Tag: ಪೈಲ್ವಾನ

  • ಪತಿಯ ಕಟ್ಟು ಮಸ್ತಿನ ದೇಹ ನೋಡಿ ಸುದೀಪ್ ಪತ್ನಿ ಹೇಳಿದ್ದು ಹೀಗೆ!

    ಪತಿಯ ಕಟ್ಟು ಮಸ್ತಿನ ದೇಹ ನೋಡಿ ಸುದೀಪ್ ಪತ್ನಿ ಹೇಳಿದ್ದು ಹೀಗೆ!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪೈಲ್ವಾನ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಸುದೀಪ್ ಲುಕ್ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇತ್ತ ಸುದೀಪ್ ಪತ್ನಿ ಪ್ರಿಯಾ ರಾಧಕೃಷ್ಣ ಅವರು ಕೂಡ ಪತಿಯ ಲುಕ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾ ಅವರು, ಸುದೀಪ್ ಅವರನ್ನು ಈ ಲುಕ್‍ನಲ್ಲಿ ನೋಡುತ್ತೆನೆಂದು ಊಹೆ ಕೂಡ ಮಾಡಿಕೊಂಡಿರಲಿಲ್ಲ. ಅವರ ಶ್ರದ್ಧೆ, ಆತ್ಮಸ್ಥೈರ್ಯ, ಅವರಲ್ಲಿರುವ ಶಕ್ತಿ ಇಂದು ಪೈಲ್ವಾನ್‍ನಲ್ಲಿ ನಾವು ಕಾಣುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಪೈಲ್ವಾನ್ ಸಿನಿಮಾ ನಿರ್ಮಾಪಕರಾದ ಕೃಷ್ಣ ಅವರ ಟ್ವೀಟ್‍ನ್ನು ರಿಟ್ವೀಟ್ ಮಾಡಿರುವ ಪ್ರಿಯಾ ಅವರು, ಪತಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಪೋಸ್ಟರ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದ್ದು, ಜೊತೆಗೆ ಕುತೂಹಲವನ್ನು ಹೆಚ್ಚಿಸಿದೆ.

    ಸುದೀಪ್ ಸಿನಿಮಾದಿಂದ ಸಿನಿಮಾಕ್ಕೆ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡುತ್ತಾರೆ. ಅಲ್ಲದೇ ಇತ್ತೀಚೆಗೆ ತೆರೆಕಂಡಿದ್ದ ವಿಲನ್ ಲುಕ್‍ನ್ನು ಕೂಡ ಹಲವು ಅಭಿಮಾನಿಗಳು ಫಾಲೋ ಮಾಡಿದ್ದರು. ಇತ್ತ ಪೈಲ್ವಾನ್ ಸಿನಿಮಾ ಹೊಸ ದಾಖಲೆಗಳನ್ನು ಬರೆಯಲು ಮುಂದಾಗಿದ್ದು, ಎಂಟು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಒಟ್ಟು 30 ರಿಂದ 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.  ಇದನ್ನು ಓದಿ: ಧಗ ಧಗಿಸುವ ಪೈಲ್ವಾನನ ಹೊಸ ಲುಕ್ ಔಟ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಧಗ ಧಗಿಸುವ ಪೈಲ್ವಾನನ ಹೊಸ ಲುಕ್ ಔಟ್

    ಧಗ ಧಗಿಸುವ ಪೈಲ್ವಾನನ ಹೊಸ ಲುಕ್ ಔಟ್

    ಬೆಂಗಳೂರು: ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ನಟನೆಯ ಪೈಲ್ವಾನ ಚಿತ್ರದ ಹೊಸ ಲುಕ್ ರಿವೀಲ್ ಆಗಿದೆ. ಪೈಲ್ವಾನ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿರುವ ರನ್ನನ ಹೊಸಫೋಟೋ ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಇಂದು ಸುದೀಪ್ ತಮ್ಮ ಟ್ವಟ್ಟರ್ ಖಾತೆಯಲ್ಲಿ ಫೋಟೋ ಹಾಕಿಕೊಂಡಿದ್ದು, ಅಭಿಮಾನಿಗಳು ವಾವ್, ಸೂಪರ್ ಎಂದು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ.

    ಕಟ್ಟುಮಸ್ತಾದ ಕುಸ್ತಪಟುವಿನ ಪಾತ್ರದಲ್ಲಿರುವ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಯಾವ ಸಿನಿಮಾದಲ್ಲಿ ಸುದೀಪ್ ತಮ್ಮ ಶರ್ಟ್ ತೆಗೆದಿರಲಿಲ್ಲ. ಮೊದಲ ಬಾರಿಗೆ ಪೈಲ್ವಾನ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿರು ಕಿಚ್ಚನ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಮಾಂಸಾಹಾರವನ್ನ ತ್ಯಜಿಸಿ ಮೈಕಟ್ಟನ್ನು ಹುರಿಗೊಳಿಸಿದ್ದಾರೆ. ಮೊದಲ ಬಾರಿಗೆ ಪೈಲ್ವಾನನಾಗಿ ಕಾಣಿಸಿಕೊಳ್ಳುತ್ತಿರುವ ಮಾಣಿಕ್ಯ ಚಿತ್ರದಲ್ಲಿ ಕುಸ್ತಿ ದೃಶ್ಯಗಳು ಇರಲಿವೆ. ಈ ಹಿಂದೆ ಪೈಲ್ವಾನ್ ಸೆಟ್ ಚಿತ್ರದ ಒಂದು ಫೋಟೋ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವುದರ ಜೊತೆ ಕುತೂಹಲವನ್ನು ಹೆಚ್ಚು ಮಾಡಿತ್ತು. ಈಗ ಕುಸ್ತಿ ಅಖಾಡದ ಫೋಟೋಗಳು ರಿವೀಲ್ ಆಗಿವೆ. ಚಿತ್ರೀಕರಣಕ್ಕಾಗಿ ಚಿತ್ರತಂಡ ಕುಸ್ತಿ ಅಖಾಡದ ಸೆಟ್ ನಿರ್ಮಾಣ ಮಾಡಿದೆ.

    ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರಂತೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

    ಸಿನಿಮಾದಿಂದ ಸಿನಿಮಾಕ್ಕೆ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವ ಸುದೀಪ್ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡುತ್ತಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ದಿ ವಿಲನ್’ ಸಿನಿಮಾದಲ್ಲಿ ಭಿನ್ನ ವಿಭಿನ್ನ ಲುಕ್ ನಲ್ಲಿ ಮಿಂಚಿದ್ದರು. ದಿ ವಿಲನ್ ಫಸ್ಟ್ ಲುಕ್ ಔಟ್ ಆದಾಗಲೇ ಅಭಿಮಾನಿಗಳು ಕಿಚ್ಚನ ಹೇರ್ ಸ್ಟೈಲ್ ಫಾಲೋ ಮಾಡಲಾರಂಭಿಸಿದ್ದರು. ದಿ ವಿಲನ್ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆದ್ಮೇಲೆಯೂ ಸುದೀಪ್ ಹೇರ್ ಸ್ಟೈಲ್ ಬಹುತೇಕರು ಅನುಸರಿಸುತ್ತಿದ್ದಾರೆ.

    https://www.youtube.com/watch?v=SjnO6D0JtJc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪೈಲ್ವಾನನ ಫಿಟ್‍ನೆಸ್ ಮಂತ್ರ ನಿಮ್ಮ ಮುಂದೆ

    ಪೈಲ್ವಾನನ ಫಿಟ್‍ನೆಸ್ ಮಂತ್ರ ನಿಮ್ಮ ಮುಂದೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಯಾರು ಅಂತ ಕೇಳಿದ್ರೆ ಉತ್ತರ ಬರೋದು ಕಿಚ್ಚನ ಹೆಸರು. ಪ್ರತಿ ಪಾತ್ರದಲ್ಲೂ ವಿಭಿನ್ನತೆ, ಪ್ರತಿ ಚಿತ್ರದಲ್ಲೂ ಬಾಡಿ ಸ್ಟೈಲ್ ಬದಲಾವಣೆ, ಡಿಸೈನರಿ ಹೇರ್‍ ಸ್ಟೈಲ್ ಮಾಡಿಕೊಂಡು ಅಭಿನಯಿಸೋದರಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಸದಾ ಮುಂದಿರುತ್ತಾರೆ. ನಿರ್ದೇಶಕರ ಆಸಕ್ತಿಗೆ ತಕ್ಕಂತೆ ಅಭಿನಯವನ್ನಷ್ಟೇ ಅಲ್ಲದೇ ಸ್ಟೈಲನ್ನೂ ದಾನ ಮಾಡುವ ಕಲಾವಿದ ಕಿಚ್ಚ ಸುದೀಪ್.

    ಸ್ಯಾಂಡಲ್‍ವುಡ್‍ನ ಟ್ರೆಂಡ್ ಸೆಟರ್ ಕಿಚ್ಚ ಸಿನಿಮಾದಿಂದ ಸಿನಿಮಾಕ್ಕೆ ಬದಲಾಗಿದ್ದನ್ನ ನೋಡಿದ್ದೇವೆ. ಆದರೆ ಸದ್ಯಕ್ಕೆ ಕಿಚ್ಚನಿರುವ ಲುಕ್‍ನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಆ ಪರಿಯಾಗಿ ಕಿಚ್ಚ ಸಣ್ಣಗಾಗಿದ್ದಾರೆ. 6 ಅಡಿ ಕಟೌಟು ಬಳುಕೋದನ್ನ ನೋಡಿ ಹೀಗಾಗಬೇಕಾದ್ರೆ ಅದಕ್ಕೆ ಬಲವಾದ ಕಾರಣ ಇರಲೇಬೇಕು ಅನ್ನೋದರ ಜಾಡು ಹುಡುಕಿಕೊಂಡು ಹೋದಾಗ ಪಬ್ಲಿಕ್ ಟಿವಿಗೆ ಉತ್ತರ ಸಿಕ್ಕಿದೆ.

    ಸುದೀಪ್ ಮುಂದಿನ ಸಿನಿಮಾ ಯಾವುದು ಅನ್ನೋದಕ್ಕೆ ಉತ್ತರ ಕಣ್ಮುಂದೇ ಇದೆ. ಸತತ ಎರಡು ತಿಂಗಳಿಂದ ಕಿಚ್ಚ ‘ಪೈಲ್ವಾನ್’ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೈದ್ರಾಬಾದ್‍ನಲ್ಲಿ ಈಗಲೂ ಚಿತ್ರೀಕರಣ ನಡೆಯುತ್ತಿದೆ. ಪೈಲ್ವಾನ್ ಅಂದ ಮೇಲೆ ದಢೂತಿ ದೇಹ ಇರಬಹುದೇನೋ ಅಂದುಕೊಳ್ಳೋದು ಜನರೆಲ್ಲರ ಲೆಕ್ಕಾಚಾರ. ಆದ್ರೆ ಇಲ್ಲಿ ಕಿಚ್ಚ ಪೈಲ್ವಾನ್ ಆಗಿರ್ತಾರೆ ನಿಜ. ಆದರೆ ಸ್ಟೀರಾಯ್ಡ್ ದೇಹದ ಥರ ಕಿಚ್ಚ ಕಾಣಿಸಿಕೊಳ್ಳಲ್ಲ. ರಿಯಲ್ ಆಗಿ ದೇಹ ದಂಡಿಸಿ, ಗಟ್ಟಿ ದೇಹದ ಜೊತೆ ಗಟ್ಟಿ ಎಲುಬಿನ ಪ್ರದರ್ಶನ ಮಾಡಲಿದ್ದಾರಂತೆ. ರಿಯಲ್ಲಾಗೇ ಕಿಚ್ಚ ವರ್ಕೌಟ್ ಮಾಡಿದ್ದಾರೆ.

    ಸುದೀಪ್‍ರನ್ನ ಸಿಕ್ಸ್ ಪ್ಯಾಕ್‍ನಲ್ಲಿ ನೋಡಬೇಕು ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಕೊನೆಗೂ ಕಿಚ್ಚ ಜಿಮ್‍ಗೆ ಹೋಗುವಂತೆ ಮಾಡಿದ್ದು ಪೈಲ್ವಾನ್ ಸಿನಿಮಾ. ಕಟ್ಟುನಿಟ್ಟು ಆಹಾರ ಪದ್ಧತಿ, ಶಿಸ್ತುಬದ್ಧ ವರ್ಕೌಟ್, ಶೂಟಿಂಗ್ ನಡುವೆಯೂ ವರ್ಕೌಟ್ ಮಾಡುವಂತೆ ಮಾಡಿದ್ದು ಪೈಲ್ವಾನ್ ಸಿನಿಮಾ. ಹೀಗಾಗಿ ಕಿಚ್ಚ ಸುದೀಪ್ ತೆಳ್ಳಗಾಗಿದ್ದಾರೆ. ತೆಳ್ಳಗೆ ಇದ್ದ ಮಾತ್ರಕ್ಕೆ ದೇಹ ಫಿಟ್ ಇಲ್ಲ ಅಂದುಕೊಂಡ್ರೆ ತಪ್ಪಾಗುತ್ತದೆ. ಯಾಕಂದ್ರೆ ಹಾಲಿವುಡ್ ನಟರ ರೀತಿ ಕಿಚ್ಚ ರಿಯಲ್ ಬಾಡಿ ಬಿಲ್ಡ್ ಮಾಡಿ ಶೂಟಿಂಗ್‍ಗೆ ಹಾಜರಾಗುತ್ತಿದ್ದಾರೆ. ದೇಹವನ್ನ ಏರಿಸಿಬಿಡೋದು ಸುಲಭ. ಆದ್ರೆ ತೂಕ ಕಡಿಮೆ ಮಾಡಿಕೊಳ್ಳೋದು ಸುಲಭವಲ್ಲ. ಕೊನೆಗೂ ಕಿಚ್ಚ ಸುದೀಪ್ ಸಿನಿಮಾಕ್ಕಾಗಿ ತೊಟ್ಟ ಸಂಕಲ್ಪವನ್ನ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ.

    ಕೆಲ ದಿನಗಳಿಂದ ಕಿಚ್ಚ ಸುದೀಪ್ ಈ ಪರಿಯಾಗಿ ತೂಕ ಇಳಿಸಿಕೊಂಡ ಬಗೆಗೆ ಭಾರೀ ಚರ್ಚೆಯಾಗುತ್ತಿತ್ತು. ಇಷ್ಟರ ಮಟ್ಟಿಗೆ ಕಿಚ್ಚ ಸಣ್ಣ ಆಗೋಕೆ ಕಾರಣ ಏನಿರಬಹುದು ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು. ಸಾಮಾನ್ಯವಾಗಿ ಶೂಟಿಂಗ್‍ಗಾಗಿ ಬದಲಾದಾಗ ಕಿಚ್ಚ ಲುಕ್ ರಿವೀಲ್ ಆಗುತ್ತೆ ಅನ್ನುವ ಕಾರಣಕ್ಕೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಆದ್ರೆ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ನಿರೂಪಣೆಯಲ್ಲಿ ಕಾಣಿಸಿಕೊಳ್ಳುವ ಅನಿವಾರ್ಯತೆ ಬಂದಾಗ ಕಿಚ್ಚನ ಲೀನ್ ಬಾಡಿ ದೇಹಕ್ಕೆ ಕನ್ನಡಿಗರು ದಿಗ್ಭ್ರಾಂತಿಗೊಂಡಿದ್ದರು. ಕೊನೆಗೂ ಅದೇ ವೇದಿಕೆಯಲ್ಲಿ ಕಿಚ್ಚ ಲೀನ್ ದೇಹದ ಗುಟ್ಟು ರಿವೀಲ್ ಮಾಡಿದ್ದಾರೆ.

    ಪೈಲ್ವಾನ್ ಸಿನಿಮಾಗಾಗಿ ಕಿಚ್ಚ ಮಾಂಸಹಾರ ಊಟವನ್ನೂ ತ್ಯಜಿಸಿದ್ದಾರೆ ಅನ್ನುವ ಗುಟ್ಟು ರಿವೀಲ್ ಆಗಿದೆ. ಹೀಗಾಗಿ ಕಿಚ್ಚ ಇಷ್ಟೊಂದು ತೆಳ್ಳಗಾಗಿರೋದು. ಅಂದಹಾಗೆ ಪೈಲ್ವಾನ್ ಚಿತ್ರದಲ್ಲಿ ಕಿಚ್ಚ ಮೂರು ರೀತಿಯಲ್ಲಿ ಫೈಟ್ ಮಾಡಲಿದ್ದಾರೆ. ಒಂದು ಶೇಡ್‍ನಲ್ಲಿ ಪೈಲ್ವಾನ್ ಆಗಿ ಕಾಣಿಸ್ತಾರೆ. ಇನ್ನೊಂದ್ಕಡೆ ಮಾಮೂಲಿ ಆ್ಯಕ್ಷನ್ನೂ ಇರುತ್ತೆ. ಪೋಸ್ಟರ್‍ಗಳಲ್ಲಿ ಈಗಾಗಲೇ ರಿವೀಲ್ ಆದಂತೆ ಕಿಚ್ಚ ಬಾಕ್ಸರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.

    ಬಾಕ್ಸರ್ ಅವತಾರಕ್ಕೆ ಕಿಚ್ಚ ಹೀಗೆ ತೆಳ್ಳಗಿನ ಲುಕ್‍ನಲ್ಲಿ ಮಿಂಚಲಿದ್ದಾರೆ. ಪಕ್ಕಾ ಫಿಟ್ ದೇಹದಲ್ಲಿ ಕಿಚ್ಚ ಹಾಲಿವುಡ್ ಹೀರೋ ಥರ ಲೀನ್ ದೇಹದಲ್ಲಿ ಕಾಣಿಸಿಕೊಳ್ಳುತ್ತಾg. ಇದಕ್ಕಾಗಿ ಕಿಚ್ಚ ಯಾವುದೇ ಲಘು ಬಗೆಯ ಫಿಟ್ನೆಸ್ ಸೂತ್ರ ಅನುಸರಿಸದೇ ನೈಜವಾಗಿಯೇ ದೇಹವನ್ನ ಹುರಿದುಂಬಿಸಿಕೊಳ್ಳೋಕೆ ಪಣ ತೊಟ್ಟಿದ್ದಾರೆ. ಕೊನೆಗೂ ಚಿತ್ರಕ್ಕಾಗಿಯೇ ಕಿಚ್ಚ ಈ ರೀತಿ ಲುಕ್ ಬದಲಾಯಿಸಕೊಂಡಿರೋದು ಅನ್ನೋ ಸತ್ಯ ರಿವೀಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv