Tag: ಪೊಲೀಸ್ ಪಬ್ಲಿಕ್ ಟಿವಿ

  • ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

    ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

    ಮಡಿಕೇರಿ: ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಯುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಕಬ್ಬಿಣದ ಏಣಿ ತಗುಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

    ಕೊಡಗಿನ ಆರ್ಜಿ ಗ್ರಾಮದ ನಿವಾಸಿ ಸಬಾಸ್ಟಿನ್ ಲೋಬೋ(60) ಮೃತ ದುರ್ದೈವಿ. ಪ್ರತಿ ದಿನದಂತೆ ಬೆಳಗ್ಗೆ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯಕ್ಕೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಇಂದು ಸಬಾಸ್ಟಿನ್ ಲೋಬೋ ಕಾಳು ಮೆಣಸು ಕೊಯ್ಯುವ ವೇಳೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ವಿದ್ಯುತ್ ಕಂಬಕ್ಕೆ ಕಬ್ಬಿಣದ ಏಣಿ ಇಡುವ ಸಂದರ್ಭ ಅಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ.

    ವಿದ್ಯುತ್ ತಂತಿಯಿಂದ ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಬಾಸ್ಟಿನ್ ಸಾವನಪ್ಪಿದ್ದಾರೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ರಿಯತಮನಿಗೆ ಜಾಮೀನು ಕೊಡಲು ಒಪ್ಪದ ತಂದೆ – ಬಾಲಕಿ ಆತ್ಮಹತ್ಯೆ

    ಪ್ರಿಯತಮನಿಗೆ ಜಾಮೀನು ಕೊಡಲು ಒಪ್ಪದ ತಂದೆ – ಬಾಲಕಿ ಆತ್ಮಹತ್ಯೆ

    – ಮಗಳಿಗೆ ಬುದ್ದಿ ಹೇಳಲು ಹೋಗಿ ಕಣ್ಣೀರು ಹಾಕುತ್ತಿರುವ ತಂದೆ

    ಗಾಂಧಿನಗರ: ಪ್ರಿಯತಮನಿಗೆ ಜಾಮೀನು ಕೊಡಿಸಲು ಅಪ್ಪ ಒಪ್ಪಲಿಲ್ಲ ಎಂದು ಸಿಟ್ಟಿಗೆದ್ದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ರಾಜ್‍ಕೋಟ್‍ನಲ್ಲಿ ನಡೆದಿದೆ.

    17 ವರ್ಷದ ಬಾಲಕಿಯೊಬ್ಬಳು 21ರ ಯುವಕನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗುವುದಾಗಿ ತಂದೆಯ ಬಳಿ ಹೇಳಿದ್ದಾಳೆ. ಕೋಪಗೊಂಡ ತಂದೆ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಕಿ ಜಾಮೀನು ಕೊಟ್ಟು ಪ್ರಿಯಕರನನ್ನು ಠಾಣೆಯಿಂದ ಬಿಡಿಸುವಂತೆ ತಂದೆಯನ್ನು ಕೇಳಿದ್ದಾಳೆ. ಆದರೆ ಆಕೆಯ ತಂದೆ ಮಗಳ ಮಾತಿಗೆ ಒಪ್ಪಲಿಲ್ಲ. ಇದರಿಂದ ಯುವತಿ ಡಿಸೆಂಬರ್ 31 ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಬದುಕನ್ನು ಸರಿಪಡಿಸಲು ಹೋಗಿ ಮಗಳನ್ನೇ ಕಳೆದುಕೊಂಡ ನೋವಿನಲ್ಲಿ ಈಗ ತಂದೆ ಇದ್ದಾರೆ.

  • ಚಾಕ್ಲೇಟ್ ಕೊಡ್ತೀನೆಂದು ಮಗುವನ್ನು ಅಪಹರಿಸಿ ಮುಖ್ಯರಸ್ತೆಯಲ್ಲಿ ಬಿಟ್ಟ

    ಚಾಕ್ಲೇಟ್ ಕೊಡ್ತೀನೆಂದು ಮಗುವನ್ನು ಅಪಹರಿಸಿ ಮುಖ್ಯರಸ್ತೆಯಲ್ಲಿ ಬಿಟ್ಟ

    ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿ, ನಂತರ ವಿಜಯನಗರದ ಮುಖ್ಯರಸ್ತೆಯಲ್ಲಿ ಆಕೆಯನ್ನು ಬಿಟ್ಟು ಹೋಗಿರುವ ಆತಂಕಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯ ವಿಜಯನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

    ಗೋವಿಂದರಾಜನಗರದ ಬಿಬಿಎಂಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ. 8 ವರ್ಷದ ಬಾಲಕಿಯನ್ನು ಬೈಕ್ ನಲ್ಲಿ ಬಂದ ವ್ಯಕ್ತಿ ಅಪಹರಿಸಿದ್ದಾನೆ.

    ಬಾಲಕಿ ಮನೆ ಮುಂದೆ ಆಟ ಆಡುತ್ತಿದ್ದಳು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿ ಆಕೆಯ ಬಳಿ ತನ್ನ ಬೈಕ್ ನಿಲ್ಲಿಸಿ, ಚಾಕ್ಲೇಟ್ ಆಸೆ ತೋರಿಸಿದ್ದಾನೆ. ಹೀಗೆ ಬಾಲಕಿಯನ್ನು ಪುಸಲಾಯಿಸಿ ಇದ್ದಕ್ಕಿದ್ದಂತೆ ಬೈಕ್ ಹತ್ತಿಸಿಕೊಂಡು ಪರಾರಿಯಾಗಿದ್ದಾನೆ. ಬಾಲಕಿಯನ್ನು ಅಪಹರಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.

    ಬಾಲಕಿ ನಗರದ ನಾಗೇಶ್ ಹಾಗೂ ಪುಷ್ಪಲತಾ ದಂಪತಿಯ ಪುತ್ರಿ. ಅಪಹರಿಸಿದ ನಂತರ ಬಾಲಕಿಯನ್ನು ವಿಜಯನಗರದ ಮುಖ್ಯರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಪೋರ್ಟ್ಸ್ ಬೈಕ್ ಅಪಘಾತವಾಗಿ ಸಿನಿಮಾ ವಿತರಕ ಸಾವು -ಸುದೀಪ್ ಸಂತಾಪ

    ಸ್ಪೋರ್ಟ್ಸ್ ಬೈಕ್ ಅಪಘಾತವಾಗಿ ಸಿನಿಮಾ ವಿತರಕ ಸಾವು -ಸುದೀಪ್ ಸಂತಾಪ

    ಬೆಂಗಳೂರು: ಸ್ಪೋರ್ಟ್ಸ್ ಬೈಕ್ ಅಪಘಾತದಲ್ಲಿ ಸಿನಿಮಾ ವಿತರಕ ಮತ್ತು ಫೈನಾನ್ಶಿಯರ್ ಮೃತಪಟ್ಟಿದ್ದು, ನಟ ಸುದೀಪ್ ಕೂಡ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

    ಅಜಯ್ ಚಂದಾನಿ (48) ಮೃತ ಸಿನಿಮಾ ವಿತರಕ. ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಭಾನುವಾರ ಸಂಜೆ ಈ ಅಪಘಾತ ಸಂಭವಿಸಿದೆ. ಅಜಯ್ ಚಂದಾನಿ ಅವರು ವಸಂತನಗರದ ಅಬ್ಶೂಟ್ ಲೇಔಟ್‍ನ ನಿವಾಸಿಯಾಗಿದ್ದು, ತಮ್ಮ ಸುಮಾರು 7.5 ಲಕ್ಷ ರೂ. ಮೌಲ್ಯದ ಸುಜುಕಿ ವಿ ಸ್ಟಾರ್ಮ್ 650 ಎಕ್ಸ್ ಟಿ ಸೂಪರ್ ಬೈಕಿನಲ್ಲಿ ಮನೆಯಿಂದ ಭಾನವಾರ ಹೊರಗಡೆ ಹೊರಟ್ಟಿದ್ದರು.

    ಬೈಕನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದರಿಂದ ಸುಮಾರು 6.30ಕ್ಕೆ ಇವರು ಕನ್ನಿಂಗ್ ಹ್ಯಾಂ ರಸ್ತೆಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಸಂಚಾರ ಪೊಲೀಸರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಮೊದಲು ಡಿಕ್ಕಿ ಹೊಡೆದಿದೆ. ಬಳಿಕ ಅಲ್ಲೇ ಸಮೀಪದಲ್ಲಿದ್ದ ಹೂಡಿ ಅಪಾರ್ಟ್ ಮೆಂಟ್‍ನ ಕಾಂಪೌಂಡ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಗೋಡೆಯನ್ನು ಸೀಳಿ ಅಲ್ಲೇ ಸಿಕ್ಕಿಕೊಂಡಿದೆ. ಆದರೆ ಅಜಯ್ ಚಂದಾನಿ ಅಪಾರ್ಟ್ ಮೆಂಟ್‍ನ ಗ್ರೌಂಡ್‍ಗೆ ಹೋಗಿ ಬಿದ್ದಿದ್ದಾರೆ.

    ತಕ್ಷಣ ಸ್ಥಳೀಯರು ಹೈಗ್ರೌಂಡ್ಸ್ ಸಂಚಾರಿ ಪೊಲೀಸರಿಗೆ ಮಾಹಿತಿ ತಿಳಿಸಿ ಅವರನ್ನು ಜೈನ್ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಂಗಳೂರಿನಲ್ಲಿ ಅತಿದೊಡ್ಡ ಹಿಂದಿ ಚಲನಚಿತ್ರ ವಿತರಕರಲ್ಲಿ ಒಬ್ಬರಾಗಿದ್ದ ದಿವಂಗತ ಪಾಲ್ ಚಂದಾನಿ ಅವರ ಪುತ್ರ ಅಜಯ್ ಚಂದಾನಿಯಾಗಿದ್ದು, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಚಲಚಚಿತ್ರಗಳ ಪ್ರಮುಖ ವಿತರಕರಾಗಿದ್ದರು. ಇವರ ಸಾವಿನ ಬಗ್ಗೆ ತಿಳಿದು ನಟ ಸುದೀಪ್ ಅವರು ಕೂಡ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಅನಸ್ತೇಶಿಯಾ ಡೋಸ್ ಹೆಚ್ಚಳ, ರೋಗಿ ಸಾವು – ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ

    ಅನಸ್ತೇಶಿಯಾ ಡೋಸ್ ಹೆಚ್ಚಳ, ರೋಗಿ ಸಾವು – ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ

    ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯದಿಂದ ಅರಿವಳಿಕೆ(ಅನಸ್ತೇಶಿಯಾ) ಡೋಸ್ ಹೆಚ್ಚಾದ ಪರಿಣಾಮ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

    ಉದ್ದನೂರು ಗ್ರಾಮದ ನಿವಾಸಿ ಸುರೇಶ್(42) ಮೂಳೆ ಶಸ್ತ್ರ ಚಿಕಿತ್ಸೆಗೆಂದು ಸೋಮವಾರ ಕೊಳ್ಳೇಗಾಲ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೂ ಮುನ್ನ ನೋವು ನಿವಾರಣೆಗೆ ನೀಡುವ ಅರಿವಳಿಕೆ ಮದ್ದಿನಲ್ಲಿ ವ್ಯತ್ಯಾಸವಾಗಿದ್ದು, ಅರಿವಳಿಕೆ ಡೋಸ್ ಹೆಚ್ಚಾದ ಪರಿಣಾಮ ಸುರೇಶ್ ಪ್ರಜ್ಞೆ ಕಳೆದುಕೊಂಡಿದ್ದರು. ಪ್ರಜ್ಞಾಹೀನರಾಗಿದ್ದ ಸುರೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

    ವೈದ್ಯರ ನಿರ್ಲಕ್ಷ್ಯದಿಂದಲೇ ಸುರೇಶ್ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ. ನ್ಯಾಯ ಕೊಡಿಸುವಂತೆ ಹನೂರು ಪೊಲೀಸ್ ಠಾಣೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದರು.

  • ಅಸಮಾಧಾನಗೊಂಡ ಆಪ್ ಕಾರ್ಯಕರ್ತನಿಂದಲೇ ಕೇಜ್ರಿವಾಲ್‍ಗೆ ಕಪಾಳಮೋಕ್ಷ: ಡೆಲ್ಲಿ ಪೊಲೀಸ್

    ಅಸಮಾಧಾನಗೊಂಡ ಆಪ್ ಕಾರ್ಯಕರ್ತನಿಂದಲೇ ಕೇಜ್ರಿವಾಲ್‍ಗೆ ಕಪಾಳಮೋಕ್ಷ: ಡೆಲ್ಲಿ ಪೊಲೀಸ್

    ನವದೆಹಲಿ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಿಂದಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಹಲ್ಲೆಯಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ದೆಹಲಿಯ ಮೋತಿ ನಗರ್ ಬಳಿ ಕೇಜ್ರಿವಾಲ್ ಅವರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಗಂಭೀರವಾಗಿ ತೆಗೆದುಕೊಂಡ ದೆಹಲಿ ಪೊಲೀಸರು ಡಿಸಿಪಿ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಿದ್ದರು. ಈ ವೇಳೆ ಬಂಧಿತ ಸುರೇಶ್ ಮೋತಿ ನಗರ್ ನಿವಾಸಿ ಎಂದು ತಿಳಿದು ಬಂದಿದೆ.

    ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಎಎಪಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದ ಸುರೇಶ್, ಪಕ್ಷದ ಸಭೆಗಳನ್ನು ನಡೆಸುವ ಹಾಗೂ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದ್ದ. ಆದರೆ ಪಕ್ಷದ ನಾಯಕರ ನಡೆ ಹಾಗೂ ವರ್ತನೆಯಿಂದ ಬೇಸತ್ತಿದ್ದ ಸುರೇಶ್ ಅಸಮಾಧಾನಗೊಂಡು ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭಿಸಿದ್ದಾಗಿ ದೆಹಲಿ ಪೊಲೀಸ್ ಹೆಚ್ಚುವರಿ ಪಿಆರ್ ಒ ಅನಿಲ್ ಮಿಟ್ಟಲ್ ಮಾಹಿತಿ ನೀಡಿದ್ದಾರೆ.

    ಪಕ್ಷದ ಮುಖಂಡರು ಸೇನೆಯ ಬಗ್ಗೆ ಅವಹೇಳಕಾರಿಯಾಗಿ ಹೇಳಿಕೆ ನೀಡಿದ್ದು ಕೂಡ ಆತ ಕೋಪಗೊಳ್ಳುವಂತೆ ಮಾಡಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಈ ವೇಳೆ ಭದ್ರತೆಯ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಸ್ಪಷ್ಟಪಡಿಸಿದ್ದಾರೆ. ಸದ್ಯ ಯುವಕನ ವಿರುದ್ಧ ಸೆಕ್ಷನ್ 323ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

    ಘಟನೆ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಎಎಪಿ ಪಕ್ಷದ ನಾಯಕರು ರಾಜಕೀಯ ಪ್ರಾಯೋಜಿತ ಘಟನೆ ಎಂದು ಕಿಡಿಕಾರಿದ್ದರು. ಅಲ್ಲದೇ ಪೊಲೀಸರ ಹೇಳಿಕೆ ವಿರುದ್ಧ ಕಿಡಿಕಾರಿರುವ ಎಎಪಿ ಮುಖಂಡ ಸೌರಭ್ ಭಾರಧ್ವಜ್, ಆರೋಪಿಯ ಪತ್ನಿ ತನ್ನ ಪತಿ ಸುರೇಶ್ ಮೋದಿ ಬೆಂಬಲಿಗ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರ ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

  • ಆಂಧ್ರ ರಕ್ತ ರಾಜಕೀಯಕ್ಕೆ ಇಬ್ಬರು ಬಲಿ

    ಆಂಧ್ರ ರಕ್ತ ರಾಜಕೀಯಕ್ಕೆ ಇಬ್ಬರು ಬಲಿ

    ರಾಬಾದ್: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಒಂದು ತಿಂಗಳ ದೀರ್ಘಕಾಲದ ಮತದಾನ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದ್ದು, ಇದರ ಭಾಗವಾಗಿ ಆಂಧ್ರಪ್ರದೇಶದಲ್ಲಿ ಉಂಟಾದ ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

    ಇಂದು ಆಂಧ್ರ ಪ್ರದೇಶದ ಲೋಕಸಭೆಯ 25 ಮತ್ತು ವಿಧಾನಸಭೆಯ 175 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಈ ವೇಳೆ ಅನಂತಪುರದ ತಾಡಿಪತ್ರಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಉಂಟಾದ ಗಲಾಟೆಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಟಿಡಿಪಿಯ ಭಾಸ್ಕರ್ ರೆಡ್ಡಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪುಲ್ಲಾರೆಡ್ಡಿ ದಾರುಣ ಹತ್ಯೆಯಾಗಿದ್ದಾರೆ. ಇತ್ತ ವೀರಾಪುರಂನ ಮತಗಟ್ಟೆಯಲ್ಲಿ ಗ್ಯಾಂಗ್ ಒಂದು ನುಗ್ಗಿ ಅಕ್ರಮ ಮತದಾನ ನಡೆಸಲು ಯತ್ನಿಸಿದ್ದು, ಮಚ್ಚು-ಲಾಂಗು ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ನಡುವೆ ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

    ಸತ್ತೇನಪಲ್ಲಿಯಲ್ಲಿ ಸ್ಪೀಕರ್ ಕೊಡೆಲಾ ಶಿವಪ್ರಸಾದ್ ಬಟ್ಟೆ ಹರಿದ ವೈಎಸ್‍ಆರ್ ಕಾರ್ಯಕರ್ತರು, ಕಲ್ಲು ಹೊಡೆದು ಹಲ್ಲೆ ಮಾಡಿದ್ದಾರೆ. ಕಡಪದಲ್ಲಿ ವೈಎಸ್‍ಆರ್ ಕಾರ್ಯಕರ್ತನಿಗೆ ರಕ್ತ ಬರುವಂತೆ ಟಿಡಿಪಿ ಕಾರ್ಯಕರ್ತರು ಹೊಡೆದಿದ್ದಾರೆ. ಗುತ್ತಿಯಲ್ಲಿ ಇವಿಎಂ ಒಡೆದುಹಾಕಿದ ಜನಸೇನಾ ಅಭ್ಯರ್ಥಿ ಮಧುಸೂಧನ್ ಗುಪ್ತಾರನ್ನು ಪೊಲೀಸರು ಬಂಧಿಸಿದ್ದಾರೆ.

    ಇತ್ತ ಇವಿಎಂ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಚಂದ್ರಬಾಬು ನಾಯ್ಡು ಅವರು, ರಾಜ್ಯದ 157 ಕಡೆ ಮರುಮತದಾನಕ್ಕೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಆದರೆ ಚಂದ್ರಬಾಬು ಅವರು ಸೋಲುವ ಹತಾಶೆಯಲ್ಲಿ ಈ ಆರೋಪ ಮಾಡಿದ್ದಾರೆ. ಮತದಾನ ಶುರುವಾದ 3 ಗಂಟೆಯಲ್ಲಿ ಮರುಮತದಾನಕ್ಕೆ ಬೇಡಿಕೆ ಇಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ರಾಜಕೀಯ ನಾಯಕರು ಹೇಳಿದ್ದಾರೆ. ಆದರೆ ಚುನಾವಣಾ ಆಯೋಗ ಮಾತ್ರ ಇವಿಎಂನಲ್ಲಿ ಯಾವುದೇ ದೋಷ ಇಲ್ಲ. ಎಲ್ಲೂ ಮರುಚುನಾವಣೆ ನಡೆಸುವುದಿಲ್ಲ ಅಂತ ಸ್ಪಷ್ಟನೆ ನೀಡಿದೆ.

    ಕುಪ್ಪಂನಿಂದ 9ನೇ ಬಾರಿಗೆ ಮರು ಆಯ್ಕೆ ಬಯಸಿರುವ ಟಿಡಿಪಿ ಅಧ್ಯಕ್ಷ, ಸಿಎಂ ಚಂದ್ರಬಾಬು ನಾಯ್ಡು ಉಂಡವಲ್ಲಿಯಲ್ಲಿ, ವಿಪಕ್ಷ ನಾಯಕ ಜಗನ್ ರೆಡ್ಡಿ ಪುಲಿವೆಂದುಲ, ವಿಜಯವಾಡದಲ್ಲಿ ಜನಸೇನಾ ಅಧ್ಯಕ್ಷ ನಟ ಪವನ್ ಕಲ್ಯಾಣ್ ಹಕ್ಕು ಚಲಾಯಿಸಿದರು. ತೆಲಂಗಾಣ ಲೋಕಸಭಾ ಎಲೆಕ್ಷ್‍ನಲ್ಲಿ ಟಾಲಿವುಡ್ ಸ್ಟಾರ್‍ ಗಳು ಹಕ್ಕು ಚಲಾಯಿಸಿದರು.

  • ಕೇಕ್ ಜೊತೆ ಮಾಜಿ ಪ್ರೇಯಸಿ ಮನೆಗೆ ಬಂದು ಹಾಲಿ ಲವ್ವರ್‌ನ ಕೊಂದ

    ಕೇಕ್ ಜೊತೆ ಮಾಜಿ ಪ್ರೇಯಸಿ ಮನೆಗೆ ಬಂದು ಹಾಲಿ ಲವ್ವರ್‌ನ ಕೊಂದ

    ಚಂಡೀಗಢ: ಯುವತಿಯೊಬ್ಬಳ ಮಾಜಿ ಲವ್ವರ್ ಮತ್ತು ಹಾಲಿ ಪ್ರಿಯಕರ ನಡುವೆ ಜಗಳ ನಡೆದಿದ್ದು, ಪರಿಣಾಮ ಮಾಜಿ ಪ್ರಿಯಕರ ತನ್ನ ಪ್ರೇಯಸಿಯ ಲವ್ವರ್ ನನ್ನು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ರಾತ್ರಿ ನಾಯಗಾಂವ್ ನಲ್ಲಿ ನಡೆದಿದ್ದು ಮೋಹಿತ್(20) ಮುಖ್ಯ ಆರೋಪಿ ಎಂದು ಗುರುತಿಸಲಾಗಿದೆ. ಈತನ ಜೊತೆ ಇಬ್ಬರು ಸ್ನೇಹಿತರಾದ ಗೌರವ್ ಅಲಿಯಾಸ್ ಗೊಟಾ (21) ಮತ್ತು ರಣಜೀತ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸೋಮವಾರ ರಾತ್ರಿ ಆರೋಪಿ ಮೋಹಿತ್ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಕೇಕ್ ತೆಗೆದುಕೊಂಡು ಇಬ್ಬರು ಸ್ನೇಹಿತರಾದ ಗೌರವ್ ಮತ್ತು ರಂಜಿತ್ ಸಿಂಗ್ ಜೊತೆ ಮಾಜಿ ಪ್ರಿಯತಮೆಯ ಮನೆಗೆ ಹೋಗಿದ್ದನು. ಆಗ ಆಕೆಯ ಹಾಲಿ ಪ್ರಿಯತಮ ರಾಕೇಶ್ ಅಲ್ಲಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ  ತಿರುಗಿ ಮೋಹಿತ್ ಸ್ನೇಹಿತರ ಸಹಾಯದಿಂದ ಚಾಕುವಿನಿಂದ ರಾಕೇಶ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

    ಮೃತ ರಾಕೇಶ್ ಬಾಲೋಂಗಿಯಲ್ಲಿರುವ ತನ್ನ ಮನೆಗೆ ಹಿಂದಿರುಗಲಿಲ್ಲ ಎಂದು ಕುಟುಂಬದವರು ಯುವತಿಯ ಮನೆಗೆ ಬಂದಾಗ ಈ ಕೊಲೆ ಬೆಳಕಿಗೆ ಬಂದಿದೆ. ಆಗ ರಾಕೇಶ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

    ಮೃತ ರಾಕೇಶ್ ಕಳೆದೆರಡು ದಿನಗಳಿಂದ ಯುವತಿಯ ಮನೆಯಲ್ಲಿದ್ದನು. ಈ ಘಟನೆ ನಡೆದ ಸಮಯದಲ್ಲಿ ಯುವತಿ ಮನೆಯಲ್ಲಿ ಇರಲಿಲ್ಲ. ಸೋಮವಾರ ಸಂಜೆ ಬರ್ತ್ ಡೇ ಆಚರಿಸಿಕೊಳ್ಳಲು ಆರೋಪಿ ಮೋಹಿತ್ ಮತ್ತು ಸ್ನೇಹಿತರ ಜೊತೆ ಬಂದು ಆತನನ್ನು ಹತ್ಯೆಗೈದಿದ್ದಾನೆ ಎಂದು ನಯಾಗಾಂವ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಗುರ್ವಂತ್ ಸಿಂಗ್ ಹೇಳಿದ್ದಾರೆ.

    ಈ ಕುರಿತು ಐಪಿಸಿ ಸೆಕ್ಷನ್ 302 ಮತ್ತು 34 ರ ಅಡಿಯಲ್ಲಿ ಪ್ರಕರಣವನ್ನು ನಾಯಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

  • ದುನಿಯಾ ವಿಜಿ ಮೇಲೆ ಮತ್ತೊಂದು ಪ್ರಕರಣ ದಾಖಲು!

    ದುನಿಯಾ ವಿಜಿ ಮೇಲೆ ಮತ್ತೊಂದು ಪ್ರಕರಣ ದಾಖಲು!

    ಬೆಂಗಳೂರು: ನಟ ದುನಿಯಾ ವಿಜಯ್ ವಿರುದ್ಧ ಪ್ರಕರಣಗಳ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ಪಾಣಿಪುರಿ ಕಿಟ್ಟಿ, ಪುತ್ರಿ ಮೋನಿಕಾ ಕೇಸ್ ಬೆನ್ನಲ್ಲೇ, ವಿಜಿ ಹಾಗೂ ಕುಟುಂಬದವರ ವಿರುದ್ಧ ಶಾಂತಿಭಂಗ ಕೇಸ್ ದಾಖಲಾಗಿದೆ.

    ಹೌದು, ಈ ಬಾರಿ ದುನಿಯಾ ವಿಜಿ, ಇಬ್ಬರು ಪತ್ನಿಯರು, ಮಕ್ಕಳು ಹಾಗೂ ಬಾಡಿಗಾರ್ಡ್ ವಿರುದ್ಧ ಗಿರಿನಗರ ಪೊಲೀಸರು ಶಾಂತಿಭಂಗದ ಕೇಸ್ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ದುನಿಯಾ ವಿಜಯ್‍ರನ್ನು ಡಿಸಿಪಿ ಅಣ್ಣಮಲೈ ಮುಂದೆ ಹಾಜರು ಪಡಿಸಿಲಿದ್ದಾರಂತೆ.

    ಈ ಹಿಂದೆ ಆಗಿದ್ದೇನು?:
    ಅವಾಚ್ಯ ಶಬ್ಧಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ವಿಜಿ ಮೊದಲ ಪುತ್ರಿ ಮೋನಿಕಾ ತನ್ನ ತಂದೆ ವಿಜಿ, ಚಿಕ್ಕಮ್ಮ ಕೀರ್ತಿ ಗೌಡ ಸೇರಿದಂತೆ ಐವರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾನು ಮನೆಯ ಒಳಗೆ ಹೋಗುವಾಗ ನನ್ನ ತಂದೆ ವಿಜಿ, ಕೀರ್ತಿಗೌಡ, ಹೇಮಂತ್, ವಿನೋದ್ ಹಾಗೂ ಕಾರ್ ಡ್ರೈವರ್ ಮಹಮ್ಮದ್ ಸೇರಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನನ್ನನ್ನು ಬೈದು ಕಾಲಿನಿಂದ ಹಾಗೂ ಕೆಲವು ಮಾರಕಸ್ತ್ರಗಳಿಂದ ಹೊಡೆದು ಗೋಡೆಗೆ ನನ್ನ ತಲೆಯನ್ನು ಹಿಡಿದು ಹೊಡೆದಿದ್ದಾರೆ ಎಂದು ಮೋನಿಕಾ ದೂರಿನಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 34, 324, 323, 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಪುತ್ರಿ ಮೋನಿಕಾ ಪ್ರಕರಣಕ್ಕೂ ಮುನ್ನ ದುನಿಯಾ ವಿಜಿ ಜಿಮ್ ಟ್ರೈನರ್ ಮಾರುತಿಗೌಡ ಹಲ್ಲೆ ಪ್ರಕರಣದಲ್ಲಿ ಸಿಲುಕಿದ್ದರು. ಹೀಗೆ ಒಂದೂವರೇ ತಿಂಗಳಿನಲ್ಲಿ ವಿಜಯ್ ವಿರುದ್ಧ ಒಂದೊಂದೇ ಪ್ರಕರಣಗಳು ದಾಖಲಾಗುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ಮಡಿಕೇರಿ: 18 ವರ್ಷದ ಯುವತಿಯೊಬ್ಬಳು ತಲೆ ಕೂದಲು ಉದುರುತ್ತಿದೆ ಎಂದು ನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ಕೊಡಗು ಮೂಲದ ನೇಹಾ ಗಂಗಮ್ಮ(18) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೂರು-ನಾಲ್ಕು ದಿನಗಳ ಹಿಂದೆ ಮನೆಗೆ ಹೋಗುತ್ತೇನೆ ಎಂದು ಪಿಜಿಯಿಂದ ಹೊರಟಿದ್ದಾಳೆ. ಆದರೆ ಮನೆಗೆ ಬಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಈಕೆ ಮೃತದೇಹ ಪತ್ತೆಯಾಗಿದೆ.

    ನೇಹಾ ಗಂಗಮ್ಮ ಒಂದು ತಿಂಗಳ ಹಿಂದೆ ತನ್ನ ಕೂದಲನ್ನು ವಿ.ವಿ ಮೊಹಲ್ಲದ ರೋಹಿಣಿ ಬ್ಯೂಟಿಪಾರ್ಲರ್ ಎಂಬಲ್ಲಿ ಸ್ಟ್ರೈಟ್ನಿಂಗ್ ಮಾಡಿಸಿದ್ದಾಳೆ. ನಂತರ ಕೂದಲು ಉದುರಲಾರಂಭಿಸಿದೆ. ಇದರಿಂದ ದೃತಿಗೆಟ್ಟ ನೇಹಾ ಬ್ಯೂಟಿಪಾರ್ಲರ್ ಮಾಲೀಕರೊಂದಿಗೆ ಮಾತನಾಡಿದ್ದಾಳೆ. ಆದರೂ ಕೂದಲು ಉದುರುವಿಕೆ ಕಡಿಮೆಯಾಗಿಲ್ಲ. ನಂತರ ಮೈಸೂರಿನಿಂದ ಕೊಡಗಿಗೆ ಆಗಮಿಸಿದ್ದು, ಮನೆಗೆ ಬಂದಿರಲಿಲ್ಲ.

    ಮನೆಯವರು ಕೂಡ ಮಗಳು ಮೈಸೂರಿನಲ್ಲಿ ಇದ್ದಾಳೆ ಎಂದು ತಿಳಿದು ಮಗಳಿದ್ದ ಪಿಜಿಗೆ ಕರೆ ಮಾಡಿದ್ದಾರೆ. ಆದರೆ ಮಗಳು ಪಿಜಿಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ನಂತರ ಪೊಷಕರು ತಮಗೆ ಗೊತ್ತಿರುವ ಕಡೆಯೆಲ್ಲ ಹುಡುಕಾಡಿದ್ದಾರೆ. ಆದರೆ ಏನು ಪ್ರಯೋಜವಾಗಿಲ್ಲ, ಕೊನೆಗೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡು ಯುವತಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಆದರೆ ಶನಿವಾರ ನೇಹಾ ಮೃತದೇಹ ತನ್ನ ಸ್ವಗ್ರಾಮ ಬಾಳೆಲೆಯ ಲಕ್ಷ್ಮಣ ತೀರ್ಥ ನದಿಯಲ್ಲಿ ಪತ್ತೆಯಾಗಿದೆ. ಆನೇಕ ಬಾರಿ ನೇಹಾ ತಮ್ಮ ಪೊಷಕರ ಬಳಿ ತನ್ನ ಅಳಲು ತೋಡಿಕೊಂಡಿದ್ದು, ನಾನು ಕಾಲೇಜಿಗೆ ಹೋಗಲ್ಲ ನನ್ನ ಕೂದಲು ಉದರುವಿಕೆ ಸರಿಯಾದ ನಂತರ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ ಪೋಷಕರು ಕೂಡ ಆಕೆಯನ್ನ ಸಮಾಧಾನ ಮಾಡಿ ಕಾಲೇಜಿಗೆ ಹೋಗು ಎಂದ ಹೇಳಿ ಮೈಸೂರಿಗೆ ಕಳುಹಿಸಿದ್ದಾರೆ. ಆದರೆ ಹೇರ್ ಫಾಲ್ ನಿಂದ ಕಂಗೆಟ್ಟ ನೇಹಾ ನೊಂದು ಸ್ವಗ್ರಾಮಕ್ಕೆ ಬಂದು ನದಿಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

    ಸದ್ಯಕ್ಕೆ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv