Tag: ಪೊಲೀಸ್ ಆಫೀಸರ್

  • ಗದಗ | ಪೊಲೀಸ್‌ ಅಧಿಕಾರಿಯ ಸಹೋದರನ ದರ್ಪ – ಕುಡಿದ ಮತ್ತಲ್ಲಿ ಠಾಣೆಗೆ ನುಗ್ಗಿ ರಂಪಾಟ

    ಗದಗ | ಪೊಲೀಸ್‌ ಅಧಿಕಾರಿಯ ಸಹೋದರನ ದರ್ಪ – ಕುಡಿದ ಮತ್ತಲ್ಲಿ ಠಾಣೆಗೆ ನುಗ್ಗಿ ರಂಪಾಟ

    ಗದಗ: ಪೊಲೀಸ್‌ ಅಧಿಕಾರಿ (Police Officers) ಸಹೋದರನೋರ್ವ ರಾತ್ರಿ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರಿಗೆ ಅವಾಜ್ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರಿಕ್ ಮಾಡಿಕೊಂಡ ಘಟನೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ (Betageri Police Station) ನಡೆದಿದೆ.

    ಪೊಲೀಸ್ ಠಾಣೆಯಲ್ಲಿ ರೌಡಿ ರೀತಿ ವರ್ತಿಸಿದ ಅಕ್ಷತ್ ಹಾಗೂ ಸಹಚರನನ್ನು ಸ್ಥಳಿಯರು ತರಾಟೆಗೆ ತೆಗೆದುಕೊಂಡರು. ಪೊಲೀಸ್‌ ಅಧಿಕಾರಿಯ ಸಹೋದರ ಅಕ್ಷತ್ ಹದ್ದಣ್ಣವರ್‌ನಿಂದ ಈ ಎಲ್ಲಾ ರಂಪಾಟ ನಡೆದಿದೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಅಕ್ಷತ್ ಹದ್ದಣ್ಣವರ್ ಹಾಗೂ ಸಹಚರನಿಂದ ರಾತ್ರಿಯಿಡೀ ಹೈಡ್ರಾಮಾ ನಡೆದಿದೆ. ಇದನ್ನೂ ಓದಿ: ಆಪರೇಷನ್ ಅಖಾಲ್ | ಭದ್ರತಾ ಸಿಬ್ಬಂದಿ, ಉಗ್ರರ ನಡುವೆ ಗುಂಡಿನ ಚಕಮಕಿ – ಇಬ್ಬರು ಯೋಧರು ಹುತಾತ್ಮ

    ಕುಡಿದ ಮತ್ತಿನಲ್ಲಿ ಏಕಾಏಕಿ ಕಾರ್‌ನಲ್ಲಿ ಬಂದು ಪೊಲೀಸ್ ಠಾಣೆಗೆ ನುಗ್ಗಿ, ನಾನು ವಕೀಲ ಯಾರು ಏನು ಮಾಡ್ತಿರಿ ಎಂದು ಠಾಣೆಯ ಬಳಿಯಿದ್ದ ಸ್ಥಳಿಯರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಸಿಪಿಐ, ಪಿಎಸ್‌ಐ ವಾಹನ ನಿಲ್ಲಿಸುವ ಸ್ಥಳದಲ್ಲಿ ಅಕ್ಷತ್ ತನ್ನ ಕಾರ್ ಪಾರ್ಕಿಂಗ್ ಮಾಡಿದ್ದ. ಅಧಿಕಾರಿಗಳ ಕಾರು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಠಾಣೆಯ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದರು. ಬೆಟಗೇರಿ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪವಿದೆ. ಇದನ್ನೂ ಓದಿ: ಬುದ್ಧಿಮಾಂದ್ಯ ಯುವತಿ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ಮಾಡಿ ಯುವತಿಯ ಸಹೋದರನಿಗೆ ಕಳುಹಿಸಿದ ಕೀಚಕರು

    ಇಷ್ಟೆಲ್ಲಾ ನಡೆದರೂ ಪೊಲೀಸರು ಕೇವಲ ಡ್ರಿಂಕ್ & ಡ್ರೈವ್ ಟೆಸ್ಟ್ ಮಾಡಿ ಕಳುಹಿಸಿದ್ರಾ? ಅಕಸ್ಮಾತ್ ಜನಸಾಮಾನ್ಯರು ಹೀಗೆ ಮಾಡಿದ್ರೆ ಪೊಲೀಸರು ಸುಮ್ಮನೆ ಬಿಡ್ತಿದ್ರಾ? ಅಧಿಕಾರಿ ಸಹೋದರನಿಗೆ ಒಂದು ನ್ಯಾಯ, ಜನ ಸಾಮಾನ್ಯರಿಗೊಂದು ಕಾನೂನಾ? ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ರೂ ಪೊಲೀಸರು ಸುಮ್ಮನಿರೋದಾದ್ರೂ ಯಾಕೆ? ಐಪಿಎಸ್ ಅಧಿಕಾರಿ ಸಹೋದರನ ಆಟಾಟೋಪ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿಂಪಲ್ ಹುಡುಗಿ ಮೇಘನಾ ಗಾಂವ್ಕರ್

    ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿಂಪಲ್ ಹುಡುಗಿ ಮೇಘನಾ ಗಾಂವ್ಕರ್

    ಶಿವಾಜಿ ಸುರತ್ಕಲ್ ಚಿತ್ರದ ಮುಂದಿನ ಸರಣಿ, ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಯುವ ಮಹಿಳಾ ಪೊಲೀಸ್ ಅಧಿಕಾರಿಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿ ನಿರ್ದೇಶಕರು ಈ ಪಾತ್ರವನ್ನು ಸೃಷ್ಟಿಸಿದ್ದಾರೆ, ವಿಶೇಷವೇನೆಂದರೆ ನಿಜ ಜೀವನದಲ್ಲಿ ಮೇಘನವರ ತಂದೆ ಕೂಡ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಈ ಪಾತ್ರದ ತಯಾರಿಗೆ ಮತ್ತಷ್ಟು ಸಹಕಾರಿಯಾಯಿತು. ಇನ್ನು ಚಿತ್ರದಲ್ಲಿ ಮೇಘನಾ ಅವರದ್ದು ಶಿವಾಜಿಯ ಮೇಲಧಿಕಾರಿಯ ಪಾತ್ರವಾಗಿದ್ದು, ತನಿಖೆಯ ಪ್ರತಿ ಹಂತದಲ್ಲೂ ಶಿವಾಜಿಯ ಜೊತೆಗಿದ್ದು ಚಿತ್ರಕ್ಕೆ ನಿಜವಾದ ಪೊಲೀಸ್ ಪವರ್ ಸಿಗುವಂತೆ ಮಾಡಿದ್ದಾರೆ.

    ಇನ್ನು ಶಿವಾಜಿ ಸುರತ್ಕಲ್-2 ಚಿತ್ರತಂಡವು ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ ದಿನ ಸೆಪ್ಟೆಂಬರ್ 10 ರಂದು ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಡಬ್ಬಿಂಗ್ ಕೆಲಸಗಳು ಶುರುವಾಗಿದೆ. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    ಚಿತ್ರಕ್ಕೆ ಜೂಡ ಸ್ಯಾಂಡಿರವರ ಸಂಗೀತ ಮತ್ತು  ದರ್ಶನ್ ಅಂಬಟ್, ಗುರು ಪ್ರಸಾದ್ ಎಂ ಜಿ  ಛಾಯಾಗ್ರಹಣವಿದ್ದು, ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ನಲ್ಲಿ ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆಕಾಶ್ ಶ್ರೀವತ್ಸರವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]