Tag: ಪೊಲೀಸ್ ಕಮಿಷನರ್

  • ನಾಯಿ ವಿಚಾರಕ್ಕೆ ಠಾಣೆ ಮೆಟ್ಟಿಲೇರಿದ ಮಹಿಳೆಯರು

    ನಾಯಿ ವಿಚಾರಕ್ಕೆ ಠಾಣೆ ಮೆಟ್ಟಿಲೇರಿದ ಮಹಿಳೆಯರು

    ಬೆಂಗಳೂರು: ನಾಯಿ ವಿಚಾರಕ್ಕೆ ಮಹಿಳೆಯರಿಬ್ಬರು ಪರಸ್ಪರ ಕಿತ್ತಾಡಿಕೊಂಡು ಪೊಲೀಸ್ (Police) ಠಾಣೆಗೆ ಹೋಗಿರುವ ಘಟನೆ ಬೆಂಗಳೂರಿನ (Bengaluru) ಜೀವನ್ ಭೀಮಾ ನಗರದಲ್ಲಿ ನಡೆದಿದೆ.

    ಪಂಜಾಬ್ ಮೂಲದ ಪೂಜಾ ಕಪೂರ್ ಕಳೆದ ಒಂದೂವರೆ ವರ್ಷದಿಂದ ಪ್ರಮೀಳಾ ಎಂಬವರ ಮನೆಯಲ್ಲಿ ಭೋಗ್ಯಕ್ಕೆ (Lease) ಇದ್ದಾರೆ. ಪೂಜಾ ಒಂದು ನಾಯಿಯನ್ನು ಸಾಕಿಕೊಂಡಿದ್ದಾರೆ. ನಾಯಿ ಕೊಳಕು ಮಾಡುತ್ತದೆ ಮತ್ತು ಸರಿಯಾಗಿ ಸ್ವಚ್ಚಗೊಳಿಸುವುದಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕರಾದ ಪ್ರಮೀಳಾ ಹಾಗೂ ಪೂಜಾ ನಡುವೆ ಆಗಾಗ ಜಗಳ ನಡೆಯುತಿತ್ತು. ಇದನ್ನೂ ಓದಿ: ಶಾಲೆ ಕಾಂಪೌಂಡ್, ಮನೆಗೆ ಬಸ್ ಡಿಕ್ಕಿ – 1ಂಕ್ಕೂ ಹೆಚ್ಚು ಮಂದಿಗೆ ಗಾಯ, ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವು

    ಎರಡು ದಿನಗಳ ಹಿಂದೆ ನಾಯಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಆಗ ಇಬ್ಬರ ನಡುವೆ ಮಾತಿಗೆ ಬೆಳೆದು ಕೊನೆಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಬಳಿಕ ಪೂಜಾ ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಎಕ್ಸ್ ಖತೆಯಲ್ಲಿ ಬರೆದುಕೊಂಡಿದ್ದಾರೆ. ಪೂಜಾ ಎಕ್ಸ್ನಲ್ಲಿ ಗಲಾಟೆ ಕುರಿತು ವೀಡಿಯೋ ಹಾಕಿದ್ದು, ಅದನ್ನು ಪೊಲೀಸ್ ಕಮಿಷನರ್‌ಗೆ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ – ಪ್ರತಿ ಕಿಮೀಗೆ 24 ರಿಂದ 28 ರೂ.ವರೆಗೆ ಏರಿಕೆಗೆ ಅವಕಾಶ

    ಜೀವನ್ ಭೀಮಾನಗರದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಿಸಿಕೊಂಡು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು

  • ಕೇವಲ 5 ತಿಂಗಳಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಟ್ರಾನ್ಸ್‌ಫರ್

    ಕೇವಲ 5 ತಿಂಗಳಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಟ್ರಾನ್ಸ್‌ಫರ್

    ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಕುಲ್‍ದೀಪ್ ಜೈನ್ (Kuldeep Kumar Jain Transfer) ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

    ನೂತನ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಅನೂಪಮ್ ಅಗರ್ವಾಲ್ (Anupam Agarwal) ಅವರನ್ನು ನೇಮಿಸಲಾಗಿದೆ. ಕೇವಲ 5 ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಡ್ರಗ್ಸ್ ಫ್ರೀ ಸಿಟಿ ಎಂಬ ಟಾಸ್ಕ್ ಹೊಂದಿದ್ದರು.

    ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ಕುಲ್ ದೀಪ್ ಕುಮಾರ್ ಜೈನ್ ಅವರು ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಮಟ್ಕಾ, ಜೂಜು ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸಿದ್ದರು. ಇದೀಗ ಅವರ ವರ್ಗಾವಣೆ ಆದೇಶದಿಂದ ಡ್ರಗ್ಸ್ ಮಾಫಿಯಾ ಹಿಂದೆ ಬಿದ್ದಿದ್ದೇ ಮುಳುವಾಯಿತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಶಶಿಕಲಾ, ಇಳವರಸಿಗೆ ಜಾಮೀನು ರಹಿತ ವಾರೆಂಟ್ ಜಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಾಹನ ಅಡ್ಡಗಟ್ಟಿ ಗಲಾಟೆ ಮಾಡಿದ್ರೆ ರೌಡಿಶೀಟ್ ಓಪನ್ – ಪೊಲೀಸ್ ಕಮಿಷನರ್ ಎಚ್ಚರಿಕೆ

    ವಾಹನ ಅಡ್ಡಗಟ್ಟಿ ಗಲಾಟೆ ಮಾಡಿದ್ರೆ ರೌಡಿಶೀಟ್ ಓಪನ್ – ಪೊಲೀಸ್ ಕಮಿಷನರ್ ಎಚ್ಚರಿಕೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಾಹನ ಅಡ್ಡಗಟ್ಟಿ ಗಲಾಟೆ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಕಮಿಷನರ್ (Police Commissioner) ದಯಾನಂದ್ ಮಹತ್ವದ ಕ್ರಮ ಕೈಗೊಂಡಿದ್ದಾರೆ.

    ರಸ್ತೆಯಲ್ಲಿ ಕಾರು, ಬೈಕ್ ಅಡ್ಡಗಟ್ಟಿ ಗಲಾಟೆ ಮಾಡುತ್ತಿರುವ ಪುಂಡರ ರೌಡಿಶೀಟ್ ಓಪನ್ ಮಾಡಿ ಕಠಿಣ ಕ್ರಮ ಕೈಗೊಳ್ಳುವ ಖಡಕ್ ಎಚ್ಚರಿಕೆಯನ್ನು ಕಮಿಷನರ್ ದಯಾನಂದ್ ನೀಡಿದ್ದಾರೆ. ಇದನ್ನೂ ಓದಿ: PFIಗೆ ಫಾರಿನ್ ಫಂಡಿಂಗ್ – ಮಂಗಳೂರಿನ ಮೂರು ಕಡೆ NIA ದಾಳಿ

    ಇತ್ತೀಚೆಗಷ್ಟೇ ವೈಟ್‌ಫೀಲ್ಡ್ನ ಸಿದ್ದಾಪುರದಲ್ಲಿ ಇಬ್ಬರು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಗಲಾಟೆ ಮಾಡಿದ್ದರು. ಬೈಕ್‌ನಲ್ಲಿ ಬಂದ ಇಬ್ಬರು ಕಾರನ್ನು ಹಿಂಬಾಲಿಸಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದ ವೀಡಿಯೋ ವೈರಲ್ ಆಗಿತ್ತು.

    ಈ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಡೀಪುರ ಅರಣ್ಯ ಪ್ರದೇಶದಲ್ಕೂ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿತ್ತು. ಪದೇ ಪದೆ ಇಂತಹ ಕೃತ್ಯಗಳು ಬೆಳಕಿಗೆ ಬರುತ್ತಿರುವುದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್ ತಡೆಯಾಜ್ಞೆ – ಗಲಭೆಗೆ ಯತ್ನಿಸಿದ 30 ಜನರ ವಿರುದ್ಧ ಎಫ್‍ಐಆರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ವರ್ಷಕ್ಕೆ ಬೆಂಗ್ಳೂರಲ್ಲಿ ಪೊಲೀಸ್ ರೂಲ್ಸ್ ಜಾರಿ- ಕಿರಿಕ್, ಕಿತಾಪತಿ ಮಾಡಿದ್ರೆ ಕಟ್ಟುನಿಟ್ಟಿನ ಕ್ರಮ

    ಹೊಸ ವರ್ಷಕ್ಕೆ ಬೆಂಗ್ಳೂರಲ್ಲಿ ಪೊಲೀಸ್ ರೂಲ್ಸ್ ಜಾರಿ- ಕಿರಿಕ್, ಕಿತಾಪತಿ ಮಾಡಿದ್ರೆ ಕಟ್ಟುನಿಟ್ಟಿನ ಕ್ರಮ

    ಬೆಂಗಳೂರು: ಇನ್ನೇನು ಎರಡು ದಿನದಲ್ಲಿ ನಾವು ಮತ್ತೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಬಾರಿಯ ನ್ಯೂ ಇಯರ್ (New Year Celebration) ಆಚರಣೆಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವೊಂದು ಪೊಲೀಸ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ರೂಲ್ಸ್ ಗಳನ್ನು ಅನುಸರಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಹೊಸ ವರ್ಷ ಆಚರಣೆ ಹಿನ್ನೆಲೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Pratap Reddy), ಈಗ ವೀಡಿಯೋ ಕಾನ್ಫರೆನ್ಸ್ ಮೂಲಕ ಬಂದೋಬಸ್ತ್ ಗೆ ಸೂಚನೆ ನೀಡಲಾಗಿದೆ. 8 ಸಾವಿರದ 500 ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಟ್ರಾಫಿಕ್ ನ ಎಲ್ಲಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಹಿಳೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ ಎಂದರು.

     

     

    ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಮಧ್ಯರಾತ್ರಿ 1 ಗಂಟೆಯ ತನಕ ಮಾತ್ರ ಅವಕಾಶ ನೀಡಲಾಗುತ್ತಿದೆ. ಶಬ್ದಮಾಲಿನ್ಯ ನಿಯಂತ್ರಣಕ್ಕೆ ಎಸಿಪಿ ಮಟ್ಟದಲ್ಲಿ ಟೀಂ ಮಾಡಲಾಗಿದೆ. ಜನಸಂದಣಿಯ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. 4,000 ಕ್ಯಾಮರಾ ಸಿಸಿ ಟಿವಿ ಕ್ಯಾಮೆರಾ (CCTV Camera) ಗಳನ್ನು ಹಾಕಲಾಗುತ್ತೆ. ಬೆಂಗಳೂರು ಎಲ್ಲಾ ಕಡೆಯೂ ಹೈಕ್ವಾಲಿಟಿ ಕ್ಯಾಮೆರಾಗಳು ಇವೆ. ಮಹಿಳೆಯರಿಗೆ ಐ ಲ್ಯಾಂಡ್ಸ್ ಗಳು ಇರುತ್ತೆ, ಟವರ್ ವಾಚ್ ಗಳು ಇರುತ್ತೆ ಎಂದು ವಿವರಿಸಿದರು.

    ವೈದ್ಯ ಇಲಾಖೆಯ ಜೊತೆ ಮಾತನಾಡಲಾಗಿದೆ. ಕೆಲವೊಂದು ಬೆಡ್ ಗಳನ್ನು ಮೀಸಲು ಮಾಡಲಾಗಿದೆ. ಅಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಡ್ರಗ್ಸ್ ಬಗ್ಗೆಯೂ ಎಚ್ಚರಿಕೆಯನ್ನು ವಹಿಸಲಾಗಿದೆ. ಪರವಾನಿಗೆ ಇರುವ ಪಿಸ್ತೂಲ್, ರಿವಾಲ್ವರ್ ಗಳನ್ನು ಸಂಭ್ರಮಾಚರಣೆ ಸ್ಥಳಕ್ಕೆ ತರುವಂತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    ಜನರಲ್ಲಿ ನಮ್ಮದೊಂದು ಮನವಿ ಮಾಡುತ್ತೇವೆ. ರಸ್ತೆಯ ಬದಿಯಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡರೆ ತಕ್ಷಣ ಪೊಲೀಸರಿಗೆ ತಿಳಿಸಿ. ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗುತ್ತಾರೆ. ಅನುಮಾನಸ್ಪದ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಇದೇ ವೇಳೆ ಅವರು ವಿನಂತಿಸಿಕೊಂಡರು.

    ಸಾರ್ವಜನಿಕರು ಹೆಚ್ಚಾಗಿ ಪಬ್ಲಿಕ್ ವೆಹಿಕಲ್ ಬಳಸಿ. ಬಿಎಂಟಿಸಿ, ಮೆಟ್ರೋ ಎರಡು ಕೂಡ ಕಾರ್ಯ ನಿರ್ವಹಿಸುತ್ತವೆ. ರಾತ್ರಿ 9 ಗಂಟೆಯ ಬಳಿಕ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಪ್ಲೈಓವರ್ ಹೊರತು ಪಡಿಸಿ ಎಲ್ಲಾ ಪ್ಲೈ ಓವರ್ ಬಂದ್ ಮಾಡಲಾಗುವುದು. ಎಲಿವೇಟೆಡ್ ರಸ್ತೆಯಲ್ಲಿ 9 ಗಂಟೆಯ ನಂತರ ಸಂಚಾರಕ್ಕೆ ಅವಕಾಶ ಇಲ್ಲ. ರಾತ್ರಿ 9 ಗಂಟೆಯ ನಂತರ ನೈಸ್ ರೋಡ್ ದ್ವಿಚಕ್ರ ವಾಹನ ಇಲ್ಲ. ಡ್ರ್ಯಾಗ್ ರೈಸಿಂಗ್ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡಲಾಗುತ್ತೆ ಎಂದು ತಿಳಿಸಿದರು.

    ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸಂದೀಪ್ ಪಾಟೀಲ್, ಸಂಚಾರಿ ಮುಖ್ಯಸ್ಥ ಸಲೀಂ, ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಇಲಾಖೆಗೆ ಸೇರಲು ಮಂಗಳೂರಿಗರ ಹಿಂದೇಟು – ಹೊಸ ಆಫರ್ ನೀಡಿದ್ರು ಎನ್. ಶಶಿಕುಮಾರ್

    ಪೊಲೀಸ್ ಇಲಾಖೆಗೆ ಸೇರಲು ಮಂಗಳೂರಿಗರ ಹಿಂದೇಟು – ಹೊಸ ಆಫರ್ ನೀಡಿದ್ರು ಎನ್. ಶಶಿಕುಮಾರ್

    ಮಂಗಳೂರು: ದೈಹಿಕವಾಗಿ ಮತ್ತು ಬುದ್ಧಿವಂತಿಕೆಯಲ್ಲಿ ಇತರ ಜಿಲ್ಲೆಯ ಜನರಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯವರು ಒಂದು ಹೆಜ್ಜೆ ಮುಂದೆ ಎಂಬ ಅಭಿಪ್ರಾಯವಿದೆ. ಆದರೆ ಇಲ್ಲಿನ ಜನ ಪೊಲೀಸ್ ಸೇವೆಗೆ ಬರುವುದು ಮಾತ್ರ ಅತ್ಯಂತ ಕಡಿಮೆ. ಹೀಗಾಗಿ ಜಿಲ್ಲೆಯ ಜನರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಪರ್ ಆಫರ್ ನೀಡಿದ್ದಾರೆ. ಈ ಆಫರ್ ಗೆ ಇದಿಗ ಉತ್ತಮ ಬೆಂಬಲ ಸಿಕ್ಕಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಪೊಲೀಸ್ ಇಲಾಖೆಗೆ ಸೇರ ಬಯಸುತ್ತಿದ್ದರು. ಆದರೆ ಈಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸೇರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಹಾಗೂ ಕಾನ್‍ಸ್ಟೇಬಲ್ ಆಗಲು ಬಯಸುವ ಜಿಲ್ಲೆಯ ಯುವಜನತೆಗೆ ಎನ್.ಶಶಿಕುಮಾರ್ ಉತ್ತಮ ಅವಕಾಶವೊಂದನ್ನು ನೀಡಿದ್ದಾರೆ. ಈಗಾಗಲೇ ಪಿ.ಸಿ ಮತ್ತು ಪಿ.ಎಸ್.ಐ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಒಂದು ತಿಂಗಳ ಕಾರ್ಯಾಗಾರ ನಡೆಸಲು ನಿರ್ಧರಿಸಿ ಅರ್ಜಿ ಆಹ್ವಾನಿಸಿದ್ದರು. ಕಮಿಷನರ್ ಕರೆಗೆ 710ಕ್ಕೂ ಅಧಿಕ ಮಂದಿ ರೆಸ್ಪಾನ್ಸ್ ಮಾಡಿದ್ದು, ಇದೀಗ ಅದರಲ್ಲಿ ಫಿಲ್ಟರ್ ಮಾಡಿ 200 ಅಭ್ಯರ್ಥಿಗಳನ್ನು ಸೆಲೆಕ್ಟ್ ಮಾಡಿ ತರಬೇತಿ ನೀಡಲಾಗುತ್ತಿದೆ.

    ಪ್ರಾರಂಭದಲ್ಲಿ 100 ಮಂದಿಗೆ ಈ ತರಬೇತಿ ಕಾರ್ಯಗಾರ ಮಾಡುವ ನಿರ್ಧಾರ ಮಾಡಲಾಗಿತ್ತು. ಆದರೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದರಿಂದ ಸ್ಕ್ರೀನಿಂಗ್ ಟೆಸ್ಟ್ ಮಾಡಿ 200 ಮಂದಿಯನ್ನು ಸೆಲೆಕ್ಟ್ ಮಾಡಲಾಗಿದೆ. ಇವರಿಗೆ ನಗರದ ಸೈಂಟ್ ಅಲೋಸಿಯಸ್ ವಿದ್ಯಾಸಂಸ್ಥೆಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಇದರಲ್ಲಿ 100 ಅಭ್ಯರ್ಥಿಗಳಿಗೆ ಹಾಸ್ಟೆಲ್‍ಗಳಲ್ಲೇ ಇದ್ದು ತರಬೇತಿ ಪಡೆಯುವ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಊಟದ ಸೌಲಭ್ಯದೊಂದಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಲಿಖಿತ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಯುವ ಪೊಲೀಸರಿಂದಲೇ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ಕಳೆದ 11 ವರ್ಷಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನೇಮಕಾತಿಯಾದವರು 68 ಮಂದಿ ಮಾತ್ರ. ಹೀಗಾಗಿ ಆಯಾ ಜಿಲ್ಲೆಯವರನ್ನೇ ಪೊಲೀಸ್ ಸೇವೆಗೆ ನೇಮಕಾತಿ ಮಾಡಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

  • ನಾನು ಸಿಎಂ ಆಪ್ತ, ಫೈನ್ ಕಟ್ಟಲ್ಲ- ಕಮಿಷನರ್ ಮುಂದೆ ಯುವಕ ಹೈಡ್ರಾಮಾ

    ನಾನು ಸಿಎಂ ಆಪ್ತ, ಫೈನ್ ಕಟ್ಟಲ್ಲ- ಕಮಿಷನರ್ ಮುಂದೆ ಯುವಕ ಹೈಡ್ರಾಮಾ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಚೈನ್ ಲಿಂಕ್ ಕತ್ತರಿಸಲು ಲಾಕ್ ಡೌನ್ ಘೋಷಿಸಿದ್ದು, ಆದರೂ ಜನ ಅಡ್ಡಾಡುತ್ತಿದ್ದಾರೆ. ಅಂತೆಯೇ ಯುವಕನೊಬ್ಬನನ್ನು ತಡೆದಾಗ ಆತ ಪೊಲೀಸ್ ಕಮಿಷನರ್ ಗೆ ಅವಾಜ್ ಹಾಕಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ಹೆಬ್ಬಾಳದ ಸಿಬಿಐ ಬಳಿ ನಡೆದಿದ್ದು, ಇಲ್ಲಿ ಪೊಲಿಸರು ಯುವಕನನ್ನು ತಡೆದಿದ್ದಾರೆ. ಈ ವೇಳೆ ಆತ, ಇದು ಪೊಲೀಸರ ಕ್ರಮ ಸರಿ ಅಲ್ಲ, ನಾನು ಸಿಎಂ ಆಪ್ತ. ನಾನು ಫೈನ್ ಕಟ್ಟಲ್ಲ. ನಾನು ಮನೆಗೆ ಹೋಗ್ಬೇಕು ಬಿಡಿ. ನಾನು ಮನಸ್ಸು ಮಾಡಿದ್ರೆ ಏನಾಗುತ್ತೆ ಗೊತ್ತಾ ..? ಎಂದು ಪೊಲೀಸ್ ಕಮೀಷನರ್ ಕಮಲ್ ಪಂಥ್ ಮುಂದೆ ಹೈಡ್ರಾಮ ಮಾಡಿದ್ದಾನೆ.

    ಯುವಕನ ಮಾತಿನಿಂದ ಸಿಟ್ಟಿಗೆದ್ದ ಕಮಿಷನರ್ ಮುಲಾಜಿಲ್ಲದೇ ಆತನ ವಾಹನ ಸೀಜ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ಒಟ್ಟಿನಲ್ಲಿ ಕೊರೊನಾ ಚೈನ್ ಲಿಂಕ್ ಕತ್ತರಿಸಲು ಲಾಕ್ ಡೌನ್ ಹೇರಿದ್ರೆ ಜನ ಸುಳ್ಳು ಕಥೆಗಳನ್ನು ಹೇಳಿ ರಸ್ತೆಗೆ ಇಳಿಯುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲಿಸರು ಹರಸಾಹಸ ಪಡುವಂತಾಗಿದೆ.

  • ಪೊಲೀಸ್ ಕಮಿಷನರ್ ಮುಂದೆಯೇ ಯುವತಿಯಿಂದ ಕಾಮುಕನಿಗೆ ಪಂಚ್!

    ಪೊಲೀಸ್ ಕಮಿಷನರ್ ಮುಂದೆಯೇ ಯುವತಿಯಿಂದ ಕಾಮುಕನಿಗೆ ಪಂಚ್!

    – ದಿಟ್ಟತನ ತೋರಿದ ಯುವತಿಗೆ ಶಶಿಕುಮಾರ್ ಸನ್ಮಾನ
    – ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಹುಸೈನ್

    ಮಂಗಳೂರು: ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವತಿ ಕಾಮುಕನಿಗೆ ಪೊಲೀಸ್ ಕಮಿಷನರ್ ಮುಂದೆಯೇ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಜನವರಿ 14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಬಸ್ಸಿನಲ್ಲಿ ಯುವತಿಗೆ ಕಾಮುಕ ದೈಹಿಕ ಕಿರುಕುಳ ನೀಡಿದ್ದ. ಈ ಸಂಬಂಧ ಆರೋಪಿ ಕಾಸರಗೋಡು ನಿವಾಸಿ ಹುಸೇನ್ (41)ನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಇಂದು ಮಂಗಳೂರು ಕಮೀಷನರ್ ಎನ್ ಶಶಿಕುಮಾರ್ ಅವರು ಆರೋಪಿ ಹಾಗೂ ಸಂತ್ರಸ್ತೆಯ ಜೊತೆ ಸುದ್ದಿಗೋಷ್ಠಿ ನಡೆಸಿದ್ದರು. ಪ್ರೆಸ್ ಮೀಟ್ ಬಳಿಕ ಯುವತಿ, ಕಮಿಷನರ್ ಮುಂದೆಯೇ ಕಾಮುಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

    ಕಾಮುಕನ ನೀಚ ಕೃತ್ಯವನ್ನು ಯುವತಿ ಇನ್ ಸ್ಟಾ ಮೂಲಕ ಬಯಲು ಮಾಡಿದ್ದಳು. ಈ ಹಿನ್ನೆಲೆಯಲ್ಲಿ ದಿಟ್ಟತನ ಮೆರೆದ ಯುವತಿಯನ್ನು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಶಶಿಕುಮಾರ್ ಸನ್ಮಾನಿಸಿದರು.

    ಏನಿದು ಪ್ರಕರಣ..?:
    ಜನವರಿ 14 ರಂದು ಯುವತಿ ದೇರಳಕಟ್ಟೆಯಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಯುವತಿ ಕುಳಿತಿದ್ದ ಸೀಟ್ ನಲ್ಲಿ ಕಾಮುಕ ಬಂದು ಕುಳಿತಿದ್ದಾನೆ. ಬಳಿಕ ಆತ ಯುವತಿಗೆ ದೈಹಿಕ ಕಿರುಕುಳ ನೀಡಿದ್ದಾನೆ. ತನಗಾಗುತ್ತಿರುವ ಕಿರುಕುಳದಿಂದ ಬೇಸತ್ತ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಕಾಮುಕ ಬಸ್ಸಿನಿಂದ ಇಳಿದು ಹೋಗಿದ್ದಾನೆ. ಅಲ್ಲದೆ ಮತ್ತೊಂದು ಬಸ್ಸಿನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪಕ್ಕದಲ್ಲಿ ಕುಳಿತು ಮತ್ತೆ ಕಿರುಕುಳ ನೀಡಿದ್ದಾನೆ.

    ಈ ವೇಳೆ ಯುವತಿ, ಕಾಮುಕನ ಫೋಟೋ ತೆಗೆದು ವೈರಲ್ ಮಾಡೋದಾಗಿ ಎಚ್ಚರಿಸಿದ್ದಳು. ಯುವತಿ ಫೋಟೋ ತೆಗೆಯುತ್ತಿದ್ದಂತೆಯೇ ಕಾಮುಕ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದ. ಈ ಮೂಲಕ ಮತ್ತೆ ಅನುಚಿತ ವರ್ತನೆ ತೋರಿದ್ದ. ಜನರ ಎದುರೇ ಕಾಮುಕ ಹುಸೈನ್ ಕಿರುಕುಳ ನೀಡಿದರೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಮಾತ್ರ ಸುಮ್ಮನಿದ್ದರು. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಡ್ರೈವರ್ ಮತ್ತು ನಿರ್ವಾಹಕನಿಗೆ ಪೊಲೀಸರು ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸಿದರು.

    ಇತ್ತ ಕಾಮುಕನಿಗೆ ಬುದ್ಧಿ ಕಲಿಸುವ ಸಲುವಾಗಿ ಯುವತಿ, ಕಾಮುಕನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ವಿವರ ಸಹಿತ ಹಾಕಿದ್ದಳು. ಯುವತಿಯ ಪೋಸ್ಟ್ ಆಧಾರದಲ್ಲಿ ಪೊಲೀಸರು ನಿನ್ನೆ ಕಾಮುಕ ಹುಸೈನನ್ನು ಬಂಧಿಸಿದ್ದಾರೆ. ಅಲ್ಲದೆ ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದರು.

  • ಕಾನೂನು ಪಾಲಕರ ರಕ್ಷಣೆ, ಸಮಾಜ ವಿರೋಧಿಗಳಿಗೆ ಎಚ್ಚರಿಕೆ: ಎನ್. ಶಶಿಕುಮಾರ್

    ಕಾನೂನು ಪಾಲಕರ ರಕ್ಷಣೆ, ಸಮಾಜ ವಿರೋಧಿಗಳಿಗೆ ಎಚ್ಚರಿಕೆ: ಎನ್. ಶಶಿಕುಮಾರ್

    ಮಂಗಳೂರು: ಸರ್ಕಾರ ಹಾಗೂ ಇಲಾಖೆಯ ಆಶಯದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶದಿಂದ ಕಾನೂನು ಪಾಲಕರಿಗೆ ರಕ್ಷಣೆ ನೀಡುವ ಜೊತೆಗೆ ಸಮಾಜ ವಿರೋಧಿಗಳು, ಕಾನೂನು ಮೀರಿ ವರ್ತಿಸುವವರಿಗೆ ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

    ನಗರದ ಪ್ರೆಸ್‍ಕ್ಲಬ್‍ನಲ್ಲಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಮೀಡಿಯಾ ಹೆಲ್ತ್ ಕ್ಲಿನಿಕ್‍ಗೆ ಮರು ಚಾಲನೆ ನೀಡಿ ಬಳಿಕ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಅಧಿಕಾರ ಸ್ವೀಕರಿಸಿದ ಎರಡು ದಿನಗಳಿಂದಲೇ ನಗರದ ಬೀಚ್, ಮೈದಾನಗಳಲ್ಲಿ ರಾತ್ರಿ ಹೊತ್ತು ಮದ್ಯಪಾನ, ಲೌಡ್ ಸ್ಪೀಕರ್ ಹಾಡು, ಗಾಂಜಾ ಸೇವನೆ ಕುರಿತಂತೆ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗಿದೆ. ಇದಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿರುವ ಜೊತೆಗೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ.

    ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಿಂದಿನ ಪ್ರಕರಣಗಳ ಆರೋಪಿಗಳ ಪರೇಡ್ ನಡೆಸಿದ ಸಂದರ್ಭವೂ ಕೆಲವೊಂದು ಆಕ್ಷೇಪಣೆ ವ್ಯಕ್ತವಾಗಿದೆ. ಕಾರ್ಯಾಚರಣೆಯ ಮೇಲೆ ಯಾರಿಗೂ ಅವಮಾನ ಮಾಡುವ ಕೆಲಸವಾಗಲಿ, ಹೊಡೆಯುವ ಕೆಲಸವಾಗಿ ಇಲಾಖೆಯಿಂದ ಆಗಿಲ್ಲ. ಮಾತ್ರವಲ್ಲದೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಈ ಕಾರ್ಯಾಚರಣೆಗಳು ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಲಿದೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದೆ ಎಂದು ಅವರು ಹೇಳಿದರು.

    ಬೀಚ್ ಟೂರಿಸಂ ಮಂಗಳೂರಿನ ಪ್ರಮುಖ ಆಕರ್ಷಣೆ. ಆದರೆ ರಾತ್ರಿ ಹೊತ್ತಿನಲ್ಲಿ ಬೀಚ್‍ನಿಂದ ಸುಮಾರು ಒಂದರಿಂದ ಒಂದೂವರೆ ಕಿ.ಮೀ. ದೂರದ ಕತ್ತಲು ಪ್ರದೇಶದಲ್ಲಿ ಮದ್ಯಪಾನ ಮಾಡುವುದು ಅಥವಾ ಹೆಣ್ಣು ಮಕ್ಕಳೊಂದಿಗೆ ಇರುವುದು ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿ. ರೈಲು ನಿಲ್ದಾಣಗಳಲ್ಲಿ ನಿರಾಶ್ರಿತರು ಇರುವುದು ಸಹಜ. ಆದರೆ ರೈಲು ಹಳಿಗಳಲ್ಲಿ ರಾತ್ರಿ ಹೊತ್ತು ತಿರುಗಾಡುವುದು, ಮಾದಕ ದ್ರವ್ಯಗಳನ್ನು ಬಳಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

    ನಗರದಲ್ಲಿ ಮಾದಕ ದ್ರವ್ಯಗಳ ಸಮಸ್ಯೆ ಹೆಚ್ಚಿದೆ. ಇದರಿಂದ ಯುವ ಸಮೂಹ ದಿಕ್ಕುತಪ್ಪುವ ಸಾಧ್ಯತೆ ಇರುವುದರಿಂದ ಅದನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಮಾಡಲಾಗುವುದು. ಮಂಗಳೂರಿನಲ್ಲಿ ಪ್ರತಿನಿತ್ಯ ಅಲ್ಲಲ್ಲಿ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನ ರಾತ್ರಿ ಹೊತ್ತಿನಲ್ಲೂ ತಿರುಗಾಡುತ್ತಿರುತ್ತಾರೆ. ಅವರ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

  • ಹಾಡಿ ಜನರನ್ನು ಮನರಂಜಿಸಿದ ಮಂಗಳೂರು ಕಮಿಷನರ್

    ಹಾಡಿ ಜನರನ್ನು ಮನರಂಜಿಸಿದ ಮಂಗಳೂರು ಕಮಿಷನರ್

    ಮಂಗಳೂರು: ಹಾಡಿಗೂ ಸೈ ಎನ್ನುವ ಮೂಲಕ ನಗರ ಪೊಲೀಸ್ ಕಮಿಷನರ್ ಇದೀಗ ಸುದ್ದಿಯಾಗಿದ್ದಾರೆ.

    ಹೌದು. ಕಮಿಷನರ್ ಶಶಿಕುಮಾರ್ ಅವರು ಮಂಗಳೂರಿನ ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿಗೀತೆ ಹಾಡಿದ್ದಾರೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಭಾಗಿಯಾಗಿರುವ ಪೊಲೀಸ್ ಕಮಿಷನರ್ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಭಕ್ತಿಗೀತೆ ಹಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಖಡಕ್ ಆಫೀಸರ್ ಆಗಿ ಛಾಪು ಮೂಡಿಸಿರುವ ಶಶಿಕುಮಾರ್, ಸದಭಿರುಚಿಯ ಆಸಕ್ತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಗರದಲ್ಲಿ ಎರಡು ದಿನಗಳ ಕಾಲ ಬೀಚ್, ಮೈದಾನ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವವರು, ಅನಾಮಿಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಕಮಿಷನರ್ ಕಾರ್ಯಾಚರಣೆಗೆ ಸಾರ್ವಜನಿಕರ ಶ್ಲಾಘನೆ ಕೂಡ ವ್ಯಕ್ತವಾಗಿತ್ತು.

  • ಹೋಮ್ ಮಿನಿಸ್ಟರ್ ತವರಲ್ಲೇ ಐಪಿಎಸ್ ಅಧಿಕಾರಿಗಳ ವಾರ್

    ಹೋಮ್ ಮಿನಿಸ್ಟರ್ ತವರಲ್ಲೇ ಐಪಿಎಸ್ ಅಧಿಕಾರಿಗಳ ವಾರ್

    ಧಾರವಾಡ/ಹುಬ್ಬಳ್ಳಿ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತವರೂರಿನಲ್ಲೇ ಐಪಿಎಸ್ ಅಧಿಕಾರಗಳ ವಾರ್ ತಾರಕಕ್ಕೇರಿದೆ. ಹುಬ್ಬಳ್ಳಿ-ಧಾರವಾಡ ಕಮೀಷನರ್ ಆರ್ ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ್ ಮಧ್ಯೆ ಜಗಳ ಶುರುವಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟ ಇದೀಗ ಪೊಲೀಸ್ ಮಹಾನಿರ್ದೇಶಕರವರೆಗೂ ತಲುಪಿದೆ.

    ಹುಬ್ಬಳ್ಳಿ ಧಾರವಾಡ ಪೊಲೀಸ ಕಮೀಷನರ್ ಆರ್.ದಿಲೀಪ್ ಇಲಾಖೆಯ ವಿಚಾರಗಳು, ಅಕ್ರಮ ಚಟುವಟಿಕೆ, ಕೋವಿಡ್ 19 ವಿಚಾರದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವ ವಿಚಾರ ಹಾಗೂ ಸಾಮಾಜಿಕ ಅಂತರ ಕಾಪಾಡುವ ವಿಚಾರದ ಬಗ್ಗೆ ಚರ್ಚೆ ಮಾಡಲು ಅನುಮತಿ ನೀಡುತ್ತಿಲ್ಲವೆಂದು ಡಿಸಿಪಿ ಕೃಷ್ಣಕಾಂತ್ ಆರೋಪಿಸಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

    ಡಿಸಿಪಿ ಆಗಿರುವ ತಾವೂ ಆಯುಕ್ತರನ್ನ ಭೇಟಿ ಮಾಡಲು ಇಂಟರಕಾಮ್ ಫೋನ್ ಮೂಲಕ ಸಂಪರ್ಕ ಮಾಡಿದರೂ ಭೇಟಿಗೆ ಅವಕಾಶ ನೀಡುತ್ತಿಲ್ಲ. 2,230 ಗಂಟೆಗಳ ಕಾಲ ಆಯುಕ್ತರ ಭೇಟಿಗೆ ಕಾಯ್ದರು ಅವಕಾಶ ನೀಡದ ಪರಿಣಾಮ ತಾವೂ ಕಂಟ್ರೋಲ್ ರೂಂ ಮೂಲಕ ಪತ್ರ ಸಲ್ಲಿಸಿರುವುದಾಗಿ ಕೃಷ್ಣಕಾಂತ್ ಹೇಳಿದ್ದಾರೆ. ಅಲ್ಲದೇ ಪತ್ರದ ಪ್ರತಿಯನ್ನ ಪೊಲೀಸ ಮಹಾನಿರ್ದೇಶಕರಿಗೂ ಕಳುಹಿಸಿದ್ದಾರೆ.

    ಪೊಲೀಸ್ ಆಯುಕ್ತ ಆರ್ ದಿಲೀಪ್, ಈ ಹಿಂದೆಯೂ ಡಿಸಿಪಿ ಹಾಗೂ ಎಸಿಪಿಗಳ ಜೊತೆಗೆ ಇದೇ ರೀತಿಯಲ್ಲಿ ಜಗಳ ಮಾಡಿಕೊಂಡಿದ್ದರು. ಇದೀಗ ಡಿಸಿಪಿಯೊಂದಿಗೆ ಮತ್ತೊಮ್ಮೆ ಜಗಳ ಮಾಡಿಕೊಂಡಿರುವುದು ಜಗಜ್ಹಾಹೀರ್ ಆಗಿರುವುದು ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳಿಗೆ ಎಡೆ ಮಾಡಿಕೊಟ್ಟಿದೆ.

    ಪೊಲೀಸ್ ಕಮೀಷನರ್ ಆರ್ ದಿಲೀಪ್ ಕಚೇರಿ ಬಿಟ್ಟು  ಫೀಲ್ಡ್ ಗೆ ಬರದೇ ಕಾರ್ಯನಿರ್ವಹಿಸಿರುವ ವಿಚಾರವಾಗಿ ಈ ಹಿಂದೆ ಸ್ವತಃ ಗೃಹ ಸಚಿವರೇ ಆಯುಕ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಗೃಹ ಸಚಿವರ ಎಚ್ಚರಿಕೆಯ ನಂತರವೂ ಆಯುಕ್ತರು ಹಾಗೂ ಡಿಸಿಪಿ ಜಗಳ ತಾರಕಕ್ಕೇರಿರುವುದು ಪೊಲೀಸ್ ಇಲಾಖೆಯ ಒಳ ಹುಳಕುಗಳನ್ನ ಹೊರ ಹಾಕಿದಂತಾಗಿದೆ.

    ಪೊಲೀಸ್ ಇಲಾಖೆಯಲ್ಲಿನ ಒಂದು ಅನುದಾನದ ವಿಚಾರವಾಗಿ ಈ ಒಳಜಗಳ ಆರಂಭವಾಗಿದ್ದು. ಡಿಸಿಪಿಯೊಂದಿಗೆ ಚರ್ಚೆ ಮಾಡದೇ ಪೊಲೀಸ್ ಕಮೀಷನರ್ ಆರ್ ದಿಲೀಪ್ ಎಕಾಎಕಿ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದೇ ಐಪಿಎಸ್ ಅಧಿಕಾರಿಗಳ ಒಳಜಗಳಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಈ ಇಬ್ಬರು ಐಪಿಎಸ್ ಅಧಿಕಾರಿಗಳ ಒಳಜಗಳವನ್ನ ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರು ಹೇಗೆ ಬಗೆಹರಿಸ್ತಾರೆ ಅನ್ನೋದು ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.