Tag: ಪೊಲೀಸ್ ರೈಡ್

  • ದಾಖಲೆ ಇಲ್ಲದ 7 ಕೋಟಿ ರೂ. ಜಪ್ತಿ, ನಾಲ್ವರ ಬಂಧನ

    ದಾಖಲೆ ಇಲ್ಲದ 7 ಕೋಟಿ ರೂ. ಜಪ್ತಿ, ನಾಲ್ವರ ಬಂಧನ

    ಹೈದರಾಬಾದ್: ದಾಖಲೆ ಇಲ್ಲದ ಸುಮಾರು 7 ಕೋಟಿ ರೂ.ಗಳಷ್ಟು ಹಣವನ್ನು ನಗರದ ಟಾಸ್ಕ್ ಪೋರ್ಸ್ ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ.

    ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ನಂತರ ಇನ್ನೂ ಹಲವೆಡೆಗಳಲ್ಲಿ ದಾಳಿ ನಡೆಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಪತ್ತೆಯಾದ ಹಣ ಹಾಗೂ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸ್ ಆಯುಕ್ತರಾದ ಅಂಜನಿ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಸ್ಥಳದಲ್ಲಿ ಹಣವನ್ನು ಹೊರಿತುಪಡಿಸಿ ಒಂದು ಕಾರು, ಮೂರು ಮೊಬೈಲ್ ಫೋನ್, ಮ್ಯಾಕ್‍ಬುಕ್, ಐಪ್ಯಾಡ್, ಲ್ಯಾಪ್‍ಟಾಪ್, 30 ಚೆಕ್ ಬುಕ್‍ಗಳು ಹಾಗೂ ನೋಟ್ ಕೌಟಿಂಗ್ ಮಷಿನ್‍ಗಳನ್ನು ಜಪ್ತಿ ಮಾಡಲಾಗಿದೆ.

    ಅಷ್ಟೇ ಅಲ್ಲದೆ ಜಪ್ತಿಯಾದ ಹಣವನ್ನು ಬರುವ ರಾಜ್ಯದಲ್ಲಿಯ ವಿಧಾನಸಭಾ ಚುನಾವಣೆಗೆ ಉಪಯೋಗಿಸಲು ಇಟ್ಟಿದ್ದರು. ಹಲವು ಕಂಪನಿಗಳು ಹಾಗೂ ಹವಾಲ ನಡೆಸುವವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ನಾವು ಈ ಪ್ರಕರಣದ ತನಿಖೆಗಾಗಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಸಹಾಯ ಪಡೆಯುತ್ತಿದ್ದೇವೆ. ಸದ್ಯ ಈ ಸಂಬಂಧ ವಿಚಾರಣೆಯನ್ನು ಮುಂದುವರಿದಿದೆ ಎಂದು ಅಂಜನಿ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ರಸಾದಲ್ಲಿ 51 ಹುಡುಗಿಯರನ್ನು ಒತ್ತೆಯಿರಿಸಿಕೊಂಡು ಲೈಂಗಿಕ ಕಿರುಕುಳ- ಪೊಲೀಸರಿಂದ ರಕ್ಷಣೆ

    ಮದ್ರಸಾದಲ್ಲಿ 51 ಹುಡುಗಿಯರನ್ನು ಒತ್ತೆಯಿರಿಸಿಕೊಂಡು ಲೈಂಗಿಕ ಕಿರುಕುಳ- ಪೊಲೀಸರಿಂದ ರಕ್ಷಣೆ

    ಲಕ್ನೋ: ಮದ್ರಸಾದ ಮ್ಯಾನೇಜರ್‍ವೊಬ್ಬ 51 ಹುಡುಗಿಯರನ್ನು ಒತ್ತೆಯಾಗಿರಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆಘಾತಕಾರಿ ಘಟನೆ ಲಕ್ನೋದ ಶಹದತ್‍ಗಂಜ್‍ನಲ್ಲಿ ನಡೆದಿದೆ. ಶುಕ್ರವಾರದಂದು ಪೊಲೀಸರು ಹುಡುಗಿಯರನ್ನು ರಕ್ಷಣೆ ಮಾಡಿದ್ದು, ಮ್ಯಾನೇಜರ್ ನನ್ನು ಬಂಧಿಸಿದ್ದಾರೆ.

    ಮದ್ರಸಾದಲ್ಲಿ ಸುಮಾರು 125 ಹುಡುಗಿಯರು ವ್ಯಾಸಂಗ ಮಾಡುತ್ತಿದ್ದರು. ಕೆಲವು ಹುಡುಗಿಯರು ಮ್ಯಾನೇಜರ್ ತಮಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ನೋ ಪೊಲೀಸರ ಜಂಟಿ ತಂಡ ದಾಳಿ ಮಾಡಿದ ವೇಳೆ ಮದ್ರಸಾದೊಳಗೆ 51 ಹುಡುಗಿಯರನ್ನು ಒತ್ತೆಯಾಗಿರಿಸಿಕೊಳ್ಳಲಾಗಿತ್ತು. ಎಲ್ಲಾ ಹುಡುಗಿಯರನ್ನ ರಕ್ಷಣೆ ಮಾಡಲಾಗಿದೆ.

    ಸಂತ್ರಸ್ತ ಹುಡುಗಿಯರು ತಮ್ಮ ಪರಿಸ್ಥಿಯ ಬಗ್ಗೆ ಕಾಗದದಲ್ಲಿ ಬರೆದು ನೆರೆಹೊರೆಯ ಮನೆಗೆ ಪೇಪರ್ ಪೀಸ್‍ಗಳನ್ನ ಬಿಸಾಕಿದ್ದಾರೆ. ನಂತರ ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ಪ್ರಕರಣವನ್ನ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಿದ್ದಾರೆ.

    ದೂರು ಬಂದ ಕೂಡಲೇ ನಾವು ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ದಾಳಿ ಮಾಡಲು ನಮ್ಮ ತಂಡ ಮದ್ರಸಾಗೆ ಹೋದಾಗ 51 ಹುಡುಗಿಯರನ್ನ ಒತ್ತೆಯಾಗಿರಿಸಿಕೊಳ್ಳಲಾಗಿತ್ತು. ಆರೋಪಿಯನ್ನ ಬಂಧಿಸಿದ್ದು, ತನಿಖೆ ಮಾಡುತ್ತಿದ್ದೇವೆ. ಆತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಜೊತೆಗೆ ಅವರನ್ನ ಹೊಡೆಯುತ್ತಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

    ಮದ್ರಸಾದ ಮ್ಯಾನೇಜರ್ ಹುಡುಗಿಯರನ್ನು ಹೊಡೆದು ಬಲವಂತವಾಗಿ ಡ್ಯಾನ್ಸ್ ಮಾಡುವಂತೆ ಹೇಳುತ್ತಿದ್ದ ಎಂದು ಸಂತ್ರಸ್ತರ ಕುಟುಂಬದವರು ಹೇಳಿದ್ದಾರೆ.

    ಕೆಲವು ಹುಡುಗಿಯರನ್ನ ಒತ್ತೆಯಾಗಿರಿಸಿಕೊಂಡಿರುವ ಬಗ್ಗೆ ನಮಗೆ ದೂರು ಬಂದಿತ್ತು. ವಿದ್ಯಾರ್ಥಿಗಳಿಂದ ಕೂಡ ವಿವಿಧ ದೂರುಗಳು ಬಂದಿದ್ದವು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಜಂಟಿ ತಂಡದೊಂದಿಗೆ ಇಲ್ಲಿಗೆ ದಾಳಿ ಮಾಡಲು ಬಂದೆವು. ತನಿಖೆ ನಂತರ ದೂರುಗಳು ಸರಿ ಎಂಬುದು ಗೊತ್ತಾಯಿತು. ಹೀಗಾಗಿ ಎಫ್‍ಐಆರ್ ದಾಖಲಿಸಿದ್ದೇವೆ. ಆರೋಪಿಯನ್ನ ಬಂಧಿಸಲಾಗಿದೆ ಎಂದು ಪಶ್ಚಿಮ ಉತ್ತರ ಪ್ರದೇಶದ ಎಸ್‍ಪಿ ವಿಕಾಶ್ ತಿರುಪತಿ ಹೇಳಿದರು.