Tag: ಪೊಲೀಸ್ ಕಾನ್ ಸ್ಟೇಬಲ್

  • ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನಿಸಿದ್ದ ‘ಪೇದೆ’ ಅರೆಸ್ಟ್!

    ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನಿಸಿದ್ದ ‘ಪೇದೆ’ ಅರೆಸ್ಟ್!

    ಬೀದರ್: ಹೋಮ್ ಗಾರ್ಡ್ ಒಬ್ಬ ನಾನು ಪೊಲೀಸ್ ಕಾನ್ ಸ್ಟೇಬಲ್ ಎಂದು ಹುಡುಗನನ್ನು ಕಿಡ್ನ್ಯಾಪ್ ಮಾಡಿ ಒಂದು ರೂಮ್ ನಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖೇಡ್ ಗ್ರಾಮದ ಸೂರ್ಯಕಾಂತ್ ಎಂಬ ಹೋಮ್ ಗಾರ್ಡ್ ಫೈನಾನ್ಸ್ ಮಾಡಿಕೊಂಡಿದ್ದ ಹುಡುಗನನ್ನು ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಲಾಡ್ಜ್ ನ ರೂಮ್‍ ನಲ್ಲಿ ಕೂಡಿ ಹಾಕಿದ್ದನು. ನಂತರ ಫೈನಾನ್ಸ್ ವ್ಯಕ್ತಿಯಿಂದ 50 ಸಾವಿರ ರೂ. ಪಡೆದು ರೈಲ್ವೆ ಟ್ರಾಕ್ ಮೇಲೆ ಹಗ್ಗದಿಂದ ಕಟ್ಟಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.

    ಆರೋಪಿಯಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿ ಮಾರ್ಕೆಟ್ ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಎಸ್‍ಪಿ ದೇವರಾಜ್ ಡಿ ಮಾರ್ಗದರ್ಶನದಲ್ಲಿ ಬೀದರ್ ಪೊಲೀಸರು ಮಿಂಚಿನ ಕಾರ್ಯಚರಣೆ ಮಾಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

    ಹೋಮ್ ಗಾರ್ಡ್ ಆಗಿದ್ದ ಸೂರ್ಯಕಾಂತ್ ನಾನು ಪೊಲೀಸ್ ಕಾನ್ ಸ್ಟೇಬಲ್ ಎಂದು ಹೇಳಿಕೊಂಡು ಹಲವು ವ್ಯಕ್ತಿಗಳನ್ನು ಇದೆ ರೀತಿ ವಂಚಿಸಿದ್ದಾನೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.