Tag: ಪೌರ ಕಾರ್ಮಿಕ

  • ನನಗೆ ಕನ್ನಡ ಬರಲ್ಲ, ಏನು ಮಾಡ್ತಿಯಾ? – ಪೌರ ಕಾರ್ಮಿಕನೊಂದಿಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿಯ ಮೊಂಡುತನ

    ನನಗೆ ಕನ್ನಡ ಬರಲ್ಲ, ಏನು ಮಾಡ್ತಿಯಾ? – ಪೌರ ಕಾರ್ಮಿಕನೊಂದಿಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿಯ ಮೊಂಡುತನ

    ಹುಬ್ಬಳ್ಳಿ: ಜಿಲ್ಲೆಯಲ್ಲಿ ಕನ್ನಡ ಗೊತ್ತಿಲ್ಲ ಎನ್ನುವರ ಧಿಮಾಕು ಹೆಚ್ಚಾಗಿದೆ. ನನಗೆ ಕನ್ನಡ ಬರಲ್ಲ. ಏನು ಮಾಡ್ತೀಯಾ ಎಂದು ಮಹಾನಗರ ಪಾಲಿಕೆ ಪೌರ ಕಾರ್ಮಿಕನ ಜೊತೆಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿ ಮೊಂಡುತನ ತೋರಿದ್ದಾನೆ.

    ಹುಬ್ಬಳ್ಳಿಯ (Hubballi) ಕೊಪ್ಪಿಕರ ರಸ್ತೆಯಲ್ಲಿ ಪಾಲಿಕೆಯ ಆಟೋ ಟಿಪ್ಪರ್ ಚಾಲಕ ಮತ್ತು ಮಿನಿಸ್ಟರ್ ವೈಟ್ ಬಟ್ಟೆ ಅಂಗಡಿ ಸಿಬ್ಬಂದಿ ಜೊತೆಗೆ ಈ ಗಲಾಟೆ ನಡೆದಿದೆ. ಕಸ ಹಾಕಲು ಬಂದ ಶಾಪ್‌ನ ಸಿಬ್ಬಂದಿ ಬಳಿ ಪೌರ ಕಾರ್ಮಿಕರೊಬ್ಬರು ಕನ್ನಡ ಮಾತನಾಡಲು ಬರಲ್ವ ಎಂದು ಕೇಳಿದ್ದಾನೆ. ಇದನ್ನೂ ಓದಿ: `ಪರಮ್ ಸುಂದರಿ’ ಪ್ರೀಮಿಯರ್‌ನಲ್ಲಿ ಪರಮ ಸುಂದರಿಯಾಗಿ ಮಿಂಚಿದ ಜಾನ್ವಿ

    ಈ ವೇಳೆ ಸಿಬ್ಬಂದಿ ನನಗೆ ಕನ್ನಡ ಬರಲ್ಲ, ಏನು ಮಾಡ್ತೀಯಾ ಎಂದು ಅವಾಜ್ ಹಾಕಿದ್ದಾನೆ. ಹುಬ್ಬಳ್ಳಿಗೆ ಬಂದು ಇಷ್ಟು ವರ್ಷವಾದರೂ ಕನ್ನಡ ಬರಲ್ವ? ಕನ್ನಡದಲ್ಲಿ ಮಾತನಾಡಲು ಬರದಿದ್ದರೇ ಕನ್ನಡದಲ್ಲಿ ಮಾತನಾಡುವವರನ್ನು ಕಸ ಹಾಕಲು ಕಳುಹಿಸಿ ಶಾಪ್ ಸಿಬ್ಬಂದಿಯನ್ನು ಪೌರ ಕಾರ್ಮಿಕರು ತರಾಟೆಗೆ ತೆಗೆದುಕೊಂಡಿದ್ದಾನೆ. ಇದನ್ನೂ ಓದಿ: ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಬಟ್ಟೆ ಶಾಪ್‌ನ ಮುಂಭಾಗವೇ ಪೌರ ಕಾರ್ಮಿಕ ಹಾಗೂ ಬಟ್ಟೆ ಶಾಪ್‌ನ ಸಿಬ್ಬಂದಿ ನಡುವೆ ಕೆಲಹೊತ್ತು ವಾಗ್ವಾದ ನಡೆದಿದೆ.

  • 2 ಮದುವೆಯಾಗಿದ್ದರೆ ಪೌರಕಾರ್ಮಿಕರಿಗೆ ಕೆಲಸ ಸಿಗಲ್ಲ

    2 ಮದುವೆಯಾಗಿದ್ದರೆ ಪೌರಕಾರ್ಮಿಕರಿಗೆ ಕೆಲಸ ಸಿಗಲ್ಲ

    ಬೆಂಗಳೂರು: ಬಿಬಿಎಂಪಿ (BBMP) ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆದರೆ ಅದರಲ್ಲಿ ಎರಡು ಮದುವೆಯಾಗಿದ್ರೇ (Marriage) ಪೌರಕಾರ್ಮಿಕರಿಗೆ ಕೆಲಸ ಇಲ್ಲ ಎಂದು ಬಿಬಿಎಂಪಿ ಸೂಚಿಸಿದೆ.

    ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ಈವರೆಗೆ ಪ್ರಕ್ರಿಯೆಗಷ್ಟೇ ಸೀಮಿತವಾಗಿತ್ತು. ಈಗ ಪೌರ ಕಾರ್ಮಿಕರ ನೇಮಕಾತಿಗೆ ಕೊನೆಗೂ ಬಿಬಿಎಂಪಿ ಚಾಲನೆ ನೀಡಿದೆ. ಬಿಬಿಎಂಪಿಯಲ್ಲಿ ಖಾಲಿ ಇರುವ 3,673 ಪೌರಕಾರ್ಮಿಕ (Civil Service) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಪೌರಕಾರ್ಮಿಕರು ಮದುವೆ ಆಗ್ಬೇಕಾರೆ ಕೆಲ ಷರತ್ತುಗಳನ್ನು ನೀಡಲಾಗಿದೆ. ಎರಡು ಮದುವೆಯಾಗಿದ್ದರೆ ಅಂತವರು ಅನರ್ಹರಾಗುತ್ತಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಪೈಕಿ 2,600 ಕಾಯಂ ಪೌರಕಾರ್ಮಿಕರಿದ್ದಾರೆ. ಉಳಿದಂತೆ 18 ಸಾವಿರ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 3,673 ಪೌರಕಾರ್ಮಿಕ ಹುದ್ದೆಗೆ ಕಾಯಂ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನೇ ನೇಮಕಕ್ಕೆ ಪರಿಗಣಿಸಲಾಗುತ್ತಿದೆ. ಅದರ ಜತೆಗೆ 3,673 ಪೌರಕಾರ್ಮಿಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 430 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಉಳಿದ 3,243 ಹುದ್ದೆಗಳನ್ನು ರಾಜ್ಯದ ಇತರ ಜಿಲ್ಲೆಗಳವರೆಗೆ ನಿಗದಿ ಮಾಡಲಾಗಿದೆ.

    ಪೌರಕಾರ್ಮಿಕ ನೇಮಕಾತಿಯಲ್ಲಿ ಹಲವು ಷರತ್ತುಗಳನ್ನೂ ಅನ್ವಯ ಮಾಡಿದ್ದು, ಅರ್ಜಿ ಸಲ್ಲಿಸುವವರ ಗುತ್ತಿಗೆ ಆಧಾರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಪೌರಕಾರ್ಮಿಕರಾಗಿ ಹಾಲಿ ಕೆಲಸ ಮಾಡಿರಬೇಕಿದೆ. ಅಭ್ಯರ್ಥಿಯ ವಯಸ್ಸು 23 ರಿಂದ 55 ವರ್ಷಗಳಿಗಿಂತ ಹೆಚ್ಚಿರಬಾರದು ಎಂದು ತಿಳಿಸಲಾಗಿದೆ. ಜತೆಗೆ ಪ್ರತಿ ಅಭ್ಯರ್ಥಿಯೂ ಸಂಬಂಧಪಟ್ಟ ಆಸ್ಪತ್ರೆ ಅಥವಾ ಪ್ರಾಧಿಕಾರದಿಂದ ದೈಹಿಕ ದೃಢತೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನೂ ಓದಿ: ಜೈನ ಸನ್ಯಾಸ ದೀಕ್ಷೆ ಪಡೆದ ಶ್ರೀಮಂತ ಕುಟುಂಬಕ್ಕೆ ಸೇರಿದ 20ರ ಯುವತಿ

    ಕನ್ನಡ ಮಾತನಾಡಲು ಬಲ್ಲವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಹಾಗೆಯೇ ಅರ್ಜಿ ಸಲ್ಲಿಸುವ ಪುರುಷ ಪೌರಕಾರ್ಮಿಕರಿಗೆ ಇಬ್ಬರು ಪತ್ನಿಯರಿರಬಾರದು, ಅದರ ಜತೆಗೆ ಮಹಿಳಾ ಪೌರಕಾರ್ಮಿಕರು ಇಬ್ಬರು ಪತ್ನಿ ಇರುವವರನ್ನು ವಿವಾಹವಾಗಿರಬಾರದು ಎಂದೂ ತಿಳಿಸಲಾಗಿದೆ. ಅಲ್ಲದೆ, ಕ್ರಿಮಿನಲ್ ಪ್ರಕರಣ ಇರುವವರು, ಈ ಹಿಂದೆ ಸೇವೆಯಿಂದ ವಜಾಗೊಂಡವರು ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ ಎಂದೂ ಬಿಬಿಎಂಪಿ ಆಯುಕ್ತರು ಹೇಳಿದ್ದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ – ಮೊಬೈಲ್ ಫೋನ್, ಗಾಂಜಾ ಪತ್ತೆ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾದಪೂಜೆ ಪಾಲಿಟಿಕ್ಸ್- ಅತ್ತ ಬಿಜೆಪಿ ಶಾಸಕ, ಇತ್ತ ಕೈ ಮುಖಂಡನಿಂದ ಪೌರಕಾರ್ಮಿಕರಿಗೆ ಪಾದಪೂಜೆ

    ಪಾದಪೂಜೆ ಪಾಲಿಟಿಕ್ಸ್- ಅತ್ತ ಬಿಜೆಪಿ ಶಾಸಕ, ಇತ್ತ ಕೈ ಮುಖಂಡನಿಂದ ಪೌರಕಾರ್ಮಿಕರಿಗೆ ಪಾದಪೂಜೆ

    ಹಾಸನ: ಪೌರಕಾರ್ಮಿಕರ ಹೆಸರಿನಲ್ಲಿ ಪಾದ ಪೂಜೆ ಪಾಲಿಟಿಕ್ಸ್ ನಡೆದಿದ್ದು, ಒಂದೆಡೆ ಪಾದ ಮಾಡಿದ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತೊಂದೆಡೆ ಕಾಂಗ್ರೆಸ್ ಮುಖಂಡನಿಂದ ಪಾದಪೂಜೆ ಮಾಡಿದ್ದಾರೆ.

    ಮೂರು ವರ್ಷಗಳ ಬಳಿಕ ಎಲ್ಲೆಡೆ ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಲವು ಬಗೆಯ ವಿಶಿಷ್ಟವಾದ ಗೌರಿ-ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ಹಾಸನದಲ್ಲಿಯೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಭಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪಾದ ಪೂಜೆ ಪಾಲಿಟಿಕ್ಸ್ ಜೋರಾಗಿದೆ.

    ಹಾಸನ ನಗರದ ಕಲಾಭವನದ ಆವರಣದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ಪರಿಸರ ಪ್ರೇಮಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸ್ಥಳೀಯ ಶಾಸಕ ಪ್ರೀತಂಗೌಡ ಹಾಸನ ನಗರಸಭೆಯ ಇಪ್ಪತ್ತೈದು ಪೌರಕಾರ್ಮಿಕರ ಪಾದ ಪೂಜೆ ಮಾಡಿದರು. ಇವರ ಜೊತೆ ನಗರಸಭೆ ಅಧ್ಯಕ್ಷ ಮೋಹನ್‌ಕುಮಾರ್, ಬಿಜೆಪಿ ಮುಖಂಡರು ಪಾದ ಪೂಜೆ ನೆರವೇರಿಸಿದರು. ಅಲ್ಲದೇ ಪ್ರತಿಯೊಬ್ಬರಿಗೂ ಬಾಗಿನ ಹೆಸರಿನಲ್ಲಿ ಸೀರೆ, ಬಳೆ, ಕುಂಕುಮ, ಶರ್ಟ್ ಪೀಸ್ ವಿತರಿಸಲಾಯಿತು. ಇದನ್ನೂ ಓದಿ: ಮೋದಿ ಕಾರ್ಯಕ್ರಮ, ಕಟೀಲ್‌ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ – 2 ಕೇಸ್‌ ದಾಖಲು

    ಇನ್ನೊಂದೆಡೆ ಕಾಂಗ್ರೆಸ್ ಮುಖಂಡ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಅಕಾಂಕ್ಷಿ ಬನವಾಸೆ ರಂಗಸ್ವಾಮಿ ಅವರು ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಪೌರಕಾರ್ಮಿಕರ ಪಾದಪೂಜೆ ಮಾಡಿದರು. ತಟ್ಟೆಯಲ್ಲಿ ಪೌರಕಾರ್ಮಿಕರ ಪಾದಗಳನ್ನು ತೊಳೆದು ನಂತರ ಬಾಗಿನ ನೀಡಿದರು. ಬಾಗಿನ ಪಡೆಯಲು ನೂಕುನುಗ್ಗಲು ಉಂಟಾಗಿತ್ತು. ಸೆ.5 ರಂದು ಪಾಂಚಜನ್ಯ ಗಣಪತಿ ವಿಸರ್ಜನೆ ಕಾರ್ಯಕ್ರಮವಿದ್ದು, ಇದರ ಅಂಗವಾಗಿ ಶೋಭಯಾತ್ರೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

    Live Tv
    [brid partner=56869869 player=32851 video=960834 autoplay=true]

  • ಧ್ವಜಾರೋಹಣದ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವು, ಓರ್ವನಿಗೆ ಗಾಯ

    ಧ್ವಜಾರೋಹಣದ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವು, ಓರ್ವನಿಗೆ ಗಾಯ

    ಹೈದರಾಬಾದ್: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ದ್ರಧ್ವಜ ಹಾರಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ತೆಲಂಗಾಣದ ಪಂತಚೇರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಾಷ್ದ್ರಧ್ವಜ ಹಾರಿಸುವ ವೇಳೆ ಧ್ವಜ ಕಟ್ಟಿದ ಕಂಬಕ್ಕೆ 11 ಕೆವಿ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಅನಿಲ್ ಕುಮಾರ್ ಗೌಡ್ (40) ಮತ್ತು ತಿರುಪತಿ (42) ಎಂದು ಗುರುತಿಸಲಾಗಿದೆ. ಮತ್ತೋರ್ವ ಧನಂಜಯ್(35)ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ – ಆರೋಪಿ ಅರೆಸ್ಟ್

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಸಂಗರೆಡ್ಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪತಂಚೇರು ಡಿಎಸ್ಪಿ ಭೀಮ್ ರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳೀಯ ಶಾಸಕ ಗುಡೇಂ ಮಹಿಪಾಲ್ ರೆಡ್ಡಿ ಆಸ್ಪತ್ರೆಗೆ ಆಗಮಿಸಿ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಫೋಟೋ ವಿವಾದ – ಎರಡು ಗುಂಪುಗಳ ಮಧ್ಯೆ ಘರ್ಷಣೆ, ಶಿವಮೊಗ್ಗದಲ್ಲಿ ನಿಷೇಧಾಜ್ಞೆ

    ನಿನ್ನೆಯಷ್ಟೇ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ತ್ರಿವರ್ಣ ಧ್ವಜ ಕಂಬಕ್ಕೆ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ 36 ವರ್ಷದ ಸ್ಥಳೀಯ ನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕ ಮೃತಪಟ್ಟಿದ್ದನು.

    Live Tv
    [brid partner=56869869 player=32851 video=960834 autoplay=true]

  • ತ್ರಿವರ್ಣ ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಪೌರ ಕಾರ್ಮಿಕ ಸಾವು!

    ತ್ರಿವರ್ಣ ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಪೌರ ಕಾರ್ಮಿಕ ಸಾವು!

    ರಾಯಪುರ: ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿಂದು `ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಅಂಗವಾಗಿ ತ್ರಿವರ್ಣ ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ 36 ವರ್ಷದ ಸ್ಥಳೀಯ ನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೃತ ಕಾರ್ಮಿಕನನ್ನು ಸುಮನ್ ತಿಗ್ಗಾ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಪ್ರತೀಕ್ಷಾ ಬಸ್ ನಿಲ್ದಾಣದಲ್ಲಿ ಮತ್ತೊಬ್ಬ ಕಾರ್ಮಿಕನೊಂದಿಗೆ ರಾಷ್ಟ್ರಧ್ವಜವನ್ನು ಕಟ್ಟುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮಣೇಂದ್ರಗಢ ಉಪವಿಭಾಗೀಯ ಪೊಲೀಸ್ ಅಧಿಕಾರಿ ರಾಕೇಶ್ ಕರ‍್ರೆ ಹೇಳಿದ್ದಾರೆ. ಇದನ್ನೂ ಓದಿ: ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ನಾವು ದೇಶಭಕ್ತರಾಗುವುದಿಲ್ಲ: ಉದ್ಧವ್ ಠಾಕ್ರೆ ಟಾಂಗ್

    ಘಟನೆಯಲ್ಲಿ ಸುಮನ್ ತಿಗ್ಗಾ ಸಹೋದ್ಯೋಗಿ ರಾಮಕೃಪಾಲ್ ಸಿಂಗ್ (35) ಸಹ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಮಿಕರ ಸಂಘ ತಿಗ್ಗಾ ಸಾವಿನ ನಂತರ ಪ್ರತಿಭಟನೆ ನಡೆಸಿದ್ದು, ಮೃತನ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಕರ‍್ರೆ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ- ವಜಾಗೊಂಡಿದ್ದ ಕಾರ್ಮಿಕ ಮರು ನೇಮಕ

    ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ- ವಜಾಗೊಂಡಿದ್ದ ಕಾರ್ಮಿಕ ಮರು ನೇಮಕ

    ಲಕ್ನೋ: ಕಸದ ಗಾಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ತುಂಬಿಕೊಂಡು ಹೋಗುತ್ತಿದ್ದಕ್ಕೆ ವಜಾಗೊಳಿಸಿದ್ದ ಪೌರ ಕಾರ್ಮಿಕನನ್ನು ಮರು ನೇಮಕ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಪೌರ ಕಾರ್ಮಿಕನೊಬ್ಬ ಕಸದ ಗಾಡಿಯಲ್ಲಿ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ತುಂಬಿಕೊಂಡು ಹೋಗುತ್ತಿದ್ದ. ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಹಾಗೇ ಆ ಸಿಬ್ಬಂದಿಯನ್ನು ಮುನ್ಸಿಪಲ್ ಕಾರ್ಪೋರೇಷನ್ ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ ಈ ನಿರ್ಧಾರವು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

    ತೀವ್ರ ಟೀಕೆಯ ಹಿನ್ನೆಲೆಯಲ್ಲಿ ಕಾರ್ಮಿಕನ ಮತ್ತು ಅವರ ಕುಟುಂಬದವರ ಬೇಡಿಕೆಗಳನ್ನು ಗಮನಿಸಿ ಆ ಸಿಬ್ಬಂದಿಯನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಮಥುರಾ-ವೃಂದಾವನ ನಗರ ನಿಗಮದ ಮುನ್ಸಿಪಲ್ ಕಮಿಷನರ್ ಅನುಯ್ಯಾ ಝಾ ತಿಳಿಸಿದ್ದಾರೆ. ಇದನ್ನೂ ಓದಿ: ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ – ಕೆಲಸದಿಂದ ಪೌರಕಾರ್ಮಿಕ ವಜಾ

    ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಪೌರಕಾರ್ಮಿಕ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕಸದ ತೊಟ್ಟಿಯಲ್ಲಿ ಬಿದ್ದಿತ್ತು. ಹಾಗಾಗಿ ಅವುಗಳನ್ನು ನಾನು ಕಸದ ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದನು. ಇದನ್ನೂ ಓದಿ: ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    Live Tv
    [brid partner=56869869 player=32851 video=960834 autoplay=true]

  • ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

    ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

    ತುಮಕೂರು: ಹಿಂದೂ ಪೌರಕಾರ್ಮಿಕರು ಮುಸಲ್ಮಾನರ ಅಂಗಡಿ, ಮನೆ ಮುಂದೆ ಕಸ ಗುಡಿಸುತ್ತಾರೆ. ಅವರ ಶೌಚಾಲಯವನ್ನು ಕ್ಲೀನ್ ಮಾಡುತ್ತಾರೆ. ಆದರೆ ಮುಸಲ್ಮಾನರೇಕೆ ಪೌರಕಾರ್ಮಿಕರ ಕೆಲಸ ಮಾಡಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಶ್ನಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆ ಅಂದ ಮೇಲೆ ಎಲ್ಲವೂ ಒಂದೇ ಆಗಬೇಕು. ಹಾಗಾದರೆ ಮುಸಲ್ಮಾನರೂ ಕೂಡ ಪೌರಕಾರ್ಮಿಕರಾಗಿ ಸೇರಿ ಹಿಂದೂಗಳ ಮನೆ ಮುಂದೆ ಕಸ ಗುಡಿಸಿ ಔದಾರ್ಯ ತೊರಲಿ ಎಂದು ಸವಾಲು ಹಾಕಿದರು.

    ಮಹಾರಾಷ್ಟ್ರದ ಆದಿತ್ಯ ಠಾಕ್ರೆ ಹೇಳಿರುವುದು ನೂರಕ್ಕೆ ನೂರು ಸತ್ಯವಾಗಿದೆ. ದೇಶದಲ್ಲಿ ಮೈಕ್‍ಗಳ ಹಾವಳಿ ವಿಪರೀತವಾಗಿದೆ. ನಾನು ಮಾಲಿನ್ಯ ಸಚಿವನಾಗಿದ್ದಾಗ ಕಾನೂನಿಗೆ ಗೌರವ ಕೊಡುವಂತೆ ಮಸೀದಿಗಳ ಮೇಲಿನ ಮೈಕ್‍ಗಳನ್ನು ತೆಗೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ. ಈ ಮೈಕ್‍ಗಳ ಶಬ್ಧದಿಂದಾಗಿ ಹಾರ್ಟ್ ಅಟ್ಯಾಕ್ ಮತ್ತು ವಿದ್ಯಾರ್ಥಿಗಳ ಓದಿಗೆ ತೊಡಕು ಆಗುತ್ತಿದೆ. ತುಮಕೂರು ನಗರದ ಸದಾಶಿವನಗರ, ಜಯಪುರದಲ್ಲಿ ಆಜನ್ ಕಾಟದಿಂದ ಹಿಂದೂಗಳು ಮನೆ ತೊರೆದಿದ್ದಾರೆ ಎಂದರು. ಇದನ್ನೂ ಓದಿ: ಸ್ಥಳೀಯ ಉಗ್ರರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿ: ಉನ್ನತ ಅಧಿಕಾರಿ

    ತುಮಕೂರಿನ ಕೆಲ ಬಡಾವಣೆಗಳಲ್ಲಿ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದೂಗಳ ಸ್ಮಶಾನಕ್ಕೆ ಹೋಗಿ ನಮ್ಮ ಶಾಸ್ತ್ರ ವಿಧಿವಿಧಾನ ಮಾಡುವ ವೇಳೆ ಆಜನ್‍ನಿಂದ ನಮಗೆ ತೊಂದರೆ ಆಗುತ್ತಿದ್ದು, ಬಿಜೆಪಿಯವರು ಕೇವಲ ಹತ್ತೇ ವರ್ಷ ಆಳ್ವಿಕೆ ನಡೆಸಿದ್ದಾರೆ. ಇದರೆ ಹಿಂದೆ 70 ವರ್ಷಗಳು ಆಳಿದವರು ಪಾಪಿಗಳು. ಅವರು ಸಮಾಜದಲ್ಲಿ ಜಾತಿ ವಿಂಗಡಣೆ ಮಾಡುತ್ತಿದ್ದಾರೆ ಎಮದು ವಾಗ್ದಾಳಿ ನಡೆಸಿದರು.

    SIDDARAMAIAH

    ಕುಮಾರಸ್ವಾಮಿ ಹಿಜಬ್ ಹಿಡಿದುಕೊಂಡಿದ್ದಾರೆ. ಸಿದ್ದರಾಮಯ್ಯ ಹಲಾಲ್ ಹಿಡ್ಕೊಂಡಿದ್ದಾರೆ. ಇನ್ನೊಬ್ಬರು ಮಾವಿನಹಣ್ಣು ಹಿಡ್ಕೊಂಡಿದ್ದಾರೆ. ಮೊದಲು ಶಬ್ಧ ಮಾಲಿನ್ಯ ತಡೆಗಟ್ಟಲಿ ದೇವಸ್ಥಾನದಲ್ಲೂ ಮೈಕ್‍ಗಳನ್ನು ಶಬ್ಧ ಮಾಲಿನ್ಯ ಆಗದಂತೆ ಹಾಕಿಕೊಳ್ಳಲಿ. ಸುಪ್ರೀಂ ಆದೇಶ ಯತಾವತ್ತು ಪಾಲನೆ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೇರೆ ಪಕ್ಷಗಳು ಹಣಬಲದಲ್ಲಿ ಶ್ರೀಮಂತ, AAP ವಿಚಾರ ಧಾರೆಯಲ್ಲಿ ಶ್ರೀಮಂತ: ಭಾಸ್ಕರ್ ರಾವ್

    ಇದು ಪಾಕಿಸ್ತಾನ ಅಲ್ಲ, ಹಿಂದೂ ರಾಷ್ಟ್ರ. ಇಲ್ಲಿ ಹಿಂದೂ ಕಾನೂನು ಇರಬೇಕು. ಸರ್ಕಾರಕ್ಕೆ ಈಗಲೂ ಮನವಿ ಮಾಡಿಕೊಳ್ಳುತ್ತೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ದೇಶ ವಿಭಜನೆ ಮಾಡೋಕೆ ಹೊರಟಿದ್ದಾರೆ. ಮಾವಿನಹಣ್ಣನ್ನು ನಮ್ಮವರು ಬೆಳೆಯೋದು ಮುಸಲ್ಮಾನರು ಅದನ್ನ ಮಾರಿ ಲಾಭ ಮಾಡಿಕೊಳ್ಳುವುದು ಏಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾವಿನ ಹಣ್ಣನ್ನೂ ಕೂಡ ಇವರು ಮಾರಬಾರದು. ಅದನ್ನು ಬೆಳೆದ ರೈತರು ನಮ್ಮವರು ಮಾರಲಿ ಮುಸಲ್ಮಾನರು ಮಾವಿನಹಣ್ಣನ್ನ ಖರೀದಿ ಮಾಡದೆ ಇದ್ದರೇ, ರೈತರು ಕಂಗಾಲು ಆಗಲ್ಲ. ರೈತರಿಂದ ನಮ್ಮವರೇ ಖರೀದಿ ಮಾಡಿ, ಅದನ್ನು ಮಾರಲಿ ಎಂದರು.

    ಹೈಕೋರ್ಟ್ ತೀರ್ಪಿನ ವಿರುದ್ಧ ಇವರ ಅಂಗಡಿ ಬಂದ್ ಮಾಡಿದರು. ಇದರಿಂದ ನಮ್ಮವರಿಗೂ ಲಾಸ್ ಆಗಿದೆ. ರೇಷ್ಮೆ ಮಾರ್ಕೆಟ್‍ಗಳೂ ಬಂದ್ ಆಗೋದ್ದವು, ಇದರಿಂದ ನಮ್ಮವರಿಗೆ ತುಂಬಾ ತೊಂದರೆ ಆಗಿದೆ. ರೇಷ್ಮೆ ಗೂಡುಗಳು ನಾಶ ಆದವು ಎಂದು ಬೇಸರ ವ್ಯಕ್ತಪಡಿಸಿದರು.

  • ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ

    ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ

    ಚಿಕ್ಕೋಡಿ: ದಸರಾ ಉತ್ಸವದಲ್ಲಿ 9 ದಿನ ಆದಿಶಕ್ತಿ ದುರ್ಗಾಮಾತೆಗೆ ವಿಭಿನ್ನದ ಜೊತೆಗೆ ವಿಶೇಷವಾಗಿ ಪೂಜೆ ಮಾಡುವುದು ವಾಡಿಕೆ. ಆದರೆ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ನಮ್ಮನ್ನ ಕಾಪಾಡುವ ದುರ್ಗಾಮಾತೆಯರು ಎಂದು ಪೌರ ಕಾರ್ಮಿಕ ಮಹಿಳೆಯರಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಮಾದರಿಯಾಗಿದ್ದಾರೆ.

    ಉತ್ತರ ಕರ್ನಾಟಕದಲ್ಲೆ ಭಾವೈಕ್ಯತೆಯ ಸಂಕೇತವಾಗಿ ಅದ್ದೂರಿಯಾಗಿ ಆಚರಿಸುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೌರ ಕಾರ್ಮಿಕ ಮಹಿಳೆಯರಿಗೆ ಉಡಿ ತುಂಬಿ, ದೀಪ ಬೆಳಗಿ ವಿಶೇಷವಾದ ಪೂಜೆ ಸಲ್ಲಿಸಿದರು. ಸ್ವಾಮೀಜಿ ಅವರಿಗೆ ವಿಧಾನಸಭೆಯ ಉಪಸಭಾಪತಿ ಆನಂದ್ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ದಂಪತಿ ಸಾಥ್ ನೀಡಿದರು. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್

    ನಗರವನ್ನು ಸ್ವಚ್ಛಂದವಾಗಿಡುವ ಮಹಿಳಾ ಪೌರ ಕಾರ್ಮಿಕರಿಗೆ ಹಾಗೂ ಪುರುಷ ಪೌರ ಕಾರ್ಮಿಕರ ಪತ್ನಿಯರಿಗೆ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು. ಸೀರೆ ನೀಡಿ, ಉಡಿ ತುಂಬುವದರ ಜೊತೆಗೆ ಆರತಿ ಮಾಡಿ ವಿಶೇಷವಾದ ಗೌರವ ನೀಡಲಾಯಿತು. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಗಳನ್ನು ಸ್ವಚ್ಛವಾಗಿಟ್ಟು, ಜನರ ಆರೋಗ್ಯವನ್ನ ಕಾಪಾಡಿದ ಪೌರ ಕಾರ್ಮಿಕರಿಗೆ ಈ ರೀತಿಯಾದ ಸನ್ಮಾನ ಮಾಡಿದ ಕಾರ್ಯವನ್ನು ವಿಧಾನಸಭೆಯ ಉಪಸಭಾಪತಿ ಶ್ಲಾಘಿಸಿದರು.

    ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಗುರುತಿಸಿ ದಸರೆಯ ಸಂದರ್ಭದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ, ಗೌರವ ಸಲ್ಲಿಸಿದ ಹುಕ್ಕೇರಿ ಹಿರೇಮಠದ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುವುದರ ಜೊತೆಗೆ ರಾಜ್ಯದ ವಿವಿಧ ಮಠಾಧೀಶರಿಗೆ ಹುಕ್ಕೇರಿ ಶ್ರೀಗಳ ಕಾರ್ಯ ಮಾದರಿಯಾಗಿದೆ. ಇದನ್ನೂ ಓದಿ: 550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್

  • ಪೌರ ಕಾರ್ಮಿಕನ ಮೇಲೆ ಪೊಲೀಸಪ್ಪನ ದರ್ಪ

    ಪೌರ ಕಾರ್ಮಿಕನ ಮೇಲೆ ಪೊಲೀಸಪ್ಪನ ದರ್ಪ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪೌರ ಕಾರ್ಮಿಕನ ಮೇಲೆ ಪೊಲೀಸ್ ದರ್ಪ ತೋರಿ ಕಪಾಳಕ್ಕೆ ಹೊಡೆದಿರುವ ಘಟನೆ ಮಾಗಡಿ ರೋಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಜೆಜೆ ನಗರದ ವಾರ್ಡ್ ನಲ್ಲಿ ಪೌರ ಕಾರ್ಮಿಕ ಕಸದ ವ್ಯಾನ್ ನಿಲ್ಲಿಸಿದ್ದರು. ಅಲ್ಲಿಗೆ ಬಂದ ಪೊಲೀಸ್ ನಿಂತಿದ್ದ ಗಾಡಿಗೆ ದಂಡ ಹಾಕಲು ಮುಂದಾಗಿದ್ದಾರೆ. ದಂಡ ಹಾಕುತ್ತಿರುವುದನ್ನ ಪೌರ ಕಾರ್ಮಿಕ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಪೌರ ಕಾರ್ಮಿಕನ ಪ್ರಶ್ನೆಯಿಂದ ಕೆರಳಿದ ಇನ್‍ಸ್ಪೆಕ್ಟರ್ ಅವಾಚ್ಯ ಪದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ.

    ಈ ಎಲ್ಲ ದೃಶ್ಯಗಳು ಸಾರ್ವಜನಿಕರ ಮೊಬೈಲಿನಲ್ಲಿ ಸೆರೆಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಪ್ರಶ್ನಿಸುವ ಹಕ್ಕು ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಡ್ರೈನೇಜ್ ರಿಪೇರಿ ವೇಳೆ ಕುಸಿದು ಬಿದ್ದ ಮಣ್ಣು- ಪೌರ ಕಾರ್ಮಿಕ ಅಸ್ವಸ್ಥ

    ಡ್ರೈನೇಜ್ ರಿಪೇರಿ ವೇಳೆ ಕುಸಿದು ಬಿದ್ದ ಮಣ್ಣು- ಪೌರ ಕಾರ್ಮಿಕ ಅಸ್ವಸ್ಥ

    ವಿಜಯಪುರ: ಡ್ರೈನೇಜ್ ರಿಪೇರಿ ವೇಳೆ ಮಣ್ಣು ಕುಸಿದು ಬಿದ್ದ ಕಾರಣ ಡ್ರೈನೇಜ್ ಒಳಗೆ ಪೌರ ಕಾರ್ಮಿಕ ಸಿಲುಕಿದ ಘಟನೆ ವಿಜಯಪುರದ ಇಂಡಿ ಪಟ್ಟಣದ 17ನೇ ವಾರ್ಡ್ ನಲ್ಲಿ ನಡೆದಿದೆ.

    ಡ್ರೈನೇಜ್‍ ಗುಂಡಿ ತೊಡುವ ಕೆಲಸ ಮಾಡುವ ವೇಳೆ ಮಣ್ಣು ಕುಸಿದು ಮೈಮೇಲೆ ಬಿದ್ದ ಕಾರಣ ಪೌರ ಕಾರ್ಮಿಕ ಅಶೋಕ್ ಕಡಿಮನಿ (42) ಅಸ್ವಸ್ಥಗೊಂಡು ಪರದಾಡಿದ್ದಾರೆ. ಅಸ್ವಸ್ಥಗೊಂಡಿದ್ದನ್ನು ಕಂಡ ಸ್ಥಳದಲ್ಲಿದ್ದ ಇತರೆ ಪೌರ ಕಾರ್ಮಿಕರು ಮಣ್ಣು ತಗೆದು ಅಶೋಕ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆ ಕಾರ್ಮಿಕನ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಕಾರ್ಮಿಕನನ್ನು ತುರ್ತು ಚಿಕಿತ್ಸೆಗಾಗಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೌರ ಕಾರ್ಮಿಕರ ಸಮಯ ಪ್ರಜ್ಞೆಯಿಂದಾಗಿ ಅಶೋಕ್‍ನನ್ನು ಆಸ್ಪತ್ರೆ ಸಾಗಿಸಲಾಗಿದೆ. ಇಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.