Tag: ಪೌರತ್ವ ವಿಧೇಯಕ ಕಾಯ್ದೆ

  • ನಿಷೇಧಾಜ್ಞೆ ನಡುವೆಯೂ ತುಮಕೂರಿನಲ್ಲಿ ಪ್ರತಿಭಟನೆಗೆ ಯತ್ನ – ಗುಂಪು ಚದುರಿಸಿದ ಪೊಲೀಸರು

    ನಿಷೇಧಾಜ್ಞೆ ನಡುವೆಯೂ ತುಮಕೂರಿನಲ್ಲಿ ಪ್ರತಿಭಟನೆಗೆ ಯತ್ನ – ಗುಂಪು ಚದುರಿಸಿದ ಪೊಲೀಸರು

    ತುಮಕೂರು: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ತುಮಕೂರು ನಗರದಲ್ಲಿ ಪ್ರತಿಭಟನೆಗೆ ಯತ್ನಿಸಿದವರನ್ನು ಪೊಲೀಸರು ಚದುರಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ವಿವಿಧ ಮುಸ್ಲಿಂ ಸಂಘಟನೆಗಳು, ಸಿಪಿಐ, ಸಿಐಟಿಯು ಸಂಘಟನೆಯ ಮುಖಂಡರುಗಳು ಪ್ರತಿಭಟನೆ ಮಾಡಲು ಯತ್ನಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ಬಿಗಿ ಪೊಲೀಸ್ ಭದ್ರತೆ ನಡುವೆಯೂ ನೂರಾರು ಜನರು ಪ್ರತಿಭಟನೆಗೆ ಸಜ್ಜಾಗಿದ್ರು. ಇದನ್ನು ಗಮನಿಸಿದ ಪೊಲೀಸರು ಪ್ರತಿಭಟನಾಕಾರರ ಗುಂಪನ್ನ ಚದುರಿಸಿದರು. ಈ ವೇಳೆ ಪೊಲೀಸರಿಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ಉಂಟಾಗಿತ್ತು. ಬಳಿಕ ಎಸ್ಪಿ ಕೋನ ವಂಶಿಕೃಷ್ಣ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ನಾಲ್ಕು ಜನ ಮುಖಂಡರು ಹೋಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅನುವುಮಾಡಿಕೊಡಲಾಯಿತು.

    ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕೋನ ವಂಶಿಕೃಷ್ಣ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡುವುದಾಗಿ ಅನುಮತಿ ಪಡೆದಿದ್ದವು. ಆದರೆ ಕಾರಣಾಂತಗಳಿಂದ 144 ಸೆಕ್ಷನ್ ಜಾರಿಯಾಯಿತು. ಹಲವರಿಗೆ ನಿಷೇಧಾಜ್ಞೆ ಬಗ್ಗೆ ಮಾಹಿತಿ ಕೊರತೆ ಇತ್ತು. ಹಾಗಾಗಿ ಪ್ರತಿಭಟನೆ ಮಾಡಲು ಬಂದಿದ್ದರು. ಅಂಥವರನ್ನ ತಡೆದು ಕಳುಹಿಸಲಾಗಿದೆ ಎಂದರು.

  • ಮೋದಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ

    ಮೋದಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ

    ಶಿವಮೊಗ್ಗ: ಈ ರಾಷ್ಟ್ರದಿಂದ ಮುಸ್ಲಿಮರನ್ನು ಖಾಲಿ ಮಾಡಿಸಿದರೆ ಮುಂದಿನ 20 ವರ್ಷ ಪ್ರಧಾನಿ ಆಗಿರಬಹುದು ಎಂಬುದು ಮೋದಿಯವರ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕಾಗೋಡು ಅವರು, ಏಕ ಪೌರತ್ವ ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಈ ರಾಷ್ಟ್ರದ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿಗೆ ತಕ್ಕ ಪಾಠ ಕಲಿಸದಿದ್ದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

    ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದೆ ಕಾಂಗ್ರೆಸ್. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸ್ವಾತಂತ್ರ್ಯ ಉಳಿಯಬೇಕು ಅಂದರೆ ಬಿಜೆಪಿಯನ್ನು ಹೊರ ಹಾಕಬೇಕು ಹಾಗೂ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸಬೇಕು.

    ಮೋದಿಯ ತಲೆ ತುಂಬಾ ಮುಸ್ಲಿಮರೆಲ್ಲಾ ಪಾಕಿಸ್ತಾನದ ಪರ ಇದ್ದಾರೆ ಎಂದು ತುಂಬಿಕೊಂಡಿದೆ. ಹೀಗಾಗಿಯೇ ಮುಸ್ಲಿಮರನ್ನು ಹತ್ತಿಕ್ಕಲು ಇಂತಹ ಕಾನೂನು ಜಾರಿ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಇಂದು ನಾವು ಪ್ರತಿಭಟನೆಗೆ ಮುಂದಾದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಕಾಗೋಡು ತಿಳಿಸಿದರು.

  • ಕಾಂಗ್ರೆಸ್ಸಿನಿಂದ ದಂಗೆ, ಯು.ಟಿ ಖಾದರ್ ಬಂಧಿಸಿ – ಮುತಾಲಿಕ್ ಒತ್ತಾಯ

    ಕಾಂಗ್ರೆಸ್ಸಿನಿಂದ ದಂಗೆ, ಯು.ಟಿ ಖಾದರ್ ಬಂಧಿಸಿ – ಮುತಾಲಿಕ್ ಒತ್ತಾಯ

    ಹುಬ್ಬಳ್ಳಿ: ಪೌರತ್ವ ಕಾಯ್ದೆ ಸ್ವಾಗತರ್ಹವಾಗಿದೆ. ಇದಕ್ಕೆ ಈ ದೇಶದ ಕೆಲವೊಂದು ಜನ ಕಾಂಗ್ರೆಸ್ ಕುಮ್ಮಕ್ಕಿನಿಂದ ವಿರೋಧಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಿಲ್‍ನಿಂದ ಇಲ್ಲಿನ ಮುಸ್ಲಿಮರಿಗೆ ತೊಂದರೆಯಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರು ಮುಸ್ಲಿಂರನ್ನು ಎತ್ತಿಕಟ್ಟಿ ದಂಗೆ, ಗಲಾಟೆ ಮಾಡಿಸುತ್ತಿದ್ದಾರೆ. 50 ವರ್ಷದಿಂದ ಕಾಂಗ್ರೆಸ್ ಮುಸ್ಲಿಂರಿಗೆ ಏನು ಮಾಡಿಲ್ಲ. ಈಗ ಮತ್ತೆ ಮುಸ್ಲಿಂರನ್ನು ಬಲಿಪಶು ಮಾಡುತ್ತಿದೆ. ಮುಸ್ಲಿಂರು ಎಚ್ಚೆತ್ತುಕೊಳ್ಳಬೇಕು ಎಂದರು.

    ಪೌರತ್ವ ಕಾಯ್ದೆ ಜಾರಿಗೆ ತಂದರೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ ಯು.ಟಿ ಖಾದರ್ ವಿರುದ್ಧ ಮುತಾಲಿಕ್ ಕಿಡಿಕಾರಿದರು. ಖಾದರ್ ಅವರೇ ಮುಸ್ಲಿಮರನ್ನು ಪ್ರಚೋದನೆ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.

    ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ತಡವಾಗಿಯಾದರೂ ಗಲ್ಲು ಶಿಕ್ಷೆ ಖಾಯಂಗೊಳಿಸಿದ್ದು ಸ್ವಾಗತಾರ್ಹ. ಶಿಕ್ಷೆ ನೀಡಲು ಏಳು ವರ್ಷ ಕಳೆದುಹೋಗಿದೆ. ಅದರ ನಡುವೇ ಸಾಕಷ್ಟು ಅತ್ಯಾಚಾರಗಳಾಗಿವೆ. ನ್ಯಾಯಾಲಯ ಇಂತ ಪ್ರಕರಣಗಳಲ್ಲಿ ತೀರ್ಪು ನೀಡಲು ವಿಳಂಬ ಮಾಡಬಾರದು. ಇಂತವರನ್ನು ಎನ್‍ಕೌಂಟರ್ ಮಾಡುವುದೇ ಸರಿ ಅನಿಸುತ್ತೆ. ಇನ್ನು ಮುಂದೆಯೂ ಕೂಡ ತಡ ಮಾಡದೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

    ಇದೇ ತಿಂಗಳು 21 ರಂದು ರಾಜ್ಯಾದ್ಯಂತ ಕೇಂದ್ರ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಕೂಡಲೇ ಬಿಲ್ ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಇದೇ ವೇಳೆ ಬಾಂಗ್ಲಾದೇಶದಿಂದ ಸಿಂಧನೂರಿಗೆ ಬಂದು ನಿರಾಶ್ರಿತ ಶಿಬಿರದಲ್ಲಿರುವ ಮೇಸ್ತ್ರಿ ಹಾಗೂ ಪ್ರದೀಪ ದಾಸ್ ಎನ್ನುವರು ಈ ಮಸೂದೆ ನಮಗೆ ಖುಷಿಯಾಗಿದೆ. ಇದರಿಂದ ನಾವು ನಿರಾತಂಕವಾಗಿ ಜೀವನ ಸಾಗಿಸಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.