Tag: ಪೊರ್ಕಿ ಸಿನಿಮಾ

  • Nagara Panchami: ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಪ್ರಣೀತಾ ಸುಭಾಷ್

    Nagara Panchami: ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಪ್ರಣೀತಾ ಸುಭಾಷ್

    ಜಿಲ್ಲೆಯ ವಿವಿಧ ಕಡೆಯಲ್ಲಿ ಇಂದು (ಆಗಸ್ಟ್ 21) ನಾಗರ ಪಂಚಮಿ ಹಬ್ಬವನ್ನ (Nagara Panchami) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೀಗ ಸ್ಯಾಂಡಲ್‌ವುಡ್ ನಟಿ ಪ್ರಣೀತಾ ಸುಭಾಷ್ (Pranitha Subhash) ಕೂಡ ನಾಗರಪಂಚಮಿ ಹಬ್ಬವನ್ನು ಆಚರಿಸಿದ್ದಾರೆ. ನಾಗದೇವರ ಆಚರಣೆಯ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ನಟಿ ಪ್ರಣೀತಾಗೆ ಹಿಂದೂ ಸಂಪ್ರದಾಯ ಮತ್ತು ಹಬ್ಬಗಳ ಬಗ್ಗೆ ವಿಶೇಷ ಒಲವಿದೆ. ಇದೀಗ ನಾಗರಪಂಚಮಿ ಹಬ್ಬವನ್ನ ಕುಟುಂಬದ ಜೊತೆ ಆಚರಿಸಿದ್ದಾರೆ. ನಾಗದೇವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಅತ್ತೆಯೊಂದಿಗೆ ಪ್ರಣೀತಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

    ಮದುವೆಯಾದ ಮೇಲೆ ನಟಿ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಮಾಲಿವುಡ್ ಸಿನಿಮಾ ಮೂಲಕ ನಟಿ ಕಮ್ ಬ್ಯಾಕ್ ಆಗಿದ್ದಾರೆ. ನಟ ದಿಲೀಪ್‌ಗೆ ಪ್ರಣೀತಾ ನಾಯಕಿಯಾಗಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನ ನಟಿ ಕೇರಳದಲ್ಲಿ ಮುಗಿಸಿಕೊಟ್ಟಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:ನ್ಯೂಯಾರ್ಕ್ ವೆಕೇಷನ್ ಮೂಡ್‌ನಲ್ಲಿದ್ದಾರೆ ಸಮಂತಾ

    ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ರಾಜು (Nithin Raju) ಜೊತೆ ಹಸೆಮಣೆ ಏರಿದ್ದ ಚೆಲುವೆ ಪ್ರಣಿತಾ ಈಗ ಮಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಿನಿಮಾ ಕೂಡ ಮಾಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೀಮನ ಅಮಾವ್ಯಾಸೆಗೆ ಪತಿಯ ಪಾದ ಪೂಜೆ ಮಾಡಿದ ಪ್ರಣಿತಾ

    ಭೀಮನ ಅಮಾವ್ಯಾಸೆಗೆ ಪತಿಯ ಪಾದ ಪೂಜೆ ಮಾಡಿದ ಪ್ರಣಿತಾ

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ (Pranitha) ಅವರು ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಮದುವೆಯಾಗಿ, ಮಗುಯಾದ್ಮೇಲೆ ಮತ್ತೆ ಮಲಯಾಳಂ ಸಿನಿಮಾ ಮೂಲಕ ‘ಪೊರ್ಕಿ’ (Porki) ಬ್ಯೂಟಿ ನಟನೆಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ಶುಭ ಸೋಮವಾರ ಇಂದು (ಜುಲೈ 17) ರಂದು ಭೀಮನ ಅಮಾವ್ಯಾಸೆಗೆ ಪ್ರಣಿತಾ, ಪತಿ ಪಾದಾ ಪೂಜೆ ಮಾಡಿದ್ದಾರೆ. ಪೂಜೆಯ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್ ಮಾಡಿದ್ದಾರೆ.

    ಕನ್ನಡ ಸಿನಿಮಾ ಮೂಲಕ ಸಿನಿ ರಂಗಕ್ಕ ಎಂಟ್ರಿ ಕೊಟ್ಟ ಪ್ರಣಿತಾ, ಹಿಂದಿ,ತೆಲುಗು, ತಮಿಳು ಸೇರಿದಂತೆ ಸ್ಟಾರ್ ನಟರ ಜೊತೆ ಪ್ರಣಿತಾ ನಟಿಸಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಉದ್ಯಮಿ ನಿತಿನ್ ಜೊತೆ ಲಾಕ್‌ಡೌನ್‌ನಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು ದಾಂಪತ್ಯ (Wedding) ಜೀವನಕ್ಕೆ ನಟಿ ಕಾಲಿಟ್ಟರು. ಇವರ ಪ್ರೀತಿಗೆ ಸಾಕ್ಷಿಯಾಗಿ ಈಗ ಮುದ್ದಾದ ಮಗಳಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಐಕಾನ್ ಸ್ಟಾರ್ ಪುತ್ರಿ?

    ಇಂದು ಬೆಳಿಗ್ಗೆ ಭೀಮನ ಅಮಾವ್ಯಾಸೆಯಂದು(Bheemana Amavasye) ಪತಿ ನಿತಿನ್‌ಗೆ(Nithin) ಪಾದ ಪೂಜೆ ಮಾಡಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಸನಾತನ ಧರ್ಮದಲ್ಲಿ ಭೀಮನ ಅಮಾವ್ಯಾಸೆಗೆ ಹೆಚ್ಚಿನ ಮಹತ್ವವಿದೆ ಎಂದು ಎಂದಿದ್ದಾರೆ. ದೇವಿಯರನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಇದು ಒಂದಾಗಿದೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ‘ಪೊರ್ಕಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ಪ್ರಣಿತಾ, ಜರಾಸಂದ, ಮಿ.420, ಅಂಗಾರಕ ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ. ಬಳಿಕ ತೆಲುಗು- ತಮಿಳು ಸಿನಿಮಾರಂಗದಲ್ಲಿ ನಟಿ ಬ್ಯುಸಿಯಾದರು. ಮದುವೆಗೂ ಮುನ್ನ ಬಾಲಿವುಡ್‌ನ ಹಂಗಾಮ 2, ಭುಜ್ ಸಿನಿಮಾದಲ್ಲಿ ಪೊರ್ಕಿ ನಾಯಕಿ ಅಭಿನಯಿಸಿದ್ದರು.

    ಇದೀಗ ಪ್ರಣಿತಾ, ನಟ ದಿಲೀಪ್‌ಗೆ ನಾಯಕಿಯಾಗುವ ಮೂಲಕ ಮಾಲಿವುಡ್‌ಗೆ (Mollywood) ಎಂಟ್ರಿ ಕೊಟ್ಟಿದ್ದಾರೆ. ದಿಲೀಪ್‌ಗೆ ಪ್ರಣಿತಾ ಮತ್ತು ತಮನ್ನಾ ನಾಯಕಿಯರಾಗಿದ್ದಾರೆ. ಪ್ರಣಿತಾ ಭಾಗದ ಚಿತ್ರೀಕರಣ ಕೇರಳದಲ್ಲಿ ನಡೆದಿದೆ. ಶೂಟಿಂಗ್‌ಗೂ ಹಾಜರಾಗಿ ಬಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

    ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

    ನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಹಸಿರು ಬಣ್ಣದ ಗೌನ್ ಧರಿಸಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಚಿಟ್ಟೆಯಂತೆ ಪೊರ್ಕಿ ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ಎಂ.ಡಿ ಶ್ರೀಧರ್ ನಿರ್ದೇಶನದ ‘ಪೊರ್ಕಿ’ (Porki) ಸಿನಿಮಾ ಮೂಲಕ ಪ್ರಣಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡರು. ಇದಾದ ಬಳಿಕ ಟಾಲಿವುಡ್‌ಗೆ ಹಾರಿದ್ರು. ತೆಲುಗು ಸೇರಿದಂತೆ ಹಿಂದಿ ಚಿತ್ರದಲ್ಲೂ ನಟಿಸಿ ಬಂದರು. ಎಂದೂ ಕನ್ನಡದ ಮೇಲೆ ಕನ್ನಡ ಸಿನಿಮಾದ ಮೇಲಿನ ಪ್ರೀತಿ ಪ್ರಣಿತಾಗೆ ಕಮ್ಮಿಯಾಗಿಲ್ಲ.

    ಸೌತ್‌ನಲ್ಲಿ ಮಹೇಶ್ ಬಾಬು, ಸೂರ್ಯ, ಕಾರ್ತಿ, ಸಿದ್ಧಾರ್ಥ್, ಜ್ಯೂ.ಎನ್‌ಟಿಆರ್ ಜೊತೆ ಪ್ರಣಿತಾ ತೆರೆಹಂಚಿಕೊಂಡರು. ಬಾಲಿವುಡ್‌ನಲ್ಲಿ ಶಿಲ್ಪಾ ಶೆಟ್ಟಿ ಜೊತೆ ಪ್ರಣಿತಾ ಮುಖ್ಯಭೂಮಿಕೆಯಲ್ಲಿ ನಟಿಸಿದರು. ಮದುವೆಯ ಬಳಿಕ ನಟನೆಗೆ ವಿರಾಮ ಹೇಳಿದ್ದ ನಟಿ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

    2021ರಲ್ಲಿ ಉದ್ಯಮಿ ನಿತಿನ್(Nithin)  ಜೊತೆ ಪ್ರಣಿತಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ರು. ಪುತ್ರಿ ಅರ್ನಾ (Arna) ಪಾಲನೆಯಲ್ಲಿ ಬ್ಯುಸಿಯಾದರು. ನಟನೆಯಿಂದ ಅಂತರ ಕಾಯ್ದುಕೊಂಡರು. ಈಗ ಸಿನಿಮಾ- ವೈಯಕ್ತಿಕ ಜೀವನ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ.

    ಮಲಯಾಳಂ ಖ್ಯಾತ ನಟ ದಿಲೀಪ್‌ಗೆ (Dileep) ನಾಯಕಿಯಾಗಿ ಪ್ರಣಿತಾ ಮಾಲಿವುಡ್‌ಗೆ (Mollywood) ಲಗ್ಗೆ ಇಟ್ಟಿದ್ದಾರೆ. ದಿಲೀಪ್‌ಗೆ ಪ್ರಣಿತಾ- ತಮನ್ನಾ ಭಾಟಿಯಾ ಜೊತೆಯಾಗಿದ್ದಾರೆ. ಈಗಾಗಲೇ ಕೇರಳದಲ್ಲಿ ಪ್ರಣಿತಾ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇನ್ನೂ ಮದುವೆಯಾಗಿ ಮಕ್ಕಳಾದ್ಮೇಲೆ ಸಿನಿಮಾರಂಗಲ್ಲಿ ನಾಯಕಿಯರು ಆಕ್ಟೀವ್ ಆಗೋದು ತುಂಬಾ ಕಮ್ಮಿ. ಆದರೆ ಪ್ರಣಿತಾ ಮಗುವಾದ್ಮೇಲೆ ಮತ್ತಷ್ಟು ಬೋಲ್ಡ್ & ಹಾಟ್ ಆಗಿದ್ದಾರೆ. ಫಿಟ್‌ನೆಸ್ ಕಡೆ ಗ್ಲಾಮರ್ ಕಡೆ ಮತ್ತಷ್ಟು ಗಮನ ವಹಿಸುತ್ತಿದ್ದಾರೆ. ಮಗಳ ಆರೈಕೆ, ಸಿನಿಮಾ ಕೆಲಸ ನಡುವೆ ನಟಿ ಪ್ರಣಿತಾ ನ್ಯೂ ಫೋಟೋಶೂಟ್ ಮಾಡಿಸಿದ್ದಾರೆ. ಹಸಿರು ಬಣ್ಣದ ಡ್ರೆಸ್ ಧರಿಸಿ, ಚಿಟ್ಟೆಯಂತೆ ಮಿಂಚಿದ್ದಾರೆ. ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

  • ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡ್ರನ್ ಡ್ರೆಸ್‌ಗೂ ಜೈ- ಪ್ರಣೀತಾ ಸುಭಾಷ್

    ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡ್ರನ್ ಡ್ರೆಸ್‌ಗೂ ಜೈ- ಪ್ರಣೀತಾ ಸುಭಾಷ್

    ನ್ನಡದ ‘ಪೊರ್ಕಿ’ (Porki) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಪ್ರಣೀತಾ ಸುಭಾಷ್ (Pranitha Subhash) ಅವರು ಮದುವೆ, ಮಗುವಾದ್ಮೇಲೆ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗಿದ್ದಾರೆ. ಸದಾ ಮಾಡ್ರನ್ ಡ್ರೆಸ್ ಮಿಂಚಿದ್ದ ನಟಿ, ಈಗ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಕನ್ನಡತಿ ಪ್ರಣೀತಾ, ಕನ್ನಡ, ತೆಲುಗು, ತಮಿಳು, ಬಾಲಿವುಡ್‌ನಲ್ಲೂ ನಾಯಕಿಯಾಗಿ ಶೈನ್ ಆಗಿದ್ದಾರೆ. ದಿಲೀಪ್‌ಗೆ ನಾಯಕಿಯಾಗುವ ಮೂಲಕ ಮಾಲಿವುಡ್ (Mollywood) ರಂಗಕ್ಕೂ ನಟಿ ಪ್ರಣೀತಾ ಕಾಲಿಟ್ಟಿದ್ದಾರೆ. ಕೇರಳದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಕಳೆದ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ಜೊತೆ ಪ್ರಣೀತಾ ಹಸೆಮಣೆ(Wedding)  ಏರಿದ್ದರು. ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಇದೀಗ ಮುದ್ದಾದ ಮಗಳಿದ್ದಾಳೆ. ಸಿನಿಮಾ- ಮಗಳ ಆರೈಕೆ ಎರಡನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ಹಾಗೆಯೇ ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಮುದ್ದಾದ ಮಗಳು ಜನಿಸಿದ ನಂತರ ಪ್ರಣೀತಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಆಗಾಗ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸುತ್ತಿರುತ್ತಾರೆ. ಇದೀಗ ಹಳದಿ ಬಣ್ಣದ ಸೀರೆಯುಟ್ಟು ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡ್ರನ್ ಡ್ರೆಸ್‌ಗೂ ಜೈ ಎಂದು ಮಿಂಚಿದ್ದಾರೆ. ಪ್ರಣೀತಾ ಅವತಾರ ನೋಡಿ ಸಂತೂರ್‌ ಮಮ್ಮಿ ಅಂತಾ ಫ್ಯಾನ್ಸ್‌ ಕಾಮೆಂಟ್‌ ಮಾಡ್ತಿದ್ದಾರೆ.

  • ದಂತದ ಗೊಂಬೆಯಂತೆ ಮಿಂಚಿದ ಪ್ರಣಿತಾ ಸುಭಾಷ್

    ದಂತದ ಗೊಂಬೆಯಂತೆ ಮಿಂಚಿದ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ (Pranitha Subhash) ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಚೆಂದದ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ದಂತದ ಗೊಂಬೆಯಂತೆ ಫೋಟೋಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Pranita Subhash (@pranitha.insta)

    `ಪೊರ್ಕಿ’ (Porki) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ನಟಿ ಪ್ರಣಿತಾ, ಬಹುಭಾಷಾ ನಾಯಕಿಯಾಗಿ ಮಿರ ಮಿರ ಅಂತಾ ಮಿಂಚಿದ್ದರು. ಕಳೆದ ವರ್ಷ ಬಹುಕಾಲದ ಗೆಳೆಯ ನಿತಿನ್ (Nitin) ಜೊತೆ ಹಸೆಮಣೆ ಏರಿದ್ದರು. ಈಗ ಮುದ್ದು ಮಗಳ ಎಂಟ್ರಿಯಾಗಿದೆ. ಮದುವೆ ಆಗಿ, ತಾಯಿಯಾಗಿದ್ದರೂ ಕೂಡ ನಟಿಯ ಗ್ಲಾಮರ್ ಒಂದಚೂರು ಕಮ್ಮಿಯಾಗಿಲ್ಲ. ಮದುವೆ ನಂತರ ಮತ್ತಷ್ಟು ಸುಂದರವಾಗಿ ನಟಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ವಸಿಷ್ಠನ ಮದುವೆ ವಿಚಾರ ಮಾತಾಡಬೇಡಿ ನೋವಾಗುತ್ತೆ ಎಂದ ಡಾಲಿ

     

    View this post on Instagram

     

    A post shared by Pranita Subhash (@pranitha.insta)

    ಇದೀಗ ಹೊಸ ಫೋಟೋಶೂಟ್ ಮೂಲಕ ನಟಿ ಪ್ರಣಿತಾ ಮಿಂಚಿದ್ದಾರೆ. ಬಳಕುವ ಬಳ್ಳಿಯಂತೆ ನಟಿ ಕಾಣಿಸಿಕೊಂಡಿದ್ದಾರೆ. ಆರೆಂಜ್ ಕಲರ್ ಟಾಪ್‌ನಲ್ಲಿ ಬಿಳಿ ಬಣ್ಣದ ಹೂವು ಹಿಡಿದು ದಂತದ ಗೊಂಬೆಯಂತೆ ಕಂಗೊಳಿಸಿದ್ದಾರೆ. ನಟಿಯ ಹೊಸ ಲುಕ್ ನೋಡಿರುವ ನೆಟ್ಟಿಗರು ಸಂತೂರ್ ಮಮ್ಮಿ ಎಂದು ಕಾಮೆಂಟ್ ಮಾಡ್ತಿದ್ದಾರೆ.

    ಇನ್ನೂ ಪ್ರಣಿತಾ ಸುಭಾಷ್ ನಟನೆಯ `ರಾಮನ ಅವತಾರ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್

    ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್

    ನ್ನಡ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಣೀತಾ ಸುಭಾಷ್, ಈಗ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು, ತಮ್ಮ ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ, ಈಗ ಬೇಬಿ ಶವರ್ ಸಮಾರಂಭದಲ್ಲಿ ಮಿಂಚಿದ್ದಾರೆ.

    ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪ್ರತಿಭಾವಂತ ನಟಿ ಪ್ರಣಿತಾ, ಬೇಡಿಕೆ ಇರುವಾಗಲೇ ಹಸೆಮಣೆ ಏರಿದ್ದರು. ಒಬ್ಬರನೊಬ್ಬರು ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ನಿತಿನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತ್ತೀಚೆಗಷ್ಟೇ ತಾವು ತಾಯಿಯಾಗಿರುವ ವಿಚಾರವನ್ನ ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು. ಈಗ ಬೇಬಿ ಶವರ್‌ನಲ್ಲಿ ಇದೀಗ ಪತಿ ಮತ್ತು ಸ್ನೇಹಿತರೊಂದಿಗೆ ಪ್ರಣೀತಾ ಮಿಂಚಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಇದೇನಿದು ಹೊಸ ಅವತಾರ- ಗೋಣಿ ಚೀಲವನ್ನೂ ಬಿಡದ ಉರ್ಫಿ ಜಾವೇದ್

    ಬೇಬಿ ಶವರ್‌ನಲ್ಲಿ ಸಖತ್ ಮುದ್ದಾಗಿ ಪ್ರಣಿತಾ ಕಾಣಿಸಿಕೊಂಡಿದ್ದಾರೆ. ಹೊಸ ಅತಿಥಿಯ ಆಗಮನಕ್ಕಾಗಿ ಕಾಯುತ್ತಿರುವ ನಟಿ ಪ್ರಣಿತಾ ಆಗಾಗ ಫೋಟೋಶೂಟ್ ಮಾಡಿಸುತ್ತಾ, ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಸದ್ಯ ಬೇಬಿ ಶವರ್ ಲುಕ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇನ್ನು ಪ್ರಣೀತಾ ಕಡೆಯದಾಗಿ ನಟಿಸಿದ ಸಿನಿಮಾ, ಬಾಲಿವುಡ್‌ನ `ಹಂಗಾಮ 2′ ಮತ್ತು `ಭುಜ್’ ದಿ ಪ್ರೈಡ್ ಆಫ್ ದಿ ಇಂಡಿಯಾ ಚಿತ್ರದಲ್ಲಿ ನಟಿಸಿದ್ದರು. ಮಗುವಿನ ಆಗಮನದ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಹೊಸ ಸಿನಿಮಾಗಳ ಮೂಲಕ ಪ್ರಣೀತಾ ಮಿಂಚಲಿದ್ದಾರೆ.‌