Tag: ಪ್ಯಾಂಟ್

  • ಕಾರ್‌ ಟಚ್‌ ಆಗಿದ್ದಕ್ಕೆ ಗಲಾಟೆ- ಪ್ಯಾಂಟ್ ಬಿಚ್ಚಲು ಮುಂದಾದ ಕ್ಯಾಬ್ ಡ್ರೈವರ್!

    ಕಾರ್‌ ಟಚ್‌ ಆಗಿದ್ದಕ್ಕೆ ಗಲಾಟೆ- ಪ್ಯಾಂಟ್ ಬಿಚ್ಚಲು ಮುಂದಾದ ಕ್ಯಾಬ್ ಡ್ರೈವರ್!

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತನೇ ಇವೆ. ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ರೌಡಿಶೀಟರ್ ಓಪನ್ ಮಾಡುವ ವಾರ್ನಿಂಗ್ ಕೊಡುತ್ತಿದ್ದರು ಕೂಡ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ಇದಕ್ಕೆ ಶುಕ್ರವಾರ ನಡೆದ ಘಟನೆಯೂ ಒಂದು‌ ಸಾಕ್ಷಿ.

    ನಿನ್ನೆ ರಾತ್ರಿ ನಗರದ ಹೆಬ್ಬಾಳ ಸಿಗ್ನಲ್ ಬಳಿ ಎರಡು ಕಾರುಗಳ ನಡುವೆ ಟಚ್ ಆಗಿತ್ತು. ಈ ವೇಳೆ ಕಾರಿನಿಂದ ಕೆಳಗೆ ಇಳಿದ ಕ್ಯಾಬ್ ಡ್ರೈವರ್ (Cab Driver), ಮತ್ತೊಂದು ಕಾರಿನಲ್ಲಿದ್ದವರ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ ಕಾರಿನಲ್ಲಿದ್ದ ಫ್ಯಾಮಿಲಿ ಮುಂದೆಯೇ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.

    ಚಾಲಕನ ವರ್ತನೆ ವಿರುದ್ಧ ಇತರೆ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಸಭ್ಯ ವರ್ತನೆಯ ವೀಡಿಯೋಗಳನ್ನು ತೆಗೆದ ದೂರುದಾರ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವಿದ್ಯಾರ್ಥಿಗಳು ಅಮಾನತು

  • ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

    ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

    ಮಂಗಳೂರು: ಖಾಸಗಿ ಬಸ್‍ನಲ್ಲಿ ಬೆಂಗಳೂರಿನಿಂದ (Bengaluru) ಮಂಗಳೂರಿಗೆ (Mangaluru) ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಬಸ್‍ ಕ್ಲೀನರ್ ಅನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿ ಮಹಮ್ಮದ್ ಇಮ್ರಾನ್ (26) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಆಸ್ಪತ್ರೆಯೊಂದರ ವೈದ್ಯೆಗೆ, ತನ್ನ ಪ್ಯಾಂಟ್ ಜಿಪ್ ಓಪನ್ ಮಾಡಿ ಖಾಸಗಿ ಬಸ್ ಕ್ಲೀನರ್ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವೈದ್ಯರಾಗಿರುವ ದೂರುದಾರರು, ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡುವ ವಿಚಾರ ತಿಳಿದ ಆರೋಪಿ ಮಹಿಳೆಗೆ ಬೆದರಿಕೆಯೊಡ್ಡಿದ್ದಾನೆ.

    ಇದೀಗ ಪೊಲೀಸರು ಆರೋಪಿ ಇಮ್ರಾನ್ ಅನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 151/2022 U/s 354ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಖಾಸಗಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು. ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

    ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

    ಹಾವೇರಿ: ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆ ಮೂವರು ಮಂದಿಯ ಪ್ಯಾಂಟ್‍ಗೆ ಬೆಂಕಿ ಕಿಡಿ ತಗುಲಿದ ಘಟನೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.

    ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಹಾಡಹಗಲೇ ನಡೆದ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹಾವೇರಿಯಲ್ಲಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಟೈರ್ ಸುಡಲು ಅವಕಾಶ ನೀಡದ್ದಕ್ಕೆ ಪೊಲೀಸರ ಜೊತೆ ಕಾರ್ಯಕರ್ತರ ವಾಗ್ವಾದ ನಡೆಸಿದರು. ಇಂದಿನಿಂದ ಪಂಜಾಬ್ ಪ್ರತಿಮನೆಗೂ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ: ಭಗವಂತ್ ಮಾನ್

    ಕಾರ್ಯಕರ್ತರು ತಂದಿಟ್ಟ ಟೈರ್‌ಗಳನ್ನು ಪೊಲೀಸರು ವಾಪಸ್ಸ್ ಕಳಿಸಿದರು. ಪೊಲೀಸರ ವಿರೋಧದ ನಡುವೆಯೂ ಟೈರ್‌ಗೆ ಬೆಂಕಿ ಹಚ್ಚಿದ ನಂತರ ಮೂವರು ಕಾರ್ಯಕರ್ತರ ಪ್ಯಾಂಟಿಗೆ ಬೆಂಕಿಯ ಕಿಡಿ ಹತ್ತಿಕೊಂಡಿದೆ. ಪ್ಯಾಂಟ್‍ಗಳಿಗೆ ಬೆಂಕಿ ಹತ್ತಿದ್ದನ್ನು ಗಮನಿಸಿ ತಕ್ಷಣವೇ ಬೆಂಕಿಯನ್ನು ಕಾರ್ಯಕರ್ತರು ಆರಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾರೀ ಅನಾಹುತ ತಪ್ಪಿದೆ. ಎರಡು ತಿಂಗಳ ಹಿಂದೆಯೇ ತಾಯಿಯಾಗಿದ್ದ ಆಲಿಯಾ ಭಟ್!

    Live Tv

  • ಶರ್ಟ್ ಪ್ಯಾಂಟ್ ಧರಿಸಿ ನಗರ ಸುತ್ತಾಡಿದ ಆನೆ

    ಶರ್ಟ್ ಪ್ಯಾಂಟ್ ಧರಿಸಿ ನಗರ ಸುತ್ತಾಡಿದ ಆನೆ

    ಆನೆಯೊಂದು ಶರ್ಟ್ ಪ್ಯಾಂಟ್ ಧರಿಸಿ ಮಾವುತನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಫೋಟೋವನ್ನು ಮಹೇಂದ್ರ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಂಬಲಾಗದ ಭಾರತ. ಎಲಿ-ಪಂಟ್ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋದಲ್ಲಿ ಆನೆ ನೇರಳೆ ಬಣ್ಣದ ಶರ್ಟ್ ಧರಿಸಿ ಅದಕ್ಕೆ ಮ್ಯಾಚ್ ಆಗುವಂತಹ ಪ್ಯಾಂಟ್ ಧರಿಸಿಕೊಂಡು ಮಾವುತನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮೂಲಕ ಜನರ ಗಮನ ಸೆಳೆದಿದೆ.

    ಮೈಕ್ರೋ ಬ್ಲಾಗಿಂಗ್‍ನಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 28,400 ಲೈಕ್ಸ್ ಹಾಗೂ 1,900 ಕಮೆಂಟ್‍ಗಳು ಹರಿದುಬಂದಿದೆ. ಕೆಲವರು ಆನೆ ಡ್ರಸ್‍ನಲ್ಲಿ ಬಹಳ ಮುದ್ದಾಗಿ ಕಾಣಿಸಿಕೊಂಡಿದೆ ಎಂದರೆ ಇನ್ನೂ ಕೆಲವರು ಆನೆ ವಿಚಿತ್ರವಾಗಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

    10 ಮಂದಿ ಟೈಲರ್‍ ಗಳು ಆನೆ ಅಳತೆಯನ್ನು ತೆಗೆದುಕೊಂಡು ಪ್ಯಾಂಟ್ ಹೊಲಿದಿರಬೇಕು ಮತ್ತೊಬ್ಬರು ಹಾಸ್ಯಮಯವಾಗಿ ಕಮೆಂಟ್ ಮಾಡಿದ್ದಾರೆ.

  • ಬೈಕ್‍ನಲ್ಲಿ ತೆರಳುತ್ತಿದ್ದಾಗ ಪ್ಯಾಂಟ್‍ನಲ್ಲಿದ್ದ ಮೊಬೈಲ್ ಬ್ಲಾಸ್ಟ್

    ಬೈಕ್‍ನಲ್ಲಿ ತೆರಳುತ್ತಿದ್ದಾಗ ಪ್ಯಾಂಟ್‍ನಲ್ಲಿದ್ದ ಮೊಬೈಲ್ ಬ್ಲಾಸ್ಟ್

    ಶಿವಮೊಗ್ಗ: ಬೈಕ್ ಚಲಾಯಿಸುವಾಗ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಬ್ಲಾಸ್ಟ್ ಆಗಿ, ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೊರಬದಲ್ಲಿ ನಡೆದಿದೆ.

    ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ಘಟನೆ ನಡೆದಿದ್ದು, ತವನಂದಿ ಗ್ರಾಮದ ಶರತ್ (22) ಗಾಯಗೊಂಡ ಯುವಕ. ಶರತ್ ಮತ್ತವನ ಸ್ನೇಹಿತ ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಹೋಗುವಾಗ ಕೆರೆಯ ಬಳಿ ಮೊಬೈಲ್ ಸ್ಫೋಟಗೊಂಡಿದೆ.

    ಇದರಿಂದ ಯುವಕರು ಗಾಬರಿಯಲ್ಲಿ ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದ್ದಾರೆ. ತಕ್ಷಣ ಹಿಂಬದಿ ಬೈಕ್ ಸವಾರ ಶರತ್‍ನನ್ನು ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶರತ್‍ನ ಬಲ ತೂಡೆಗೆ ಗಾಯವಾಗಿದೆ. ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಲಕ್ನೋ: ಮಲಗಿದ್ದ ಕಾರ್ಮಿಕನ ಪ್ಯಾಂಟ್ ಒಳಗೆ ನಾಗರಹಾವೊಂದು ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇರುವ ಸಿಕಂದರ್ ಪುರ ಎಂಬ ಗ್ರಾಮದಲ್ಲಿ ವಿದ್ಯುತ್ ಇಲಾಖೆಯ ಕಡೆಯಿಂದ ಕಂಬ ಹಾಕಿಸುವ ಕೆಲಸ ನಡೆಯುತಿತ್ತು. ಈ ಕೆಲಸಕ್ಕೆ ಖಾಸಗಿ ಕಾರ್ಮಿಕರನ್ನು ಕರೆದುಕೊಂಡು ಬರಲಾಗಿತ್ತು. ಈ ಕಾರ್ಮಿರಲ್ಲಿ ಒಬ್ಬನಾದ ಲವಕೇಶ್ ಕುಮಾರ್ ಮಲಗಿದ್ದಾಗ ನಾಗರಹಾವೊಂದು ಪ್ಯಾಂಟ್ ಒಳಗೆ ಹೋಗಿ ಸೇರಿಕೊಂಡಿದೆ.

    ಎಂದಿನಂತೆ ಕೆಲಸ ಮುಗಿಸಿದ ಲವಕೇಶ್ ಕುಮಾರ್ ಕಾರ್ಮಿಕರಿಗೆ ಮಲಗಲು ನೀಡಿದ್ದ ಸಿಕಂದರ್ ಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹೋಗಿ ಮಲಗಿದ್ದಾನೆ. ಈ ವೇಳೆ ಆತನಿಗೆ ತಿಳಿಯದೆ ಹಾವೊಂದು ಆತನ ಪ್ಯಾಂಟ್ ಒಳಗೆ ಬಂದು ಮಲಗಿದೆ. ಮಧ್ಯರಾತ್ರಿ ಪ್ಯಾಂಟ್ ಒಳಗೆ ಏನೋ ಉಸಿರು ಬಿಟ್ಟಂತೆ ಆತನಿಗೆ ಭಾಸವಾಗಿದೆ. ಆಗ ಆತ ಎದ್ದು ನೋಡಿದಾಗ ಪ್ಯಾಂಟ್ ಒಳಗೆ ಹಾವು ಇರುವುದು ಗೊತ್ತಾಗಿದೆ. ನಂತರ ಆತ ಅಲ್ಲಡದೇ ನಿಂತ ಜಾಗದಲ್ಲೇ ಕಂಬ ಹಿಡಿದು 7 ಗಂಟೆ ನಿಂತಿದ್ದಾನೆ.

    ಈ ಸಮಯದಲ್ಲಿ ಆತನ ಜೊತೆಗಿದ್ದ ಕಾರ್ಮಿಕರು ಹಾವು ಹಿಡಿಯುವರನ್ನು ಹುಡುಕಿ ಕರೆದುಕೊಂಡು ಬಂದಿದ್ದಾರೆ. ಆತ ಬಂದು ಹಾವನ್ನು ಪ್ಯಾಂಟ್‍ನಿಂದ ಹೊರತೆಗೆಯುವ ತನಕ ಲವಕೇಶ್ ಅಲ್ಲಡದೇ ಹಾವಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಉರಗ ತಜ್ಞ ಪ್ಯಾಂಟ್ ಅನ್ನು ಹರಿದು ನಿಧಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಉರಗ ತಜ್ಞ, ಆತನ ಅದೃಷ್ಟ ಚೆನ್ನಾಗಿದೆ. ಏಳು ಗಂಟೆಗಳ ಕಾಲ ಆತನ ಪ್ಯಾಂಟ್‍ನಲ್ಲೇ ಮಲಗಿರುವ ಹಾವು ಆತನಿಗೆ ಕಚ್ಚಿಲ್ಲ. ಆತ ಪಿಲ್ಲರ್ ಹಿಡಿದು ಅಲ್ಲಡದೇ ನಿಂತ ಕಾರಣ ಹಾವಿಗೆ ನಾನು ಮಾನವನ ಪ್ಯಾಂಟ್‍ನಲ್ಲಿದ್ದೇನೆ ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ. ಕಂಬ ಹಿಡಿದು ನಿಂತಿರುವ ಯುವಕನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಒಂದರ ಮೇಲೊಂದ್ರಂತೆ 8 ಪ್ಯಾಂಟ್- ಜೀನ್ಸ್ ಕದ್ದು ಸಿಕ್ಕಿಬಿದ್ದ ಯುವತಿಯ ವಿಡಿಯೋ ವೈರಲ್

    ಒಂದರ ಮೇಲೊಂದ್ರಂತೆ 8 ಪ್ಯಾಂಟ್- ಜೀನ್ಸ್ ಕದ್ದು ಸಿಕ್ಕಿಬಿದ್ದ ಯುವತಿಯ ವಿಡಿಯೋ ವೈರಲ್

    ಕ್ಯಾರಕಾಸ್: ಟೈಟ್ ಜೀನ್ಸ್ ಒಂದನ್ನು ಹಾಕೋದೇ ಕಷ್ಟದ ಕೆಲಸ. ಆದರೆ ಇಲ್ಲೊಬ್ಬಳು ಯುವತಿ ಒಂದರಮೇಲೊಂದರಂತೆ ಬರೋಬ್ಬರಿ 8 ಜೀನ್ಸ್ ಗಳನ್ನು ಧರಿಸಿ ಸಿಕ್ಕಿಬಿದ್ದ ಘಟನೆ ವೆನೆಜುವೆಲಾ ದೇಶದಲ್ಲಿ ನಡೆದಿದೆ.

    ಹೌದು. ಅಪರಿಚಿತ ಯುವತಿಯೊಬ್ಬಳು ಬಾತ್ ರೂಮಿನಲ್ಲಿ ತಾನು ಧರಿಸಿದ್ದ ಎಲ್ಲಾ ಜೀನ್ಸ್ ಗಳನ್ನು ತೆಗೆದಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಯುವತಿ ಮಾಲ್ ನಲ್ಲಿ ಕದ್ದು ಒಂದರ ಮೇಲೊಂದರಂತೆ 8 ಜೀನ್ಸ್ ಗಳನ್ನು ಧರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ಈ ವೇಳೆ ಮಾಲ್ ಸಿಬ್ಬಂದಿ ಆಕೆಯನ್ನು ಗಮನಿಸಿ ಅನುಮಾನಗೊಂಡು ಬಾತ್ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಯುವತಿಯ ಕಳ್ಳತನದ ಗುಟ್ಟು ರಟ್ಟಾಗಿದೆ. ಹೀಗಾಗಿ ಜೀನ್ಸ್ ಬಿಚ್ಚಲು ಹೇಳಿದ್ದು, ಯುವತಿ ಧರಿಸಿದ್ದ ಪ್ಯಾಂಟ್ ಗಳ ಲೆಕ್ಕ ನೋಡಿ ಸಿಬ್ಬಂದಿಯೇ ದಂಗಾಗಿ ಹೋಗಿದ್ದಾರೆ.

    ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ತಾಗಿ ವೈರಲ್ ಆಗುತ್ತಿದೆ. ಅಲ್ಲದೆ ಸಾಕಷ್ಟು ಕಮೆಂಟ್ ಗಳು ಬರುತ್ತಿವೆ. ಕೆಲವರು ಯುವತಿಯ ಪ್ರತಿಭೆಗೆ ಬೆರಾಗಿದ್ದಾರೆ. ನಾನು ಆಕೆಯ ಪ್ರತಿಭೆಯಿಂದ ಪ್ರಭಾವಿತಳಾಗಿದ್ದೇನೆ. ಒಂದಲ್ಲ ಹಲವು ಜೀನ್ಸ್ ಗಳನ್ನು ಆಕೆ ಧರಿಸಿರುವುದನ್ನು ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತಿದೆ ಒಬ್ಬರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಅಷ್ಟು ಜೀನ್ಸ್ ಧರಿಸಿದ ಅವಳಿಗೆ ಏನೂ ಅನಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಇನ್ನೂ ಕೆಲವರು ಆಕೆ ಜಾದುಗಾರ್ತಿಯಾಗಿರಬೇಕು. ಒಂದು ಪ್ಯಾಂಟ್ ಹಾಕೋಕೆ ಕಷ್ಟ ಆಗುತ್ತದೆ. ಅಂಥದ್ರಲ್ಲಿ ಇವಳು ಹೇಗೆ 8 ಪ್ಯಾಟ್ ಧರಿಸಿದ್ದಾಳೆ ಎಂದು ಶಾಕ್ ಆಗಿದ್ದಾರೆ.

     

  • ಪ್ರಚಾರದ ಸಮಯದಲ್ಲೂ ಡಿಕೆಶಿಯಿಂದ ಭರ್ಜರಿ ಶಾಪಿಂಗ್!

    ಪ್ರಚಾರದ ಸಮಯದಲ್ಲೂ ಡಿಕೆಶಿಯಿಂದ ಭರ್ಜರಿ ಶಾಪಿಂಗ್!

    ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಡಿಕೆಶಿ ಶಿವಕುಮಾರ್ ಅವರು ಇಂದು ಬಳ್ಳಾರಿಯಲ್ಲಿ ಲೋಕಸಭೆ ಉಪಚುನಾವಣೆ ಹಿನ್ನೆಲೆ ಪ್ರಚಾರದ ವೇಳೆ ಗಾರ್ಮೆಂಟ್ಸ್‌ನಲ್ಲಿ ಪ್ಯಾಂಟ್ ಟ್ರಯಲ್ ನೋಡಿ ಶಾಪಿಂಗ್ ಮಾಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಮೂರು ಜನ ಸೇರಿ ಜನರ ಬದುಕನ್ನೇ ನರಕ ಮಾಡಿದ್ದಾರೆ. ಗಾರ್ಮೆಂಟ್ಸ್ ನಲ್ಲಿ 40 ರೂ. 70 ರೂ.ಗಳಿಗೆಲ್ಲಾ ಕೆಲಸ ಮಾಡುತ್ತಿದ್ದಾರೆ. ಅದೇ ಜೀನ್ಸ್ ಪ್ಯಾಂಟ್ ಗಳನ್ನು ಬೆಂಗಳೂರಲ್ಲಿ 2-3 ಸಾವಿರಕ್ಕೆ ಮಾರುತ್ತಾರೆ. ಜನರ ಕಷ್ಟ ನೋಡಿದರೆ ನೋವಾಗುತ್ತದೆ. ನಾನು ಒಂದಷ್ಟು ಪ್ಯಾಂಟು ಶರ್ಟು ತಗೆದುಕೊಂಡು ಹೋಗುತ್ತೇನೆ ಬಟ್ಟೆ ಒಳ್ಳೆಯದಿದೆ ಎಂದು ಹೇಳಿದರು.

    ಮಿಲ್ಲರ್ ಪೇಟೆಯ ಗಣೇಶ್ ಗುಡಿಯ ಗಾರ್ಮೆಂಟ್ಸ್‌ನಲ್ಲಿ ಪ್ಯಾಂಟ್ ಟ್ರಯಲ್ ನೋಡಿ ಆನಂತರ 5 ಜೀನ್ಸ್ ಪ್ಯಾಂಟ್ ಖರೀದಿಸಿ ಒಂದು ಪ್ಯಾಂಟ್ ಗೆ 500 ರೂ. ಒಟ್ಟು 2,500 ರೂ ಮೊತ್ತದ ಪ್ಯಾಂಟ್ ಅನ್ನು ಖರೀದಿಸಿದರು.

    ಮನೆ ಮನೆ ಪ್ರಚಾರದ ಸಂದರ್ಭದಲ್ಲಿ ಡಿಕೆಶಿ ಅವರನ್ನು ಜನರು ಆರತಿ ಮಾಡಿ ಸ್ವಾಗತ ಮಾಡಿದ್ದರು. ಈ ವೆಳೆ ಆರತಿ ಮಾಡಿದ ಮಹಿಳೆಗೆ ಹಣವನ್ನು ನೀಡಿದರು. ಬಳಿಕ ಸೋಮಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಸೋಮಣ್ಣ ಅವರು ಹೇಳಿದಂತೆ ಶ್ರೀರಾಮುಲು ಮುಖ್ಯಮಂತ್ರಿಯಾಗಲಿ ಪ್ರಧಾನಿಯಾಗಲಿ. ಮೋದಿಯನ್ನು ಇಳಿಸಿ ಶ್ರೀರಾಮಲುವನ್ನು ಪ್ರಧಾನಿ ಮಾಡಲಿ. ಯಡಿಯೂರಪ್ಪ ಬದಲು ಶ್ರೀರಾಮುಲುವನ್ನು ಸಿಎಂ ಮಾಡಲಿ ಸಂತೋಷ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲಿಯೇ ಮಹಿಳೆಯ ಪ್ಯಾಂಟ್ ಎಳೆದು ಕಿರುಕುಳ!

    ನಡುರಸ್ತೆಯಲ್ಲಿಯೇ ಮಹಿಳೆಯ ಪ್ಯಾಂಟ್ ಎಳೆದು ಕಿರುಕುಳ!

    ಮುಂಬೈ: 33 ವರ್ಷದ ವ್ಯಕ್ತಿಯೊಬ್ಬ 40 ವರ್ಷದ ಮಹಿಳೆಯ ಪ್ಯಾಂಟ್ ಎಳೆದು ಕಿರುಕುಳ ನೀಡಿದ್ದು, ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಘಟನೆ ಕಂಡಿವಾಲಿಯ ನ್ಯೂ ಲಿಂಕ್ ರೋಡ್ ನಲ್ಲಿ ನಡೆದಿದೆ. ರಾಮ್‍ರಾಜ್ ಪವಾರ್ ಬಂಧಿತ ಆರೋಪಿ. ಮಹಿಳೆ ಬೋರಿವಲಿಯಲ್ಲಿರುವ ತಮ್ಮ ನಿವಾಸದಿಂದ ಬಿಟ್ಟು ಮಲಾಡ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆರೋಪಿಯು ಕೂಡ ತನ್ನ ಸ್ಕೂಟರಿನಿಂದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಅಲ್ಲದೇ ಸ್ಕೂಟರ್ ನಿಲ್ಲಿಸಿ ಮಹಿಳೆಯ ಹಿಂದೆ ನಡೆದುಕೊಂಡು ಹಿಂಬಾಲಿಸಿ ಹೋಗಿದ್ದಾನೆ. ಬಳಿಕ ಸ್ವಲ್ಪ ದೂರ ಹೋಗುತ್ತಿದ್ದಂತೆ ಆಕೆಯ ಪ್ಯಾಂಟ್ ಎಳೆದು ಅಸಭ್ಯವಾಗಿ ಆಕೆಯನ್ನು ಮುಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಮಹಿಳೆ ತಕ್ಷಣ ಆಘಾತಗೊಂಡು ಕಾಪಾಡಿ ಎಂದು ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಜನರು ದೌಡಾಯಿಸಿದ್ದಾರೆ. ಜನರು ಬರುತ್ತಿದ್ದಂತೆ ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೊಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಆತನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸರು ಸಂತ್ರಸ್ತ ಮಹಿಳೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ನ್ಯಾಯಾಲಯವು ಜಾಮೀನು ನೀಡುವವರೆಗೂ ಆತ ಜೈಲಿನಲ್ಲಿರುತ್ತಾನೆ. ಪೊಲೀಸರು ಬಂಧಿತ ಆರೋಪಿ ಮೇಲೆ ಯಾವುದಾದರೂ ಕ್ರಿಮಿನಲ್ ಕೇಸ್ ಇದೆಯಾ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ಹಿರಿಯ ಇನ್ಸ್ ಪೆಕ್ಟರ್ ಪ್ರಮೋದ್ ಧವಾರೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews