Tag: ಪೌರತ್ವ

  • ರಾಹುಲ್‌ ದ್ವಿ ಪೌರತ್ವ ಕೇಸ್‌ – ಪರಿಶೀಲನೆ ನಡೆಸುತ್ತಿದ್ದೇವೆ ಎಂದ ಕೇಂದ್ರ ಸರ್ಕಾರ

    ರಾಹುಲ್‌ ದ್ವಿ ಪೌರತ್ವ ಕೇಸ್‌ – ಪರಿಶೀಲನೆ ನಡೆಸುತ್ತಿದ್ದೇವೆ ಎಂದ ಕೇಂದ್ರ ಸರ್ಕಾರ

    ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ದ್ವಿಪೌರತ್ವ (Dual Citizenship) ಅಂಶವನ್ನು ಪರಿಶೀಲನೆ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

    ರಾಹುಲ್ ಬ್ರಿಟನ್ ಪ್ರಜೆಯಾಗಿರುವ ಕಾರಣ ಅವರ ಭಾರತದ ಪೌರತ್ವ ರದ್ದು ಮಾಡಬೇಕೆಂದು ಕೋರಿ ಕರ್ನಾಟಕದ (Karnataka) ಶಿಶಿರ್ ವಿಘ್ನೇಷ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಬಗ್ಗೆ ಪ್ರತಿಕ್ರಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚಿಸಿತ್ತು.

    ಕಾಂಗ್ರೆಸ್‌ನ (Congress) ರಾಹುಲ್ ಗಾಂಧಿ ಅವರ ದ್ವಿಪೌರತ್ವದ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಸರ್ಕಾರವು ಹೈಕೋರ್ಟ್‌ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ತಿಳಿಸಿದೆ.

    court order law

    ಕೇಂದ್ರ ಗೃಹ ಸಚಿವಾಲಯವು, ಅರ್ಜಿದಾರರು ಮಾಡಿದ ಪ್ರಾತಿನಿಧ್ಯವನ್ನು ಸಚಿವಾಲಯದಲ್ಲಿ ಸ್ವೀಕರಿಸಲಾಗಿದೆ. ಡಿಸೆಂಬರ್ 19 ರಂದು ಈ ವಿಚಾರವನ್ನು ಪಟ್ಟಿ ಮಾಡಿ. ಪರಿಶೀಲನೆಯ ವಿವರಗಳನ್ನು ಅಂದು ತಿಳಿಸಲಾಗುವುದು ಎಂದು ಹೇಳಿದೆ.  ಇದನ್ನೂ ಓದಿ: ನೀವು ಗೆದ್ದಾಗ ಮಾತ್ರ ಇವಿಎಂ ತಿರುಚಿರಲ್ವಾ? – ಬ್ಯಾಲೆಟ್‌ ಪೇಪರ್‌ ಮತದಾನ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವಿಘ್ನೇಶ್ ಅವರು, ಸರ್ಕಾರವು ತಕ್ಷಣವೇ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ಹಿಂತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ರಾಹುಲ್‌ ಅವರ ಹೆಸರು ಪೌರತ್ವ ದಾಖಲೆಗಳಲ್ಲಿದೆ ಎನ್ನುವುದನ್ನು ನಾವು ಯುಕೆ ಸರ್ಕಾರದ ಜೊತೆ ಸಂವಹನ ಮಾಡಿ ದಾಖಲೆಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು.

    ನಾವು ಎಲ್ಲಾ ದಾಖಲೆಗಳನ್ನು ಅಲಹಾಬಾದ್ ಹೈಕೋರ್ಟ್‌ಗೆ (Allahabad High Court) ಸಲ್ಲಿಸಿದ್ದೇವೆ. ಭಾರತೀಯ ಕಾನೂನುಗಳ ಅಡಿಯಲ್ಲಿ ದ್ವಿಪೌರತ್ವವನ್ನು ಅನುಮತಿಸಲಾಗುವುದಿಲ್ಲ. ಯಾರಾದರೂ ಮತ್ತೊಂದು ರಾಷ್ಟ್ರದ ಪೌರತ್ವವನ್ನು ತೆಗೆದುಕೊಂಡ ನಂತರ ಭಾರತೀಯ ಪೌರತ್ವವು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಎಂದರು.

    ರಾಹುಲ್‌ ಪೌರತ್ವಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಮನವಿಯನ್ನು ದೆಹಲಿ ಹೈಕೋರ್ಟ್‌ನಲ್ಲಿ ಮತ್ತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ಅವರು ಸಲ್ಲಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿಯ ಸ್ಥಿತಿಯನ್ನು ಖಚಿತಪಡಿಸಿದ ನಂತರವೇ ಈ ವಿಷಯವನ್ನು ಆಲಿಸುವುದಾಗಿ ದೆಹಲಿ ಹೈಕೋರ್ಟ್ ಸೂಚಿಸಿದೆ.

     

  • ಪೌರತ್ವ ತಿದ್ದುಪಡಿ ಕಾಯ್ದೆ | ರಾಜ್ಯದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ

    ಪೌರತ್ವ ತಿದ್ದುಪಡಿ ಕಾಯ್ದೆ | ರಾಜ್ಯದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ

    – 40 ವರ್ಷಗಳ ಹೋರಾಟಕ್ಕೆ ಸಿಕ್ಕ ಫಲ

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ರಾಜ್ಯದಲ್ಲಿ ವಾಸಿಸುತ್ತಿರುವ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ (Indian Citizenship) ಸಿಕ್ಕಿದೆ.

    ರಾಯಚೂರು (Raichur) ಜಿಲ್ಲೆ ಸಿಂಧನೂರು ತಾಲೂಕಿನ ಆರ್.ಎಚ್‌ ಕ್ಯಾಂಪ್‌ಗಳಲ್ಲಿ ವಾಸವಿರುವ ಐವರಿಗೆ ಭಾರತೀಯ ಪೌರತ್ವ ಸಿಕ್ಕಿದೆ. ಆರ್.ಎಚ್‌ಕ್ಯಾಂಪ್‌ಗಳಲ್ಲಿರುವ ರಾಮಕೃಷ್ಣನ್‌ ಅಭಿಕರಿ, ಸುಕುಮಾರ ಮೊಂಡಲ್, ಬಿ. ಪ್ರದಾಸ ಗೋಲ್ದರ್, ಜಯಂತ ಮೊಂಡಲ್, ಅದ್ವಿತ ಕೇಂದ್ರ ಗೃಹ ಇಲಾಖೆಯಿಂದ ಪೌರತ್ವ ಪಡೆದ ಬಾಂಗ್ಲಾ ವಲಸಿಗರಾಗಿದ್ದಾರೆ. ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯದಿಂದ ಅಧಿಕೃತವಾಗಿ ಪೌರತ್ವ ಪತ್ರ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ

    ಬಾಂಗ್ಲಾ ವಲಸಿಗರು ಇಲ್ಲಿ ಆಶ್ರಯ ಪಡೆದಿದ್ದೇಗೆ?
    1971ರ ಬಾಂಗ್ಲಾದೇಶ ವಿಮೋಚನಾ ವೇಳೆ ಬಾಂಗ್ಲಾ ಹಾಗೂ ಬರ್ಮಾ ವಲಸಿಗರಿಗೆ ಭಾರತದಲ್ಲಿ ಆಶ್ರಯ ನೀಡಲಾಗಿತ್ತು. ಈ ವೇಳೆ ಸಿಂಧನೂರು ತಾಲೂಕಿನಲ್ಲಿ ಸುಮಾರು 932 ಕುಟುಂಬಗಳಿಗೆ 5 ಸಾವಿರ ಎಕರೆ ಜಮೀನು ನೀಡಲಾಗಿತ್ತು. 1971ರ ಬಳಿಕ ಬಂದ ಕುಟುಂಬಗಳಿಗೆ ಪೌರತ್ವ ಹಾಗೂ ಯಾವುದೇ ಸೌಲಭ್ಯ ನೀಡಿರಲಿಲ್ಲ. ಪೌರತ್ವಕ್ಕಾಗಿ ನಿರಾಶ್ರಿತರು ಕಳೆದ 40 ವರ್ಷಗಳಿಂದ ಅರ್ಜಿ ಹಾಕುತ್ತಲೇ ಇದ್ದರು. ಅದರಂತೆ ಐವರಿಗೆ ಪೌರತ್ವ ಸಿಕ್ಕಿದೆ. ಪೌರತ್ವ ಕೋರಿ ಒಟ್ಟು 146 ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ಪೈಕಿ ಆರ್.ಎಚ್ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಐವರಿಗೆ ಪೌರತ್ವ ದೊರೆತಿದೆ. ಇದನ್ನೂ ಓದಿ: Koppala | ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ನ ಚೈನ್ ಲಿಂಕ್ ಕಟ್ – ಜನರಲ್ಲಿ ಆತಂಕ!

    ಸಿಎಎಯಲ್ಲಿ ಏನಿದೆ?
    ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರರಿಗೆ ಭಾರತದ ಪೌರತ್ವ (Citizenship) ನೀಡಲಾಗುತ್ತದೆ. 2014ರ ಡಿಸೆಂಬರ್ 31ಕ್ಕೆ ಮೊದಲು ರಕ್ಷಣೆ ಬಯಸಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿರುವ ಹಿಂದೂಗಳು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳಿಗೆ ಮಾತ್ರ ಸಿಎಎ ಅನ್ವಯ ಪೌರತ್ವ ನೀಡಲಾಗುತ್ತದೆ. ಪೌರತ್ವ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಮುಗಿಯಲಿದ್ದು, ದೇಶದಲ್ಲಿರುವ ಮುಸ್ಲಿಮರಿಗೆ ಸಿಎಎಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದನ್ನೂ ಓದಿ: TB ಡ್ಯಾಮ್‌ ಪರಿಶೀಲನೆಗೆ ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಆಗಮನ: ತಂಗಡಗಿ 

  • ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ

    ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ

    ನವದೆಹಲಿ: ಲೋಕಸಭೆ ಚುನಾಚಣೆಗೆ (Lok Sabha Election) ಮುನ್ನ ಮೋದಿ ಸರ್ಕಾರ (Narendra Modi Government) ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act ) ಜಾರಿ ಮಾಡಿ ಅಧಿಸೂಚನೆ ಹೊರಡಿಸಿದೆ.

    2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ದೇಶದಲ್ಲಿ ಭಾರೀ ಪ್ರತಿಭಟನೆ (Protest) ನಡೆದ ಕಾರಣ ಇಲ್ಲಿಯವರೆಗೆ ಸಿಎಎ ಜಾರಿಯಾಗಿರಲಿಲ್ಲ. ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸಿಎಎ ಜಾರಿಗೊಳಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಈಗ ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸುವ ಮೂಲಕ ತನ್ನಲ್ಲಿದ್ದ ದೊಡ್ಡ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಿದೆ.

    ವೆಬ್‌ಸೈಟ್‌ ಕ್ರ್ಯಾಶ್‌:
    ಸಿಎಎ ನಿಯಮ ಪ್ರಕಟಗೊಂಡ ಬೆನ್ನಲ್ಲೇ ಸರ್ಕಾರದ ಇ-ಗೆಜೆಟ್‌ ವೆಬ್‌ಸೈಟ್‌ ಕ್ರ್ಯಾಶ್‌ ಆಗಿದೆ. ಭಾರೀ ಸಂಖ್ಯೆಯಲ್ಲಿ ಜನರು ವೆಬ್‌ಸೈಟಿಗೆ ಭೇಟಿ ನೀಡಿದ ಪರಿಣಾಮ ವೆಬ್‌ಸೈಟ್‌ ಪುಟ ಓಪನ್‌ ಆಗುತ್ತಿಲ್ಲ.

    ಸಿಎಎಯಲ್ಲಿ ಏನಿದೆ?
    ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರರಿಗೆ ಭಾರತದ ಪೌರತ್ವ (Citizenship) ನೀಡಲಾಗುತ್ತದೆ. 2014ರ ಡಿಸೆಂಬರ್ 31ಕ್ಕೆ ಮೊದಲು ರಕ್ಷಣೆ ಬಯಸಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿರುವ ಹಿಂದೂಗಳು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳಿಗೆ ಮಾತ್ರ ಸಿಎಎ ಅನ್ವಯ ಪೌರತ್ವ ನೀಡಲಾಗುತ್ತದೆ. ಪೌರತ್ವ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಮುಗಿಯಲಿದ್ದು, ದೇಶದಲ್ಲಿರುವ ಮುಸ್ಲಿಮರಿಗೆ ಸಿಎಎಯಿಂದ ಯಾವುದೇ ತೊಂದರೆ ಆಗುವುದಿಲ್ಲ.

    ಜಾರಿ ಆಗುತ್ತೆ ಎಂದಿದ್ದ ಶಾ:
    ಈ ಹಿಂದೆ ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ (Amit Shah) ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಜಾರಿಗೆ ತರುವುದಾಗಿ ಹೇಳಿದ್ದರು.

    ಸಿಎಎ ದೇಶದ ಕಾಯ್ದೆಯಾಗಿದೆ. ಅದನ್ನು ಖಂಡಿತವಾಗಿಯೂ ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುವುದು ಅದರಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಎ ಕಾಂಗ್ರೆಸ್ ಸರ್ಕಾರದ (Congress Government) ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶದಲ್ಲಿದ್ದ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಿ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಕಾಂಗ್ರೆಸ್‌ ಆ ಭರವಸೆಯಿಂದ ಹಿಂದಕ್ಕೆ ಸರಿಯುತ್ತಿದೆ ಎಂದು ಶಾ ದೂರಿದ್ದರು.

    ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ ಎಂದು ವಿವರಿಸಿದ್ದರು.

     

  • ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

    ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಜಾರಿಗೆ ತರುವುದಾಗಿ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಎ ದೇಶದ ಕಾಯ್ದೆಯಾಗಿದೆ. ಅದನ್ನು ಖಂಡಿತವಾಗಿಯೂ ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುವುದು ಅದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

    ಸಿಎಎ ಕಾಂಗ್ರೆಸ್ ಸರ್ಕಾರದ (Congress Government) ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶದಲ್ಲಿದ್ದ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಿ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಕಾಂಗ್ರೆಸ್‌ ಆ ಭರವಸೆಯಿಂದ ಹಿಂದಕ್ಕೆ ಸರಿಯುತ್ತಿದೆ ಎಂದು ಶಾ ದೂರಿದರು.  ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

    ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ ಎಂದು ವಿವರಿಸಿದರು.

    2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ದೇಶದಲ್ಲಿ ಭಾರೀ ಪ್ರತಿಭಟನೆ ನಡೆದ ಪರಿಣಾಮ ಇನ್ನೂ ಸಿಎಎ ಜಾರಿಯಾಗಿಲ್ಲ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ- ಯೋಗಿ ಆದಿತ್ಯನಾಥ್‌ಗೆ ಟಿಎಂಸಿ ನಾಯಕ ಎಚ್ಚರಿಕೆ

    ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಬರುವ ಹಿಂದೂ, ಸಿಖ್, ಜೈನ್, ಕ್ರೈಸ್ತ ಮತ್ತು ಬೌದ್ಧ ಸಮುದಾಯದವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.

     

  • ಆಸ್ಟ್ರೇಲಿಯಾ ಪೌರತ್ವ ಪಡೆದ ಕನ್ನಡ ನಟಿ ದೀಪಿಕಾ

    ಆಸ್ಟ್ರೇಲಿಯಾ ಪೌರತ್ವ ಪಡೆದ ಕನ್ನಡ ನಟಿ ದೀಪಿಕಾ

    ಚಿಂಗಾರಿ (Chingari) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟಿ ದೀಪಿಕಾ ಕಾಮಯ್ಯ (Deepika Kamaiah), ಇದೀಗ ಆಸ್ಟ್ರೇಲಿಯಾ (Australia)  ಪೌರತ್ವ  ಪಡೆದಿದ್ದಾರೆ. ಹಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲೇ ನೆಲೆಸಿರುವ ಅವರು, ತಾವು ಆ ದೇಶದ ಪೌರತ್ವವನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

    ಸಿಟಿಜನ್ ಶಿಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೌರತ್ವ (Citizenship) ಪಡೆದುಕೊಂಡ ಪ್ರಮಾಣಪತ್ರವನ್ನೂ ಅವರು ತೋರಿಸಿದ್ದಾರೆ. ಗೋಪಿ ಎನ್ನುವವರ ಜೊತೆ ಮದುವೆಯಾಗಿರುವ ದೀಪಿಕಾ, ಅವರೊಂದಿಗೆ ಆಸ್ಟ್ರೇಲಿಯಾದಲ್ಲೇ ವಾಸವಿದ್ದಾರೆ. ಈ ಕಾರಣಕ್ಕಾಗಿ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಮಾನ್ಯವಾಗಿದೆ.

    ಚಿಂಗಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ, ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ನಂತರ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಇದೆಲ್ಲವನ್ನೂ ಮುಗಿಸಿಕೊಂಡು ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು.

  • ಕೆನಡಾ ಪೌರತ್ವ ಬದಲಾಯಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀರ್ಮಾನ

    ಕೆನಡಾ ಪೌರತ್ವ ಬದಲಾಯಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀರ್ಮಾನ

    ಲವು ವರ್ಷಗಳಿಂದ ಭಾರತದಲ್ಲಿ ನೆಲೆಯೂರಿರುವ ಮತ್ತು ಭಾರತದವರೇ ಆಗಿರುವ  ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar), ಈವರೆಗೂ ಭಾರತದ (India) ಪೌರತ್ವ (Citizenship) ಹೊಂದಿರಲಿಲ್ಲ. ಹಾಗಾಗಿ ಪೌರತ್ವದ ವಿಷಯದಲ್ಲಿ ಪದೇ ಪದೇ ಟೀಕೆಗೆ ಒಳಗಾಗುತ್ತಿದ್ದರು. ದೇಶದ ಪರವಾಗಿ ಅಕ್ಷಯ್ ಕುಮಾರ್ ಮಾತನಾಡಿದಾಗೆಲ್ಲ ಪೌರತ್ವವನ್ನು ಪ್ರಶ್ನೆ ಮಾಡಲಾಗುತ್ತಿತ್ತು. ಇದರಿಂದ ಪಾರಾಗುವುದಕ್ಕಾಗಿಯೇ ಅವರು ಕೆನಡಾಗೆ ಅರ್ಜಿ ಸಲ್ಲಿಸಿದ್ದಾರಂತೆ.

    ಭಾರತದ ಪೌರತ್ವ ಪಡೆಯುವುದಕ್ಕಾಗಿ ಅವರು ಕೆನಡಾದ  (Canada)ಪಾಸ್ ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅಕ್ಷಯ್, ‘ನನಗೆ ಭಾರತವೇ ಎಲ್ಲ. ಅದು ಎಲ್ಲವನ್ನೂ ನನಗೆ ಕೊಟ್ಟಿದೆ. ನಾನು ಇಲ್ಲಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಹಾಗಾಗಿ ನಾನು ಕೆನಡಾ ಪಾಸ್ ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

    ಪೌರತ್ವದ ವಿಷಯದಲ್ಲಿ ಬೇಸರವನ್ನು ವ್ಯಕ್ತ ಪಡಿಸಿರುವ ಅವರು, ‘ನಾನು ಭಾರತದಿಂದ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಪಡೆದದ್ದೆಲ್ಲವನ್ನೂ ಭಾರತಕ್ಕೆ ಕೊಡಲಿದ್ದೇನೆ. ಆದರೆ, ಜನರನ್ನು ಕೆಲವರು ಹಾದಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಅವರು ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇದರಿಂದ ನಿಜಕ್ಕೂ ನನಗೆ ಬೇಸರವಾಗಿದೆ’ ಎಂದು ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ತಾವು ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರ ಕುರಿತು ಮಾತನಾಡಿರುವ ಅವರು, 1990ರ ದಶಕದಲ್ಲಿ ಇವರ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದವಂತೆ. ರಿಲೀಸ್ ಆದ ಅಷ್ಟೂ ಸಿನಿಮಾಗಳು ಸೋತವು. ಈ ಕಾರಣದಿಂದಾಗಿ ಅವರು ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ದೇಶಭಕ್ತಿ ಸಾರುವಂತಹ ಸಾಕಷ್ಟು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಇಂತಹ ಸಿನಿಮಾಗಳು ಬಂದಾಗೆಲ್ಲ ಇವರ ಪೌರತ್ವದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಹಾಗಾಗಿ ಅವರಿಗೆ ಸಹಜವಾಗಿಯೇ ಬೇಸರವಾಗಿದೆಯಂತೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೀಘ್ರದಲ್ಲೇ ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವೆ ಎಂದು ಅಕ್ಷಯ್ ಕುಮಾರ್

    ಶೀಘ್ರದಲ್ಲೇ ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವೆ ಎಂದು ಅಕ್ಷಯ್ ಕುಮಾರ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಈವರೆಗೂ ಕೆನಡಾ ಪಾಸ್ ಪೋರ್ಟ್ ನಲ್ಲಿ ಫಾರೀನ್ ಟೂರ್ ಮಾಡುತ್ತಿದ್ದಾರೆ. ಕೆನಡಾ ಪೌರತ್ವ ಹೊಂದಿರುವ ಕಾರಣದಿಂದಾಗಿ ಅವರಿಗೆ ಭಾರತದಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿಯೇ ಹಲವಾರು ಬಾರಿ ಟೀಕೆಗೂ ಗುರಿಯಾಗಿದ್ದಾರೆ ಅಕ್ಷಯ್. ಹಾಗಾಗಿಯೇ ಸದ್ಯದಲ್ಲೇ ಅವರು ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಈ ರೀತಿ ಹೇಳಿಕೆ ಕೊಡುವುದು, ಸಂದರ್ಶನದಲ್ಲಿ ಉತ್ತರಿಸುವುದು ಅಕ್ಷಯ್ ಕುಮಾರ್ ಅವರಿಗೆ ಹೊಸದೇನೂ ಅಲ್ಲ. 2019ರಲ್ಲೇ ಅವರು ಇಂಥದ್ದೊಂದು ಹೇಳಿಕೆಯನ್ನು ನೀಡಿದ್ದರು.ಆದರೆ, ಈವರೆಗೂ ಅವರು ಪಾಸ್ ಪೋರ್ಟ್ ಬದಲಾಯಿಸಿಕೊಂಡಿಲ್ಲ. ಇದೀಗ ಮತ್ತೆ ಸಂದರ್ಶನವೊಂದರಲ್ಲಿ ಭಾರತದ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ. ಅವರ ಮಾತು ಇದೀಗ ಮತ್ತೆ ಟ್ರೋಲ್ ಆಗಿದೆ. ಸುಳ್ಳು ಹೇಳದೆ, ಭರವಸೆ ಕೊಡದೇ ಆದಷ್ಟು ಬೇಗ ಭಾರತದ ಪೌರತ್ವ ಪಡೆಯಿರಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಗುರೂಜಿಗೆ ಬಿಗ್ ಬಾಸ್ ಡಬಲ್ ಶಾಕ್: ಸೂಟ್ ಕೇಸ್ ರೆಡಿ ಮಾಡಿ ಎಂದ ನಟ ಸುದೀಪ್

    ದೇಶಭಕ್ತಿಯ ವಿಚಾರದಲ್ಲಿ ಹಲವಾರು ಭಾಷಣಗಳನ್ನು ಅಕ್ಷಯ್ ಕುಮಾರ್ ಮಾಡಿದ್ದಾರೆ. ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಅಕ್ಷಯ್ ಕುಮಾರ್ ಮಾತ್ರ ಕೆನಡಾ ಪೌರತ್ವ ಹೊಂದಿದ್ದಾರೆ. ಭಾರತದಲ್ಲಿ ಅವರು ಹಲವು ವರ್ಷಗಳಿಂದ ಇದ್ದರೂ, ಇನ್ನೂ ಕೆನಡಾ ಪಾಸ್ ಪೋರ್ಟ್ ಹೊಂದಿದ್ದಾರೆ. ಹೀಗಾಗಿ ಪದೇ ಪದೇ ಈ ಪ್ರಶ್ನೆಯು ಅವರಿಗೆ ಎದುರಾಗುತ್ತಿದ.ಇದರಿಂದ ತಪ್ಪಿಸಿಕೊಳ್ಳಲು ಭಾರತದ ಪಾಸ್ ಪೋರ್ಟ್ ಗೆ ಅತೀ ಶೀಘ್ರದಲ್ಲೇ ಅರ್ಜಿ ಹಾಕುವುದಾಗಿ ಅಕ್ಷಯ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ಭೂತಕೋಲ ಹಿಂದೂ ಸಂಸ್ಕೃತಿ ಎನ್ನುವ ವಿಚಾರವಾಗಿ ನಟ ಚೇತನ್ ಆಡಿದ ವಿರೋಧಿ ಮಾತುಗಳು ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ. ಭೂತಕೋಲ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಹೇಳಿದ್ದರು. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ, ಅದೊಂದು ಬುಡಕಟ್ಟು ಸಂಪ್ರದಾಯ ಎಂದು ಹೇಳುವ ಮೂಲಕ ಚೇತನ್ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದರು.

    ಚೇತನ್ (Chetan) ಈ ರೀತಿ ಹೇಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ನಾನಾ ರೀತಿಯ ಕಾಮೆಂಟ್ ಗಳು ಬಂದವು. ಅದರಲ್ಲೂ ಚೇತನ್ ಪೌರತ್ವದ (Citizenship) ಬಗ್ಗೆಯೂ ಪ್ರಶ್ನೆ ಮಾಡಲಾಯಿತು. ಚೇತನ್ ಭಾರತದ ಪೌರತ್ವ ಪಡೆದಿಲ್ಲ. ಹಾಗಾಗಿ ಭಾರತದ ಬಗ್ಗೆ ಮಾತನಾಡುವಂತಹ ನೈತಿಕ ಹಕ್ಕು ಅವರಿಗಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೂ ಚೇತನ್ ಇದೀಗ  ಉತ್ತರಿಸಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೇತನ್, ‘ನಾನು ಚರ್ಚೆಯ ಮೂಲಕ ಗೆಲ್ಲಬೇಕು. ಸಂವಾದದ ಮೂಲಕ ಅರ್ಥ ಮಾಡಿಕೊಳ್ಳಬೇಕು. ನಾನು ಆಡಿದ ಮಾತುಗಳಲ್ಲಿ ಏನು ಸುಳ್ಳು ಇದೆ ಹೇಳಲಿ. ಯಾರಿಗೆ ನನ್ನನ್ನು ಸೋಲಿಸಲು ಆಗುವುದಿಲ್ಲವೋ, ಅವರು ಪೌರತ್ವದ ಬಗ್ಗೆ ಮಾತನಾಡುತ್ತಾರೆ. ನನ್ನ ಹುಟ್ಟು ನನ್ನ ಕೈಯಲ್ಲಿ ಇಲ್ಲ. ಯಾರ ಕೈಯಲ್ಲೂ ಇಲ್ಲ. ನಾನು ಯಾವಾಗಲೂ ಸತ್ಯದ ಪರವಾಗಿ ಇರುತ್ತೇನೆ. ಹಾಗಾಗಿ ಈ ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುವುದು ಅನಿವಾರ್ಯ’ ಅಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್-19 ಲಸಿಕಾಕರಣದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ: ಅಮಿತ್ ಶಾ

    ಕೋವಿಡ್-19 ಲಸಿಕಾಕರಣದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ: ಅಮಿತ್ ಶಾ

    ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡಲು ಅನುಕೂಲವಾಗುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು(ಸಿಎಎ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಇಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಅಮಿತ್ ಶಾ ಸಿಎಎ ಜಾರಿಗೆ ತರುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಸರ್ಕಾರ ಏಪ್ರಿಲ್ ತಿಂಗಳಿನಲ್ಲಿ ಜನರಿಗೆ ಬೂಸ್ಟರ್ ಡೋಸ್ ನೀಡಲು ಪ್ರಾರಂಭಿಸಿದೆ. ಇದು 9 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕಾರ್ಯ ಮುಗಿದ ಬಳಿಕ ಸಿಎಎ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸುವೆಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸಂತೋಷವಾಗಿದೆ. ನಾವು ಸಂಸತ್ತಿನ ಕಚೇರಿಯಲ್ಲಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿ, ಶಿಕ್ಷಕರ ನೇಮಕಾತಿ ಹಗರಣದಂತಹ ಭ್ರಷ್ಟ ಚಟುವಟಿಕೆಗಳಲ್ಲಿ ಬಂಗಾಳ ಸರ್ಕಾರ ಹೇಗೆ ಸಂಪೂರ್ಣವಾಗಿ ಮುಳುಗಿದೆ ಎಂಬುದನ್ನು ನಾನು ಅವರಿಗೆ ವಿವರಿಸಿದ್ದೇನೆ. ಇದೇ ವೇಳೆ ಅವರು ಆದಷ್ಟು ಬೇಗ ಸಿಎಎ ಯನ್ನು ಜಾರಿಗೆ ತರುವಂತೆ ಮನವಿ ಮಾಡಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಸಿಕ್ಕಿದ ಹಣ ನನಗೆ ಸೇರಿದ್ದಲ್ಲ, ಯಾರೋ ಅಲ್ಲಿ ಇಟ್ಟಿದ್ದಾರೆ: ಅರ್ಪಿತಾ ಮುಖರ್ಜಿ

    ಏನಿದು ಸಿಎಎ?
    ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಹಾಗೂ ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವುದು ಸಿಎಎ ಯ ಉದ್ದೇಶವಾಗಿದೆ. ಇದರ ಪ್ರಕಾರ ಧಾರ್ಮಿಕ ಕಿರುಕುಳವನ್ನು ಅನುಭವಿಸಿ 2014ರ ಡಿಸೆಂಬರ್ 31ರ ವರೆಗೆ ಭಾರತಕ್ಕೆ ಬಂದಿರುವ ಈ ಸಮುದಾಯದ ಜನರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸದೇ, ಬದಲಿಗೆ ಅವರಿಗೆ ಭಾರತದ ಪೌರತ್ವವನ್ನು ನೀಡಲಾಗುತ್ತದೆ.

    2019ರ ಡಿಸೆಂಬರ್‌ನಲ್ಲಿ ಸಂಸತ್ತು ಸಿಎಎ ಯನ್ನು ಅಂಗೀಕರಿಸಿತ್ತು. ಆದರೆ ಈ ಕಾಯ್ದೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿತ್ತು. ಮುಸ್ಲಿಂ ಸಮುದಾಯದವರ ತಾರತಮ್ಯ ಮಾಡುವ ಉದ್ದೇಶ ಈ ಯೋಜನೆಯಲ್ಲಿದೆ ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

    ಈ ಪ್ರತಿಭಟನೆಗಳ ನಡುವೆಯೂ ಗೃಹ ಸಚಿವ ಅಮಿತ್ ಶಾ ಈ ಆರೋಪಗಳನ್ನು ತಳ್ಳಿ ಹಾಕಿ, ಸಿಎಎ ವಿರುದ್ಧದ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದರು. ಈ ಕಾಯ್ದೆಯಿಂದ ಯಾವುದೇ ಭಾರತೀಯರು ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನೇಪಾಳದಲ್ಲಿ ಮೊದಲ ಪೌರತ್ವ ತಿದ್ದುಪಡಿ ಅಂಗೀಕಾರ

    ನೇಪಾಳದಲ್ಲಿ ಮೊದಲ ಪೌರತ್ವ ತಿದ್ದುಪಡಿ ಅಂಗೀಕಾರ

    ಕಠ್ಮಂಡು: ರಾಜಕೀಯ ಒಮ್ಮತಗಳನ್ನು ರೂಪಿಸಲು ವಿಫಲವಾಗಿದ್ದ ಹಾಗೂ 2 ವರ್ಷಗಳಿಗೂ ಅಧಿಕ ಕಾಲ ಚರ್ಚೆಯಲ್ಲಿದ್ದ ದೇಶದ ಮೊದಲ ಪೌರತ್ವ ತಿದ್ದುಪಡಿ ಮಸೂದೆಯನ್ನು ನೇಪಾಳದ ಸಂಸತ್ತು ಅಂಗೀಕರಿಸಿದೆ.

    ನೇಪಾಳಿ ಪುರುಷರನ್ನು ವಿವಾಹವಾಗುವ ವಿದೇಶಿ ಮಹಿಳೆಯರು ಪೌರತ್ವವನ್ನು ಪಡೆಯಲು 7 ವರ್ಷಗಳು ಬೇಕಿತ್ತು. ಇದರಿಂದಾಗಿ ಅವರು ಶಿಕ್ಷಣ ಸೇರಿದಂತೆ ಎಲ್ಲಾ ಮೂಲಭೂತ ಸೇವೆಗಳಿಂದ ವಂಚಿತರಾಗುತ್ತಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಮಸೂದೆಯನ್ನು ತಿದ್ದುಪಡಿಗೊಳಿಸಬೇಕು ಎಂದು ಯೋಚಿಸಿದಾಗ ರಾಜಕೀಯ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅದನ್ನು ಅಲ್ಲೇ ಕೈಬಿಡಲಾಗಿತ್ತು. ಇದನ್ನೂ ಓದಿ: ಭಾರೀ ಮಳೆಯಿಂದ ರೈಲು ರದ್ದು- ವಿದ್ಯಾರ್ಥಿಗೆ ಕಾರಿನ ಸೇವೆ ಒದಗಿಸಿದ ಭಾರತೀಯ ರೈಲ್ವೆ ಇಲಾಖೆ

    ಆದರೆ ಇದೀಗ ಗೃಹ ಸಚಿವ ಬಾಲಕೃಷ್ಣ ಖಂಡ್ ಅವರು ನೇಪಾಳದ ಮೊದಲ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು, 2006ರಲ್ಲಿ ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಲಾಗಿತ್ತು. ಅದರಂತೆ ಸಂವಿಧಾನದ ನಿರ್ದೇಶನದಂತೆ ಪೌರತ್ವವನ್ನು ಒದಗಿಸಲು ಸಹಕಾರ ನೀಡಿ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಈ ಮಸೂದೆ ಜಾರಿ ಆಯಿತು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಷಣಕ್ಷಣಕ್ಕೂ ವಿಷಮ ಸ್ಥಿತಿ – ಓರ್ವ ನಾಗರಿಕ ಸಾವು, 35 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]