Tag: ಪೋಕ್ಸೊ ಕಾಯ್ದೆ

  • ಮಕ್ಕಳ ಮೇಲಿನ ಲೈಂಗಿಕ ದೃಶ್ಯಗಳ ಡೌನ್‍ಲೋಡ್, ವೀಕ್ಷಣೆ ಅಪರಾಧ: ಸುಪ್ರೀಂ ಮಹತ್ವದ ತೀರ್ಪು

    ಮಕ್ಕಳ ಮೇಲಿನ ಲೈಂಗಿಕ ದೃಶ್ಯಗಳ ಡೌನ್‍ಲೋಡ್, ವೀಕ್ಷಣೆ ಅಪರಾಧ: ಸುಪ್ರೀಂ ಮಹತ್ವದ ತೀರ್ಪು

    ನವದೆಹಲಿ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡುವುದು ಮತ್ತು ನೋಡುವುದು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO Act) ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನಿನ ಕುರಿತು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.

    ಕೇವಲ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡುವುದು ಮತ್ತು ನೋಡುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಲ್ಲ ಎಂದು ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠವು ತಳ್ಳಿಹಾಕಿತು. ತೀರ್ಪು ನೀಡುವಲ್ಲಿ ಹೈಕೋರ್ಟ್ ಮಹಾ ತಪ್ಪು ಎಸಗಿದೆ ಎಸಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    ನ್ಯಾಯಾಲಯವು ‘Child pornography’ ಪದದ ಬಳಕೆಯನ್ನು ಅಸಮ್ಮತಿಗೊಳಿಸಿದೆ ಮತ್ತು ಸಂಸತ್ತು ಪೋಕ್ಸೊ ಕಾಯಿದೆಗೆ ತಿದ್ದುಪಡಿಯನ್ನು ತರಬೇಕು ಎಂದು ಸಲಹೆ ನೀಡಿತು. ನಾವು ಸುಗ್ರೀವಾಜ್ಞೆಯನ್ನು ತರಬಹುದು ಎಂದು ಸೂಚಿಸಿದ್ದೇವೆ. ಯಾವುದೇ ಆದೇಶಗಳಲ್ಲಿ ಇದನ್ನು `’Child pornography’  ಎಂದು ಉಲ್ಲೇಖಿಸದಂತೆ ನಾವು ಎಲ್ಲಾ ಕೆಳಹಂತದ ನ್ಯಾಯಾಲಯಗಳಿಗೆ ಸೂಚಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಯಾವುದೇ ಡಿಜಿಟಲ್ ಸಾಧನದಲ್ಲಿ ಯಾವುದೇ ರೂಪದಲ್ಲಿ, ಅಂತರ್ಜಾಲದಲ್ಲಿ ವ್ಯಕ್ತಿಯು ಯಾವುದೇ ಮಕ್ಕಳ ಅಶ್ಲೀಲ ದೃಶ್ಯವನ್ನು ವೀಕ್ಷಿಸುವುದು, ಹಂಚುವುದು ಅಥವಾ ಪ್ರದರ್ಶಿಸುವುದು ಸಹ ಅಪರಾಧವಾಗಿದೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 15ರ ಪ್ರಕಾರ, ಯಾವುದೇ ವ್ಯಕ್ತಿಯು ಮಗುವನ್ನು ಒಳಗೊಂಡ ಯಾವುದೇ ಅಶ್ಲೀಲ ವೀಡಿಯೋ ಅಥವಾ ಫೋಟೋ ಸಂಗ್ರಹಿಸಿ ಅದನ್ನು ನಾಶಪಡಿಸಲು ವಿಫಲವಾದರೆ 5,000 ರೂ. ಮತ್ತು ಪುನರಾವರ್ತಿತ ಅಪರಾಧಕ್ಕೆ 10,000 ರೂ. ದಂಡ ವಿಧಿಸಲಾಗುತ್ತದೆ. ಪ್ರಸಾರ ಮಾಡಲು ಸಂಗ್ರಹಿಸಿದರೆ, ದಂಡದ ಜೊತೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಮಕ್ಕಳ ಅಶ್ಲೀಲ ವಸ್ತುಗಳನ್ನು ಸಂಗ್ರಹಿಸಿದರೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ನಂತರದ ಅಪರಾಧದಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

    ಏನಿದು ಪ್ರಕರಣ?
    28 ವರ್ಷದ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡಿದ ಆರೋಪದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತ್ತು.

    ಮಕ್ಕಳ ಅಶ್ಲೀಲ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಿಸುವುದು ಅಪರಾಧವಲ್ಲ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಎನ್‍ಜಿಒ ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಈ ಆದೇಶವನ್ನು ನೀಡಲಾಗಿದೆ.

    ಎಸ್.ಹರೀಶ್ ಎಂಬಾತ ಮೊಬೈಲ್‌ನಲ್ಲಿ ಎರಡು ಮಕ್ಕಳ ಅಶ್ಲೀಲ ವೀಡಿಯೊಗಳನ್ನು ಡೌನ್‍ಲೋಡ್ ಮಾಡಿ ಮತ್ತು ವೀಕ್ಷಿಸಿದ್ದಕ್ಕಾಗಿ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ.

    ಇತ್ತೀಚೆಗೆ ಮಕ್ಕಳ ಅಶ್ಲೀಲ ದೃಶ್ಯಗಳು ಆಕಸ್ಮಿಕವಾಗಿ ಅಥವಾ ಸ್ವಯಂಚಾಲಿತವಾಗಿ ಡೌನ್‍ಲೋಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿತ್ತು. ಇದನ್ನೂ ಓದಿ: ಓಣಂ ರಂಗೋಲಿ ಹಾಕಿದ್ದಕ್ಕೆ ಕಾಲಿನಿಂದ ಅಳಿಸಿ ನೃತ್ಯ ಮಾಡಿ ಕಿರಿಕ್‌

  • ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್

    ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್

    ಚಂಡೀಗಢ: ಶಾಲೆಯೊಂದರ ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋವನ್ನು (Obscene Video) ತೋರಿಸಿದ ಶಿಕ್ಷಕನನ್ನು ಪಂಜಾಬ್ (Punjab) ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ರಾಜೀವ್ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಗೋಬಿಂದಪುರ ಮೊಹಲ್ಲಾದ (Gobindpura Mohalla) ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ ಆರನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದ. ಅಲ್ಲದೆ ಅಸಭ್ಯವಾಗಿ ಸನ್ನೆ (Vulgar Gestures) ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    ಶಾಲಾ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಮೇಲೆ ಪೋಕ್ಸೊ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸತ್ನಾಂಪುರನ (Satnampura) ಠಾಣಾಧಿಕಾರಿ ಗುರಿಂದರ್ಜಿತ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

  • ಚಿಕ್ಕಮ್ಮನ ಮಗಳು, ಸ್ವಂತ ಅಜ್ಜಿಯ ಮೇಲೆಯೇ ಅತ್ಯಾಚಾರ – ಇಬ್ಬರು ಸಹೋದರರು ಅರೆಸ್ಟ್

    ಭೋಪಾಲ್: 16 ವರ್ಷದ ಚಿಕ್ಕಮ್ಮನ ಮಗಳು ಹಾಗೂ 65 ವರ್ಷದ ಸ್ವಂತ ಅಜ್ಜಿಯ ಮೇಲೆಯೇ ಸಹೋದರರಿಬ್ಬರು ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

    ರಕ್ಷಾಬಂಧನ ದಿನದಂದು ದೆಹಲಿಯಿಂದ ಬಂದಿದ್ದ ಇಬ್ಬರು ಅತ್ಯಾಚಾರ ಎಸಗಿದ್ದಾರೆ. 21-22 ವರ್ಷದ ಸಹೋದರರು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಥಳಿಸಿದ್ದಾರೆ. ಇದೇ ಆಗಸ್ಟ್ 20 ರಂದು ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಬ್ರೇಕ್- ಹೈಕೋರ್ಟ್ ಆದೇಶದ ಬೆನ್ನಲ್ಲೇ ಕಣ್ಣೀರಿಟ್ಟ ಯಶವಂತ್

    STOP RAPE

    ಅಲ್ಲದೇ ಬಾಲಕಿ ಮೇಲಿನ ಅತ್ಯಾಚಾರ ತಡೆಯಲು ಮುಂದಾದ ಅಜ್ಜಿಯ ಮೇಲೂ ಅತ್ಯಾಚಾರ ಎಸಗಿದ್ದಾರೆ ಎಂದು ಅಜ್ಜಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: BBMP ಎಲೆಕ್ಷನ್‌ಗೆ ಕರಡು ಪಟ್ಟಿ ಸಿದ್ಧ – 6 ಲಕ್ಷಕ್ಕೂ ಅಧಿಕ ಮತದಾರರ ಸಂಖ್ಯೆ ಹೆಚ್ಚಳ

    ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಹೈದರಾಬಾದ್: ಅಪ್ರಾಪ್ತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್, ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

    ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಯಾವುದೇ ಹಿನ್ನೆಲೆಯುಳ್ಳವರಾಗಿದ್ದರೂ ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು? 

    ಇದಕ್ಕೆ ಪ್ರತಿಕ್ರಿಯಿಸಿರುವ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ, ಇದೊಂದು ಘೋರ ಘಟನೆ. ಎಲ್ಲ ಅಪರಾಧಿಗಳ ಹಿನ್ನೆಲೆಯನ್ನು ಕಲೆಹಾಕಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ತೆಲಂಗಾಣ ಡಿಜಿಪಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಟಿ ಚೈತ್ರಾ ಪತಿ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

    ಅತ್ಯಾಚಾರ ಘಟನೆಯ ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ಜುಬ್ಲಿ ಹಿಲ್ಸ್ ಪಿಎಸ್‌ನಲ್ಲಿ ಜನಸೇನಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಲವರನ್ನು ವಶಕ್ಕೆ ಪಡೆದ ಪೊಲೀಸರು ಗೋಶಾಮಹಲ್ ಪೊಲೀಸ್ ಕೇಂದ್ರಕ್ಕೆ ಸ್ಥಳಾಂತರಿಸಿದರು.

    ಏನಿದು ಘಟನೆ?: ಮೇ 28 ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಕ್ರಮ ಕೈಗೊಂಡಿರುವ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354 ಮತ್ತು 323ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 9 ಅನ್ನು ಪೋಕ್ಸೊ ಕಾಯ್ದೆಯ 10 ರೊಂದಿಗೆ ಈ ಪ್ರಕರಣದಲ್ಲಿ ಸೇರಿಸಲಾಗಿದೆ.

    CCTVಯಲ್ಲಿ ದೃಶ್ಯ ಸೆರೆ: ಶಂಕಿತ ಆರೋಪಿಗಳು ಪಬ್‌ನನ ಹೊರಗೆ ಅಪ್ರಾಪ್ತೆ ಜೊತೆ ನಿಂತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹುಡುಗರು ಸಂತ್ರಸ್ತೆಯನ್ನು ಮನೆಗೆ ಬಿಡಲು ಮುಂದಾಗಿದ್ದಾರೆ. ಸಂತ್ರಸ್ತೆ ಕಾರಿನ ಬಳಿ ಹೋಗುತ್ತಿದಂತೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಕಾರಿನೊಳಗೆಯೇ ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ನಿಂತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ರೂಮ್‍ನಲ್ಲಿ ಮಲಗಿದ್ದ ಅಪ್ರಾಪ್ತೆ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ

    ರೂಮ್‍ನಲ್ಲಿ ಮಲಗಿದ್ದ ಅಪ್ರಾಪ್ತೆ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ

    ಲಕ್ನೋ: ಅಪ್ರಾಪ್ತೆ ಮಲಗಿದ್ದ ರೂಮ್‍ಗೆ ನುಗ್ಗಿ ಆಕೆಯ ಮೇಲೆ ಅಪ್ರಾಪ್ತನೇ ಅತ್ಯಾಚಾರ ಎಸಗಿರುವ ಘಟನೆ ಮೇ 17 ರಂದು ಉತ್ತರ ಪ್ರದೇಶದ ಗುರುಗ್ರಾಮ್‍ನಲ್ಲಿ ಬೆಳಕಿಗೆ ಬಂದಿದೆ.

    ಆರೋಪಿಯು ಬಾಲಕಿ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಆಕೆಯ ಕೋಣೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಅವನ ಸ್ನೇಹಿತ ಕೋಣೆಗೆ ಬೀಗ ಹಾಕಿ ಕಾವಲು ಕಾಯುತ್ತಿದ್ದ ಎಂದು ಸಂತ್ರಸ್ತೆಯ ಸಹೋದರಿ ಬಜ್‍ಘೇರಾ ಪೊಲೀಸ್ ಠಾಣೆಗೆ ಬಂದು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ವೇಳೆ ಮಗಳ ಕಿರುಚಾಟವನ್ನು ಕೇಳಿ ಹುಡುಗಿಯ ಪೊಷಕರು ಕೊಠಡಿಯ ಹತ್ತಿರ ಧಾವಿಸಿದ್ದು, ಈ ಸಂದರ್ಭದಲ್ಲಿ ಆರೋಪಿಗಳಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ತಾಯಿ ಶವದೊಂದಿಗೆ 10 ದಿನ ಮನೆಯಲ್ಲೇ ಕಾಲ ಕಳೆದ ಮಗಳು

    STOP RAPE

    ಘಟನೆಯ ಕುರಿತು ಇಬ್ಬರೂ ಅಪ್ರಾಪ್ತರನ್ನು ವಶಕ್ಕೆ ಪಡೆದು ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ಫರಿದಾಬಾದ್‍ನಲ್ಲಿರುವ ರಿಮಾಂಡ್ ಹೋಂನಲ್ಲಿ (ವೀಕ್ಷಣಾಲಯ) ಇಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಿನ್ನ ಹೆಸರು ಮೊಹಮ್ಮದ್? – ಬಿಜೆಪಿ ಮಾಜಿ ಕಾರ್ಪೊರೇಟರ್ ಪತಿಯಿಂದ ಹಲ್ಲೆಗೊಳಗಾದ ವೃದ್ಧ ಸಾವು

    ಆರೋಪಿ ಈ ಹಿಂದೆ ಬಾಲಕಿಯ ಬಾತ್‍ರೂಮ್‍ಗೆ ನುಗ್ಗಿದ್ದನು. ನಂತರದಲ್ಲಿ ತಾನು ತಪ್ಪಾಗಿ ಪ್ರವೇಶಿಸಿದ್ದೇನೆ ಎಂದು ಹೇಳಿ ಅಲ್ಲಿಂದ ಹೊರಬಿದ್ದಿದ್ದನು ಎಂದು ದೂರುದಾರರು ಆರೋಪಿಸಿದ್ದಾರೆ.

    ಇದರ ಮಧ್ಯೆ, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದೆ.

  • ತಂದೆಯ ಸ್ನೇಹಿತನಿಂದಲೇ ಅಪ್ರಾಪ್ತೆಯ ಮೇಲೆ ರೇಪ್

    ತಂದೆಯ ಸ್ನೇಹಿತನಿಂದಲೇ ಅಪ್ರಾಪ್ತೆಯ ಮೇಲೆ ರೇಪ್

    ಜೈಪುರ: ಬಾಲಕಿಯೊಬ್ಬಳ ಮೇಲೆ ಆಕೆಯ ತಂದೆಯ ಸ್ನೇಹಿತ ಅತ್ಯಾಚಾರಗೈದು ಪರಾರಿಯಾದ ಘಟನೆ ತಹ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿಯು ಸಂಜೆ 7 ಗಂಟೆ ಸುಮಾರಿಗೆ ತರಕಾರಿ ಖರೀದಿಸಲು ಹೋಗಿದ್ದಳು. ಈ ವೇಳೆ ಆರೋಪಿಯು ಆಕೆಯನ್ನು ಅಡ್ಡಗಟ್ಟಿ ಎಲ್ಲಿಗೆ ಹೋಗುತ್ತಿದ್ದೀಯ್ಯಾ ಎಂದು ಪ್ರಶ್ನಿಸಿದ್ದಾನೆ. ತರಕಾರಿ ಖರೀದಿಸಲು ಹೋಗುತ್ತಿದ್ದೇನೆ ಅಂತ ಬಾಲಕಿ ಉತ್ತರಿಸಿದಾಗ, ಹಾಗಾದರೆ ನಾನು ನಿನ್ನ ಜೊತೆ ಬರುವೆ ನಡೆ ಅಂತ ಹೇಳಿ ಆರೋಪಿಯು ಆಕೆಯನ್ನು ತರಕಾರಿ ತರಲು ತನ್ನೊಂದಿಗೆ ಕರೆದೊಯ್ದಿದ್ದಾನೆ.

    ಬಳಿಕ ಆ ವ್ಯಕ್ತಿ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅದೇ ಸಮಯದಲ್ಲಿ ಸಮೀಪದ ಪ್ರದೇಶವೊಂದರಲ್ಲಿ ದಾಟಿ ಹೋಗುತ್ತಿದ್ದ ಕೆಲವು ಯುವಕರು, ಹುಡುಗಿಯ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಯುವಕರು ತಮ್ಮನ್ನು ರಕ್ಷಿಸಿಕೊಳ್ಳಲು ಘಟನೆಯನ್ನು ರೆಕಾರ್ಡ್ ಮಾಡಿ ಘಟನೆಯ ಬಗ್ಗೆ ಸ್ಥಳೀಯರಿಗೆ ತಿಳಿಸಿದ್ದಾರೆ. ಯುವಕರನ್ನು ಕಂಡ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಹ್ಲಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದ್ದು ರಾಜ್‍ಗಢಕ್ಕೆ ಸ್ಥಳಾಂತರಿಸಲಾಗಿದೆ. ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಬಳಿಕ ಸಂತ್ರಸ್ತೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯ ಇತರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಾಲಚಂದ್ರ ಜಾರಕಿಹೊಳಿ ಬದಲು ಆಪ್ತ ಕಾರ್ಯದರ್ಶಿಗಳಿಂದ ಕಾಮಗಾರಿ ಉದ್ಘಾಟನೆ : ಕಾಂಗ್ರೆಸ್

    ಈ ಬಗ್ಗೆ ಅಲ್ವಾರ್ ಎಸ್ಪಿ ತೇಜಸ್ವಿ ಗೌತಮ್ ಮಾತನಾಡಿ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ ಎಂದು ಹೇಳಿದರು.

  • ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‍ನಲ್ಲಿ ಅಶ್ಲೀಲ ವೀಡಿಯೋ ಶೇರ್ ಮಾಡಿದ ಶಿಕ್ಷಕನ ಬಂಧನ

    ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‍ನಲ್ಲಿ ಅಶ್ಲೀಲ ವೀಡಿಯೋ ಶೇರ್ ಮಾಡಿದ ಶಿಕ್ಷಕನ ಬಂಧನ

    ಚೆನ್ನೈ: ಶಾಲಾ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪಿಗೆ ಅಶ್ಲೀಲ ವೀಡಿಯೋ ಹಂಚಿಕೊಂಡ ಘಟನೆ ಚೆನ್ನೈಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

    ಅಂಬತ್ತೂರಿನ ಮತ್ತಿವನನ್ ಎಂಬಾತ ಅಶ್ಲೀಲ ವೀಡಿಯೋವನ್ನು ಹಂಚಿಕೊಂಡ ಗಣಿತ ಶಿಕ್ಷಕ. ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಆನ್‍ಲೈನ್ ತರಗತಿಗಳನ್ನು ನಡೆಸಲು ರಚಿಸಲಾದ ವಾಟ್ಸಾಪ್ ಗುಂಪಿನಲ್ಲಿ ಶಿಕ್ಷಕನು 12 ವಿದ್ಯಾರ್ಥಿಗಳಿರುವಂತಹ ಗುಂಪಿನಲ್ಲಿ ಅಶ್ಲೀಲತೆಯ ವಿಷಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿವಾಜಿ ಪ್ರತಿಮೆಗೆ ಮಸಿ – ರಣಧೀರ ಪಡೆಯ 7 ಜನರ ಬಂಧನ

    ಮರುದಿನ ಬೆಳಗ್ಗೆ ವಿದ್ಯಾರ್ಥಿಗಳು ಸಂದೇಶವನ್ನು ನೋಡುವ ಸಂದರ್ಭದಲ್ಲಿ ವೀಡಿಯೋವನ್ನು ನೋಡಿ ಅಘಾತಗೊಳಗಾಗಿ ತಕ್ಷಣವೇ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದರು. ಬಳಿಕ ಅವರನ್ನು ಮಂಡಳಿಯವರು ತನಿಖೆ ನಡೆಸಿದ್ದು ಮದ್ಯ ಸೇವನೆಯ ಅಮಲಿನಲ್ಲಿ ವೀಡಿಯೋ ಹಂಚಿಹೋಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಿವನನ್‍ನನ್ನು ಪೋಕ್ಸೊ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

  • 13 ವರ್ಷದವನಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ಟಿಎಂಸಿ ಸಂಸದ

    13 ವರ್ಷದವನಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ಟಿಎಂಸಿ ಸಂಸದ

    ನವದೆಹಲಿ: ನಾನು 13 ವರ್ಷದವನಿದ್ದಾಗ ಕೋಲ್ಕತ್ತಾದ ಬಸ್‍ನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.

    ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮಸೂದೆ-2019ಕ್ಕೆ ಬುಧವಾರ ರಾಜ್ಯಸಭೆಯು ಅನುಮೋದನೆ ನೀಡಿತು. ಈ ವೇಳೆ ಮಾತನಾಡಿದ ಸಂಸದರು, ನಾನು ಚಿಕ್ಕವನಿದ್ದಾಗ ಟೆನ್ನಿಸ್ ಆಡಿ ಶಾಟ್ರ್ಸ್ ಮೇಲೆ ಕಿಕ್ಕಿರಿದ ಬಸ್‍ನಲ್ಲಿ ಬರುತ್ತಿದ್ದೆ. ಆಗ ವ್ಯಕ್ತಿಯೊಬ್ಬ ನನ್ನ ತೊಡೆಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಹೀಗಾಗಿ ಹಿರಿಯರು ಇಂತಹ ವಿಷಯಗಳ ಬಗ್ಗೆ ಮಾತನಾಡಲು ಮಕ್ಕಳಿಗೆ ಧೈರ್ಯ ಬರುತ್ತದೆ ಎಂದು ಹೇಳಿದರು.

    ಪೋಕ್ಸೊ ಮಸೂದೆ-2019 ಮಸೂದೆಯ ಅನ್ವಯ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಲೈಂಗಿಕಚಿತ್ರಗಳಿಗೆ ಮಕ್ಕಳನ್ನು ಬಳಸಿಕೊಂಡ ಅಪರಾಧಿಗಳಿಗೆ ದಂಡ ಮತ್ತು ಸೆರೆವಾಸವನ್ನು ವಿಧಿಸಲು ಅವಕಾಶ ಮಾಡಿಕೊಡಲಿದೆ.

    ಈ ಮಸೂದೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮøತಿ ಇರಾನಿ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು. ಈ ವೇಳೆ ಮಾತನಾಡಿದ್ದ ಅವರು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವ ಅವಶ್ಯಕತೆ ಇದೆ. ಹೀಗಾಗಿ ಈ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.

    ಮಸೂದೆಯ ಕುರಿತು ಚರ್ಚೆ ನಡೆದಾಗ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ನೆನೆದರು. (ಪೋಕ್ಸೊ) ಮಸೂದೆ-2019ಕ್ಕೆ ಬುಧವಾರ ರಾಜ್ಯಸಭೆಯು ಅನುಮೋದನೆ ನೀಡಿತು. ಇತ್ತೀಚಿನ ದಿನಗಳಲ್ಲಿ ಮಕ್ಕಳ ವಿರುದ್ಧ ಅಪರಾಧಗಳು ಹೆಚ್ಚಾಗಿದ್ದು, 2019ರಲ್ಲಿಯೇ ಪೋಕ್ಸೊ ಕಾಯ್ದೆ ಅಡಿ ಸುಮಾರು 12,609 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ದೇಶಾದ್ಯಂತ 1.6 ಲಕ್ಷಕ್ಕೂ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ವರದಿಯಾಗಿದೆ.

  • 9 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ-ಅಳುತ್ತಿದ್ದಂತೆ ಬಾಯಿಗೆ ಬಟ್ಟೆ ಹಾಕಿ ಕೊಲೆಗೈದ

    9 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ-ಅಳುತ್ತಿದ್ದಂತೆ ಬಾಯಿಗೆ ಬಟ್ಟೆ ಹಾಕಿ ಕೊಲೆಗೈದ

    ಹೈದರಾಬಾದ್: ಕಾಮುಕನೊಬ್ಬ 9 ತಿಂಗಳ ಮಗುವಿನ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿರುವ ಅಮಾನವೀಯ ಘಟನೆ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ.

    9 ತಿಂಗಳ ಮಗು ಪೋಷಕರೊಂದಿಗೆ ಮೇಲ್ಚಾವಣೆ ಮೇಲೆ ಮಲಗಿದ್ದಾಗ ಬೇರೆಡೆ ಕರೆದೊಯ್ದು ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಪಕ್ಕದ ಮನೆಯವನೇ ಈ ಕೃತ್ಯವೆಸಗಿದ್ದು, ಮಗು ಅಳಲು ಪ್ರಾರಂಭಿಸುತ್ತಿದ್ದಂತೆ ಬಾಯಿಗೆ ಬಟ್ಟೆ ಹಾಕಿ ಬಿಗಿಯಾಗಿ ಹಿಡಿದ್ದರಿಂದ ಕಂದಮ್ಮ ಸಾವನ್ನಪ್ಪಿರುವ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಗು ಕಳೆದು ಹೋಗಿದೆ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಗುವಿನ ಜೊತೆಗೆ ಆರೋಪಿಯನ್ನೂ ಪತ್ತೆ ಹಚ್ಚಿದ್ದಾರೆ. ಪ್ರಜ್ಞಾಹೀನವಾಗಿದ್ದ ಮಗುವನ್ನು ಕೂಡಲೇ ಸ್ಥಳೀಯ ರವಾನಿಸಿದರೂ, ವೈದ್ಯರೂ ಕಂದಮ್ಮ ಈಗಾಗಲೇ ಸಾವನ್ನಪ್ಪಿದೆ ಎಂಬುದನ್ನು ದೃಢಪಡಿಸಿದ್ದಾರೆ.

    ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಗೆ ಮಗುವಿನ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಸಾವಿಗೆ ನಿಖರವಾದ ಕಾರಣ ಹಾಗೂ ಮಗು ಲೈಂಗಿಕ ದೌರ್ಜನ್ಯಕ್ಕೊಳಗಾಗಿದೆಯೇ ಅಥವಾ ಇಲ್ಲವೇ ಎಂಬುದು ಶವ ಪರೀಕ್ಷೆ ನಂತರ ತಿಳಿಯಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಿಯಕರನ ಜೊತೆಗೆ ಕುಳಿತಿದ್ದ ಬಾಲಕಿಯನ್ನು ಹೆದರಿಸಿ ಯುವಕನಿಂದ ರೇಪ್

    ಪ್ರಿಯಕರನ ಜೊತೆಗೆ ಕುಳಿತಿದ್ದ ಬಾಲಕಿಯನ್ನು ಹೆದರಿಸಿ ಯುವಕನಿಂದ ರೇಪ್

    ಹುಬ್ಬಳ್ಳಿ: ಪ್ರಿಯಕರನ ಜೊತೆಗೆ ಪಾರ್ಕ್ ನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಯನ್ನು ಹೆದರಿಸಿ ಅತ್ಯಾಚಾರ ಎಸಗಿದ್ದ ಆರೋಪಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಮೂವರು ಸಹಚರರನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ರೈಲ್ವೇ ಕ್ವಾಟರ್ಸ್ ಸಮೀಪ ಸೆಲ್ಟಮೆಂಟ್ ಪ್ರದೇಶದ ಕಿರಣ್ ಚಂದ್ರಶೇಖರ್ ಗೋಕಾಕ್ (28) ಅತ್ಯಾಚಾರ ಎಸಗಿದ ಕಾಮುಕ. ಆರೋಪಿಗೆ ಸಹಾಯ ಮಾಡಿದ ಅಭಿಷೇಕ್ ಬಳ್ಳಾರಿ (23), ರಾಹುಲಾ ಜಾಧವ್ (33) ಹಾಗೂ ಕನ್ನಯ್ಯ ಕೊರವರ (24) ಬಂಧಿತ ಆರೋಪಿಗಳು. ಅತ್ಯಾಚಾರ ಸಂತ್ರಸ್ತ ಬಾಲಕಿ 15 ವರ್ಷದವಳಾಗಿದ್ದು, ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

    ಏನಿದು ಪ್ರಕರಣ?:
    ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕಿಗೆ ತನ್ನ ಸಹಪಾಠಿಯ ಜೊತೆಗೆ ಪ್ರೇಮಾಂಕುರವಾಗಿದೆ. ಈ ಜೋಡಿ ಹಳೇ ಹುಬ್ಬಳ್ಳಿಯ ಮಂಟೂರು ರಸ್ತೆಯ ಪಾರ್ಕ್ ಒಂದರಲ್ಲಿ ಏಕಾಂತದಲ್ಲಿ ಕುಳಿತಿತ್ತು. ಈ ವೇಳೆ ಅಲ್ಲಿಗೆ ಬಂದ ಕಿರಣ್ ಚಂದ್ರಶೇಖರ್ ಗೋಕಾಕ್ ಹಾಗೂ ಆತನ ಸಹಚರರು ಇಬ್ಬರನ್ನು ರೇಗಿಸಿದ್ದಾರೆ. ಬಳಿಕ ಬಾಲಕಿಯನ್ನು ಬೆದರಿಸಿ ಎತ್ತಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಿರಣ್ ಗೋಕಾಕ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು, ಇನ್ನುಳಿದ ಮೂವರು ಆತನಿಗೆ ಸಹಾಯ ಮಾಡಿದ್ದಾರೆ.

    ತನ್ನ ಮೇಲೆ ಅತ್ಯಾಚಾರ ಮಾಡಿರುವ ಕುರಿತು ಸಂತ್ರಸ್ತ ಬಾಲಕಿ ಪೋಷಕರಿಗೆ ತಿಳಿಸಿದ್ದಾರೆ. ಈ ಸಂಬಂಧ ಅತ್ಯಾಚಾರ ಸಂತ್ರಸ್ತ ಬಾಲಕಿ ಪೋಷಕರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv