Tag: ಪೊಲಿಸ್

  • ಅಮೆರಿಕದ ಮಹಿಳೆಗೆ ಮಸಾಜ್ ಮಾಡೋ ನೆಪದಲ್ಲಿ ಸೆಕ್ಸ್ ಗೆ ಬೇಡಿಕೆ ಇಟ್ಟ ಕಾಮುಕ ಅರೆಸ್ಟ್

    ಅಮೆರಿಕದ ಮಹಿಳೆಗೆ ಮಸಾಜ್ ಮಾಡೋ ನೆಪದಲ್ಲಿ ಸೆಕ್ಸ್ ಗೆ ಬೇಡಿಕೆ ಇಟ್ಟ ಕಾಮುಕ ಅರೆಸ್ಟ್

    ಕೊಪ್ಪಳ: ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು  ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಹನುಮನ ಹಳ್ಳಿ ನಿವಾಸಿ ಆನಂದ ರೆಡ್ಡಿ ಬಂಧಿತ ಆರೋಪಿ. ಅಮೆರಿಕದ ಮಹಿಳೆಯೊಬ್ಬರು ಈತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.

    ಏನಿದು ಪ್ರಕರಣ?
    ವಿದೇಶಿಗರು ತುಂಗಭದ್ರಾ ದಡದ ಕೊಪ್ಪಳದ ಗಂಗಾವತಿ ತಾಲೂಕಿನ ಗ್ರಾಮಗಳಾದ ವಿರುಪಾಪುರ ಗಡ್ಡಿ, ಸಣಾಪುರ್ ಮತ್ತು ಹನುಮನ ಹಳ್ಳಿಗಳಲ್ಲಿರುವ ಹೋಮ್ ಸ್ಟೇ ಗಳಲ್ಲಿ ವಾಸವಾಗುತ್ತಾರೆ. ಇದನ್ನೇ ಮೂಲ ದಂಧೆಯನ್ನಾಗಿಸಿಕೊಂಡ ಆನಂದ ರೆಡ್ಡಿ ಹನುಮನ ಹಳ್ಳಿಯಲ್ಲಿ ತನ್ನದೇ ಆದ ಸ್ಟೇ ಹೋಮ್‍ನಲ್ಲಿ ವಿದೇಶಿಗರಿಗೆ ತಂಗಲು ರೂಮ್‍ ಬಾಡಿಗೆ ನೀಡುವ ಕೆಲಸ ಮಾಡುತ್ತಾನೆ.

    ಇಂತಹ ರೂಮ್ ಗಳಲ್ಲಿ ಉಳಿಯುವ ವಿದೇಶಿಗರ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳುವ ಆರೋಪಿ ಅವರಿಗೆ ಮಸಾಜ್ ಮಾಡುವುದಾಗಿ ನಂಬಿಸಿ ಸ್ಟೇ ಹೋಮ್‍ಗೆ ಕರೆದುಕೊಂಡು ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಈ ಕುರಿತು ಸ್ಥಳೀಯರು ಆರೋಪಿಸಿದ್ದು, ಇಂತಹ ಸಾಕಷ್ಟು ಘಟನೆಗಳು ನಡೆದಿದ್ದರೂ ಯಾರು ಪೊಲೀಸರಿಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ.

    ಇತ್ತೀಚಿಗೆ ಅಮೆರಿಕದಿಂದ ಬಂದ ಮಹಿಳೆಯೊಬ್ಬರು ಆತನ ಹೋಮ್ ಸ್ಟೇ ಬಾಡಿಗೆ ಪಡೆದಿದ್ದಾರೆ. ಈ ವೇಳೆ ಮಹಿಳೆ ಗೆ ಮಸಾಜ್ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ ವೇಳೆ ಆರೋಪಿ ಆನಂದರೆಡ್ಡಿ ಮಹಿಳೆಯನ್ನು ಹೋಮ್ ನಿಂದ ಸ್ಟೇ ಕಳುಹಿಸಿದ್ದಾನೆ. ಘಟನೆ ನಂತರ ಮಹಿಳೆ ಅಮೆರಿಕಕ್ಕೆ ತೆರಳಿದ ವೇಳೆ ತಮ್ಮ ವಿದೇಶಾಂಗ ಇಲಾಖೆಗೆ ಈ ಕುರಿತು ಇಮೇಲ್ ಮುಖಾಂತರ ದೂರು ನೀಡಿದ್ದಾರೆ. ಈ ಹಿನ್ನೆಲೆ ಪ್ರಕರಣದ ಬೆನ್ನೆತ್ತಿದ ಕೊಪ್ಪಳ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅನಂದರೆಡ್ಡಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

  • ವೃದ್ಧರು, ಮಹಿಳೆಯರೆನ್ನದೆ, ರಕ್ತ ಬಂದ್ರೂ ಬಿಡದೇ ಪೊಲೀಸರಿಂದ ಲಾಠಿಚಾರ್ಜ್- 2ನೇ ಯಮನೂರಾದ ಬುಳ್ಳಾಪುರ

    ವೃದ್ಧರು, ಮಹಿಳೆಯರೆನ್ನದೆ, ರಕ್ತ ಬಂದ್ರೂ ಬಿಡದೇ ಪೊಲೀಸರಿಂದ ಲಾಠಿಚಾರ್ಜ್- 2ನೇ ಯಮನೂರಾದ ಬುಳ್ಳಾಪುರ

    ದಾವಣಗೆರೆ: ಗೋಮಾಳ ಜಾಗದಲ್ಲಿ ನಿರ್ಮಿಸಿದ್ದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಲಾಠಿ ಬೀಸಿದ್ದಾರೆ. ವೃದ್ಧರು, ಮಹಿಳೆಯರೆನ್ನದೇ ಲಾಠಿ ಏಟು ಕೊಟ್ಟಿದ್ದಾರೆ.

    ದಾವಣಗೆರೆಯ ಹರಿಹರ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಸರ್ವೆ ನಂಬರ್ 52ರ 10.33 ಗುಂಟೆ ಜಾಗದಲ್ಲಿ ಗ್ರಾಮಸ್ಥರು ರಾತ್ರೋರಾತ್ರಿ ಅಕ್ರಮವಾಗಿ 30 ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮನೆಯನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದ್ರೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆಗೆ ಮುಂದಾಗಿತ್ತು.

    ಗ್ರಾಮಸ್ಥರ ವಿರೋಧದ ನಡುವೆಯೇ ಅಧಿಕಾರಿಗಳು ತೆರವು ಮಾಡಿದ್ದರಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು. ಅಲ್ಲದೇ 30 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ವೃದ್ಧರು, ಮಹಿಳೆಯರನ್ನು ನೋಡದೆ, ರಕ್ತ ಬಂದರೂ ಬಿಡದೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    2016ರಲ್ಲಿ ಮಹದಾಯಿ ಹೋರಾಟ ತೀವ್ರಗೊಂಡ ಸಂದರ್ಭದಲ್ಲಿ ನವಲಗುಂದ ತಾಲೂಕಿನ ಯಮನೂರಿನಲ್ಲಿ ಪೊಲೀಸರು ಮಹಿಳೆಯರು, ವೃದ್ಧರು ಮೇಲೆ ಮನಬಂದಂತೆ ಲಾಠಿ ಚಾರ್ಜ್ ಮಾಡಿದ್ದರು.

    https://www.youtube.com/watch?v=tDKHZBurWR8

    https://www.youtube.com/watch?v=Ic2b-JmbR0Q

  • ತಾಯಿಯೇ 8 ದಿನದ ಹಸುಗೂಸನ್ನ ಟವಲ್‍ನಿಂದ ಸುತ್ತಿ ಕೊಂದ್ಳು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

    ತಾಯಿಯೇ 8 ದಿನದ ಹಸುಗೂಸನ್ನ ಟವಲ್‍ನಿಂದ ಸುತ್ತಿ ಕೊಂದ್ಳು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

    ತಿರುವಂತನಪುರಂ: ತಾಯಿಯೇ ದೇವರು ಎಂಬ ಮಾತಿದೆ. ಅಂತಹ ತಾಯಿಯೇ ತನ್ನ ಹಸುಗೂಸನ್ನು ಟವಲ್‍ನಿಂದ ಕತ್ತನ್ನು ಸುತ್ತಿ ಕೊಲೆ ಮಾಡಿರುವ ಘಟನೆ ಕೇರಳದ ಕಟ್ಟಪಣ ಸಮೀಪದ ಮುರಿಕ್ಕಟ್ಟುಕುಡಿ ಗ್ರಾಮದಲ್ಲಿ ನಡೆದಿದೆ.

    ಮುರಿಕ್ಕಟ್ಟುಕುಡಿಯ ಕಂಡತಿಂಕರ ಬಿನು ಎಂಬಾತನ ಪತ್ನಿ ಸಂಧ್ಯಾ (28) ಈ ಕೃತ್ಯವನ್ನು ಮಾಡಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ಮಗುವಿನ ಕುತ್ತಿಗೆಯನ್ನು ಟವಲ್‍ನಿಂದ ಸುತ್ತಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಗೆ ಕಾರಣವೇನು?: ಮಗು ನನ್ನ ಬಣ್ಣ ಹಾಗೂ ಗಂಡನ ಮುಖ ಲಕ್ಷಣವನ್ನು ಹೊಂದಿಲ್ಲವೆಂದು ನಾನೇ ಕೊಂದಿದ್ದೇನೆ ಎಂದು ಆರೋಪಿ ಸಂಧ್ಯಾ ಒಪ್ಪಿಕೊಂಡಿದ್ದಾಳೆ. ಮಗುವನ್ನ ಮನೆಯ ಒಳಗಡೆ ಕೊಂದು, ನಂತರ ಪತಿಗೆ ಮಗು ಚಲನವಲನ ಮಾಡುತ್ತಿಲ್ಲ ಎಂದು ತಿಳಿಸಿದ್ದಾಳೆ.

    ಈ ವೇಳೆ ಆತಂಕಗೊಂಡ ಪತಿ ಕೂಡಲೆ ಮನೆಗೆ ಬಂದು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷಿಸುವ ವೇಳೆ ಮಗುವಿನ ಕುತ್ತಿಗೆ ಮೇಲಿನ ಗುರುತುಗಳು ಕಂಡು ಬಂದಿದೆ. ವೈದ್ಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಇವರಿಗೆ 9 ವರ್ಷದ ಮಗುವೂ ಕೂಡ ಇದೆ. ಪೊಲೀಸರು ಸಂಧ್ಯಾಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಮೀನುಗಾರಿಕೆ ಬೋಟ್ ಮುಳುಗಡೆ- 23 ಮೀನುಗಾರರ ರಕ್ಷಣೆ

    ಮೀನುಗಾರಿಕೆ ಬೋಟ್ ಮುಳುಗಡೆ- 23 ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಬೋಟ್ ಅಳಿವೆಗೆ ಸಿಲುಕಿ ಮುಳುಗಡೆಯಾದ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಗೋಡು ಅಳಿವೆ ತೀರದಲ್ಲಿ ರಾತ್ರಿ ವೇಳೆ ನೆಡೆದಿದೆ.

    ಯಾಸಿನ್ ಹೆಸರಿನ ಯಾಂತ್ರಿಕ ಬೋಟ್‍ನಲ್ಲಿ ಸುಮಾರು 23 ಮೀನುಗಾರರಿದ್ದು, ಅಳಿವೆಯಲ್ಲಿ ಸಿಲುಕಿದ್ದವರನ್ನು ಮೂರು ಬೋಟ್‍ಗಳ ಮೂಲಕ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಕಾಸರಗೋಡು ಬಂದರು ತೀರದ ಬಳಿ ಹೆಚ್ಚು ಹೂಳು ತುಂಬಿದ್ದರಿಂದಾಗಿ ಈ ಅವಘಡ ನೆಡೆದಿದೆ.

    ಕಳೆದ ಎರಡು ತಿಂಗಳಲ್ಲಿ ಎರಡನೇ ಪ್ರಕರಣ ಇದಾಗಿದ್ದು, ಬಂದರು ಇಲಾಖೆ ಹೂಳನ್ನು ತೆಗೆಸದ ಕಾರಣ ಈ ರೀತಿಯ ಘಟನೆ ನೆಡೆಯುತ್ತಿದೆ. ಇದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳದಂತಹ ಸ್ಥಿತಿಗೆ ತಲುಪಿದೆ.

    ಈ ಘಟನೆಯ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಮಂಗಳೂರು: ಕಳೆದೆರಡು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿಮುಚ್ಚಿದ ಕೆಂಡದಂತಾಗಿತ್ತು. ಗಲಭೆ ನಿಯಂತ್ರಣಕ್ಕೆ ಸರ್ಕಾರವೇನೋ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಿದೆ. ಆದ್ರೆ ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಿದೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಲಾಗಿದೆ. ಕೆಎಸ್‍ಆರ್‍ಪಿ ಜೊತೆಗೆ ಬಳ್ಳಾರಿ, ದಾವಣಗೆರೆ ಸೇರಿ 12 ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕಳೆದೆರಡು ತಿಂಗಳಿಂದ ಹೆಂಡತಿ, ಮಕ್ಕಳನ್ನೂ ನೋಡದೇ ಕಾರ್ಯನಿರ್ವಹಿಸುತ್ತಿರೋ ಇವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಜೊತೆಗೆ ಇವರಿಗೆ ಕೊಡ್ತಿರೋದು ಕೇವಲ ಅನ್ನ, ಸಾರು ಮಾತ್ರ.

    ಮೊದಲು 4 ತಾಲೂಕು ವ್ಯಾಪ್ತಿಯಲ್ಲಿದ್ದ ನಿಷೇಧಾಜ್ಞೆಯನ್ನು ಈಗ ಬಂಟ್ವಾಳಕ್ಕೆ ಸೀಮಿತಗೊಳಿಸಲಾಗಿದೆ. ಆದ್ರೆ ನಿಷೇಧಾಜ್ಞೆ ನಡುವೆಯೇ 2 ಕೊಲೆಗಳು ನಡೆದಿವೆ. ಈಗಲೂ ಬಂಟ್ವಾಳದ ಪರಿಸ್ಥಿತಿ ಸುಧಾರಣೆ ಆಗಿಲ್ಲ.

    ಗಲಭೆ ಎಬ್ಬಿಸಿ ಶಾಂತಿಗಾಗಿ ಸೆಕ್ಷನ್ ಜಾರಿಮಾಡಿರುವ ಜನನಾಯಕರು ಇನ್ನಾದ್ರೂ ಈ ಬಗ್ಗೆ ಗಮಹರಿಸಬೇಕಿದೆ. ಶಾಂತಿಗಾಗಿ ಕಾಯುವ ಪೊಲೀಸರಿಗೆ ಕನಿಷ್ಠ ಸೌಲಭ್ಯವನ್ನಾದ್ರೂ ಒದಗಿಸಬೇಕಿದೆ.

  • ಹೆಂಡ್ತಿಗೆ ಆ್ಯಸಿಡ್ ಕುಡಿಸಿದವನಿಗೆ ಪ್ರಮೋಷನ್ – ಜೀವಂತ ಶವವಾದ ಹೆಣ್ಣಿಗೆ ಖಾಕಿಯಿಂದ ಅನ್ಯಾಯ

    ಹೆಂಡ್ತಿಗೆ ಆ್ಯಸಿಡ್ ಕುಡಿಸಿದವನಿಗೆ ಪ್ರಮೋಷನ್ – ಜೀವಂತ ಶವವಾದ ಹೆಣ್ಣಿಗೆ ಖಾಕಿಯಿಂದ ಅನ್ಯಾಯ

    ಬಳ್ಳಾರಿ: ರಿಪಬ್ಲಿಕ್ ಆಪ್ ಬಳ್ಳಾರಿಯಲ್ಲಿ ಮಾತ್ರ ಪೊಲೀಸರಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನಿದೆ. ಇದಕ್ಕೆ ಸಾಕ್ಷಿ ಈ ಸ್ಟೋರಿ. ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಹೆಂಡ್ತಿ ಹತ್ತಿರ ಡೈವೋರ್ಸ್ ಕೇಳಿದ. ಡೈವೋರ್ಸ್ ಸಿಗಲಿಲ್ಲ ಅಂತ ಪತ್ನಿಗೆ ಆಸಿಡ್ ಕುಡಿಸಿದ. ಇದೀಗ ಅದೇ ವ್ಯಕ್ತಿಗೆ ಶಿಕ್ಷೆ ನೀಡೋ ಬದಲು ಪೊಲೀಸ್ ಇಲಾಖೆ ಪ್ರಮೋಷನ್ ನೀಡಿದೆ.

    ಹೌದು. ಬಳ್ಳಾರಿಯ ಕೌಲಬಜಾರ ನಿವಾಸಿಯಾಗಿದ್ದ ಆಶಾಳನ್ನು 2006ರಲ್ಲಿ ಲಕ್ಷಾಂತರ ರೂಪಾಯಿ ವರದಕ್ಷಿಣೆ ಪಡೆದು ಪೇದೆ ವೆಂಕಟೇಶ್ ಮದುವೆಯಾಗಿದ್ದ. ಮದುವೆ ನಂತರ ವರದಕ್ಷಿಣೆ ದಾಹಕ್ಕಾಗಿ ನಿತ್ಯ ಜಗಳವಾಡುತ್ತಿದ್ದನು. ಮದುವೆಯಾಗಿ 2 ಮಕ್ಕಳಾದ ನಂತರ ಸುಖವಾಗಿ ಸಂಸಾರ ಮಾಡಬೇಕಿದ್ದ ಪೇದೆ ವೆಂಕಟೇಶ, ಕಳೆದ ವರ್ಷ ಜುಲೈ 11ರಂದು ಪೊಲೀಸ ವಸತಿ ನಿಲಯದಲ್ಲೆ ಆಸಿಡ್ ಕುಡಿಸಿದ್ದಾನೆ. ಈ ಕುರಿತು ಬಳ್ಳಾರಿಯ ಕೌಲಬಜಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಆದ್ರೆ ಪೊಲೀಸರು ತಮ್ಮ ಇಲಾಖೆಯ ಮಾನ ಮರ್ಯಾದೆ ಮುಚ್ಚಿಕೊಳ್ಳಲು ಪೇದೆಯ ಪರವಾಗಿಯೇ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಆಕೆಯೇ ಮನನೊಂದು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಅಂತ ಚಾರ್ಜ್‍ಶೀಟ್ ಸಲ್ಲಿಸಿ ಇಡೀ ಪ್ರಕರಣವನ್ನೇ ಹಳ್ಳ ಹಿಡಿಸಿದ್ದರು. ಈಗ ಇದೇ ರಾಕ್ಷಸನಿಗೆ ಹುದ್ದೆಯಲ್ಲಿ ಬಡ್ತಿ ನೀಡಿದ್ದಾರೆ.

    ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್‍ಶೀಟ್ ನೀಡಿದವನಿಗೆ ಈಗ ಪ್ರಮೋಷನ್ ಕೊಡ್ತಿದ್ದಾರೆ. ಅಧಿಕಾರದ ಅಮಲು ತಲೆಗೇರಿ ಇನ್ನೊಬ್ಬ ಮಹಿಳೆಗೆ ಅನ್ಯಾಯ ಆಗೋ ಮೊದಲು ಎಸ್‍ಪಿ ಸಾಹೇಬ್ರು ನ್ಯಾಯ ಕೊಡಿಸಬೇಕಾಗಿದೆ.

     

  • ಸ್ಪಾ, ಯುನಿಸೆಕ್ಸ್ ಸಲೂನ್ ಮೇಲೆ ಮಂಗ್ಳೂರು ಮೇಯರ್ ದಾಳಿ- ಅರೆಬೆತ್ತಲಾಗಿ ಓಟಕಿತ್ತ ಗ್ರಾಹಕರು

    ಸ್ಪಾ, ಯುನಿಸೆಕ್ಸ್ ಸಲೂನ್ ಮೇಲೆ ಮಂಗ್ಳೂರು ಮೇಯರ್ ದಾಳಿ- ಅರೆಬೆತ್ತಲಾಗಿ ಓಟಕಿತ್ತ ಗ್ರಾಹಕರು

    ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ತಮ್ಮ ಖದರ್ ತೋರಿಸಿದ್ದಾರೆ. ಸ್ಪಾ, ಯುನಿ ಸೆಕ್ಸ್ ಸಲೂನ್, ಆರ್ಯುವೇದಿಕ್ ಸೆಂಟರ್, ಸ್ಕಿಲ್ ಗೇಮ್ ಸೆಂಟರ್‍ಗಳ ಅಸಲಿ ಬಣ್ಣ ಬಯಲು ಮಾಡಿದ್ದಾರೆ. ಗಂಡಸರಿಗೆ ಹೆಣ್ಮಕ್ಕಳಿಂದ ಮಸಾಜ್ ಮಾಡಿಸುವ ದಂಧೆಯನ್ನು ಬಯಲು ಮಾಡಿದ್ದಾರೆ.

    ಮೇಯರ್ ದಾಳಿ ಮಾಡಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಅರೆಬೆತ್ತಲಾಗಿದ್ದ ಕೆಲ ಗ್ರಾಹಕರು ತಮ್ಮ ಕೈಗೆ ಸಿಕ್ಕ ಬಟ್ಟೆಯಿಂದ ಮಾನ ಮುಚ್ಚಿಕೊಂಡು ಓಟ ಕಿತ್ತಿದ್ದಾರೆ.

    ಕಳೆದ ವಾರವಷ್ಟೇ ಬಡ ಮಹಿಳೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದ್ದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಇದೀಗ ಮತ್ತೆ ಮುಂದುವರೆದು ನಗರದಲ್ಲಿ ನಡೆಯುತ್ತಿರೋ ಅಡ್ಡ ಕಸುಬಿದಾರರ ಬೆವರಿಳಿಸಿದ್ದಾರೆ. ಮಹಾನಗರದ ಜ್ಯೋತಿ, ಬಿಜೈ ಹಾಗೂ ಬಲ್ಮಠದಲ್ಲಿ ನಡೆಯುತ್ತಿರೋ ನಾಲ್ಕು ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ ಬೀಗ ಜಡೆದಿದ್ದಾರೆ. ಅದ್ಯಾವುದೋ ಊರಿಂದ ಬಂದು ತೀಟೆ ತೀರಿಸಿಕೊಳ್ಳೋದಕ್ಕಾಗಿ ಬೆತ್ತಲಾಗೋ ಮಂದಿಯ ಕಚ್ಡಾತನ ಮೇಯರ್ ದಾಳಿ ವೇಳೆ ಬಟಾಬಯಲಾಗಿದೆ.

    ಮಂಗಳೂರು ಹುಡುಗಿಯರನ್ನು ನಾನು ಇರೋ ತನಕ ದಂಧೆಗೆ ಇಳಿಸಲಾರೆ. ಇದು ಮುಂಬೈಯಲ್ಲ ಮಂಗಳೂರು ಅಂತಾ ಮೇಯರ್ ಕವಿತಾ ಸನಿಲ್ ಅಕ್ರಮ ದಂಧೆಕೋರರ ವಿರುದ್ಧ ಗುಡುಗಿದ್ದಾರೆ. ಅಕ್ರಮಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗಕೊಡಲ್ಲ ಅಂತ ಹೇಳಿದ್ದಾರೆ.

    ಫಳ್ನೀರ್ ರಸ್ತೆಯಲ್ಲಿರೋ ಮೆಂಬರ್ಸ್ ಲಾಂಜ್ ಅನ್ನೋ ಸ್ಕಿಲ್ ಗೇಮ್‍ವೊಂದಕ್ಕೆ ದಾಳಿ ಮಾಡಿದಾಗ ಒಂದೊಮ್ಮೆ ಸ್ಕಿಲ್‍ಗೇಮ್ ಮಾಲಕಿ ಮೇಯರ್ ವಿರುದ್ಧ ಅಬ್ಬರಿಸೋದಕ್ಕೆ ಶುರುವಿಟ್ಟಿದ್ದಾಳೆ. ನಾವು ಪೊಲೀಸರಿಗೆ ಮಾಮೂಲು ಕೊಡ್ತೀವಿ ಅಂತ ಆರೊಪ ಬೇರೆ ಮಾಡ್ತಾಳೆ. ಇಷ್ಟೆಲ್ಲ ಕೇಳ್ತದ್ದಂತೆಯೇ ಮೇಯರ್ ನೇರ ಪೊಲೀಸ್ ಕಮೀಷನರ್ ರವರಿಗೆ ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ. ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ಪೊಲೀಸ್ರು ಬಂದ್ರು ನಾನು ಬೀಗ ಹಾಕಲ್ಲ ಅಂತ ಸ್ಕಿಲ್ ಗೇಮ್ ಮಾಲಕಿ ಹಠಹಿಡಿದಿದ್ದಾಳೆ. ತದನಂತರ ಮಹಿಳಾ ಪೊಲೀಸರನ್ನು ಕರೆಸಿ ಆಕೆಯನ್ನು ವಶಪಡಿಸಿಕೊಂಡ ಘಟನೆಯೂ ನಡೆಯಿತು. ಈ ಹಿಂದೆ ಇದೇ ಸ್ಕಿಲ್ ಗೇಮ್ ಅಡ್ಡೆಗೆ ದಾಳಿ ನಡೆಸಿದಾಗ ಪೊಲೀಸ್ ದಾಳಿ ವಿರುದ್ಧ ಹೈಕೋರ್ಟ್ ನೀಡಿರೋ ತಡೆಯಾಜ್ಞೆಯ ಅಸ್ತ್ರ ಪ್ರಯೋಗಿಸಿದ್ದಳು. ಆ ಕಾರಣಕ್ಕಾಗಿ ನನಗೆ ನಿಮ್ ಟ್ರೇಡ್ ಲೈಸೆನ್ಸ್ ಅಗತ್ಯನೇ ಇಲ್ಲ ಅಂತ ಪಾಲಿಕೆ ಅಧಿಕಾರಿಗಳಿಗೆ ಸ್ಕಿಲ್ ಗೇಮ್ ಮಾಲಕಿ ಸುಜಿತಾ ರೈ ಸವಾಲು ಹಾಕಿದ್ಲು.

    ಮೇಯರ್ ರೈಡ್ ವೇಳೆ ಮುಕ್ಕಾಲು ನಗ್ನ ಸ್ಥಿತಿಯಲ್ಲಿದ್ದವರು ತುಂಡು ಬಟ್ಟೆ ಸಿಕ್ರೆ ಸಾಕು ಅಂತ ಎದ್ದು ಬಿದ್ದು ಓಡಿದ್ರು. ಚಡ್ಡಿಯಲ್ಲಿ ಮಲಗಿದ್ದವರಿಗೆ, ಎಣ್ಣೆ ಹಾಕಿ ಮಸಾಜ್ ಮಾಡೋ ಬಿಸ್ನೆಸ್ ಮಾಡೋರಿಗೆ ಸರಿಯಾಗಿ ಕವಿತಾ ಮೇಡಮ್ ಬೆವರು ಇಳಿಸಿದ್ರು.

    ಮಂಗಳೂರು ಮಹಾನಗರದೊಳಗೆ ಬೇರುಬಿಟ್ಟಿರೋ ಮಸಾಜ್ ಪಾರ್ಲರ್, ಸ್ಕಿಲ್‍ಗೇಮ್ ಅಡ್ಡೆಗಳಿಗೆ ಅಂಕುಶ ಹಾಕಲು ಲೇಡಿ ಮೇಯರ್ ಟೊಂಕ ಕಟ್ಟಿ ನಿಂತಿದ್ದಾರೆ. ಪೊಲೀಸರು ಮಾಡ್ಬೇಕಾಗಿದ್ದ ಕೆಲಸವನ್ನು ಸಾರ್ವಜನಿಕರ ಮಾಹಿತಿ ಆಧರಿಸಿ ತಾನೇ ಪಾಲಿಕೆ ಅಧಿಕಾರಿಗಳ ಜೊತೆಗೂಡಿ ಮಡೋದಕ್ಕೆ ಶುರುವಿಟ್ಟಿದ್ದಾರೆ. ಈ ಮೂಲಕ ಮೆಯರ್ ಕವಿತಾ ಸನಿಲ್ ಕಡಲತಡಿಯಲ್ಲಿದ್ದು ಕಚ್ಡಾ ದಂಧೆಗೆ ಇಳಿಯೋ ಮಂದಿಗೆ ಸಿಂಹಸ್ವಪ್ನರಾಗ ತೊಡಗಿರುವುದು ಸುಳ್ಳಲ್ಲ.