Tag: ಪೌಷ್ಟಿಕ ಆಹಾರ

  • ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳೇ ಶಾಲೆಗೆ ಬೀಗ ಹಾಕಿ ಆಕ್ರೋಶ

    ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳೇ ಶಾಲೆಗೆ ಬೀಗ ಹಾಕಿ ಆಕ್ರೋಶ

    ಗದಗ: ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳು ಶಾಲೆಗೆ (School) ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ (Lakkalakatti) ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವತಃ ಮಕ್ಕಳೇ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ಶಿಕ್ಷಕಿ ಎಎಸ್ ರಾಠೋಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 15 ದಿನಗಳಿಂದ ಮಕ್ಕಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆ ಹಣ್ಣು, ಪೌಷ್ಟಿಕ ಆಹಾರ ನೀಡುತ್ತಿಲ್ಲ. ಇನ್ನು ಮಧ್ಯಾಹ್ನ ಬಿಸಿ ಊಟ ಎಲ್ಲಾ ಮಕ್ಕಳಿಗೂ ಸಮರ್ಪಕವಾಗಿ ಕೊಡುತ್ತಿಲ್ಲ ಎಂಬ ಆರೋಪ ಮಕ್ಕಳದ್ದಾಗಿದೆ.

    ಇಲ್ಲಿ 1 ರಿಂದ 7ನೇ ತರಗತಿಯವರೆಗೆ 441 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಮಧ್ಯಾಹ್ನ 2:30 ರಿಂದ 3 ಗಂಟೆಗೆ ತಡವಾಗಿ ಬಿಸಿ ಊಟ ನೀಡುತ್ತಾರೆ. ಜೊತೆಗೆ ಕೇವಲ 1-2 ಕೆಜಿ ತರಕಾರಿಯಲ್ಲಿ 441 ಮಕ್ಕಳಿಗೆ ಬಿಸಿ ಊಟ ಹಂಚಿಕೆ ಮಾಡುತ್ತಾರೆ. ಧಾನ್ಯಗಳಿಲ್ಲದ ಮಸಾಲೆ ಮಿಶ್ರಿತ ತಿಳಿ ಸಾರು, ಹುಳು ಹತ್ತಿದ, ಬಲಿತ, ಕೊಳೆತ ತರಕಾರಿ ತಂದು ಊಟ ತಯಾರಿಸುತ್ತಾರೆ. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಮಕ್ಕಳದ್ದಾಗಿದೆ.

    ಆದರೆ ಲೆಕ್ಕ ಪುಸ್ತಕದಲ್ಲಿ ಎಲ್ಲವನ್ನೂ ದಾಖಲು ಮಾಡಿರುತ್ತಾರೆ ಎಂಬ ಆರೋಪ ಪಾಲಕರದ್ದಾಗಿದೆ. ಮುಖ್ಯ ಶಿಕ್ಷಕಿ ಎಎಸ್ ರಾಠೋಡ್ ಬೇಡವೇ ಬೇಡ, ಮಕ್ಕಳ ಹಿತ ಕಾಪಾಡದ ಶಿಕ್ಷಕಿ ನಮ್ಮೂರ ಶಾಲೆಗೆ ಬೇರೆ ಕಡೆಗೆ ಎಂದು ಮಕ್ಕಳು, ಪಾಲಕರು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿಗಳು ಬರುವಂತೆ ಮಕ್ಕಳು ಆಗ್ರಹಿಸಿದ್ದಾರೆ. ಶಿಕ್ಷಕಿ ವರ್ಗಾವಣೆ ಆಗುವವರೆಗೆ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಭರವಸೆ – ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಿಜೆಪಿ ಸಂಸದ

    ನಂತರ ಸ್ಥಳಕ್ಕೆ ಗಜೇಂದ್ರಗಡ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌ಎನ್ ಹುರಳಿ ಭೇಟಿ ನೀಡಿ, ಮಕ್ಕಳು ಹಾಗೂ ಪಾಲಕರ ಮನವೊಲಿಸಲು ಮುಂದಾಗಿದ್ದಾರೆ. ಇಂದು ಮುಖ್ಯ ಶಿಕ್ಷಕಿ ರಜೆ ಇದ್ದು, ಆದಷ್ಟು ಬೇಗ ಪರಿಶೀಲನೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್‌ಗೆ ಠಕ್ಕರ್‌ ನೀಡಲು ಸತೀಶ್‌ ಜಾರಕಿಹೊಳಿ ಪ್ಲ್ಯಾನ್‌

  • ಮಕ್ಕಳಿಗೆ ಪೌಷ್ಟಿಕ ಆಹಾರದ ಹೆಸರಲ್ಲಿ ಅವಧಿ ಮೀರಿದ ಚಿಕ್ಕಿ ವಿತರಣೆ

    ಮಕ್ಕಳಿಗೆ ಪೌಷ್ಟಿಕ ಆಹಾರದ ಹೆಸರಲ್ಲಿ ಅವಧಿ ಮೀರಿದ ಚಿಕ್ಕಿ ವಿತರಣೆ

    ಹಾಸನ: ಸರ್ಕಾರ ಅಂಗನವಾಡಿ ಮೂಲಕ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಕೋಟಿ, ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಹೀಗೆ ಸರ್ಕಾರ ನೀಡುವ ಪೌಷ್ಟಿಕ ಆಹಾರಗಳಲ್ಲಿ ಚಿಕ್ಕಿಯೂ ಒಂದು. ಆದರೆ ಹಾಸನ ಜಿಲ್ಲೆಯ ಅಂಗನವಾಡಿಗಳಲ್ಲಿ ಅವಧಿ ಮೀರಿದ ಚಿಕ್ಕಿ ವಿತರಣೆಯಾಗುತ್ತಿದ್ದು, ಮಕ್ಕಳು ಹಾಗೂ ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ.

    ಅವಧಿ ಮೀರಿದ ಆಹಾರ ವಿತರಣೆ ಆಗುತ್ತಿದ್ದರೂ ಇವೆಲ್ಲ ಕಂಡು ಕಾಣದಂತೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೆಡಿಪಿ ಸದಸ್ಯ ಇಸ್ಮಾಯಿಲ್‌ಗೆ ಮಾಹಿತಿ ನೀಡಿದ್ದು, ಇದರಿಂದ ಅರಕಲಗೂಡು ತಾಲೂಕಿನ ಹಲವೆಡೆ ಅಂಗನವಾಡಿಗಳಿಗೆ ಇಸ್ಮಾಯಿಲ್ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಅಂಗನವಾಡಿಗಳಲ್ಲಿ ಅವಧಿ ಮೀರಿದ ಚಿಕ್ಕಿ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಆರೋಪ ಮಾಡುವುದೇ ಬಿಜೆಪಿ ಕೆಲಸ: ಸತೀಶ್‌ ಜಾರಕಿಹೊಳಿ

    ಹಣ ಹೊಡೆಯುವ ಉದ್ದೇಶದಿಂದ ಅವಧಿ ಮೀರಿದ ಚಿಕ್ಕಿಯನ್ನು ವಾಪಸ್ ಕಳುಹಿಸದೇ, ಮಕ್ಕಳು ಹಾಗೂ ಬಾಣಂತಿಯರಿಗೆ ವಿತರಿಸುತ್ತಾರೆ ಎಂಬ ಗಂಭಿರ ಆರೋಪ ಕೇಳಿ ಬಂದಿದೆ. ಈ ಅವಧಿ ಮೀರಿದ ಚಿಕ್ಕಿಯನ್ನೇ ಮಕ್ಕಳಿಗೆ ನೀಡುತ್ತಿರುವುದರ ಹಿಂದೆ ಅಧಿಕಾರಿಗಳು, ಗುತ್ತಿಗೆದಾರರ ಕೈವಾಡ ಇರುವುದಾಗಿಯೂ ಆರೋಪ ಕೇಳಿ ಬಂದಿದೆ. ಈ ಅವಧಿ ಮೀರಿದ ಚಿಕ್ಕಿಯನ್ನು ತಿಂದರೆ ಮಕ್ಕಳು ಹಾಗೂ ಬಾಣಂತಿಯರ ಆರೋಗ್ಯದ ಪರಿಸ್ಥಿತಿ ಏನಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ನಿಯಮ ಉಲ್ಲಂಘನೆ ಆರೋಪ – ಸಿದ್ದರಾಮಯ್ಯಗೆ ಸಮನ್ಸ್

    ಸರ್ಕಾರವೇನೋ ಮಕ್ಕಳು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಹೆಸರಲ್ಲಿ ಕೋಟಿ ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಆದರೆ ಅವಧಿ ಮೀರಿದ ಆಹಾರ ನೀಡಿದರೆ ಅದು ಹೇಗೆ ಪೌಷ್ಟಿಕ ಆಹಾರವಾಗುತ್ತೆ? ಆ ರೀತಿಯ ಆಹಾರದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಇನ್ನಾದರೂ ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು.

  • ಮೊಟ್ಟೆ ತಿನ್ನಲು ಒತ್ತಡ ಹೇರಲ್ಲ: ನಾಗೇಶ್

    ಮೊಟ್ಟೆ ತಿನ್ನಲು ಒತ್ತಡ ಹೇರಲ್ಲ: ನಾಗೇಶ್

    ಮಂಡ್ಯ: ಶಾಲಾ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರುವುದಿಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಮಕ್ಕಳು ಅಪೌಷ್ಟಿಕತೆಯಿಂದ ಒದ್ದಾಡುತ್ತಿದ್ದಾರೆ. ತಜ್ಞರ ಸಲಹೆಯ ಮೇರೆಗೆ ನಾವು ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ನಿರ್ಧರಿಸಿದ್ದೇವೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣನ್ನು ನೀಡುತ್ತೇವೆ. ಹೀಗೆ ಪ್ರೋಟಿನ್‍ಯುಕ್ತ ಆಹಾರಗಳನ್ನು ಆಯ್ಕೆ ಮಾಡಿದ್ದು, ತಜ್ಞರ ಒಪ್ಪಿಗೆಯ ಬಳಿಕ ಮುಂದಿನ ದಿನಗಳಲ್ಲಿ ಜಾರಿಗೆ ತರಲಿದ್ದೇವೆ ಎಂದರು.

    ಕೊರೋನಾ ಹೆಚ್ಚಾಗಿಲ್ಲ. ಕೊರೋನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದಿರುವ ಮಕ್ಕಳು ಆರೋಗ್ಯವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳನ್ನು ಮುಚ್ಚುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಕಣ್ಣಿನಿಂದ ಇನ್ನೊಬ್ಬರಿಗೆ ದೃಷ್ಟಿ ಬರುವುದೇ ಬದುಕಿನ ಸಾಕ್ಷಾತ್ಕಾರ: ಡಾ.ಕೆ.ಸುಧಾಕರ್

    1 ಕೋಟಿ 20 ಲಕ್ಷ ಮಕ್ಕಳಲ್ಲಿ 102 ಮಕ್ಕಳಿಗೆ ಮಾತ್ರವೇ ಸೋಂಕು ಇದೆ. ಅದರಲ್ಲೂ ರೆಸಿಡೆನ್ಸಿ ಶಾಲೆಗಳಲ್ಲಿ ಪಾಸಿಟಿವ್ ಬಂದಿದೆ. ಓಪನ್ ಶಾಲೆಗಳಲ್ಲಿ ಯಾವುದೇ ಮಕ್ಕಳಿಗೂ ಪಾಸಿಟಿವ್ ಬಂದಿಲ್ಲ. ಇದೀಗ ಯಾವುದೇ ರೀತಿಯ ಉದಾಸಿನ ಮಾಡದೇ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

    ಶಿಕ್ಷಕರ ನೇಮಕ: ಅನೇಕ ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಇದಕ್ಕಾಗಿ 12 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ನೀಡಲಾಗಿದೆ. ಹೀಗೆ 12 ಸಾವಿರ ಪೋಸ್ಟ್‍ಗಳನ್ನು ಪೂರ್ಣ ಮಾಡಲಾಗುತ್ತದೆ. ಇದರೊಂದಿಗೆ ಶಾಲಾಕೊಠಡಿಗಳ ಕೊರತೆಯನ್ನೂ ಸರಿಪಡಿಸಲಿದ್ದೇವೆ. ಮುಂದಿನ ವರ್ಷದ ಅಕಾಡೆಮಿಕ್ ಇಯರ್ ಒಳಗಾಗಿ ಎಲ್ಲವನ್ನೂ ಅನುಷ್ಟಾನಕ್ಕೆ ತರಲಿದ್ದೇವೆ ಎಂದು ಹೇಳಿದರು.

  • ಮಕ್ಕಳಿಗೆ ಕಳಪೆ ಗುಣಮಟ್ಟದ ಚಿಕ್ಕಿ – ತನಿಖೆಗೆ ರೇವಣ್ಣ ಆಗ್ರಹ

    ಮಕ್ಕಳಿಗೆ ಕಳಪೆ ಗುಣಮಟ್ಟದ ಚಿಕ್ಕಿ – ತನಿಖೆಗೆ ರೇವಣ್ಣ ಆಗ್ರಹ

    ಹಾಸನ: ಸರ್ಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಪೌಷ್ಟಿಕ ಆಹಾರ ನೀಡಲು ಮತ್ತು ಅಂಗನವಾಡಿ ಪರಿಕರ ಖರೀದಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಪೌಷ್ಟಿಕ ಆಹಾರ ನೀಡಲು ಸರಿಯಾದ ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲೂ ಹಾಸನದಲ್ಲಿ ಹಣ ಲೂಟಿಯಾಗುತ್ತಿದೆ ಮತ್ತು ಗುಣಮಟ್ಟಣ ಆಹಾರ ಕೂಡ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ

    ಸರ್ಕಾರ ಇಡೀ ರಾಜ್ಯದ ಅಂಗನವಾಡಿ ಮಕ್ಕಳಿಗೆ ಚಿಕ್ಕಿಕೊಡುತ್ತಿದ್ದು, ಪ್ರತಿ ಚಿಕ್ಕಿಗೆ 2 ರೂಪಾಯಿ ದರ ನಿಗದಿ ಮಾಡಿದೆ. ಚಿಕ್ಕಿಗೆ ಶೇಂಗಾ, ಬೆಲ್ಲ ಬಳಸುತ್ತಾರೆ. ಆದರೆ ಹಾಸನದಲ್ಲಿ ನೀಡುತ್ತಿರುವ ಚಿಕ್ಕಿ ಕಡಿಮೆ ತೂಕದ್ದಾಗಿದ್ದು, ಒಂದು ಚಿಕ್ಕಿಗೆ ಮೂಲಭೂತವಾಗಿ 80 ಪೈಸೆ ಬೀಳುತ್ತಿದೆ. ಸರ್ಕಾರ ಒಂದು ಚಿಕ್ಕಿ ಎಷ್ಟು ತೂಕ ಇರಬೇಕು ಎಂದು ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಪ್ರತಿ ತಿಂಗಳು ಹಾಸನ ಜಿಲ್ಲೆಯೊಂದಕ್ಕೆ 25 ಲಕ್ಷ ಚಿಕ್ಕಿ ಬೇಕು. ಪ್ರತಿ ತಿಂಗಳು ಮಕ್ಕಳಿಗೆ ನೀಡುವ ಚಿಕ್ಕಿಗೆ ಸುಮಾರು 50 ಲಕ್ಷ ಬಿಲ್ ಆಗುತ್ತಿದೆ. ಆದರೆ ಇವರು ಕಡಿಮೆ ದರಕ್ಕೆ ಚಿಕ್ಕಿ ಖರೀದಿಸಿ ಹೆಚ್ಚು ಬಿಲ್ ಹಾಕಿಕೊಂಡು ಹಣ ನುಂಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರವಲ್ಲದೆ, ಅಂಗನವಾಡಿಗೆ ಖರೀದಿಸುವ ಪ್ರಚಾರ ಪರಿಕರದಲ್ಲೂ ಅಕ್ರಮ ಎಸಗಿದ್ದಾರೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ಆರೋಪ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಂಬಂಧ ಪಟ್ಟ ಸಚಿವರಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲಅಂತಿದ್ದಾರೆ. ಈ ಬಗ್ಗೆ ಹಾಸನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಪರಶುರಾಮ್ ಶೆಟ್ಟಪ್ಪನವರ್ ಅವರನ್ನು ಕೇಳಿದರೆ, ನಾನು ಈ ಬಗ್ಗೆ ಕೂಡಲೇ ಗಮನಹರಿಸಿ ಪ್ರಚಾರ ಪರಿಕರ ಮತ್ತು ಚಿಕ್ಕಿ ನೀಡುವಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ- ಸಿಡಿಲಿಗೆ ಯುವಕ ಬಲಿ, ಮನೆಗಳಿಗೆ ನುಗ್ಗಿದ ನೀರು

    ಒಟ್ಟಾರೆ ಅಂಗನವಾಡಿಗೆ ಹೋಗುವ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದು ಪ್ರತಿ ವರ್ಷ ಕೋಟಿ, ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ಪುಟಾಣಿ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಬಿಡುಗಡೆ ಮಾಡುವ ಹಣವನ್ನೂ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.