Tag: ಪೋಟೋ

  • ಚಕ್ದಾ ಎಕ್ಸ್‌ ಪ್ರೆಸ್ ಚಿತ್ರದ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದ ಅನುಷ್ಕಾ ಶರ್ಮಾ

    ಚಕ್ದಾ ಎಕ್ಸ್‌ ಪ್ರೆಸ್ ಚಿತ್ರದ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದ ಅನುಷ್ಕಾ ಶರ್ಮಾ

    ಮುಂಬೈ: ಬಾಲಿವುಡ್ ತಾರೆ ಅನುಷ್ಕಾ ಶರ್ಮಾ, ಭಾರತೀಯ ಮಹಿಳಾ ಕ್ರಿಕೆಟ್ ದಂತಕಥೆ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ ಚಕ್ದಾ ಎಕ್ಸ್ ಪ್ರೆಸ್‍ನಲ್ಲಿ ನಟಿಸಲು ತಯಾರಿ ಆರಂಭಿಸಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ಫೋಟೋವೊಂದನ್ನು ಅನುಷ್ಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಚಿತ್ರಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.

    ಈಗಾಗಲೇ ಅನುಷ್ಕಾ ಅವರು ಚಿತ್ರದ ಪೂರ್ವಸಿದ್ಧತಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಜೂಲನ್ ಗೋಸ್ವಾಮಿ ಅವರಂತೆ ಬೌಲಿಂಗ್ ಮಾಡುವುದು ಹೇಗೆ ಎಂಬುದನ್ನು ನೆಟ್ಸ್‌ನಲ್ಲಿ ಪ್ರ್ಯಾಕ್ಟಿಸ್ ಮಾಡುತ್ತಿರುವ ಫೋಟೋವೊಂದನ್ನು ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ ಅವರು ಗ್ರಿಪ್ ಬೈ ಗ್ರಿಪ್  #ಚಕ್ದಾ ಎಕ್ಸ್‌ ಪ್ರೆಸ್ ಎಂದು ಶೀರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು

     

    View this post on Instagram

     

    A post shared by AnushkaSharma1588 (@anushkasharma)

    ಈ ಚಿತ್ರದ ಮೂಲಕ ಅನುಷ್ಕಾ ತಮ್ಮ ಗರ್ಭಾವಸ್ಥೆಯ ನಂತರ ಮತ್ತೆ ಚಲನಚಿತ್ರಗಳಲ್ಲಿ ನಟಿಸಲು ಮರಳುತ್ತಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಜೂಲನ್ ಅವರು ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹೊಂದಿದ್ದಾರೆ.  ಇದನ್ನೂ ಓದಿ: ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ

    ಭಾರತಕ್ಕಾಗಿ ಕ್ರಿಕೆಟ್ ಆಡುವ ತನ್ನ ಕನಸನ್ನು ನನಸಾಗಿಸಲು ಸ್ತ್ರೀ ದ್ವೇಷದ ರಾಜಕೀಯವು ಒಡ್ಡಿದ ಅಡೆತಡೆಗಳ ಮಧ್ಯೆಯೂ ಅವರು ತಮ್ಮ ಗುರಿಯನ್ನು ತಲುಪಲು ಯಶ್ವಸಿಯಾಗಿದ್ದರು. ಕೊನೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿ, ದೇಶದ ಎಷ್ಟೋ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ಮಾದರಿಯಾಗಿದ್ದರು.

    ಅವರ ಈ ಸ್ಫೂರ್ತಿದಾಯಕ ಪ್ರಯಾಣವನ್ನು ಚಕ್ದಾ ಎಕ್ಸ್‌ಪ್ರೆಸ್ ಚಿತ್ರದ ಮೂಲಕ ಗುರುತಿಸಲಾಗುತ್ತಿದ್ದು, 2018ರಲ್ಲಿ, ಜೂಲನ್ ಗೌರವಾರ್ಥವಾಗಿ ಭಾರತೀಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಬಾಲಿವುಡ್‍ನ ಎಷ್ಟೋ ಪ್ರಭಾವಿ ನಟರಲ್ಲಿ ಅನುಷ್ಕಾ ಕೂಡಾ ಒಬ್ಬರಾಗಿದ್ದಾರೆ. ಅವರು ಸುಲ್ತಾನ್, ಪಿಕೆ, ಮತ್ತು ಸಂಜು ಅಂತಹ ಖ್ಯಾತ ಚಿತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ, ಅನುಷ್ಕಾ ಅವರು ಚಕ್ದಾ ಎಕ್ಸ್ ಪ್ರೆಸ್‍ನ 30 ದಿನಗಳ ಚಿತ್ರಕರಣಕ್ಕಾಗಿ ಯುಕೆಗೆ ಹಾರಲಿದ್ದಾರೆ.

  • ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

    ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

    ಅಬುದಾಬಿ: ದುಬೈನ ಬಾಲ್ಕನಿಯೊಂದರ ಮೇಲೆ ಬೆತ್ತಲೆಯಾಗಿ ನಿಂತು ಪೋಸ್ ನೀಡಿದ ಮಹಿಳೆಯರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

    ವೈರಲ್ ಆಗಿರುವ ಫೋಟೋ ಹಾಗೂ ವೀಡಿಯೋದಲ್ಲಿ, ಶನಿವಾರ 12ಕ್ಕೂ ಹೆಚ್ಚು ಮಹಿಳೆಯರು ಮರೀನಾ ಸಮೀದಲ್ಲಿರುವ ಬಾಲ್ಕನಿಯಲ್ಲಿ ಹಾಡಹಗಲಲ್ಲೇ ಬೆತ್ತಲೆಯಾಗಿ ಸಾಲಾಗಿ ನಿಂತಿರುವುದನ್ನು ಕಾಣಬಹುದಾಗಿದೆ. ಸಾಂಪ್ರದಾಯಿಕವಾಗಿ ಮುಸ್ಲಿಂಮರೆ ಹೆಚ್ಚಾಗಿರುವ ಯುಎಇಯಲ್ಲಿನ ಈ ಘಟನೆ ಮುಸ್ಲಿಂಮರ ಸಂಪ್ರದಾಯಕ್ಕೆ ಧಕ್ಕೆಯನ್ನುಂಟು ಮಾಡಿರುವುದು, ಆಘಾತಕಾರಿ ಸಂಗಾತಿಯಾಗಿರುವುದರಿಂದ ಇದೀಗ ಅಧಿಕಾರಿಗಳನ್ನು ಕೆರಳಿಸಿದೆ. ವೀಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತಯೇ ಇದೀಗ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.

    ಈ ಘಟನೆ ಇದೀಗ ವಿಶ್ವದ್ಯಾಂತ ಭಾರೀ ಸದ್ದು ಮಾಡುತ್ತಿದ್ದು, ಸದ್ಯ ದುಬೈ ಪೊಲೀಸರು ಬಂಧಿತ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

  • ಪುಡ್  ಡೆಲಿವರಿ ಕೊಡಲು ಪಾಂಡಾದೊಂದಿಗೆ ಹೋದ ಯುವಕ

    ಪುಡ್ ಡೆಲಿವರಿ ಕೊಡಲು ಪಾಂಡಾದೊಂದಿಗೆ ಹೋದ ಯುವಕ

    ಕೌಲಾಲಂಪುರ: ಆನ್ ಲೈನ್ ಫುಡ್ ಡೆಲಿವರಿ ಕಂಪನಿಯಾದ ಫುಡ್ ಪಾಂಡಾದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸದ ಕೊನೆಯ ದಿನದಂದು ತನ್ನೊಂದಿಗೆ ಪಾಂಡಾ ಒಂದನ್ನು ಬೈಕ್ ಹಿಂದೆ ಕೂರಿಸಿಕೊಂಡು ಹೋಗುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

    ಉಜೈರ್(22) ಪಾಂಡಾ ಜೊತಗೆ ಫುಡ್ ಡೆಲಿವರಿ ಕೊಡಲು ಹೋಗುತ್ತಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

    ಯವಕ ತನ್ನೊಂದಿಗೆ ಪಾಂಡಾ ಇರುವಂತೆ ಪೋಟೋಗಳನ್ನು ಎಡಿಟ್ ಮಾಡಿದ್ದಾರೆ. ಹೌದು, ಆತ ನಿಜವಾದ ಪಾಂಡಾವನ್ನು ತನ್ನ ಬೈಕ್‍ನ ಹಿಂದೆ ಕೂರಿಸಿಕೊಂಡಿಲ್ಲ. ಬದಲಾಗಿ ತನ್ನ ಬೈಕ್‍ನ ಹಿಂದೆ ಪಾಂಡಾ ಕುಳಿತಿರುವ ಹಾಗೆ ಪೋಟೋಗಳನ್ನು ಎಡಿಟ್ ಮಾಡಿಕೊಂಡು ಬುದ್ದಿವಂತಿಕೆಯಿಂದ ಜನರನ್ನು ಮರಳು ಮಾಡಿದ್ದಾನೆ.

    ಪೋಟೋ ಎಡಿಟ್ ಮಾಡುವ ಕೌಶಲ್ಯತೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಹೀಗಾಗಿಯೇ ನನ್ನ ಬೈಕ್ ಹಿಂದೆ ಪಾಂಡಾ ಕುಳಿತಿರುವ ಹಾಗೆ ಪೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇನೆ ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದೆನೆ ನಾನು ನನ್ನು ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾಗಿದೆ. ಹೀಗಾಗಿ ಕೆಲಸದ ಕೊನೆಯದಿನವನ್ನು ವಿಶೇಷವಾಗಿ ಕಳೆಯಬೇಕು ಎಂದು ಇಂತಹ ವಿಶೇಷ ಆಲೋಚನೆಯನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

    ನೆಟ್ಟಿಗರು ಯುವಕನ ಎಡಿಟಿಂಗ್ ನೋಡಿ ಆಶ್ಚರ್ಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

  • ದೋಸ್ತಿ ಸಮಾವೇಶಕ್ಕೆ ಆರಂಭದಲ್ಲೇ ವಿಘ್ನ!

    ದೋಸ್ತಿ ಸಮಾವೇಶಕ್ಕೆ ಆರಂಭದಲ್ಲೇ ವಿಘ್ನ!

    – ಸಿದ್ದರಾಮಯ್ಯ ಫೋಟೋವಿಲ್ಲದ ಫ್ಲೆಕ್ಸ್ ಧರೆಗೆ
    – ಕೆಲಕಾಲ ಟ್ರಾಫಿಕ್ ಜಾಂ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲ ಸಮೀಪ ಇರೋ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶ ಆಯೋಜಿಸಿದ್ದು, ಇದೀಗ ಕಾರ್ಯಕ್ರಮಕ್ಕೆ ಮುನ್ನವೇ ವಿಘ್ನವೊಂದು ಎದುರಾಗಿದೆ.

    ಹೌದು. ಕಾರ್ಯಕ್ರಮದ ಅಂಗವಾಗಿ ದೋಸ್ತಿ ನಾಯಕರ ಫೊಟೋಗಳಿರುವ ಬೃಹತ್ ಗಾತ್ರದ ಫ್ಲೆಕ್ಸ್ ಗಾಳಿಯಿಂದಾಗಿ ಧರೆಗೆ ಉರುಳಿದೆ. ಸುಮಾರು ಅರ್ಧಗಂಟೆಯಿಂದ ಫ್ಲೆಕ್ಸ್ ರಸ್ತೆಯಲ್ಲಿ ಬಿದ್ದಿದೆ. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

    ಸಿದ್ದರಾಮಯ್ಯ ಫೋಟೋ ಇಲ್ಲ:
    ಬೃಹತ್ ಸಮಾವೇಶದ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ. ಮಾದಾವರದ ಬಿಐಇಸಿ ಮೈದಾನದಲ್ಲಿ ಹಾಕಿರುವ ಯಾವುದೇ ಫ್ಲೆಕ್ಸ್‍ನಲ್ಲಿ ಸಿದ್ದರಾಮಯ್ಯನವರ ಫೋಟೋ ಕಾಣಿಸುತ್ತಿಲ್ಲ. ಹೀಗಾಗಿ ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯರನ್ನು ಡಮ್ಮಿ ಎಂದು ಬಿಂಬಿಸುವ ಪ್ರಯತ್ನ ನಡೀತಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನ ಭಾವಚಿತ್ರ ಹಾಕದೇ ಇರಲು ಯಾರಾದ್ರೂ ಖಡಕ್ ಸೂಚನೆ ಕೊಟ್ಟಿದ್ದಾರಾ ಅಥವಾ ಕಣ್ತಪ್ಪಿನಿಂದ ಈ ಎಡವಟ್ಟು ಆಗಿದೆಯಾ ಎಂದು ಅಲ್ಲಿನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಿನಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಧಾನಿ ಮೋದಿ ವಿರುದ್ಧ ಘರ್ಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆಯಿದೆ.

  • ದೋಸ್ತಿ ಸರ್ಕಾರದಿಂದ ಸಿದ್ದರಾಮಯ್ಯ ಕಡೆಗಣನೆ!

    ದೋಸ್ತಿ ಸರ್ಕಾರದಿಂದ ಸಿದ್ದರಾಮಯ್ಯ ಕಡೆಗಣನೆ!

    ಬೆಂಗಳೂರು: ದೋಸ್ತಿ ಸರ್ಕಾರದ ಇಂದಿನ ಬೃಹತ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಡೆಗಣಿಸಲಾಗಿದ್ಯಾ ಎನ್ನುವ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಇರುವ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶವನ್ನು ಆಯೋಜಿಸಿವೆ. ಈ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ.

    ಮಾದಾವರದ ಬಿಐಇಸಿ ಮೈದಾನದಲ್ಲಿ ಹಾಕಿರುವ ಯಾವುದೇ ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯನವರ ಫೋಟೋ ಕಾಣಿಸುತ್ತಿಲ್ಲ. ಹೀಗಾಗಿ ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯರನ್ನು ಡಮ್ಮಿ ಎಂದು ಬಿಂಬಿಸುವ ಪ್ರಯತ್ನ ನಡೀತಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನ ಭಾವಚಿತ್ರ ಹಾಕದೇ ಇರಲು ಯಾರಾದ್ರೂ ಖಡಕ್ ಸೂಚನೆ ಕೊಟ್ಟಿದ್ದಾರಾ ಅಥವಾ ಕಣ್ತಪ್ಪಿನಿಂದ ಈ ಎಡವಟ್ಟು ಆಗಿದೆಯಾ ಎಂದು ಅಲ್ಲಿನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಿನಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂದಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಧಾನಿ ಮೋದಿ ವಿರುದ್ಧ ಘರ್ಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆ ದೋಸ್ತಿ ಸರ್ಕಾರಕ್ಕಿದೆ.

  • ಐವರ ಹುಡುಕಾಟದಲ್ಲಿ ಬ್ಯುಸಿಯಾದ ಅನುಷ್ಕಾ ಶರ್ಮಾ

    ಐವರ ಹುಡುಕಾಟದಲ್ಲಿ ಬ್ಯುಸಿಯಾದ ಅನುಷ್ಕಾ ಶರ್ಮಾ

    ಮುಂಬೈ: ತಮ್ಮಂತೆ ಹೋಲುವ ವಿದೇಶಿ ಗಾಯಕಿಯ ಫೋಟೋವನ್ನು ರೀಟ್ವೀಟ್ ಮಾಡಿಕೊಂಡು ನಟಿ ಅನುಷ್ಕಾ ಶರ್ಮಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿ ಒಬ್ಬರಂತೆ ಹೋಲುವ ಏಳು ಜನರು ಇರುತ್ತಾರೆಂದು ಹೇಳುವುದುಂಟು. ಬಾಲಿವುಡ್ ಚೆಲುವೆ ಅನುಷ್ಕಾರನ್ನು ಹೋಲುವ ಗಾಯಕಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅನುಷ್ಕಾ, ಇನ್ನುಳಿದ ಐವರನ್ನು ಹುಡುಕುತ್ತೇನೆಂದು ಹೇಳಿದ್ದಾರೆ.

    ಇತ್ತೀಚೆಗಷ್ಟೆ ಅಮೆರಿಕಾದ ಗಾಯಕಿ ಜೂಲಿಯಾ ಮೈಕಲ್ಸ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದರು. ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ಅವರಂತೆ ಕಾಣಿಸುತ್ತಾರೆ. ಆದರಿಂದ ಈ ಪೋಸ್ಟ್ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಅನುಷ್ಕಾ ಶರ್ಮಾ ಜೂಲಿಯಾ ಮೈಕಲ್ಸ್ ಪೋಸ್ಟ್ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಜೂಲಿಯಾ ಮೈಕಲ್ಸ್ ಅವರು ವೈರಲ್ ಆಗಿರುವ ತಮ್ಮ ಪೋಸ್ಟ್‍ಗೆ ಅನುಷ್ಕಾ ಶರ್ಮಾ ಅವರನ್ನು ಟ್ಯಾಗ್ ಮಾಡಿ ನಾವಿಬ್ಬರು ಅವಳಿ ಜವಳಿಯಂತೆ ಕಾಣುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಅನುಷ್ಕಾ ಶರ್ಮಾ ಅವರು ರೀ-ಟ್ವೀಟ್  ಮಾಡಿ ಆಶ್ಚರ್ಯ ಸೂಚಿಸಿದ್ದಾರೆ. ಹೌದು ನಾವಿಬ್ಬರು ಒಂದೇ ರೀತಿ ಕಾಣಿಸುತ್ತೇವೆ. ನಮ್ಮ ಹಾಗೆ ಇರುವ ಉಳಿದು ಐವರಿಗಾಗಿ ನಾನು ಹುಡುಕಾಟ ನಡೆಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ ನೋಡಿದ ಅಭಿಮಾನಿಗಳು ವಿದೇಶಿ ಗಾಯಕಿಯನ್ನು ಅನುಷ್ಕಾ ಶರ್ಮಾ ಅವರ ವಿದೇಶಿ ಅವತಾರ ಅಂತಾನೂ ಟ್ರೋಲ್ ಮಾಡಿದ್ದರು. ಕೆಲವರು ಅನುಷ್ಕಾ ಶರ್ಮಾ ತಮ್ಮ ಅವಳಿ ಸಹೋದರಿ ವಿದೇಶದಲ್ಲಿ ಇದ್ದಾರಾ ಅಂದರೆ, ಇನ್ನೂ ಕೆಲವರು ಅನುಷ್ಕಾ ಶರ್ಮಾ ಡೂಪ್ಲಿಕೇಟ್ ಕಾಪಿ ಎಂದು ಟ್ರೋಲ್ ಮಾಡಿದ್ದರು. ಅಷ್ಟೇ ಅಲ್ಲದೆ ಅನುಷ್ಕಾ ಅತ್ತಿಗೆ ಯಾವಾಗ ಹೆಸರು ಬದಲಾಯಿಸಿಕೊಂಡರು ಅಂತ ಅಭಿಮಾನಿಗಳು ವಿರಾಟ್ ಕೊಹ್ಲಿ ಕಾಲೆಳೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!

    ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!

    ಪುಣೆ: ವ್ಯಕ್ತಿಯೊಬ್ಬ 18 ವರ್ಷದ ಯುವಕನನ್ನು ಚಲಿಸುತ್ತಿರುವ ಬಸ್ಸಿನಲ್ಲೇ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ಈ ಘಟನೆ ಖೇದ್ ತೆಹ್ ಸಿಲ್ ಜಿಲ್ಲೆಯ ದವಾಡಿ ಗ್ರಾಮದ ಸಮೀಪ ನಡೆದಿದೆ. ಮೃತ ಯುವಕ ತನ್ನ ಸಹೋದರಿಗೆ ಕಿರುಕುಳ ನೀಡುತ್ತಾನೆ ಎಂದು ಆರೋಪಿ ವಿರುದ್ಧ ದೂರು ದಾಖಲಿಸಿದ್ದನು. ಇದರಿಂದ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆರೋಪಿ ಹೊಂಚು ಹಾಕುತ್ತಿದ್ದನು. ಹೀಗಾಗಿ ಆರೋಪಿಯಿದ್ದ ಬಸ್ಸಿಗೆ ಹತ್ತಿದ್ದ ಯುವಕನನ್ನು ಕಂಡ ಆರೋಪಿ ಸಿಟ್ಟಿನಿಂದ ಚಲಿಸುತ್ತಿದ್ದಾಗಲೇ ಹರಿತವಾದ ಆಯುಧಗಳಿಂದ ಯುವಕ ಮೇಲೆ ದಾಳಿ ಮಾಡಿದ್ದಾನೆ.

    ಆರೋಪಿಯು ಮೃತ ಯುವಕನ ಸಹೋದರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂಬ ಆರೋಪವಿದೆ. ಈ ಕುರಿತು ಯುವತಿಯ ಕುಟುಂಬ ಇತ್ತೀಚೆಗೆ ಸಂಬಂಧಿಕನೊಬ್ಬನ ಮೇಲೆ ಶಂಕಿಸಿ ಆತನ ವಿರುದ್ಧ ಕೇಸ್ ದಾಖಲಿಸಿತ್ತು. ದೂರಿನಲ್ಲಿ ಯುವತಿಯ ಫೋಟೋದೊಂದಿಗೆ ಅಶ್ಲೀಲ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆಂದು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಕ್ರೈಂ ಬ್ರಾಂಚ್ ಗೆ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇದೀಗ ಆರೋಪಿ ಸೇಡು ತೀರಿಸಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮಂಗಳವಾರ ಬೆಳಗ್ಗೆ ಮೃತ ಯುವಕ ದಾವಡಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿದ್ದಾನೆ. ಈ ಬಸ್ಸಿನಲ್ಲಿ ಶಂಕಿತನು ಕೂಡ ಇದ್ದನು. ಆದ್ರೆ ಯುವಕ ಮಾತ್ರ ಇದನ್ನು ಗಮನಿಸಿರಲಿಲ್ಲ. ಬಸ್ ಚಲಿಸಲು ಆರಂಭಿಸಿತ್ತು. ಕೂಡಲೇ ಹಿಂದಿದ್ದ ಶಂಕಿತ ಸಂಬಂಧಿಕ ನೇರವಾಗಿ ಯುವಕನ ಬಳಿ ಬಂದು ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾನೆ.

    ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಕಿರುಚಿದ್ದಾರೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್ ನಿಲುಗಡೆಯಾಗುತ್ತಿದ್ದಂತೆಯೇ ಆರೋಪಿ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

  • ಭಾರೀ ಮಳೆಯಲ್ಲೂ ಟ್ರಾಫಿಕ್ ಕ್ಲೀಯರ್ ಮಾಡಿ ಕರ್ತವ್ಯ ಮೆರೆದ ಪೊಲೀಸರು! – ಫೋಟೋ ವೈರಲ್

    ಭಾರೀ ಮಳೆಯಲ್ಲೂ ಟ್ರಾಫಿಕ್ ಕ್ಲೀಯರ್ ಮಾಡಿ ಕರ್ತವ್ಯ ಮೆರೆದ ಪೊಲೀಸರು! – ಫೋಟೋ ವೈರಲ್

    ಹೈದರಾಬಾದ್: ರಾಜ್ಯದೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರತಿದಿನ ಸಂಚರಿಸುವ ಜನರ ಜೀವನ ಅಸ್ಥವ್ಯಸ್ತವಾಗಿದೆ.

    ಪ್ರತಿ ಬಾರಿಯೂ ಮಳೆಯಿಂದಾಗಿ ಹೈದರಾಬಾದ್‍ನಲ್ಲಿ ಟ್ರಾಫಿಕ್ ಸಿಗ್ನಲ್ಸ್, ಪ್ರವಾಹದಿಂದ ಕೂಡಿದ ಬೀದಿಗಳು ಮತ್ತು ಮರಗಳು ಉರುಳಿ ಬೀಳುತ್ತವೆ. ಆದರೆ ಹೈದರಾಬಾದ್ ನ ಮುನಿಸಿಪಲ್ ಕಾರ್ಪೋರೇಷನ್ ಸಿಬ್ಬಂದಿ(ಜಿಎಚ್‍ಎಮ್‍ಸಿ) ಮತ್ತು ಟ್ರಾಫಿಕ್ ಪೊಲೀಸರು ಮಳೆಯಲ್ಲಿಯೂ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ.

    ಗುರುವಾರ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹೈದರಾಬಾದ್ ನಲ್ಲಿ ಮರಗಳು, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದವು. ಇದರಿಂದ ಮಳೆಯ ನೀರು ರಸ್ತೆಯಲ್ಲಿಯೇ ತುಂಬಿ ಕೊಂಡಿತ್ತು. ಪರಿಣಾಮ ವಾಹನ ಸವಾರರು ಪರದಾಡುವಂತಾಗಿದ್ದು, ಅತಿಯಾದ ಟ್ರಾಫಿಕ್ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಬಂದು ರಸ್ತೆಯಲ್ಲಿದ್ದ ಮಳೆನೀರು ಹೋಗಲು ಒಳಚರಂಡಿ ಮುಚ್ಚಳಗಳನ್ನು ತೆರೆಯುವುದು ಮತ್ತು ಮಳೆಯಿಂದ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವುದರ ಮೂಲಕ ಟ್ರಾಫಿಕ್ ನನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.

    ವ್ಯಕ್ತಿಯೊಬ್ಬರು ಪೊಲೀಸರು ಮಳೆಯಲ್ಲಿಯೂ ತಮ್ಮ ಕರ್ತವ್ಯ ಮಾಡುತ್ತಿದ್ದ ಫೋಟೋವನ್ನು ತೆಗೆದು ಅದನ್ನು ಇಲಾಖೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

    ಟ್ವಿಟ್ಟರ್ ಬಳಕೆದಾರರು ಪೊಲೀಸರ ಕರ್ತವ್ಯದ ಬಗ್ಗೆ ಕಾಮೆಂಟ್ ಗಳನ್ನು ಮಾಡಿದ್ದಾರೆ. “ನಿಮ್ಮ ಬಗ್ಗೆ ನಮಗೆ ಬಹಳ ಹೆಮ್ಮೆ. ನಮ್ಮ ಪುರಸಭೆಯ ನೌಕರರು ನಿಮ್ಮಿಂದ ಕಲಿಯಬೇಕು” ಎಂದು ಟ್ವೀಟ್ ಮಾಡಿದ್ದಾರೆ.

    `ಸಂಚಾರವನ್ನು ತೆರವುಗೊಳಿಸಿ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ಮಾಡುವುದು ನಮ್ಮ ಕರ್ತವ್ಯ. ಆದ್ದರಿಂದ ನಾವು ಕಾರ್ಪೋರೇಷನ್ ಸಿಬ್ಬಂದಿ ತಂಡಗಳಂತಹ ಇತರ ಇಲಾಖೆಗಳಿಗೆ ಕಾಯುವುದಿಲ್ಲ. ವಾಹನ ಸವಾರರಿಗೆ ಬಿಕ್ಕಟ್ಟು ಉಂಟಾಗುವ ಮೊದಲು ನಾವು ರಸ್ತೆಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತೇವೆ. ಇದಕ್ಕಾಗಿ ತಾವು ಎಲ್ಲ ಅಧಿಕಾರಿಗಳನ್ನು ಸಜ್ಜುಗೊಳಿಸುತ್ತೇವೆ” ಎಂದು ಹೈದರಾಬಾದ್ ಟ್ರಾಫಿಕ್ ಪೊಲೀಸ್ ಹೆಚ್ಚುವರಿ ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.

    ಸಿಕಂದರಾಬಾದ್, ಮುಶೀರಾಬಾದ್ ಮುಂತಾದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು. ಮುಂದಿನ ಎರಡು ದಿನಗಳಲ್ಲಿ ರಾಜ್ಯಾದ್ಯಂತ ಚಂಡಮಾರುತ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.