Tag: ಪೋರಿ

  • ಸಾಮಾಜಿಕ ಜಾಲತಾಣದಲ್ಲಿ ಬೆಂಗ್ಳೂರಿನ ಪೋರಿಯ ಫಿಟ್ನೆಸ್ ವಿಡಿಯೋ ವೈರಲ್!

    ಸಾಮಾಜಿಕ ಜಾಲತಾಣದಲ್ಲಿ ಬೆಂಗ್ಳೂರಿನ ಪೋರಿಯ ಫಿಟ್ನೆಸ್ ವಿಡಿಯೋ ವೈರಲ್!

    ಬೆಂಗಳೂರು: ಘಟಾನುಘಟಿಗಳ ಫಿಟ್ನೆಸ್ ಚಾಲೆಂಜ್‍ಗಳ ನಡುವೆ ನಗರದ 1 ವರ್ಷದ ಪುಟ್ಟ ಪೋರಿಯ ಫಿಟ್ನೆಸ್ ಚಾಲೆಂಜ್ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಬೆಂಗಳೂರು ನಗರ ಪೊಲೀಸ್ ವಿಭಾಗದ ಸಾಮಾಜಿಕ ಜಾಲತಾಣ ಕೇಂದ್ರದಲ್ಲಿ ಕಾರ್ಯನಿರ್ವಸುತ್ತಿರುವ ಹೆಚ್ ಎಂ ಲೋಕೇಶ್ ಎಂಬುವರ ಪುತ್ರಿ ಜಾಗೃತಿ ಶ್ರೀ ಆರ್ವಿಯು ಸೋಶಿಯಲ್ ಮಿಡಿಯಾಗಳಲ್ಲಿ ಸದ್ದು ಮಾಡುತ್ತಿರುವ ಪೋರಿ. ಗುರುವಾರ ನಡೆದ ಅಂತರಾಷ್ಟ್ರೀಯ ಯೋಗ ದಿನದಂದು ಈ ಪೋರಿಯು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾಳೆ.

    ಫಿಟ್ನೆಸ್ ಕುರಿತು ಪೋರಿಯು ತನ್ನ ಪುಟಾಣಿ ಕೈಗಳ ಮೂಲಕ ಡಿಪ್ಸ್ ಹೊಡೆದು, ಯೋಗದ ಕೆಲವು ಭಂಗಿಗಳನ್ನು ಪ್ರದರ್ಶಿಸಿದ್ದಾಳೆ. ಇದನ್ನು ಆಕೆಯ ತಂದೆಯು ಸೋಶಿಯಲ್ ಮಿಡಿಯಾಗಳಲ್ಲಿ ಹಾಕಿದ್ದಾರೆ. ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ಕೇವಲ ಘಟಾನುಘಟಿಗಳು ಮಾತ್ರವೇ ಫಿಟ್ನೆಸ್ ಚಾಲೆಂಜ್ ತೆಗೆದುಕೊಂಡು ಸುದ್ದಿಯಾಗಿದ್ದರು. ಈ ಪುಟ್ಟ ಪೋರಿಯ ವಿಡಿಯೋ ಸಾಕಷ್ಟು ಜನರಿಗೆ ಇಷ್ಟವಾಗಿದ್ದು, ಪೋರಿಯ ಈ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಲೋಕೇಶ್ ಅವರ ಟ್ವೀಟನ್ನು 1 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 160 ಮಂದಿ ರಿ ಟ್ವೀಟ್ ಮಾಡಿದ್ದಾರೆ.

  • ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಬೆಂಗಳೂರು: 15ನೇ ವಿಧಾನಸಭಾ ಚುನಾವಣೆಯೂ ಮುಗಿತು. ಸರ್ಕಾರ ರಚನೆಯೂ ಆಯ್ತು. ಈಗಿನ ರಾಜಕೀಯ ನಾಯಕರಿಗೆನೇ 224 ವಿಧಾನ ಸಭಾ ಕ್ಷೇತ್ರದ ಹೆಸರುಗಳು ನೆನಪಿರೋಲ್ಲ. ಆದ್ರೇ ಇಲ್ಲೊಬ್ಬಳು ಪುಟಾಣಿ ಪೋರಿ 224 ಕ್ಷೇತ್ರದ ಜೊತೆ ಗೆದ್ದ ಅಭ್ಯರ್ಥಿ ಯಾರು ಮತ್ತು ಯಾವ ಪಕ್ಷದವರು ಅಂತಾ ಸಲೀಸಾಗಿ ಹೇಳುತ್ತಾಳೆ.

    ಹೌದು. ಈಗಿನ ಸಮಿಶ್ರ ಸರ್ಕಾರದ ಬಹುತೇಕ ಶಾಸಕರಿಗೆ ಸಡನ್ ಆಗಿ ಕೇಳಿದ್ರೇ, ತಮಗೆ ಬೆಂಬಲ ನೀಡಿರೋ 118 ಶಾಸಕರ ಹೆಸರನ್ನ ಹೇಳೊದಕ್ಕೆ ತಡವರಿಸುತ್ತಾರೆ. ಇನ್ನು 224 ಕ್ಷೇತ್ರದ ಬಗ್ಗೆ ಹೇಳೊದು ಅಂದ್ರೆ ತಮಾಷೆಯ ವಿಷಯವಲ್ಲ. ಆದ್ರೆ 224 ಕ್ಷೇತ್ರದ ಹೆಸರನ್ನ ಮಗ್ಗಿ ಹೇಳೊತರ ಹೇಳಿದ್ದ ಶಿವಮೊಗ್ಗದ ಬಾಲಕ ಇಂದ್ರಜೀತ್ ನ ನೋಡಿದ್ರಿ. ಆದ್ರೇ ಆ ಬಾಲಕನನ್ನ ಕೂಡ ಮೀರಿಸೋ ಪುಟಾಣಿ ಈ ಹುಡುಗಿಯಾಗಿದ್ದು, ಈಕೆ ಈ ಬಾರಿ ಕ್ಷೇತ್ರವಲ್ಲ, ಅಲ್ಲಿ ಗೆದ್ದಿರೋರು ಯಾರು ಮತ್ತು ಯಾವ ಪಕ್ಷದವರು ಅಂತಾ ಹೇಳುತ್ತಾಳೆ.

    ಈ ಪುಟಾಣಿಯ ಹೆಸರು ಸಂಭ್ರಮ. ಬೆಂಗಳೂರಿನ ಸುಂಕದಕಟ್ಟೆಯ ಬಳಿ ಇರೋ ಅಂಜನಾನಗರದ ನಿವಾಸಿಗಳಾದ ಜಾನಕಿ ಮತ್ತು ಶ್ರೀನಿವಾಸ್ ದಂಪತಿಯ ಮುದ್ದಿನ ಮಗಳು. ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರೋ ಈ ಪುಟಾಣಿ ಚತುರೇ ಮುಂದೆ ಶಿಕ್ಷಕಿಯಾಗಬೇಕೆಂಬ ಆಸೆ ಹೊಂದಿದ್ದಾಳೆ. ತಂದೆ ಶ್ರೀನಿವಾಸ್ ತಮ್ಮ ಬಿಡುವಿನ ವೇಳೆಯಲ್ಲಿ ಮಗಳಿಗೆ ಇದನ್ನೆಲ್ಲ ಹೇಳಿಕೊಟ್ಟಿದ್ದಾರೆ. ಸಂಭ್ರಮಳಾ ಈ ಸಾಧನೆಯ ಬಗ್ಗೆ ಕಾರು ಚಾಲಕನಾಗಿರೋ ತಂದೆ ಸಂಭ್ರಮದಿಂದ ಹೇಳೊದು ಹೀಗೆ, ಬರೀ ಇಷ್ಟೇ ಅಲ್ಲ ನನ್ನ ಮಗಳು 5 ನಿಮಿಷದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಹೇಳುತ್ತಾಳೆ. ಜೊತೆಗೆ 1000ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

    ಎಂಟೇ ವರ್ಷದಲ್ಲಿ ಈ ರೀತಿಯ ಸಾಧನೆ ಮಾಡಿರೋ ಈ ಪುಟ್ಟ ಬಾಲಕಿಯ ನೆನಪಿನ ಶಕ್ತಿ ನೋಡಿದ್ರೇ, ಮುಂದೊಂದು ದಿನ ಸಾಧಕಿ ಆಗೊದ್ರಲ್ಲಿ ಅನುಮಾನವಿಲ್ಲ.