ಕೊಪ್ಪಳ: ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ನಗರದ ಗಂಗಾವತಿ ತಾಲೂಕಿನ ಲಕ್ಷ್ಮೀ ಕ್ಯಾಂಪ್ ಏರಿಯಾದಲ್ಲಿ ನಡೆದಿದೆ.
ಮುಂಬೈ: ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲಿದ್ದರೆ 500 ರೂ. ದಂಡ ವಿಧಿಸುವ ಜೊತೆಗೆ 3 ತಿಂಗಳು ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಮುಂಬೈ ಪೊಲೀಸ್ ಇಲಾಖೆ ಮುಂದಾಗಿದೆ.
ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇನ್ನೂ 15 ದಿನಗಳಲ್ಲಿ ಈ ನಿಯಮ ಅನುಷ್ಠಾನಕ್ಕೆ ಬರಲಿದೆ ಎಂದು ಮುಂಬೈ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟ್ವೀಟ್ ಮೂಲಕವೂ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪ್ರೇಮಕ್ಕೆ ವಿರೋಧ – ಥಳಿಸಿ, ವಿಷಕುಡಿಸಿ ಯುವಕನನ್ನು ಕೊಂದೇ ಬಿಟ್ರು
ಸಾಂದರ್ಭಿಕ ಚಿತ್ರ
ಇಂದು ನಡೆದ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಮಾತನಾಡಿದ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ, ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸ್ಟೇರಿಂಗ್ ಕಟ್ ಆಗಿ ಕೆರೆಗೆ ಉರುಳಿದ ಗೂಡ್ಸ್ ವಾಹನ
ಈಗಾಗಲೇ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಘಿಸಿದವರ ವಿರುದ್ಧ 75 ಸಾವಿರ ಚಲನ್‌ಗಳು ಬಾಕಿ ಉಳಿದಿವೆ. ಹಾಗಾಗಿ ಹೊಸ ನಿಯಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಯಾದಗಿರಿ/ಕೊಪ್ಪಳ: ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಆಜಾನ್ ಕೂಗಲಾಗುತ್ತಿದ್ದು, ಇದಕ್ಕಾಗಿ ಬಳಸುವ ಧ್ವನಿವರ್ಧಕಗಳಿಗೆ ಶಬ್ಧ ಮಿತಿಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಯ ಪೊಲೀಸ್ ಇಲಾಖೆಯು ಮಸೀದಿ, ಚರ್ಚ್ ಹಾಗೂ ದೇವಾಲಯಗಳೂ ಸೇರಿದಂತೆ ಸುಮಾರು 713 ಧಾರ್ಮಿಕ ಕೇಂದ್ರಗಳಿಗೆ ಅಧಿಕೃತವಾಗಿ ನೋಟಿಸ್ ಜಾರಿಗೊಳಿಸಿದೆ.
ಯಾದಗಿರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಕೊಪ್ಪಳ ಜಿಲ್ಲೆಯ ಪೊಲೀಸ್ ಇಲಾಖೆಯು ಜಿಲ್ಲೆಯ ಎಲ್ಲ ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವವರಿಗೆ ನೋಟಿಸ್ ಜಾರಿಗೊಳಿಸಿದೆ. ಇದನ್ನೂ ಓದಿ: ಆಜಾನ್‌ನಿಂದ ವಿದ್ಯಾರ್ಥಿಗಳು, ವೃದ್ಧರು, ರೋಗಿಗಳಿಗೆ ತೊಂದರೆ ಆಗ್ತಿದೆ: ಈಶ್ವರಪ್ಪ
ಕೊಪ್ಪಳ ಜಿಲ್ಲೆಯ ಸುಮಾರು 450ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರ, ಯಾದಗಿರಿ ಜಿಲ್ಲೆಯಲ್ಲಿರುವ 137 ದೇವಸ್ಥಾನ, 115 ಮಸೀದಿ, 11 ಚರ್ಚ್ ಸೇರಿದಂತೆ ಒಟ್ಟು 263 ಕೇಂದ್ರಗಳಿಗೆ 1986ರ ಅಡಿಯಲ್ಲಿ ನಿಗದಿ ಪಡಿಸಿದ ಡಿಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದ ಉಪಯೋಗ ಮಾಡದಂತೆ ಆದೇಶಿಸಿ ನೋಟಿಸ್ ನೀಡಲಾಗಿದೆ. ಜೊತೆಗೆ ಪರಿಸರ ಸಂರಕ್ಷಣೆ ಕಾಯ್ದೆಯಡೀ ನಿಯಮ ಪಾಲಿಸಬೇಕು, ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.
ಡಿಸ್ಪುರ್: ಐದು ಕಮಾಂಡೋ ಬೆಟಾಲಿಯನ್‍ಗಳನ್ನು ಒಳಗೊಂಡಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 6,000 ಹುದ್ದೆಗಳನ್ನು ಒಂದು ವಾರದೊಳಗೆ ಭರ್ತಿ ಮಾಡಲು ಅಸ್ಸಾಂ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.
ಮಂಗಳವಾರ ಪೊಲೀಸ್ ಅಧಿಕಾರಿಗಳೊಂದಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಭೆ ನಡೆಸಿದ್ದು, ಈ ಪರಿಶೀಲನಾ ಸಭೆಯಲ್ಲಿ ರಾಜ್ಯದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಎಂಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ಈ ಕುರಿತು ಶರ್ಮಾ ಅವರು ಟ್ವಿಟ್ಟರ್ ನಲ್ಲಿ, ರಾಜ್ಯದಲ್ಲಿ ಪೊಲೀಸಿಂಗ್ ಅನ್ನು ಬಲಪಡಿಸಲು, ಪೊಲೀಸರಿಗೆ 1,000 ಹೊಸ ಕ್ವಾರ್ಟರ್‍ಗಳು, ಡೈರೆಕ್ಟರ್ ಜನರಲ್ ಪೊಲೀಸ್ ಮತ್ತು ಕಮಿಷನರ್ ಕಚೇರಿಗಳಿಗೆ ಮೂಲಸೌಕರ್ಯಗಳನ್ನು ನವೀಕರಣಗೊಳಿಸುವ ಜೊತೆಗೆ ವಿವಿಧ ಸುಧಾರಣಾ ಕ್ರಮಗಳನ್ನು ಪರಿಚಯಿಸಿದರು. ಇದನ್ನೂ ಓದಿ: 116 ಕೋಟಿ ಒಡೆಯ ಸೋಮಶೇಖರ್ ಕಾಂಗ್ರೆಸ್‍ನಿಂದ ಸ್ಪರ್ಧೆ
With an aim to strengthen our policing infrastructure, a key to safety and growth of our society, we have decided to take several reformative measures in a review meeting held at @assampolice headquarters.
1/4 pic.twitter.com/DY3EFmHAsa
5 ಕಮಾಂಡೋ ಬೆಟಾಲಿಯನ್ ಸೇರಿದಂತೆ 6,000 ಹುದ್ದೆಗಳನ್ನು ಮುಂದಿನ ವಾರದೊಳಗೆ ಭರ್ತಿ ಮಾಡಲಾಗುವುದು. ನಮ್ಮ ಸಮಾಜದ ಸುರಕ್ಷತೆ ಮತ್ತು ಬೆಳವಣಿಗೆಗೆ ಪ್ರಮುಖವಾಗಿ ಕಾರಣರಾದ ನಮ್ಮ ಪೊಲೀಸಿಂಗ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ, ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪರಿಶೀಲನಾ ಸಭೆಯನ್ನು ನಡೆಸಲಾಗಿದ್ದು, ನಾವು ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದರು. ಇದನ್ನೂ ಓದಿ:ಕಾವೇರಿದ ಮಂಡ್ಯ ಎಂಎಲ್‍ಸಿ ಚುನಾವಣೆ – ಯಾರಿಗೆ ಸಿಗುತ್ತೆ ಸುಮಲತಾ ಬೆಂಬಲ?
1992 ರಿಂದ ಗುವಾಹಟಿ ಪೊಲೀಸರು ವಜಾಗೊಳಿಸಿದ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಬಗೆಹರಿಸಲು ತೀರ್ಮಾನಿಸಲಾಗುವುದು. ಈ ಸಮಸ್ಯೆಗಳನ್ನು 31 ಮಾರ್ಚ್ 2022 ರೊಳಗೆ ಸಾಧ್ಯವಾದಷ್ಟು ಬಗೆಹರಿಸಲಾಗುವುದು ಎಂದರು.
✅To review & resolve all cases dismissed by @GuwahatiPol without logical conclusion since 1992
✅No. of settled cases every month should be more than the no. of freshly booked ones by Guwahati Police
✅Settlement of as many unresolved cases as possible by March 31, 2022
2/4
ಇನ್ನೂ ಮುಂದೆ ಎಫ್‍ಐಆರ್ ದಾಖಲಿಸಿದ 24 ಗಂಟೆಯೊಳಗೆ ತನಿಖೆ ಆರಂಭಿಸಲಾಗುವುದು. ಅಪಘಾತ ವರದಿ, ಪಾಸ್‍ಪೋರ್ಟ್, ಮರಣೋತ್ತರ ಪರೀಕ್ಷೆಯ ವರದಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಕುರಿತು ಜನವರಿ 8 ಮತ್ತು ಜನವರಿ 9 ರಂದು ದುಲಿಯಾಜಾನ್‍ನಲ್ಲಿ ಎರಡನೇ ಎಸ್‍ಪಿ ಸಮ್ಮೇಳನ ನಡೆಯಲಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು, ಹೋಂ ಗಾರ್ಡ್ ಬೈಕ್‍ಗೆ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಲ್ಲು ಕೋಟೆ ಬಳಿ ತಡರಾತ್ರಿ ನಡೆದಿದೆ.
ತಡರಾತ್ರಿ ತುರುವನಹಳ್ಳಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಹೋಂಗಾರ್ಡ್ ರಮೇಶ್‍ಗೆ ಗಾಂಜಾ ಸಾಗಾಟ ಮಾಡ್ತಿದ್ದ ಮೂವರು ಯುವಕರಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲೇ ಗಾಂಜಾ ಕಿಕ್‍ನಲ್ಲಿದ್ದ ಮೂವರು ಯುವಕರಲ್ಲಿ ಓರ್ವ ಬೈಕ್ ನಲ್ಲಿ ಕುಳಿತಿದ್ರೆ, ಮತ್ತೋರ್ವ ಚಾಕು ತೋರಿಸಿ ಬೆದರಿಸಿದ್ದಾನೆ. ಮತ್ತೊರ್ವ ಕಬ್ಬಿಣದ ರಾಡಿನಿಂದ ಹೋಂ ಗಾರ್ಡ್ ರಮೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಬೂದನಗುಡ್ಡ ಬಳಿ ಮತ್ತೆ ಚಿರತೆ ಪ್ರತ್ಯಕ್ಷ
ರಮೇಶ್ ಹಾಗೂ ಆತನ ಸ್ನೇಹಿತ ಶೇಖರ್ ಅಲ್ಲಿಂದ ಭಯದಿಂದ ಒಡಿ ಹೋಗಿ ದೂರ ನಿಂತಿದ್ದಾರೆ. ಈ ವೇಳೆ ಬೈಕ್‍ನ ಪೆಟ್ರೋಲ್ ಪೈಪ್ ಕಟ್ ಮಾಡಿದ ಕಿಡಿಗೇಡಿಗಳು, ಬೈಕ್‍ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿ ನಂದಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ತದನಂತರ ಮತ್ತೆ ವಾಪಸ್ ಬಂದ ಕಿಡಿಗೇಡಿಗಳು ಬೈಕ್ ಸುಟ್ಟು ಹೋಗಿದೆಯಾ ಇಲ್ಲವೇ ಅಂತ ನೋಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ
ಅಷ್ಟರಲ್ಲಿ ಗ್ರಾಮಸ್ಥರಿಗೆ ಕರೆ ಮಾಡಿ ಮತ್ತೊಂದು ಬೈಕ್ ತರಿಸಿಕೊಂಡಿದ್ದ ರಮೇಶ್, ಬೈಕ್ ಮೂಲಕ ಕಿಡಿಗೇಡಿಗಳನ್ನು ಚೇಸ್ ಮಾಡಿ ಅಡ್ಡ ಹಾಕಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಗಳು ಸಿಕ್ಕಿ ಹಾಕಿಕೊಳ್ಳದೆ ಪರಾರಿಯಾಗಿದ್ದಾರೆ.
ಕಿಡಿಗೇಡಿಗಳದ್ದು ಹೊಂಡಾ ಶೈನ್ ಬೈಕ್ ಅಂತ ತಿಳಿದುಬಂದಿದ್ದು, ಹೆಸರಘಟ್ಟ ಮೂಲದವರು ಎನ್ನಲಾಗಿದೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಮೇಶ್ ದೂರು ದಾಖಲಿಸಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹಾಸನ: ಜಿಲ್ಲೆಯ ವಿವಿಧೆಡೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂಲಕ ಸುಮಾರು 47 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವಿಧ ಪೊಲೀಸ್ ಠಾಣೆಗಳ ಒಟ್ಟು ಆರು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಹಳೇಬೀಡು ಪೊಲೀಸ್ ಠಾಣೆಯ 2, ಹೊಳೆನರಸೀಪುರ ಪೊಲೀಸ್ ಠಾಣೆಯ 1, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ 1, ಕೊಣನೂರು ಪೊಲೀಸ್ ಠಾಣೆಯ 1, ಆಲೂರು ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರದಲ್ಲಿ ಬಿಜೆಪಿಗೆ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡ್ತೇವೆ – ಕಾಂಗ್ರೆಸ್
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆಯದಂತೆ ಪೊಲೀಸರು ಹೆಚ್ಚಿನ ನಿಗವಹಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ನಡೆದ ಅಪರಾಧ ಪ್ರಕರಣ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಅಭಿನಂದಿಸಿದ್ದಾರೆ.
ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ಬೆಂಬಲಿಸಲು ಬಂದಿದ್ದ 100ಕ್ಕೂ ಹೆಚ್ಚು ರೈತರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ.
ಮೌರ್ಯ ಸರ್ಕಲ್‍ನಲ್ಲಿ ಒಂದುಗೂಡಿ ವಿನೂತನ ರೀತಿಯ ಮೆರವಣಿಗೆ ನಡೆಸಲು ರೈತರು ಯತ್ನಿಸಿದ್ದಾರೆ. ಈ ವೇಳೆ ರೈತ ಮುಖಂಡರನ್ನು ಬಂಧಿಸಲು ಯತ್ನಿಸಿದಾಗ ಪೊಲೀಸರು ಹಾಗೂ ರೈತರ ನಡುವೆ ಭಾರಿ ವಾಗ್ವಾದ ನಡೆಯಿತು. ಏಕೆ ಬಂಧನ ಮಾಡುತ್ತೀರಿ, ನಾವು ಮೆರವಣಿಗೆಯನ್ನೇ ಆರಂಭಿಸಿಲ್ಲ, ನಮ್ಮ ರೈತರು ಬರುತ್ತಿದ್ದಾರೆ. ಅಲ್ಲಿ ತನಕ ಊರಿನಿಂದ ತಂದಿರುವ ತಿಂಡಿಯನ್ನು ತಿಂದು ಮುಂದೆ ಸಾಗುತ್ತೇವೆ ಎಂದು ರೈತರು ಪೊಲೀಸರ ಬಳಿ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ
ಇದಕ್ಕೆ ಅವಕಾಶ ನೀಡದ ಪೊಲೀಸರು, ಯಾವುದೇ ಪ್ರತಿ ಉತ್ತರ ನೀಡದೆ ರೈತರನ್ನು ಬಂಧಿಸಿದರು. ಪೊಲೀಸರ ಈ ನಡೆಯನ್ನು ಖಂಡಿಸಿದ ಕುರುಬೂರು ಶಾಂತಕುಮಾರ್, ಕಾನೂನುಬಾಹಿರ ಕ್ರಮಗಳನ್ನ ಕೈಗೊಳ್ಳುತ್ತಿರುವುದು ಪೊಲೀಸರ ಸರ್ವಾಧಿಕಾರಿ ಧೋರಣೆಯಾಗಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ. ಕೇಂದ್ರದ ಕೆಲವು ಮಂತ್ರಿಗಳು ರೈತ ಚಳುವಳಿಯ ಬಗ್ಗೆ ಹಗುರವಾಗಿ ಕೋಲೆ ಬಸವನ ರೀತಿ ಮಾತನಾಡುತ್ತಿದ್ದಾರೆ. ಇವರಿಗೆ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ಅರಿವೇ ಇಲ್ಲ ಬೇಕಿದ್ದರೆ ರೈತ ಮುಖಂಡರ ಸಭೆ ಕರೆದು ಚರ್ಚಿಸಲಿ ಎಂದು ಬಹಿರಂಗ ಸವಾಲು ಹಾಕಿದರು. ಇದನ್ನೂ ಓದಿ: ತಪ್ಪು ಕಲ್ಪನೆಗಳಿಂದ ಭಾರತ್ ಬಂದ್ ಕರೆ ನೀಡಲಾಗಿದೆ: ಲಕ್ಷ್ಮಣ್ ಸವದಿ
ರೈತರು ಉತ್ಪನ್ನಗಳನ್ನ ಎಲ್ಲಿ ಬೇಕಾದರೂ ಯಾರಿಗಾದರೂ ಮಾರಾಟ ಮಾಡಬಹುದು ಎನ್ನುತ್ತಾರೆ. ನಾವು ವಿಧಾನಸೌಧಕ್ಕೆ ಹಣ್ಣು ತರಕಾರಿಗಳನ್ನ ಮಾರಲು ಹೋಗುತ್ತಿದ್ದರೆ ಪೊಲೀಸರೇ ತಡೆಯುತ್ತಿದ್ದಾರೆ. ಇಂತಹ ನಡೆ ರೈತರ ಕಣ್ಣಿಗೆ ಮಣ್ಣೆರಚುವ ಕೇಂದ್ರ ಸರ್ಕಾರದ ಕುತಂತ್ರವಲ್ಲವೇ ಎಂದು ಕಿಡಿಕಾರಿದರು. ವಿಧಾನಸೌಧ ಬಳಿ ಎತ್ತಿನಗಾಡಿ ಕುದುರೆಗಾಡಿ ಪ್ರತಿಭಟನೆ ನಡೆಸುವಾಗ ಯಾವುದನ್ನೂ ಕೇಳದ ಪೊಲೀಸರು, ನಮ್ಮನ್ನ ಮಾತ್ರ ಅನುಮತಿ ಪಡೆಯಲಾಗಿದೆಯೇ ಎಂದು ಕೇಳುತ್ತಾರೆ. ಇದು ಪೊಲೀಸರ ಕಾರ್ಯವೈಖರಿ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನವೆಂಬರ್ 26ಕ್ಕೆ ಹೋರಾಟಕ್ಕೆ ಒಂದು ವರ್ಷ ತುಂಬುತ್ತದೆ. ಆಗ ದೇಶದ ಎಲ್ಲಾ ರಾಜ್ಯಗಳಿಂದ 5 ಕೋಟಿಗೂ ಹೆಚ್ಚು ರೈತರು ದೆಹಲಿ ಪ್ರವೇಶ ಮಾಡುತ್ತಾರೆ. ಸರ್ಕಾರದ ಯಾವುದೇ ಕುತಂತ್ರದ ಕಾರ್ಯತಂತ್ರಗಳಿಗೂ ನಾವು ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ರೈತರು ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸರ್ಕಾರ ಪೊಲೀಸ್ ಬಲದ ಮೂಲಕ ಯತ್ನಿಸುತ್ತಿದೆ. ಪೊಲೀಸರು ಕಾನೂನು ಪಾಲಕರಾಗದೇ ಮಂತ್ರಿಗಳ ಗುಲಾಮರ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
ನೂರಕ್ಕೂ ಹೆಚ್ಚು ರೈತರನ್ನು ಪೊಲೀಸರು ಆಡುಗೋಡಿ ಪೊಲೀಸ್ ಮೈದಾನಕ್ಕೆ ಕರೆದೊಯ್ದಾಗ ಅಲ್ಲಿ ರೈತರು 1 ಗಂಟೆ ಕಾಲ ಬಸ್ಸಿನಿಂದ ಕೆಳಗೆ ಇಳಿಯದೆ ಪೊಲೀಸರ ಕಾನೂನುಬಾಹಿರ ವರ್ತನೆಯನ್ನ ಖಂಡಿಸಿದ್ದಾರೆ. 3 ಗಂಟೆ ನಂತರ ಬಂಧಿತ ರೈತರು, ರೈತ ಮಹಿಳೆಯರು, ಬೀದಿ ಬದಿ ವ್ಯಾಪಾರಿಗಳನ್ನು ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಅಂದಪ್ಪ ಕೊಳೂರ, ಬೆಂಗಳೂರು ನಗರಾಧ್ಯಕ್ಷೆ ಶಿವಮ್ಮ, ಚನ್ನರಾಯಪಟ್ಟಣದ ಪ್ರೇಮ, ಮೈಸೂರು ಜಿಲ್ಲೆಯ ನಾಗರಾಜ್, ಪ್ರಜಾ ಪರಿವರ್ತನಾ ವೇದಿಕೆಯ ಗೋವಿಂದರಾಜು ಹೆಸರಘಟ್ಟ, ಶಿವರುದ್ರಪ್ಪ ಇನ್ನು ಮುಂತಾದವರಿದ್ದರು.
– ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳಿಗೆ ಎನ್‍ಡಿಎ ಮಾದರಿ ತರಬೇತಿ
– ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ
– ಶಾಸನ ಸಭೆಯಲ್ಲಿ ಮಸೂದೆ ಅನುಮೋದನೆ
– ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ
ಹುಬ್ಬಳ್ಳಿ: ಪೊಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್‍ಎಸ್‍ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಬಾಣತಿಕಟ್ಟೆಯಲ್ಲಿ ಕಸಬಾ ಪೇಟೆ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಠಾಣೆ, ಆಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಛೇರಿ ಮತ್ತು 36 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಎನ್‍ಡಿಎ ಮಾದರಿ ತರಬೇತಿ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಪುಣೆಯ ಕಡಕ್‍ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‍ಡಿಎ) ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಆಫೀಸರ್ ಆನ್ ಕ್ರೈಂ ಸೀನ್ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. 16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‍ಪೆಕ್ಟರ್‍ಗಳ ನೇಮಕಾತಿ ಮಾಡಲಾಗುತ್ತಿದೆ ಎಂದರು. ಡಿವೈಎಸ್‍ಪಿ ಹಾಗೂ ಮೇಲಿನ ಹಂತದ ಅಧಿಕಾರಿಗಳು ಕೇವಲ ಕಚೇರಿ, ಆಡಳಿತ ಕೆಲಸಗಳಿಗೆ ಮಹತ್ವ ನೀಡದೆ ಪ್ರತಿಯೊಂದು ಠಾಣೆಗೆ ಭೇಟಿ ನೀಡಿ ಮೂಲ ಪೊಲೀಸ್ ವೃತ್ತಿ ನಿರ್ವಹಿಸಬೇಕು. ಎಲ್ಲರೂ ಕ್ಷೇತ್ರಕ್ಕೆ ಇಳಿದು ಕರ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕಾನೂನು ಸುವ್ಯವಸ್ಥೆ ಮುಖ್ಯ. ಇಲ್ಲಿನ ಜನ ಶಾಂತಿ ಪ್ರಿಯರು ಕೆಲವು ಕಿಡಗೇಡಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವಾಗುತ್ತಿದೆ. ಅವುಗಳನ್ನು ನಿಯಂತ್ರಿಸುವುದು ಅಧಿಕಾರಿಗಳಿಂದ ಸಾಧ್ಯವಿದೆ. ಪೊಲೀಸ್ ಆಯುಕ್ತರು ಠಾಣೆಗಳಿಗೆ ತೆರಳಿ ಪರಿಶೀಲನೆ ಮಾಡಬೇಕು ಎಂದರು. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯವಿದೆ ಎಂದು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡ್ತಾರೆ: ಹಾಲಪ್ಪ ಆಚಾರ್
ಠಾಣೆಗಳಿಗೆ ಮೂಲಭೂತ ಸೌಕರ್ಯ ನೀಡಿ ಸುಧಾರಣೆ ಮಾಡಬೇಕು. ಪ್ರತಿ ವರ್ಷ ನೂರು ಠಾಣೆಗಳಂತೆ ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ. 10 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬೊಮ್ಮಯಿ ತಿಳಸಿದರು.
ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಠಾಣೆ, ಸಂಚಾರಿ ಠಾಣೆ, ವಸತಿ ಗೃಹಗಳನ್ನು ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ ಹಾಡಲು ಶಾಸನ ಸಭೆಯಲ್ಲಿ ಮಸೂದೆ ಅನುಮೋದನೆ ಆಗಿದೆ. ಕಾಗ್ನಿಜಿಬಲ್ ಪ್ರಕರಣ ಎಂದು ದಾಖಲಿಸಿಕೊಂಡು ಜಾಮೀನು ರಹಿತವಾಗಿ ತನಿಖೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಜೂಜಾಟ, ಆನ್ ಲೈನ್ ಜೂಜುಕಾರನ್ನು ಜೈಲಿಗೆ ತಳ್ಳಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ನೆಲಮಂಗಲ: ನಗರದ ಹೊರವಲಯದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳಿದ್ದು, ಅಪರಾಧ ಮಾಡಿ ಕ್ಷಣಾರ್ಧದಲ್ಲಿ ಆರೋಪಿಗಳು ನಾಪತ್ತೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪರಾಧಗಳ ಕಡಿವಾಣಕ್ಕೆ ಹೊಸ ತಂತ್ರ ಮಾಡಿದ್ದಾರೆ.
ಇತ್ತೀಚೆಗೆ ನೆಲಮಂಗಲ ನಗರದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಇದಕ್ಕಾಗಿ ನೆಲಮಂಗಲ ಟೌನ್ ಪೊಲೀಸರು ವಿಶೇಷವಾದ ಕಾರ್ಯಾಚರಣೆ ನಡೆಸಿದ್ದಾರೆ. ಕತ್ತಲು ಆವರಿಸುತ್ತಿದ್ದ ಹಾಗೆ ಯುವಕರ ಗುಂಪು ಟೀ ಅಂಗಡಿ, ವೈನ್ ಶಾಪ್, ಇನ್ನಿತರ ಕಡೆ ಸೇರುತ್ತಾರೆ. ಇಂತಹ ಯುವಕರಿಗೆ ವಾರ್ನ್ ಮಾಡುವ ಮೂಲಕ ಪೊಲೀಸರು ಹೊಸ ರೀತಿಯ ನೈಟ್ ರೌಂಡ್ಸ್ ಶುರು ಮಾಡಿದ್ದಾರೆ.ಇದನ್ನೂ ಓದಿ: ಕುರಿಗಾಹಿ ಮೇಲೆ ಹಲ್ಲೆ ನಡೆಸಿ ಕುರಿ ಕದ್ದ ಖದೀಮರು
ಇನ್ನೂ ಖಾಸಗಿ ವಾಹನದಲ್ಲಿ ತೆರಳಿದ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದ ಪೊಲೀಸರ ತಂಡ, ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡೋರಿಗೂ ವಾನಿರ್ಂಗ್ ನೀಡಿದ್ದಾರೆ. ಹೆಚ್ಚು ಅನುಮಾನ ಕಂಡುಬಂದ ಯುವಕರನ್ನು ವಶಕ್ಕೆ ಪಡೆದು, ಯುವಕರ ಸಂಜೆಯ ಮೋಜು-ಮಸ್ತಿಗೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಗದಗಿಗೆ ಸಿಎಂ ಬಾರ್ತಾರೆಂದು ತರಾತುರಿಯಲ್ಲಿ ರಸ್ತೆ ದುರಸ್ತಿ
ಅಪರಾಧ ಪ್ರಕರಣಗಳು ಹೆಚ್ಚದಂತೆ ನಗರದಲ್ಲಿ ಶಾಂತಿ ಕಾಪಾಡಲು ಪೊಲೀಸರು ಹೈ ಅಲರ್ಟ್ ಆಗಿದ್ದು, ಯಾವುದೇ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿದ್ದಾರೆ.
ಗದಗ: ರೋಣ ತಾಲೂಕಿನ ಅಸೂಟಿ ಹೊರ ವಲಯದಲ್ಲಿ ಕುರಿಗಾಹಿ ಮೇಲೆ ಹಲ್ಲೆ ನಡೆಸಿ ಕುರಿ ಕಳ್ಳತನ ಮಾಡಿರೋ ಘಟನೆ ನಡೆದಿದೆ.
ರೋಣದ ಬಸಪ್ಪ ಹುಡೇದ್ ಕುಟುಂಬಕ್ಕೆ ಸೇರಿದ 190 ಕ್ಕೂ ಹೆಚ್ಚು ಕುರಿಗಳನ್ನ ಅಸೂಟಿ ಗ್ರಾಮದ ಬಳಿ ಜಮೀನಲ್ಲಿ ನಿಲ್ಲಿಸಲಾಗಿತ್ತು. ಇದನ್ನ ಗಮನಿಸಿದ್ದ ಐವರು ದುಷ್ಕರ್ಮಿಗಳು ರಾತ್ರಿ ಕಳ್ಳತನಕ್ಕೆ ಹೊಂಚು ಹಾಕಿ ತಡರಾತ್ರಿ ವೇಳೆ ಮುಸುಕು ಧರಿಸಿ ಕುರಿ ದೊಡ್ಡಿಗೆ ನುಗ್ಗಿದ್ದಾರೆ. ಇದನ್ನೂ ಓದಿ: ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲಮಿತಿಯಲ್ಲಿ ಮೀಸಲಾತಿ ತರಲಾಗುವುದಿಲ್ಲ: ಸಿ.ಸಿ.ಪಾಟೀಲ್
ದೊಡ್ಡಿ ಬಳಿ ಮಲಗಿದ್ದ ಕುರಿಗಾಹಿ 14 ವರ್ಷದ ಮುತ್ತಪ್ಪ ಹುಡೇದ್ ಅನ್ನೋ ಬಾಲಕನ ಕೈ ಕಾಲು ಕಟ್ಟಿ ಹಾಕಿದ್ದಾರೆ. ಈ ವೇಳೆ ಬಾಲಕನ ಜೊತೆಗಿದ್ದ ಮಂಜಪ್ಪ, ಪರಪ್ಪ ಅನ್ನೋರನ್ನ ಸ್ಥಳದಿಂದ ಓಡಿಸಿದ್ದಾರೆ. ನಂತರ 50 ಕ್ಕೂ ಹೆಚ್ಚು ಕುರಿಗಳನ್ನ ತಾವು ತಂದಿದ್ದ ವಾಹನದಲ್ಲಿ ಲೋಡ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ
ಕುರಿಗಾಹಿ ಬಾಲಕನ್ನ ಕೈ ಕಾಲು ಕಟ್ಟಿ, ಬಾಯಲ್ಲಿ ಮಣ್ಣು ತುಂಬಿ ವಿಕೃತಿ ಮೆರೆದಿದ್ದಾರೆ. ಸದ್ಯ ಗಾಯಾಳು ಬಾಲಕನನ್ನು ರೋಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿ ಕಳ್ಳತನ ಮಾಡಿರೋ ಖದೀಮರನ್ನ ಅರೆಸ್ಟ್ ಮಾಡಬೇಕು ಅಂತಾ ಕುರಿಗಾಹಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುರಿಗಳ ಖದೀಮರಿಗಾಗಿ ರೋಣ ಪೊಲೀಸರು ಬಲೆ ಬೀಸಿದ್ದಾರೆ.