Tag: ಪೊಲೀಸ್ ಪೇದೆ. ಮನೆ

  • ವಜಾಗೊಂಡಿರೋ ಪೊಲೀಸ್ ಪೇದೆ ಮನೆಯಲ್ಲಿ ಗಾಂಜಾ ಪತ್ತೆ

    ವಜಾಗೊಂಡಿರೋ ಪೊಲೀಸ್ ಪೇದೆ ಮನೆಯಲ್ಲಿ ಗಾಂಜಾ ಪತ್ತೆ

    ಧಾರವಾಡ: ವಜಾಗೊಂಡಿರುವ ಕಾನ್‍ಸ್ಟೇಬಲ್ ಮನೆಯಲ್ಲಿ ಗಾಂಜಾ ಪತ್ತೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

    ಸಂಜು ಪಾಟೀಲ್ ವಜಾಗೊಂಡಿರುವ ಪೊಲೀಸ್ ಪೇದೆ. ನಗರದ ಮುರಘಾಮಠದ ಹತ್ತಿರ ಮನೆ ಮಾಡಿಕೊಂಡಿದ್ದ ಸಂಜು ಪಾಟೀಲ್ ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಕನದಾಳ ಗ್ರಾಮದವನು. ಈ ಹಿಂದೆ ಈತ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದ.

    ದೀರ್ಘಾವಧಿ ರಜೆ ಪಡೆಯುತ್ತಿದ್ದ ಇವನನ್ನು ಪೊಲೀಸ್ ಇಲಾಖೆ ವಜಾ ಮಾಡಿತ್ತು. ಬಳಿಕ ಈತ ಧಾರವಾಡದಲ್ಲಿ ಬಂದು ನೆಲೆಸಿದ್ದ. ಖಚಿತ ಮಾಹಿತಿ ಮೇರೆಗೆ ಈತನ ಮನೆ ಮೇಲೆ ದಾಳಿ ಮಾಡಿದ ಧಾರವಾಡ ಉಪನಗರ ಪೊಲೀಸರು, ಈತನಿಂದ 283 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ.

    ಉಪನಗರ ಪೊಲೀಸರು ಈತನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.