ಬೆಂಗಳೂರು: ಪ್ಯಾರಿಸ್ (Paris) ಪ್ರವಾಸ ಮುಗಿಸಿ ಅಮೆರಿಕಗೆ (USA) ತೆರಳಬೇಕಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಶಾಕ್ ಸಿಕ್ಕಿದೆ. ಕ್ಲಿಯರೆನ್ಸ್ ಸಿಗದ ಕಾರಣ ಅಮೆರಿಕದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿದ್ದ ಪ್ರಿಯಾಂಕ್ ಖರ್ಗೆಗೆ ನಿರಾಸೆಯಾಗಿದೆ.
ಅಮೆರಿಕ ಭೇಟಿಗೆ ಕ್ಲಿಯರೆನ್ಸ್ ಸಿಗದ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕ್ಲಿಯರೆನ್ಸ್ ನಿರಾಕರಣೆ ಮಾಡಿದ್ದು ಯಾರು ಎಂಬುದರ ಬಗ್ಗೆ ಗೊಂದಲ ಇದೆ.
Had the opportunity to get an up-close look at the Rafale and engage in a
technical briefing.
Undoubtedly, it is one of the most advanced fighter aircraft in the world. The sophistication of its avionics, weapon systems and versatility across mission profiles is impressive and… pic.twitter.com/wSsWrLV1mb
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 17, 2025
ಭಾರತದಿಂದ ಕ್ಲಿಯರೆನ್ಸ್ ಸಿಕ್ಕಿಲ್ಲವೋ? ಅಥವಾ ಅಮೆರಿಕದಿಂದ ಸಿಕ್ಕಿಲ್ಲವಾ ಎಂಬ ಬಗ್ಗೆ ಗೊಂದಲದಲ್ಲಿದ್ದು, ಕರ್ನಾಟಕಕ್ಕೆ ವಾಪಸ್ ಆದ ಬಳಿಕ ಪ್ರಿಯಾಂಕ್ ಖರ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.
ಐಟಿ ಬಿಟಿಗೆ ಸಂಬಂಧಪಟ್ಟಂತೆ ಪ್ರಿಯಾಂಕ್ ಖರ್ಗೆ ಬೋಸ್ಟನ್, ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಆಯೋಜನೆಗೊಂಡಿದ್ದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಬೇಕಿತ್ತು. ಪ್ರಿಯಾಂಕ್ ಜೊತೆ ತೆರಳಿದ್ದ ಐಎಎಸ್ ಅಧಿಕಾರಿಗೆ ಅಮೆರಿಕಗೆ ತೆರಳಲು ಕ್ಲಿಯರೆನ್ಸ್ ಸಿಕ್ಕಿದೆ. ಪ್ಯಾರಿಸ್ ಏರ್ ಶೋನಲ್ಲಿ ಭಾಗಿಯಾಗಿದ್ದಪ್ರಿಯಾಂಕ್ ಖರ್ಗೆ ಗುರುವಾರ ಬೆಂಗಳೂರಿಗೆ ಮರಳಲಿದ್ದಾರೆ.
ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯೋ ಪ್ರಣಿತಾ ಇದೀಗ ಪ್ಯಾರಿಸ್‌ನಲ್ಲಿ ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಲೈಟ್ ಅರೇಂಜ್ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ನಟಿಯ ಮುಖದಲ್ಲಿ ಗ್ಲೋ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಅನುಪಮಾ ಪರಮೇಶ್ವರನ್ ಸಿನಿಮಾಗೆ ಸಮಂತಾ ಸಾಥ್
ಮತ್ತೊಂದು ಪೋಸ್ಟ್‌ನಲ್ಲಿ ಒಳಉಡುಪು ಧರಿಸಿ, ಅದರ ಮೇಲೆ ಕೋಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ. ವಿವಿಧ ಭಂಗಿಯಲ್ಲಿ ಪ್ರಣಿತಾ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಅವತಾರಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಪ್ರಣಿತಾ ಸುಭಾಷ್ ತಾಯಿಯಾದ್ಮೇಲೆ ನಿಮ್ಮ ಅಂದ ಹೆಚ್ಚಾಯ್ತಾ? ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಟಿಯ ಫ್ಯಾಷನ್ ಸೆನ್ಸ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಂತೂರ್ ಮಮ್ಮಿ ಎಂದು ಹಾಡಿ ಹೊಗಳಿದ್ದಾರೆ.
ಅಂದಹಾಗೆ, ಉದ್ಯಮಿ ನಿತಿನ್ ಜೊತೆ 2021ರಲ್ಲಿ ಹಸೆಮಣೆ ಏರಿದರು. ಅವರ ಸುಂದರ ದ್ಯಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ.
ಮದುವೆಯಾದ್ಮೇಲೆಯೂ ಸಿನಿಮಾಗಳಲ್ಲಿ ಪ್ರಣಿತಾ ಆ್ಯಕ್ಟೀವ್ ಆಗಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿ ಅಭಿನಯಿಸಿದ್ದರು. ದಿಲೀಪ್‌ಗೆ ನಾಯಕಿಯಾಗಿ ನಟಿಸಿದರು.
‘ಪೋರ್ಕಿ’ ಸಿನಿಮಾದ ಮೂಲಕ ದರ್ಶನ್‌ಗೆ (Darshan) ನಾಯಕಿಯಾಗಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸ್ಟಾರ್ ನಟನರ ಜೊತೆ ನಟಿಸಿದ್ದಾರೆ. ಜ್ಯೂ.ಎನ್‌ಟಿಆರ್, ರಾಮ್ ಪೋತಿನೇನಿ ಸೇರಿದಂತೆ ಅನೇಕರ ಜೊತೆ ತೆರೆಹಂಚಿಕೊಂಡಿದ್ದಾರೆ.
ಪ್ಯಾರಿಸ್: ಫ್ರಾನ್ಸ್ (France) ಪ್ರವಾಸದಲ್ಲಿರುವ ಪ್ರಧಾನಿ ಮೋದಿ (Narendra Modi) ಎಐ ಆಕ್ಷನ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೃತಕ ಬುದ್ದಿಮತ್ತೆ ವಿಚಾರದಲ್ಲಿ ಎಲ್ಲಾ ದೇಶಗಳು ಒಗ್ಗಟ್ಟಿನಿಂದ ಮುಂದಡಿ ಇಡಬೇಕು ಎಂದು ಕರೆ ನೀಡಿದರು. ಎಐನಿಂದ ಆಗುವ ಬದಲಾವಣೆಗಳ ಬಗ್ಗೆ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ (Emmanuel Macron) ಮತ್ತು ಅಮೆರಿಕ ಉಪಾಧ್ಯಕ್ಷ ಜೆಡಿ ವಾನ್ಸ್ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು.
ಪ್ಯಾರೀಸ್‌ಗೆ ಬಂದಿಳಿದ ಮೋದಿ ಅವರಿಗೆ ಅಲ್ಲಿನ ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಬುಧವಾರ ಪ್ರಧಾನಿ ಮೋದಿ, ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು, ಟ್ರಂಪ್ ಭೇಟಿ ಮಾಡಲಿದ್ದಾರೆ.
ಪ್ಯಾರಿಸ್: ಬ್ರಿಟನ್‌ಗೆ (Britain) ತೆರಳುತ್ತಿದ್ದ ವಲಸಿಗರ ದೋಣಿಯೊಂದು ಗುರುವಾರ ರಾತ್ರಿ ಫ್ರಾನ್ಸ್‌ನ (France) ಕರಾವಳಿಯ ಕಾಲುವೆಯಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ ಎಂದು ಫ್ರೆಂಚ್ ಕಡಲ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತವು ಫ್ರೆಂಚ್ ಪಟ್ಟಣವಾದ ವಿಸ್ಸಾಂಟ್‌ನಲ್ಲಿ ಸಂಭವಿಸಿದ್ದು, ಕಾಲುವೆ ಮತ್ತು ಉತ್ತರ ಸಮುದ್ರದ ಉಸ್ತುವಾರಿ ನೌಕಾ ಅಧಿಕಾರಿ ಎಎಫ್‌ಪಿಗೆ ತಿಳಿಸಿದರು. ಘಟನೆಯಲ್ಲಿ 65 ಜನರನ್ನು ರಕ್ಷಿಸಲಾಗಿದೆ ಆದರೆ ಒಂದು ಮಗು ಸಾವನ್ನಪ್ಪಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಂದಿನ ವಾರ ರಷ್ಯಾಗೆ ಪ್ರಧಾನಿ ಮೋದಿ ಭೇಟಿ
ಈ ಮೊದಲು ಸೆ. 3 ರಂದು 6 ಮಂದಿ ಸಾವನ್ನಪ್ಪಿದರು. 2018 ರಿಂದ ಈವರೆಗೆ ಕಾಲುವೆಯನ್ನು ದಾಟಲು ಪ್ರಯತ್ನಿಸುವಾಗ ಒಟ್ಟು 52 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ದಾಖಲೆಯಾಗಿದೆ. ಅಧಿಕೃತ ಬ್ರಿಟಿಷ್ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ಗೆ ದೋಣಿಗಳಲ್ಲಿ ಆಗಮಿಸುವ ವಲಸಿಗರ ಸಂಖ್ಯೆ 2020ಕ್ಕೆ ಹೋಲಿಸಿದರೆ ಈ ವರ್ಷ ಸರಾಸರಿ 53 ಆಗಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್ – ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಿದ ಮುಂಬೈ ಪೊಲೀಸರು
ಕುಡ್ಲದ ಸುಂದರಿ ಐಶ್ವರ್ಯಾ ರೈ (Aishwarya Rai) ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಚಮಕ್ ಕೊಟ್ಟಿದ್ದಾರೆ. ಮಗಳ ಜೊತೆ ಪ್ಯಾರಿಸ್‌ನಲ್ಲಿರುವ (Paris) ನಟಿ, ಇದೀಗ ಹೊಸ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ
ಅಂದಹಾಗೆ, ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದ ಕುರಿತು ಗುಸು ಗುಸು ಶುರುವಾಗಿದೆ. ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುವ ಹಂತದಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ನಟಿ ಪ್ಯಾರಿಸ್‌ನಲ್ಲಿ ಮದುವೆಯ ಉಂಗುರ ಧರಿಸುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.
ಇನ್ನೂ ಮದುವೆ ಬಳಿಕ ಮಗಳ ಆರೈಕೆ ಅಂತ ಬ್ಯುಸಿಯಿದ್ದ ನಟಿ ಮತ್ತೆ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಮಣಿರತ್ನಂ ನಿರ್ದೇಶನದ ಸಿನಿಮಾ ‘ಪೊನ್ನಿಯನ್ ಸೆಲ್ವನ್ 2’ (Ponniyin Selvan 2) ಮೂಲಕ ಐಶ್ವರ್ಯಾಗೆ ಸಕ್ಸಸ್ ಸಿಕ್ಕಿದೆ. ಮತ್ತೆ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ ನಟಿ.
ಪ್ಯಾರಿಸ್: ಈ ಬಾರಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ (Paris Paralympics 2024) ಚಿನ್ನದ ಪದಕದೊಂದಿಗೆ ತನ್ನ ಬೇಟೆ ಆರಂಭಿಸಿದ ಭಾರತದ ಅದ್ಭುತ ಪ್ರದರ್ಶನದೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಮಂಗಳವಾರ (ಆ.3) ಒಂದೇ ದಿನ 5 ಪದಕ ಗೆದ್ದಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲೇ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಸದ್ಯ ಭಾರತ ಪದಕ ಪಟ್ಟಿ 20ಕ್ಕೆ ಹೆಚ್ಚಾಗಿದೆ. ಈ ಮೂಲಕ ಟೋಕಿಯೊ ಕ್ರೀಡಾಕೂಟದಲ್ಲಿ ಗೆದ್ದಿದ್ದ 19 ಪದಕಗಳ ದಾಖಲೆ ಮುರಿದಿದೆ.
ಮಂಗಳವಾರ ಭಾರತಕ್ಕೆ ಅಥ್ಲೆಟಿಕ್ಸ್‌ನ (Indian Athletes) ಜಾವಲಿನ್ ಎಸೆತದಲ್ಲಿ 2, ಹೈ ಜಂಪ್‌ನಲ್ಲಿ 2 ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ 1 ಪದಕ ಲಭಿಸಿತು. ಸದ್ಯ ಭಾರತ 3 ಚಿನ್ನ, 7 ಬೆಳ್ಳಿ ಹಾಗೂ 10 ಕಂಚು ಜಯಿಸಿದೆ. ಟೋಕಿಯೋದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದಿತ್ತು. ಈ ಬಾರಿ ಕ್ರೀಡಾಕೂಟದಲ್ಲಿ ಇನ್ನೂ 4 ದಿನ ಬಾಕಿ ಇದ್ದು, ಭಾರತ ಮತ್ತಷ್ಟು ಪದಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ.
3ನೇ ಪದಕ ಗೆದ್ದ 3ನೇ ಅಥ್ಲಿಟ್:
ಮರಿಯಪ್ಪನ್ ತಂಗವೇಲು ಭಾರತದ ಪರ ಪ್ಯಾರಾಲಿಂಪಿಕ್ಸ್‌ನಲ್ಲಿ ಮೂರು ಬಾರಿ ಪದಕ ಗೆದ್ದ 3ನೇ ಕ್ರೀಡಾಪಟು ಎನಿಸಿಕೊಂಡರು. ಪುರುಷರ ಜಾವಲಿನ್‌ನಲ್ಲಿ ದೇವೇಂದ್ರ ಝಝಾರಿಯಾ 2 ಚಿನ್ನ, 1 ಬೆಳ್ಳಿ, ಶೂಟಿಂಗ್‌ನಲ್ಲಿ ಅವನಿ ಲೇಖರಾ 2 ಚಿನ್ನ, ಕಂಚು ಗೆದ್ದಿದ್ದಾರೆ. ತಂಗವೇಲು 2016ರ ರಿಯೋ ಕ್ರೀಡಾಕೂಟದಲ್ಲಿ ಚಿನ್ನ, 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮುಡಗೇರಿಸಿಕೊಂಡಿದ್ದರು. ಇದನ್ನೂ ಓದಿ: Paralympics | ಮನೀಶಾ ಕಂಚಿನ ಮಿಂಚು – ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ!
ಕಂಚು ಗೆದ್ದ ನಿತ್ಯಶ್ರೀ:
ಬ್ಯಾಡ್ಮಿಂಟನ್‌ನಲ್ಲಿ ಈ ಬಾರಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಸೋಮವಾರ ಮಧ್ಯರಾತ್ರಿ ಮಹಿಳೆಯರ ಸಿಂಗಲ್ಸ್‌ನ ಎಎಚ್6 ವಿಭಾಗ (ಕುಬ್ಬ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ)ದಲ್ಲಿ ನಿತ್ಯಶ್ರೀ ಶಿವನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್
ಮನೀಶಾ ಕಂಚಿನ ಮಿಂಚು
ಬ್ಯಾಡ್ಮಿಂಟನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಎಸ್‌ಯು5 ವಿಭಾಗದಲ್ಲಿ ಭಾರತದ ಮನೀಶಾ ರಾಮದಾಸ್ (Manisha Ramadass) ಕಂಚಿನ ಪದಕ ಗೆದ್ದು ಬೀಗಿದರು. ಲಾ ಚಾಪೆಲ್ಲೆ ಅರೆನಾ ಕೋರ್ಟ್ 3 ರಲ್ಲಿ ಡೆನ್ಮಾರ್ಕ್‌ನ ಕ್ಯಾಥರೀನ್ ರೋಸೆಂಗ್ರೆನ್ ಅವರನ್ನು 25 ನಿಮಿಷಗಳಲ್ಲಿ 21-12, 21-8 ಸೆಟ್‌ಗಳಿಂದ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥುನಿಯಾಗೆ ಬೆಳ್ಳಿ:
ಭಾರತದ ಯೋಗೇಶ್ ಕಥುನಿಯಾ (Yogesh Kathuniya) ಅವರು ಪುರುಷರ ಡಿಸ್ಕಸ್ ಥ್ರೋ ಎಫ್-56 ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ದಿದರು. 42.22 ಮೀಟರ್ ಡಿಸ್ಕಸ್ ಎಸೆಯುವ (Discus Throw, )ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.
ಇದಕ್ಕೂ ಮುನ್ನ 2023ರ ಅರ್ಜುನ ಪ್ರಶಸ್ತಿ ವಿಜೇತೆ, ಬಿಲ್ಲುಗಾರ್ತಿ ಶೀತಲ್ ದೇವಿ (Sheetal Devi), ಕ್ರೀಡಾಪಟುಗಳಾದ ನಿಶಾದ್ ಕುಮಾರ್ ಬೆಳ್ಳಿ, ಪ್ರೀತಿ ಪಾಲ್ ಕಂಚು, ಶೂಟರ್ ರುಬಿನಾ ಫ್ರಾನ್ಸಿಸ್ ಕಂಚು, ಶೂಟರ್ ಅವನಿ ಲೆಖರಾ ಚಿನ್ನ ಹಾಗೂ ಮೋನಾ ಅಗರ್ವಾಲ್ ಕಂಚಿನ ಪದಕ ಬಾಚಿಕೊಂಡರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್ ಶೂಟ್
ತೆಲುಗಿನ ಖ್ಯಾತ ನಟ ಚಿರಂಜೀವಿ (Chiranjeevi) ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪತ್ನಿಯೊಂದಿಗೆ ಪಾಲ್ಗೊಂಡಿದ್ದಾರೆ. ಭಾಗವಹಿಸಿದ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆ ಆಗುತ್ತಿದೆ ಎಂದು ಅವರು ಫೋಟೋ ಕೂಡ ಶೇರ್ ಮಾಡಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟ ಅದ್ಧೂರಿಯಾಗಿ ಆರಂಭವಾಗಿದ್ದು, ಮೊದಲ ದಿನವೇ ಚೀನಾ ಚಿನ್ನದ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದೆ. ಶನಿವಾರ (ಜು.27) ನಡೆದ 10 ಮೀಟರ್ ಏರ್ ರೈಫಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಚೀನಾದ ಶೂಟರ್‌ಗಳಾದ (Chinese Shooters) ಹುವಾಂಗ್ ಯುಟಿಂಗ್ ಮತ್ತು ಶೆಂಗ್ ಲಿಹಾವೊ ಜೋಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚೀನಾಗೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಇದು ಪ್ರಸಕ್ತ ಕ್ರೀಡಾಕೂಟದಲ್ಲಿ ಗೆದ್ದ ಮೊದಲ ಚಿನ್ನದ ಪದಕವೂ ಆಗಿದೆ.
ಏರ್ ರೈಫಲ್ ಸ್ಪರ್ಧೆಯ ಫೈನಲ್ ರೌಂಡ್‌ನಲ್ಲಿ ದಕ್ಷಿಣ ಕೊರಿಯಾದ ಲಿಹಾವೊ ಶೆಂಗ್‌ನ ಜಿಹ್ಯೆನ್ ಕೆಯುಮ್ – ಹಜುನ್ ಪಾರ್ಕ್ ಜೋಡಿಯನ್ನು 16-12 ಅಂತರದಲ್ಲಿ ಸೋಲಿಸುವ ಮೂಲಕ ಹುವಾಂಗ್ ಮತ್ತು ಶೆಂಗ್ ಜೋಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಇದಕ್ಕೂ ಮುನ್ನ 10 ಮೀಟರ್ ಮಿಶ್ರ ತಂಡಗಳ ಏರ್ ರೈಫಲ್ ಸ್ಪರ್ಧೆಯಲ್ಲಿ ಕಝಕಿಸ್ತಾನದ ಅಲೆಕ್ಸಾಂಡ್ರಾಲೆ ಮತ್ತು ಇಸ್ಲಾಂ ಸತ್ಪಯೇವ್ ಜೋಡಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇದು ಈ ಟೂರ್ನಿಯ ಮೊದಲ ಪದಕವಾಗಿದೆ.
ಪ್ಯಾರಿಸ್‌ನ ಸೆನ್ ನದಿಯ ಮೇಲೆ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11 ಗಂಟೆಗೆ 2024ರ ಒಲಿಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಕೆಲ ತಂಡಗಳಿಗೆ ಪ್ರತ್ಯೇಕ ಬೋಟ್ ಸಿಕ್ಕರೆ, 3-4 ತಂಡಗಳನ್ನು ಒಟ್ಟಿಗೆ ಸೇರಿಸಿ ಬೋಟ್‌ನಲ್ಲಿ ಪಥ ಸಂಚಲನ ನಡೆಸಿದರು. ಪಥ ಸಂಚಲನದ ವೇಳೆ ತುಂತುರು ಮಳೆ ಬಂದರೂ ಸ್ಪರ್ಧಿಗಳು ಉತ್ಸಾಹದಿಂದ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಸೀನ್ ನದಿಯ ಆಸ್ಟರ್‌ಲಿಟ್ಜ್ ಬ್ರಿಡ್ಜ್‌ನ ಬಳಿ ಆರಂಭಗೊಂಡ ಪಥ ಸಂಚಲನ 6 ಕಿ.ಮೀ ದೂರದಲ್ಲಿರುವ ಐಫಲ್ ಟವರ್ ಬಳಿ ಮುಕ್ತಾಯಗೊಂಡಿತು.
ಪ್ರಯಣನಗರಿ ಪ್ಯಾರಿಸ್‌ನಲ್ಲೀಗ ಒಲಿಂಪಿಕ್ಸ್ ಕ್ರೀಡಾಕೂಟ (Olympics 2024) ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಕ್ರೀಡೋತ್ಸವ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಅಖಾಡದಲ್ಲಿ ಸೆಣಸಲು ತೊಡೆ ತಟ್ಟಿ ನಿಂತಿದ್ದಾರೆ. ಒಲಿಂಪಿಕ್ಸ್ ವೇದಿಕೆಯಲ್ಲಿ ವಿಶ್ವದ ಅಗ್ರ ಕ್ರೀಡಾಪಟುಗಳು ಒಬ್ಬರನ್ನೊಬ್ಬರು ಸೆಣಸುವುದನ್ನು ಇಡೀ ವಿಶ್ವವೇ ಉಸಿರು ಬಿಗಿಹಿಡಿದು ನೋಡುತ್ತಿರುತ್ತದೆ. ಇಲ್ಲಿ ಪದಕ ಗಳಿಸುವ ಹುರಿಯಾಳುಗಳ ಸಾಧನೆ, ಮಾನವೀಯತೆಗೆ ಸವಾಲೊಡ್ಡುವ ದೃಶ್ಯಗಳೂ ಹೆಮ್ಮೆಯಿಂದ ಎದೆ ಉಬ್ಬಿಸುವಂತೆ ಮಾಡುತ್ತದೆ. ಇದು ಕೇವಲ ಒಲಿಂಪಿಕ್ಸ್ ಅಲ್ಲ, ಇಡೀ ವಿಶ್ವವೇ ಆಚರಿಸುವ ಅದ್ಧೂರಿ ಕ್ರೀಡಾಜಾತ್ರೆ. ಕಣದಲ್ಲಿರುವ ವಿಶ್ವಚೇತನಗಳನ್ನ ತಟ್ಟಿ ಎಬ್ಬಿಸಿ, ದಾಖಲೆ ಮುಟ್ಟುವಂತೆ ಪ್ರೇರೇಪಿಸುವ ಅದ್ಬುತ ಅಂಗಳವೂ ಇದಾಗಿದೆ. ಅದರಲ್ಲೂ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅತ್ಯಂತ ವಿಶೇಷವೆಂದೇ ಹೇಳಬಹುದು. ಏಕೆಂದರೆ 1900ರಲ್ಲಿ ಆಧುನಿಕ ಯುಗದ ಒಲಿಂಪಿಕ್ಸ್ ಕೂಟಕ್ಕೆ ನಾಂದಿ ಹಾಡಿದ್ದ ಪ್ಯಾರಿಸ್‌ನಲ್ಲಿ (Paris) ಈಗ 3ನೇ ಐತಿಹಾಸಿಕ ಒಲಿಂಪಿಕ್ಸ್ ಮೇಳ ನಡೆಯುತ್ತಿರುವುದು ಮತ್ತೊಂದು ವಿಶೇಷ.
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ವಿಶ್ವದ ಎಲ್ಲಾ ಕ್ರೀಡಾಪಟುಗಳು (Athletes) ಈಗಾಗಲೇ ಪ್ಯಾರಿಸ್ ಅಂಗಳ ತಲುಪಿದ್ದು, ಜುಲೈ 26ರಂದು (ಶುಕ್ರವಾರ) ಅಧಿಕೃತ ಚಾಲನೆ ದೊರೆಯಲಿದೆ. ಭಾರತದಿಂದ ಈ ಬಾರಿ 117 ಕ್ರೀಡಾಪಟುಗಳು ಹಾಗೂ 140 ಮಂದಿ ಕ್ರೀಡಾ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಲಿಂಪಿಕ್ಸ್ ಜಾತ್ರೆಯ ಇತಿಹಾಸ ತಿಳಿಯುವುದು ಅತೀ ಮುಖ್ಯ. ಮೊದಲ ಒಲಿಂಪಿಕ್ಸ್ ಯಾವಾಗ ಶುರುವಾಯ್ತು ಅಂದ್ರೆ ಎಲ್ಲರೂ ಹೇಳೋದು 1896ರಲ್ಲಿ ಗ್ರೀಸ್‌ನ ರಾಜಧಾನಿ ಅಥೆನ್ಸ್ ನಗರದಲ್ಲಿ ಶುರುವಾಯಿತು ಎಂದು. ಆದ್ರೆ ಕ್ರೀಸ್ತಪೂರ್ವದಲ್ಲೇ ಒಲಿಂಪಿಕ್ಸ್ ಶುರುವಾಗಿತ್ತು ಎಂಬುದಕ್ಕೆ ಪುರಾವೆಗಳು ಇವೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಮುಂದೆ ಓದಿ…
ಕ್ರಿಸ್ತಪೂರ್ವದಲ್ಲಿ ಹುಟ್ಟಿದ ಒಲಿಂಪಿಕ್ಸ್
ಹೌದು. ಕೆಲ ದಾಖಲೆಯ ಪ್ರಕಾರ ಮೊದಲ ಒಲಿಂಪಿಕ್ಸ್ ನಡೆದಿದ್ದು, ಕ್ರಿ.ಪೂರ್ವ 776ರಲ್ಲಿ, ಈ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಗೆದ್ದುಕೊಂಡ ಮೊದಲ ಓಟಗಾರ ಒಬ್ಬಬಾಣಸಿಗ. ಅಚ್ಚರಿಯಾದರೂ ನೀವು ಇದನ್ನು ನಂಬಲೇಬೇಕು. ಎಲಿಸ್ ದ್ವೀಪದ ʻಕೊರೋಬಸ್ʼ ಎಂಬ ಹೆಸರಿನ ಈ ಬಾಣಸಿಗ, ʻಸ್ಟೇಡ್ʼ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ. ಆ ಕಾಲದಲ್ಲಿ ಮೊದಲು ಬಂದವರಿಗಷ್ಟೇ ಮನ್ನಣೆ ಸಿಗುತ್ತಿತ್ತು. ಹಾಗಾಗಿ ಬಹುಮಾನವಾಗಿ ಅವನ ತಲೆಯ ಮೇಲೆ ʻಕೋಟಿನೋಸ್ʼ (ಕಾಡು ಆಲಿವ್ ಮರದ ಎಲೆಗಳನ್ನು ಸೇರಿಸಿ ಮಾಡಿದ ವೃತ್ತಾಕಾರದ ಕಿರೀಟ) ಇಟ್ಟು ಗೌರವಿಸಲಾಗುತ್ತಿತ್ತು.
ʻಒಲಿಂಪಿಯಾ ಬೆಟ್ಟʼದ ಕ್ರೀಡೆ
ಹೌದು. ಕ್ರಿಸ್ತಪೂರ್ವದಲ್ಲಿ ಒಲಿಂಪಿಕ್ಸ್ ಕ್ರೀಡೆ ನಡೆಯುತ್ತಿದ್ದದ್ದು ʻಒಲಿಂಪಿಯಾ’ ಎಂಬ ಬೆಟ್ಟದಲ್ಲಿ. ಆ ಕಾಲದಲ್ಲಿ ಇದು ಗ್ರೀಸ್‌ನ ಧಾರ್ಮಿಕ ಕೇಂದ್ರವಾಗಿತ್ತು. ಬೆಟ್ಟದ ಮೇಲಿನ ಜೀಯಸ್‌ನ ಪ್ರಾರ್ಥನಾ ಮಂದಿರ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿತ್ತು ಎಂದೂ ಸಹ ಹೇಳಲಾಗಿದೆ. ಒಲಿಂಪಿಯಾದ ಕ್ರೀಡಾಂಗಣ 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಷ್ಟು ವಿಶಾಲವಾಗಿತ್ತು. ಈ ಕ್ರೀಡಾಂಗಣದ ಸುತ್ತ ಕ್ರೀಡಾಳುಗಳ ತರಬೇತಿಗಾಗಿ ಭವ್ಯ ಕಟ್ಟಡಗಳಿದ್ದವು. ದಂತಕಥೆಗಳ ಪ್ರಕಾರ ಜೀಯಸ್‌ನ ಮಗ ಹರ್ಕ್ಯುಲಸ್ (ಹೆರಾಕ್ಲಿಸ್) ಈ ಕ್ರೀಡಾಕೂಟ ಆರಂಭಿಸಿದರು ಎಂದು ಹೇಳಲಾಗಿದೆ. ಹೆರಾಕ್ಲಿಸ್ ಈ ಕ್ರೀಡೋತ್ಸವಕ್ಕಾಗಿ ದೇವತೆ ಅಥೆನಾಳ ನೆರವಿನಲ್ಲಿ ಬೆಟ್ಟದ ಮೇಲೆ ಒಲಿಂಪಿಯಾ ದೇವಾಲಯ ಮತ್ತು ವಿಶಾಲ ಕ್ರೀಡಾಂಗಣ ನಿರ್ಮಿಸಿದ.
ಒಲಿಂಪಿಕ್ಸ್‌ನಲ್ಲಿ ಒಂದೇ ಓಟ
ಆರಂಭದ ಒಲಿಂಪಿಕ್ಸ್‌ನಲ್ಲಿ ʻಸ್ಟೇಡ್ʼ ಎಂಬ ಓಟದ ಸ್ಪರ್ಧೆ ಮಾತ್ರ ನಡೆಯಿತು. ಪುರುಷರು ಮತ್ತು ಹುಡುಗರಿಗೆ ಮಾತ್ರ ಮೀಸಲಾಗಿತ್ತು. ಈ ಓಟದ ದೂರವನ್ನು ಸ್ವತಃ ಹರ್ಕ್ಯುಲಸ್ ನಿಗದಿ ಮಾಡಿದ್ದ. ಮುಂದೆ ಪೆಂಟಾಥಾನ್ ಅಂದ್ರೆ ಜಾವೆಲಿನ್ ಎಸೆತ, ದೂರ ನೆಗೆತ, ಡಿಸ್ಕಸ್ ಎಸೆತ, ಓಟ ಮತ್ತು ಕುಸ್ತಿ ಐದು ಸ್ಪರ್ಧೆಗಳು, ಚಾರಿಯಟ್ ರೇಸ್ (ರಥಗಳ ಓಟ) ಮತ್ತು ಮುಷ್ಟಿಯುದ್ಧ ಸ್ಪರ್ಧೆಗಳನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಲಾಗಿತ್ತು. ಗ್ರೀಸ್‌ನ ಹಲವು ರಾಜ್ಯಗಳ ನಡುವೆ ಆಗಾಗ್ಗೆ ಯುದ್ಧ ನಡೆಯುತ್ತಿತ್ತು. ಆದ್ರೆ ಒಲಿಂಪಿಕ್ಸ್ ಸಂದರ್ಭದಲ್ಲಿ ಶಾಂತಿ ಪಾಲನೆ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಗ್ರೀಕ್ ಭಾಷೆ ಅರಿತ ಯಾವ ಸ್ವತಂತ್ರ ನಾಗರಿಕನೂ ಇಲ್ಲಿ ಭಾಗವಹಿಸಬಹುದಿತ್ತು. ಯಾವುದೇ ತಾರತಮ್ಯವೂ ಇರಲಿಲ್ಲ. ಕ್ರೀಡಾಂಗಣದಲ್ಲಿ ಸ್ಪರ್ಧಿಗಳು ಮೈಮೇಲೆ ಬಟ್ಟೆ ತೊಡುತ್ತಿರಲಿಲ್ಲ. ಹೀಗಾಗಿ ವಿವಾಹಿತ ಮಹಿಳೆಯರಿಗೆ ಈ ಕ್ರೀಡಾಂಗಣದೊಳಗೆ ಪ್ರವೇಶ ನಿಷಿದ್ಧವಾಗಿತ್ತು. ಆದ್ದರಿಂದ ರಾಜ ಪೆಲೋಪ್ಸ್ನ ಮಡದಿ ಹಿಪ್ಪೋಡಾಮಿಯಾ ಮಹಿಳೆಯರಿಗಾಗಿ ಪ್ರತ್ಯೇಕ ಹೇರಿಯಾ ಕ್ರೀಡೆಗಳನ್ನು ಆರಂಭಿಸಿದಳು. ಈ ಓಟಗಳಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಅವಕಾಶ ಇತ್ತು.
ಕಣ್ಮರೆಯಾಯ್ತು ಒಲಿಂಪಿಯಾ ಪಟ್ಟಣ
ಕಾಲಕ್ರಮೇಣ ಗ್ರೀಕ್ ಯುವಕರು ಆಟೋಟಗಳಿಂದ ದೂರವಾದರು. ಕ್ರಿಸ್ತಪೂರ್ವ 146ರ ಸುಮಾರಿಗೆ ರೋಮನ್ನರು ಗ್ರೀಸ್ ದೇಶವನ್ನು ಕಬಳಿಸಿದ ಬಳಿಕ ಒಲಿಂಪಿಕ್ಸ್‌ನ ಸ್ವರೂಪವೇ ಬದಲಾಯಿತು. ಒಲಿಂಪಿಕ್ಸ್ ಜೊತೆ ಸೇರಿದ್ದ ಧಾರ್ಮಿಕ ಸಂಪ್ರದಾಯಗಳು ಕಾಣೆಯಾಗಿ ರೋಮನ್ನರ ವಿಕೃತ ಕ್ರೀಡೆಗಳು ಆರಂಭವಾದವು. ಗ್ಲಾಡಿಯೇಟರ್‌ಗಳು, ಗುಲಾಮರು ಮತ್ತು ಕ್ರೂರ ಪ್ರಾಣಿಗಳ ನಡುವೆ ರಕ್ತಪಾತದ ಕ್ರೀಡೆಗಳು ಸ್ಟೇಡಿಯಮ್‌ಗಳಲ್ಲಿ ನಡೆದವು. ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದ ಥಿಯೋಡೋಸಿಯಸ್ ರೋಮ್‌ನ ಗದ್ದುಗೆ ಏರಿದ. ಬಳಿಕ ಕ್ರಿ.ಶ. 394ರಲ್ಲಿ ಈ ಕ್ರೀಡೆಗಳಿಗೆ ಶಾಶ್ವತ ಬಹಿಷ್ಕಾರ ಹಾಕಿದ. ಅಲ್ಲಿಗೆ ಸುಮಾರು 1,200 ವರ್ಷಗಳ ಇತಿಹಾಸದ ಒಲಿಂಪಿಕ್ಸ್ ಪರಿಸಮಾಪ್ತಿಯಾಯಿತು. ಕಾಲಾಂತರದಲ್ಲಿ ಒಲಿಂಪಿಕ್ಸ್ ಬರೀ ನೆನಪಾಗಿ ಉಳಿಯಿತು. ಮುಂದಿನ ಶತಮಾನಗಳಲ್ಲಿ ಒಲಿಂಪಿಯಾ ಪಟ್ಟಣವೇ ಕಣ್ಮರೆಯಾಯಿತು. ʻಒಲಿಂಪಿಯಾ’ ಎಂದರೆ, ಒಂದು ಕಾಲ್ಪನಿಕ ಸ್ಥಳ, ತಮ್ಮ ಪುರಾಣಗಳಲ್ಲಿ ಬರುವ ಒಂದು ದಂತಕಥೆ ಮಾತ್ರ ಎಂದು ಗ್ರೀಕರು ನಂಬತೊಡಗಿದರು.
ಒಲಿಂಪಿಕ್ಸ್‌ಗೆ ಮರುಜೀವ
18ನೇ ಶತಮಾನದ ವೇಳೆಗೆ ಗ್ರೀಸ್ ದೇಶ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯದ ಸಾಮಂತ ರಾಷ್ಟ್ರವಾಗಿತ್ತು. ಒಟ್ಟೋಮನ್‌ಗಳ ವಿರುದ್ಧ ಗ್ರೀಕರು ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಆ ಕಾಲದಲ್ಲಿ ʻಪೆಲೋಪೊನೀಸ್’ ಎಂಬ ದ್ವೀಪದ ನಡುವೆ ಮರಳಿನಲ್ಲಿ ಒಂದು ಪುರಾತನ ಸ್ತಂಭದ ಅವಶೇಷ ಪತ್ತೆಯಾಗಿತ್ತು. ಜರ್ಮನಿಯ ಆರ್ನ್ಸ್ ಕರ್ಟಿಯಸ್ (1814-1896) ಎಂಬ ಪುರಾತತ್ತ್ವ ಶೋಧಕ, ಈ ಸ್ತಂಭದ ಕೆಳಗೆ ಗ್ರೀಸ್‌ನ ಗತಕಾಲದ ಇತಿಹಾಸ ಇರಬೇಕು ಎಂದು ಲೆಕ್ಕ ಹಾಕಿದ್ದ. ಅವನ ಸತತ ಪ್ರಯತ್ನದ ಫಲವಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಒಲಿಂಪಿಯಾ ಪಟ್ಟಣ ಮೇಲೆದ್ದು ಬಂತು. ʻಒಲಿಂಪಿಯಾ’ ಎಂಬ ಜಾಗ ನಿಜಕ್ಕೂ ಇತ್ತು ಎಂದು ತಿಳಿದಾಗ ಜಗತ್ತೇ ಬೆರಗಾಗಿತ್ತು.
ಒಲಿಂಪಿಕ್ಸ್‌ನ ಅವಶೇಷಗಳ ನಡುವೆ ʻಪಾನಥಿನಾಯ್ಯೋಸ್’ ಎಂಬ ಪ್ರಾಚೀನ ಕ್ರೀಡಾಂಗಣ ಬೆಳಕಿಗೆ ಬಂತು. ಇವಾಂಜೆಲೋಸ್ ಜಾಪ್ಪಾಸ್ ಎಂಬ ಧನಿಕ ಗ್ರೀಕ್ ವ್ಯಾಪಾರಿ 1859ರಲ್ಲಿ ಈ ಸ್ಟೇಡಿಯಮ್‌ನ ಪುನರುತ್ಥಾನ ಮಾಡಿ, ಅಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಿದ. ಈ ಬಗ್ಗೆ ಐರೋಪ್ಯ ಪತ್ರಿಕೆಗಳು ವರದಿ ಮಾಡಿದ್ದವು. ಈ ಕ್ರೀಡೋತ್ಸವದ ಯಶಸ್ಸಿನಿಂದ ಉತ್ತೇಜಿತನಾದ ಜಾಪ್ಪಾಸ್ 1870 ಮತ್ತು 1875ರಲ್ಲಿ ಒಲಿಂಪಿಕ್ಸ್‌ನಲ್ಲಿ ಇನ್ನೆರಡು ಅಂತಾರಾಷ್ಟ್ರೀಯ ಕ್ರೀಡಾಮೇಳಗಳನ್ನು ನಡೆಸಿದ. ಫ್ರಾನ್ಸ್‌ನ ಗಣ್ಯ ಬ್ಯಾರನ್ ಪಿಯರೆ ಡಿ ಕೂಬರ್ಟಿನ್ ಈ ಸುದ್ದಿಯಿಂದ ಪ್ರೇರಣೆ ಪಡೆದಿದ್ದ. ಯುವಕರ ಮನಸ್ಸನ್ನು ಕ್ರೀಡೆಯತ್ತ ತಿರುಗಿಸಿದರೆ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ, ಜಗತ್ತು ಒಂದುಗೂಡುತ್ತದೆ ಎಂಬುದನ್ನ ಮನಗಂಡ. ಹಾಗಾಗಿ ಕೂಬರ್ಟಿನ್ 1893ರಲ್ಲಿ ಒಂಬತ್ತು ದೇಶಗಳ 79 ಪ್ರತಿನಿಧಿಗಳನ್ನು ಸೇರಿಸಿ ಒಲಿಂಪಿಕ್ಸ್ ಮತ್ತೆ ಆರಂಭಿಸುವ ಬಗ್ಗೆ ತಿಳಿಸಿದ. ʻಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ’ (IOA) ಇಲ್ಲಿ ಹುಟ್ಟಿಕೊಂಡಿತು ಎನ್ನಲಾಗಿದೆ.
ಗ್ರೀಸ್‌ನ ಐತಿಹಾಸಿಕ ರಾಜಧಾನಿ ಅಥೆನ್ಸ್‌ನಲ್ಲಿ ಮೊದಲ ಒಲಿಂಪಿಕ್ಸ್ ನಡೆಸಬೇಕೆಂಬ ತೀರ್ಮಾನ ಕೂಡ ಅಲ್ಲೇ ತೆಗೆದುಕೊಳ್ಳಲಾಗಿತ್ತು. ಅದರಂತೆ 1896ರಲ್ಲಿ ಗ್ರೀಸ್‌ನ ಅಥೆನ್ಸ್ ನಗರದಲ್ಲಿ ಆಧುನಿಕ ಯುಗದ ಮೊದಲ ಅದ್ಧೂರಿ ಕ್ರೀಡಾ ಜಾತ್ರೆ ನಡೆಯಿತು. ಇಂದಿಗೂ ಅದು ಮುಂದುವರಿದಿದೆ. 2024ರ ಕ್ರೀಡಾಕೂಟಕ್ಕೆ ವಿಶ್ಚ ವೇದಿಕೆ ಪ್ಯಾರಿಸ್‌ನಲ್ಲಿ ಸಜ್ಜಾಗಿದೆ.
– ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಉಗ್ರರಿಂದ ಬೆದರಿಕೆ; ಭಯಾನಕ ವೀಡಿಯೋ ಬಿಡುಗಡೆ
ಪ್ಯಾರಿಸ್: ಕ್ರೀಡೆಗಳ ಮಹಾ ಸಂಗಮ ಒಲಿಂಪಿಕ್ಸ್-2024ರ (Paris Olympics) ಕ್ರೀಡಾಹಬ್ಬ ಇದೇ ಜುಲೈ 26 ರಿಂದ ಆರಂಭವಾಗುತ್ತಿದೆ. ಅದ್ಧೂರಿ ಕ್ರೀಡಾ ಉತ್ಸವಕ್ಕೆ ಪ್ಯಾರಿಸ್ ಸಹ ಸಜ್ಜಾಗಿದೆ. ಇಂತಹ ಸಂದರ್ಭದಲ್ಲೇ ನಡೆದ ಅಹಿತಕರ ಘಟನೆಯೊಂದು ಕ್ರೀಡಾಭಿಮಾನಿಗಳನ್ನು (Sports Fans) ಬೆಚ್ಚಿ ಬೀಳಿಸಿದೆ.
SHOCKING NEWS ???? Australian women brutaIIy ra*ped in Paris by 5 migrants ahead of Olympics Games.
Entire World in SH0CK !!
She begged for help from kebab shop staff and customers.
The tourist woman stated that she was ra*ped by five after they discovered that she was… pic.twitter.com/fUgx0OMaqc
ಹೌದು. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ವೀಕ್ಷಣೆಗೆಂದು ಬಂದಿದ್ದ ಆಸ್ಟ್ರೇಲಿಯಾ ಮೂಲದ 25 ವರ್ಷದ ಮಹಿಳೆಯ (Australian Woman) ಮೇಲೆ ಐವರು ಕಾಮುಕರು ಗ್ಯಾಂಗ್ ರೇಪ್ ಮಾಡಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ಸುದ್ದಿಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದನ್ನೂ ಓದಿ: Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ
ಇದೇ ಜುಲೈ 19ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೌಲಿನ್ ರೋಗ್ ಕ್ಯಾಬರ್ಟ್‌ನ ಪಬ್‌ವೊಂದರಲ್ಲಿ ಮದ್ಯ ಸೇವಿಸಿ, ಹೊರ ಬರುವ ಸಂದರ್ಭದಲ್ಲಿ ಆಕೆಯನ್ನು ಐವರು ಕಾಮುಕರ ಗ್ಯಾಂಗ್ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಫ್ರಾನ್ಸ್ನಲ್ಲಿ ಮಹಿಳೆಯರಿಗೆ ಸರಿಯಾದ ಸುರಕ್ಷತೆ ಇಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಂಬೈಗೆ ಗುಡ್‌ಬೈ ಹೇಳ್ತಾರಾ ರೋಹಿತ್, ಬುಮ್ರಾ, ಸೂರ್ಯ? – 2025ರ ಐಪಿಎಲ್‌ನ ಮಹತ್ವದ 5 ಬೆಳವಣಿಗೆಗಳು ಹೀಗಿವೆ
⚠️BREAKING: Palestinian terrorists have released a horrific video threatening Paris and the Olympics:
“You will pay for what you have done. Rivers of blood will flow through the streets of Paris”
If anyone actually thinks peace can be made with them, they are out of their mind. pic.twitter.com/JdfFbGnrHe
ವೈರಲ್ ವೀಡಿಯೋನಲ್ಲಿ ಏನಿದೆ?
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಸಂತ್ರಸ್ತ ಮಹಿಳೆ ಹರಿದ ಬಟ್ಟೆಯಲ್ಲಿದ್ದು, ಸ್ಥಳೀಯರ ರಕ್ಷಣೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅನೇಕ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪ್ಯಾರಿಸ್ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದರೂ ಈ ಘಟನೆ ನಡೆದಿರುವುದು ನಿಜಕ್ಕೂ ಆಘಾತಕಾರಿ ಸಂಗತಿ, ಇದರಿಂದ ಅನೇಕ ಕ್ರೀಡಾಭಿಮಾನಿಗಳೂ ಆತಂಕಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್ ಪಂತ್?
ಭಯೋತ್ಪಾದಕರಿಂದ ಬೆದರಿಕೆ:
ಪ್ಯಾರಿಸ್ ಒಲಿಂಪಿಕ್ಸ್-2024 ಕ್ರೀಡಾಕೂಟಕ್ಕೆ ಈಗಾಗಲೇ ಹಮಾಸ್ ಉಗ್ರರು ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ಮಹಿಳೆಯ ತಲೆ ಕತ್ತರಿಸಿದ ಭಯಾನಕ ವೀಡಿಯೋವೊಂದನ್ನೂ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಪ್ಯಾರಿಸ್ ಒಲಿಂಪಿಕ್ಸ್ ಕೂಟಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಫ್ರಾನ್ಸ್ ಜೊತೆಗೆ ಭಾರತದ ಯೋಧರೂ ಭದ್ರತೆಗೆ ಕೈಜೋಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್ ಪಟ್ಟು!
ಒಲಿಂಪಿಕ್ಸ್‌ಗೆ ಭಾರತ ತಂಡ ಸಜ್ಜು:
ಜುಲೈ 26ರಿಂದ ಶುರುವಾಗುವ ಕ್ರೀಡಾಕೂಟದಲ್ಲಿ 117 ಅಥ್ಲೀಟ್ಸ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ಮಾಹಿತಿ ನೀಡಿದ್ದಾರೆ. ಕ್ರೀಡಾಪಟುಗಳ ಜೊತೆಗೆ 140 ಸಹಾಯಕ ಸಿಬ್ಬಂದಿ (ಒಟ್ಟು 257) ಕ್ರೀಡಾಗ್ರಾಮ ತಲುಪಲಿದ್ದಾರೆ.
ಮುಂಬೈ: ಫ್ರಾನ್ಸಿನ (France) ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ (Paris Olympics) ನೇರ ಪ್ರಸಾರವನ್ನು ಭಾರತದ ವೀಕ್ಷಕರು ಜಿಯೋ ಸಿನಿಮಾದಲ್ಲಿ (Jio Cinema) ಉಚಿತವಾಗಿ ವೀಕ್ಷಿಸಬಹುದು.
ಭಾರತದಲ್ಲಿ ಮೊದಲ ಬಾರಿಗೆ ಜಿಯೋ ಸಿನಿಮಾ ಒಲಿಂಪಿಕ್ಸ್‌ಗಾಗಿ 20 ಏಕಕಾಲಿಕ ಫೀಡ್‌ಗಳನ್ನು ಉಚಿತವಾಗಿ ನೀಡಲಿದೆ. ಎಲ್ಲವೂ 4K ವಿಡಿಯೋ ಆಗಿದ್ದು, ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಪ್ರಸಾರವಾಗಲಿದೆ. Sports18 ಸ್ಯಾಟಲೈಟ್ ವಾಹಿನಿಯ ಮೂಲಕ ಟಿವಿಯಲ್ಲೂ ಒಲಿಂಪಿಕ್ಸ್ ವೀಕ್ಷಣೆ ಮಾಡಬಹುದು. ಇದನ್ನೂ ಓದಿ: ಭಾರತ-ಲಂಕಾ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ – ಕೋಚ್ ಆಗಿ ʻಗಂಭೀರ್ ಹೊಸ ಅಧ್ಯಾಯʼ ಶುರು!
ಒಲಿಂಪಿಕ್ಸ್ ಕುಸ್ತಿಯಲ್ಲಿ ಚಿನ್ನದ ಪದಕ ಗೆದ ಸಾಕ್ಷಿ ಮಲಿಕ್, ಬಾಕ್ಸರ್ ವಿಜೇಂದರ್ ಸಿಂಗ್, ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವು ಕ್ರೀಡಾಪಟುಗಳು ತಜ್ಞರ ಕ್ರೀಡಾ ಪ್ಯಾನಲ್‌ನಲ್ಲಿದ್ದಾರೆ.
ಜುಲೈ 26 ರಿಂದ ಪ್ಯಾರಿಸ್ ಒಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆಗಸ್ಟ್ 11 ರಂದು ಮುಕ್ತಾಯವಾಗಲಿದೆ.