Tag: ಪೊಲೀಸ್ ಅರೆಸ್ಟ್

  • ಚಿಕ್ಕಮ್ಮನ ಅವಸರಕ್ಕೆ ಲಾರಿ ಕೆಳಗೆ ಸಿಲುಕಿ 6 ವರ್ಷದ ಮಗು ಅಪ್ಪಚ್ಚಿ

    ಚಿಕ್ಕಮ್ಮನ ಅವಸರಕ್ಕೆ ಲಾರಿ ಕೆಳಗೆ ಸಿಲುಕಿ 6 ವರ್ಷದ ಮಗು ಅಪ್ಪಚ್ಚಿ

    – ಮಗು ಮೃತಪಟ್ಟಿದ್ದಕ್ಕೆ ಲಾರಿ ಚಾಲಕನಿಗೆ ಥಳಿತ
    – ಡೋರ್ ತೆರೆದ ಕಾರು ಚಾಲಕನ ಮೇಲೂ ಕೇಸ್

    ಬೆಂಗಳೂರು: ಅಪಘಾತವೆಸಗಿದ್ದ ಲಾರಿ ಚಾಲಕನಿಗೆ ಥಳಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ರಾಕೇಶ್, ಈಶ್ವರಿ, ಆನಂದ್, ಪ್ರಮೋದ್, ಪ್ರಕಾಶ್ ಸೇರಿದಂತೆ ಆರು ಆರೋಪಿಗಳು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಮಾರ್ಚ್ 10ರಂದು ಸಂಜೆ ಸುಮಾರು 4.30ಕ್ಕೆ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅರ್ಹಾನ್(6) ಬಾಲಕ ಮೃತಪಟ್ಟಿದ್ದನು.

    ಏನಿದು ಪ್ರಕರಣ?
    ಮೃತ ಅರ್ಹಾನ್ ಜೊತೆ ಚಿಕ್ಕಮ್ಮ ಈಶ್ವರಿ ದ್ವಿಚಕ್ರ ವಾಹನದಲ್ಲಿ ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಹೋಗುತ್ತಿದ್ದಳು. ಈ ವೇಳೆ ಲಾರಿಯನ್ನು ಓವರ್ ಟೇಕ್ ಮಾಡಲು ಈಶ್ವರಿ ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಇದ್ದ ಕಾರಿನ ಡೋರ್ ಓಪನ್ ಆಗಿದ್ದರಿಂದ ಆಕೆ ರಸ್ತೆಗೆ ಬಿದ್ದಿದ್ದು, ಮಗು ಲಾರಿಗೆ ಸಿಲುಕಿ ಸಾವನ್ನಪ್ಪಿದೆ.

    ಮಗು ಮೃತಪಟ್ಟಿದ್ದರಿಂದ ಸಾರ್ವಜನಿಕರು ಆಕ್ರೋಶಗೊಂಡು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಚಾಲಕನ ವಿಪರೀತ ರಕ್ತಸ್ತ್ರಾವವಾಗಿ ತಕ್ಷಣ ಆತನನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲಾರಿ ಚಾಲಕ ರಾಧೇಶ್ಯಾಮ್ ಮೃತಪಟ್ಟಿದ್ದ. ಮೃತ ಚಾಲಕ ಉತ್ತರ ಪ್ರದೇಶ ಮೂಲದವನು ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

    ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಅಪಘಾತದ ಸತ್ಯಾಸತ್ಯತೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ರಾಕೇಶ್ ಮತ್ತು ಈಶ್ವರಿ ಗಂಡ ಹೆಂಡತಿಯಾಗಿದ್ದು, ಪ್ರಮೋದ್ ಮತ್ತು ಪ್ರಕಾಶ್ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

    ಈ ಘಟನೆಯಲ್ಲಿ ಚಾಲಕನದ್ದು ಯಾವುದೇ ತಪ್ಪು ಇರಲಿಲ್ಲ. ಮಹಿಳೆಯೇ ಲಾರಿಯನ್ನು ಓವರ್ ಟೇಕ್ ಮಾಡುವ ಅವಸರದಲ್ಲಿ ಮುಂದೆ ನುಗ್ಗಿದ್ದಾಳೆ. ಮುಂದೆ ಇದ್ದ ಕಾರಿನ ಡೋರ್ ಓಪನ್ ಮಾಡಿದ್ದು ಅಪಘಾತವಾಗಲು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಡೋರ್ ಓಪನ್ ಮಾಡಿದ ತಪ್ಪಿಗೆ ಕಾರಿನ ಚಾಲಕನ ಮೇಲೂ ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?v=j_RhzBNaWJM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆ ಮಾತಾಡಿಲ್ಲ ಅಂತ ರಸ್ತೆಯಲ್ಲೇ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಕಾಮುಕ

    ಮಹಿಳೆ ಮಾತಾಡಿಲ್ಲ ಅಂತ ರಸ್ತೆಯಲ್ಲೇ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಕಾಮುಕ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮತ್ತೊಬ್ಬ ಸೈಕೋ ಕಾಮುಕನ ಬಂಧನವಾಗಿದೆ.

    ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ಕೃಪಾರಾಮ್ ಎಂದು ಗುರುತಿಸಲಾಗಿದ್ದು, ಬಾಗಲಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕಾಮುಕ ಮಹಿಳೆ ಮಾತಾಡಲಿಲ್ಲ ಅಂತ ರಸ್ತೆಯಲ್ಲೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದನು.

    ದೂರಿನಲ್ಲಿ ಏನಿದೆ?
    ಆರೋಪಿ ಬಾಗಲಗುಂಟೆ ಬಳಿ ಕಟ್ಟಡವೊಂದರಲ್ಲಿ ಗ್ರಾನೈಟ್ ಕೆಲಸ ಮಾಡುತ್ತಿದ್ದನು. ಈ ವೇಳೆ ನನ್ನನ್ನು ಸುಮಾರು ಎರಡು ತಿಂಗಳುಗಳ ಕಾಲ ದಿಟ್ಟಿಸಿ ನೋಡುತ್ತಾ ಕಿರುಕುಳ ನೀಡಿದ್ದಾನೆ. ನಾನು ಮನೆಯಿಂದ ಹೊರಬಂದರೆ ಸಾಕು ಅಡ್ಡ ಗಟ್ಟಿ ನಿಲ್ಲುತ್ತಿದ್ದನು. ಅಷ್ಟೇ ಅಲ್ಲದೇ ಮನೆ ಅಂಗಳದಲ್ಲಿ ಮಗುವಿಗೆ ಊಟ ಮಾಡಿಸುತ್ತಿದ್ದರೆ ಸನ್ನೆ ಮಾಡಿ ಕರೆಯುತ್ತಿದ್ದನು. ನಾನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ನೊಂದ ಗೃಹಿಣಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಡೆಗೆ ಎರಡು ತಿಂಗಳಾದರೂ ಮಹಿಳೆ ತನ್ನತ್ತ ನೋಡಲಿಲ್ಲ, ನನ್ನ ಬಳಿ ಮಾತಾಡಲಿಲ್ಲ ಅಂತ ಕೋಪಗೊಂಡ ಸೈಕೋ ಜನವರಿ 4ರಂದು ಮನೆ ಮುಂದೆ ಮಹಿಳೆ ಕಸಗುಡಿಸುವಾಗ ಬಂದು ಎದುರಿಗೆ ನಿಂತಿದ್ದಾನೆ. ಆದರೆ ಗೃಹಿಣಿ ಆತನತ್ತ ನೋಡಲಿಲ್ಲ. ಆಗ ಕೋಪಗೊಂಡು ಪ್ಯಾಂಟ್ ಬಿಚ್ಚಿ ಮರ್ಮಾಂಗವನ್ನು ಪ್ರದರ್ಶನ ಮಾಡಿದ್ದಾನೆ.

    ಇದರಿಂದ ನೊಂದ ಗೃಹಿಣ ತಕ್ಷಣ ಪತಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಕೃಪಾರಾಮನನ್ನ ಪೊಲೀಸರು ಬಂಧಿಸಿದ್ದು, ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತು ಬರುವ ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆರಗಿದ ಕಾಮುಕರು – ವಿಡಿಯೋ ಮಾಡಿ ಅಪ್ಲೋಡ್

    ಮತ್ತು ಬರುವ ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆರಗಿದ ಕಾಮುಕರು – ವಿಡಿಯೋ ಮಾಡಿ ಅಪ್ಲೋಡ್

    ಲಕ್ನೋ: ಅಪ್ರಾಪ್ತ ಹುಡುಗಿಯನ್ನು ಐದು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಗಾಜೀಯಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಸೆಪ್ಟೆಂಬರ್ 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಸಂತ್ರಸ್ತೆ ತನ್ನ ಫ್ರೆಂಡ್ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧೀಕ್ಷಕ ಶ್ಲೋಕ್ ಕುಮಾರ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಸೆಪ್ಟೆಂಬರ್ 25 ಸಂತ್ರಸ್ತೆ ತನ್ನ ಫ್ರೆಂಡ್ ಹುಟ್ಟುಹಬ್ಬದ ಪಾರ್ಟಿಗೆಂದು ಹೋಗಿದ್ದಾಳೆ. ಅಲ್ಲಿ ಐದು ಮಂದಿ ಕಾಮುಕರು ಸಂತ್ರಸ್ತೆಗೆ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ ಪಾನೀಯವನ್ನು ಕುಡಿಸಿದ್ದಾರೆ. ಇದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆ ಈ ಸ್ಥಿತಿಯಲ್ಲಿ ಇದ್ದಾಗ ಕಾಮುಕರು ಬಜರಿಯಾ ಮಾರುಕಟ್ಟೆ ರೈಲ್ವೆ ರಸ್ತೆಯಲ್ಲಿರುವ ಹೋಟೆಲಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಐದು ಮಂದಿಯೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

    ಅಷ್ಟೇ ಅಲ್ಲದೇ ಆರೋಪಿಗಳು ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಅತ್ಯಾಚಾರದ ಬಳಿಕ ಈ ವಿಚಾರವನ್ನು ಪೋಷಕರು ಅಥವಾ ಪೊಲೀಸರಿಗೆ ಹೇಳಿದರೆ ಮುಂದೆ ಉಂಟಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನು ಕೂಡ ಹಾಕಿದ್ದಾರೆ ಎಂದು ಎಸ್‍ಪಿ ಹೇಳಿದ್ದಾರೆ.

    ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಬಳಿಕ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೂಖ್, ಚಂದ್, ಶದಾಬ್, ರಹೀಸ್ ಮತ್ತು ಶಹೀದ್ ವಿರುದ್ಧ ಐಪಿಸಿ ಸೆಕ್ಷನ್ 375 (ಅತ್ಯಾಚಾರ) ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಶಾರೂಖ್ ನನ್ನು ಬಂಧಿಸಲಾಗಿದೆ ಎಂದು ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂಗೆ ಮನವಿ ಕೊಡುವ ಮೊದಲೇ ಮಹಿಳೆ ಅರೆಸ್ಟ್

    ಸಿಎಂಗೆ ಮನವಿ ಕೊಡುವ ಮೊದಲೇ ಮಹಿಳೆ ಅರೆಸ್ಟ್

    ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೊಡುವ ಮೊದಲೇ ಮಹಿಳೆಯೊಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.

    ಶೈಲಜಾ ಹುಳ್ಳಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಕೆಲಸದ ನಿರಾಕರಣೆ ಹಿನ್ನಲೆಯಲ್ಲಿ ಇಂದು ಕೊಪ್ಪಳದ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಶೈಲಜಾ ಮನವಿ ಕೊಡಲು ಮುಂದಾಗಿದ್ದರು. ಆದರೆ ಸಿಎಂಗೆ ಮನವಿ ನೀಡುವ ಮೊದಲೇ ಶೈಲಜಾಳನ್ನು ಪೊಲೀಸರು ಬಂಧಿಸಿದ್ದಾರೆ.

    ಶೈಲಜಾ ಹುಳ್ಳಿ ಕೊಪ್ಪಳದ ಮೆಡಿಕಲ್ ಕಾಲೇಜ್‍ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರುವರಿ 4 ರಂದು ಏಕಾಏಕಿ ಇವರನ್ನು ಸೇರಿದಂತೆ 18 ಜನರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಕೋಪಗೊಂಡ ಶೈಲಜಾ ಸ್ಟೋರ್ ಕೀಪರ್ ಸತ್ಯನಾರಾಯಣ್‍ಗೆ ಧರ್ಮದೇಟು ನೀಡಿದ್ದರು.

    ಕೆಲಸದಿಂದ ತಗೆಯಲು ಸತ್ಯನಾರಾಯಣನೇ ಕಾರಣ ಎಂದು ಶೈಲಜಾ ಚಪ್ಪಲಿ ಏಟು ನೀಡಿದ್ದರು. ನಂತರ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯಿಂದ ಶೈಲಜಾಗೆ ಕೆಲಸ ನೀಡಲು ನಿರಾಕರಣೆ ಮಾಡಿತ್ತು.

    ಸಮಾವೇಶದಲ್ಲಿ ಸುಮಾರು 1,497 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದರ ಮೂಲಕ ಚಾಲನೆ ನೀಡಲಿದ್ದಾರೆ.