Tag: ಪೋಸ್ಟ್ ಆಫೀಸ್

  • ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ

    ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ

    ಚಿಕ್ಕಬಳ್ಳಾಪುರ: ಬಡವರು, ದಿನ ಕೂಲಿ, ನಾಲಿ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಕಷ್ಟಕ್ಕೆ ಬೇಕಾಗುತ್ತೆ ಎಂದು ಪೋಸ್ಟ್ ಆಫೀಸ್‍ಗೆ 100-200 ರೂ.ಗಳನ್ನು ಠೇವಣಿ ಕಟ್ಟುತ್ತಿದ್ರು. ಆದ್ರೆ ಜನರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್‍ ಪೋಸ್ಟ್ ಆಫೀಸ್‍ಗೆ ದುಡ್ಡು ಕಟ್ಟದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಚೆನ್ನಾಗಿ ಮಜಾ ಮಾಡಿದ್ದಾನೆ. ಈ ವಿಷಯ ತಿಳಿದ ಜನರು ತಮ್ಮ ಹಣ ವಾಪಸ್ ನೀಡುವಂತೆ ಧರಣಿ ಕುಳಿತಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಅಂಚೆಕಚೇರಿಯಲ್ಲಿ ಈ ಘಟನೆ ನಡೆದಿದೆ. ಕಷ್ಟಕಾಲಕ್ಕೆ ಆಗಲಿ ಎಂದು ಅಂಚೆ ಕಚೇರಿಯಲ್ಲಿ ಪ್ರತಿದಿನ ತಾವು ದುಡಿದ ಹಣದಲ್ಲಿ ಬಡಮಧ್ಯಮ ವರ್ಗದ ಜನ ಒಂದಿಷ್ಟು ಅಂತ ಉಳಿತಾಯ ಮಾಡಿ ಠೇವಣಿ ಮಾಡ್ತಿದ್ರು. ಅದು ನೇರವಾಗಿ ಪೋಸ್ಟ್‌ಮ್ಯಾನ್‍ ಕೈಗೆ ದುಡ್ಡು ಕೊಡುತ್ತಿದ್ರು. ಹೀಗೆ ಪೋಸ್ಟ್‌ ಮ್ಯಾನ್‍ಗೆ ಹಣ ಕಟ್ಟಿದ್ದ ಜನ ಕಷ್ಟ ಇದೆ ಅಂತ ಪೋಸ್ಟ್ ಅಫೀಸ್‍ಗೆ ಹೋಗಿ ಹಣ ಡ್ರಾ ಮಾಡುವುದಕ್ಕೆ ಹೋದ್ರೆ ಅವರಿಗೆ ಶಾಕ್ ಆಗಿದೆ. ಇದನ್ನೂ ಓದಿ:  ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದ ಪ್ರಿನ್ಸಿಪಾಲ್ – ಆಕ್ರೋಶಗೊಂಡ ಗ್ರಾಮಸ್ಥರು 

    ದಿನ ಹಣ ಕಟ್ಟುತ್ತಿದ್ರೂ ಅವರ ಖಾತೆಗಳಲ್ಲಿ ಹಣವೇ ಇರಲಿಲ್ಲ. ಅರೇ ಇದೇನಪ್ಪಾ ಅಂತ ಪೋಸ್ಟ್‌ಮ್ಯಾನ್‍ ಕರೆಸಿ ವಿಚಾರಣೆ ಮಾಡಿದಾಗ ಆಸಲಿ ಸತ್ಯ ತಿಳಿದುಬಂದಿದೆ. ಬಡವರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್‍ ಇವರಿಗೆ ನಕಲಿ ಸೀಲ್ ಸಹಿ ಮಾಡಿದ ರಸೀದಿ ನೀಡಿದ್ದಾನೆ. ಈ ಹಣವನ್ನ ಪೋಸ್ಟ್ ಆಫೀಸ್‍ಗೆ ಕಟ್ಟಿಲ್ಲ. ಇದ್ರಿಂದ ಹಣ ಕಳೆದುಕೊಂಡ ಜನ ಈಗ ಅಂಚೆ ಕಚೇರಿಗೆ ಬಂದು ತಮ್ಮ ಹಣ ಕೊಡುವಂತೆ ಧರಣಿ ಕೂತಿದ್ದಾರೆ.

    ಚಿಕ್ಕಬಳ್ಳಾಪುರ ನಗರ ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್‍ ಜಯರಾಜ್ ಈ ವಂಚನೆ ಮಾಡಿದ್ದಾನೆ. ಹಲವು ದಿನಗಳಿಂದಲೂ ಜನರಿಂದ ಹಣ ಪಡೀತಿದ್ದ ಈತ ಅದನ್ನು ಪೋಸ್ಟ್ ಆಫೀಸ್‍ಗೆ ಜಮಾ ಮಾಡದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಜನರ ದುಡ್ಡನ್ನ ದುರ್ಬಳಕೆ ಮಾಡಿಕೊಂಡಿದ್ದಾನೆ. ಇದರಿಂದ ಹಣ ಕಟ್ಟಿದವರಿಗೆ ಈಗ ದಿಕ್ಕು ತೋಚದಂತಾಗಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್ 

    30 ಜನರ ಬಳಿ ಸರಿಸುಮಾರು 13 ಲಕ್ಷ ಹಣವನ್ನ ಸ್ವಂತಕ್ಕೆ ಬಳಸಿಕೊಂಡಿರೋ ಬಗ್ಗೆ ಜಯರಾಜ್ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಜಮೀನು ಮಾರಿ ಹಣ ವಾಪಾಸ್ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾನೆ. ಇತ್ತ ವಂಚನೆ ಮಾಡಿದ ಜಯರಾಜ್‌ನನ್ನು ಇಲಾಖೆ ಅಮಾನತು ಮಾಡಿದ್ದು, ತಮ್ಮ ದುಡ್ಡು ಅದ್ಯಾವಾಗ ಸಿಗುತ್ತೋ ಇಲ್ವೋ ಅಂತ ಬಡ ಜನರು ಅಂಚೆ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿ ಹಣಕ್ಕಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ನಿಶ್ಚಿತಾರ್ಥವಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಯುವತಿ

    ನಿಶ್ಚಿತಾರ್ಥವಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಯುವತಿ

    ಚಿತ್ರದುರ್ಗ: ಎಷ್ಟೋ ಜನ ಹದಿಹರೆಯದ ಯುವಕ, ಯುವತಿಯರು ಉದ್ಯೋಗ ಸಿಗಲಿಲ್ಲ, ಲೈಫ್ ಸೆಟ್ಲ್ ಆಗ್ತಿಲ್ಲ ಎಂದು ಪರದಾಡುತ್ತಾರೆ. ಆದರೆ ಇಲ್ಲೊಬ್ಬಲು ಯುವತಿಗೆ ಸರ್ಕಾರಿ ಉದ್ಯೋಗ ಸಿಕ್ಕಿ, ಇನ್ನೇನೂ ಮದುವೆ ತಯಾರಿಯಲ್ಲಿ ಮನೆಯವರಿದ್ದರು. ಆದರೆ ಎಂಗೇಜ್ಮೆಂಟ್ ಆಗಿ ಒಂದೇ ತಿಂಗಳಲ್ಲಿ ಹುಡುಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮಾನಸ (22) ಎಂದು ಗುರುತಿಸಲಾಗಿದೆ. ಮಾನಸ ಸರ್ಕಾರಿ ಉದ್ಯೋಗ ಸಿಕ್ಕಿ, ಲೈಫ್ ಎಂಜಾಯ್ ಮಾಡೋ ಟೈಮಲ್ಲಿ ಅನುಮಾನಸ್ಪದವಾಗಿ ಆ್ಯಸಿಡ್ ಕುಡಿದು, ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮಾನಸಗೆ ಚಿಕ್ಕ ವಯಸ್ಸಿಗೆ ತನ್ನ ಕಾಲ ಮೇಲೆ ತಾನೇ ನಿಂತು ಇತರರಿಗೆ ಸ್ಪೂರ್ತಿ ಆಗುವಂತಹ ಅವಕಾಶ ಸಿಕ್ಕಿತ್ತು. ಆದರೆ ಈಕೆ ಮೇಲೆ ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮಾನಸಿಕವಾಗಿ ಈಕೆ ಕುಗ್ಗಿ ಹೋಗಿದ್ದಳು. ತನ್ನನ್ನು ತಾನೇ ದ್ವೇಷಿಸಿಕೊಳ್ಳುವಷ್ಟು ನೊಂದಿದ್ದಳು. ಹೀಗಾಗಿ ಒಂದಲ್ಲ, ಎರಡಲ್ಲ ಸತತ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೂ ಇಂದು ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಈಚಲಗೆರೆ ಗ್ರಾಮದ ಬಳಿ ತನ್ನ ದ್ವಿಚಕ್ರ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ, ಕತ್ತನ್ನು ಕೊಯ್ದುಕೊಂಡು, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದು, ಈಕೆಯ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇದನ್ನೂ ಓದಿ: 2 ಲಕ್ಷ ಮೌಲ್ಯದ ಚಿನ್ನಾಭರಣ, ಹಣವಿರುವ ಬ್ಯಾಗ್ ಹಿಂದಿರುಗಿಸಿದ ಆಟೋ ಚಾಲಕ..!

    ಮಾನಸ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಪೋಸ್ಟ್  ಆಫೀಸ್‍ನಲ್ಲಿ ಪೋಸ್ಟ್  ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತಿದ್ದಳು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಸರ್ಕಾರಿ ಉದ್ಯೋಗಿ ಯವಕನೊಂದಿಗೆ ಎಂಗೇಜ್ಮೆಂಟ್ ಆಗಿತ್ತು. ಆದರೆ ಇದೀಗ ಮಾನಸ ದಿಢೀರ್ ಎಂದು ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನ ಮೂಡಿಸಿದೆ.

    ಮಾನಸ ದಾರಿ ಮಧ್ಯೆ ಆ್ಯಸಿಡ್ ಸೇವಿಸಿದ ಪರಣಾಮ ಆಕೆಯ ದೇಹದ ಒಳಗಿನ ಭಾಗ ಸಂಪೂರ್ಣ ಸುಟ್ಟು ಹೋಗಿವೆ, ಅಲ್ಲದೇ ಕುತ್ತಿಗೆಯನ್ನು ಸಹ ಚಾಕುವಿನಿಂದ ಕೊಯ್ದಕೊಂಡಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ. ಆದರೆ ದಿಢೀರ್ ಅಂತ ಈ ರೀತಿ ಸಾವಿಗೀಡಾದ ಪರಿಣಾಮ ಈ ಸಾವಿನ ಸುತ್ತ ಸಾರ್ವಜನಿಕವಾಗಿ ಬಾರಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಎಸ್‍ಪಿ ರಾಧಿಕಾ ನೇತೃತ್ವದಲ್ಲಿ ನಿಗೂಢ ಸಾವಿನ ಬಗ್ಗೆ ತನಿಖೆಯನ್ನು ಚುರುಕುಗೊಳಿಸಲಾಗಿದೆ.

    ಆತ್ಮಹತ್ಯೆಯ ಬಳಿಕ ಮಾನಸನ ಕುಟುಂಬಸ್ಥರು ಹಾಗೂ ಈ ಪ್ರಕರಣದ ಬಗ್ಗೆ ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ ಅವರು ಪ್ರತಿಕ್ರಿಯಿಸಿದ್ದು, ಮಾನಸ ಹಲವು ದಿನಗಳಿಂದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದಿದ್ದಾರೆ.

  • ಪೋಸ್ಟ್ ಆಫೀಸ್ ನೌಕರರಿಂದ ಮಾದಕ ವಸ್ತು ಮಾರಾಟ- ನಾಲ್ವರ ಬಂಧನ

    ಪೋಸ್ಟ್ ಆಫೀಸ್ ನೌಕರರಿಂದ ಮಾದಕ ವಸ್ತು ಮಾರಾಟ- ನಾಲ್ವರ ಬಂಧನ

    – ಬಂಧಿತರಲ್ಲಿ ಓರ್ವ ಸೇನೆಯಲ್ಲಿದ್ದ?

    ಬೆಂಗಳೂರು: ವಿದೇಶಗಳಿಂದ ಪೋಸ್ಟ್ ಮೂಲಕ ಮಾದಕ ವಸ್ತುಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದ 4 ಮಂದಿ ಅಂಚೆ ಕಚೇರಿಯ ನೌಕರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

    ಸುಬ್ಬ, ರಮೇಶ್ ಕುಮಾರ್, ಸೈಯದ್ ಮಾಜಿದ್, ವಿಜಯರಾಜನ್ ಬಂಧಿತ ಅಂಚೆ ಕಚೇರಿಯ ಆರೋಪಿಗಳು. ಇವರು ಬೆಂಗಳೂರಿನ ಜಿಪಿಒ ಕಚೇರಿ ಮತ್ತು ಚಾಮರಾಜಪೇಟೆಯ ಪೋಸ್ಟ್ ಆಫೀಸ್ ನಲ್ಲಿ ವಿದೇಶಗಳಿಂದ ಬರುವ ಪೋಸ್ಟಲ್ ಗಳು ಹಾಗೂ ಪಾರ್ಸೆಲ್ ಗಳನ್ನ ಪರಿಶೀಲಿಸುವ ಹುದ್ದೆಯಲ್ಲಿದ್ದಾರೆ.

    ನೆದರ್ಲೆಂಡ್, ಡೆನ್ಮಾರ್ಕ್, ಯುಎಸ್ ಗಳಿಂದ ಬರುವ ಆರ್ಡಿನರಿ ಪೋಸ್ಟ್ ಕಾರ್ಡ್ ಗಳು ಹಾಗೂ ಪಾರ್ಸೆಲ್ ಗಳನ್ನ ಪರಿಶೀಲಿಸಿ ಅವುಗಳಲ್ಲಿ ಮಾದಕವಸ್ತುಗಳು ಇದ್ದರೆ ಡೀಲರ್ ಗಳಿಗೆ ಮಾರಿ ಹಣ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಇದಲ್ಲದೆ ಇವರೇ ನಕಲಿ ಅಡ್ರೆಸ್ ನೀಡಿ ಡಾರ್ಕ್ ನೆಟ್ ಮೂಲಕ ಖರೀದಿ ಕೂಡ ಮಾಡುತ್ತಿದ್ದರು.

    ಸದ್ಯ ಬಂಧಿತರಿಂದ 20 ಲಕ್ಷ ಬೆಲೆಯ ಎಕ್ಸ್ ಟಾಸಿ ಮಾತ್ರೆಗಳು, ಎಂಡಿಎಂ ಎ ಕ್ರಿಸ್ಟೆಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ವಿಜಯ್ ರಾಜ್ ಈ ಹಿಂದೆ ಸೇನೆಯಲ್ಲಿ ಸಹ ಕೆಲಸ ಮಾಡಿದ್ದಾಗಿ ತಿಳಿದು ಬಂದಿದೆ. ಇದೀಗ ಸರ್ಕಾರಿ ಹುದ್ದೆಯನ್ನ ಮಾದಕ ವಸ್ತುಗಳ ಮಾರಾಟಕ್ಕೆ ಬಳಸಿಕೊಂಡ ಆರೋಪದ ಮೇಲೆ ಎಲ್ಲರನ್ನೂ ಬಂಧಿಸಿ ಜೈಲಿಗಟ್ಟಲಾಗಿದೆ.

  • ಕೆಲಸದ ವೇಳೆ ಪೋಸ್ಟ್ ಆಫೀಸ್‍ನಲ್ಲೇ ಗುಂಡು ಪಾರ್ಟಿ

    ಕೆಲಸದ ವೇಳೆ ಪೋಸ್ಟ್ ಆಫೀಸ್‍ನಲ್ಲೇ ಗುಂಡು ಪಾರ್ಟಿ

    ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಪೋಸ್ಟ್ ಆಫೀಸ್‍ನಲ್ಲಿಯೇ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿರುವುದು ಬೆಳಕಿಗೆ ಬಂದಿದೆ.

    ಪೋಸ್ಟ್ ಆಫೀಸ್ ಸಿಬ್ಬಂದಿ ಯಾರ ಭಯವಿಲ್ಲದೇ ಕೆಲಸದ ವೇಳೆಯಲ್ಲಿ ಬಿಂದಾಸ್ ಆಗಿ ಗುಂಡು ಹಾಕಿದ್ದಾರೆ. ಕರನೇಶ್ ಮತ್ತು ದಯಾನಂದ್ ಎಂಬವರು ಕಚೇರಿಯಲ್ಲಿ ಮದ್ಯ ತೆಗೆದುಕೊಂಡು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಚೇರಿಗೆ ಬರುವ ವೇಳೆಯಲ್ಲಿ ಕಚೇರಿಯ ಸಿಬ್ಬಂದಿ ಮದ್ಯಪಾನ ಮಾಡಿ ಬರ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಕೆಲವು ದಿನಗಳ ಹಿಂದೆ ವಿಜಯಪುರ ಪೊಲೀಸ್ ಠಾಣೆಯ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿ ಸುದ್ದಿಯಾಗಿದ್ರು. ಈ ಪ್ರಕರಣ ಮಾಸುವ ಮುನ್ನವೇ ಅಂತಹುದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ವಿಡಿಯೋ: ಪೊಲೀಸ್ ಠಾಣೆಯಲ್ಲಿ ಹಾಡಹಗಲೇ ಎಣ್ಣೆ ಪಾರ್ಟಿ- ಮಹಿಳಾ ಪೇದೆಯೇ ಸರ್ವರ್