Tag: ಪೌರ ಕಾರ್ಮಿಕ

  • ಕರ್ತವ್ಯ ನಿರತ ಪೌರ ಕಾರ್ಮಿಕ ಸಾವು- ಪರಿಹಾರಕ್ಕಾಗಿ ಪಾಲಿಕೆ ಎದರು ಶವವಿಟ್ಟು ಪ್ರತಿಭಟನೆ

    ಕರ್ತವ್ಯ ನಿರತ ಪೌರ ಕಾರ್ಮಿಕ ಸಾವು- ಪರಿಹಾರಕ್ಕಾಗಿ ಪಾಲಿಕೆ ಎದರು ಶವವಿಟ್ಟು ಪ್ರತಿಭಟನೆ

    ಹುಬ್ಬಳ್ಳಿ: ಕೊರೊನಾ ಹರಡುವ ಭೀತಿ ಹಾಗೂ ಲಾಕ್‍ಡೌನ್ ಘೋಷಣೆಯಾದರೂ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಕಾರ್ಯನಿರ್ವಹಿಸಿ ಹೃದಯಾಘಾತದಿಂದ ಸಾವನ್ನಪ್ಪಿದ ಪೌರಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲಾ ಎಸ್‍ಸಿ, ಎಸ್‍ಟಿ ಪೌರಕಾರ್ಮಿಕರ ಸಂಘಟನೆಯ ವತಿಯಿಂದ ಹು-ಧಾ ಮಹಾನಗರ ಪಾಲಿಕೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.

    ಪ್ರಕಾಶ ಹನುಮಂತಪ್ಪ ಚಿಕ್ಕತುಂಬಳ ಅವರು ಮೃತಪಟ್ಟಿದ್ದು, ವಾರ್ಡ್ ನಂ.54ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡಿ, ಕೆಲಸ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ಹಾಗೂ ಕುಟುಂಬಸ್ಥರಿಗೆ ಪಾಲಿಕೆಯಲ್ಲಿ ಕೆಲಸ ನೀಡುವಂತೆ ಸಂಘಟನೆ ಒತ್ತಾಯಿಸಿದೆ.

    ಪೌರ ಕಾರ್ಮಿಕ ಸಾವನ್ನಪ್ಪಿದರೂ ಸೌಜನ್ಯಕ್ಕೂ ಪಾಲಿಕೆ ಅಧಿಕಾರಿಗಳು ಆಗಮಿಸಿಲ್ಲ. ಸಂಘಟನೆಯಿಂದ ಪ್ರತಿಭಟನೆ ನಡೆಸಿದರೂ ಕ್ಯಾರೆ ಎಂದಿಲ್ಲ. ಅಧಿಕಾರಿಗಳು ನಿಷ್ಕಾಳಜಿ ತೋರಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

  • ತುಮಕೂರು ಪಾಲಿಕೆಯಿಂದ ಕೋಟಿಗಟ್ಟಲೆ ವೇತನ ಬಾಕಿ-‘ಸ್ವಚ್ಛ’ ನೌಕರರಿಗೆ ಕೊಟ್ಟಿಲ್ಲ ಸಂಬಳ

    ತುಮಕೂರು ಪಾಲಿಕೆಯಿಂದ ಕೋಟಿಗಟ್ಟಲೆ ವೇತನ ಬಾಕಿ-‘ಸ್ವಚ್ಛ’ ನೌಕರರಿಗೆ ಕೊಟ್ಟಿಲ್ಲ ಸಂಬಳ

    ತುಮಕೂರು: ಇತ್ತೀಚೆಗೆ ಬೆಂಗಳೂರಲ್ಲಿ ವೇತನ ಸಿಗದ ಕಾರಣಕ್ಕೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದರು. ತುಮಕೂರು ಪಾಲಿಕೆಯ ಪೌರ ಕಾರ್ಮಿಕರಿಗೆ 4 ತಿಂಗಳಿಂದ ವೇತನ ಕೊಟ್ಟಿಲ್ಲ. ನಗರ ಸ್ವಚ್ಛತೆಗಾಗಿ ಪೌರ ಕಾರ್ಮಿಕರಿಂದ ದುಡಿಸಿಕೊಳ್ಳುವ ಪಾಲಿಕೆ ಇವರಿಗೆ ಸಂಬಳ ನೀಡುವ ವಿಚಾರದಲ್ಲಿ ಮಾತ್ರ ಕಣ್ಮುಚ್ಚಿ ಕುಳಿತಿದೆ. ಅಷ್ಟಕ್ಕೂ ಪಾಲಿಕೆ ಪೌರ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಸಂಬಳದ ಮೊತ್ತ ಕೇಳಿದರೆ ನಿಮಗೆ ಶಾಕ್ ಆಗೋದು ಖಂಡಿತ.

    ಬೆಂಗಳೂರಿನ ಜಸ್ಕೋ ಕಂಪೆನಿ ಬಿಬಿಎಂಪಿಯಿಂದ ಸುಮಾರು 600 ನೌಕರರನ್ನು ಗುತ್ತಿಗೆ ಪಡೆದುಕೊಂಡಿದೆ. ಇವರಿಗೆ ಕಳೆದ 4 ತಿಂಗಳಿಂದ ಬರೋಬ್ಬರಿ 5 ಕೋಟಿ 40 ಲಕ್ಷ ರೂಪಾಯಿ ವೇತನ ಬಾಕಿ ಉಳಿಸಿಕೊಂಡಿದೆ. ಗುತ್ತಿಗೆ ಕಂಪೆನಿಗೆ ಪಾಲಿಕೆ ಅನುದಾನ ಇಲ್ಲ ಎಂಬ ನೆಪ ಹೇಳಿ ಹಣ ಬಿಡುಗಡೆ ಮಾಡದ ಕಾರಣ ಪೌರ ನೌಕರರಿಗೆ ಸಂಬಳ ಆಗಿಲ್ಲ.

    ಈ ಮಧ್ಯೆ ಸರ್ಕಾರ ಕಳೆದ 2 ತಿಂಗಳ ಹಿಂದೆ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದೆ. ಇದರನ್ವಯ ಒಟ್ಟು 600 ಜನರಲ್ಲಿ ಸುಮಾರು 500ಕ್ಕೂ ನೌಕರರು ನೇರ ನೇಮಕಾತಿಗೊಂಡವರು. ನೇರ ನೇಮಕಾತಿ ಆಗದ ಆಟೋ ಚಾಲಕರು ಹಾಗೂ ಆಟೋ ಸಹಾಯಕರನ್ನು ಗುತ್ತಿಗೆ ಕಂಪೆನಿಯೇ ಮುಂದುವರೆಸಿತ್ತು.

    ಒಟ್ಟಿನಲ್ಲಿ ಪಾಲಿಕೆ ಮತ್ತು ಗುತ್ತಿಗೆ ಕಂಪೆನಿಯ ನಡುವಿನ ಹಗ್ಗಜಗ್ಗಾಟದಲ್ಲಿ ಪೌರ ಕಾರ್ಮಿಕರ ಬದುಕು ನರಕ ಸದೃಶವಾಗಿದೆ. ಕೋಟಿ ಕೋಟಿ ರೂಪಾಯಿ ಲೆಕ್ಕದಲ್ಲಿ ದುಂದುವೆಚ್ಚ ಮಾಡುವ ಪಾಲಿಕೆ ಪೌರಕಾರ್ಮಿಕರ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ತೋರುತ್ತಿರೋದು ದುರಾದೃಷ್ಟವೇ ಸರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೇಯರ್, ಆಯುಕ್ತರು ಆದೇಶಿಸಿದ್ರೂ ಪೌರಕಾರ್ಮಿಕರಿಗೆ ಇನ್ನೂ ಸಂಬಳವಾಗಿಲ್ಲ!

    ಮೇಯರ್, ಆಯುಕ್ತರು ಆದೇಶಿಸಿದ್ರೂ ಪೌರಕಾರ್ಮಿಕರಿಗೆ ಇನ್ನೂ ಸಂಬಳವಾಗಿಲ್ಲ!

    ಬೆಂಗಳೂರು: ನಗರದ ಪೌರ ಕಾರ್ಮಿಕರ ಪರಿಸ್ಥಿತಿ ದೇವರು ಕೊಟ್ರೂ ಪೂಜಾರಿ ಕೊಡ್ತಿಲ್ಲ ಎಂಬಂತಾಗಿದೆ. ಎಲ್ಲಾ ಪೌರಕಾರ್ಮಿಕರ ಅಕೌಂಟ್ ಗೂ ಸಂಬಳ ಹಾಕಿ ಅಂತ ಆದೇಶ ಆಗಿ ಎರಡು ದಿನವಾದ್ರೂ ದುಡ್ಡು ಮಾತ್ರ ಇನ್ನೂ ಬಿದ್ದಿಲ್ಲ.

    ಈ ಬಗ್ಗೆ ಗುರುವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಆಗ್ರಹ, ಆದೇಶವಾಗಿದೆ. ಆದ್ರೆ ಪೌರಕಾರ್ಮಿಕರ ಸಂಬಳ ಮಾತ್ರ ಇನ್ನೂ ಆಗಿಲ್ಲ. ಈ ಮೂಲಕ ಮೇಯರ್ ಆದೇಶ, ಆಯುಕ್ತರ ಆದೇಶಕ್ಕೂ ಬೆಲೆ ಇಲ್ಲವಾಯ್ತಾ ಎನ್ನುವ ಪ್ರಶ್ನೆಯೊಂದು ಅಲ್ಲಿನ ಕಾರ್ಮಿಕರಲ್ಲಿ ಮೂಡಿದೆ.

    ಇಂದು ಸಂಜೆ ಒಳಗೆ ಸಂಬಳ ಆಗದಿದ್ರೆ ಮುಷ್ಕರಕ್ಕಿಳಿಯಲು ಗುತ್ತಿಗೆ ಪೌರಕಾರ್ಮಿಕರ ಚಿಂತನೆ ನಡೆಸಿದ್ದಾರೆ. ಹೀಗಾಗಿ ಒಂದು ವೇಳೆ ಸಂಬಳ ಆಗದಿದ್ರೆ ಮತ್ತೊಮ್ಮೆ ಬೆಂಗಳೂರು ಕಸ ರಾಷ್ಟ್ರ, ಅಂತಾರಾಷ್ಟ್ರೀಯ ಸುದ್ದಿಯಾಗೋ ಸಾಧ್ಯತೆ ಇದೆ.

    ಜನವರಿಯಿಂದ ಇಲ್ಲಿಯ ತನಕ ಬಿಬಿಎಂಪಿಯು 27 ಕೋಟಿ ರೂಪಾಯಿ ಸಂಬಳ ಬಾಕಿ ಉಳಿಸಿಕೊಂಡಿದೆ. 27 ಕೋಟಿ ರೂಪಾಯಿ ಸಂಬಳ ಬಿಡುಗಡೆ ಆದೇಶವಾದ್ರೂ ಪೌರಕಾರ್ಮಿಕರ ಅಕೌಂಟ್ ಗೆ ಮಾತ್ರ ಅಧಿಕಾರಿಗಳು ಸಂಬಳ ಹಾಕಿಲ್ಲ ಅಂತ ಪೌರ ಕಾರ್ಮಿಕರು ಕಿಡಿಕಾರಿದ್ದಾರೆ.