Tag: ಪೊಲೀಸ್ ಚೌಕಿ

  • ಲ್ಯಾಂಬೋರ್ಗಿನಿ ಕಾರು ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಲ್ಯಾಂಬೋರ್ಗಿನಿ ಕಾರು ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ಫನ್ ವರ್ಲ್ಡ್ ಮಾಲೀಕನ ಪುತ್ರ ಸನ್ನಿ ಸಬರ್ ವಾಲ್ ರೇಸ್ ಮಾಡಿ, ಲ್ಯಾಂಬೋರ್ಗಿನಿ ಕಾರನ್ನು ಪೊಲೀಸ್ ಚೌಕಿಗೆ ಗುದ್ದಿಸಿದ್ದು ದೊಡ್ಡ ಸುದ್ದಿಯಾಗಿತ್ತು.

    ಸಿಟಿಒ ಜಂಕ್ಷನ್ ನಲ್ಲಿರುವ ಪೊಲೀಸ್ ಚೌಕಿಗೆ ಸನ್ನಿ ಸಬರ್ ವಾಲ್ ತನ್ನ ಲ್ಯಾಂಬೋರ್ಗಿನಿ ಕಾರು ಗುದ್ದಿಸಿದ್ದ. ಆ ಬಳಿಕ ಸ್ಥಳದಲ್ಲೇ ಕ್ಯಾಮೆರಾಗೆ ಪೋಸ್ ಕೂಡ ಕೊಟ್ಟಿದ್ದ ಸನ್ನಿ ಸಬರ್ ವಾಲ್‍ನನ್ನು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದರು. ಇದೀಗ ಅವತ್ತು ಅಪಘಾತ ಮಾಡಿದಾಗಿನ ವಿಡಿಯೋ ಲಭ್ಯವಾಗಿದೆ.

    ಮೂರು ಐಷಾರಾಮಿ ಕಾರುಗಳು ಸಿಗ್ನಲ್‍ನಲ್ಲಿ ಒಂದರ ಪಕ್ಕದಲ್ಲಿ ಒಂದರಂತೆ ಬಂದು ನಿಂತಿವೆ. ಆಗ ಜೋರಾಗಿ ಹೋಗಿ ಕಾರ್ ಯೂಟರ್ನ್ ಮಾಡಿರುವ ಸನ್ನಿ ಸಬರ್ ವಾಲ್, ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಎಲ್ಲಾ ದೃಶ್ಯಗಳು ಮತ್ತೊಂದು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಸಿಲಿಕಾನ್ ಸಿಟಿಯಲ್ಲಿ ಸುಸಜ್ಜಿತ ಪೊಲೀಸ್ ಚೌಕಿಗಳು- ಚೌಕಿಯಲ್ಲಿ ಏನೇನ್ ಸೌಲಭ್ಯವಿದೆ?

    ಸಿಲಿಕಾನ್ ಸಿಟಿಯಲ್ಲಿ ಸುಸಜ್ಜಿತ ಪೊಲೀಸ್ ಚೌಕಿಗಳು- ಚೌಕಿಯಲ್ಲಿ ಏನೇನ್ ಸೌಲಭ್ಯವಿದೆ?

    ಬೆಂಗಳೂರು: ಇಡೀ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಹೊಂದಿರುವ ನಗರ ಎಂಬ ಖ್ಯಾತಿಗೆ ಸಿಲಿಕಾನ್ ಟಿವಿ ಬೆಂಗಳೂರು ಪಾತ್ರವಾಗಿದೆ. ಇದರ ಬೆನ್ನಲ್ಲೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ವಿಶೇಷ ಸೌಲಭ್ಯವಿರುವ ಪೊಲೀಸ್ ಚೌಕಿಗಳು ರೆಡಿಯಾಗಿವೆ.

    ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಸದಾ ಧೂಳು, ಹೊಗೆ, ಬಿಸಿಲು ಟೆನ್ಶನ್ ನಡುವೆಯೇ ಕೆಲಸ ಮಾಡುವ ಟ್ರಾಫಿಕ್ ಪೊಲೀಸರಿಗೆ ಬಿಬಿಎಂಪಿ, ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಪೊಲೀಸ್ ಚೌಕಿಗಳು ನಿರ್ಮಾಣವಾಗಿವೆ. ನಗರದ್ಯಾಂತ 506 ಸುಸಜ್ಜಿತ ಪೊಲೀಸ್ ಚೌಕಿಗಳು ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ 19 ಚೌಕಿಗಳು ಈಗಾಗಲೇ ಉದ್ಘಾಟನೆಗೆ ರೆಡಿಯಾಗಿವೆ.

    ಈ ಹೈಫೈ ಚೌಕಿಗಳಲ್ಲಿ ಏನೆಲ್ಲಾ ಇದಾವೆ ಎನ್ನುವುದನ್ನು ನೋಡುವುದಾದರೆ, ಗಾಳಿ ಶುದ್ಧಿಕರಣ ಯಂತ್ರ, ಮೊಬೈಲ್ ಚಾರ್ಚಿಂಗ್ ಪಾಯಿಂಟ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಫ್ಯಾನ್‍ಗಳು, ಸಿಸಿಟಿವಿ ಕ್ಯಾಮೆರಾ, ಸ್ಪೀಕರ್ ಗಳು, ಕೂರಲು ಮೂರು ಆಸನಗಳು ಇರಲಿವೆ.

    ಬಿಸಿಲು ಹೊಗೆಯಲ್ಲಿ ಇಡೀ ದಿನ ಕಳೆಯುತ್ತಿದ್ದ ಟ್ರಾಫಿಕ್ ಪೊಲೀಸರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಸದ್ಯದ ಈ ಹೊಸ ಸೌಲಭ್ಯದಿಂದ ನಮ್ಮ ಪೊಲೀಸರು ಕೊಂಚ ನಿರಾಳಗೊಂಡಿದ್ದು, ಅದಷ್ಟು ಬೇಗ ಉಳಿದ ಎಲ್ಲಾ ಹೊಸ ಚೌಕಿಗಳು ರೆಡಿಯಾಗಬೇಕಿದೆ.