Tag: ಪೋಕ್ಸೋ ಕಾಯ್ದೆ

  • 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    ಅಗರ್ತಲಾ: ಕಳೆದ ವರ್ಷ ನಾಲ್ಕೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಆರೋಪಿಗೆ ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ.

    ಖೋವೈ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ ಮೊದಲ ನಿದರ್ಶನ ಇದಾಗಿದ್ದು, ಅಪರಾಧಿ ಕಾಳಿಚರಣ್‌ಗೆ ಮರಣದಂಡನೆ ವಿಧಿಸಲಾಗಿದೆ. ಈ ಹಿಂದೆ ಆರೋಪಿ ಸಾಕ್ಷ್ಯಾಧಾರಗಳಿಂದ ತಪ್ಪಿಸಿಕೊಂಡಿದ್ದನು. ಸತತ ವಿಚಾರಣೆಯ ಬಳಿಕ ಸುಳ್ಳು ಮಾಹಿತಿ ಹಂಚಿಕೊಂಡಿರುವುದು ಸಾಬೀತಾಗಿದ್ದು ಅಪರಾಧಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

    STOP RAPE

    ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಕರಿ ದಾಸ್ ಅವರು ತನಿಖಾಧಿಕಾರಿ ಬಿದೀಶ್ವರ್ ಸಿನ್ಹಾರ ವರದಿಯನ್ನು ಪರಿಶೀಲನೆ ನಡೆಸಿದ ಬಳಿಕ ಮರಣದಂಡನೆಗೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 35 ಸಾಕ್ಷಿಗಳನ್ನು ದಾಖಲಿಸಲಾಗಿದೆ.

    ಏನಿದು ಘಟನೆ?: 2021ರ ಫೆಬ್ರವರಿ 22ರಂದು ಖೋವೈ ಜಿಲ್ಲೆಯ ಟೆಲಿಯಮುರಾದ ಡಸ್ಕಿ ಪ್ರದೇಶದಿಂದ 4 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಅದಾದ 6 ದಿನಗಳ ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ಕಾಡಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹವನ್ನು ಹೊರತೆಗೆಯಲಾಗಿತ್ತು.

    Live Tv

  • “ಚರ್ಮದ ಸಂಪರ್ಕವಿಲ್ಲದೆ ಸ್ತನ ಹಿಡಿಯುವುದು ಲೈಂಗಿಕ ದೌರ್ಜನ್ಯ ಅಲ್ಲ” – ವಿವಾದಿತ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್

    “ಚರ್ಮದ ಸಂಪರ್ಕವಿಲ್ಲದೆ ಸ್ತನ ಹಿಡಿಯುವುದು ಲೈಂಗಿಕ ದೌರ್ಜನ್ಯ ಅಲ್ಲ” – ವಿವಾದಿತ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಚರ್ಮದ ಸಂಪರ್ಕವಿಲ್ಲದೆ ಸ್ತನ ಹಿಡಿಯುವುದು ಲೈಂಗಿಕ ದೌರ್ಜನ್ಯ ಅಲ್ಲ ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಇಂದು ಸುಪ್ರೀಂಕೋರ್ಟ್ ವಜಾ ಮಾಡಿದೆ.

    ನ್ಯಾಯಮೂರ್ತಿಗಳಾದ ಯು.ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ತ್ರಿ ಸದಸ್ಯ ಪೀಠವು ಪೋಕ್ಸೊ ಅಡಿಯಲ್ಲಿ ‘ಲೈಂಗಿಕ ದೌರ್ಜನ್ಯ’ದ ಅಪರಾಧದ ಅಂಶವು ಲೈಂಗಿಕ ಉದ್ದೇಶವಾಗಿದೆ ಮತ್ತು ಅಂತಹ ಘಟನೆಗಳಲ್ಲಿ ಚರ್ಮದಿಂದ ಚರ್ಮದ ಸಂಪರ್ಕವು ಪ್ರಸ್ತುತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: MLC ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ಸ್ಪರ್ಧೆ ಬಹುತೇಕ ಖಚಿತ

    ಲೈಂಗಿಕ ದೌರ್ಜನ್ಯದ ಅಪರಾಧವನ್ನು ರೂಪಿಸುವ ಪ್ರಮುಖ ಅಂಶವೆಂದರೆ ಲೈಂಗಿಕ ಉದ್ದೇಶವೇ ಹೊರತು ಮಗುವಿನೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಅಲ್ಲ, “ಚರ್ಮದಿಂದ ಚರ್ಮ” ಸಂಪರ್ಕವನ್ನು ಕಡ್ಡಾಯಗೊಳಿಸುವುದು ಸಣ್ಣ ಮತ್ತು ಅಸಂಬದ್ಧ ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಲೈಂಗಿಕ ಉದ್ದೇಶದಿಂದ ಮಗುವಿನ ಯಾವುದೇ ಲೈಂಗಿಕ ಭಾಗವನ್ನು ಸ್ಪರ್ಶಿಸುವ ಯಾವುದೇ ಕ್ರಿಯೆಯನ್ನು ಪೋಕ್ಸೋ ಕಾಯಿದೆಯ ಸೆಕ್ಷನ್ 7 ರ ವ್ಯಾಪ್ತಿಯಿಂದ ತೆಗೆದು ಹಾಕಲಾಗುವುದಿಲ್ಲ ಎಂದು ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಪ್ರಕರಣ ಹಿನ್ನಲೆ:
    ಮುಂಬೈನಲ್ಲಿ 12ರ ಬಾಲಕಿ ಮೇಲೆ ವ್ಯಕ್ತಿಯೋರ್ವ ಲೈಗಿಂಕ ದೌರ್ಜನ್ಯ ಎಸಗಿದ್ದ, ಆಕೆಯ ಬಟ್ಟೆಯ ಮೇಲೆ ಸ್ತನಗಳನ್ನು ಸ್ಪರ್ಶಿಸುವ ಮೂಲಕ ಬಾಲಕಿಯನ್ನು ಉದ್ರೇಕಿಸುವ ಪ್ರಯತ್ನ ಮಾಡಿದ್ದ. ಇದನ್ನು ವಿರೋಧಿಸಿದ್ದ ಬಾಲಕಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದಳು. ಇದನ್ನೂ ಓದಿ: ಅಧಿಕಾರಿಗಳಷ್ಟೇ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ: ಆರ್. ಅಶೋಕ್

    ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‍ನ ನ್ಯಾಯಮೂರ್ತಿ ಪುಷ್ಪಾ.ವಿ ಗಣೆಡಿವಾಲಾ ಪೀಠ, 12 ವರ್ಷದ ಮಗುವಿನ ಸ್ತನವನ್ನು ಬಟ್ಟೆ ತೆಗೆಯದೆ ಒತ್ತುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸುವ ವ್ಯಾಖ್ಯಾನದೊಳಗೆ ಬರುತ್ತದೆ ಮತ್ತು ಪೋಕ್ಸೋ ಅಡಿಯಲ್ಲಿ ಲೈಂಗಿಕ ದೌರ್ಜನ್ಯವಲ್ಲ ಎಂದು ಹೇಳಿತ್ತು. ಅಲ್ಲದೇ ಸಂತ್ರಸ್ತ ಬಾಲಕಿ ಬಟ್ಟೆಯನ್ನು ಧರಿಸಿದ್ದಳು ಮತ್ತು ಆಕೆಯ “ಚರ್ಮದಿಂದ ಚರ್ಮಕ್ಕೆ” ಯಾವುದೇ ಸಂಪರ್ಕವಿಲ್ಲದ ಕಾರಣಕ್ಕಾಗಿ ಪೋಕ್ಸೊದ ಸೆಕ್ಷನ್ 7 ರ ಅಡಿಯಲ್ಲಿ ಆರೋಪಿತ ವ್ಯಕ್ತಿಯನ್ನು ಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಆರೋಗ್ಯಕ್ಕಾಗಿ ಹಸುವಿನ ಸಗಣಿ ತಿನ್ನುವ ವೈದ್ಯ – ವೀಡಿಯೋ ವೈರಲ್

    ಈ ಆದೇಶವನ್ನು ಪರಿಶೀಲಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಸುಪ್ರೀಂಕೋರ್ಟ್ ಮುಂದೆ ಪ್ರಸ್ತಾಪಿಸಿದ್ದರು, ಇದನ್ನು ತುಂಬಾ ಗೊಂದಲದ ತೀರ್ಮಾನ ಎಂದು ಬಣ್ಣಿಸಿದ ಸುಪ್ರೀಂಕೋರ್ಟ್ ಕಳೆದ ಜನವರಿ 27 ರಂದು ವಿವಾದಾತ್ಮಕ ತೀರ್ಪಿಗೆ ತಡೆ ನೀಡಿತ್ತು. ತರುವಾಯ, ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್ 30 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.

  • ಪೋಕ್ಸೋ ಅಡಿ ಕೇಸ್ ದಾಖಲಾಗುತ್ತಿರುವುದು ವಿಷಾದದ ಸಂಗತಿ : ನ್ಯಾ. ಜಯಂತ್ ಕುಮಾರ್

    ಪೋಕ್ಸೋ ಅಡಿ ಕೇಸ್ ದಾಖಲಾಗುತ್ತಿರುವುದು ವಿಷಾದದ ಸಂಗತಿ : ನ್ಯಾ. ಜಯಂತ್ ಕುಮಾರ್

    ಶಿವಮೊಗ್ಗ: ಪೋಕ್ಸೋ ಕಾಯ್ದೆಯಡಿಯಲ್ಲಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿರುವುದು ವಿಷಾದದ ಸಂಗತಿ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಹೇಳಿದ್ದಾರೆ.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ನಗರದ ಡಿ.ವಿ.ಎಸ್.ಶಾಲಾ ಸಭಾಂಗಣದಲ್ಲಿ ಪೋಕ್ಸೊ ಕಾಯ್ದೆ, ಕಳ್ಳಸಾಗಾಣೆ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರು ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವೇಗವಾಗಿ ಬೆಳೆಯುತ್ತಿರುವ ಇಂದಿನ ಯುಗಕ್ಕೆ ಪೂರಕವಾಗಿ ಬಳಕೆಯಲ್ಲಿರುವ ಮೊಬೈಲ್‍ಗಳನ್ನು ವಿದ್ಯಾರ್ಥಿಗಳು ತಮ್ಮ ಉತ್ತಮ ಕೆಲಸಗಳಿಗಾಗಿ ಬಳಸಿಕೊಳ್ಳುವಂತೆ ಸೂಚಿಸಿದ ನ್ಯಾಯಾಧೀಶರು ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳಾದವರು ಸತ್ಯ ನುಡಿಯುವುದನ್ನೇ ರೂಢಿಸಿಕೊಳ್ಳಬೇಕು. ಶಾಲೆಗಳು ಮಾಹಿತಿ ಕೇಂದ್ರಗಳು. ಆದರೆ ವಿದ್ಯಾರ್ಥಿಗಳು ಈ ಕಲಿಕಾವಧಿಯಲ್ಲಿ ದೊರೆಯುವ ಅಮೂಲ್ಯ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಜ್ಞಾನಾರ್ಜನೆಗಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥವಾಗಿ ಕಳೆಯದೇ ಸದ್ಬಳಕೆ ಮಾಡಿಕೊಳ್ಳಬೇಕು. ಈ ಅವಧಿಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಕೂಡ ಜೀವಿತದ ಕೊನೆಯ ಅವಧಿಯವರೆಗೆ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಮಾತ್ರವಲ್ಲದೇ ಅದು ಕಂಟಕ ಪ್ರಾಯವೂ ಆಗಬಹುದು. ಆದ್ದರಿಂದ ವಿದ್ಯಾರ್ಥಿಗಳು ಇಡುವ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ವಹಿಸಬೇಕಿದೆ ಎಂದರು.

    ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ಇದೆ. ಕೆಲವೊಮ್ಮೆ ಜೀವಾವಧಿಯೂ ಆಗಬಹುದು. ಪ್ರತಿ ವಿದ್ಯಾರ್ಥಿಗಳು ಸ್ವರಕ್ಷಣೆಗಾಗಿ ಅಲ್ಪ ಪ್ರಮಾಣದ ಕಾನೂನು ತಿಳಿದುಕೊಂಡಿರುವುದು ಇಂದಿನ ತುರ್ತು ಅಗತ್ಯ ಎಂದರು.

    ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಬಿ.ಇ.ಒ. ಪಿ.ನಾಗರಾಜ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ, ಡಿ.ವಿ.ಎಸ್. ಕಾಲೇಜಿನ ಪ್ರಾಂಶುಪಾಲ ಶೇಷಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • 6ರ ಬಾಲಕಿಯ ಮೇಲೆ 26 ವರ್ಷದ ಯುವಕನಿಂದ ಅತ್ಯಾಚಾರ

    6ರ ಬಾಲಕಿಯ ಮೇಲೆ 26 ವರ್ಷದ ಯುವಕನಿಂದ ಅತ್ಯಾಚಾರ

    – ಮನೆಯಲ್ಲಿ ಯಾರೂ ಇಲ್ಲದಾಗ ಘಟನೆ
    – ಬೆಂಗ್ಳೂರಲ್ಲಿ ಬಡಗಿ ಕೆಲಸ ಮಾಡ್ತಿದ್ದ ಆರೋಪಿ

    ಹೈದರಾಬಾದ್: ನೆರೆಮನೆಯಲ್ಲಿ 6 ವರ್ಷದ ಬಾಲಕಿಯ ಮೇಲೆ 26 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಅಪ್ರಾಪ್ತ ವಯಸ್ಸಿನ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದನ್ನು ಗಮನಿಸಿದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ನಡೆದಾಗ ಸಂತ್ರಸ್ತೆಯ ತಾಯಿ ತರಕಾರಿಗಳನ್ನು ಖರೀದಿಸಲು ಹೋಗಿದ್ದಳು. ಹೀಗಾಗಿ ಮನೆಯಲ್ಲಿ ಯಾರೂ ಇರಲಿಲ್ಲ.

    ಇತ್ತ ಹೊರಗಡೆ ಹೋಗಿದ್ದ ಅಜ್ಜಿ ಮನೆಗೆ ಬಂದು ನೋಡಿದಾಗ ಬಾಲಕಿಗೆ ರಕ್ತಸ್ರಾವವಾಗುತ್ತಿದ್ದನ್ನು ಕಂಡು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಾಲಕಿಗೆ ತೀವ್ರ ರಕ್ತಸ್ರಾವವಾಗಿತ್ತು ತುರ್ತು ವೈದ್ಯಕೀಯ ಆರೈಕೆಯನ್ನು ನೀಡಿದ್ದೇವೆ. ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಥಳೀಯ ಆಸ್ಪತ್ರೆಯ ಇನ್‍ಚಾರ್ಜ್ ಹೇಳಿದ್ದಾರೆ.

    ಅತ್ಯಾಚಾರದ ವೇಳೆ ಬಾಲಕಿ ಧರಿಸಿದ್ದ ಬಟ್ಟೆ ಮೇಲೆ ಇರುವ ರಕ್ತ ಮತ್ತು ವೀರ್ಯವನ್ನು ಸಂಗ್ರಹಿಸಿದ್ದೇವೆ. ವಿಜಯವಾಡ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಬಾಲಕಿ ಕುಟುಂಬ ಮತ್ತು ಪರೀಕ್ಷಿಸಿದ ವೈದ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಸೋಮವಾರ ಬಂಧಿಸಿದ್ದೇವೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವಳು ಅಪಾಯದಿಂದ ಪಾರಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಆರೋಪಿ ಬೆಂಗಳೂರಿನಲ್ಲಿ ಬಡಗಿ ಕೆಲಸ ಮಾಡುತ್ತಿದ್ದ. ಆದರೆ ರಾಷ್ಟ್ರವ್ಯಾಪಿ ಲಾಕ್‍ಡೌನ್ ನಂತರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪೊಲೀಸರು ಹೇಳುವ ಪ್ರಕಾರ ಆರೋಪಿ ಬಾಲಕಿಯನ್ನು ಸ್ನಾನಗೃಹಕ್ಕೆ ಎಳೆದೊಯ್ದಿದ್ದಾನೆ ಅಲ್ಲಿ ಅವನು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.

    ಮಕ್ಕಳ ಮೇಲೆ ಲೈಂಗಿಕ ಅಪರಾಧಗಳಿಂದ (ಪೋಕ್ಸೋ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲೇ ಕೊರೊನಾ ಸೋಂಕಿತ 14ರ ಬಾಲಕಿ ಮೇಲೆ ಅತ್ಯಾಚಾರ

    ಕ್ವಾರಂಟೈನ್ ಕೇಂದ್ರದಲ್ಲೇ ಕೊರೊನಾ ಸೋಂಕಿತ 14ರ ಬಾಲಕಿ ಮೇಲೆ ಅತ್ಯಾಚಾರ

    ನವದೆಹಲಿ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿರುವ ಕ್ವಾರಂಟೈನ್ ಕೇಂದ್ರದಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಯುವಕ ಅತ್ಯಾಚಾರ ಎಸಗಿದ್ದಾನೆ.

    ಬಾಲಕಿ ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ 19 ವರ್ಷದ ಕೊರೊನಾ ಸೋಂಕಿತ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯನ್ನು ಮತ್ತೊಬ್ಬ ಕೊರೊನಾ ರೋಗಿ ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಿಸಿದ್ದಾನೆ. ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿ ಯಾರು ಬಾರದಂತೆ ನೋಡಿಕೊಂಡಿದ್ದಾನೆ.

    ಘಟನೆ ನಡೆದ ಬಳಿಕ ಬಾಲಕಿ ಭಯದಿಂದ ತನ್ನ ಹಾಸಿಕೆ ಕಡೆ ಮರಳಿದ್ದು, ಮರುದಿನ ತನ್ನೊಂದಿಗಿದ್ದ ಇತರೇ ಬಾಲಕಿಯರಿಗೆ ಕೃತ್ಯದ ಬಗ್ಗೆ ತಿಳಿಸಿದ್ದಾಳೆ. ಆ ಬಳಿಕ ಬಾಲಕಿಯ ಗೆಳತಿಯರು ಆರೋಪಿಗಳ ದುಷ್ಕೃತ್ಯದ ಬಗ್ಗೆ ಕ್ವಾರಂಟೈನ್ ಕೇಂದ್ರದ ನಿರ್ವಹಕರಿಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ನಿರ್ವಹಕರು ಪೊಲೀಸರಿಗೆ ದೂರು ನೀಡಿದ್ದರು.

    ಸದ್ಯ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ. ಕಾಮುಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆರೋಪಿಗಳು ಕೊರೊನಾದಿಂದ ಗುಣಮುಖರಾದ ಬಳಿಕ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಕ್ವಾರಂಟೈನ್ ಕೇಂದ್ರದಲ್ಲಿ 6 ರಿಂದ 7 ದಿನಗಳ ಕಾಲ ಆರೋಪಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಬಾಲಕಿಯೊಂದಿಗೆ ಮಾತನಾಡುತ್ತಿದ್ದರು. ಘಟನೆ ನಡೆದ ರಾತ್ರಿಯೂ ಬಾಲಕಿ ಶೌಚಾಲಯಕ್ಕೆ ತೆರಳುತ್ತಿದ್ದ ವೇಳೆ ಮಾತನಾಡಿದ್ದ ಆರೋಪಿ, ಮತ್ತೊಬ್ಬನ ಸಹಾಯ ಪಡೆದು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಘಟನೆಯಿಂದ ಕ್ವಾರಂಟೈನ್ ಕೇಂದ್ರದಲ್ಲಿರುವ ಮಹಿಳೆಯರು ಆತಂಕಗೊಂಡಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳಲು ಕ್ವಾರಂಟೈನ್ ಕೇಂದ್ರಗಳಿಗೆ ಆಗಮಿಸಿದರೆ ಇಲ್ಲಿ ಕಾಮುಕರ ಆತಂಕ ಎದುರಾಗಿದೆ ಎಂದು ಮಹಿಳೆಯರು ಹೇಳಿದ್ದಾರೆ. ಇದು ದೆಹಲಿಯ ಕ್ವಾರಂಟೈನ್ ಕೇಂದ್ರದಲ್ಲಿ ವರದಿಯಾದ ಮೊದಲ ಲೈಂಗಿಕ ಕಿರುಕುಳದ ಪ್ರಕರಣವಾಗಿದೆ.

  • ಅಪ್ರಾಪ್ತೆಯ ಮೇಲೆ 8 ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಕಾಮುಕನ ಬಂಧನ

    ಅಪ್ರಾಪ್ತೆಯ ಮೇಲೆ 8 ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಕಾಮುಕನ ಬಂಧನ

    ಬೆಳಗಾವಿ: ಅಪ್ರಾಪ್ತೆಯನ್ನು ಅಪಹರಿಸಿ ಎಂಟು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಕಾಮುಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

    ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಅಂಬೇಡ್ಕರ್ ಗಲ್ಲಿಯ ವಸಿಮ್ ಅಲ್ಲಾಭಕ್ಷ ಬಾಗಿ (22) ಬಂಧಿತ ಆರೋಪಿ. ಅರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಆರೋಪಿ ಅಲ್ಲಾಭಕ್ಷ ಕೆಲ ತಿಂಗಳಗಳಿಂದ ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಬಾಲಕಿ ನಿರಾಕರಿಸಿದ್ದಾಳೆ.

    ಇದರಿಂದ ಆಕ್ರೋಶಗೊಂಡಿದ್ದ ಕಾಮುಕ ಜ.13 ರಂದು ಸಂಜೆ ವೇಳೆಯಲ್ಲಿ ಹೊರಗಡೆ ಬಂದಿದ್ದ ಬಾಲಕಿಗೆ ಚಾಕು ತೋರಿಸಿ ಹೆದರಿಸಿ ಅಪಹರಿಸಿದ್ದಾನೆ. ನಂತರ ಗ್ರಾಮಕ್ಕೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾಗಿ ಆರೋಪಿ ವಿರುದ್ಧ ಬಾಲಕಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಅಪ್ರಾಪ್ತೆ ಮೇಲೆ ಅತ್ಯಾಚಾರ – 20 ವರ್ಷ ಜೈಲು ಶಿಕ್ಷೆ

    ಅಪ್ರಾಪ್ತೆ ಮೇಲೆ ಅತ್ಯಾಚಾರ – 20 ವರ್ಷ ಜೈಲು ಶಿಕ್ಷೆ

    ಚಿಕ್ಕಬಳ್ಳಾಪುರ: 7 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಸತ್ರ ನ್ಯಾಯಾಲಯ ಅದೇಶ ಮಾಡಿದೆ.

    ಜುಲೈ 31ರ 2019 ರಂದು 7 ವರ್ಷದ ಬಾಲಕಿಗೆ ಊಟ ಕೊಡಿಸುವುದಾಗಿ ನಂಬಿಸಿ, ಕರೆದುಕೊಂಡು ಹೋಗಿದ್ದ, ಗುಡಿಬಂಡೆ ತಾಲೂಕಿನ ಬಾಲೇನಹಳ್ಳಿಯ ಸತೀಶ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ.

    ಈ ಸಂಬಂಧ ಚಿಕ್ಕಬಳ್ಳಾಪುರ 1ನೇ ಹೆಚ್ಚುವರಿ ನ್ಯಾಯಾಧೀಶರಾದ ನಟರಾಜ್ ರವರು ಅಪರಾಧಿ ಸತೀಶ್ ಗೆ 20 ವರ್ಷ ಕಠಿಣ ಸಜೆ ವಿಧಿಸಿ ಆದೇಶಿಸಿ, 10000 ರೂಪಾಯಿ ದಂಡ ವಿಧಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಈ ಪ್ರಕರಣ ದಾಖಲಾಗಿತ್ತು.

  • 1ನೇ ತರಗತಿ ವಿದ್ಯಾರ್ಥಿಯಿಂದ ಸಹಪಾಠಿ ಮೇಲೆ ಅತ್ಯಾಚಾರಕ್ಕೆ ಯತ್ನ

    1ನೇ ತರಗತಿ ವಿದ್ಯಾರ್ಥಿಯಿಂದ ಸಹಪಾಠಿ ಮೇಲೆ ಅತ್ಯಾಚಾರಕ್ಕೆ ಯತ್ನ

    ಚಂಡೀಗಡ: ಸರ್ಕಾರಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಹರಿಯಾಣದ ಸಿರ್ಸಾದಲ್ಲಿ ನಡೆದಿದೆ.

    ಸಿರ್ಸಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಸಂಪರ್ಕಿಸಿದಾಗ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ತಿಳಿದಿದೆ. ನಂತರ ಸಂತ್ರಸ್ತೆಯ ತಾಯಿ ದೂರು ನೀಡಿದ್ದು, ಸಿರ್ಸಾ ಸದರ್ ಪೊಲೀಸರು ಅನಾಮಿಕ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಂತ್ರಸ್ತ ವಿದ್ಯಾರ್ಥಿನಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಅವಳು ಆರೋಪಿಯ ಹೆಸರು ನನಗೆ ತಿಳಿದಿಲ್ಲ. ಅವನ ಮುಖ ನೋಡಿ ಪತ್ತೆಹಚ್ಚಬಲ್ಲೆ ಎಂದು ತಿಳಿಸಿದ್ದಾಳೆ. ಹೀಗಾಗಿ ಆರೋಪಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿರ್ಸಾ ಪೊಲೀಸ್ ಉಪ ವರಿಷ್ಠಾಧಿಕಾರಿ(ಡಿಎಸ್‍ಪಿ)ರಾಜೇಶ್ ಕುಮಾರ್, ಹತ್ತಿರದ ಹಳ್ಳಿಯ ನಿವಾಸಿ ಸಂತ್ರಸ್ತೆಯ ತಾಯಿಯಿಂದ ಪೊಲೀಸರಿಗೆ ದೂರು ಬಂದಿದೆ. ತನ್ನ ಮಗಳು 1ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಊಟದ ಸಮಯದಲ್ಲಿ ಆಕೆಯ ಸಹಪಾಠಿ ಶಾಲೆಯಲ್ಲಿ ಅತ್ಯಾಚಾರ ಯತ್ನ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.

    ಘಟನೆ ನಂತರ ವಿದ್ಯಾರ್ಥಿನಿ ಹೊಟ್ಟೆನೋವೆಂದು ಅಳುತ್ತ ಮನೆಗೆ ಬಂದಿದ್ದಾಳೆ. ಆಗ ತಕ್ಷಣವೇ ಆಕೆಯ ತಾಯಿ ಹತ್ತಿರದ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಅವರು, ಸಿರ್ಸಾದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ನಂತರ ಸಿರ್ಸಾ ಆಸ್ಪತ್ರೆಗೆ ವಿದ್ಯಾರ್ಥಿನಿಯನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ಕುರಿತು ಡಿಎಸ್‍ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿ, ಆರೋಪಿಯ ಹೆಸರು ನನಗೆ ತಿಳಿದಿಲ್ಲ. ಆದರೆ, ಮುಖ ನೋಡಿ ಆತನನ್ನು ಗುರುತಿಸಬಲ್ಲೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರಿಗೆ ತಿಳಿಸಿದ್ದಾಳೆ. ಇದೀಗ ಸಂತ್ರಸ್ತೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಆಕೆಯನ್ನು ಶೀಘ್ರವೇ ಶಾಲೆಗೆ ಕರೆದೊಯ್ಯಲಾಗುವುದು. ಆರೋಪಿ ಪತ್ತೆಯಾದರೂ ಸಹ ಬಾಲಕ 7 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದರೆ ಕಾನೂನಿನಡಿ ಶಿಕ್ಷೆಗೆ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

  • ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ನಾಲ್ಕು ವರ್ಷ ನಿರಂತರ ಅತ್ಯಾಚಾರ

    ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ನಾಲ್ಕು ವರ್ಷ ನಿರಂತರ ಅತ್ಯಾಚಾರ

    ಮುಂಬೈ: 14 ವರ್ಷದ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದ ಕಾಮುಕ ತಂದೆಯನ್ನು ಮಹಾರಾಷ್ಟ್ರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

    ಕಳೆದ ಏಳು ವರ್ಷಗಳಿಂದ ಸಂತ್ರಸ್ತ ಬಾಲಕಿಯ ತಾಯಿ ಪತಿಯಿಂದ ದೂರವಾಗಿದ್ದಳು. ಹೀಗಾಗಿ ಬಾಲಕಿಯು ತಂದೆಯ ಜೊತೆಗೆ ಕಸರ್ವಾದವಲಿ ನಗರದಲ್ಲಿ ವಾಸವಾಗಿದ್ದಾಳೆ. ಆದರೆ ವಿಕೃತ ಮನಸ್ಸಿನ ತಂದೆ ಮಗಳ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಅತ್ಯಾಚಾರ ಮಾಡುತ್ತಿದ್ದ ಎಂದು ವರದಿಯಾಗಿದೆ.

    ತಂದೆ ನಿತ್ಯವೂ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಬಾಲಕಿ, ನೆರೆ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಜೊತೆಗೆ ಇದನ್ನು ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಬಾಲಕಿಯ ಮನವಿಯಂತೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಕುರಿತು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಗುರುವಾರ ಆರೋಪಿ ತಂದೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ವಿರುದ್ಧ ಐಪಿಸಿ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಇತ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ರಾಪ್ತ ಮಕ್ಕಳಿಬ್ಬರ ಮೇಲೆ ಮಲತಂದೆಯಿಂದಲೇ ಅತ್ಯಾಚಾರ

    ಅಪ್ರಾಪ್ತ ಮಕ್ಕಳಿಬ್ಬರ ಮೇಲೆ ಮಲತಂದೆಯಿಂದಲೇ ಅತ್ಯಾಚಾರ

    ಹಾವೇರಿ: ಅಪ್ರಾಪ್ತ ಮಕ್ಕಳಿಬ್ಬರ ಮೇಲೆ ಮಲತಂದೆಯೊಬ್ಬ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಹಾವೇರಿಯಲ್ಲಿ ನಡೆದಿದೆ.

    ಡಿಟಿಪಿ ಆಪರೇಟರ್ ಕೆಲಸ ಮಾಡುತ್ತಿದ್ದ ದೀಪಕ ಉಪಳೆ (38) ಅತ್ಯಾಚಾರ ಎಸಗಿದ ಆರೋಪಿ. ಕೆಲವು ವರ್ಷಗಳ ಹಿಂದೆ ದೀಪಕ್ ವಿಧವೆಯೊಬ್ಬರನ್ನು ಮದುವೆಯಾಗಿದ್ದ. ಅವಳಿಗೆ ಎರಡು ಜನ ಹೆಣ್ಣು ಮಕ್ಕಳಿದ್ದು, ದೀಪಕ್ ಜೊತೆಗೆ ವಾಸಿಸುತ್ತಿದ್ದರು.

    ವಿಧವೆಯ ಇಬ್ಬರು ಮಕ್ಕಳ ಮೇಲೂ ಆರೋಪಿ ದೀಪಕ್ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಹಾವೇರಿ ನಗರದ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.