Tag: ಪೊಲಿಸ್ ಆಯುಕ್ತ

  • ಕುವೆಂಪು ಬಗ್ಗೆ ಅವಹೇಳನ – ರೋಹಿತ್ ಚಕ್ರತೀರ್ಥ ವಿರುದ್ಧ ದೂರು

    ಕುವೆಂಪು ಬಗ್ಗೆ ಅವಹೇಳನ – ರೋಹಿತ್ ಚಕ್ರತೀರ್ಥ ವಿರುದ್ಧ ದೂರು

    ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಲಾಗಿದೆ ಹಾಗೂ ನಾಡಗೀತೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

    ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ ಅಕಾಶೆ ಕಾರ್ಕಳ ವಿರುದ್ಧ ವಕೀಲ ಎ.ಪಿ.ರಂಗನಾಥ್, ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದಾರೆ. ಜೊತೆಗೆ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಕೆಡವಿ ನಿರ್ಮಾಣವಾದ ಒಂದೇ ಒಂದು ಮಸೀದಿಯನ್ನೂ ಬಿಡೋದಿಲ್ಲ: ಈಶ್ವರಪ್ಪ

    ROHIT CHAKRATHEERTHA

    ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲಾತಾಣದಲ್ಲಿ ಹಾಕಲಾಗಿತ್ತು. ಅಲ್ಲದೆ ನಾಡಗೀತೆಗೂ ಅಪಮಾನ ಮಾಡಲಾಗಿದೆ. ಲಕ್ಷ್ಮಣ ಎಂಬವರು ಕುವೆಂಪು ಬಗ್ಗೆ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಸಮಾಜ ಸ್ವಾಸ್ಥ್ಯ ಕದಡುವ ಪ್ರಕರಣದ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರಿಗೆ ದೂರು ನೀಡಲಾಗಿದೆ.

  • ಕಮಿಷನರ್ ಬುಲೆಟ್ ಬೈಕ್ ಓಡಿಸಿದ ವಿಡಿಯೋ ವೈರಲ್

    ಕಮಿಷನರ್ ಬುಲೆಟ್ ಬೈಕ್ ಓಡಿಸಿದ ವಿಡಿಯೋ ವೈರಲ್

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬುಲೆಟ್ ಓಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    650 ಎಂಜಿನ್ ಸಾಮರ್ಥ್ಯದ ಹಿಮಾಲಯನ್ ಬುಲೆಟ್ ಬೈಕನ್ನು ಆಯುಕ್ತರು ಓಡಿಸಿದ್ದಾರೆ. ಕಮಿಷನರ್ ಹಿಂಬದಿಯಲ್ಲಿ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ ಸಹ ಕುಳಿತಿದ್ದಾರೆ. ಬುಲೆಟ್ ಬೈಕ್ ಓಡಿಸಿ ಒಂದೊಳ್ಳೆಯ ರೈಡ್ ಅಂತ ಕಮಿಷನರ್ ಹೇಳಿದ್ದಾರೆ.

    ಕೊ ರೈಡರ್ ರವಿಕಾಂತೇಗೌಡ ಜೊತೆ ಬೈಕ್ ರೈಡ್ ಎಂದಿರುವ ಕಮಿಷನರ್, ತಲೆಗೆ ಹೆಲ್ಮೆಟ್ ಮತ್ತು ಕೈ ಕಾಲಿಗೆ ಸೇಫ್ಟಿ ಗಾರ್ಡ್ ಧರಿಸಿ ಬೈಕ್ ಚಾಲನೆ ಮಾಡಿದ್ದಾರೆ. ಅಲ್ಲದೇ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಮಹಿಳೆಯರ ಸೇಫ್ಟಿಗಾಗಿ ಬೈಕ್ ರ‍್ಯಾಲಿ ವೇಳೆ ಬುಲೆಟ್ ಓಡಿಸಲಾಗಿದ್ದು, ಮೂರು ದಿನಗಳ ಹಿಂದೆ ಚಾಮರಾಜಪೇಟೆಯ ಸಿಎಆರ್ ಗ್ರೌಂಡ್ ನಿಂದ 20ಕ್ಕೂ ಹೆಚ್ಚು ಮಹಿಳಾ ಸಬ್ ಇನ್ಸ್ ಪೆಕ್ಟರ್ ಗಳು ಬೈಕ್ ರ‍್ಯಾಲಿ ಮಾಡಿದರು. ಮಹಿಳೆಯರ ಸೇಫ್ಟಿಗಾಗಿ ರ‍್ಯಾಲಿ ಆಯೋಜನೆ ಮಾಡಲಾಗಿದ್ದು, ನಂದಿ ಹಿಲ್ಸ್ ವರೆಗೆ ಬೈಕ್ ರೈಡ್ ಮಾಡಲಾಗಿತ್ತು.