Tag: ಪೌಡರ್

  • ‘ಪೌಡರ್’ ಹಾಡಿಗೆ ದನಿಯಾದ ಆಂಟೋನಿ ದಾಸನ್

    ‘ಪೌಡರ್’ ಹಾಡಿಗೆ ದನಿಯಾದ ಆಂಟೋನಿ ದಾಸನ್

    ಬಹು ನಿರೀಕ್ಷಿತ ಹಾಸ್ಯ ಚಿತ್ರ ಪೌಡರ್ (Powder) ತನ್ನ ಎರಡನೇ ಗೀತೆಯಾದ `ಪರಪಂಚ ಘಮ ಘಮ’ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ ಮಿಷನ್ ಘಮ ಘಮ ತನ್ನ ವಿಭಿನ್ನ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಪರಪಂಚ ಘಮ ಘಮ ಅದೇ ರೀತಿಯ ಛಾಪನ್ನು ಮೂಡಿಸಲು ಸಜ್ಜಾಗಿದೆ.

    ಖ್ಯಾತ ಜನಪದ ಗಾಯಕ, ಬ್ಲಾಕ್ ಬಸ್ಟರ್ ಗೀತೆಗಳಾದ ಟಗರು ಬಂತು ಟಗರು, ಸೂರಿ ಅಣ್ಣಾ ಖ್ಯಾತಿಯ ಆಂಟೋನಿ ದಾಸನ್ (Antony Dasan)  ಈ ಹಾಡಿಗೆ ದನಿಯಾಗಿರುವುದು ವಿಶೇಷ ಸಂಗತಿ. ಮಾಸ್ ಗೀತೆಗಳಿಗೆ ಹೆಸರುವಾಸಿಯಾದ ಆಂಟೋನಿ ಮೊದಲ ಬಾರಿಗೆ ಪೌಡರ್ ಚಿತ್ರದ ಈ ಲಯ ಪ್ರಧಾನ ಗೀತೆಗೆ ದನಿಯಾಗಿರುವುದು ಸಿನಿ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

    ಪೌಡರ್ ಒಂದು ಹಾಸ್ಯಭರಿತ ಚಿತ್ರವಾಗಿದೆ.ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? ಪೌಡರ್ ಹಿಂದಿನ ಪವರ್ ಅವರಿಗೆ ತಿಳಿಯುವುದೇ? ಇದುವೇ ಕಥೆಯ ಸಾರಾಂಶ.

    ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಪೌಡರ್ ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.

  • ‘ಪೌಡರ್’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯ

    ‘ಪೌಡರ್’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯ

    ದಿಗಂತ್ (Digant) ಮತ್ತು ಧನ್ಯಾ ರಾಮ್ (Dhanya Ram Kumar) ಕಾಂಬಿನೇಷನ್ ನ ಪೌಡರ್ (Powder) ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬಹು ತಾರಾಗಣವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಕೆ ಆರ್ ಜಿ ಸ್ಟುಡಿಯೋಸ್, ಟಿವಿಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಿದೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರದ ಮುಹೂರ್ತ ನಡೆದಿತ್ತು.

    ಪೌಡರ್ ಒಂದು ಹಾಸ್ಯಮಯ ಚಿತ್ರವಾಗಿದ್ದು, ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

    ಜನಾರ್ದನ್ ಚಿಕ್ಕಣ್ಣ (Janardhan Chikkanna) ನಿರ್ದೇಶನದ ಈ ಬಹುತಾರಾಗಣದ ಚಿತ್ರದಲ್ಲಿ ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ದೀಪಕ್ ವೆಂಕಟೇಶನ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶಾಂತಿ ಸಾಗರ್ ಅವರ ಛಾಯಾಗ್ರಹಣವಿದೆ.

     

    ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ ಪೌಡರ್. ಬಹು ತಾರಾಗಣವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಿದೆ. 2024ರ ಏಪ್ರಿಲ್ 5 ಚಿತ್ರ‌ ಬಿಡುಗಡೆಯಾಗಲಿದೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಈಗಾಗಲೇ ತಿಳಿಸಿದ್ದಾರೆ.

  • ‘ಪೌಡರ್’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್

    ‘ಪೌಡರ್’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್

    ನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್, ಟಿವಿಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಅದರ ಮೊದಲ ಹಂತವಾಗಿ ಇಂದು ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಮೊದಲ ಚಿತ್ರ ಪ್ರಾರಂಭವಾಗಿದೆ. ಈ ಸಿನಿಮಾಗೆ ‘ಪೌಡರ್’ (Powder) ಎಂದು ಹೆಸರಿಡಲಾಗಿದೆ.

    ಪೌಡರ್ ಚಿತ್ರದ ಮುಹೂರ್ತ (Muhurta) ಸಮಾರಂಭವು ವರಮಹಾಲಕ್ಷ್ಮೀ ಹಬ್ಬದಂದು ನಡೆದಿದ್ದು, ಕಿಚ್ಚ ಸುದೀಪ್ (Sudeep) ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ನಿರ್ಮಾಪಕ ಕಾರ್ತಿಕ್ ಗೌಡ ಅವರ ತಂದೆ ರಾಮಕೃಷ್ಣೇಗೌಡ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧನಂಜಯ್, ಸಂತೋಷ್ ಆನಂದರಾಮ್, ರೋಹಿತ್ ಪದಕಿ, ಧೀರೇನ್ ರಾಮಕುಮಾರ್, ನವೀನ್ ಶಂಕರ್, ಕೆ.ಮಂಜು, ಭೂಮಿ ಶೆಟ್ಟಿ, ನಾಗಭೂಷಣ್, ಟಿವಿಎಫ್ ಸಂಸ್ಥಾಪಕರಾದ ಅರುಣಭ್ ಕುಮಾರ್, ವಿಜಯ್ ಕೋಶಿ, ಚೈತನ್ಯ ಕುಂಬಕೋಣಂ ಮುಂತಾದವರು ಹಾಜರಿದ್ದರು.

    ಪೌಡರ್ ಒಂದು ಹಾಸ್ಯಮಯ ಚಿತ್ರವಾಗಿದ್ದು, ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

    ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಈ ಬಹುತಾರಾಗಣದ ಚಿತ್ರದಲ್ಲಿ ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ದೀಪಕ್ ವೆಂಕಟೇಶನ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶಾಂತಿ ಸಾಗರ್ ಅವರ ಛಾಯಾಗ್ರಹಣವಿದೆ.  ನಮ್ಮ ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ ಪೌಡರ್. ಬಹು ತಾರಾಗಣವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. 2024ರ ಏಪ್ರಿಲ್ 5 ಚಿತ್ರ‌ ಬಿಡುಗಡೆಯಾಗಲಿದೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ತಿಳಿಸಿದರು.

    ಕೆ.ಆರ್‌.ಜಿ ಸ್ಟುಡಿಯೋಸ್ ಜೊತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಟಿವಿಎಫ್ ಸಂಸ್ಥೆಯ ಅರುಣಭ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಕಾಮಿಡಿ ಜಾನರ್ ನ ಈ ಕಥೆ ಎಲ್ಲರಿಗೂ ಹಿಡಿಸಲಿದೆ ಎಂದರು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ.  ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಎರಡು ದೊಡ್ಡ ಸಂಸ್ಥೆಗಳು ಸೇರಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ನಾಯಕ ದಿಗಂತ್ (Digant).  ಶರ್ಮಿಳಾ ಮಾಂಡ್ರೆ (Sharmila Mandre), ಧನ್ಯ (Dhanya Ram Kumar), ಅನಿರುದ್ಧ್ ಆಚಾರ್ಯ, ಅಚ್ಯುತ ಕುಮಾರ್, ರವಿಶಂಕರ್ ಗೌಡ ಮುಂತಾದ ಕಲಾವಿದರು “ಪೌಡರ್” ಬಗ್ಗೆ ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಲಿವುಡ್ ‘ಪೌಡರ್’ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ 50 ಸೆಲೆಬ್ರಿಟಿಗಳು

    ಕಾಲಿವುಡ್ ‘ಪೌಡರ್’ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ 50 ಸೆಲೆಬ್ರಿಟಿಗಳು

    ಕಾಲಿವುಡ್ ಬಹು ನಿರೀಕ್ಷಿತ ‘ಪೌಡರ್’ ಚಿತ್ರದ ಟೀಸರ್ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದೆ. ಚಿತ್ರತಂಡ ದಕ್ಷಿಣ ಭಾರತದ 50 ಸೆಲೆಬ್ರಿಟಿಗಳ ಕೈಯಲ್ಲಿ ಟೀಸರ್ ಬಿಡುಗಡೆ ಮಾಡಿಸುವ ಮೂಲಕ ವಿಶೇಷತೆ ಮೆರೆದಿದೆ. ರಾಣಾ ದಗ್ಗುಬಾಟಿ, ಮಮ್ಮುಟ್ಟಿ, ಎ.ಆರ್ ರೆಹಮಾನ್, ರಿತಿಕ್ ಸಿಂಗ್, ತಮನ್ನಾ, ಆರ್ ಮಾಧವನ್ ಸೇರಿದಂತೆ 50 ಸೆಲೆಬ್ರಿಟಿಗಳು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ಗಳಲ್ಲಿ ‘ಪೌಡರ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ವಿಭಿನ್ನವಾಗಿ ಟೀಸರ್ ಬಿಡುಗಡೆ ಮಾಡಿ ಗಮನ ಸೆಳೆದಿರುವ ‘ಪೌಡರ್’ ಚಿತ್ರ ಟೀಸರ್ ಮೂಲಕವೂ ಕ್ಯೂರಿಯಾಸಿಟಿ ಹುಟ್ಟುಹಾಕಿದೆ.

    ತಮಿಳು ಚಿತ್ರರಂಗದ ಜನಪ್ರಿಯ ಪಿಆರ್‍ಓ ನಿಖಿಲ್ ಮುರುಕನ್ ‘ಪೌಡರ್’ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪವರ್ ಫುಲ್ ಸಬ್ಜೆಕ್ಟ್ ಮೂಲಕ ನಿಖಿಲ್ ಮುರುಕನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ತಮ್ಮ ಬಹು ವರ್ಷಗಳ ಕನಸು ನನಸು ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಿಖಿಲ್ ಮುರುಕನ್ ಬಣ್ಣಹಚ್ಚಿದ್ದು, ನಟಿ ವಿದ್ಯಾ ಪ್ರದೀಪ್ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

    ಕ್ರೈಂ, ಥ್ರಿಲ್ಲರ್ ಕಥಾಹಂದರವುಳ್ಳ ‘ಪೌಡರ್’ ಚಿತ್ರವನ್ನು ಈ ಹಿಂದೆ ‘ದಾ ದಾ 87’ ಚಿತ್ರ ನಿರ್ದೇಶಿಸಿದ್ದ ವಿಜಯ್ ಶ್ರೀ ಜಿ ನಿರ್ದೇಶನ ಮಾಡುತ್ತಿದ್ದಾರೆ. ನರ ಮನುಷ್ಯರ ಮಾಂಸ ಮಾರಾಟ ಮಾಫಿಯಾ ಸುತ್ತಾ ಹೆಣೆಯಲಾದ ಕ್ರೈಂ ಥ್ರಿಲ್ಲರ್ ಚಿತ್ರ ಎನ್ನುವುದನ್ನು ಟೀಸರ್ ತುಣುಕು ಹೇಳುತ್ತಿದ್ದು ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಟೀಸರ್ ಬಿಜಿಎಂ ಸಖತ್ ಕಿಕ್ ನೀಡುತ್ತಿದ್ದು, ಚಿತ್ರದ ಮೇಲೆ ಸಿನಿ ಪ್ರೇಮಿಗಳಲ್ಲಿ ಬಾರೀ ನಿರೀಕ್ಷೆ ಮೂಡಿಸಿದೆ.

    ಆರಂಭದಲ್ಲೇ ಸಖತ್ ಸೌಂಡ್ ಮಾಡುತ್ತಿರುವ ‘ಪೌಡರ್’ ಚಿತ್ರದ ತಾರಾಬಳಗದಲ್ಲಿ ಮೊಟ್ಟ ರಾಜೇಂದ್ರನ್, ಮನೋಬಲ್, ಮನೋಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರಾಜಪಂಡ್ರಿ ಕ್ಯಾಮೆರಾ ಕೈಚಳಕ, ಸ್ಯಾಮ್ ಸಿ.ಎಸ್ ಸಂಗೀತ ನಿರ್ದೇಶನವಿದ್ದು, ಜಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ಜಯ ಶ್ರೀ ವಿಜಯ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.