‌ನಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಲಾಭವಾಗಲಿದೆ. ಯುಪಿಐ ಮೂಲಕ ಚಿಲ್ಲರೆ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದು ವಿದೇಶೀ ವಿನಿಮಯ ಮೀಸಲುಗಳನ್ನು ಉಳಿಸಲು ಸಹಾಯ ಮಾಡುತ್ತದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂರು ದಿನಗಳ ಫ್ರಾನ್ಸ್‌, ಯುಎಇ ಪ್ರವಾಸಕ್ಕೆ ತೆರಳಿದ ಮೋದಿ

    ಮೂರು ದಿನಗಳ ಫ್ರಾನ್ಸ್‌, ಯುಎಇ ಪ್ರವಾಸಕ್ಕೆ ತೆರಳಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫ್ರಾನ್ಸ್ (France) ಮತ್ತು ಯುಎಇಗೆ (UAE) ಮೂರು ದಿನ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಪ್ಯಾರಿಸ್‌ಗೆ (Paris) ಪ್ರಧಾನಿ ತೆರಳಿದ್ದಾರೆ.

    ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಫ್ರಾನ್ಸ್‌ಗೆ ತೆರಳಿದ್ದು, ಜುಲೈ 13 ಮತ್ತು 14ರಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಜುಲೈ 14ರಂದು ನಡೆಯಲಿರುವ ಬಾಸ್ಟಿಲ್ ಡೇ ಪರೇಡ್‌ನಲ್ಲಿ (Bastille Day Parade) ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದು, ಈ ಪರೇಡ್‌ನಲ್ಲಿ 269 ಸದಸ್ಯರ ಭಾರತೀಯ ತ್ರಿ-ಸೇವಾ ತುಕಡಿ ಭಾಗವಹಿಸಲಿದೆ.ಇದನ್ನೂ ಓದಿ: ಫ್ರಾನ್ಸ್ ಪ್ರವಾಸದ ನಡುವೆಯೂ ಅಬುಧಾಬಿಗೆ ಭೇಟಿ ನೀಡಲಿದ್ದಾರೆ ಮೋದಿ

    ಈ ಸಂದರ್ಭ ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ (IAF) ಮೂರು ರಫೇಲ್ ಫೈಟರ್ ಜೆಟ್‌ಗಳು (Rafale Fighter Jets) ಫ್ಲೈಪಾಸ್ಟ್‌ಗೆ ಸೇರಿಕೊಳ್ಳಲಿವೆ. ಅಲ್ಲದೇ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದೆ ಕೊಂಡೊಯ್ಯಲು ಪ್ರಧಾನಿ ಮೋದಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಯಮುನಾ ನದಿಯ ತಗ್ಗು ಪ್ರದೇಶದ ನಿವಾಸಿಗಳ ಸ್ಥಳಾಂತರಕ್ಕೆ ಕೇಜ್ರಿವಾಲ್ ಸೂಚನೆ

    ಫ್ರಾನ್ಸ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅಬುಧಾಬಿಗೆ ( Abu Dhabi) ಪ್ರಯಾಣಿಸಲಿದ್ದಾರೆ. ಫ್ರಾನ್ಸ್ ಪ್ರವಾಸದ ಕುರಿತು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಟ್ವೀಟ್‌ನಲ್ಲಿ ಯುಎಇ ಭೇಟಿಯನ್ನು ಪ್ರಸ್ತಾಪಿಸಿರುವ ಅವರು, 15ರಂದು ಹೆಚ್‌ಹೆಚ್ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ( H.H. Sheikh Mohamed bin Zayed Al Nahyan) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ನಮ್ಮ ಈ ಸಂವಾದಗಳು ಭಾರತ ಮತ್ತು ಯುಎಇ ಸ್ನೇಹಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ – ಕೇಜ್ರಿವಾಲ್ ನಿವಾಸದ ಬಳಿಯೂ ಪ್ರವಾಹ ಸ್ಥಿತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಯಾರಿಸ್‌ಗೆ ಹಾರಿದ Love ಬರ್ಡ್ಸ್ ಡಾರ್ಲಿಂಗ್‌ ಕೃಷ್ಣ- ಮಿಲನಾ

    ಪ್ಯಾರಿಸ್‌ಗೆ ಹಾರಿದ Love ಬರ್ಡ್ಸ್ ಡಾರ್ಲಿಂಗ್‌ ಕೃಷ್ಣ- ಮಿಲನಾ

    ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ (Milana Nagaraj) ಅವರು ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ದಂಪತಿಗಳಿಬ್ಬರು ಪ್ಯಾರಿಸ್‌ಗೆ ಹಾರಿದ್ದಾರೆ. ಈ ಕುರಿತ ಫೋಟೋವನ್ನ ಕೃಷ್ಣ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ (Sandalwood) ಸ್ಟಾರ್ ಜೋಡಿಗಳಲ್ಲಿ ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಸಾಕಷ್ಟು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿ ಸತಿ-ಪತಿಗಳಾಗಿ ಅಭಿಮಾನಿಗಳಿಗೆ ಆದರ್ಶವಾಗಿ ಬದುಕುತ್ತಿದ್ದಾರೆ. ಲವ್‌ ಮಾಕ್ಟೈಲ್ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಿರ್ದೇಶಕನಾಗಿ ಸೈ ಎನಿಸಿಕೊಂಡರೆ, ಪತಿಯ ಸಿನಿಮಾ ಮಿಲನಾ ಸಾಥ್ ನೀಡಿದ್ದರು.

     

    View this post on Instagram

     

    A post shared by Milana Nagaraj (@milananagaraj)

    ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ, ಪ್ಯಾರಿಸ್‌ಗೆ (Paris) ಡಾರ್ಲಿಂಗ್ ಕೃಷ್ಣ ದಂಪತಿ ಹಾರಿದ್ದಾರೆ. ಏಪ್ರಿಲ್‌ನಲ್ಲಿ ಮಿಲನಾ ಹುಟ್ಟುಹಬ್ಬಕ್ಕೆ ಥೈಲ್ಯಾಂಡ್‌ಗೆ ಹೋಗಿದ್ದರು. ಇದೀಗ ಪ್ಯಾರಿಸ್‌ನ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಕೃಷ್ಣ- ಮಿಲನಾ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?

     

    View this post on Instagram

     

    A post shared by Darling Krishna (@darling_krishnaa)

    ಡಾರ್ಲಿಂಗ್ ಕೃಷ್ಣ (Darling Krishna)ಅವರ ಲಿಸ್ಟ್‌ನಲ್ಲಿ ಲವ್ ಮಾಕ್ಟೈಲ್‌ 3, ಕೌಸಲ್ಯಾ ಸುಪ್ರಜಾ ರಾಮ, ಲವ್ ಮಿ  ಹೇಟ್ ಮಿ ಸೇರಿದಂತೆ ಹಲವು ಚಿತ್ರಗಳಿವೆ. ಲವ್ ಮಾಕ್ಟೈಲ್‌ 3, ಆರಾಮ ಅರವಿಂದ್‌ ಸ್ವಾಮಿ ಸೇರಿದಂತೆ ಹಲವು ಸಿನಿಮಾಗಳು ಮಿಲನಾ ನಾಗರಾಜ್ ಅವರ ಕೈಯಲ್ಲಿದೆ.