Tag: ಪೊಲೀಸ್ ವಾಹನ

  • ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್ – ಎಎಸ್‌ಐ ಸಾವು

    ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್ – ಎಎಸ್‌ಐ ಸಾವು

    ಗದಗ: ಪೊಲೀಸ್ ಜೀಪ್‌ಗೆ ಅಡ್ಡಲಾಗಿ ಬಂದ ಕತ್ತೆಕಿರುಬಕ್ಕೆ (Hyena) ಡಿಕ್ಕಿ ಹೊಡೆದು, ಜೀಪ್ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಪೊಲೀಸ್ ಅಧಿಕಾರಿಗಳಿಗೆ ಗಾಯಗೊಂಡಿದ್ದರು. ಇದೀಗ ಗಂಭೀರ ಗಾಯಗೊಂಡಿದ್ದ ಎಎಸ್‌ಐ (ASI) ಮೃತಪಟ್ಟಿದ್ದಾರೆ.

    ಬೆಟಗೇರಿ ಪೊಲೀಸ್ (Betageri Police) ಠಾಣೆಯ ಎಎಸ್‌ಐ ಕಾಶಿಮ್ ಸಾಬ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೆ.23 ರಂದು ಬೆಳಗ್ಗಿನ ಜಾವ ಪೊಲೀಸ್ ಅಧಿಕಾರಿಗಳು ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ಸಾಮ್ರಾಟ್ ಗಣೇಶ ವಿಸರ್ಜನೆ ಬಂದೋಬಸ್ತ್ ಮುಗಿಸಿ ವಾಪಾಸಾಗುತ್ತಿದ್ದರು. ಇದನ್ನೂ ಓದಿ: ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್

    ಈ ವೇಳೆ ಸೊರಟೂರ ಗ್ರಾಮದ ಬಳಿ ವಾಹನಕ್ಕೆ ಅಡ್ಡ ಬಂದ ಕತ್ತೆಕಿರುಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಘಟನೆ ವೇಳೆ ಜೀಪ್‌ನಲ್ಲಿದ್ದ ಇನ್ಸೆಪೆಕ್ಟರ್ ಉಮೇಶ್‌ಗೌಡ ಪಾಟೀಲ್, ಬೆಟಗೇರಿ ಎಎಸ್‌ಐ ಕಾಶಿಮ್ ಸಾಬ್ ಹಾಗೂ ಚಾಲಕ ಓಂನಾಥ್ ಅವರಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದರೆ ಗಂಭೀರ ಗಾಯಗೊಂಡಿದ್ದ ಎಎಸ್‌ಐ ಕಾಶಿಮ್ ಸಾಬ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾಶಿಮ್ ಸಾಬ್ ಅವರ ನಿವೃತ್ತಿಗೆ ಕೇವಲ 5 ತಿಂಗಳು ಬಾಕಿಯಿದ್ದವು ಎನ್ನಲಾಗಿದೆ.

  • ಪೊಲೀಸ್ ವಾಹನದಲ್ಲಿ ಕುರಿ ದರ್ಬಾರ್ – ಮುಗ್ದ ಪ್ರಾಣಿಯ ಜಾಲಿ ರೈಡ್ ನೋಡಿ ನೆಟ್ಟಿಗರು ಫಿದಾ

    ಪೊಲೀಸ್ ವಾಹನದಲ್ಲಿ ಕುರಿ ದರ್ಬಾರ್ – ಮುಗ್ದ ಪ್ರಾಣಿಯ ಜಾಲಿ ರೈಡ್ ನೋಡಿ ನೆಟ್ಟಿಗರು ಫಿದಾ

    ಕುರಿಯೊಂದು ಜಮೀನಿಂದ ಮನೆಗೆ ತೆರಳಲು ಪೊಲೀಸ್ ವಾಹನದಲ್ಲಿ ಲಿಫ್ಟ್ ಪಡೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕುರಿಯ ಮುಗ್ದತೆಗೆ ನೆಟ್ಟಿಗರುಮನಸೋತಿದ್ದಾರೆ.

    ಓಲ್ಡ್ ಟೌನ್ ಪೊಲೀಸ್ ಇಲಾಖೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ ಕುರಿಯೊಂದು ಜಮೀನುವೊಂದರಲ್ಲಿ ಅಲೆದಾಡುತ್ತಿರುವುದಾಗಿ ನಮಗೆ ಕರೆ ಬಂದಿತ್ತು. ನಂತರ ಸ್ಥಳಕ್ಕೆ ತಲುಪಿ ಕುರಿಯನ್ನು ತೆಗೆದುಕೊಂಡು ನಮ್ಮ ವಾಹನದ ಹಿಂದಿನ ಸೀಟಿನಲ್ಲಿ ಕುರಿಸಿಕೊಂಡು ಅದರ ಮನೆಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಸಮೀಪದಲ್ಲಿಯೇ ವ್ಯಕ್ತಿಯೋರ್ವ ಕುರಿಗಳನ್ನು ಸಾಕುತ್ತಿವ ಬಗ್ಗೆ ಮಾಹಿತಿ ದೊರೆಯಿತು. ಹೀಗಾಗಿ ವ್ಯಕ್ತಿಯನ್ನು ಭೇಟಿ ಮಾಡಿ ವಿಚಾರಣೆ ನಡೆಸಿದಾಗ ಕುರಿ ನಿವಾಸ ಅದೇ ಎಂದು ತಿಳಿದುಬಂದಿದ್ದು, ನಂತರ ಮಾಲೀಕರಿಗೆ ಕುರಿಯನ್ನು ಹಿಂತಿರುಗಿಸಿದ್ದೇವೆ ಎಂದು ಸಾರ್ಜೆಂಟ್ ಬೈಲಿ ಮತ್ತು ಡೆಪ್ಯೂಟಿ ಚೀಫ್ ಮಿಲ್ಲರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಹೊಳೆಗೆ ಉರುಳಿದ ಪ್ರಕರಣ- ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆ

    ವೀಡಿಯೋದಲ್ಲಿ ಪೊಲೀಸ್ ವಾಹನದ ಹಿಂದಿನ ಸೀಟಿನಲ್ಲಿ ಕುರಿ ಕುಳಿತುಕೊಂಡು, ವಾಹನದ ಕಿಟಕಿಯಿಂದ ಇಣುಕಿ, ಪಿಳಿ-ಪಿಳಿ ಎಂದು ಕಣ್ಣು ಮಿಟುಕಿಸುತ್ತಾ ರಸ್ತೆಯಲ್ಲಿ ಓಡಾಡುವ ಜನರನ್ನು ಮುದ್ದು, ಮುದ್ದಾಗಿ ನೋಡುತ್ತಾ, ಜಾಲಿ ರೈಡ್ ಅನ್ನು ಎಂಜಾಯ್ ಮಾಡುತ್ತಿದೆ. ಮತ್ತೊಂದೆಡೆ ಕುರಿಯನ್ನು ನೋಡುತ್ತಾ ಪೊಲೀಸರು ನಗುತ್ತಿರುವ ಶಬ್ದವನ್ನು ಕೇಳಬಹುದಾಗಿದೆ.

    ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು, 500ಕ್ಕೂ ಹೆಚ್ಚು ಲೈಕ್‍ಗಳು ಮತ್ತು ಹಲವಾರು ಕಾಮೆಂಟ್‍ಗಳು ಹರಿದುಬರುತ್ತಿದೆ. ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂ ಭರ್ತಿಗೆ 1 ಅಡಿ ಬಾಕಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ

    Live Tv
    [brid partner=56869869 player=32851 video=960834 autoplay=true]

  • ಕುಡುಕನ ರಂಪಾಟಕ್ಕೆ ಸುಸ್ತಾಗಿ ಕೈಕಾಲು ಕಟ್ಟಿಹಾಕಿದ ಪೊಲೀಸರು

    ಕುಡುಕನ ರಂಪಾಟಕ್ಕೆ ಸುಸ್ತಾಗಿ ಕೈಕಾಲು ಕಟ್ಟಿಹಾಕಿದ ಪೊಲೀಸರು

    ದಾವಣಗೆರೆ: ಅತಿಯಾಗಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪೊಲೀಸ್ ವಾಹನದ ಗಾಜು ಒಡೆದು ಹಾಕಿದ ಘಟನೆ ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ನಡೆದಿದೆ. ಕಲ್ಲೆಸೆದ ಕುಡುಕ ಮಹಾಶಯ ಈಗ ಪೊಲೀಸರ ಅಥಿತಿಯಾಗಿದ್ದಾನೆ.

    ಶಾಮನೂರು ರಸ್ತೆಯ ಬಾರ್ ಒಂದರಲ್ಲಿ ಹರಪ್ಪನಹಳ್ಳಿ ತಾಲೂಕಿನ ಗೌರಿಪುರ ಗ್ರಾಮದ ಮಂಜುನಾಥ್ ಮದ್ಯ ಸೇವಿಸಿ ಪೊಲೀಸ್ ವಾಹನಕ್ಕೆ ಕಲ್ಲು ಎಸೆದಿದ್ದಾನೆ. ಮಂಜುನಾಥ್ ವಿದ್ಯಾನಗರದಲ್ಲಿ ವಾಚ್‍ಮೆನ್ ಆಗಿ ಕೆಲಸ ಮಾಡುತ್ತಿದ್ದು, ಸೋಮವಾರ ರಾತ್ರಿ ಅತಿಯಾಗಿ ಮದ್ಯ ಸೇವನೆ ಮಾಡಿ ರಂಪಾಟ ಮಾಡಿದ್ದಾನೆ. ಕುಡಿದು ದಾರಿಯಲ್ಲಿ ಹೋಗುವವರಿಗೆ ತೊಂದರೆ ಕೊಡುವುದಲ್ಲದೆ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಕ್ಕೆ ಕಲ್ಲಿನಿಂದ ಒಡೆದು ಗಾಜು ಪುಡಿಪುಡಿ ಮಾಡಿದ್ದಾನೆ.

    ಕೌಂಟುಂಬಿಕ ಸಮಸ್ಯೆಯಿಂದಾಗಿ ಮಂಜುನಾಥ್ ಅತಿಯಾಗಿ ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಕುಡುಕನ ಕಾಟ ತಾಳಲಾರದೆ ಸಾರ್ವಜನಿಕರು ಹಾಗೂ ಪೊಲೀಸರು ಹಗ್ಗದಿಂದ ಆತನ ಕೈಕಾಲು ಕಟ್ಟಿ ಹಾಕಿದ್ದರು. ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ವಿದ್ಯಾನಗರಿ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

  • ವಿದ್ಯಾರ್ಥಿಗಳ ಪರದಾಟ ನೋಡಲಾಗದೇ ಪೊಲೀಸ್ ವಾಹನದಲ್ಲೇ ಪ್ರಯಾಣ – ಮಾನವೀಯತೆ ಮೆರೆದ ಗದಗ ಪೊಲೀಸ್ರು

    ವಿದ್ಯಾರ್ಥಿಗಳ ಪರದಾಟ ನೋಡಲಾಗದೇ ಪೊಲೀಸ್ ವಾಹನದಲ್ಲೇ ಪ್ರಯಾಣ – ಮಾನವೀಯತೆ ಮೆರೆದ ಗದಗ ಪೊಲೀಸ್ರು

    ಗದಗ: ಭಾರತ್ ಬಂದ್ ಹಿನ್ನೆಲೆಯಲ್ಲಿ ವಾಹನಗಳಿಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಾಹನದಲ್ಲೇ ಕಾಲೇಜಿಗೆ ಕಳುಹಿಸುವ ಮೂಲಕ ಗದಗ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

    ಬಸ್ ಸಂಚಾರ ಇಲ್ಲದೇ ವಿದ್ಯಾರ್ಥಿಗಳು ವಾಹನಗಳಿಲ್ಲದೆ ಬಸ್ ನಿಲ್ದಾಣದಲ್ಲಿಯೇ ನಿಂತು ಪರದಾಡುತ್ತಿದ್ದರು. ಬಳಿಕ ಪೊಲೀಸರು ವಿದ್ಯಾರ್ಥಿಗಳ ಕಷ್ಟವನ್ನು ನೋಡಲಾಗದೇ ತಮ್ಮ ವಾಹನದಲ್ಲಿ ಅವರನ್ನು ಹತ್ತಿಸಿ ಕಳುಹಿಸಿದ್ದಾರೆ. ಈ ಮೂಲಕ ಗದಗ ಶಹರ, ಬೆಟಗೇರಿ, ಬಡಾವಣೆ ಹಾಗೂ ಗ್ರಾಮೀಣ ಪೊಲೀಸರ ಮಾನವೀಯತೆ ಮೆರೆದಿದ್ದಾರೆ. ಪೊಲೀಸರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

    ಎರಡನೇ ದಿನದ ಭಾರತ್ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನಡುವೆ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರು ಫುಲ್ ಖುಷಿಯಾಗಿದ್ದಾರೆ. ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ ಹಿರೇಮಠ ಅವರು ಗದಗ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸುವಂತೆ ಆದೇಶ ನೀಡಿದ್ದರು. ಅದರಂತೆಯೇ ಗದಗನಿಂದ ಮುಂಡರಗಿ, ಗಜೇಂದ್ರಗಡ, ಹುಬ್ಬಳ್ಳಿ ಮತ್ತು ಹಾವೇರಿ ಮಾರ್ಗದಲ್ಲಿ ಬಸ್ ಸಂಚಾರ ಆರಂಭಗೊಂಡಿವೆ.

    ಬಸ್ ಸಂಚಾರ ಆರಂಭದಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಸ್‍ಗಳಿಗೆ ಪೊಲೀಸ್ ಭದ್ರತೆಯನ್ನು ಒದಗಿಸಿದ್ದಾರೆ. ಮುಂದೆ ಪೊಲೀಸ್ ವಾಹನ ಹೋಗುತ್ತಿದ್ದರೆ ಅದರ ಹಿಂದೆ ಬಸ್ ಸಂಚರಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾನುವಾರುಗಳನ್ನು ತಪ್ಪಿಸಲು ಹೋಗಿ ಪೊಲೀಸ್‌ ವಾಹನ ಪಲ್ಟಿ

    ಜಾನುವಾರುಗಳನ್ನು ತಪ್ಪಿಸಲು ಹೋಗಿ ಪೊಲೀಸ್‌ ವಾಹನ ಪಲ್ಟಿ

    ಯಾದಗಿರಿ: ಜಾನುವಾರುಗಳ ಮೇಲಾಗುವ ಅಪಘಾತ ತಪ್ಪಿಸಲು ಹೋಗಿ ಪೊಲೀಸ್‌ ವಾಹನವೇ ಪಲ್ಟಿ ಹೊಡೆದ ಘಟನೆ ವಡಗೇರಾ ತಾಲೂಕಿನ ಖಾನಾಪುರ ಬಳಿ ನಡೆದಿದೆ.

    ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಕಲಬುರಗಿಯ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪಿಐ ಪಂಚಾಕ್ಷರಯ್ಯ, ಪೊಲೀಸ್‌ ಪೇದೆ ಪ್ರಶಾಂತ ಹಾಗೂ ಚಾಲಕ ಶ್ರೀಶೈಲ್ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬುಧವಾರ ರಾತ್ರಿ ಕೋರ್ಟ್ ಕೆಲಸ ಮುಗಿಸಿಕೊಂಡು ಬೊಲೆರೊ ಪೊಲೀಸ್‌ ವಾಹನದಲ್ಲಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಕಲಬುರಗಿಗೆ ತೆರಳುತ್ತಿದ್ದರು. ಖಾನಾಪುರ ಸಮೀಪದಲ್ಲಿ ಜಾನುವಾರುಗಳಿಗೆ ಬೊಲೆರೊ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಶ್ರೀಶೈಲ್ ಪ್ರಯತ್ನಿಸಿದರು. ಆದರೆ ಬೊಲೆರೊ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಅದರಲ್ಲಿದ್ದ ಮೂವರಿಗೂ ಗಾಯಗಳಾಗಿವೆ.

    ಈ ಘಟನೆ ವಡಗೇರಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಪತ್ನಿಯನ್ನು ಭೇಟಿ ಮಾಡಲು ಪೊಲೀಸರ ವಾಹನವನ್ನು ಕದ್ದ!

    ಪತ್ನಿಯನ್ನು ಭೇಟಿ ಮಾಡಲು ಪೊಲೀಸರ ವಾಹನವನ್ನು ಕದ್ದ!

    ಹೈದರಾಬಾದ್: ಪತ್ನಿಯನ್ನು ಭೇಟಿಯಾಗಲು ಪತಿಯೊಬ್ಬ ಪೊಲೀಸರ ವಾಹವನ್ನು ಕದ್ದು ಅಲ್ಲಿಂದ ಪರಾರಿಯಾದ ಘಟನೆ ಸೋಮವಾರ ಆಂಧ್ರ ಪ್ರದೇಶದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ.

    ತಿರುಪತಿ ಲಿಂಗರಾಜು(30) ಪೊಲೀಸರ ವಾಹನವನ್ನು ಕದ್ದ ಪತಿ. ಲಿಂಗರಾಜು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದು, ಪತ್ನಿ ತಕ್ಷಣ ಭೇಟಿಯಾಗುವಂತೆ ಲಿಂಗರಾಜುಗೆ ತಿಳಿಸಿದ್ದಳು. ಆಗ ಲಿಂಗರಾಜು ಪೊಲೀಸರ ವಾಹನವನ್ನು ಕದ್ದು ಪತ್ನಿಯನ್ನು ಭೇಟಿ ಮಾಡಲು ಹೋಗಿದ್ದಾನೆ.

    ಲಿಂಗರಾಜು ನಮ್ಮ ಗಮನ ಬೇರೆಡೆ ಸೆಳೆಯುವ ಹಾಗೇ ಮಾಡಿ ನಮ್ಮ ವಾಹನವನ್ನು ಕದ್ದು ತನ್ನ ಪತ್ನಿಯನ್ನು ಭೇಟಿ ಮಾಡಲು ಪರಾರಿಯಾಗಿದ್ದ. ನಂತರ ಆತನನ್ನು ನಾವು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಲಿಂಗರಾಜು ಕಾರನ್ನು ಕದ್ದು ಪರಾರಿಯಾಗುತ್ತಿದ್ದಂತೆ ನಾವು ಪಕ್ಕದ ಜಿಲ್ಲೆಗೆ ಕರೆ ಮಾಡಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದೇವು. ನಂತರ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಕಮ್ಮಮ್‍ವರೆಗೂ ಆತನನ್ನು ಫಾಲೋ ಮಾಡಿ ಹಿಡಿದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಲಿಂಗರಾಜು ವಿಜಯ್‍ವಾಡದತ್ತ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದನು. ಆಗ ಕೃಷ್ಣ ಜಿಲ್ಲೆಯ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ನಾವು ಆತನನ್ನು ಬಂಧಿಸಿದ್ದೇವೆ. ನಂತರ ನಾವು ವಿಚಾರಿಸಿದ್ದಾಗ ಜಗನ್ನಾಥ್‍ಪುರಂ ಗ್ರಾಮದಲ್ಲಿರುವ ತನ್ನ ಪತ್ನಿಯನ್ನು ಭೇಟಿಯಾಗಲು ಈ ವಾಹನವನ್ನು ಕದ್ದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

    ಲಿಂಗರಾಜು ತನ್ನ ನಾಲ್ಕು ಸ್ನೇಹಿತರ ಜೊತೆ ಪೊಲೀಸರ ವಾಹನದಲ್ಲಿ ಪ್ರಯಾಣಿಸುತ್ತಿದ್ದನು. ಸದ್ಯ ಐವರು ಆರೋಪಿಗಳನ್ನು ಸೂರ್ಯಪೇಟ್‍ಗೆ ವಾಪಸ್ ಕರೆತಂದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ಪ್ರಕಾಶ್ ಜಾದವ್ ತಿಳಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 379(ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪೊಲೀಸ್ ವಾಹನದಲ್ಲೇ ಮನೆಗೆ ತೆರಳಿ ಐವರಿಂದ ಯುವತಿಯ ಕಿಡ್ನಾಪ್!

    ಪೊಲೀಸ್ ವಾಹನದಲ್ಲೇ ಮನೆಗೆ ತೆರಳಿ ಐವರಿಂದ ಯುವತಿಯ ಕಿಡ್ನಾಪ್!

    ಭೋಪಾಲ್: ಐದು ಜನರ ಗುಂಪೊಂದು ಪೊಲೀಸರನ್ನು ಬಂಧಿಸಿ ಅವರ ವಾಹದಲ್ಲಿಯೇ 18 ವರ್ಷದ ಯುವತಿಯನ್ನು ಅಪಹರಿಸಿಕೊಂಡು ಹೋಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶ ಪನ್ನಾ ಜಿಲ್ಲೆಯ ಬಮುರ್ಹಾ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕುಡಿದು ಬಿದ್ದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮಾಹಿತಿ ತಿಳಿದು ವಾಹನದಲ್ಲಿ ಚಾಲಕನ ಜೊತೆ ಇಬ್ಬರು ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ.

    ಲಭಿಸಿದ ಮಾಹಿತಿಯಂತೆ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದ. ಈ ವೇಳೆ ವಾಹನದಿಂದ ಕೆಳಗಿಳಿದ ಇಬ್ಬರು ಪೊಲೀಸರು ಅವನ ಸಮೀಪಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದಂತೆ ನಟಿಸುತ್ತಿದ್ದ ಕುಡುಕ ತಕ್ಷಣ ಪೊಲೀಸರಿಗೆ ಗನ್ ತೋರಿಸಿ ಅಲ್ಲೇ ಸಮೀಪದಲ್ಲಿ ಅಡಗಿಕೊಂಡು ಕುಳಿತ್ತಿದ್ದ ನಾಲ್ವರನ್ನು ಕರೆದಿದ್ದಾನೆ.

    ಅಡಗಿಕೊಂಡಿದ್ದ ನಾಲ್ವರು ಬಂದು ಎಲ್ಲರು ಸೇರಿಕೊಂಡು ಪೊಲೀಸರನ್ನು ಬಂಧಿಸಿ ಅವರ ಬಟ್ಟೆಯನ್ನು ಕಳಚಿ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಬಳಿಕ ಪೊಲೀಸರನ್ನು ಕೂರಿಸಿಕೊಂಡು ವಾಹನದಲ್ಲೇ ಪೊಲೀಸರಂತೆ ಪೋಸ್ ಕೊಟ್ಟು, 18 ವರ್ಷದ ಯುವತಿಯ ಮನೆಗೆ ಹೋಗಿದ್ದಾರೆ. ಬಳಿಕ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ.

    ಈ ಪ್ರಕರಣದ ಬಗ್ಗೆ ಯುವತಿಯ ತಂದೆ ರಾಜ್‍ಕುಮಾರ್ ಪಟೇಲ್ ಪ್ರತಿಕ್ರಿಯಿಸಿ, ಪೊಲೀಸರು ಬಂದು ನನ್ನ ಮತ್ತು ನನ್ನ ಮಗಳನ್ನು ಠಾಣೆಗೆ ಕರೆದರು. ನಂತರ ನಾನು ನನ್ನ ಸಹೋದರನನ್ನ ಕರೆದೆ. ಕೊನೆಗೆ ಮೂವರು ಜೊತೆಯಲ್ಲಿ ಪೊಲೀಸ್ ವಾಹನದಲ್ಲಿ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅವರು ಗನ್ ತೋರಿಸಿ ಬೆದರಿಸಿ ನನ್ನನ್ನು ಮತ್ತು ಸಹೋದರನ್ನು ಕೆಳಗಿಸಿ ಮಗಳನ್ನು ಅಪಹರಿಸಿಕೊಂಡು ಹೋದರು ಎಂದು ತಿಳಿಸಿದ್ದಾರೆ.

    ಸ್ವಲ್ಪ ಸಮಯದ ನಂತರ ಈ ಐದು ಮಂದಿ ಬಂಧಿತ ಪೊಲೀಸರನ್ನು ಬಿಟ್ಟು ಅಪಹರಿಸಿದ ಯುವತಿಯೊಂದಿಗೆ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ರಿಯಾಜ್ ಇಕ್ಬಾಲ್ ತಿಳಿಸಿದ್ದಾರೆ.

     

  • ಮಂಡ್ಯ: ಎಸ್‍ಪಿ ಕಚೇರಿ ಮುಂದೆ ಪೊಲೀಸ್ ವಾಹನದಲ್ಲೇ ಪೊಲೀಸರ ಜೂಜಾಟ

    ಮಂಡ್ಯ: ಎಸ್‍ಪಿ ಕಚೇರಿ ಮುಂದೆ ಪೊಲೀಸ್ ವಾಹನದಲ್ಲೇ ಪೊಲೀಸರ ಜೂಜಾಟ

    ಮಂಡ್ಯ: ಕರ್ತವ್ಯ ನಿರತ ಮೂವರು ರಿಸರ್ವ್ ಪೊಲೀಸ್ ಅಧಿಕಾರಿಗಳು ಪೊಲೀಸ್ ವಾಹನದಲ್ಲೇ ಇಸ್ಪೀಟ್ ಆಡುತ್ತಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್‍ಗಳಾದ ನಾಗಚಂದ್ರಬಾಬು (ಸಮವಸ್ತ್ರ ಧರಿಸಿದವರು), ಗೋಪಾಲಕೃಷ್ಣ(ಜೇಬಿಂದ ಹಣ ತೆಗೆದು ಹಾಕುವವರು), ನಾಗಣ್ಣ ನೇತೃತ್ವದ ರಿಸರ್ವ್ ಪೊಲೀಸರ ಒಂದು ತುಕಡಿಯನ್ನ ಕಂಟ್ರೋಲ್ ರೂಂ ಡ್ಯೂಟಿಗೆ ನಿಯೋಜಿಸಲಾಗಿತ್ತು. ತುರ್ತು ಸಂದರ್ಭಗಳಲ್ಲಿ ತೆರಳಲು ಎಸ್‍ಪಿ ಕಚೇರಿ ಬಳಿ ನಿಯೋಜಿಸಲಾಗಿದ್ದ ಈ ತಂಡ ಎಸ್‍ಪಿ ಕಚೇರಿ ಮುಂದೆಯೇ ಪೊಲೀಸ್ ವಾಹನದಲ್ಲೇ ಕುಳಿತು ಇಸ್ಪೀಟ್ ಆಡ್ತಿರೋ ವಿಡಿಯೋ ವೈರಲ್ ಆಗಿದೆ.

    ಜೂಜಾಟ ಕಾನೂನು ಬಾಹಿರವಾಗಿದ್ದರೂ ಈ ಅಧಿಕಾರಿಗಳು ಸಮವಸ್ತ್ರ ಧರಿಸಿ, ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಪರಾಧ ಕೃತ್ಯ ನಿಯಂತ್ರಿಸಬೇಕಾದ ಪೊಲೀಸರೇ ಅದೂ ಎಸ್‍ಪಿ ಕಚೇರಿ ಎದುರೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರೋದು ಪೊಲೀಸರ ಕಾರ್ಯಕ್ಷಮತೆ ಪ್ರಶ್ನಿಸುವಂತಾಗಿದೆ.