Tag: ಪೌರ ಕಾರ್ಮಿಕರು

  • ದರ್ಶನ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ

    ದರ್ಶನ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ

    ಮ್ಮ ಹುಟ್ಟುಹಬ್ಬಕ್ಕೆ (Birthday) ಕೇಕ್, ಹಾರ, ತುರಾಯಿ ತರದೇ ದಿನಸಿ (Grocery) ಸಾಮಾಗ್ರಿಗಳನ್ನು ನೀಡುವಂತೆ ದರ್ಶನ್ (Darshan) ಅಭಿಮಾನಿಗಳಿಗೆ ಕರೆಕೊಟ್ಟಿದ್ದರು. ಅದರಂತೆ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ದಿನಸಿ ನೀಡಿದ್ದರು. ಆ ದಿನಸಿಗಳನ್ನು ಇಂದು ಪೌರಕಾರ್ಮಿಕರಿಗೆ (Civic workers) ವಿತರಣೆ ಮಾಡಲಾಗಿದೆ.

    ಪ್ರತಿ ವರ್ಷವೂ ದಿನಸಿಗಳನ್ನು ತಂದುಕೊಂಡುವಂತೆ ದರ್ಶನ್ ಮನವಿ ಮಾಡುತ್ತಾರೆ. ಅಕ್ಕಿ, ಬೆಳೆ ಸೇರಿದಂತೆ ಅಭಿಮಾನಿಗಳು ಕೊಟ್ಟ ದಿನಸಿಗಳನ್ನು ಕೆಲ ವರ್ಷಗಳ ಕಾಲ ಸಿದ್ಧಗಂಗಾ ಮಠಕ್ಕೆ ನೀಡಿದ್ದರು. ಜೊತೆಗೆ ಅನಾಥಾಶ್ರಮಗಳಿಗೂ ಕಳುಹಿಸಿಕೊಟ್ಟಿದ್ದರು. ಈ ಬಾರಿ ಪೌರಕಾರ್ಮಿಕರ ಹಂಚಿದ್ದಾರೆ.

    ಈ ಬಾರಿ ದರ್ಶನ್ ಹುಟ್ಟು ಹಬ್ಬ ವಿಶೇಷವಾಗಿತ್ತು. ಫೆ.16ರಂದು ಅಭಿಮಾನಿಗಳ ಸಮ್ಮುಖದಲ್ಲಿ ಮನೆ ಮುಂದೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರೆ, 17ನೇ ತಾರೀಖು ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ಬೆಳ್ಳಿ ಪರ್ವ ಕಾರ್ಯಕಮ ನಡೆಯಿತು. ದರ್ಶನ್ ಸಿನಿಮಾ ರಂಗಕ್ಕೆ ಬಂದು 15 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದೆ.

     

    ಈ ನಡುವೆ ಮತ್ತೊಂದು ಸಂಭ್ರಮದ ವಿಚಾರವೆಂದರೆ, ದರ್ಶನ್ ನಟನೆಯ ಕಾಟೇರ ಸಿನಿಮಾ ನಿನ್ನೆಗೆ 50 ದಿವಸಗಳನ್ನು ಪೂರೈಸಿದೆ. ನಿನ್ನೆಯೂ ಆ ಸಂಭ್ರಮವನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ನಡೆದಿದೆ.

  • ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್

    ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್

    ತಿರುವನಂತಪುರಂ: 250 ರೂ. ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಕೇರಳದ (Kerala) 11 ಪೌರಕಾರ್ಮಿಕ ಮಹಿಳೆಯರ ಅದೃಷ್ಟ ಖುಲಾಯಿಸಿದೆ. ಕೇರಳ ಲಾಟರಿ ಇಲಾಖೆ  (Kerala Lottery) ನಡೆಸುವ ಡ್ರಾನಲ್ಲಿ 10 ಕೋಟಿ ರೂ. ಬಹುಮಾನ ಈ ಮಹಿಳೆಯರ ಪಾಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆಯರು (Women), ನಾವೆಲ್ಲರೂ ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೆಟ್‍ಗಳನ್ನು ಖರೀದಿಸಿದ್ದೆವು. ಇದೇ ಮೊದಲ ಬಾರಿಗೆ ನಾವು ಗೆದ್ದಿದ್ದೇವೆ. ಬಹುಮಾನ ಗೆಲ್ಲುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮನೆ ಬಾಗಿಲು ಮುರಿದು ಬಂದೂಕು ಕದ್ದ ಕಳ್ಳರು

    ನಮ್ಮ ಟಿಕೆಟ್‍ಗೆ ಬಹುಮಾನ ಬಂದಿರುವುದು ತಿಳಿದಾಗ ಖುಷಿಯಾಯಿತು. ನಮಗೆ ವೇತನ ಹೊರತುಪಡಿಸಿ ಯಾವುದೇ ಆದಾಯ ಮೂಲಗಳಿಲ್ಲ. ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣ ಸಹಕಾರವಾಗಲಿದೆ ಎಂದು ಮತ್ತೋರ್ವ ಮಹಿಳೆ ತಿಳಿಸಿದ್ದಾರೆ.

    ನಗರಸಭೆಯ ಹರಿತ ಕರ್ಮ ಸೇನೆ (Haritha Karma Sena) ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ಶ್ರಮಜೀವಿಗಳಾಗಿದ್ದಾರೆ. ಅವರೆಲ್ಲ ಹೆಚ್ಚಾಗಿ ಸಾಲದಲ್ಲಿದ್ದಾರೆ. ಅಲ್ಲದೇ ಮದುವೆಗೆ ಬಂದಿರುವ ಹೆಣ್ಣುಮಕ್ಕಳಿದ್ದಾರೆ. ಕೆಲವರು ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಬೇಕಿದೆ. ಅವರ ಮನೆಗಳು ಭದ್ರವಾಗಿಲ್ಲ. ಅಂಥವರಿಗೆ ಈ ಲಾಟರಿ ಒಲಿದಿರುವುದು ಖುಷಿ ನೀಡಿದೆ ಎಂದಿದ್ದಾರೆ.

    ಲಾಟರಿ ವಿಜೇತ ಮಹಿಳೆಯರನ್ನು ಭೇಟಿ ಮಾಡಿ ಹಲವಾರು ಜನ ಅಭಿನಂದಿಸಿದ್ದಾರೆ. ಶ್ರಮಜೀವಿಗಳಿಗೆ ಒಲಿದ ಅದೃಷ್ಟಕ್ಕೆ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಬಸವಸಾಗರ ಜಲಾಶಯ ಭರ್ತಿ – ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ರಿಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿ ಮೇಲೆ ಪೌರಕಾರ್ಮಿಕರಿಂದ ಹಲ್ಲೆ

    ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿ ಮೇಲೆ ಪೌರಕಾರ್ಮಿಕರಿಂದ ಹಲ್ಲೆ

    ಭೋಪಾಲ್: ಪೌರ ಕಾರ್ಮಿಕರ (Civic Staff) ಗುಂಪೊಂದು ರಾವು (Rau) ಪುರಸಭೆಯ (Municipality) ಬಿಜೆಪಿ ಕಾರ್ಪೊರೇಟರ್ ಪತಿಗೆ ಪೊಲೀಸ್ ಠಾಣೆಯಲ್ಲಿ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (MadhyaPradesh) ನಡೆದಿದೆ.

    ಇದೀಗ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಧ್ಯಾಹ್ನ ಪೊಲೀಸ್ ಠಾಣೆಗೆ ಆಗಮಿಸಿದ ಪೌರಕಾರ್ಮಿಕರ ಗುಂಪು ಸಂದೀಪ್ ಚೋಹಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಪೌರ ಕಾರ್ಮಿಕರಿಗೆ ದೂರವಾಣಿಯಲ್ಲಿ ನಿಂದಿಸಿದ ಆರೋಪದಡಿ ಸಂದೀಪ್ ಚೋಹಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ರೇಪ್ ಮಾಡಿ ಬಾಲಕಿಯನ್ನು ಹತ್ಯೆಗೈದ – ಕಾಮುಕ ಕಾಂತರಾಜು ಗಲ್ಲಿಗೆ ಆಗ್ರಹ

    ಸಂದೀಪ್ ಚೋಹನ್ ಅವರ ಪತ್ನಿ ಪುರಸಭೆಯ ವಾರ್ಡ್ ಸಂಖ್ಯೆ 13 ರಲ್ಲಿ ಕಾರ್ಪೊರೇಟರ್ ಆಗಿದ್ದಾರೆ. ಎರಡೂ ಗುಂಪುಗಳ ನಡುವೆ ರಾಜಿ ಸಂಧಾನ ಮಾಡಲು ಪೊಲೀಸರು ಸಂದೀಪ್ ಚೋಹನ್ ಹಾಗೂ ಪೌರ ಕಾರ್ಮಿಕರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಕೆಲವು ಮಂದಿ ಸಂದೀಪ್ ಚೋಹನ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಎರಡೂ ಕಡೆಯವರು ಪರಸ್ಪರ ಹಲ್ಲೆ ಮತ್ತು ಬೆದರಿಕೆಯ ದೂರುಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರೀಶ್‌ ಪೂಂಜಾ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ದುಷ್ಕರ್ಮಿಯಿಂದ ಜೀವ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • BJP, ಹಿಂದೂ ಕಾರ್ಯಕರ್ತರ ಮೇಲಿನ 35 ಕ್ರಿಮಿನಲ್ ಕೇಸ್ ವಾಪಸ್

    BJP, ಹಿಂದೂ ಕಾರ್ಯಕರ್ತರ ಮೇಲಿನ 35 ಕ್ರಿಮಿನಲ್ ಕೇಸ್ ವಾಪಸ್

    ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ 35 ಕ್ರಿಮಿನಲ್ ಕೇಸ್‌ಗಳನ್ನು (Criminal Case) ಹಿಂಪಡೆಯಲು ರಾಜ್ಯ ಸರ್ಕಾರ (Karnataka Government) ನಿರ್ಧರಿಸಿದೆ.

    ಇಂದು ನಡೆದ ಸಂಪುಟ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು (BJP Workers), ಹಿಂದೂ ಕಾರ್ಯಕರ್ತರು (Hindu Activists), ರೈತ ಮುಖಂಡರು ಮತ್ತು ಕನ್ನಡ ಪರ ಕಾರ್ಯಕರ್ತರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸಂಪುಟ ಉಪಸಮಿತಿ ಶಿಫಾರಸುಗಳನ್ನು ಆಧರಿಸಿ ಹಿಂಪಡೆಯಲು ನಿರ್ಧರಿಸಲಾಯ್ತು. ಆದರೆ ಯಾವ ಯಾವ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    11,133 ಪೌರ ಕಾರ್ಮಿಕರಿಗೆ (Civic Workers) ಖಾಯಂ ನೌಕರಿ: ಸಿಹಿ ಸುದ್ದಿ ಅಂದ್ರೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳಲು ಸಂಪುಟ ನಿರ್ಧರಿಸಿದೆ. ಇದನ್ನೂ ಓದಿ: ಬಾಲಿವುಡ್‌ನ ಈ ನಟನ ಜೊತೆ ಹಸೆಮಣೆ ಏರಲು ರೆಡಿಯಾದ `ಗೂಗ್ಲಿ’ ನಟಿ

    ಈ ನೌಕರರಿಗೆ 17,000-28,980 ವೇತನ ಶ್ರೇಣಿ ಅಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಅನೇಕ ದಿನಗಳಿಂದ ಹೋರಾಟ ಮಾಡ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಈ ಮಧ್ಯೆ ಮಹತ್ವದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಎಸ್‌ಎಸ್‌ಎಲ್‌ಸಿ ಬೋರ್ಡ್‌ನಲ್ಲಿ ಪಿಯುಸಿ ಬೋರ್ಡ್ ವಿಲೀನ ಮಾಡುವ ವಿಧೇಯಕವನ್ನು ನಾಳೆ ಸದನದಲ್ಲಿ ಮಂಡಿಸಲಾಗುತ್ತದೆ. ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಇದು ಕೂಡ ನಾಳೆ ಸದನದಲ್ಲಿ ಮಂಡನೆ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ಎಂಟಿಬಿ ನಾಗರಾಜ್‌

    ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ಎಂಟಿಬಿ ನಾಗರಾಜ್‌

    ಬೆಂಗಳೂರು: ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 5300 ಮಂದಿ ಪೌರ ಕಾರ್ಮಿಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು ಹಾಗೂ ನೇರ ಪಾವತಿ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ಎಂಟಿಬಿ ನಾಗರಾಜ್ , ಸರ್ಕಾರ ಪೌರ ಕಾರ್ಮಿಕರ ಪರ ಸಹಾನುಭೂತಿ ಹೊಂದಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಬದ್ದವಾಗಿದೆ. ಹಾಗಾಗಿ, ಪೌರಕಾರ್ಮಿಕ ಸಂಘಟನೆಗಳು ಜುಲೈ 1 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದರು.

     

     

    ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ ರವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ನಿರ್ಣಯಿಸಿರುವಂತೆ ಪೌರಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರ ಪಾವತಿ ವೇತನ ಪಡೆಯುತ್ತಿರುವ ಪೌರ ಕಾರ್ಮಿಕ ಸೇವೆಯನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆರ್ಥಿಕ ಇಲಾಖೆಯು ಈಗಾಗಲೇ 5300 ಪೌರಕಾರ್ಮಿಕರ ನೇಮಕಾತಿಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸಚಿವರು ಸೂಚಿಸಿದರು.
    ಇದನ್ನೂ ಓದಿ: ಒಬ್ಬ ಹೇಡಿ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ವಿರೋಧಿಸುವುದು ಸರಿಯಲ್ಲ: ಅಬ್ದುಲ್ ರಜಾಕ್

    ಪೌರಕಾರ್ಮಿಕರು ಮತ್ತು ಸ್ವಚ್ಛತಾ ನೌಕರರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಎಲ್ಲಾ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರಿಗೂ ಅನ್ವಯವಾಗುವಂತೆ ವಿಸ್ತರಿಸುವ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಸಚಿವ ಎಂಟಿಬಿ ನಾಗರಾಜ್ ನಿರ್ದೇಶನ ನೀಡಿದರು. 2018 ರಲ್ಲಿ ರಚಿಸಲಾಗಿರುವ ಪೌರ ಕಾರ್ಮಿಕರ ನೇಮಕಾತಿ ವಿಶೇಷ ನಿಯಮಾವಳಿಗಳನ್ನು ಪುನರ್ ಪರಿಶೀಲಿಸಲು ಅನುಕೂಲವಾಗುವಂತೆ ಈಗಾಗಲೇ ಕರ್ತವ್ಯದಲ್ಲಿರುವ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸೇವಾ ವಿವರಗಳನ್ನು ಒಂದು ವಾರದ ಒಳಗಾಗಿ ಸಂಗ್ರಹಿಸಿ ಅಗತ್ಯ ಶಿಫಾರಸ್ಸುಗಳೊಂದಿಗೆ ಕಡತ ಮಂಡಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಪೌರ ಕಾರ್ಮಿಕರ ಇನ್ನುಳಿದ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್‌ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕಿ ಅರ್ಚನಾ, ಜಂಟಿ ನಿರ್ದೇಶಕ ಶಿವಸ್ವಾಮಿ ಪಾಲ್ಗೊಂಡಿದ್ದರು.

    Live Tv

  • ಪೌರ ಕಾರ್ಮಿಕರನ್ನು ಮನೆಗೆ ಕರೆಯಿಸಿಕೊಂಡ ಕಿಚ್ಚ ಸುದೀಪ್, ಇದು ರಕ್ಕಮ್ಮ ಹಾಡು ಎಫೆಕ್ಟ್

    ಪೌರ ಕಾರ್ಮಿಕರನ್ನು ಮನೆಗೆ ಕರೆಯಿಸಿಕೊಂಡ ಕಿಚ್ಚ ಸುದೀಪ್, ಇದು ರಕ್ಕಮ್ಮ ಹಾಡು ಎಫೆಕ್ಟ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ತುಣುಕಿಗೆ ಹೆಜ್ಜೆ ಹಾಕಿದವರ ವಿಡಿಯೋ ವೈರಲ್ ಆಗುತ್ತಿವೆ. ಅದರಲ್ಲಿ ಪೌರ ಕಾರ್ಮಿಕರ ವಿಡಿಯೋ ಕೂಡ ಒಂದು. ಧಾರವಾಡದ ಕೆಲ ಪೌರ ಕಾರ್ಮಿಕರು ‘ರಾ ರಾ ರಕ್ಕಮ್ಮ’ ಎಂದು ಕುಣಿದಿದ್ದೇ ತಡ, ಆ ಹಾಡು ಅಸಂಖ್ಯಾತ ನೋಡುಗರ ಮೆಚ್ಚುಗೆಗೆ ಕಾರಣವಾಗಿತ್ತು.

    ಧಾರವಾಡದ ಕೆಲ ಪೌರ ಕಾರ್ಮಿಕರು ಈ ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ ಮೂವತ್ತು ಸಾವಿರ ಖರ್ಚು ಮಾಡಿದ್ದರಂತೆ. ಆ ವಿಡಿಯೋವನ್ನು ನೋಡಿದ ಕಿಚ್ಚ ಸುದೀಪ್, ಅಷ್ಟೂ ಪೌರ ಕಾರ್ಮಿಕರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಉಪಚರಿಸಿದ್ದಾರೆ. ಅಲ್ಲದೇ, ಅವರೊಂದಿಗೆ ಕೆಲ ಹೊತ್ತು ಕಳೆದು, ಫೋಟೋ ತಗೆಸಿಕೊಂಡು ಸಂಭ್ರಮಿಸಿದ್ದಾರೆ. ಕಿಚ್ಚನ ಮನೆಗೆ ಬಂದ ಕಾರ್ಮಿಕರು ಕೂಡ ನೆಚ್ಚಿನ ನಟನನ್ನು ಕಂಡು ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ:ದಿಗಂತ್ ಬಾಳಲ್ಲಿ ನಡೀತು ಮತ್ತೊಂದು ದುರಂತ

    ಈ ಕುರಿತು ಮಾತನಾಡಿರುವ ಪೌರ ಕಾರ್ಮಿಕರು, ತಾವು ಸುದೀಪ್ ಅವರ ಅಭಿಮಾನಿಗಳು. ವಿಕ್ರಾಂತ್ ರೋಣ ಸಿನಿಮಾ ಯಶಸ್ವಿ ಆಗಲೆಂದು ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಸೆಟ್ ಹಾಕಿ ಹಾಡನ್ನು ಶೂಟ್ ಮಾಡಿದ್ದೆವು. ಅದನ್ನು ಸುದೀಪ್ ಅವರು ನೋಡಿ, ನಮ್ಮನ್ನು ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ. ಇದೊಂದು ಮರೆಯಲಾರದ ಕ್ಷಣ ಎಂದು ಹೇಳಿದ್ದಾರೆ. ಸ್ವತಃ ದೇವರನ್ನು ಭೇಟಿ ಮಾಡಿದಷ್ಟು ನಮಗೆಲ್ಲ ಖುಷಿ ಆಗಿದೆ ಎಂದೂ ಅವರು ತಿಳಿಸಿದ್ದಾರೆ.

    Live Tv

  • ಜು.1ರಿಂದ ಸ್ವಚ್ಛತಾ ಕಾರ್ಯ ಬಂದ್ – ಸಾರ್ವಜನಿಕರಿಗೆ ತೊಂದ್ರೆಯಾದ್ರೆ ಸರ್ಕಾರವೇ ಹೊಣೆ ಎಂದ ಪೌರಕಾರ್ಮಿಕರು

    ಜು.1ರಿಂದ ಸ್ವಚ್ಛತಾ ಕಾರ್ಯ ಬಂದ್ – ಸಾರ್ವಜನಿಕರಿಗೆ ತೊಂದ್ರೆಯಾದ್ರೆ ಸರ್ಕಾರವೇ ಹೊಣೆ ಎಂದ ಪೌರಕಾರ್ಮಿಕರು

    ಚಾಮರಾಜನಗರ: ನೇರ ಪಾವತಿ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪೌರಕಾರ್ಮಿಕ ಮಹಾಸಂಘವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಅಲ್ಲದೆ ಜುಲೈ 1 ರಿಂದ ಸ್ವಚ್ಛತಾ ಕಾರ್ಯವನ್ನು ನಿಲ್ಲಿಸುವಂತೆ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಪೌರ ಕಾರ್ಮಿಕರಿಗೆ ತಿಳಿಸಿದ್ದಾರೆ.

    ಈ ಕುರಿತು ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೇರ ಪಾವತಿ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮುಷ್ಕರ ಕೈಗೊಳ್ಳಲಾಗುತ್ತಿದೆ. ಪುರಸಭೆ, ನಗರಸಭೆ, ಮಹಾನಗರಪಾಲಿಕೆ, ಬಿಬಿಎಂಪಿ ಕೇಂದ್ರಗಳಲ್ಲಿ ಪೌರಕಾರ್ಮಿಕರೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳಿಂದ ಅಭ್ಯರ್ಥಿಯಾಗಿ ಯಶವಂತ್‌ ಸಿನ್ಹಾ ಆಯ್ಕೆ

    ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 18 ಸಾವಿರ ಪೌರ ಕಾರ್ಮಿಕರು ಅನಿರ್ಧಿಷ್ಠಾವಧಿ ಧರಣಿ ನಡೆಸಲಿದ್ದಾರೆ. ಆಯಾ ಜಿಲ್ಲಾ ಕೇಂದ್ರಗಳಲ್ಲೂ ಅನಿರ್ಧಿಷ್ಠಾವಧಿ ಮುಷ್ಕರ ಆರಂಭವಾಗಲಿದೆ. ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರವೇ ಹೊಣೆ ಎಂದು ನಾರಾಯಣ ಹೇಳಿದ್ದಾರೆ. ಇದನ್ನೂ ಓದಿ: ನಿತ್ಯ 12 ಗಂಟೆ ಕೆಲಸ, ವಾರದಲ್ಲಿ 3 ದಿನ ರಜೆ – ಜುಲೈ 1ರಿಂದ ಹೊಸ ಕಾರ್ಮಿಕ ಸಂಹಿತೆ?

    ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿದೆ. ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ನೇರ ಪಾವತಿ ಪೌರ ಕಾರ್ಮಿಕರಿದ್ದಾರೆ. ಅವರಿಗೆ ಸರ್ಕಾರ ಸರ್ಕಾರ ತಿಂಗಳಿಗೆ ಕೇವಲ 14 ಸಾವಿರ ರೂಪಾಯಿ ವೇತನ ಮಾತ್ರ ನೀಡುತ್ತಿದೆ. ಪಿಎಫ್, ಇಎಸ್‌ಐ, ಗ್ರ್ಯಾಚುಯಿಟಿ ಯಾವುದೇ ಸೌಲಭ್ಯವಿಲ್ಲ. ಸಾಮಾಜಿಕ, ಆರ್ಥಿಕ ಭದ್ರತೆಯಿಲ್ಲದೇ ಪೌರ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv

  • ಪೌರಕಾರ್ಮಿಕರ ಆರೋಗ್ಯಕ್ಕೆ ವಿಶೇಷ ಕಾಳಜಿ ಅಗತ್ಯ: ಡಾ.ಸಿಸ್ಟರ್ ಅರ್ಪಣಾ

    ಪೌರಕಾರ್ಮಿಕರ ಆರೋಗ್ಯಕ್ಕೆ ವಿಶೇಷ ಕಾಳಜಿ ಅಗತ್ಯ: ಡಾ.ಸಿಸ್ಟರ್ ಅರ್ಪಣಾ

    ಬೆಂಗಳೂರು: ಎಲ್ಲ ಸಂದರ್ಭಗಳಲ್ಲಿಯೂ ನಗರದ ಸ್ವಚ್ಛತೆ, ಆರೋಗ್ಯವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಪೌರಕಾರ್ಮಿಕರು ಮತ್ತು ಅವರ ಕುಟುಂಬದ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರು ಡಾ. ಸಿಸ್ಟರ್ ಅರ್ಪಣಾ ಹೇಳಿದರು.

    ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಮೈಕ್ರೊ ಜೋನ್ ವಿಭಾಗವು ಐಎಸ್‍ಆರ್‍ಸಿ ಜೊತೆ ಸೇರಿ ಆಯೋಜಿಸಲಾಗಿದ್ದ ‘ಸ್ವಚ್ಛತೆಯ ಹರಿಕಾರರಿಗೊಂದು ಸಲಾಂ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಲೇಜು ಹಾಗೂ ವಿದ್ಯಾರ್ಥಿಗಳು ಸಮುದಾಯದ ಅಭಿವೃದ್ಧಿಯಲ್ಲಿ ತೋರಬೇಕಾದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ಹಾಗೂ ಪೌರ ಕಾರ್ಮಿಕರಿಗೆ ವಿವರಿಸಿದರು.

    ಕಾಲೇಜಿನ ಗಣ್ಯರೊಂದಿಗೆ ಪೌರಕಾರ್ಮಿಕರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಪೌರಕಾರ್ಮಿಕರ ದೈನಂದಿನ ಜೀವನವನ್ನು ಹಾಗೂ ಅವರು ಎದುರಿಸುವ ಸವಾಲುಗಳನ್ನು ಕಿರು ನಾಟಕ, ಸಂಗೀತ, ಮೈಮ್ ಮೂಲಕ ಅತ್ಯಾಕರ್ಷಕವಾಗಿ ಪ್ರದರ್ಶಿಸಿದರಲ್ಲದೆ ಪೌರಕಾರ್ಮಿಕರ ಮಹತ್ವವನ್ನು ಅವರಿಗೆ ಮನಮುಟ್ಟುವ ರೀತಿಯಲ್ಲಿ ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

    ಸೂಕ್ಷ್ಮಾಣು ಜೀವವಿಜ್ಞಾನದ ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆ ಮತ್ತು ಸಾಮೂಹಿಕ ಸ್ವಚ್ಛತೆಯನ್ನು ಪಾಲಿಸುವುದರಿಂದ ವೈರಸ್ ಮತ್ತು ಬ್ಯಾಕ್ಟೀರಿಯಗಳಿಂದ ಹೇಗೆ ದೂರವಿರಬಹುದು ಎಂಬುದರ ಕುರಿತು ಅರಿವು ಮೂಡಿಸಿದರು. ನಗರವನ್ನು ಸ್ವಚ್ಛವಾಗಿರಿಸಲು ಪೌರಕಾರ್ಮಿಕರು ನೀಡುತ್ತಿರುವ ಉತ್ತಮ ಸೇವೆಗೆ ವಿದ್ಯಾರ್ಥಿನಿಯರು ನೃತ್ಯ ಹಾಗೂ ಹಾಡುವ ಮೂಲಕ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?‌

    ಇದೇ ಸಂದರ್ಭದಲ್ಲಿ ಅವರಿಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಲು ಪೂರಕವಾದ ಕಿಟ್ ಹಾಗೂ ಕುಕ್ಕರ್‍ಗಳನ್ನು, ಬ್ಯಾಗ್‍ಗಳನ್ನು ವಿತರಿಸಲಾಯಿತು. ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ದೀಪ ಬೆಳಗಿದರಲ್ಲದೇ, ತಮ್ಮನ್ನು ಅಧ್ಯಯನ ಮಾಡಿ ದಿನ ಪೂರ್ತಿಯ ಚಟುವಟಿಕೆಗಳನ್ನು ನಮಗೆ ತೋರಿಸಿ ಸಂತಸ ನೀಡಿದ ಹಾಗೂ ಕೋವಿಡ್ ಸಮಯದಲ್ಲೂ ನಾವು ನೀಡಿದ ಸೇವೆಯನ್ನು ಸ್ಮರಿಸಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸೆಲ್ಯೂಟ್ ಹೊಡೆದು ಚಪ್ಪಾಳೆ ಹೊಡೆದು ಗೌರವಿಸಿದ ವಿದ್ಯಾರ್ಥಿಗಳ ಬಗ್ಗೆ ಅತೀವ ಸಂತಸ ವ್ಯಕ್ತ ಪಡಿಸಿದರು.

    ನಮಗೆ ನಾವು ನೀಡಿದ ಸೇವೆ ಸಾರ್ಥಕ ಎಂದು ಅನಿಸಿದ ಕ್ಷಣ ಇದೆಂದು ಪೌರಕಾರ್ಮಿಕರಾದ ಮಿಶಾ ಅಭಿಪ್ರಾಯ ಪಟ್ಟರು. ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಡಾ. ಸರಯೂ ಮೋಹನ್ ಅವರು ಮಾತನಾಡಿ ಪೌರಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಲು ಅಸಾಧ್ಯವಾದುದು. ನಗರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುವ ಅವರ ಜೀವನವೂ ಸುಂದರ ಹಾಗೂ ಆರೋಗ್ಯ ಪೂರ್ಣವಾಗಿರಲಿ ಎಂದು ಹಾರೈಸಿದರು.

    ಪೌರಕಾರ್ಮಿಕರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಕುಟುಂಬದವರ ಹಿತವನ್ನು ಗಮನದಲ್ಲಿರಿಸಿ ರೋಗ ಮುಕ್ತವಾಗಿ ಬದುಕಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಅದ್ಭುತವಾಗಿ ವಿವಿಧ ಮಾದರಿಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ತನ್ಮೂಲಕ ಈ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇಂದು ನಾವು ನೀಡಿದ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದರು. ಇದನ್ನೂ ಓದಿ: ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್

    ಮೌಂಟ್ ಕಾರ್ಮೆಲ್ ಕಾಲೇಜು ಸಮಾಜಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೆಂದೇ ಐಎಸ್‍ಆರ್‍ಸಿ ಸಂಯೋಜಕರು ರಜನಿ ಕೋರ, ನೇತೃತ್ವದಲ್ಲಿ ವಿಭಾಗವನ್ನು ರಚಿಸಿದೆ ಪ್ರತಿ ವಿಭಾಗಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಐಎಸ್‍ಆರ್‍ಸಿ ಪ್ರೇರೇಪಿಸುತ್ತದಲ್ಲದೇ ವಿದ್ಯಾರ್ಥಿಗಳಿಗೆ ಸಾಮಾಜಿಕ ಜೀವನದ ಬಗ್ಗೆ ಹೊಸ ದೃಷ್ಟಿಯನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದರು.

    ಉಪ ಪ್ರಾಂಶುಪಾಲರಾದ ಡಾ. ಚಾರ್ಮೈನ್ ಜೆರೋಮ್, ಕ್ಯಾಂಪಸ್ ಸಂಯೋಜಕರಾದ ಡಾ.ಸಿಸ್ಟರ್ ಸಜಿತ ಮತ್ತು ಡಾ.ಲೇಖಾ ಜಾರ್ಜ್, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಡಾ. ಸರಯೂ ಮೋಹನ್, ಮೈಕ್ರೊ ಜೋನ್ ಸಂಯೋಜಕರು ಅನು ಮರಿಯಮ್ ಕುರಿಯನ್, ಐಎಸ್‍ಆರ್‍ಸಿ ಸಂಯೋಜಕರು ರಜನಿ ಕೋರ, ಮೈಕ್ರೋ ಬಯಾಲಜಿ ಕಾರ್ಯದರ್ಶಿ ಋತು ಫರ್ನಾಂಡಿಸ್, ಸಹ ಕಾರ್ಯದರ್ಶಿ ರಚನಾ ಬಿ.ಆರ್ ಉಪಸ್ಥಿತರಿದ್ದರು.

  • ಮಾನವೀಯತೆ ಮರೆತ ಅಥಣಿ ಪುರಸಭೆ ಅಧಿಕಾರಿಗಳು

    ಮಾನವೀಯತೆ ಮರೆತ ಅಥಣಿ ಪುರಸಭೆ ಅಧಿಕಾರಿಗಳು

    ಬೆಳಗಾವಿ: ನಗರದ ಅಥಣಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೀವದ ಹಂಗು ತೊರೆದು ಚರಂಡಿಗಳಿಗೆ ಇಳಿದು ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.

    ಯಾವುದೇ ಸೇಫ್ಟಿ ಕಿಟ್ ಇಲ್ಲದೆ ಪೌರ ಕಾರ್ಮಿಕರು ಚರಂಡಿಗಳಲ್ಲಿ ಇಳಿದು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಹಲವು ಚರಂಡಿಗಳಲ್ಲಿ ಸಿಬ್ಬಂದಿ ಸಾವನ್ನಪ್ಪಿದ್ದರೂ ಅಥಣಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳ ಅಚಾತುರ್ಯದಿಂದ ಜೀವದ ಹಂಗು ತೊರೆದು ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

    ನೌಕರಿ ಖಾಯಂ ಆಸೆಗೆ ಬಿದ್ದು ಜೀವದ ಹಂಗು ತೊರೆದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹ್ಯಾಂಡ್ ಗ್ಲೌಜ್, ಗಮ್ ಶೂಜ್, ಮಾಸ್ಕ್ ಏನೂ ಇಲ್ಲದೆ ಚರಂಡಿಯ ಆಳಕ್ಕೆ ಇಳಿದು ಪುರಸಭೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆ ಮರೆತ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ತುಂಗಾನಗರ ಪೊಲೀಸರು ಏನು ದನ ಕಾಯುತ್ತಿದ್ದಾರಾ? : SPಗೆ ಈಶ್ವರಪ್ಪ ಪ್ರಶ್ನೆ

    ತುಂಗಾನಗರ ಪೊಲೀಸರು ಏನು ದನ ಕಾಯುತ್ತಿದ್ದಾರಾ? : SPಗೆ ಈಶ್ವರಪ್ಪ ಪ್ರಶ್ನೆ

    ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಇಲಾಖೆ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ನಗರದಲ್ಲಿ ಗೂಂಡಾಗಳಿಗೆ, ಗಲಾಟೆ ಮಾಡುವವರಿಗೆ ಪೊಲೀಸರ ಭಯ ಇಲ್ಲದಂತಹ ವಾತಾವರಣ ಇದೆ. ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ಆದರೆ ಹಲ್ಲೆಕೋರರ ಬಂಧನವಾಗಿಲ್ಲ. ಪೊಲೀಸರು ಏನು ದನ ಕಾಯುತ್ತಿದ್ದಾರಾ? ಎಂದು ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರನ್ನು ಪ್ರಶ್ನಿಸಿದರು.

    ನಗರದ ಜೆ.ಪಿ.ನಗರದಲ್ಲಿ ಕಳೆದ ಮೂರು ದಿನದ ಹಿಂದೆ ಕಸ ಸಂಗ್ರಹಿಸಲು ತೆರಳಿದ್ದ ಪೌರ ಕಾರ್ಮಿಕರ ಮೇಲೆ ಐದಾರು ಮಂದಿ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಘಟನೆಯಿಂದಾಗಿ ಇಬ್ಬರು ಪೌರ ಕಾರ್ಮಿಕರು ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಪೌರ ಕಾರ್ಮಿಕರ ಆರೋಗ್ಯ ವಿಚಾರಿಸಲು ಸಚಿವ ಈಶ್ವರಪ್ಪ ಆಸ್ಪತ್ರೆಗೆ ತೆರಳಿದ್ದರು. ಇದನ್ನೂ ಓದಿ: ನೆಲಮಂಗಲದಲ್ಲಿ ಮಂಗಳಮುಖಿ ಆತ್ಮಹತ್ಯೆ – ಪೊಲೀಸರಿಂದ ತನಿಖೆ

    ಘಟನೆ ಬಗ್ಗೆ ಮಾಹಿತಿ ಪಡೆಯಲು ಆಸ್ಪತ್ರೆಯಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರಿಗೆ ಕರೆ ಮಾಡಿದ ಅವರು, ಘಟನೆ ನಡೆದು ಮೂರು ದಿನವಾಗಿದೆ. ಐದಾರು ಮಂದಿ ಸೇರಿಕೊಂಡು ಗಾಂಜಾ ಸೇವಿಸಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ. ಆದರೆ ಇದುವರೆಗೆ ಇಬ್ಬರು ಆರೋಪಿಗಳನ್ನು ಮಾತ್ರ ವಶಕ್ಕೆ ಪಡೆದಿದ್ದೀರಿ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಅಂದರೆ ಏನು ಅರ್ಥ. ನಾಳೆ ಇದನ್ನೇ ಮುಂದಿಟ್ಟುಕೊಂಡು ಪೌರ ಕಾರ್ಮಿಕರು ಕಸ ಸಂಗ್ರಹಿಸಲ್ಲ ಎಂದು ಕುಳಿತರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

    ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಮೂರು ದಿನವಾಗಿದೆ. ಐದಾರು ಮಂದಿ ವಿರುದ್ಧ ದೂರು ದಾಖಲಾಗಿದೆ. ಆದರೆ ಆ ಠಾಣೆ ಪೊಲೀಸರು ಇಬ್ಬರನ್ನು ಮಾತ್ರ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಏನು ದನ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದರು. ನಾನು ಸಂಜೆ ನಿಮ್ಮ ಕಚೇರಿಗೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ಉಳಿದ ಆರೋಪಿಗಳ ಬಂಧನ ಆಗಬೇಕು. ಇಲ್ಲದಿದ್ದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿಬರ್ತಾನೆ: ಜಗ್ಗೇಶ್