Tag: ಪೊಲೀಸ್ ಹೆಡ್ ಕಾನ್‌ಸ್ಟೇಬಲ್

  • ಮಾನಸಿಕ ಖಿನ್ನತೆಯಿಂದಾಗಿ ನೇಣಿಗೆ ಶರಣಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್ 

    ಮಾನಸಿಕ ಖಿನ್ನತೆಯಿಂದಾಗಿ ನೇಣಿಗೆ ಶರಣಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್ 

    ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ (Head Constable)  ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಅಗಳಕುಪ್ಪೆಯಲ್ಲಿ (Agalakuppe) ನಡೆದಿದೆ.

    ಉಮೇಶ್ (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಐದು ತಿಂಗಳ ಹಿಂದೆ ತನ್ನ ನಾಲ್ಕೂವರೆ ವರ್ಷದ ಮಗಳು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಇವರು ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು. ಇದರಿಂದ ಮನನೊಂದು ತನ್ನ ಬೈಕ್‌ನಲ್ಲಿ ಜಮೀನಿನ ಬಳಿ ತೆರಳಿದ್ದಾರೆ. ಬೈಕನ್ನು ಜಮೀನಿನ ಬಳಿ ನಿಲ್ಲಿಸಿ ಅಲ್ಲಿದ್ದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕಟ್ಟಡದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

    ಘಟನಾ ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೆಲಸದ ವಿಪರೀತ ಒತ್ತಡ- ಯುವಕ ಆತ್ಮಹತ್ಯೆ

  • ಹುಬ್ಬಳ್ಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ

    ಹುಬ್ಬಳ್ಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ

    ಹುಬ್ಬಳ್ಳಿ: ನೀರಿನ ವಿಷಯಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮತ್ತು ಪಕ್ಕದ ಮನೆಯವರ ಜೊತೆ ಮಾರಾಮಾರಿ ನಡೆದಿದ್ದು, ಎರಡು ಕುಟುಂಬಗಳು ಪರಸ್ಪರ ಮಾರಣಾಂತಿಕವಾಗಿ ಹಲ್ಲೆ ಮಾಡಿಕೊಂಡಿದ್ದಾರೆ.

    ಹಳೇ ಹುಬ್ಬಳ್ಳಿಯ ಸಹದೇವನಗರದಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪುರಾಣಿಕಮಠ್ ಹೆಡ್ ಕಾನ್ಸ್‍ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರಾಣಿಕಮಠ್ ಅವರ ಮನೆಯ ಪಕ್ಕದಲ್ಲಿರುವ ಭರತೇಶ್ ಅವರ ಜೊತೆಗೆ ಕುಡಿಯುವ ನೀರಿನ ಸಲುವಾಗಿ ಜಗಳ ಆರಂಭವಾಗಿದೆ. ಇದನ್ನೂ ಓದಿ: ವೈರಲ್ ಆಯ್ತು ಶಾರೂಖ್ ನ್ಯೂಲುಕ್ – ರಿಯಲ್ ಫೋಟೋ ರಿಲೀಸ್!

    ಜಗಳ ತಾರಕ್ಕೇರಿ ಇಬ್ಬರು ಇಟ್ಟಿಗೆ ಮತ್ತು ಕಬ್ಬಿಣದ ರಾಡ್ ನಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಪುರಾಣಿಕಮಠ್ ಮತ್ತು ಭರತೇಶ್ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.