Tag: ಪೊಲೀಸ್ ಸ್ಟೇಶನ್

  • ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ : ಸಿಂಗಂ ಖ್ಯಾತಿಯ ಅಧಿಕಾರಿ ರಾಜೇಶ್ ಕೆಲಸಕ್ಕೆ ಮೆಚ್ಚುಗೆ

    ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ : ಸಿಂಗಂ ಖ್ಯಾತಿಯ ಅಧಿಕಾರಿ ರಾಜೇಶ್ ಕೆಲಸಕ್ಕೆ ಮೆಚ್ಚುಗೆ

    ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಬಿಗುವಿನ ವಾತಾವರಣವಿರುತ್ತದೆ, ವಿನಾಕಾರಣ ಕೂರಿಸ್ತಾರೆ. ಅಲ್ಲಿ ಬೈಗಳಗಳ ಹೊರತಾಗಿ ಮತ್ತೇನೂ ಕೇಳುವುದಿಲ್ಲ ಎನ್ನುವುದು ರೂಢಿಗತ ಮಾತು. ಆದರೆ, ಬೆಂಗಳೂರಿನ ಠಾಣೆಯೊಂದರಲ್ಲಿ ದೂರು ಕೊಡಲು ಬಂದವರಿಗಾಗಿಯೇ ಸುಸಜ್ಜಿತ ಗ್ರಂಥಾಲಯವನ್ನು ಶುರು ಮಾಡಿದ್ದಾರೆ, ಅಲ್ಲಿನ ಠಾಣಾಧಿಕಾರಿ ಎಲ್.ವೈ ರಾಜೇಶ್. ನಿನ್ನೆಯಷ್ಟೇ ಆ ಲೈಬ್ರರಿ ಉದ್ಘಾಟನೆಯಾಗಿದ್ದು, ರಾಜೇಶ್ ಅವರ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ದೂರು ಕೊಡಲು ಠಾಣೆಗೆ ಬಂದಾಗ, ಅಲ್ಲಷ್ಟು ಹೊತ್ತು ಕಳೆಯಬೇಕಾದ ಸಂದರ್ಭ ಬರುವುದು ಸಹಜ. ಅಧಿಕಾರಿಗಳ ಮೀಟಿಂಗ್, ಕೆಲಸದ ಒತ್ತಡದ ಕಾರಣಕ್ಕಾಗಿಯೇ ದೂರುದಾರರು ಕಾಯಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಅವರ ಸಮಯವನ್ನು ಹಾಳು ಮಾಡಬಾರದು ಎನ್ನುವ ಕಾರಣಕ್ಕಾಗಿ ರಾಜೇಶ್ ಅವರು ತಮ್ಮ ಠಾಣೆಯಲ್ಲಿ ಗ್ರಂಥಾಲಯ ಶುರು ಮಾಡಿದ್ದಾರೆ. ಕನ್ನಡದ ಹೆಸರಾಂತ ಲೇಖಕರ ಪುಸ್ತಕಗಳ ಜೊತೆ ಉದಯೋನ್ಮುಖ ಲೇಖಕರ ಪುಸ್ತಕಗಳನ್ನು ಲೈಬ್ರರಿಯಲ್ಲಿಟ್ಟು ಓದುವ ಅಭಿರುಚಿಯನ್ನು ಹೆಚ್ಚಿಸುತ್ತಿದ್ದಾರೆ. ದೂರು ಕೊಡಲು ಬಂದವರು ಗಂಟೆಗಟ್ಟಲೆ ಕಾಯಬೇಕಾದ ಸಂದರ್ಭದಲ್ಲಿ  ಪುಸ್ತಕಗಳನ್ನು ಓದಲಿ ಎಂಬುದು ಇದರ ಹಿಂದಿರುವ ಉದ್ದೇಶವಾದರೂ, ಕ್ರೈಮ್ ಸ್ಪಾಟ್ ಅನ್ನು ನಾಲೆಡ್ಜ್ ಹಬ್ ಆಗಿಸಿದ  ಪ್ರಯತ್ನಕ್ಕೆ ರಾಜೇಶ್ ಅವರಿಗೆ ಪ್ರಶಂಸೆಯ ಸುರಿಮಳೆಯೇ ಆಗುತ್ತಿದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಬೆಂಗಳೂರಿನ ಆಗ್ನೇಯ ವಲಯ ವ್ಯಾಪ್ತಿಯ ಬಂಡೇಪಾಳ್ಯ ಪೊಲೀಸ್ ಠಾಣೆಯ ಎಲ್.ವೈ. ರಾಜೇಶ್ ಈ ರೀತಿಯ ಕೆಲಸಗಳನ್ನು ಮಾಡುತ್ತಿರುವುದು ಹೊಸದೇನೂ ಅಲ್ಲ. ತಮ್ಮ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿಸಿದ್ದಾರೆ. ಕಷ್ಟ ಅಂತ ಪೊಲೀಸ್ ಸ್ಟೇಶನ್ ಗೆ ಬಂದವರಿಂದ ಫೀಡ್ ಬ್ಯಾಕ್ ಕೂಡ ಪಡೆಯುವ ವ್ಯವಸ್ಥೆ ಮಾಡಿದ್ದಾರೆ. ತಮಗೆ ಯಾರಿಂದ ತೊಂದರೆ ಆಯಿತು ಎಂದು ಮುಕ್ತವಾಗಿ ಹೇಳಿಕೊಳ್ಳುವಂತಹ ವಾತಾವರಣವನ್ನೂ ಸೃಷ್ಟಿ ಮಾಡಿದ್ದಾರೆ. ಜೊತೆಗೆ ತಮ್ಮ ಗೆಳೆಯರ ತಂಡದೊಂದಿಗೆ ನಿರ್ಗತಿಕರಿಗೆ, ಬೀದಿಯಲ್ಲಿ ಮಲಗಿದವರನ್ನು ಗುರುತಿಸಿ, ಚಳಿಗಾಲದಲ್ಲಿ ರಗ್ಗು, ಸ್ವೇಟರ್ ಕೊಡುವ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ.

    ನಿನ್ನೆಯಷ್ಟೇ ಬಂಡೇಪಾಳ್ಯ ಠಾಣೆಯಲ್ಲಿ ಅವರ ಕನಸಿನ ಗ್ರಂಥಾಯಲ ಶುರುವಾಗಿದೆ. ಡಿಸಿಪಿ ಸಿ.ಕೆ ಬಾಬಾ, ಎಸಿಪಿ ಲಕ್ಷ್ಮಿನಾರಾಯಣ್, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್  ಮತ್ತು ಯುವ ಉದ್ಯಮಿ ವೀರಕಪುತ್ರ ಶ್ರೀನಿವಾಸ್ ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಠಾಣೆ ಮುಂದೆ ಗಳಗಳನೆ ಅತ್ತ ರಾಖಿ ಸಾವಂತ್, ಹೊಸ ಬಾಯ್ ಫ್ರೆಂಡ್ ಹೈರಾಣ

    ಪೊಲೀಸ್ ಠಾಣೆ ಮುಂದೆ ಗಳಗಳನೆ ಅತ್ತ ರಾಖಿ ಸಾವಂತ್, ಹೊಸ ಬಾಯ್ ಫ್ರೆಂಡ್ ಹೈರಾಣ

    ಮೈಸೂರಿನ ಹುಡುಗನನ್ನು ಬಾಯ್ ಫ‍್ರೆಂಡ್ ಮಾಡಿಕೊಂಡ ನಂತರ ರಾಖಿ ಸಾವಂತ್ ಖುಷಿಯಾಗಿದ್ದರು. ದುಬೈ, ಶಾಪಿಂಗ್, ಸಿನಿಮಾ ಅಂತೆಲ್ಲ ಸುತ್ತಾಟ ನಡೆಸಿದ್ದರು. ಸಂಭ್ರಮದಿಂದ ದಿನಗಳನ್ನು ದೂಡುತ್ತಿದ್ದ ರಾಖಿ ನಿನ್ನೆ ಏಕಾಏಕಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪೊಲೀಸ್ ಠಾಣೆಯಿಂದ ವಾಪಸ್ಸು ಬಂದಾಗ ಸ್ಟೇಶನ್ ಮುಂದೆಯೇ ಗಳಗಳನೇ ಅತ್ತಿದ್ದಾರೆ. ಹೊಸ ಬಾಯ್ ಫ್ರೆಂಡ್ ಆದಿಲ್ ಅದೆಷ್ಟೇ ಸಮಾಧಾನ ಮಾಡಿದರೂ, ರಾಖಿ ಅಳುವು ಮಾತ್ರ ನಿಂತಿಲ್ಲ.

    ನಿನ್ನೆ ರಾಖಿ ಸಾವಂತ್, ತನ್ನ ಹೊಸ ಬಾಯ್ ಫ‍್ರೆಂಡ್ ಆದಿಲ್ ಜೊತೆ ಮುಂಬೈನ ಓಶಿವಾರಾ ಪೊಲೀಸ್ ಠಾಣೆಗೆ ಆಗಮಿಸಿದ್ದರು. ತನ್ನ ಮಾಜಿ ಪತಿ ರಿತೇಶ್ ತುಂಬಾ ಹಿಂಸೆ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ರಿತೇಶ್ ಹ್ಯಾಕ್ ಮಾಡಿ ಮಿಸ್ ಯ್ಯೂಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ದೂರಿದ್ದಾರೆ. ಅಲ್ಲದೇ, ಆದಿಲ್ ಮತ್ತು ತಮ್ಮ ನಡುವಿನ ಸಂಬಂಧವನ್ನು ರಿತೀಶ್ ಹಾಳು ಮಾಡುತ್ತಿದ್ದಾನೆ ಎಂದಿದ್ದಾರೆ ರಾಖಿ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ – ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ

    ದೂರುಕೊಟ್ಟು ಠಾಣೆಯಿಂದ ಹೊರಗೆ ಬರುತ್ತಿರುವಾಗ ರಾಖಿ ಮತ್ತು ಆದಿಲ್ ಅನ್ನು ಕ್ಯಾಮೆರಾಗಳು ಸುತ್ತುವರೆಯುತ್ತವೆ. ಆಗ ದುಃಖವನ್ನು ತಡೆದುಕೊಳ್ಳಲಾಗಿದೆ. ಬಿಟ್ಟೂಬಿಡದೇ ಅಳುತ್ತಾರೆ ರಾಖಿ. ಪಕ್ಕದಲ್ಲಿಯೇ ಇದ್ದ ಆದಿಲ್ ಸಮಾಧಾನ ಮಾಡಲು ಯತ್ನಿಸಿ ಸೋಲುತ್ತಾರೆ. ಆದಿಲ್ ಅದೆಷ್ಟೇ ಸಮಾಧಾನ ಮಾಡಿದರೂ, ರಾಖಿ ಮಾತ್ರ ಅಳುವುದನ್ನು ನಿಲ್ಲಿಸುವುದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.

  • ಪೊಲೀಸ್ ಠಾಣೆಗೆ ಬಂದು ಟೇಬಲ್ ಅಡಿಯಲ್ಲಿ ಕುಳಿತ ಹಾವು

    ಪೊಲೀಸ್ ಠಾಣೆಗೆ ಬಂದು ಟೇಬಲ್ ಅಡಿಯಲ್ಲಿ ಕುಳಿತ ಹಾವು

    ಶಿವಮೊಗ್ಗ: ನಾಲ್ಕೂವರೆ ಅಡಿಯ ಉದ್ದದ ಹಾವು ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿತ್ತು. ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಬಂದ ವಿಶೇಷ ಅತಿಥಿಯನ್ನು ಕಂಡು ಒಂದು ಕ್ಷಣ ಪೊಲೀಸರೇ ಭಯಭೀತರಾಗಿದ್ದರು.

    ಜಯನಗರ ಠಾಣೆಯಲ್ಲಿ ಕೇರೆ ಹಾವು ಪ್ರತ್ಯಕ್ಷವಾಗಿತ್ತು. ಠಾಣೆಯೊಳಗೆ ಪ್ರವೇಶಿಸಿದ್ದ ಹಾವು ಠಾಣೆಯ ಟೇಬಲ್ ಕೆಳಗೆ ಅವಿತು ಕುಳಿತಿತ್ತು. ಹಾವನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಭಯಭೀತರಾಗಿ ಠಾಣೆಯಿಂದ ಹೊರ ಬಂದಿದ್ದಾರೆ. ಕೂಡಲೇ ಸ್ನೇಕ್ ಕಿರಣ್ ಗೆ ದೂರವಾಣಿ ಕರೆ ಮಾಡಿ ಠಾಣೆಗೆ ಹಾವು ಬಂದಿರುವ ವಿಷಯ ತಿಳಿಸಿದ್ದು, ಹಾವು ಹಿಡಿದುಕೊಂಡು ಹೋಗುವಂತೆ ತಿಳಿಸಿದ್ದಾರೆ.

    ಠಾಣೆಗೆ ಆಗಮಿಸಿದ ಸ್ನೇಕ್ ಕಿರಣ್ ಟೇಬಲ್ ಕೆಳಗೆ ಅವಿತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿ ಅರಣ್ಯ ಸಿಬ್ಬಂದಿಯ ಸಹಾಯದೊಂದಿಗೆ ಕಾಡಿಗೆ ಬಿಟ್ಟಿದ್ದಾರೆ. ಈ ವೇಳೆ ಮಾತನಾಡಿದ ಸ್ನೇಕ್ ಕಿರಣ್, ಇದೊಂದು ವಿಷ ರಹಿತ ಹಾವು, ಆಹಾರ ಅರಸಿ ಠಾಣೆಯತ್ತ ಬಂದಿದೆ. ಠಾಣೆಯಲ್ಲಿ ಇಲಿಗಳು ಇದಿದ್ದರಿಂದ ಬಂದು ಟೇಬಲ್ ಅಡಿಯಲ್ಲಿ ಕುಳಿತಿತ್ತು. ಶಿವಮೊಗ್ಗ ನಗರದಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೇ ನನಗೆ ಮಾಹಿತಿ ನೀಡಿ. ಭಯದಲ್ಲಿ ಅವುಗಳ ಪ್ರಾಣಕ್ಕೆ ಅಪಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.