Tag: ಪೊಲೀಸ್ ಸ್ಟೇಷನ್

  • ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು – ಗುಂಡಿನ ದಾಳಿ

    ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು – ಗುಂಡಿನ ದಾಳಿ

    ಇಸ್ಲಾಮಾಬಾದ್: ಪೊಲೀಸ್ ಮುಖ್ಯಸ್ಥರ ಕಚೇರಿಗೆ (Police Chief’s Office) ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ ಘಟನೆ ಪಾಕಿಸ್ತಾನದ (Pakistan) ಕರಾಚಿಯಲ್ಲಿ (Karachi) ನಡೆದಿದೆ.

    ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಕರಾಚಿಯ ಶೇರಿಯಾ ಫೈಸಲ್‍ನಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿಯ ಮೇಲೆ 8 ಉಗ್ರರು ದಾಳಿ ನಡೆಸಿದ್ದು, ಇಂದು (ಶುಕ್ರವಾರ) ರಾತ್ರಿ 10 ಗಂಟೆಯವರೆಗೂ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.

    ಘಟನೆ ಹಿನ್ನೆಲೆಯಲ್ಲಿ ಕರಾಚಿ ಪೊಲೀಸರು ಹಾಗೂ ಪಾಕಿಸ್ತಾನ ರೇಂಜರ್‌ಗಳು ಪ್ರದೇಶವನ್ನು ಸುತ್ತುವರೆದಿದ್ದಾರೆ. ದಾಳಿಗೆ 8 ಉಗ್ರರು ಹ್ಯಾಂಡ್ ಗ್ರೆನೇಡ್ ಹಾಗೂ ಬಂದೂಕುಗಳನ್ನು ಬಳಸಿದ್ದಾರೆ. ಘಟನೆ ವೇಳೆ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ವೇಳೆ ಕಿರಿಕ್ – ಇಬ್ಬರ ಹತ್ಯೆಯಲ್ಲಿ ಅಂತ್ಯ

    ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಘಟನೆಗೆ ಸಂಬಂಧಿಸಿ ತಮ್ಮ ವಲಯಗಳಿಂದ ಸಿಬ್ಬಂದಿಯನ್ನು ಕಳುಹಿಸಲು ಸಂಬಂಧಿತ ಡಿಐಜಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪೊಲೀಸ್ ಮುಖ್ಯಸ್ಥರ ಕಚೇರಿಯ ಮೇಲಿನ ದಾಳಿಯನ್ನು ಸ್ವೀಕಾರಾರ್ಹವಲ್ಲ. ಹೆಚ್ಚುವರಿ ಐಜಿ ಕಚೇರಿಯ ಮೇಲಿನ ನಡೆದ ದಾಳಿಯ ಹಿಂದಿನ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ತಿಳಿಸಿದರು. ಇದನ್ನೂ ಓದಿ: ಆಮ್ ಆದ್ಮಿಯಿಂದ ತುರುವೇಕೆರೆಯಲ್ಲಿ ಟೆನ್ನಿಸ್ ಕೃಷ್ಣ ಸ್ಪರ್ಧೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೊಲೀಸರಿಗೂ ದಿನಸಿ ವಿತರಣೆ- ಮಾದರಿಯಾದ ಬಿಗ್‍ಬಾಸ್ ವಿನ್ನರ್

    ಪೊಲೀಸರಿಗೂ ದಿನಸಿ ವಿತರಣೆ- ಮಾದರಿಯಾದ ಬಿಗ್‍ಬಾಸ್ ವಿನ್ನರ್

    ಬೆಂಗಳೂರು: ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಅನೇಕರು ತಿನ್ನಲೂ ಊಟವಿಲ್ಲದೇ ಪರದಾಡುತ್ತಿದ್ದಾರೆ. ಇತ್ತ ಪೊಲೀಸರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ದಿನಗೂಲಿ ಕಾರ್ಮಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಇಡೀ ತಿಂಗಳ ರೇಷನ್ ಮತ್ತು ಬಾಡಿಗೆ ನೀಡುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. ಇದೀಗ ಜನರ ರಕ್ಷಣೆಗೆ ನಿಂತಿರುವ ಪೊಲೀಸರಿಗೂ ಬಿಗ್‍ಬಾಸ್ ವಿನ್ನರ್ ಸಹಾಯ ಮಾಡುತ್ತಿದ್ದಾರೆ.

    ಶೈನ್ ಶೆಟ್ಟಿ ಮತ್ತು ಅವರ ತಂಡದವರು ಸೇರಿಕೊಂಡು ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ದಿನಸಿಯನ್ನು ವಿತರಣೆ ಮಾಡುತ್ತಿದ್ದಾರೆ. ಈ ನಡುವೆ ಪೊಲೀಸರಿಗೂ ದಿನಸಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಮಾದರಿಯಾಗಿದ್ದಾರೆ. ಶೈನ್ ಮತ್ತು ಅವರ ತಂಡವರು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ದಿನಗೂಲಿ ಕಾರ್ಮಿಕರಿಗೆ ಬಾಡಿಗೆ, ಇಡೀ ತಿಂಗ್ಳ ರೇಷನ್ ವಿತರಣೆ – ಶೈನ್ ಶೆಟ್ಟಿ

    ಈ ವಿಡಿಯೋವನ್ನು ಶೈನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಂದು ತಿಂಗಳಿಗೆ ಬೇಕಾಗುವ ಸಾಮಗ್ರಿಗಳನ್ನು ತಂಡದವರ ಜೊತೆ ಸೇರಿಕೊಂಡು ಪ್ಯಾಕ್ ಮಾಡಿದ್ದಾರೆ. ನಂತರ ಕಾರಿನ ಮೂಲಕ ಅದನ್ನು ಅಗತ್ಯವಿರುವವರಿಗೆ ಸಾಗಿಸುತ್ತಿದ್ದಾರೆ ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೇ ರೀತಿ ಪೊಲೀಸರಿಗೆ ದಿನಸಿ ನೀಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

    https://www.instagram.com/p/B-VwMbahQBr/

    “ಪೊಲೀಸರು ಜನರ ಆರೋಗ್ಯದ ದೃಷ್ಟಿಯಿಂದ ಹಗಲು-ರಾತ್ರಿ ಎನ್ನದೇ ಕರ್ತವ್ಯ ಮಾಡುತ್ತಿದ್ದಾರೆ. ಅವರ ಸೇವೆಗಳಿಗೆ ನಾವು ಕೃತಜ್ಞತೆ ತೋರಿಸಬೇಕಾಗಿದೆ. ಆದ್ದರಿಂದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಮತ್ತು ಸುಬ್ರಮಣ್ಯಪುರ ಪೊಲೀಸ್ ಠಾಣೆಗಳಿಗೆ ಹೋಗಿ ರೇಷನ್ ನೀಡಿದ್ದೇವೆ. ಎಷ್ಟೋ ಪೊಲೀಸರು ಹೋಟೆಲ್‍ಗಳಲ್ಲಿ ಊಟ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೋಟೆಲ್‍ಗಳನ್ನು ಸ್ಥಗಿತಗೊಳಿಸುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರಿಗೂ ರೇಷನ್ ನೀಡುತ್ತಿದ್ದೇವೆ. ಜೊತೆಗೆ ಅಗತ್ಯವಿರುವ ಜನರಿಗೂ ದಿನಸಿಯನ್ನು ವಿತರಣೆ ಮಾಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

    ಪೊಲೀಸ್ ಸ್ಟೇಷನ್‍ಗೂ ದಿನಸಿ ನೀಡುವ ಮೂಲಕ ಶೈನ್ ಶೆಟ್ಟಿ ಮತ್ತು ತಂಡ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

     

  • ಸ್ಟೇಷನ್‍ನಲ್ಲಿ ಹೇಗಿದ್ದೀನಿ ಗೊತ್ತಾ? ‘ಬಂಡೆ’ ಕಣ್ಣಂಚಲ್ಲಿ ನೀರು!

    ಸ್ಟೇಷನ್‍ನಲ್ಲಿ ಹೇಗಿದ್ದೀನಿ ಗೊತ್ತಾ? ‘ಬಂಡೆ’ ಕಣ್ಣಂಚಲ್ಲಿ ನೀರು!

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೆಪ್ಟೆಂಬರ್ 3ರಿಂದ ಇಡಿ ಬಂಧನದಲ್ಲಿದ್ದಾರೆ. ಸೆಪ್ಟೆಂಬರ್ 3ರಂದು ವಿಚಾರಣೆಗೆ ಹಾಜರಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಸೆಪ್ಟೆಂಬರ್ 4ರಂದು ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರವರೆಗೆ ಇಡಿ ವಶಕ್ಕೆ ನೀಡಿದೆ. ಕಳೆದ ಮೂರು ದಿನಗಳಿಂದ ಸೆಲ್ ನಲ್ಲಿರುವ ಡಿ.ಕೆ.ಶಿವಕುಮಾರ್ ಪೊಲೀಸ್ ಸ್ಟೇಷನ್ ನಲ್ಲಿ ಹೇಗಿದ್ದೀನಿ ಗೊತ್ತಾ ಎಂದು ಕಾಂಗ್ರೆಸ್ ನಾಯಕರ ಮುಂದೆ ಭಾವುಕರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಇಡಿ ವಿಚಾರಣೆ ಬಳಿಕ ಪ್ರತಿದಿನ ಡಿಕೆಶಿಯವರನ್ನು ದೆಹಲಿಯ ತುಘಲಕ್ ಪೊಲೀಸ್ ಸ್ಟೇಷನ್ ನಲ್ಲಿ ಇರಿಸಲಾಗುತ್ತದೆ. ಆಪ್ತರು ಭೇಟಿಯಾದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಜೈಲಿನ ಅವ್ಯವಸ್ಥೆಯ ಬಗ್ಗೆ ಹೇಳಿ ಭಾವುಕರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ರಾಜ್ಯ ಕಾಂಗ್ರೆಸ್ ನಾಯಕ ಈ ವಿಷಯವನ್ನು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ತುಘಲಕ್ ಪೊಲೀಸ್ ಠಾಣೆಯಲ್ಲಿ ಕಾಮನ್ ಟಾಯ್ಲೆಟ್ ಬಳಸಬೇಕು. ವಿಶ್ರಮಿಸಲು ಒಂದು ದಿವಾನ್ ಕಾಟ್ ನೀಡಿದ್ದು, ಮಲಗಲು ಒಂದು ಚಾಪೆ ಮತ್ತು ಬೆಡ್ ಶೀಟ್ ನೀಡಿದ್ದಾರೆ. ಸೆಲ್ ನಲ್ಲಿಯ ವಾಸನೆಯಿಂದ ಇಲ್ಲಿರಲು ಸಾಧ್ಯವಾಗುತ್ತಿಲ್ಲ. ಠಾಣೆಯಲ್ಲಿ ನೀಡಿರುವ ಸೌಲಭ್ಯಗಳು ಇಷ್ಟೇ ಎಂದು ಡಿ.ಕೆ.ಶಿವಕುಮಾರ್ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.