Tag: ಪೋರ್ನ್ ವಿಡಿಯೋ

  • ಪೋರ್ನ್ ವಿಡಿಯೋ ತೋರಿಸಿ ತಂದೆಯಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

    ಪೋರ್ನ್ ವಿಡಿಯೋ ತೋರಿಸಿ ತಂದೆಯಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

    ಮುಂಬೈ: 30 ವರ್ಷದ ಮಲತಂದೆಯೊಬ್ಬ ಅಪ್ರಾಪ್ತ ಹೆಣ್ಣುಮಕ್ಕಳಿಬ್ಬರಿಗೆ ಪೋರ್ನ್ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ಆರೋಪಿಯನ್ನು ಒಶಿವಾರ್ ಪೊಲೀಸರು ಬಂಧಿಸಿದ್ದಾರೆ. 13 ಮತ್ತು 14 ವರ್ಷದ ಅಪ್ರಾಪ್ತ ಮಕ್ಕಳ ತಂದೆ 2018 ರಲ್ಲಿ ಮೃತಪಟ್ಟಿದ್ದರು. ಕೆಲವು ತಿಂಗಳುಗಳ ಹಿಂದೆ ಆರೋಪಿಯನ್ನು ಸಂತ್ರಸ್ತೆಯರ ತಾಯಿ ಎರಡನೇ ಮದುವೆಯಾಗಿದ್ದರು. ಮದುವೆಯಾದ ನಂತರ ಎಲ್ಲರು ಒಟ್ಟಿಗೆ ಜೋಗೇಶ್ವರಿಯಲ್ಲಿ ವಾಸಿಸುತ್ತಿದ್ದರು.

    ಮದುವೆಯಾದ ಕೆಲವು ದಿನಗಳ ನಂತರ ಆರೋಪಿ ಇಬ್ಬರು ಹೆಣ್ಣುಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಸಂತ್ರಸ್ತೆಯರು ನಿದ್ದೆ ಮಾಡುವಾಗ ಅವರ ಮೇಲೆ ಆರೋಪಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.

    ಆರೋಪಿ ತಂದೆ ಏಪ್ರಿಲ್ 21 ರಂದು ಸಂತ್ರಸ್ತೆಯರು ನಿದ್ದೆ ಮಾಡುವಾಗ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆಯರು ಎಚ್ಚರಗೊಂಡು ಕೂಗಾಡಲು ಶುರು ಮಾಡಿದ್ದಾರೆ. ಆಗ ಆರೋಪಿ ಚಾಕು ತೋರಿಸಿ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಇಬ್ಬರಿಗೂ ಬೆದರಿಕೆವೊಡ್ಡಿದ್ದಾನೆ. ಅಷ್ಟೇ ಅಲ್ಲದೇ ಅವರಿಬ್ಬರಿಗೂ ತನ್ನ ಫೋನಿನಲ್ಲಿ ಪೋರ್ನ್ ವಿಡಿಯೋವನ್ನು ಬಲವಂತವಾಗಿ ತೋರಿಸುತ್ತಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದನು. ಸತತ ಒಂದು ತಿಂಗಳು ಇದೇ ರೀತಿ ಅವರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಘಟನೆ ನಡೆದು ಕೆಲವು ದಿನಗಳ ನಂತರ ಸಂತ್ರಸ್ತೆ ತನ್ನ ಟ್ಯೂಷನ್ ಶಿಕ್ಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ. ನಂತರ ಶಿಕ್ಷಕ ಎನ್‍ಜಿಒ ಅವರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದಾರೆ. ಅವರು ಒಶಿವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ಡೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಫುಲ್ ಸೌಂಡ್ ಕೊಟ್ಟು ಪೋರ್ನ್ ವಿಡಿಯೋ ನೋಡಿ ಅರೆಸ್ಟ್ ಆದ!

    ಫುಲ್ ಸೌಂಡ್ ಕೊಟ್ಟು ಪೋರ್ನ್ ವಿಡಿಯೋ ನೋಡಿ ಅರೆಸ್ಟ್ ಆದ!

    ಮುಂಬೈ: ರೂಮಿನಲ್ಲಿ ಸ್ಪೀಕರ್ ಇಟ್ಟು ನೀಲಿ ಚಿತ್ರಗಳನ್ನು ನೋಡುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಪಾಲ್ಗರ್ ಜಿಲ್ಲೆಯ ವಸಾಯಿ ಪಶ್ಚಿಮದ ವರ್ಷಾ ಅಪಾರ್ಟಮೆಂಟ್ ನಿವಾಸಿ ಮನೋಜ್ ಗುಪ್ತಾ (29) ಬಂಧಿತ ಆರೋಪಿ. ಈ ಕುರಿತು ಮಾಣಿಕ್‍ಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೋಜ್‍ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಏನಿದು ಪ್ರಕರಣ?:
    ವಸಾಯಿ ಪಶ್ಚಿಮದ ವರ್ಷಾ ಅಪಾರ್ಟ್‍ಮೆಂಟ್‍ನಲ್ಲಿ ಪತ್ನಿ, ಮಕ್ಕಳ ಜೊತೆಗೆ ಮನೋಜ್ ಗುಪ್ತಾ ಅಜ್ಜನ ಮನೆಯಲ್ಲಿ ವಾಸವಾಗಿದ್ದ. ಆದರೆ ಮನೋಜ್ ತನ್ನ ನೆರೆಹೊರೆಯವರ ಜೊತೆಗೆ ಕಳೆದ ಕೆಲವು ತಿಂಗಳಿಂದ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಅದೇ ಅಪಾರ್ಟಮೆಂಟ್‍ನ 30 ವರ್ಷದ ಮಹಿಳೆ ಜೊತೆಗೂ ಅನುಚಿತವಾಗಿ ವರ್ತಿಸಿದ್ದಾನೆ.

    ತನ್ನ ಮುಂದೆ ಹಾದು ಹೋಗುತ್ತಿದ್ದ ಮಹಿಳೆಯರನ್ನು ಅವಾಚ್ಯ ಪದಗಳಿಂದ ಗುಪ್ತಾ ನಿಂದಿಸುತ್ತಿದ್ದ. ಅಷ್ಟೇ ಅಲ್ಲದೆ ಅವರನ್ನು ಅಸಭ್ಯವಾಗಿ ಸನ್ನೆ ಮಾಡಿ, ನೋಡುತ್ತಿದ್ದ. ಕೆಲವು ಬಾರಿ ರಾತ್ರಿಯ ವೇಳೆ ಪಟಾಕಿ ಸಿಡಿ ಅಪಾರ್ಟಮೆಂಟ್ ನಿವಾಸಿಗಳಿಗೆ ಭಯ ಹುಟ್ಟಿಸುತ್ತಿದ್ದ. ತನ್ನ ಮನೆಯಲ್ಲಿ ಟಿವಿ ಇಲ್ಲವೇ ಮೊಬೈಲ್ ಮೂಲಕ ಸ್ಪೀಕರ್ ಗಳಿಗೆ ಸಂಪರ್ಕ ನೀಡಿ ಫುಲ್ ಸೌಂಡ್ ಕೊಟ್ಟು ನೀಲಿ ಚಿತ್ರಗಳನ್ನು ನೋಡುತ್ತಿದ್ದ.

    ಮನೋಜ್ ಅಸಭ್ಯ ವರ್ತನೆಯ ದೃಶ್ಯವನ್ನು 30 ವರ್ಷದ ಮಹಿಳೆಯೊಬ್ಬರು ಸೆರೆಹಿಡಿದು, ಮಾಣಿಕ್‍ಪುರ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಮನೋಜ್‍ನ ವಿಡಿಯೋ ನೋಡಿದ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

    ಮನೋಜ್‍ನಿಂದ ಕಳೆದ 4 ತಿಂಗಳುಗಳಿಂದ ಇಂತಹ ಸಮಸ್ಯೆಯನ್ನು ನಾವು ಎದುರಿಸುತ್ತಿದ್ದೇವೆ. ಮಹಿಳೆಯರು ಕಂಡರೆ ಸಾಕು ಅವಾಚ್ಯ ಪದಗಳಿಂದ ನಿಂದಿಸುತ್ತಾನೆ. ಮನೆಯಿಂದ ಹೊರಗೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ ಎಂದು ವರ್ಷಾ ಅಪಾರ್ಟ್ ಮೆಂಟ್ ನಿವಾಸಿಗಳು ದೂರಿದ್ದಾರೆ.

    ಆರೋಪಿ ಮನೋಜ್ ವಿರುದ್ಧ ಐಪಿಸಿ ಸೆಕ್ಷನ್ 504 (ಶಾಂತಿ ಭಂಗ), 506 (ಬೆದರಿಕೆ) ಮತ್ತು 509 (ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದನೆ) ಅಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಟೊರೊಂಟೊ: ಮನೋವಿಜ್ಞಾನಿ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳಿಗೆ ವಿಡಿಯೋ ಮೂಲಕ ಪಾಠ ಹೇಳಿಕೊಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪೋರ್ನ್ ವಿಡಿಯೋ ಪ್ರಸಾರವಾಗಿರುವ ಘಟನೆ ಕೆನಡಾದ ಟೊರೊಂಟೊದಲ್ಲಿ ನಡೆದಿದೆ.

    ಟೊರಂಟೊ ಸ್ಕಾರ್ಬರೊ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದ್ದು, ಪ್ರೊಫೆಸರ್ ಡಾ. ಸ್ಟೀವ್ ಜೋರ್ಡಾನ್ಸ್ ಪಾಠ ಮಾಡುವಾಗ ಈ ರೀತಿ ವಿಡಿಯೋ ಪ್ಲೇ ಆಗಿದೆ. ಈ ತರಗತಿಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದರು ಎಂದು ವದರಿಯಾಗಿದೆ.

    ಪ್ರೋ. ಜೋರ್ಡಾನ್ಸ್ ಕ್ಲಾಸ್ ರೂಮಿನಲ್ಲಿ ಜೈವಿಕ ಮತ್ತು ಅರಿವಿನ ಮನೋವಿಜ್ಞಾನದ ಬಗ್ಗೆ ತಿಳಿಸಲು ತಮ್ಮ ಮೊಬೈಲನ್ನು ಲ್ಯಾಪ್‍ಟಾಪಿಗೆ ಸಂಪರ್ಕಿಸಿ ದೊಡ್ಡ ಸ್ರ್ಕೀನ್ ಮೂಲಕ ಪಾಠ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದಂತೆ ಪೋರ್ನ್ ವಿಡಿಯೋ 500 ವಿದ್ಯಾರ್ಥಿಗಳ ಮುಂದೆ ಪ್ರಸಾರವಾಗಿದೆ. ವಿಡಿಯೋ ಪ್ರಸಾರವಾಗುತ್ತಿದ್ದಂತೆ ವಿದ್ಯಾರ್ಥಿಗಳು ಶಾಕ್ ಆಗಿದ್ದು, ನಂತರ ನಗಲಾರಂಭಿಸಿದ್ದಾರೆ.

    ಈ ವೇಳೆ ಕೆಲ ವಿದ್ಯಾರ್ಥಿಗಳು ಇದನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಗ್ಗೆ ಅನೇಕ ರೀತಿಯ ಕಮೆಂಟ್ ಗಳನ್ನು ಮಾಡಿದ್ದಾರೆ. ನಾನು ಪೋರ್ನ್ ವಿಡಿಯೋ ನೋಡಿದಾಗ ನನಗೆ ಆಶ್ಚರ್ಯವಾಯಿತು. ಆದರೆ ತರಗತಿಯಲ್ಲಿದ್ದ ಬಹಳಷ್ಟು ಜನರು ನಗುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬ ಕಮೆಂಟ್ ಮಾಡಿದ್ದಾನೆ.

    ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಆದ್ದರಿಂದ ನಾನು ಅವರನ್ನು ದೂಷಿಸುವುದಿಲ್ಲ. ಈ ಸಂದರ್ಭದಲ್ಲಿ ಎಲ್ಲರೂ ನಕ್ಕು ಸುಮ್ಮನಾಗಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

    ಇದು ಖಾಸಗಿ ವಿಚಾರವಾಗಿದ್ದು, ಸೂಕ್ತ ವಿಚಾರಣೆ ನಡೆಸುವುದಾಗಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರು ಹೇಳಿದ್ದಾರೆ. ಇತ್ತ ಈ ಬಗ್ಗೆ ಪ್ರಾಧ್ಯಾಪಕ ಜೊರ್ಡೆನ್ಸ್ ಅವರು ತಮ್ಮ ತಪ್ಪಿಗಾಗಿ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಮುಂದೆ ಕ್ಷಮೆಯಾಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv