Tag: ಪೋಲಾರ್ಡ್

  • 3 ಕ್ಯಾಚ್ ಡ್ರಾಪ್, ನೀರಸ ಫೀಲ್ಡಿಂಗ್- ವಿಂಡೀಸ್‍ಗೆ 8 ವಿಕೆಟ್ ಗಳ ಜಯ

    3 ಕ್ಯಾಚ್ ಡ್ರಾಪ್, ನೀರಸ ಫೀಲ್ಡಿಂಗ್- ವಿಂಡೀಸ್‍ಗೆ 8 ವಿಕೆಟ್ ಗಳ ಜಯ

    ತಿರುವನಂತಪುರಂ: ಟಿ20 ಸರಣಿಯ 2ನೇ ಪಂದ್ಯದಲ್ಲೂ ಟೀಂ ಇಂಡಿಯಾ ನಿರಸ ಫೀಲ್ಡಿಂಗ್ ಪ್ರದರ್ಶನ ನೀಡಿದ ಪರಿಣಾಮ ವೆಸ್ಟ್ ಇಂಡೀಸ್ 8 ವಿಕೆಟ್ ಗಳ‌ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಸರಣಿ ಈಗ 1-1ರಲ್ಲಿ ಜಯ ಸಮಗೊಂಡಿದೆ.

    ತಿರುವನಂತಪುರಂನ ಗ್ರೀನ್‍ಫಿಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಲೆಂಡ್ಲ್ ಸಿಮನ್ಸ್ 67 ರನ್, ಎನಿನ್ ಲೂಯಿಸ್ 40 ರನ್, ನಿಕೋಲಸ್ ಪೂರನ್ 38  ರನ್‍ಗಳ ಸಹಾಯದಿಂದ 18.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ173 ರನ್‍ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.

    ಕ್ಯಾಚ್ ಡ್ರಾಪ್:
    ಇನ್ನಿಂಗ್ಸ್‌ನ 3ನೇ ಓವರ್ ಮುಕ್ತಾಯಕ್ಕೆ ವಿಂಡೀಸ್ ತಂಡವು 22 ರನ್ ಗಳಿಸಿತ್ತು. ಈ ವೇಳೆ ಬೌಲಿಂಗ್ ಆರಂಭಿಸಿದ ವಾಷಿಂಗ್ಟನ್ ಸುಂದರ್ ಕೇವಲ ಒಂದು ನೀಡಿ ರನ್ ರೇಟ್‍ಗೆ ಬ್ರೇಕ್ ಹಾಕಿದರು. ಬಳಿಕ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಕೂಡ ಎರಡು ರನ್ ನೀಡಿ ತಂಡಕ್ಕೆ ಆಸರೆ ಆದರು. ಆದರೆ ಈ ಓವರ್ ನ ಎರಡನೇ ಎಸೆತದಲ್ಲಿ ಲೆಂಡ್ಲ್ ಸಿಮನ್ಸ್ ನೀಡಿದ ಕ್ಯಾಚ್ ಅನ್ನು ವಾಷಿಂಗ್ಟನ್ ಸುಂದರ್ ಕೈಚೆಲ್ಲಿದರು. ಈ ಬೆನ್ನಲ್ಲೇ ನಾಲ್ಕನೇ ಎಸೆತದಲ್ಲಿ ಎನಿನ್ ಲೂಯಿಸ್ ನೀಡಿದ್ದ ಕ್ಯಾಚ್ ಅನ್ನು ರಿಷಭ್ ಪಂತ್ ಕೈಬಿಟ್ಟರು. ಜೀವದಾನ ಪಡೆದ ಈ ಜೋಡಿ ಭರ್ಜರಿ ಬ್ಯಾಟಿಂಗ್ ಮುಂದುವರಿಸಿತು.

    ಲೆಂಡ್ಲ್ ಸಿಮನ್ಸ್ ಹಾಗೂ ಎನಿನ್ ಲೂಯಿಸ್ ಜೋಡಿಯು ಇನ್ನಿಂಗ್ಸ್ ನ 9ನೇ ಓವರ್ ಮುಕ್ತಾಯಕ್ಕೆ 71 ರನ್ ಸಿಡಿಸಿತ್ತು. ಬಳಿಕ ವಾಷಿಂಗ್ಟ್ ಸುಂದರ್ ಬೌಲಿಂಗ್ ವೇಳೆ ಕೈಚಳಕ ತೋರಿದ ಪಂತ್ ಎನಿನ್ ಲೂಯಿಸ್ ವಿಕೆಟ್ ಕಿತ್ತರು. ಎನಿನ್ ಲೂಯಿಸ್ 35 ಎಸೆತಗಳಲ್ಲಿ (3 ಬೌಂಡರಿ, 3 ಸಿಕ್ಸರ್) 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಶ್ರಿಮೊನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. 13ನೇ ಓವರ್ ನಲ್ಲಿ ಜಡೇಜಾ ಬೌಲಿಂಗ್ ಎರಡು ಸಿಕ್ಸರ್ ಸಿಡಿಸಿದ್ದ ಹೆಟ್ಮೆಯರ್ ಮತ್ತೊಮ್ಮೆ ಬೌಂಡರಿ ಸಿಡಿಸಲು ಯತ್ನಿಸಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರು. 14 ಎಸೆತಗಳಲ್ಲಿ ಹೆಟ್ಮೆಯರ್ 3 ಸಿಕ್ಸರ್ ಸೇರಿ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ಬಳಿಕ ಮೈದಾನಕ್ಕಿಳದ ನಿಕೋಲಸ್ ಪೂರನ್ ಲೆಂಡ್ಲ್ ಸಿಮನ್ಸ್ ಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 17ನೇ ಓವರ್ ನಲ್ಲಿ ಶ್ರೇಯಸ್ ಅಯ್ಯರ್ ಕ್ಯಾಚ್ ಕೈಚೆಲ್ಲಿಸಿದರು. ಪರಿಣಾಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ವಿಂಡೀಸ್ ಜಯಗಳಿಸಿತು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಶಿವಂ ದುಬೆ 54 ರನ್, ರಿಷಭ್ ಪಂತ್ 33 ರನ್‍ಗಳ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿತ್ತು.

  • ಕೆಣಕಿದ ಪೋಲಾರ್ಡ್‍ಗೆ 3 ಸಿಕ್ಸರ್‌ಗಳಿಂದ ಉತ್ತರ ನೀಡಿದ ಶಿವಂ- ವಿಂಡೀಸ್‍ಗೆ 171 ರನ್‍ಗಳ ಗುರಿ

    ಕೆಣಕಿದ ಪೋಲಾರ್ಡ್‍ಗೆ 3 ಸಿಕ್ಸರ್‌ಗಳಿಂದ ಉತ್ತರ ನೀಡಿದ ಶಿವಂ- ವಿಂಡೀಸ್‍ಗೆ 171 ರನ್‍ಗಳ ಗುರಿ

    ತಿರುವನಂತಪುರಂ: ಕೆಣಕಿದ ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್ ಟೀಂ ಇಂಡಿಯಾ ಆಲ್‍ರೌಂಡರ್ ಶಿವಂ ದುಬೆ ಸಿಕ್ಸರ್‌ಗಳ ಮೂಲಕವೇ ಉತ್ತರ ನೀಡಿದ್ದಾರೆ. ದುಬೆ ಅರ್ಧಶತಕದ ಸಹಾಯದಿಂದ ಭಾರತವು ವಿಂಡೀಸ್ ತಂಡಕ್ಕೆ 171 ರನ್‍ಗಳ ಗುರಿ ನೀಡಿದೆ.

    ತಿರುವನಂತಪುರಂನ ಗ್ರೀನ್‍ಫಿಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ಭಾರತ ಶಿವಂ ದುಬೆ 54 ರನ್, ರಿಷಭ್ ಪಂತ್ 33 ರನ್ ಗಳ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಆರಂಭದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಶಕ್ತವಾಯಿತು. ಇನ್ನಿಂಗ್ಸ್ ನ 4ನೇ ಓವರ್ ನಲ್ಲಿ ಕೆ.ಎಲ್.ರಾಹುಲ್ (11 ರನ್) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕೆ ಇಳಿದ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಆರಂಭಿಸಿ, ರೋಹಿತ್ ಶರ್ಮಾಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 7ನೇ ಓವರ್ ಮುಕ್ತಾಯಕ್ಕೆ ಭಾರತ 45 ರನ್ ಗಳಿಸಿತ್ತು. ಈ ವೇಳೆ ರನ್ ರೇಟ್ ಏರಿಸಲು ಮುಂದಾಗಿದ್ದ ರೋಹಿತ್ ಶರ್ಮಾ (15 ರನ್) ವಿಕೆಟ್ ಒಪ್ಪಿಸಿದರು.

    ಶಿವಂ ಅರ್ಧಶತಕ:
    ಇನ್ನಿಂಗ್ಸ್ ನ 9ನೇ ಓವರ್‌ನ 2 ಎರಡನೇ ಎಸೆತದಲ್ಲಿ ಶಿವಂ ದುಬೆ ಎರಡು ರನ್ ಕದಿಯಲು ಮುಂದಾಗಿದ್ದರು. ಈ ವೇಳೆ ಬೌಲರ್ ಪೋಲಾರ್ಡ್ ಪಿಚ್ ಮಧ್ಯೆ ನಿಂತು ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡ ಶಿವಂ ದುಬೆ, ಮೂರನೇ ಎಸೆತವನ್ನು ಸಿಕ್ಸರ್ ಸಿಡಿಸಿದರು. ಇದರಿಂದ ವಿಚಲಿತಗೊಂಡ ಪೋಲಾರ್ಡ್ ನಿರಂತರ ಎರಡು ವೈಡ್ ಎಸೆದರು. ಬಳಿಕ ಬ್ಯಾಟ್‌ಗೆ ಸಿಕ್ಕ ಎರಡು ಎಸೆತಗಳನ್ನು ಶಿವಂ ದುಬೆ ಸಿಕ್ಸ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಶಿವಂ ಒಂದು ರನ್ ಗಳಿಸಿದರು. ಈ ಮೂಲಕ ಇನ್ನಿಂಗ್ಸ್‌‌ನ 9ನೇ ಓವರ್‌ನಲ್ಲಿ ಪೋಲಾರ್ಡ್ 23 ರನ್ ನೀಡಿದರು.

    ಸ್ಫೋಟಕ ಬ್ಯಾಟಿಂಗ್‍ನಿಂದ ಶಿವಂ ದುಬೆ 27 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದರು. ಇದು ಅವರ ಟಿ20 ವೃತ್ತಿಜೀವನದ ಮೊದಲ ಅರ್ಧಶತಕವಾಗಿದೆ. ಶಿವಂ ಅರ್ಧಶತಕದ ಬಳಿಕ ಎಸೆತಗಳನ್ನು ಬೌಂಡರಿಗೆ ಅಟ್ಟಲು ಮುಂದಾಗಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 30 ಎಸೆತಗಳಲ್ಲಿ (3 ಬೌಂಡರಿ, 4 ಸಿಕ್ಸರ್) 54 ರನ್ ಗಳಿಸಿ ಕ್ಯಾಚ್ ನೀಡಿ, ಪೆವಿಲಿಯನ್‍ಗೆ ತೆರಳಿದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ (19 ರನ್) ವಿಕೆಟ್ ಒಪ್ಪಿಸಿದರು.

    ರೋಹಿತ್‍ರನ್ನ ಹಿಂದಿಕ್ಕಿದ ಕೊಹ್ಲಿ:
    ಅಂತರಾಷ್ಟ್ರೀಯ ಟಿ20 ರನ್ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ದಾಖಲೆಸಿದ ಬ್ಯಾಟ್ಸ್‌ಮನ್ ಪೈಕಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರು. ಪಂದ್ಯದಲ್ಲಿ 19 ಗಳಿಸಿದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 2,563 ರನ್ ಗಳಿಸುವ ಮೂಲಕ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. 2,547 ಗಳಿಸಿದ ರೋಹಿತ್ ಶರ್ಮಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

    ವಿರಾಟ್ ಕೊಹ್ಲಿ ವಿಕೆಟ್ ಬಳಿಕ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ (10 ರನ್) ಹಾಗೂ ರವೀಂದ್ರ ಜಡೇಜಾ (9 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮಧ್ಯೆ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸುತ್ತ ಸಾಗಿಸಿದರು. ಔಟಾಗದೆ ರಿಷಭ್ ಪಂತ್ 22 ಎಸೆತಗಳಲ್ಲಿ (3 ಬೌಂಡರಿ, ಸಿಕ್ಸ್) 33 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

  • ಪೋಲಾರ್ಡ್ ಆನ್‍ಫೀಲ್ಡ್ ವರ್ತನೆಗೆ ಕೋಪಗೊಂಡ ಬೂಮ್ರಾ – ವಿಡಿಯೋ

    ಪೋಲಾರ್ಡ್ ಆನ್‍ಫೀಲ್ಡ್ ವರ್ತನೆಗೆ ಕೋಪಗೊಂಡ ಬೂಮ್ರಾ – ವಿಡಿಯೋ

    ಲಕ್ನೋ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪೋಲಾರ್ಡ್ ಉದ್ದೇಶ ಪೂರ್ವಕವಾಗಿಯೇ ಬೂಮ್ರಾಗೆ ಅಡ್ಡಪಡಿಸಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಪಂದ್ಯದ 11ನೇ ಓವರ್ ಬೌಲ್ ಮಾಡಿದ್ದ ಜಸ್‍ಪ್ರೀತ್ ಬೂಮ್ರಾ ಬೌಲಿಂಗ್ ನಲ್ಲಿ ಪೋಲಾರ್ಡ್ ಕ್ಯಾಚ್ ನೀಡಿ ಔಟಾದರು. ಆದರೆ  ಬೂಮ್ರಾ ಕ್ಯಾಚ್ ಪಡೆಯುವ ವೇಳೆ ಪೋಲಾರ್ಡ್ ಉದ್ದೇಶ ಪೂರ್ವಕವಾಗಿ ಬೂಮ್ರಾಗೆ ಅಡ್ಡ ಬಂದಿದ್ದರು. ಓವರಿನ ನಾಲ್ಕನೇ ಎಸೆತ ಎದುರಿಸಿದ ಪೋಲಾರ್ಡ್ ಬ್ಯಾಟ್‍ಗೆ ತಾಗಿದ ಚೆಂಡು ನೇರ ಮೇಲಕ್ಕೆ ಚಿಮ್ಮಿತ್ತು.

    https://twitter.com/NaaginDance/status/1059844978665381888

    ಚೆಂಡು ಕೆಳಗಡೆ ಬೀಳುತ್ತಿರುವುದನ್ನು ನೋಡಿ ತಾನು ಔಟಾಗುವುದು ಖಾತ್ರಿ ಎಂದು ತಿಳಿದ ಪೋಲಾರ್ಡ್, ಕ್ಯಾಚ್ ಪಡೆಯಲು ಆಗಮಿಸುತ್ತಿದ್ದ ಬೂಮ್ರಾಗೆ ಎದುರು ಬಂದು ಅಡ್ಡಿಪಡಿಸಿದ್ದರು. ಆದರೆ ಇದರಿಂದ ವಿಚಲಿತರಾಗದ ಬೂಮ್ರಾ ಕ್ಯಾಚ್ ಪಡೆದು ಬಳಿಕ ಪೋಲಾರ್ಡ್ ವರ್ತನೆಗೆ ಗರಂ ಆದರು. ಈ ವೇಳೆ ಮಧ್ಯ ಪ್ರವೇಶಿಸಿದ ನಾಯಕ ರೋಹಿತ್ ಶಮಾ ಆನ್‍ಫೀಲ್ಡ್ ಅಂಪೈರ್ ಬಳಿಯೂ ತಮ್ಮ ಈ ಕುರಿತು ಚರ್ಚೆ ನಡೆಸಿದ್ದರು.

    ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸಿದ ರೋಹಿತ್ ಶರ್ಮಾ 61 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 11 ರನ್ ಗಳಿಸಿದ ರೋಹಿತ್ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಹಾಗೂ ವಿಶ್ವ ಟಿ20 ಕ್ರಿಕೆಟ್‍ನಲ್ಲಿ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದರು. 2ನೇ ಪಂದ್ಯವನ್ನು ಗೆಲ್ಲುವ ಮೂಲಕ 2-0 ಅಂತರದಲ್ಲಿ ಮುನ್ನಡೆ ಪಡೆದು ಇಂಡಿಯಾ ಸರಣಿಯನ್ನು ಗೆದ್ದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv