Tag: ಪೊಲಿಸರು

  • ಕಳ್ಳತನಕ್ಕೆ ಬಂದವರು ಕ್ಯಾಮೆರಾಗೆ ಪದೇ ಪದೇ ಚುಂಬಿಸಿದ್ರು – ಬೈಕ್ ಕಳ್ಳರನ್ನು ಪತ್ತೆ ಹಚ್ಚಿ

    ಕಳ್ಳತನಕ್ಕೆ ಬಂದವರು ಕ್ಯಾಮೆರಾಗೆ ಪದೇ ಪದೇ ಚುಂಬಿಸಿದ್ರು – ಬೈಕ್ ಕಳ್ಳರನ್ನು ಪತ್ತೆ ಹಚ್ಚಿ

    ಚೆನ್ನೈ: ದಿನೇ ದಿನೇ ಎಲ್ಲೆಡೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕಳ್ಳರನ್ನು ಪತ್ತೆ ಹಚ್ಚಲು ಸಲುವಾಗಿ ಹಲವಾರು ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ನಡುವೆ ಕಳ್ಳತನ ಮಾಡಲು ಬಂದಿದದ್ದ ಖತರ್ನಾಕ್ ಖದೀಮರು ಸಿಸಿ ಕ್ಯಾಮೆರಾಗೆ ಚುಂಬಿಸಿದ್ದು, ಇದೀಗ ಈ ವೀಡಿಯೋ ಮೂಲಕ ಕಳ್ಳರನ್ನು ಪತ್ತೆ ಹಚ್ಚುವಂತೆ ಸ್ಥಳೀಯ ನಿವಾಸಿಗಳು ಪೊಲೀಸರ ಮೊರೆ ಹೋಗಿದ್ದಾರೆ.

    ಹೌದು, ತಮಿಳುನಾಡಿನ ಚೆನ್ನೈನ ರಾಮ್ ನಗರದ ನಿವಾಸಿಗಳು ತಮ್ಮ ಅಪಾರ್ಟ್‍ಮೆಂಟ್‍ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗೆ ಮೂವರು ವ್ಯಕ್ತಿಗಳು ಚುಂಬಿಸಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ – ವ್ಯಕ್ತಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ

    ಈ ಪ್ರದೇಶದಲ್ಲಿರುವ ಅಪಾರ್ಟ್‍ಮೆಂಟ್‍ಗಳನ್ನೇ ಕಳ್ಳತನ ಮಾಡಲು ದುಷ್ಕರ್ಮಿಗಳು ಟಾರ್ಗೆಟ್ ಮಾಡಿಕೊಂಡಿದ್ದು, ಕಳ್ಳರ ಭೀತಿಯಿಂದ ಇಲ್ಲಿನ ನಿವಾಸಿಗಳು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಸೋಮವಾರ ಅಪಾರ್ಟ್‍ಮೆಂಟ್ ಬಳಿ ನಿಲ್ಲಿಸಿದ್ದ ತಮ್ಮ ವಾಹನ ಕಳ್ಳತನವಾಗಿರುವ ಬಗ್ಗೆ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

    ನಂತರ ಈ ಕುರಿತಂತೆ ತನಿಖೆ ಆರಂಭಿಸಿದ ಪೊಲೀಸರು ರಾಮ್ ನಗರದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ ಮೂವರು ಖದೀಮರು ಕ್ಯಾಮೆರಾಗೆ ಚುಂಬಿಸುತ್ತಿರುವುದನ್ನು ನೋಡಿದ್ದಾರೆ.ಇದನ್ನೂ ಓದಿ: ಗಣೇಶೋತ್ಸವ ಆಚರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಜಮೀರ್‌ಗೆ ಶ್ರೀರಾಮ ಸೇನೆ ಸವಾಲ್‌

    ಈ ವೀಡಿಯೋವನ್ನು ತುಳಸಿ ರಾಜೇಶ್ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಕಳ್ಳರನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಪೊಲೀಸರು ಮತ್ತು ಸಾರ್ವಜನಿಕರನ್ನು ಮನವಿ ಮಾಡಿದ್ದಾರೆ. ವೀಡಿಯೋದಲ್ಲಿ ಮೂವರು ವ್ಯಕ್ತಿಗಳು ಕಾಂಪೌಂಡ್ ಗೋಡೆಯ ಮೇಲೆ ನಡೆದುಕೊಂಡು ಬಂದು ಕ್ಯಾಮೆರಾ ಲೆನ್ಸ್‌ಗೆ ಪದೇ, ಪದೇ ಚುಂಬಿಸಿರುದನ್ನು ಕಾಣಬಹುದಾಗಿದೆ. 39 ಸೆಕೆಂಡುಗಳ ವೀಡಿಯೊ ವೈರಲ್ ಆದ ನಂತರ, ಚೆನ್ನೈ ಪೊಲೀಸರು ಘಟನೆ ಸಂಬಂಧ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೋಡೆ ಕುಸಿದು ಕಾರ್ಮಿಕ ಸಾವು- ಓರ್ವ ಗಂಭೀರ

    ಗೋಡೆ ಕುಸಿದು ಕಾರ್ಮಿಕ ಸಾವು- ಓರ್ವ ಗಂಭೀರ

    ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ.

    ಹುಚ್ಚಪ್ಪ(35) ಸ್ಥಳದಲ್ಲೇ ಸಾವು ಕಂಡ ಕಾರ್ಮಿಕನಾಗಿದ್ದು, ಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಕಾರ್ಮಿಕನನ್ನು ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ಇಂದು ಸದಾಶಿವಘಡದ ತುಳಸಿ ಬಾಯಿ ಅವರ ಮನೆಯ ದುರಸ್ತಿ ಕಾರ್ಯ ಮಾಡಲು ಕಾರ್ಮಿಕರು ತೆರಳಿದ್ದರು. ಈ ವೇಳೆ ಗೋಡೆ ಕೆಡವುವಾಗ ಘಟನೆ ನಡೆದಿದೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪರಿಚಿತ ವಾಹನ ಡಿಕ್ಕಿ- ಇಬ್ಬರು ಬೈಕ್ ಸವಾರರು ದಾರುಣ ಸಾವು

    ಅಪರಿಚಿತ ವಾಹನ ಡಿಕ್ಕಿ- ಇಬ್ಬರು ಬೈಕ್ ಸವಾರರು ದಾರುಣ ಸಾವು

    ಧಾರವಾಡ: ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ತಪೋವನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಇಬ್ಬರನ್ನು ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಎಂದು ತಿಮ್ಮಣ್ಣ ಮುರಕಟ್ಟಿ (31) ಹಾಗೂ ಗುರುಸಿದ್ದ ದಾಸನಕೊಪ್ಪ ಎಂದು ಗುರುತಿಸಲಾಗಿದೆ. ಇಬ್ಬರು ಸೇರಿ ಮಾವಿನಕಾಯಿ ಮಾರಾಟದ ಹಣ ತರಲು ಕೆಲಗೇರಿಗೆ ಹೋಗಿದ್ದರು. ಈ ವೇಳೆ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಒರ್ವನ ದೇಹ ಛಿದ್ರವಾಗಿದೆ. ಬೆಳಗಿನ ಜಾವವೇ ಈ ಘಟನೆ ನಡೆದಿದ್ದು, ಸದ್ಯ ಪರಾರಿಯಾದ ವಾಹನ ಹಿಡಿಯಲು ಪೊಲೀಸರು ಮಾಹಿತಿ ಕಲೆ ಹಾಕುತಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರು

    ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರು

    ಕಲಬುರಗಿ: ದೇವಸ್ಥಾನದ ಒಳಗೆ ನುಗ್ಗಿ ಖದೀಮರು ಹಣದ ಹುಂಡಿಯನ್ನೇ ಹೊತ್ತೊಯ್ದಿರುವ ಘಟನೆ ನಡೆದಿದೆ.

    ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಹಣದ ಹುಂಡಿಯನ್ನು ಖದೀಮರು ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವಸ್ಥಾನದ ಒಳಗಿದ್ದ ಹಣದ ಹುಂಡಿಯನ್ನು ಕೊರೊನಾ ಹಿನ್ನಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಇಡಲಾಗಿತ್ತು. ಹೀಗಾಗಿ ಹುಂಡಿಯನ್ನು ಹೊರ ತರಲು ಕಳ್ಳರಿಗೆ ಅನುಕೂಲವಾಗಿದ್ದು, ಹೊತ್ತೊಯ್ದಿದ್ದಾರೆ.

    ದೇವಸ್ಥಾನದ ಹಿಂಭಾಗಕ್ಕೆ ಹುಂಡಿಯನ್ನ ಹೊತ್ತೊಯ್ದು, ಖದೀಮರು ಹಣ ಕಳ್ಳತನ ಮಾಡಿದ್ದು, ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಚಿತ್ತಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಕ್ ಪರ ಪೋಸ್ಟ್- ಹತ್ತು ದಿನವಾದರೂ ಪೇದೆಯನ್ನು ಬಂಧಿಸದ ಪೊಲೀಸರು

    ಪಾಕ್ ಪರ ಪೋಸ್ಟ್- ಹತ್ತು ದಿನವಾದರೂ ಪೇದೆಯನ್ನು ಬಂಧಿಸದ ಪೊಲೀಸರು

    – ಪಾಕ್ ಪೇಜ್ ಶೇರ್ ಮಾಡಿದ್ದ ಪೇದೆ

    ದಾವಣಗೆರೆ: ಪಾಕಿಸ್ತಾನದ ಪೇಜ್ ಹಂಚಿಕೊಂಡಿದ್ದ ಪೊಲೀಸ್ ಕಾನ್‍ಸ್ಟೇಬಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಡಿವೈಎಸ್‍ಪಿ ಗ್ರೇಡ್ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ವಹಿಸಲಾಗಿತ್ತು. ಆದರೆ ಹತ್ತು ದಿನವಾದರೂ ಪೊಲೀಸರು ಪೇದೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

    ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಪೇದೆ ಪಾಕಿಸ್ತಾನದ ಪೇಜ್ ಶೇರ್ ಮಾಡಿದ್ದರು. 2008ರ ಪೊಲೀಸ್ ಬ್ಯಾಚ್ ವಾಟ್ಸಪ್ ಗ್ರೂಪ್ ನಲ್ಲಿ ಸನಾವುಲ್ಲಾ ಶೇರ್ ಮಾಡಿದ್ದರು. ದೇಶದ್ರೋಹದ ಕೇಸ್ ಹಾಕಿ ಸೇವೆಯಿಂದ ಅಮಾನತು ಮಾಡಬೇಕೆಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ್ದರು. ಪೊಲೀಸರು ಹತ್ತು ದಿನವಾದರೂ ಕಾನ್‍ಸ್ಟೇಬಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಈ ವೆರೆಗ ಅವರು ಪತ್ತೆಯಾಗಿಲ್ಲ.

    ಆಗಸ್ಟ್ 20ರಂದು ಪ್ರಕರಣ ಬಯಲಿಗೆ ಬಂದಿತ್ತು. ಇಷ್ಟು ದಿನವಾದರೂ ಕಾನ್‍ಸ್ಟೇಬಲ್ ಸನಾವುಲ್ಲಾ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಕರಣ ಬಯಲಿಗೆ ಬಂದ ನಂತರ ಸನಾವುಲ್ಲಾ ತಲೆಮರೆಸಿಕೊಂಡಿದ್ದಾರೆ. ಡಿವೈಎಸ್‍ಪಿ ಗ್ರೇಡ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲು ಎಸ್‍ಪಿ ಹನುಮಂತರಾಯ ಅದೇಶಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.