Tag: ಪೊಲೀಸ್ ಸಿಬ್ಬಂದಿ

  • ವರ್ಗಾವಣೆ ಕೋರಿ ಪತ್ರ ಬರೆದ ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ

    ವರ್ಗಾವಣೆ ಕೋರಿ ಪತ್ರ ಬರೆದ ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ

    ಬೆಂಗಳೂರು: ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ ಸಾಮೂಹಿಕ ವರ್ಗಾವಣೆ ಕೋರಿ ಮನವಿ ಮಾಡಿಕೊಂಡಿದ್ದಾರೆ. ಆಡಳಿತ ವಿಭಾಗಕ್ಕೆ ಪತ್ರ ಬರೆದು ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಕಬ್ಬನ್ ಪಾರ್ಕ್ (Cubbon Park Police) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 35 ಸಿಬ್ಬಂದಿ ವರ್ಗಾವಣೆ ಮೊರೆ ಹೋಗಿದ್ದಾರೆ. ಆಡಳಿತ ವಿಭಾಗಕ್ಕೆ ಪತ್ರ ಬರೆದು ವರ್ಗಾವಣೆ ಮಾಡಿಕೊಡುವಂತೆ ಸಾಮೂಹಿಕವಾಗಿ ಮನವಿ ಮಾಡಿಕೊಂಡಿರೋ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮೂಹಿಕ ವರ್ಗಾವಣೆ ಹಿಂದಿನ ಕಾರಣ ಠಾಣಾಧಿಕಾರಿಯ ಕಡೆ ಬೆರಳು ಮಾಡಲಾಗುತ್ತಿದೆ. ಇದನ್ನೂ ಓದಿ: ನಿದ್ದೆ ಬಿಟ್ಟು ಲೋಕಸಭೆಯ 28 ಸೀಟ್ ಗೆಲ್ಲಿಸಲು ರಾಜ್ಯಾದ್ಯಂತ ಓಡಾಡುವೆ: ಎಂ.ಪಿ.ರೇಣುಕಾಚಾರ್ಯ

    ವರ್ಗಾವಣೆಗೆ ಮನವಿ ಮಾಡಿರುವವರಲ್ಲಿ 12 ಮಂದಿ ಎಎಸ್‌ಐ, 23 ಮಂದಿ ಹೆಡ್ ಕಾನ್‌ಸ್ಟೇಬಲ್‌ಗಳಿದ್ದಾರೆ. ಆಡಳಿತ ವಿಭಾಗಕ್ಕೆ ಎಲ್ಲರೂ ವೈಯಕ್ತಿಕ ಕಾರಣಗಳನ್ನ ನೀಡಿ ಮನವಿ ಮಾಡಿಕೊಂಡಿದ್ದಾರಾದರು ಕೂಡ ಇಲಾಖೆಯಲ್ಲಿ, ಠಾಣೆಯಲ್ಲಿ ಹಲವು ರೀತಿಯಲ್ಲಿ ಚರ್ಚೆ ಆಗುತ್ತಿದೆ.

    ಒಂದು ಠಾಣಾಧಿಕಾರಿಯ ಕೈ ಕೆಳಗಡೆ ಕೆಲಸ ಮಾಡೋದಕ್ಕೆ ಕಷ್ಟವಾಗುತ್ತಿರುವ ಕಾರಣದಿಂದ ಎಲ್ಲರೂ ಸಾಮೂಹಿಕವಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗಲು ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಠಾಣಾಧಿಕಾರಿ ಹಾಗೂ ಸಿಬ್ಬಂದಿ ನಡುವೆ ಸಾಮ್ಯತೆ ಇಲ್ಲದೇ ಇರುವುದೇ ಸಾಮೂಹಿಕ ವರ್ಗಾವಣೆಗೆ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಗುಂಡ್ಲುಪೇಟೆಯ 7 ಗ್ರಾಮಗಳಿಗಿಲ್ಲ ದೀಪಾವಳಿಯ ಸಂಭ್ರಮ

    ವರ್ಗಾವಣೆಗೆ ಮನವಿ ಮಾಡಿಕೊಂಡಿರುವ 35 ಸಿಬ್ಬಂದಿಯಲ್ಲಿ ಕೆಲವರು ವರ್ಗಾವಣೆ ಆಗಿದ್ದಾರೆ. ಉಳಿದ ಒಂದಷ್ಟು ಸಿಬ್ಬಂದಿ ಕೂಡ ವರ್ಗಾವಣೆ ಪತ್ರ ಕೈಯಲ್ಲಿ ಹಿಡಿದುಕೊಂಡು ತುದಿಗಾಲಿನಲ್ಲಿ ನಿಂತಿದ್ದಾರೆ.

  • ಯಾಕೆ ಚಿರಾಡ್ತೀಯಾ?, ನೀನು ನಾಯಿನಾ, ಹಂದಿನಾ?- ಮಹಿಳೆಗೆ ನಿಂದಿಸಿದ ಪೊಲೀಸ್

    ಯಾಕೆ ಚಿರಾಡ್ತೀಯಾ?, ನೀನು ನಾಯಿನಾ, ಹಂದಿನಾ?- ಮಹಿಳೆಗೆ ನಿಂದಿಸಿದ ಪೊಲೀಸ್

    ಹುಬ್ಬಳ್ಳಿ: ಯಾಕೆ ಚಿರಾಡುತ್ತಿಯಾ?.. ನೀನು ನಾಯಿನಾ?.. ನೀನು ಹಂದಿನಾ? ಅಂತ ದಲಿತ ಮಹಿಳೆಗೆ ಪೊಲೀಸ್ ಸಿಬ್ಬಂದಿ (Police Staff) ಬಾಯಿಗೆ ಬಂದಂತೆ ಮಾತನಾಡಿದ ಪ್ರಕರಣ ನಡೆದಿದೆ.

    ಹುಬ್ಬಳ್ಳಿ (Hubballi) ಕೇಶ್ವಾಪುರ ಪೊಲೀಸ್ ಠಾಣೆ ಸಿಬ್ಬಂದಿ ಗುಳೇಶ್ ಎಂಬವರಿಂದ ಅನಾಗರಿಕ ವರ್ತನೆ ತೋರಿದ್ದು, ದೂರು ನೀಡಲು ಬಂದ ದಲಿತ ಮಹಿಳೆ ಮತ್ತು ಕುಟುಂಬ ಮೇಲೆ ದರ್ಪದ ವರ್ತನೆ ತೋರಲಾಗಿದೆ. ಸೌಜನ್ಯಕ್ಕಾದರು ಒಳಗೆ ಕರೆದು ಮಾತನಾಡದೆ ಠಾಣೆಗೆ ಎದುರೇ ನಿಲ್ಲಿಸಿ ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿಕೆಶಿ ಲ್ಯಾಂಡ್ – ಸ್ವಾಗತಕ್ಕೆ ಬಾರದ ಶಾಸಕರು, ಸಚಿವರು

    ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಮಹಿಳೆಯರನ್ನು ಮೆಚ್ಚಿಸಿ ಅಧಿಕಾರಕ್ಕೆ ಬಂದ ಗೃಹ ಸಚಿವ ಜಿ ಪರಮೇಶ್ವರ್ ಅವರೇ ಇದೇನಾ ನಿಮ್ಮ ಇಲಾಖೆ ಮಹಿಳಾ ಗೌರವ..?, ಇದೇನಾ ದಲಿತರ ರಕ್ಷಣೆ..?, ನಿಮ್ಮ ಇಲಾಖೆಯ ಸಿಬ್ಬಂದಿಗೆ ಮಹಿಳೆಯರು ಅಂದರೆ ಅಷ್ಟು ನಿರ್ಲಕ್ಷ್ಯ ಯಾಕೆ..?, ಮಾನ್ಯ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರೇ ನೀವು ಒಬ್ಬ ಮಹಿಳೆಯಾಗಿ ಯಾಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಚೆನ್ನೈ: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದಕ್ಕೆ ವಿಶೇಷ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

    ಸೌಂದರ್ಯ ಸ್ಪರ್ಧೆಯಲ್ಲಿ ಪೊಲೀಸ್ ಸಿಬ್ಬಂದಿ ರ‍್ಯಾಂಪ್ ವಾಕ್ ಮಾಡಿದ ಹಿನ್ನೆಲೆ ನಾಗಪಟ್ಟಣಂ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    ಕಳೆದ ಭಾನುವಾರ ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೋವಿಲ್‍ನಲ್ಲಿ ಖಾಸಗಿ ಸಂಸ್ಥೆಯೊಂದು ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ನಟಿ ಯಶಿಕಾ ಆನಂದ್ ವಿಶೇಷ ಅಥಿತಿಯಾಗಿ ಭಾಗವಹಿಸಿ, ಸ್ಪರ್ಧೆಯನ್ನು ಉದ್ಘಾಟಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆಗಿತ್ತು. ಇದನ್ನೂ ಓದಿ: ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ನಾಗಪಟ್ಟಣಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜವಗರ್ ಅವರು, ಪ್ರಸ್ತುತ ಸೆಂಬನಾರ್ಕೋವಿಲ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಸಹಾಯಕ ಇನ್ಸ್‌ಪೆಕ್ಟರ್ ಸುಬ್ರಮಣಿಯನ್ ಸೇರಿದಂತೆ ರೇಣುಕಾ, ಅಶ್ವಿನಿ, ನಿತ್ಯಶೀಲಾ ಮತ್ತು ಶಿವನೇಸನ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಂಪ್ಯೂಟರ್ ಎಕ್ಸಾಂ ಪಾಸ್‍ಗೆ ಪೊಲೀಸ್ ಸಿಬ್ಬಂದಿ ಪರದಾಟ

    ಕಂಪ್ಯೂಟರ್ ಎಕ್ಸಾಂ ಪಾಸ್‍ಗೆ ಪೊಲೀಸ್ ಸಿಬ್ಬಂದಿ ಪರದಾಟ

    ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ಕಂಪ್ಯೂಟರ್ ಕಲಿಯಬೇಕು ಎಂಬ ಆದೇಶ ಕೆಲ ಇಲಾಖೆಯ ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿದೆ.

    ಪೊಲೀಸ್ ಇಲಾಖೆಗೂ ಈ ಆದೇಶ ಅನ್ವಯಿಸಲಾಗಿದ್ದು, ಪೊಲೀಸರಿಗೆ ನುಂಗಲಾರದ ತುತ್ತಾಗಿದೆ. ಡಿಸೆಂಬರ್ 31 ಒಳಗೆ ಕಡ್ಡಾಯವಾಗಿ ಕಂಪ್ಯೂಟರ್ ಪರೀಕ್ಷೆ ಪಾಸ್ ಆಗಿರಬೇಕು ಅಂತ ಆದೇಶಿಸಲಾಗಿದೆ. ಆದರೆ ಪರೀಕ್ಷೆ ಪಾಸ್ ಆಗಲು ಇರೋ ಸರ್ಕಾರದ ನಿಯಮ ಪೊಲೀಸರಿಗೆ ತಲೆ ನೋವಾಗಿದೆ. ಒಂದು ವೇಳೆ ಕಂಪ್ಯೂಟರ್ ಪರೀಕ್ಷೆ ಪಾಸ್ ಆಗದಿದ್ದರೆ ಪ್ರಮೋಷನ್ ಇಲ್ಲ ಎಂಬ ಆದೇಶ ಪೊಲೀಸ್ ಸಿಬ್ಬಂದಿಗೆ ಟೆನ್ಷನ್ ಹೆಚ್ಚಿಸಿದೆ.

    ಮನೆಗೆ ಹೋಗೋಕೆ ನಮಗೆ ಸಮಯ ಇಲ್ಲ. ಹೆಂಡತಿ, ಮಕ್ಕಳು, ಕುಟುಂಬದ ಜೊತೆ ಸಮಯ ಕಳೆಯೋಕು ಆಗ್ತಿಲ್ಲ. ಹೀಗಿರುವಾಗ ಕಂಪ್ಯೂಟರ್ ಕಲಿಯೋದು ಯಾವಾಗ…? ಕೆಲಸದೊತ್ತಡದಿಂದ ಹೇಗೆ ಕಲಿತು ಪಾಸ್ ಮಾಡೋಕೆ ಆಗುತ್ತೆ ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಮಳೆ ಎಫೆಕ್ಟ್, ದುಬಾರಿ ವಸ್ತುಗಳು ಅರ್ಧ ಬೆಲೆಗೆ ಸೇಲ್- ಮುಗಿಬಿದ್ದ ಗ್ರಾಹಕರು

    ಪೊಲೀಸರಿಗೆ ಕಂಪ್ಯೂಟರ್ ಎಕ್ಸಾಂ ಪ್ರಾಬ್ಲಂ: ಕೆಲವೊಮ್ಮೆ ಹಗಲು-ರಾತ್ರಿ ಕೆಲಸ ಇದ್ದು, ಈ ವೇಳೆ ಕಂಪ್ಯೂಟರ್ ಕಲಿಕೆ ಕಷ್ಟ. ಕಂಪ್ಯೂಟರ್ ಕಲಿಕೆಗೆ ಇಲಾಖೆ ತರಬೇತಿಯೂ ಕೊಡ್ತಿಲ್ಲ. ರಜೆಯೂ ಕೊಡ್ತಿಲ್ಲ. ಆಡಳಿತ ವಿಭಾಗದಲ್ಲಿ ನಾನ್ ಎಕ್ಸಿಕ್ಯುಟಿವ್‍ಗಳಿಗೆ ಕಡ್ಡಾಯ ಮಾಡಿ, ಎಲ್ಲರಿಗೂ ಬೇಡ. ಇಲಾಖೆಯಲ್ಲಿ ಈಗ ವೀಕಾಫ್ ಸಿಗೋದು ಕಷ್ಟ ಆಗ್ತಿದೆ. ಕುಟುಂಬ, ಹೆಂಡತಿ, ಮಕ್ಕಳಿಗೆ ಸಮಯ ಕೊಡಲು ಆಗ್ತಿಲ್ಲ. 7-10ನೇ ತರಗತಿ ಆಧಾರದಲ್ಲಿ ಕೆಲವರು ಇಲಾಖೆಗೆ ಸೇರ್ಪಡೆಯಾಗಲಿದೆ.

    ಇಂಗ್ಲೀಷ್ ಭಾಷೆ ಕೊರತೆ ಇದ್ದು, ಕಂಪ್ಯೂಟರ್ ಕಲಿಕೆ ಕಷ್ಟವಾಗಬಹುದು. 50+ ಆದ ಸಿಬ್ಬಂದಿಗೆ ಕಂಪ್ಯೂಟರ್ ಕಲಿಯಲು ಆಸಕ್ತಿ ಕಡಿಮೆ. 50+ ದಾಟಿದವರಿಗೆ ರಿಯಾಯ್ತಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಕಿಯೋನಿಕ್ಸ್‍ನಲ್ಲೇ ಎಕ್ಸಾಂ ಬರೆಯಬೇಕು.. ಇದಕ್ಕೆ 350-450 ರೂ. ಖರ್ಚಾಗಲಿದೆ. 2012ರ ಮುಂಚೆ ಸೇರ್ಪಡೆಯಾದ ಸಿಬ್ಬಂದಿ 80ಕ್ಕೆ 28 ಅಂಕ ಕಡ್ಡಾಯ. 2013ರ ನಂತರ ಸಿಬ್ಬಂದಿಗೆ 80ಕ್ಕೆ 40 ಅಂಕ ಕಡ್ಡಾಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

    ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

    ಬೆಳಗಾವಿ: ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಡರಾತ್ರಿ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದರು.

    ಗೋವಾದ ಮಡಗಾವ್‍ನ ಹುಸೇನ್ ದೇಸಾಯಿ ಹಾಗೂ ಆಜಾದ್ ಕಾದ್ರೊಳ್ಳಿ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಬೆಳಗಾವಿ ತಾಲೂಕಿನ ಹಾಲಗಿಮರಡಿ ಕ್ರಾಸ್ ಮೂಲಕ ಎರಡು ವಾಹನಗಳಲ್ಲಿ ಅಕ್ರಮವಾಗಿ ಗೋವಾ ರಾಜ್ಯಕ್ಕೆ ಗೋಮಾಂಸವನ್ನು ಸಾಗಿಸುತ್ತಿದ್ದರು.

    ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹಿರೇಬಾಗೆವಾಡಿ ಪೊಲೀಸರು ಗೋಮಾಂಸ ಸಮೇತ ಇಬ್ಬರು ಆರೋಪಿಗಳು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸ್ ಸಿಬ್ಬಂದಿ ನಾಗಪ್ಪ ಸುತಗಟ್ಟಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದ್ದು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಾರ್ಯಾಚರಣೆಯಲ್ಲಿ ಹಿರೇಬಾಗೇವಾಡಿ ಠಾಣೆ ಸಿಪಿಐ ವಿಜಯಕುಮಾರ್ ಸಿನ್ನೂರ್ ಮಾರ್ಗದರ್ಶನದಲ್ಲಿ ಪಿಎಸ್‍ಐ ಶಶಿಕುಮಾರ್ ಕೊರಲೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.

  • ಪೊಲೀಸ್ ಸಿಬ್ಬಂದಿ ಮೇಲೆ ಶಾಸಕ ಎಂ.ಪಿ. ಕುಮಾಸ್ವಾಮಿಯಿಂದ ದರ್ಪ

    ಪೊಲೀಸ್ ಸಿಬ್ಬಂದಿ ಮೇಲೆ ಶಾಸಕ ಎಂ.ಪಿ. ಕುಮಾಸ್ವಾಮಿಯಿಂದ ದರ್ಪ

    ಬೆಂಗಳೂರು: ಶಾಸಕರ ಭವನದಲ್ಲಿ ಕರ್ತವ್ಯ ನಿರತ ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

    ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ವಿಧಾನ ಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಪ್ರತಿದಿನ ಶಾಸಕರ ಭವನದ ಪಾಯಿಂಟ್ ರೌಂಡ್ಸ್‌ಗೆ  ಮುಖ್ಯ ಪೇದೆ ನರಸಿಂಹ ಮೂರ್ತಿ, ಪೇದೆ ಚಂದ್ರಶೇಖರ್ ಬಂದಿದ್ದರು. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಈ ವೇಳೆ ಶಾಸಕರ ಭವನದ ಆವರಣದಲ್ಲಿರುವ ಕಾರು ಪಾರ್ಕಿಂಗ್ ವಿಚಾರಕ್ಕೆ ಎಂ.ಪಿ.ಕುಮಾರಸ್ವಾಮಿ ಅವರು ಹೊಯ್ಸಳ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನೂ ಓದಿ: ಟಾರ್ಗೆಟ್ 150 – 129 ಮಕ್ಕಳ ಜನನಕ್ಕೆ ಕಾರಣನಾದ 66ರ ವೀರ್ಯದಾನಿ

    ಈ ಬಗ್ಗೆ ಕಂಟ್ರೋಲ್ ರೂಂ ಮಾಹಿತಿ ನೀಡಿದ ಹಿನ್ನಲೆ ಘಟನಾ ಸ್ಥಳಕ್ಕೆ ನೈಟ್ ರೌಂಡ್ಸ್‍ನಲ್ಲಿದ್ದ ಎಸಿಪಿ ಆಗಮಿಸಿ ಶಾಸಕರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಈ ಘಟನೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.

  • ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಗದಗ: ಯುಜಿಡಿ ಕಾಮಗಾರಿಯ ಗುಂಡಿಯಲ್ಲಿ ಬಿದ್ದು ಗೂಳಿಯೊಂದು ನರಳಾಡಿದ ಘಟನೆ ಗದಗ ಜಿಲ್ಲೆಯ ಪುಟ್ಟರಾಜ ಗವಾಯಿಗಳ ವೃತ್ತದ ಬಳಿ ಕಂಡು ಬಂದಿದೆ. ಜಂಗಳಿ ಗೂಳಿಯೊಂದು ತಡರಾತ್ರಿನೇ ಈ ಗುಂಡಿನಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಮೃತ ಸಿಟಿ ಯೋಜನೆಯಡಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕಾಮಗಾರಿ ಆಮೆಗತಿನಲ್ಲಿ ಸಾಗುತ್ತಿದೆ. ಜೊತೆಗೆ ಹತ್ತಾರು ಅಡಿ ಆಳದ ಗುಂಡಿಯ ಪಕ್ಕ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳಲ್ಲದ ಕಾರಣ ನಗರಸಭೆ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಕ್ಕಟ್ಟಾದ ಗುಂಡಿಯೊಳಗೆ ಹರಿವಿನಲ್ಲಿ ಬಿದ್ದ ಗೂಳಿಯೊಂದು ಮಲಗಲೂ ಆಗದೇ, ತಿರುಗಲೂ ಆಗದೇ, ಮೇಲೆ ಬರಲೂ ಆಗದೆ ನರಳಾಡಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ದಾರಿ ಹೋಕರು ಈ ಮೂಕ ಪ್ರಾಣಿಯ ರೋಧನೆ ಕೇಳಿ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ಕಾರ್ಯಾಚರಣೆಯಿಂದ ಗೂಳಿಯ ರಕ್ಷಣೆ ಮಾಡಲಾಯಿತು.

    ಅವಳಿ ನಗರದ ಅನೇಕ ಕಡೆಗಳಲ್ಲಿ ಹೀಗೆ ಸಾಕಷ್ಟು ಗುಂಡಿಗಳಿದ್ದು, ಸಾಕಷ್ಟು ಅವಾಂತರಗಳು ಸಂಭವಿಸಿವೆ. ಅಧಿಕಾರಿಗಳು ಮಾತ್ರ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂಬ ಆಕ್ರೋಶ ಜನರದ್ದಾಗಿದೆ. ಈ ವಿಚಾರವಾಗಿ ಜನ ರೊಚ್ಚಿಗೇಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಮೂರು ದಿನ ಪೊಲೀಸ್ ಕಮಿಷನರ್ ಕಚೇರಿ ಸೀಲ್‍ಡೌನ್

    ಮೂರು ದಿನ ಪೊಲೀಸ್ ಕಮಿಷನರ್ ಕಚೇರಿ ಸೀಲ್‍ಡೌನ್

    ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೊರೊನಾ ಸ್ಫೋಟವಾಗಿದ್ದು, 12 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಮೂರು ದಿನಗಳ ಕಾಲ ಪೊಲೀಸ್ ಆಯುಕ್ತರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಅಂದರೆ ಮಂಗಳವಾರದವರೆಗೂ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಇದುವರೆಗೂ ವಿವಿಧ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಪೊಲೀಸ್ ಸೋಂಕಿತರ ಸಂಖ್ಯೆ 450ಕ್ಕೆ ಏರಿಕೆಯಾಗಿದೆ.

    ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಿಸಿಆರ್ ಬಿ ವಿಭಾಗದಲ್ಲಿ 8 ಮತ್ತು ಅಡ್ಮಿನ್ ವಿಭಾಗದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಳೆದ ಒಂದು ವಾರದಿಂದ ರ‍್ಯಾಂಡಮ್‌ ಟೆಸ್ಟ್ ಮಾಡಲಾಗಿತ್ತು. ರ‍್ಯಾಂಡಮ್‌ ಟೆಸ್ಟ್ ನಲ್ಲಿ ಕೊರೊನಾ ಪತ್ತೆಯಾಗಿದೆ. ಹೀಗಾಗಿ ಮೂರು ದಿನಗಳ ಕಚೇರಿಯನ್ನು ಲಾಕ್‍ಡೌನ್ ಮಾಡಲಾಗಿದೆ.

    ಈಗಾಗಲೇ ವಿಧಾನಸೌಧ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಠಾಣೆಯ ಒಬ್ಬ ಸಿಬ್ಬಂದಿಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಒಂದು ದಿನಗಳ ಕಾಲ ವಿಧಾನಸೌಧ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಗುರುವಾರ ವಿಧಾನಸೌಧ ಠಾಣೆಯ ಕಾನ್ಸ್​ಟೇಬಲ್​ಗೆ ಸೋಂಕು ಇರುವುದು ದೃಢವಾಗಿತ್ತು.

  • ಕೊರೊನಾ ಎಫೆಕ್ಟ್- ಬೆಂಗ್ಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

    ಕೊರೊನಾ ಎಫೆಕ್ಟ್- ಬೆಂಗ್ಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 1,267 ಮಂದಿಗೆ ಹೆಮ್ಮಾರಿ ಸೋಂಕು ತಗುಲಿದೆ. ಇದೀಗ ಈ ಕೊರೊನಾ ಮಹಾಮಾರಿ ಎಫೆಕ್ಟ್‌ನಿಂದಾಗಿ ಬೆಂಗಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

    ನಗರದಲ್ಲಿ ಪೊಲೀಸರ ಸಂಖ್ಯೆಯೇ ಕಡಿಮೆ ಇರುವ ಪೊಲೀಸರಲ್ಲಿ 130 ಮಂದಿಗೂ ಅಧಿಕ ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿದ್ದ 900ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್ ಆಗಿದ್ದಾರೆ. ಅಷ್ಟೇ ಅಲ್ಲದೇ 50 ವರ್ಷಕ್ಕೂ ಮೇಲ್ಪಟ್ಟ ಪೊಲೀಸರಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಿದ್ದಾರೆ. ಉಳಿದವರಲ್ಲಿ ಸೋಂಕಿಗೆ ಮೇಲಿಂದ ಮೇಲೆ ಬಲಿಯಾಗುತ್ತಿರುವುದಿಂದ ಭಯಗೊಂಡು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ.

    ಹೀಗಾಗಿ ಪೊಲೀಸರ ಸಂಖ್ಯೆಯಲ್ಲಿ ಗಣನಿಯವಾಗಿ ಇಳಿಕೆಯಾಗುತ್ತಿದೆ. ಇದರಿಂದ ಪೊಲೀಸರನ್ನು ಆದಷ್ಟು ಹುರಿದುಂಬಿಸಿ ಕೆಲಸ ಮಾಡಿಸುವ ಪರಿಸ್ಥಿತಿ ಪೊಲೀಸ್ ಇಲಾಖೆಗೆ ಬಂದೊದಗಿದೆ. ಮುಂಜಾಗೃತ ಕ್ರಮದ ಜೊತೆ ಕಂಟೈನ್ಮೆಂಟ್ ಝೋನ್ ಹಾಗೂ ಸೀಲ್‍ಡೌನ್ ಪ್ರದೇಶಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪಿಪಿಇ ಕಿಟ್ ಕೊಟ್ಟು ಕೆಲಸ ಮಾಡಿಸುವ ಚಿಂತನೆ ಮಾಡಲಾಗಿದೆ.

    ಸೂಕ್ತ ಭದ್ರತೆ ಇರದಿದ್ದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಮುಂದೆ ಬರುವುದಿಲ್ಲ ಅನ್ನೋದು ಪೊಲೀಸ್ ಇಲಾಖೆಗೆ ಮನವರಿಕೆ ಆಗಿದೆ. ಹೀಗಾಗಿ ಸೂಕ್ತ ಭದ್ರತೆಯೊಂದಿಗೆ ಕರ್ತವ್ಯಕ್ಕೆ ನೇಮಿಸಿ ಕೊರೊನಾ ವಿರುದ್ಧ ಹೋರಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

    ಭಾನುವಾರ ಸಿಲಿಕಾನ್ ಸಿಟಿಯಲ್ಲಿ 783 ಪ್ರಕರಣಗಳು ವರದಿಯಾಗಿವೆ. ಡೆಡ್ಲಿ ವೈರಸ್ ವ್ಯೂಹಕ್ಕೆ ಬೆಂಗಳೂರು ಸಿಲುಕಿರೋದು ಖಚಿತವಾಗಿದೆ. ಇನ್ನೂ ಕಳೆದ ದಿನ 16 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

  • ಕೋವಿಡ್ 19 ನಿರ್ಮೂಲನೆಗೆ ಒಂದು ದಿನದ ಸಂಬಳ ನೀಡಲ್ಲ- ಪೊಲೀಸ್ ಸಿಬ್ಬಂದಿ ಪತ್ರ

    ಕೋವಿಡ್ 19 ನಿರ್ಮೂಲನೆಗೆ ಒಂದು ದಿನದ ಸಂಬಳ ನೀಡಲ್ಲ- ಪೊಲೀಸ್ ಸಿಬ್ಬಂದಿ ಪತ್ರ

    – ತೆಲಂಗಾಣದಲ್ಲಿ ಪ್ರೋತ್ಸಾಹ ಧನ, ರಾಜ್ಯದಲ್ಲಿ ಸಂಬಳ ನೀಡಬೇಕಾ?
    – ಅಸುರಕ್ಷತೆಯಲ್ಲೆ ಹಗಲಿರುಳು ದುಡಿಯುವರನ್ನ ಕೇಳುವವರಿಲ್ಲ

    ರಾಯಚೂರು: ಕೊವಿಡ್ 19 ನಿಯಂತ್ರಣಕ್ಕೆ ಒಂದು ದಿನದ ಸಂಬಳ ಕಟ್ ಮಾಡಲಾಗುವುದು. ಯಾರದಾದರೂ ನಿರಾಕರಿಸುತ್ತಿದ್ದರೆ ತಿಳಿಸಿ ಅಂತ ಹೇಳಿದ್ದ ಸರ್ಕಾರಕ್ಕೆ ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿ ಪತ್ರ ಬರೆದಿದ್ದಾರೆ.

    ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಠಾಣಾ ಪಿಎಸ್ ಐ ಮೂಲಕ ಸಿಬ್ಬಂದಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನಿರಾಕರಿಸಿ ಪತ್ರ ಬರೆದಿದ್ದಾರೆ. ಮಾರ್ಚ್ ತಿಂಗಳ ಒಂದು ದಿನದ ಸಂಬಳ ನೀಡಲು ಸರ್ಕಾರ ಕೋರಿತ್ತು. ಆದರೆ ಹಗಲಿರುಳು ರಜೆಯಿಲ್ಲದೆ ಕೊವಿಡ್ 19 ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಸೌಲಭ್ಯಗಳಿಲ್ಲದೆ ನಾವು ಕಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಯಾರೊಬ್ಬರು ಸಹಾಯ ಮಾಡಿಲ್ಲ. ತೆಲಂಗಾಣ ಸರ್ಕಾರ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷತೆ ಜೊತೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ವಿವಿಧ ಇಲಾಖೆ ಅಧಿಕಾರಿಗಳ ಸಂಬಳ ಬೇಕಾದರೆ ಕಡಿತ ಮಾಡಿ. ಆದರೆ ನಮ್ಮ ಸಂಬಳ ಕಡಿತ ಮಾಡಬೇಡಿ ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ.

    ರಾಯಚೂರು ಮಾತ್ರವಲ್ಲದೆ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಗಳ ಪೊಲೀಸರು ಸಹ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನೀರಾಕರಿಸುವ ಮೂಲಕ ಸಮರ್ಪಕವಾಗಿ ಔರಾದ್ಕರ್ ವರದಿ ಜಾರಿಗೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.