Tag: ಪ್ಯಾನ್ ಕಾರ್ಡ್

  • ಧರ್ಮಸ್ಥಳ ಕೇಸ್‌ | ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್ ಕಾರ್ಡ್‌ ‌ರಹಸ್ಯ ಬಯಲು; ವಾರಸುದಾರರು ಪತ್ತೆ

    ಧರ್ಮಸ್ಥಳ ಕೇಸ್‌ | ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್ ಕಾರ್ಡ್‌ ‌ರಹಸ್ಯ ಬಯಲು; ವಾರಸುದಾರರು ಪತ್ತೆ

    – ಧರ್ಮಸ್ಥಳ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲವೆಂದ ಕುಟುಂಬಸ್ಥರು

    ನೆಲಮಂಗಲ: ಧರ್ಮಸ್ಥಳದಲ್ಲಿ (Dharmasthala) ಎಸ್‌ಐಟಿ ತನಿಖೆ ವೇಳೆ ಪಾಯಿಂಟ್‌ ನಂ.1ನಲ್ಲಿ ಸಿಕ್ಕ ಡೆಬಿಟ್‌, ಪ್ಯಾನ್‌ ಕಾ‌ರ್ಡ್‌ನ ವಾರಸುದಾರರ ವಿಳಾಸ ಪತ್ತೆಯಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ದಾಬಸ್‌ಪೇಟೆ ನಿವಾಸಿಯಾಗಿದ್ದ ಸುರೇಶ್ ಎಂಬಾತನದ್ದು ಅನ್ನೋದು ಗೊತ್ತಾಗಿದೆ.

    ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಎಂಬುವರ ಪುತ್ರ ಸುರೇಶ್ ಪರ್ಸ್‌ನಲ್ಲಿ ಎರಡು ಪ್ಯಾನ್‌ ಕಾರ್ಡ್‌ಗಳು ಪತ್ತೆಯಾಗಿತ್ತು. ಒಂದು ಸುರೇಶ್‌ ಎಂಬಾತನ ಪ್ಯಾನ್‌ ಕಾರ್ಡ್ (PAN Card), ಮತ್ತೊಂದು ಅವರ ತಾಯಿ ಸಿದ್ದಲಕ್ಷ್ಮಮ್ಮ ಅವರ ಪ್ಯಾನ್ ಕಾರ್ಡ್ ಎಂಬುದು ಬಹಿರಂಗವಾಗಿತ್ತು. 2‌ ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಸುರೇಶ್ ಆಗ ಧರ್ಮಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಜಾಂಡಿಸ್‌ನಿಂದಾಗಿ (Jandes) ಸುರೇಶ್ ಸಾವನ್ನಪ್ಪಿದ್ದರು. ಇನ್ನು ಸಿದ್ದಲಕ್ಷ್ಮಮ್ಮ ಬದುಕಿದ್ದಾರೆ. ಈ ಕುರಿತು ಸುರೇಶ್‌ ಕುಟುಂಬಸ್ಥರು ʻಪಬ್ಲಿಕ್‌ ಟಿವಿʼಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್‌ – ಸಹಾಯವಾಣಿ ತೆರೆದ ಎಸ್‌ಐಟಿ 

    ಮೃತ ಸುರೇಶ್ ಅಕ್ಕ ರೂಪಾ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿ, ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಆಗ ಧರ್ಮಸ್ಥಳದಲ್ಲಿ ಮಿಸ್ ಆಗಿರಬೇಕು. ನಮ್ಮ ತಾಯಿಯ ಎಟಿಎಂ ಕಾರ್ಡ್ ಕಳೆದು ಹೋಗಿದೆ ಎಂದು ಹೇಳಿದ್ದ. ಆಗ ನಮ್ಮ ತಾಯಿ ಹೊಸ ಎಟಿಎಂ ಕಾರ್ಡ್ ತೆಗೆದುಕೊಂಡಿದ್ದರು. ಸುರೇಶ್‌ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ, 5 ತಿಂಗಳ ಹಿಂದೆ ಇಲ್ಲೇ ಮೃತಪಟ್ಟಿದ್ದರು. ಧರ್ಮಸ್ಥಳದ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ

    ಮೃತ ಸುರೇಶ್ ತಾಯಿ ಮಾತನಾಡಿ, ಅಲ್ಲಿ ಸಿಕ್ಕ ದಾಖಲೆಗಳು ನನ್ನದು ಹಾಗೂ ನನ್ನ ಮಗನದ್ದೇ, ಈ ಹಿಂದೆ ಧರ್ಮಸ್ಥಳಕ್ಕೆ ಹೋದಾಗ ಕಳೆದು ಹೋಗಿದೆ ಎಂದು ನನ್ನ ಮಗ ಸುರೇಶ್ ಹೇಳಿದ್ದ. ಸುರೇಶ್ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ನನ್ನ ಎಟಿಎಂ ಕಾರ್ಡ್ ಸುರೇಶ್ ಬಳಿ ಇತ್ತು, ಅಲ್ಲಿ ಹೋದಾಗ ಕಳೆದು ಹೋಗಿದೆ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ಧರ್ಮಸ್ಥಳ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

  • PAN-Aadhaar Card ಇಂದೇ ಲಿಂಕ್ ಮಾಡಿಸಿಕೊಳ್ಳಿ- ಶುಕ್ರವಾರ ಕೊನೆಯ ದಿನ

    PAN-Aadhaar Card ಇಂದೇ ಲಿಂಕ್ ಮಾಡಿಸಿಕೊಳ್ಳಿ- ಶುಕ್ರವಾರ ಕೊನೆಯ ದಿನ

    ಬೆಂಗಳೂರು: ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್ (Aadhaar Card) ನೊಂದಿಗೆ ಲಿಂಕ್ ಮಾಡೋಕೆ ಜೂನ್ 30 ಅಂದರೆ ಶುಕ್ರವಾರ ಕೊನೆಯ ದಿನವಾಗಿದೆ.

    ಕಳೆದ ಮೂರು ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆಯು ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಬಳಿಕ 2023ರ ಜೂನ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಇದೀಗ ಪ್ಯಾನ್- ಆಧಾರ್ ಕಾರ್ಡ್ ಲಿಂಕ್ (PAN Card-Aadhaar Card Link) ಮಾಡಿಸಿಕೊಳ್ಳಲು ನಾಳೆ ಕೊನೆಯ ದಿನವಾಗಿದೆ. ಹೀಗಾಗಿ ಲಿಂಕ್ ಮಾಡಿಸದಿದ್ದವರು ಇಂದೇ ಈ ಕೆಲಸ ಮಾಡಿಕೊಳ್ಳಿ.

    ಒಂದು ವೇಳೆ ನಾಳೆ (ಶುಕ್ರವಾರ) ಯ ಒಳಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಜೊತೆಗೆ ಟ್ಯಾಕ್ಸ್ ಪೇ ಮಾಡುವವರಿಗೂ ಕೂಡ ಸಂಕಷ್ಟವಾಗಲಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮೋದಿ ತಯಾರಿ – ಹಿರಿಯ ನಾಯಕರಿಗೆ 3 ಟಾರ್ಗೆಟ್

    ಲಿಂಕ್ ಮಾಡುವುದು ಏಕೆ.?: ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಪ್ಯಾನ್ ಜೊತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‍ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ಯಾನ್-ಆಧಾರ್ ಜೋಡಣೆಗೆ ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಧಾರ್- ಪ್ಯಾನ್ ಲಿಂಕ್ ಕಾರ್ಯಗತವಾಗಲಿಲ್ಲ. ಹೀಗಾಗಿ ಲಿಂಕ್‍ಗೆ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

    ಒಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೆ ಆಧಾರ್ ಪ್ಯಾನ್ ಕಾರ್ಡ್ ಲಿಂಕ್‍ಗೆ ಮತ್ತೆ ಅವಧಿ ವಿಸ್ತರಣೆ ಮಾಡುತ್ತಾ? ಅಥವಾ ನಾಳೆಯೇ ಆಧಾರ್ ಪ್ಯಾನ್ ಕಾರ್ಡ್ ಲಿಂಕ್‍ಗೆ ಅವಧಿ ಮುಗಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಯಾನ್‌ – ಆಧಾರ್‌ ಕಾರ್ಡ್‌ ಲಿಂಕ್‌; ಜೂನ್‌ 30 ರವರೆಗೆ ಅವಧಿ ವಿಸ್ತರಣೆ

    ಪ್ಯಾನ್‌ – ಆಧಾರ್‌ ಕಾರ್ಡ್‌ ಲಿಂಕ್‌; ಜೂನ್‌ 30 ರವರೆಗೆ ಅವಧಿ ವಿಸ್ತರಣೆ

    ಬೆಂಗಳೂರು: ಪ್ಯಾನ್‌ ಜೊತೆಗೆ ಆಧಾರ್‌ ಕಾರ್ಡ್‌ (AadhaarPanLink) ಜೋಡಣೆಗೆ ಜೂನ್‌ 30 ರ ವರೆಗೆ ಅವಧಿ ವಿಸ್ತರಿಸಿ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.

    ಪ್ಯಾನ್‌ (Pan Card) ಜೊತೆಗೆ ಆಧಾರ್‌ (Aadhaar Card) ಲಿಂಕ್‌ಗೆ ಮಾ.31 ಕೊನೆ ದಿನವಾಗಿತ್ತು. ಈ ಅವಧಿಯನ್ನು ವಿಸ್ತರಿಸಲಾಗಿದೆ. 2023ರ ಜೂನ್‌ 30 ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ: ಸಿದ್ದರಾಮಯ್ಯ

    ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್‌ ಕಾರ್ಡ್‌ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್‌ ಜೊತೆಗೆ ಪ್ಯಾನ್‌ ಲಿಂಕ್‌ ಮಾಡಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಲಿಂಕ್‌ ಮಾಡಿಸಲು ಮಾ.31 ಕೊನೆ ದಿನವಾಗಿತ್ತು. ಇದಕ್ಕೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೆ ಗಡುವು ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.

    ಪ್ಯಾನ್‌ ಜೊತೆಗೆ ಆಧಾರ್‌ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ಯಾನ್‌-ಆಧಾರ್‌ ಜೋಡಣೆಗೆ ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಧಾರ್‌-ಪ್ಯಾನ್‌ ಲಿಂಕ್‌ ಕಾರ್ಯಗತವಾಗಲಿಲ್ಲ. ಹೀಗಾಗಿ ಲಿಂಕ್‌ಗೆ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

    ಕೊನೆಯ ಹಂತ ಎಂದು ಹೇಳಿ 2023ರ ಮಾರ್ಚ್‌ 31ಕ್ಕೆ ಕೊನೆ ದಿನ ಎಂದು ಗಡುವು ವಿಧಿಸಿತ್ತು. ಪ್ಯಾನ್‌ ಅನ್ನು ಆಧಾರ್‌ ಜೊತೆಗೆ ಜೋಡಣೆಗೆ 1,000 ಶುಲ್ಕ ವಿಧಿಸಲಾಗಿತ್ತು. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ದಿನಾಂಕ ವಿಸ್ತರಣೆಗೆ ಕೂಗು ಕೇಳಿಬಂದಿತ್ತು. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ 5 ದಿನ ಪೊಲೀಸ್ ಕಸ್ಟಡಿಗೆ

  • ಪ್ಯಾನ್ ಕಾರ್ಡ್ ಕಳೆದುಕೊಂಡ ಪೀಟರ್ಸನ್‌ಗೆ ಸಹಾಯ ಮಾಡಿದ ಭಾರತೀಯ ತೆರಿಗೆ ಇಲಾಖೆ

    ಪ್ಯಾನ್ ಕಾರ್ಡ್ ಕಳೆದುಕೊಂಡ ಪೀಟರ್ಸನ್‌ಗೆ ಸಹಾಯ ಮಾಡಿದ ಭಾರತೀಯ ತೆರಿಗೆ ಇಲಾಖೆ

    ನವದೆಹಲಿ: ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಭಾರತಕ್ಕೆ ಭೇಟಿ ನೀಡಲು ಬೇಕಾದ ಪ್ಯಾನ್ ಕಾರ್ಡ್‌ನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಯಾರದರೂ ಸಹಾಯ ಮಾಡುವ ಬಗ್ಗೆ ಟ್ವೀಟ್ ಮಾಡಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಈಗ ಭಾರತೀಯ ಆದಾಯ ತೆರಿಗೆ ಇಲಾಖೆ ಸಹಾಯ ಮಾಡಿದೆ.

    ಪೀಟರ್ಸನ್ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದ ನಂತರ ಐಪಿಎಲ್ ಪಂದ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ಯಾನ್ ಕಾರ್ಡ್‌ನ್ನು ಕಳೆದುಕೊಂಡಿರುವ ಬಗ್ಗೆ ದುಃಖವನ್ನು ಹಂಚಿಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?: ಭಾರತ ದಯವಿಟ್ಟು ಸಹಾಯ ಮಾಡಿ, ನಾನು ನನ್ನ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದೇನೆ ಮತ್ತು ಸೋಮವಾರ ಭಾರತಕ್ಕೆ ಪ್ರಯಾಣಿಸುತ್ತಿದ್ದೇನೆ. ಆದರೆ ಕೆಲಸಕ್ಕಾಗಿ ನನಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ದಯವಿಟ್ಟು ನನಗೆ ಸಹಾಯ ಮಾಡಲು ನಾನು ಆದಷ್ಟು ಬೇಗ ಸಂಪರ್ಕಿಸಬಹುದಾದ ಯಾರಿಗಾದರೂ ದಯವಿಟ್ಟು ನನ್ನನ್ನು ನಿರ್ದೇಶಿಸಬಹುದೇ? ಎಂದು ತಿಳಿಸಿದ್ದಾರೆ. ಪೀಟರ್ಸನ್ ನಂತರ ತಮ್ಮ ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿದ್ದಾರೆ. ದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಯತ್ನ: ಸಂಜಯ್ ರಾವತ್

    ಈ ಬಗ್ಗೆ ಭಾರತೀಯ ಆದಾಯ ತೆರಿಗೆ ಇಲಾಖೆಯೆ ಅಧಿಕೃತ ಖಾತೆ ಪ್ರತಿಕ್ರಿಯಿಸಿದ್ದು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ನಿಮ್ಮ ಪ್ಯಾನ್ ವಿವರಗಳಿದ್ದರೆ, ಪ್ಯಾನ್ ಕಾರ್ಡ್‌ನ್ನು ನಕಲು ಇದ್ದರೆ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ದಯವಿಟ್ಟು ಈ ಲಿಂಕ್‌ಗಳಿಗೆ ಭೇಟಿ ನೀಡಿ ಎಂದು ತಿಳಿಸಿದೆ. ಇದಕ್ಕೆ ಧನ್ಯವಾದ ತಿಳಿಸಿರುವ ಪೀಟರ್ಸನ್ ಅವರು ಮಾಹಿತಿಗಳನ್ನು ಇಮೇಲ್ ಮಾಡಿರುವುದಾಗಿ ತಿಳಿಸಿದ್ದಾರೆ. ದನ್ನೂ ಓದಿ: ಬಿಜೆಪಿ ಬೆಂಗಾವಲು ಪಡೆ ಮೇಲೆ ಎಸ್‍ಪಿ ಗೂಂಡಾಗಳಿಂದ ದಾಳಿ: ಕೇಶವ್ ಪ್ರಸಾದ್ ಮೌರ್ಯ

    ಮಾಜಿ ಇಂಗ್ಲೆಂಡ್ ನಾಯಕ ಪೀಟರ್ಸನ್‌ಗೆ ಟ್ವಿಟರ್‌ನಲ್ಲಿ ಸುಮಾರು 3.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕಳೆದ ತಿಂಗಳ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಪೀಟರ್ಸನ್ ಕಾಣಿಸಿಕೊಂಡಿದ್ದರು. ಇವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್‌ಜೈಂಟ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಟವಾಡಿದ್ದಾರೆ.

  • ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಆಗಿಲ್ವಾ?- ಮಾರ್ಚ್ 31ರ ನಂತ್ರ ಬೀಳಲಿದೆ ಭಾರೀ ದಂಡ

    ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಆಗಿಲ್ವಾ?- ಮಾರ್ಚ್ 31ರ ನಂತ್ರ ಬೀಳಲಿದೆ ಭಾರೀ ದಂಡ

    ನವದೆಹಲಿ: ಸೆಕ್ಷನ್ 139ಎಎ ಪ್ರಕಾರ ಪ್ರತಿಯೊಬ್ಬ ನಾಗರಿಕನು ತನ್ನ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಇದೀಗ ಮಾರ್ಚ್ 31ರ ಒಳಗಾಗಿ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ 1,000 ರೂಪಾಯಿ ದಂಡ ವಿಧಿಸುದಾಗಿ ತಿಳಿಸಿದೆ.

    ಆದಾಯ ತೆರಿಗೆ ಇಲಾಖೆ ತಿಳಿಸಿರುವ ಪ್ರಕಾರ ಈಗಾಗಲೇ ಕೊಟ್ಟಿರುವ ಕಾಲಾವಕಾಶದ ಒಳಗಾಗಿ ಯಾರೂ ತಮ್ಮ ಪ್ಯಾನ್‍ಕಾರ್ಡಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡದೆ ಇರುತ್ತಾರೋ ಅಂತವರಿಗೆ 1 ಸಾವಿರ ರೂಪಾಯಿ ದಂಡ ಹಾಕಿ ಅವರ ಪ್ಯಾನ್ ಕಾರ್ಡನ್ನು ಅಮಾನ್ಯಗೊಳಿಸಲಾಗುವುದು ಎಂದು ತಿಳಿಸಿದೆ.

    2021ನೇ ಹಣಕಾಸು ಮಸೂದೆಯಲ್ಲಿ ಹೊಸ ಸೆಕ್ಷನ್ 234 ಅನ್ನು ಆದಾಯ ತೆರಿಗೆ ಕಾಯ್ದೆಯಾಗಿ ರೂಪುಗೊಳಿಸಲಾಗಿದ್ದು, ಇದರ ಪ್ರಕಾರ ಮಾರ್ಚ್ 31ರ ಒಳಗಾಗಿ ಪ್ಯಾನ್ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡದೆ ಇದ್ದರೆ ಅಂತವರಿಗೆ ದಂಡ ವಿಧಿಸಲಾಗುವುದು ಮತ್ತು ಪ್ಯಾನ್ ಕಾರ್ಡ್ ಅಮಾನ್ಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

  • ಜನರಿಗೆ ಆಧಾರ್, ಪಾನ್ ಕಾರ್ಡ್ ನೀಡದೇ ಮಣ್ಣಿನಲ್ಲಿ ಹೂತಿಟ್ಟ ಪೋಸ್ಟ್ ಮ್ಯಾನ್

    ಜನರಿಗೆ ಆಧಾರ್, ಪಾನ್ ಕಾರ್ಡ್ ನೀಡದೇ ಮಣ್ಣಿನಲ್ಲಿ ಹೂತಿಟ್ಟ ಪೋಸ್ಟ್ ಮ್ಯಾನ್

    ಚಾಮರಾಜನಗರ: ಪೋಸ್ಟ್ ಮ್ಯಾನ್‍ವೊಬ್ಬರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸದೇ ಮಣ್ಣಿನಲ್ಲಿ ಹೂತಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಲೊಕ್ಕನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಹೌದು, ಲೊಕ್ಕನಹಳ್ಳಿ ಗ್ರಾಮದ ಪೋಸ್ಟ್ ಮ್ಯಾನ್ ನಾಗರಾಜು ಎಂಬವರು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸುವ ಬದಲು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ. ಇಲ್ಲಿಯ ಗ್ರಾಮಗಳಿಗೆ ತುಂಬಾ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಬರುವುದರಿಂದ ತಾನು ಒಬ್ಬನೇ ಇರೋದ್ರಿಂದ ಹಂಚಲಿಕ್ಕೆ ಆಗುವುದಿಲ್ಲ ಎಂದು ತಿಳಿದು ಮಣ್ಣಲ್ಲಿ ಹೂತಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

    2013 ರಿಂದ ಲೊಕ್ಕಳ್ಳಿ, ಕೌಳ್ಳಿಹಳ್ಳಿ ಡ್ಯಾಂ, ಬೋರೇದೊಡ್ಡಿ, ಜಡೇಸ್ವಾಮಿದೊಡ್ಡಿ, ಸೇಬಿನ ಕೂಬೆ ಗ್ರಾಮಗಳ ಜನರಿಗೆ ಬಂದಿದ್ದ ದಾಖಲೆಗಳನ್ನು ಅಂಚೆ ಕಚೇರಿಯ ಮುಂಭಾಗದ ಖಾಲಿ ನಿವೇಶನದಲ್ಲಿ ಹೂತಿಟ್ಟಿದ್ದರು.

    ಇದೀಗ ಖಾಲಿ ನಿವೇಶನದಲ್ಲಿ ಮನೆ ಕಟ್ಟಲು ಪಾಯ ತೆಗೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ನಂಜನಗೂಡಿನ ಅಂಚೆ ವಿಭಾಗದ ಅಧೀಕ್ಷರಿಗೆ ದೂರು ನೀಡಿದ್ದಾರೆ. ಅಧೀಕ್ಷಕರು ಆ ಪೋಸ್ಟ್ ಮ್ಯಾನ್ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

  • ಆತಂಕ ಬೇಡ, ಇವತ್ತು ಆಧಾರ್ ನಂಬರ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಲ್ಲ

    ಆತಂಕ ಬೇಡ, ಇವತ್ತು ಆಧಾರ್ ನಂಬರ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಲ್ಲ

    ನವದೆಹಲಿ: ಇವತ್ತು ನಿಮ್ಮ ಪ್ಯಾನ್‍ಕಾರ್ಡ್‍ಗೆ ಆಧಾರ್ ನಂಬರ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತೆ ಅನ್ನೋ ಆತಂಕ ಬೇಡ.

    ಜುಲೈ 1 ರಿಂದ ಇನ್‍ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್‍ಗೆ ಹಾಗೂ ಹೊಸ ಪ್ಯಾನ್ ಕಾರ್ಡ್‍ಗಾಗಿ ಆಧಾರ್ ಕಾರ್ಡ್ ಕಡ್ಡಾಯ ಎಂದು ಈಗಾಗಲೇ ಸರ್ಕರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕಿಂಗ್ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಹಾಗೂ ಪ್ರಶ್ನೆಗಳು ಮೂಡಿವೆ. ಈ ಹಿನ್ನೆಲೆಯಲ್ಲಿ ಹಿರಿಯ ತೆರಿಗೆ ಅಧಿಕಾರಿಯೊಬ್ಬರು ಜನರ ಎರಡು ಪ್ರಮುಖ ಗೊಂದಲಗಳಿಗೆ ಉತ್ತರ ನೀಡಿದ್ದಾರೆ.

    ಆಧಾರ್ ಸಂಖ್ಯೆ ಜೊತೆ ಲಿಂಕ್ ಮಾಡದ ಪ್ಯಾನ್ ಕಾರ್ಡ್ ಜುಲೈ 1ರಿಂದ ಖಂಡಿತವಾಗಿಯೂ ಅಮಾನ್ಯವಾಗುವುದಿಲ್ಲ. ಆದ್ರೆ ಯಾವುದೇ ವ್ಯಕ್ತಿ ತನ್ನ ಇನ್‍ಕಮ್ ಟ್ಯಾಕ್ಸ್ ರಿಟರ್ನ್ಸ್ ಇ-ಫೈಲ್ ಮಾಡಬಯಸಿದ್ರೆ ಇನ್‍ಕಮ್ ಟ್ಯಾಕ್ಸ್ ರಿಟರ್ನ್ಸ್ ನಲ್ಲಿ ಆಧಾರ್ ನಂಬರ್ ನಮೂದಿಸಿರಬೇಕು ಅಥವಾ ಇಲಾಖೆಯ ಇ ಫೈಲಿಂಗ್ ಪೋರ್ಟಲ್‍ನಲ್ಲಿ ಲಿಂಕ್ ಮಾಡಿರಬೇಕು. ಒಂದು ವೇಳೆ ಆಧಾರ್ ಮಾಹಿತಿಯನ್ನು ಪ್ಯಾನ್ ಕಾರ್ಡ್‍ನೊಂದಿಗೆ ಲಿಂಕ್ ಮಾಡದಿದ್ದರೆ ಅಥವಾ ಇನ್‍ಕಮ್ ಟ್ಯಾಕ್ಸ್ ರಿಟರ್ನ್ಸ್ ನಲ್ಲಿ ನಮೂದಿಸದಿದ್ದರೆ ಅಂತಹ ವ್ಯಕ್ತಿ ಇ-ಫೈಲ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಪ್ಯಾನ್ ಕಾರ್ಡ್‍ಗೆ ಆಧಾರ್ ನಂಬರ್ ಲಿಂಕ್ ಮಾಡಲು ಇಂದು ಅಂದ್ರೆ ಜೂನ್ 30 ಕೊನೆಯ ದಿನಾಂಕವಲ್ಲ. ಜುಲೈ 1ರಿಂದ ಪ್ಯಾನ್ ಕಾರ್ಡ್‍ಗೆ ಆಧಾರ್ ಸಂಯೋಜನೆ ಕಡ್ಡಾಯವಷ್ಟೆ. ಪ್ಯಾನ್ ಕಾರ್ಡ್ ಅಮಾನ್ಯವಾಗುವ ಕೊನೆಯ ದಿನಾಂಕವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ ಎಂದು ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾಗಿದೆ.

    ಹೀಗಾಗಿ ಇಂದು ನೀವು ಪ್ಯಾನ್ ಕಾರ್ಡ್ ಜೊತೆ ಆಧಾರ್ ನಂಬರ್ ಲಿಂಕ್ ಮಾಡದಿದ್ರೆ ನಿಮ್ಮ ಕಾರ್ಡ್ ಅಮಾನ್ಯವಾಗುವುದಿಲ್ಲ. ಜುಲೈ 1ರೊಳಗೆ ಪ್ಯಾನ್ ಕಾರ್ಡ್ ಜೊತೆ ಆಧಾರ್ ಸಂಖ್ಯೆ ಸಂಯೋಜನೆ ಮಾಡದವರು ಇ-ಐಟಿಆರ್(ಇನ್‍ಕಮ್ ಟ್ಯಾಕ್ಸ್ ರಿಟರ್ನ್ಸ್)ನಲ್ಲಿ ಆಧಾರ್ ಸಂಖ್ಯೆಯನ್ನ ನಮೂದಿಸಬಹುದು. ಇದು ಎರಡೂ ನಂಬರ್‍ಗಳ ಸಂಯೋಜನೆಗೆ ಮಾನ್ಯವೆಂದು ಪರಿಗಣಿಸಲ್ಪಡುತ್ತದೆ ಎಂದು ವರದಿಯಾಗಿದೆ.

    ವಾರ್ಷಿಕ 5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರತಿಯೊಬ್ಬರೂ ಇನ್‍ಕಮ್ ಟ್ಯಾಕ್ಸ್ ರಿಟರ್ನ್ಸ್ ನ ಇ- ಫೈಲಿಂಗ್ ಮಾಡುವುದು ಕಡ್ಡಾಯವಾಗಿದೆ. ಅಲ್ಲದೆ ಜುಲೈ 1 ರಿಂದ ಪಾನ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯ.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?