Tag: ಪೋಲೀಸ್

  • ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡ ಮಹಿಳೆಯರು

    ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡ ಮಹಿಳೆಯರು

    – ಸಿಸಿಟಿವಿಯಲ್ಲಿ ಸೆರೆಯಾಯ್ತು ಹೊಡೆದಾಟದ ದೃಶ್ಯ

    ಬೆಂಗಳೂರು: ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಮಹಿಳೆಯರಿಬ್ಬರು ಮಾರಮಾರಿ ಬಡಿದಾಡಿಕೊಂಡಿರುವ ಘಟನೆ ಜೆಪಿ ನಗರದ ಎಸ್.ವಿ ಇನ್‍ಫ್ರಾ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.

    ಒಂದೇ ಅಪಾರ್ಟ್‍ಮೆಂಟ್‍ನಲ್ಲಿ ಬೇರೆ ಬೇರೆ ಫ್ಲಾಟ್‍ಗಳಲ್ಲಿ ವಾಸವಿರೋ ಕುಮಾರಿ ಹಾಗೂ ವರಲಕ್ಷ್ಮಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಕಳೆದ 14ರಂದು ಚಪ್ಪಲಿ ಸ್ಟಾಂಡ್ ವಿಚಾರಕ್ಕೆ ವರಲಕ್ಷ್ಮಿ ಹಾಗೂ ಕುಮಾರಿ ನಡುವೆ ಗಲಾಟೆ ಶುರುವಾಗಿತ್ತು. ಕುಮಾರಿ ಅವರ ಚಪ್ಪಲಿ ಸ್ಟ್ಯಾಂಡ್ ಅನ್ನು ವರಲಕ್ಷ್ಮಿ ಡ್ಯಾಮೇಜ್ ಮಾಡಿದ್ದರು.

    ಹೂವಿನ ಫಾಟ್‍ನಿಂದ ಚಪ್ಪಲಿ ಸ್ಟ್ಯಾಂಡ್‍ಗೆ ಹೊಡೆದು ವರಲಕ್ಷ್ಮಿ ಸ್ಟ್ಯಾಂಡ್ ಅನ್ನು ಡ್ಯಾಮೇಜ್ ಮಾಡಿದ್ದರು. ಇದನ್ನು ಪಕ್ಕದ ಫ್ಲಾಟ್‍ನ ನಿವಾಸಿ ಕುಮಾರಿ ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ, ಗಲಾಟೆ ಜೋರಾಗಿ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಮಹಿಳಾಮಣಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಈ ದೃಶ್ಯ ಅಪಾರ್ಟ್‍ಮೆಂಟ್‍ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಗಲಾಟೆ ಸಂಬಂಧ ಮಹಿಳೆಯರಿಬ್ಬರು ಒಬ್ಬರ ಮೇಲೊಬ್ಬರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ನಲಪಾಡ್ ಹಲ್ಲೆ ಪ್ರಕರಣ- ಯುಬಿ ಸಿಟಿಯ ಫರ್ಜಿ ಕೆಫೆಗೆ ರೀ ಓಪನ್ ಭಾಗ್ಯ

    ನಲಪಾಡ್ ಹಲ್ಲೆ ಪ್ರಕರಣ- ಯುಬಿ ಸಿಟಿಯ ಫರ್ಜಿ ಕೆಫೆಗೆ ರೀ ಓಪನ್ ಭಾಗ್ಯ

    ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್, ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಯುಬಿ ಸಿಟಿಯ ಫರ್ಜಿ ಕೆಫೆಯ ರೆಸ್ಟೋರೆಂಟ್ ರೀ ಓಪನ್ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ.

    ನಲಪಾಡ್ ಪ್ರಕರಣದ ವಿವಾದಿತ ಕೇಂದ್ರಬಿಂದು ಯುಬಿ ಸಿಟಿಯ ಫರ್ಜಿ ಕೆಫೆ ರೀ ಓಪನ್ ಮಾಡಲು ಕಬ್ಬನ್ ಪಾರ್ಕ್ ಪೋಲೀಸರು ಅನುಮತಿ ನೀಡಿದ್ದು, ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

    ಷರತ್ತುಗಳು ಈ ಕೆಳಗಿನಂತಿವೆ.
    1. ಕೆಫೆಯ ಒಳಗೆ ಧೂಮಪಾನಕ್ಕೆ ಅವಕಾಶ ನೀಡಬಾರದು.
    2. ಎಷ್ಟು ಟೇಬಲ್‍ಗಳು ಇರುತ್ತವೆಯೋ ಅದಕ್ಕಿಂತ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಹೆಚ್ಚಿಗೆ ಒಳಗೆ ಇರುವಂತಿಲ್ಲ.
    3. ಗಲಾಟೆಗಳಾದಂತಹ ಸಂದರ್ಭದಲ್ಲಿ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಬೇಕು.

    ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆಯಾದ ಬಳಿಕ ಪೊಲೀಸರು ಕೆಫೆಯನ್ನು ಕ್ಲೋಸ್ ಮಾಡಿದ್ದರು. ಸದ್ಯ ಪೊಲೀಸರು ಕೆಲವು ಷರತ್ತುಗಳನ್ನು ವಿಧಿಸಿ ಕೆಫೆ ತೆರೆಯಲು ಅನುಮತಿ ನೀಡಿದ್ದಾರೆ.

    ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.