Tag: ಪೊನ್ನಣ್ಣ

  • ಕಾಂಗ್ರೆಸ್ ಶಾಸಕರು, ಸಂಸದರ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಪೊನ್ನಣ್ಣ

    ಕಾಂಗ್ರೆಸ್ ಶಾಸಕರು, ಸಂಸದರ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಪೊನ್ನಣ್ಣ

    ಬೆಂಗಳೂರು: ಕಾಂಗ್ರೆಸ್ ಶಾಸಕರು, ಸಂಸದರ ಮೇಲೆ ಇಡಿ ದಾಳಿ ಮಾಡಿರೋದು ರಾಜಕೀಯ ಪ್ರೇರಿತ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ (AS Ponnanna) ಇಡಿ ವಿರುದ್ಧ ಕಿಡಿಕಾರಿದ್ದಾರೆ.

    ಇಡಿ ದಾಳಿ (ED Raid) ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡಿ ಅವರು ವಾಲ್ಮೀಕಿ ಪ್ರಕರಣ ತನಿಖೆ ಮಾಡುತ್ತಿರುವುದೇ ಕಾನೂನುಬಾಹಿರ. ಇದೊಂದು ರಾಜಕೀಯ ಪ್ರೇರಿತ ದಾಳಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈಗಾಗಲೇ ವಾಲ್ಮೀಕಿ ಕೇಸ್‌ನಲ್ಲಿ ತನಿಖೆ ಮುಗಿದು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್ ಶೀಟ್ ವಿರುದ್ಧ ನಾಗೇಂದ್ರ ಕೋರ್ಟ್ ಮೊರೆ ಹೋಗಿದ್ದಾರೆ. ಈಗ ದಾಳಿ ಮಾಡಿರೋದು ನೋಡಿದ್ರೆ ಇಡಿ ಅಧಿಕಾರ ವ್ಯಾಪ್ತಿ ಏನು ಎಂದು ಪ್ರಶ್ನೆ ಮಾಡಬೇಕಾಗಿದೆ.ಇದೇನು ಮರು ತನಿಖೆನಾ? ಏನು ಗೊತ್ತಿಲ್ಲ. ಇದೊಂದು ರಾಜಕೀಯ ಪ್ರೇರಿತ ದಾಳಿ ಅಲ್ಲದೇ ಏನು ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ಹಗರಣದ 187 ಕೋಟಿ ಹಣ ಒಡವೆ ಅಂಗಡಿ, ಕಾರ್ ಶೋರೂಂ, ಬಾರ್‌ಗೆ ಹೋಗಿದೆ: ಸಿ.ಟಿ.ರವಿ ಆರೋಪ

    ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಇದನ್ನು ಸಹಿಸೋಕೆ ಆಗುತ್ತಿಲ್ಲ. ಹೀಗಾಗಿ ಇದೆಲ್ಲ ಮಾಡುತ್ತಿದ್ದಾರೆ. ಮಂಗಳವಾರ ಮುಡಾ ಕೇಸ್‌ನಲ್ಲಿ 100 ಕೋಟಿ ಜಪ್ತಿ ಎಂದು ರಿಲೀಸ್ ಮಾಡಿದ್ದಾರೆ. ಜನರನ್ನು ದಾರಿ ತಪ್ಪಿಸೋಕೆ ಇಡಿ ಹೀಗೆ ಮಾಡುತ್ತಿದೆ. ವಿಪಕ್ಷಕ್ಕೆ ಲಾಭ ಮಾಡಲು ಹೀಗೆ ಮಾಡಲಾಗುತ್ತಿದೆ. ಇದು ಖಂಡನೀಯ, ರಾಜಕೀಯ ಪ್ರೇರಿತ. ಇದನ್ನು ವಿರೋಧ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರನ್ನ ತೇಜೋವಧೆ ಮಾಡಲು ಇಡಿ ದಾಳಿ: ಅಶೋಕ್ ಪಟ್ಟಣ

  • ಬಿಜೆಪಿ ಕಾರ್ಯಕರ್ತನದ್ದು ಆತ್ಮಹತ್ಯೆಯಲ್ಲ, ಕೊಲೆ: ವಿಜಯೇಂದ್ರ ಆರೋಪ

    ಬಿಜೆಪಿ ಕಾರ್ಯಕರ್ತನದ್ದು ಆತ್ಮಹತ್ಯೆಯಲ್ಲ, ಕೊಲೆ: ವಿಜಯೇಂದ್ರ ಆರೋಪ

    ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ ಮಾಡಿದರು.

    ಬೆಂಗಳೂರಿನಲ್ಲಿ ಮಾತಾಡಿದ ವಿಜಯೇಂದ್ರ, ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗದ ವಿಚಾರಕ್ಕೆ ಕಿಡಿಕಾರಿದರು. ಅಧಿಕಾರದ ದರ್ಪದಿಂದ ಕಾಂಗ್ತೆಸ್‌ನವ್ರು ಹೇಳಿಕೆ ಕೊಡ್ತಿದ್ದಾರೆ. ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಆರೋಪಿಸಿದರು.

    ಇದರ ಹಿಂದೆ ಯಾರೆಲ್ಲ ದುಷ್ಟ ಶಕ್ತಿಗಳು ಇವೆ ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಕಾನೂನು ಹೋರಾಟ ಮಾಡ್ತೇವೆ. ಇವತ್ತು ಕಾನೂನು ತಜ್ಞರ ಜೊತೆ ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

  • ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್ – ಡಿವೈಎಸ್‌ಪಿ ಕಚೇರಿಗೆ ಬಿಜೆಪಿ ನಾಯಕರು ಮುತ್ತಿಗೆಗೆ ಯತ್ನ

    ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್ – ಡಿವೈಎಸ್‌ಪಿ ಕಚೇರಿಗೆ ಬಿಜೆಪಿ ನಾಯಕರು ಮುತ್ತಿಗೆಗೆ ಯತ್ನ

    – ವಿಜಯೇಂದ್ರ, ಪ್ರತಾಪ್ ಸಿಂಹ, ಯದುವೀರ್ ಒಡೆಯರ್ ಪೊಲೀಸ್ ವಶಕ್ಕೆ
    – ಕಾಂಗ್ರೆಸ್ ಶಾಸಕರ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ ಆಗ್ರಹ

    ಕೊಡಗು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಕೊಡಗಿನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

    ಶಾಸಕರಾದ ಪೊನ್ನಣ್ಣ, ಮಂಥರ್‌ಗೌಡ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಒತ್ತಾಯಿಸಿ ಕುಶಾಲನಗರ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಪ್ರೀತಂಗೌಡ ಭಾಗಿಯಾಗಿದ್ದರು. ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಲೇ ಬಾರದಾ? ಬಿಜೆಪಿ ಕಾರ್ಯಕರ್ತರು ಎದೆಗುಂದಬೇಡಿ. ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರಣಹೇಡಿ, ಕೊಲೆಗಡುಕ ಸರ್ಕಾರದ ವಿರುದ್ಧ ಹೋರಾಡಿ. ಸಿದ್ದರಾಮಯ್ಯ ಕೊಲೆಗಡುಕು ಮುಖ್ಯಮಂತ್ರಿ. 16 ಬಜೆಟ್ ಮಂಡಿಸಿದ ಸಿಎಂ ಅಂತೆ, ಇವರ ಯೋಗ್ಯತೆಗೆ. ಕೊಲೆಗಡುಕ ಸಿಎಂ ಕೊಲೆಗಡುಕರ ಬೆಂಬಲವಾಗಿ ನಿಂತಿದ್ದಾರೆ. ಪೊಲೀಸ್ ಇಲಾಖೆ ಆಡಳಿತ ಸರ್ಕಾರದ ಕೈಗೊಂಬೆ ಆಗಿದೆ. ಪೊಲೀಸ್ ಅಧಿಕಾರಿಗಳೇ ಬಹಳ ದಿನ ಕಾಂಗ್ರೆಸ್ ದರ್ಬಾರ್ ನಡೆಯಲ್ಲ. ಯೂನಿಫಾರ್ಮ್ಗೆ ಗೌರವ ಕೊಟ್ಟು ನಡೆದುಕೊಳ್ಳಿ. ಪೊಲೀಸರು ಕಾನೂನು ಪ್ರಕಾರ ನಡೆಯದೇ ಇದ್ದರೆ, ಪೊಲೀಸ್ ಠಾಣೆಗೆ ನುಗ್ಗಿ ಜನ ಬೆಂಕಿ ಹಚ್ಚುತ್ತಾರೆ ಹುಷಾರ್. ಅದಕ್ಕೆ ಪೊಲೀಸರೇ ಜವಾಬ್ದಾರರಾಗುತ್ತಾರೆ ಎಂದು ಗುಡುಗಿದರು.

    ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆ ಆಗಬೇಕು. ನಮಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕೋಣ. ಇದು ಭಂಡ ಸರ್ಕಾರ. ಪೊಲೀಸರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

    ಶಾಸಕರಾದ ಪೊನ್ನಣ್ಣ, ಮಂಥರ್‌ಗೌಡ ವಿರುದ್ಧ ಎಫ್‌ಐಆರ್ ದಾಖಲಾಗದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಮುಂದಾದರು. ಪ್ರತಿಭಟನಾ ಸ್ಥಳದಲ್ಲಿ ಮೂರು ಡಿಆರ್ ವಾಹನಗಳು ಬೀಡುಬಿಟ್ಟಿದ್ದವು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ಏರ್ಪಟ್ಟಿತು. ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

  • ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ, ನಮ್ಮ ಸಿಟ್ಟು ಜಾಸ್ತಿ ಮಾಡಬೇಡ: ಪ್ರತಾಪ್ ಸಿಂಹ ವಾಗ್ದಾಳಿ

    ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ, ನಮ್ಮ ಸಿಟ್ಟು ಜಾಸ್ತಿ ಮಾಡಬೇಡ: ಪ್ರತಾಪ್ ಸಿಂಹ ವಾಗ್ದಾಳಿ

    – ಯಾವುದೋ ಹಡಬೆ ದುಡ್ಡು ತಂದು ಇಲ್ಲಿ ಎಂಎಲ್‌ಎ ಆಗಿದ್ದೀಯಾ: ಮಾಜಿ ಸಂಸದ ಕಿಡಿ

    ಕೊಡಗು: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (Vinay Somaiah) ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಥಳೀಯ ಶಾಸಕ ಪೊನ್ನಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಕುಶಾಲನಗರದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಪ್ರತಾಪ್ ಸಿಂಹ (Pratap Simha), ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ ಅಷ್ಟೆ. ಯಾವುದೋ ಹಡಬೆ ದುಡ್ಡು ತಂದು ಇಲ್ಲಿ ಎಂಎಲ್‌ಎ ಆಗಿದ್ದೀಯಾ. ನಿನ್ನನ್ನು ಮೂರು ವರ್ಷದ ನಂತರ ಕೊಡಗಿನ ಜನ ಇಲ್ಲಿಂದ ಓಡಿಸುತ್ತಾರೆ. ನಮ‌್ಮ ಸಿಟ್ಟು ಹೆಚ್ಚು ಮಾಡಬೇಡಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್‌ – ಶಾಸಕ ಪೊನ್ನಣ್ಣ & ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ನಲ್ಲೇನಿದೆ?

    ವಿನಯ್ ಸಾವಿಗೆ ಹಣದ ಕಾರಣ ಅನ್ನೋದು ಬಿಟ್ಟು ಬಿಡಿ. ನಿಮ್ಮ ಭಿಕ್ಷೆಯ ಹಣ ನಮಗೆ ಬೇಕಿಲ್ಲ. ಪದೇ ಪದೇ ಹಣದ ವಿಚಾರ ಹೇಳಿದರೆ ಸರಿ ಇರಲ್ಲ. ನಿಮಗೆ ಧೈರ್ಯ ಇದ್ದರೆ ವಿನಯ್ ಮನೆಗೆ ಹೋಗಿ‌ ಜನ ಹೂವಿನ ಹಾರ ಹಾಕುತ್ತಾರೋ ಛೀ ಥೂ ಅಂತಾ ಉಗಿಯುತ್ತಾರಾ ನೋಡಿ. ನಿಮಗೆ ಏನೂ ಎರಡು ಕೊಂಬು ಇದ್ದವಾ ಎಂದು ಆಕ್ರೋಶ ಹೊರಹಾಕಿದ್ದಾರೆ.

    ವಿನಯ್‌ ಸೋಮಯ್ಯ ಸಾಯುವ ಮೊದಲು ಕಳುಹಿಸಿರುವ ವಾಟ್ಸಪ್‌ ಮೆಸೇಜ್‌ನಲ್ಲಿ ನನ್ನ ಸಾವಿಗೆ ಏನು ಕಾರಣ, ಯಾರ‍್ಯಾರು ಒತ್ತಡ ಹಾಕಿದ್ರು, ಪೊಲೀಸರಿಂದ ಯಾವ ರೀತಿ ದೌರ್ಜನ್ಯ ಆಯ್ತು ಎಲ್ಲವೂ ಇದೆ. ಹರೀಶ್‌ ಪೂವಯ್ಯ, ತೆನ್ನಿರಾ, ಪೊನ್ನಣ್ಣ (Ponnanna), ಮಂಥರ್‌ ಗೌಡ ನಾಲ್ಕು ಜನರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಮಾತ್ರ ತೆನ್ನಿರಾ ಒಬ್ಬರನ್ನು ಇನ್ನು ಮೂವರ ಹೆಸರನ್ನು ಕೈಬಿಟ್ಟಿದ್ದಾರೆ. ಯಾಕೆ ಕೈಬಿಟ್ಟರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಕಿರುಕುಳಕ್ಕೆ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಸೀಕ್ರೆಟ್ ಬಯಲು

    ಡೆತ್‌ನೋಟ್‌ ಆಧಾರದಲ್ಲಿ ನಾಲ್ಕೂ ಜನರ ವಿರುದ್ಧವೂ ಎಫ್‌ಐಆರ್‌ ಆಗಬೇಕು. ಅಲ್ಲಿವರೆಗೆ ಅಂತ್ಯಸಂಸ್ಕಾರ ಮಾಡುವುದು ಬೇಡ ಎಂದು ಕುಟುಂಬದವರ ಜೊತೆ ಮಾತನಾಡಿ ತೀರ್ಮಾನಿಸಲಾಗಿದೆ. ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ದಾರಿ ತಪ್ಪಿಸಿದ್ರು. ಅವರು ದೂರಿನಲ್ಲಿ ಕೊಟ್ಟೇ ಇಲ್ಲ ಅಂತ ಹೇಳಿದ್ರು. ಆದರೆ, ವಿನಯ್‌ ಕುಟುಂಬದವರನ್ನು ವಿಚಾರಿಸಿದಾಗ, ನಾಲ್ಕು ಜನರ ಹೆಸರನ್ನು ಉಲ್ಲೇಖಿಸಿ ನೀಡಿರುವ ದೂರಿನ ಪ್ರತಿಯನ್ನು ನಮಗೆ ತೋರಿಸಿದರು. ಇಷ್ಟಾಗಿಯು ಕೂಡ ಯಾಕೆ ಉಳಿದವರ ಹೆಸರನ್ನು ಕೈಬಿಟ್ಟರು? ನಾಲ್ಕು ಜನರ ವಿರುದ್ಧ ಎಫ್‌ಐಆರ್‌ ಆದ ಮೇಲೆ ನಾವು ಅಂತ್ಯಸಂಸ್ಕಾರ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.

  • ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ವಕ್ಫ್ ಬೋರ್ಡ್ ವಿಚಾರ ಮುನ್ನೆಲೆಗೆ – ದೋಸ್ತಿಗಳ ವಿರುದ್ಧ ಪೊನ್ನಣ್ಣ ಕಿಡಿ

    ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ವಕ್ಫ್ ಬೋರ್ಡ್ ವಿಚಾರ ಮುನ್ನೆಲೆಗೆ – ದೋಸ್ತಿಗಳ ವಿರುದ್ಧ ಪೊನ್ನಣ್ಣ ಕಿಡಿ

    ಬೆಂಗಳೂರು: ಬಿಜೆಪಿ-ಜೆಡಿಎಸ್‌ಗೆ (BJP-JDS) ಉಪಚುನಾವಣೆಯಲ್ಲಿ ಸೋಲುವ ಭೀತಿಯಿದೆ ಅದಕ್ಕಾಗಿ ವಕ್ಫ್ ಬೋರ್ಡ್ ರೈತರ ಜಮೀನು ಕಬಳಿಕೆ ಮಾಡಲು ಮುಂದಾಗಿದೆ ಎಂದು ಸುಳ್ಳು ಹೇಳ್ತಿದ್ದಾರೆ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ (Ponnanna) ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಜಯಪುರ (Vijayapura) ರೈತರಿಗೆ ವಕ್ಫ್ ಬೋರ್ಡ್ನಿಂದ ನೋಟಿಸ್ ನೀಡಿರುವ ಬಿಜೆಪಿ-ಜೆಡಿಎಸ್ ವಿರುದ್ಧ ಮಾತನಾಡಿ, ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಬಿಜೆಪಿ-ಜೆಡಿಎಸ್ ನಾಯಕರು ಕೊಡುತ್ತಿದ್ದಾರೆ. ಎರಡು ಪಕ್ಷಗಳಿಗೆ 3 ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತಿದೆ. ಚುನಾವಣೆ ಬಂದಾಗ ಸಮಾಜ ವಿಭಜನೆ ಮಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ಚುನಾವಣೆಗಳಲ್ಲಿ ಧರ್ಮ, ಜಾತಿ ಆಧಾರದಲ್ಲಿ ಮತ ವಿಭಜನೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಸೊಲಿನ ಭೀತಿಯಲ್ಲಿ ಇಂತಹ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತೀರ್ಪು ಸಿಎಂ ಪಾದಯಾತ್ರೆಗೆ ಸಿಕ್ಕ ಫಲ – ಹೆಚ್.ಕೆ ಪಾಟೀಲ್

    ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಅವರ ಜಮೀನು ಪಡೆಯಲು ಮುಂದಾಗಿದೆ ಎನ್ನುವುದು ಸುಳ್ಳು. ಬಿಜೆಪಿ-ಜೆಡಿಎಸ್‌ನವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಚುನಾವಣೆ ಸಮಯದಲ್ಲಿ ನೇರವಾಗಿ ಜನರ ಮುಂದೆ ಹೋಗಬೇಕು. ಸರ್ಕಾರದ ವೈಫಲ್ಯಗಳ ಬಗ್ಗೆ ಹೇಳಬೇಕು. ಅದನ್ನು ಬಿಟ್ಟು ಹೀಗೆ ಸುಳ್ಳು ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.

    ಯಾರು ಏನೇ ಹೇಳಿದರೂ ದಾಖಲೆಯಲ್ಲಿ ಇರಬೇಕು. 15 ಸಾವಿರ ಎಕರೆ ಎಂದು ಯಾರು ಹೇಳಿದ್ದು? ದಾಖಲಾತಿ ತೋರಿಸಿ. ಸಚಿವರೇ ಹೇಳಿದ್ದರೂ ಅವರೇನು ದೇವರಲ್ಲ. ಇವತ್ತಿನ ಕ್ಯಾಬಿನೆಟ್‌ನಲ್ಲಿ ಈ ವಿಷಯ ಚರ್ಚೆ ಆಗುತ್ತದೆ. ಇದಕ್ಕೆ ಸ್ಪಷ್ಟನೆಯನ್ನು ಕೊಡುತ್ತಾರೆ. ಈಗಾಗಲೇ ಡಿಸಿ, ಕಂದಾಯ ಅಧಿಕಾರಿಗಳಿಂದ ದಾಖಲೆಗಳನ್ನು ಕ್ಯಾಬಿನೆಟ್‌ಗೆ ತರಿಸಿದ್ದಾರೆ. ಚರ್ಚೆ ಮಾಡಿ ಸರ್ಕಾರದ ಕಡೆಯಿಂದ ಸ್ಪಷ್ಟನೆ ಕೊಡುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: ನನ್ನ ವೃತ್ತಿ, ಸಂಭಾವನೆ ಎಲ್ಲ ಬಿಟ್ಟು ಬಂದಿದ್ದೇನೆ: ವಿಜಯ್ ಪವರ್‌ಫುಲ್ ಸ್ಪೀಚ್

  • ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ

    ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ

    ಬೆಂಗಳೂರು: ಅಕ್ರಮವಾಗಿ ಗಣಿ ಭೂಮಿ‌ ಮಂಜೂರು ಆರೋಪದಲ್ಲಿ ಚಾರ್ಜ್‌ಶೀಟ್‌ನಲ್ಲಿ ಹೆಸರು ಇರುವ ಕುಮಾರಸ್ವಾಮಿ‌ (H.D.Kumaraswamy) ಅವರು ಕೇಂದ್ರ ಸಚಿವರಾಗಬಹುದಾ ಎಂದು ಶಾಸಕ ಹಾಗೂ ಸಿಎಂ‌ ಕಾನೂನು ಸಲಹೆಗಾರ ಪೊನ್ನಣ್ಣ (Ponnanna) ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕುಮಾರಸ್ವಾಮಿ ಬಹಳ ದೊಡ್ಡ ನಾಯಕರಿದ್ದಾರೆ. ದಯವಿಟ್ಟು ಕೇಂದ್ರ ಸಚಿವರಾಗಿ ಮೇಕೆದಾಟಿಗೆ ಅನುಮತಿ ಕೊಡಿಸಲಿ. ಕೆಲವೊಮ್ಮೆ ರಾಜಕೀಯದಲ್ಲಿ ಯೋಗ್ಯತೆಗಿಂತ ಹೆಚ್ಚು ಯೋಗ ಬೇಕಾಗುತ್ತದೆ. ಇಬ್ಬರು ಸಂಸದರನ್ನು ಇಟ್ಟುಕೊಂಡು ಇವರು ಕೇಂದ್ರ ಸಚಿವರಾಗಿದ್ದಾರೆ. ಅದು ಅವರ ಯೋಗ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ, ನಾನು ಕಾಂಗ್ರೆಸ್ ಪ್ರತಿನಿಧಿ: ಡಿಕೆಶಿ

    ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪಗಳಿವೆ. ಲೋಕಾಯುಕ್ತ ತನಿಖಾ ಸಂಸ್ಥೆ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯುಷನ್ ಕೇಳಿದೆ. ಇದನ್ನು ತಿರುಚಿ ಅವರು ಮಾತನಾಡುತ್ತಿದ್ದಾರೆ. ಲೋಕಾಯುಕ್ತ ಚಾರ್ಜ್‌ಶೀಟಲ್ಲಿ ಕಾನೂನುಬಾಹಿರ ರೆಕಮಂಡೇಷನ್ ಇದೆ ಎಂದು ಪ್ರಸ್ತಾಪ ಮಾಡಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಭ್ರಷ್ಟಾಚಾರದ ಹೆಸರು ಇರುವವರು ಕೇಂದ್ರ ಮಂತ್ರಿಯಾಗಿ ಮುಂದುವರಿಯಬಹುದಾ ಎಂದು ಪ್ರಶ್ನಿಸಿದ್ದಾರೆ.

    ವಿನಯ್ ಗೋಯೆಲ್ ಫ್ರಾಡ್. ಅವನು ಗಣಿಗೆ ಅರ್ಜಿಯೇ ಹಾಕಿರಲಿಲ್ಲ. ಕುಮಾರಸ್ವಾಮಿ ಅವನಿಗೆ ಅನುಕೂಲ ಮಾಡಿಕೊಡಲು ಗಣಿ ಸಂಪತ್ತು, ಅದಕ್ಕೆ ಕಾನೂನುಬಾಹಿರ ಅನುಮತಿ ನೀಡಿದ್ದರು. ಚಾರ್ಜ್‌ಶೀಟಲ್ಲಿ ಹೆಸರು ಇರುವವರು ಮಂತ್ರಿ ಆಗಬಹುದಾ ಎಂದು ಕೇಳಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

  • ಯಾವ ಸಾರ್ವಜನಿಕ ಹಿತಾಸಕ್ತಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿದೆ: ಸರ್ಕಾರಕ್ಕೆ ಸಿಎಟಿ ಪ್ರಶ್ನೆ

    ಯಾವ ಸಾರ್ವಜನಿಕ ಹಿತಾಸಕ್ತಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿದೆ: ಸರ್ಕಾರಕ್ಕೆ ಸಿಎಟಿ ಪ್ರಶ್ನೆ

    ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮಾರ್ಚ್ 21ಕ್ಕೆ ಆದೇಶ ಕಾಯ್ದಿರಿಸಿದೆ.

    ಇಂದು ಕಲಾಪದಲ್ಲಿ ರೋಹಿಣಿ ಪರ ಹಿರಿಯ ವಕೀಲ ಜೋಯಿಸ್ ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಎಸ್ ಪೊನ್ನಣ್ಣ ವಾದ ಮಾಡಿದರು. ಈ ವೇಳೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಅವರ ವರ್ಗಾವಣೆಗೆ ಸಿಎಟಿ ತಡೆ ನೀಡಿದ್ದು, ಮುಂದಿನ ಆದೇಶ ಪ್ರಕಟವಾಗುವರೆಗೆ ಅಲ್ಲಿಯೇ ಮುಂದುವರಿಯುವಂತೆ ಸೂಚಿಸಿದೆ.

    ಸಾರ್ವಜನಿಕ ಉದ್ದೇಶಕ್ಕಾಗಿ ರೋಹಿಣಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕನಿಷ್ಠ ಎರಡು ವರ್ಷದ ನಿಯಮ ಅನ್ವಯವಾಗುವುದಿಲ್ಲ. ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಯಾವುದೇ ರೀತಿಯ ಮಂಡಳಿ ಇಲ್ಲ. ಮಂಡಳಿ ಇದ್ದರೆ ಮಾತ್ರ ನಿಯಮಗಳು ಅನ್ವಯ ಆಗುತ್ತವೆ. ಸಾರ್ವಜನಿಕ ಹಿತಾಸಕ್ತಿಯಿಂದ  ವರ್ಗಾವಣೆ ಮಾಡಲಾಗಿದೆ ಎಂದು ಪೊನ್ನಣ್ಣ ವಾದಿಸಿದರು.

    ಈ ವೇಳೆ ನ್ಯಾಯಪೀಠ, ಯಾವ ಸಾರ್ವಜನಿಕ ಹಿತಾಸಕ್ತಿ ಈ ವರ್ಗಾವಣೆಯಲ್ಲಿದೆ ತಿಳಿಸಿ ಎಂದು ಪ್ರಶ್ನಿಸಿದರು. ಇದಕ್ಕೆ ಪೊನ್ನಣ್ಣ, ಆ ವಿಚಾರವನ್ನು ಇಲ್ಲಿ ಬಹಿರಂಗ ಪಡಿಸುವ ಅಗತ್ಯವಿಲ್ಲ. ಕಾರ್ಯಾಂಗದ ಮುಖ್ಯಸ್ಥರಾಗಿ ಸಿಎಂ ಸಿಎ ಆದೇಶ ಮಾಡಿದ್ದಾರೆ ಎಂದು ಉತ್ತರಿಸಿದರು.

    ರೋಹಿಣಿ ಪರ ಹಿರಿಯ ವಕೀಲ ಜೋಯಿಸ್, ರಾಜ್ಯದ ಮುಖ್ಯಮಂತ್ರಿಗಳಾಗಿ ನಿಯಮಗಳನ್ನು ಮೀರುವಂತಿಲ್ಲ. ಇಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಎಲ್ಲಾ ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿದ ವರ್ಗಾವಣೆ ಇದು. ಅವಧಿಗಿಂತ ಮುಂಚೆ ವರ್ಗಾವಣೆ ಮಾಡಿದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಲೇಬೇಕು. ಕಾರಣಗಳಿಲ್ಲದೆ ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆಗೂ ಮುನ್ನ ನೋಟಿಸ್ ನೀಡಬೇಕು ಎಂದು ವಾದಿಸಿದರು.  ಇದನ್ನೂ ಓದಿ: ರೋಹಿಣಿ ಸಿಂಧೂರಿ ಯಾರು? ಈ ಹಿಂದೆ ಅವರು ಮಾಡಿದ್ದ ಕೆಲಸಗಳು ಏನು?

    ನಿಯಮಗಳ ವಿರುದ್ಧವಾಗಿ ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಿಎಟಿ ಮಾರ್ಚ್ 13ರವರೆಗೆ ವರ್ಗಾವಣೆಗೆ ತಡೆ ನೀಡಿತ್ತು.

    ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶವನ್ನು ಮಾ.6 ರಂದು ಹಿಂದಕ್ಕೆ ಪಡೆದಿದ್ದ ರಾಜ್ಯ ಸರ್ಕಾರ ಮಾ.7 ರಂದು ವರ್ಗಾವಣೆ ಮಾಡಿತ್ತು. ಒಟ್ಟು 12 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಆದೇಶ ಹೊರಡಿಸಿತ್ತು.

    ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಜ.22 ರಂದು ರೋಹಿಣಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಎಸ್‍ಐಐಡಿಸಿ) ಆಡಳಿತ ನಿರ್ದೇಶಕಿಯನ್ನಾಗಿ ನೇಮಿಸಿ ಹಠಾತ್ ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ತಡೆ ನೀಡಿತ್ತು. ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು.

    ಫೆಬ್ರವರಿ 28ಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಮತದಾರ ಪಟ್ಟಿ ಪರಿಷ್ಕರಣೆ ಮುಗಿಯುವವರೆಗೆ ವರ್ಗಾವಣೆ ಬೇಡ. ವರ್ಗಾವಣೆ ಆದೇಶ ಜಾರಿಯನ್ನು ಕೂಡಲೇ ನಿಲ್ಲಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನ ಅದೇ ಸ್ಥಾನದಲ್ಲಿ ಮುಂದುವರಿಸಬೇಕು. ವರ್ಗಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ವರ್ಗಾಯಿತ ಜಿಲ್ಲೆಗಳಿಗೆ ತೆರಳದಂತೆ 7 ಜಿಲ್ಲಾಧಿಕಾರಿಗಳಿಗೂ ಚುನಾವಣಾ ಆಯೋಗ ಈ ಹಿಂದೆ ಸೂಚನೆ ನೀಡಿತ್ತು. ಇದನ್ನೂ ಓದಿ:ಸರ್ಕಾರಕ್ಕೆ ಮತ್ತೊಮ್ಮೆ ಭಾರೀ ಮುಖಭಂಗ- ಕೊಪ್ಪಳ ಎಸ್‍ಪಿ ಅನೂಪ್ ಶೆಟ್ಟಿ ವರ್ಗಾವಣೆಗೂ ಸಿಎಟಿ ತಡೆ